ಮಹಿಳೆಯರ ದಿನ - ೨೦೨೩
ಕವನೋತ್ಸವ
ಯಾರಿವರು?
***
ಮಧುರ ಕಂಠದ ಪುಟ್ಟ ಕೋಗಿಲೆಗೆ 
ಕುತ್ತಾಯ್ತೆ ಕೊರಳ ನೋವೊಂದು?
ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!
ಸೋಲೊಪ್ಪುವುದುಂಟೆ 
ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?
ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!
ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 
ಮೈತುಂಬಿ ಭೋರ್ಗರೆದು ನದಿಯಾಗುವಂತೀ 
ಗಂಗೆಯ ಗಾನಶ್ರುತಿ 
ಭೀಮ, ಬಸವ, ಮಲ್ಲಿಕಾರ್ಜುನರ ಸೆಣಸಿ 
ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 
ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 
(ರಚನೆ: ಲಕ್ಷ್ಮೀನಾರಾಯಣ ಕೆ )
***
No comments:
Post a Comment