Friday, 17 October 2025

ಪರ್ವ ಮಂಥನ

 ಪರ್ವ ಮಂಥನ 

-  ವಿಶ್ವ ವಿಖ್ಯಾತ ಕಾದಂಬರಿಕಾರರು 

- ಮಹಾ ಮಾನವ ಕೂಡ, ೯ ಕೋಟಿ ಟ್ರಸ್ಟ್, ಮನೆ ಕೂಡ ಸಾರ್ವಜನಿಕ ಉಪಯೋಗಕ್ಕೆ,  ಸಂತೇಶಿವರ ಮತ್ತು ೨೫ ಹಳ್ಳಿಗಳ ನೀರು ಮತ್ತು ರಸ್ತೆ, ಸಹನಾ ವಿಜಯಕುಮಾರ್ ಪೋಷಣೆ 

-ಹಾಸನದವರು, ಹೊಯ್ಸಳ ಕರ್ನಾಟಕರು, ನಮ್ಮವರು 

-೨೧ ಕಾದಂಬರಿಗಳು, ೩೦ ಗ್ರಂಥಗಳು, ಎಲ್ಲಾ ಬ್ರಹುದಾದದದ್ದೇ, ವೈಚಾರಿಕತೆಯನ್ನು ಜಾಗೃತಗೊಳಿಸುವ ಕಾದಂಬರಿಗಳೇ, ಯೂರೋಪಿನವರೋ, ಅಮೆರಿಕಾದವರೋ ಆಗಿದ್ದರೆ ೨-೩ ನೊಬೆಲ್ ದೊರೆಯುತಿತ್ತು,

ವಂಶವೃಕ್ಷ, ಗೃಹಭಂಗ, ಪರ್ವ, ಮಂದ್ರ, ಆವರಣ, ಯಾವುದಕ್ಕಾದರೂ ನೊಬೆಲ್ 

-ಭೈರಪ್ಪರವರನ್ನು  ಹತ್ತಿರದಿಂದ ಕಂಡದ್ದು, ಡಿಸೆಂಬರ್ ೨೦೧೭, ಸಂತೇಶಿವರಾದಲ್ಲಿ, ಅವರ ಮನೆಯ ಮುಂದೆಯೇ ಪೆಂಡಾಲ್, ಆ ದೇವಸ್ಥಾನದಲ್ಲಿ ಅಯ್ಯನವರು, ಹತ್ತಿರದ ಮನೆಯಲ್ಲಿ ಹಿಟ್ಟನ್ನು ಕೊಡದಿದ್ದದ್ದು, ಸನ್ಯಾಸಿ ಹಿಟ್ಟು ಕೊಟ್ಟದ್ದು, 

ಉತ್ಸವ ಮೂರ್ತಿ ಹೆಚ್ಚು ಉರುಳಾಡಿದರೆ, ಮೂಲ ದೇವರಿಗೆ ಮಹಿಮೆ ಕಡಿಮೆ

ಮೇರುಕೃತಿ ಪರ್ವ, ಯಾರಿಗೆ? ಓದೇ ಇಲ್ಲ, ಅರ್ಧ ಓದಿದವರು, ಓದಿದವರು ಎಲ್ಲರಿಗೂ, 

ತಯ್ಯಾರಿ 

ಪರ್ವ - ಹಸ್ತಿನಾವತಿ - ಮೀರುತ, ವಿರಾಟನಗರ- ಜೈಪುರ್, ದ್ವಾರಕೆ - ಗುಜರಾತ್, ಹಿಮಾಲಯ ಗುಡ್ಡಗಾಡು - ಭೀಮನ ದೇವಸ್ಥಾನ 

ಆವರಣ - ಭಾನು ಮುಸ್ತಾಕ್ ಮನೆಯಲ್ಲಿ ವಾಸ 

ಯಾನ - ಟಾಟಾ ಇನ್ಸ್ಟಿಟ್ಯೂಟ್ ಪ್ರೊಫೆಸಸೋರ್ಸ್ ಜೊತೆ ಚರ್ಚೆ, ಕ್ಯಾಂಪುಸ್ನಲ್ಲೇ ವಾಸ 

ಮಂದ್ರ - ೭೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಸಂಗೀತ ಪಾಠ 

ವಿರೋಧಿಗಳು 

ಪ್ರಧಾನ ಗುರುದತ್ತ - ಕೋಲ್ಕತ್ತಾ ಸಮಾವೇಶ 

ನಾನೇಕೆ ಜರೆಯುತ್ತೇನೆ?


೧೯೭೯ರಲ್ಲಿ ಬಿಡುಗಡೆಯಾದಾಗ ಪರ್ವ ಪರ ವಿರೋಧದ ಅಲೆ, ಭಾರಿ ಚರ್ಚೆ, ಮಹಾಭಾರತಕ್ಕೆ ಅಪಚಾರ, ೪೪ ವರ್ಷಗಳಲ್ಲಿ ಬೃಹದಾಗಿ ಬೆಳೆದಿದೆ, ಭಾರತದ ಎಲ್ಲ ಭಾಷೆಗಳಿಗೆ, ಸಂಸ್ಕೃತಕ್ಕೆ, ಇಂಗ್ಲಿಷ್ಗೆ, ರಶಿಯನ್ ಹಾಗು ಚೈನೀಸ್ ಭಾಷೆಗಳಿಗೆ ಅನುವಾದವಾಗಿದೆ. 

ವ್ಯಾಸಭಾರತದ ಮರುಸೃಷ್ಟಿ, ೨೦% ಒರಿಜಿನಲ್ + ೮೦% ನನ್ನ ಕಲ್ಪನೆ, ಇದು ಇತಿಹಾಸ, ಪವಾಡಗಳಿಗೆ ಅವಕಾಶವಿಲ್ಲ, ಅಕ್ಷಯವಸ್ತ್ರ, ವಿಶ್ವರೂಪ ದರ್ಶನ ಇಲ್ಲ, ಕೃಷ್ಣ ಕೂಡ ಎಲ್ಲರಂತೆ, ಆದರೆ ಬುದ್ಧಿವಂತ ಪ್ರಭಾವಿ ರಾಜಕಾರಣಿ, 

ಕುಂತಿ, ದ್ರೌಪದಿ, ಗಾಂಧಾರಿ, ಭೀಮ, ಅರ್ಜುನ, ದುರ್ಯೋಧನ, ಕರ್ಣ ಎಲ್ಲರ ಪ್ರಬಲ ಪಾತ್ರಗಳೇ ಅವುಗಳ ಮನೋವೇದನೆಗಳ ಚಿತ್ರಣ, ಸ್ವಗತಗಳ ಸರಣಿ, ಮನೋವೇದನೆಗಳ ಚಿತ್ರಣ 

ಮೌಲ್ಯಗಳ ಸಂಘರ್ಷ - ಬಹು ಪತಿತ್ವ, ಸೂತಪುತ್ರ ಇವುಗಳ ಚರ್ಚೆ 

ಕಥೆ ಆರಂಭ - ಯುದ್ಧ ಸನ್ನಿಹಿತವಾದ ಕಾಲ, ಎಲ್ಲರಿಗೂ ಮಧ್ಯ ವಯಸ್ಸು, ಆತ್ಮಾವಲೋಕನಕ್ಕೆ ಸರಿಯಾದ ಕಾಲ, ಜೀವನ ಇನ್ನು ಮುಗಿದಿರುವುದಿಲ್ಲ, 

ಭೂಗೋಳ, ಮಗಧದಿಂದ ಗಂಧರಾದವರೆಗೆ, ಆರ್ಯಾವರ್ತ, ಕುರುಗಳು, ಮದ್ರರು, ಪಾಂಚಾಲರು, ಬಾಹ್ಲಿಕರು, ತ್ರಿಗರ್ತರು, ಯಾದವರು, ಇವರುಗಳ ನಡುವಿನ ಕಥೆ 

ಶಲ್ಯನಿಂದ ಕಥೆಯ ಆರಂಭ ಏಕೆ? ಮಹಾಯುದ್ಧದ ಸಂಧರ್ಭದಲ್ಲಿ ಸಣ್ಣ ರಾಜರುಗಳ ಅನಿಸಿಕೆ ಹಾಗೂ ದೋರಣೆ. 

-೦-೦-೦-೦-೦-೦-

ಕುಂತಿ 

ಕುಂತಿಯ ಸ್ವಾಗತ - ವಿದುರನ ಮನೆಯಲ್ಲಿ ೧೩ ವರ್ಷದಿಂದ, ಗಂಗಾ ತಟದಲ್ಲಿ, ಗಂಗಾನದಿಯ ಪ್ರತೀಕ, ಶೂರಸೇನನ ಮಗಳು, ಕೃಷ್ಣನ ಸೋದರತ್ತೆ, ಪೃಥ, ದತ್ತುವಿನನಂತರ ಕುಂತಿ , ಕೃಷ್ಣ ಸಂಧಾನಕ್ಕೆ ಕೃಷ್ಣನ ಆಗಮನ, ಆಗದ ಸಂಧಾನಕ್ಕೆ ಕೃಷ್ಣ ಏಕೆ ಬಂದ? ವಿದುರನ ಆಗಮನ, ನಿಯೋಗಕ್ಕೆ ಹುಟ್ಟಿದ ಪಾಂಡವರಿಗೆ ರಾಜ್ಯ ಕೊಡೆನು, ಸೂಜಿಮೊನೆಯಷ್ಟು ಕೂಡ, ೫ ಹಳ್ಳಿಗಳಿರಲಿ, ನಿಯೋಗ ಧರ್ಮಸಮ್ಮವಾತವಲ್ಲವೇ? ನಾನು ತ್ಯಾಗ ಮಾಡಿಲ್ಲವೇ?  ಪಾಂಡುವಿನೊಂದಿಗೆ ವಿವಾಹ, ನಿರಾಸೆ, ಹೊಡೆತ, ಕೈಲಾಗದವನು ಮೈಯೆಲ್ಲ ಪರಚಿಕೊಂಡ,  ಬಂಜೆ ಎಂಬ ಪಟ್ಟ ಭೀಷ್ಮರಿಂದ, ಮಾದ್ರಿ ವಿವಾಹ, ಅವಳಿಗೂ ನಿರಾಸೆ, ಬಿಲ್ಲಿನಲ್ಲೇ ಶಕ್ತಿ ಇಲ್ಲದಿದ್ದರೆ, ಹೆದೆ ಏನು ಮಾಡಿತು? 

ಹಿಮಾಲಯ ತಪ್ಪಲಿಗೆ ಪಾಂಡು ಪತ್ನಿಯರೊಂದಿಗೆ, ನಿಯೋಗ, ಪಾಂಡವರ ಜನನ 

ಪಾಂಡುವಿಗೆ ಚಿಗುರಿದ ಪುರಷತ್ವ, ಆಘಾತ, ನಿಧನ, ಮಾದ್ರಿ ಸಹಗಮನ 

ನಾಳೆ ಕರ್ಣನ ಭೇಟಿ, ವಿದುರ-ಪಾಂಡವರಿಗೆ ಸಂದೇಶವೇನು? ಈಗ ನೋಡೆನು, ಯುದ್ಧವಾಗಲಿ, ಪಟ್ಟವಾದನಂತರವೇ ಭೇಟಿ 

ಭೀಮ 

ಪಾಂಡವರಲ್ಲಿ ಬಲಶಾಲಿ, ಅತಿ ಪ್ರಾಮುಖ್ಯತೆ , ಉಪಪ್ಲಾವ್ಯದಲ್ಲಿ ಬೀದರ, ಕೃಷ್ಣ-ಭೀಮ ಸಂವಾದ, ಲಾವಂಚದ ಚಾಪೆ, ರಾಕ್ಷಸರ ವೈರತ್ವ, ಘ ಸಹಾಯಬೇಕು. ಸಂಕೋಚಬೇಡ, ಹೋಗು, ಮನ್ನಿಸುವರು, ಖಾಂಡವ ಪ್ರಸ್ತ - ಇಂದ್ರಪ್ರಸ್ಥ-ಕೃಷ್ಣನ ಸಹಾಯ (ಬೇರೆ ಪಾತ್ರಗಳ ಮುಖಾಂತರ ಕೃಷ್ಣನ ವ್ಯಕ್ತಿತ್ವ) 

ದ್ರೌಪದಿ ಆಗಮನ - ನೀನೆ ಅಚ್ಚುಮೆಚ್ಚು, ಗೌರವ ಕಾಪಾಡುವ ಕಾರ್ಯ ಸಾಧನೆ, ಬಿಚ್ಚು ಮನಸಿನ ಮಾತು ನಿನ್ನಲ್ಲಿ ಮಾತ್ರ, ರಾಜ್ಯ ನನಗೆ ಬೇಡ, ದು, ದು, ಧೃ ಸಂಹಾರವಾಗಲಿ, ಹಿಡಂಬಿಯ ಆತಂಕ , ನೀನೆ ನನಗೆ ದಿಕ್ಕು 

ಹಿಡಂಬ ನಾಡು ಹಸ್ತಿನಾವತಿಯ ದಕ್ಷಿಣಕ್ಕೆ, ವಾರಣಾವತದ ಸಮೀಪ 

ಭೀಮನ ಸ್ವಗತ - ಅರಗಿನ ಮನೆ, ವಾರಣಾವತ, ಹಿಡಿ೦ಬೆ - ಲವ್ ಅಟ್ ಫಸ್ಟ್ ಸೈಟ್, ಹಿಡಿಎಂಬ-ಭೀಮ ವಧೆ , ನಂತರ ಮದುವೆ 

ಹಿಡಿಮ್ಬ್-ಭೀಮರ ಪ್ರಣಯ, ಸಮಾನ ಬಲದ ಜಟ್ಟಿಯೊಡನೆ ಮಲ್ಲಯುದ್ಧ , ದ್ರೌಪದಿ ನಾಜೂಕು, ದ್ರೌಪದಿಗೆ ಮಾಡಿದ್ದೂ ಎಷ್ಟು, ಜಯದ್ರಥ, ಕೀಚಕ, ಹಿಡಂಬಿಯಾಗಿದ್ದರೆ ಹೊಸಕಿಹಾಕುತ್ತಿದಳು 

ಘ ಭಾರಿ ಮಗು, ಕುಂತಿಯ ಆಗ್ರಹ, ಮುಂದಕ್ಕೆ, ಬಕಾಸುರ ವಧೆ, 

ಭೀಮನ ಆಗಮನ, ಹಿಡಿಗೆ ಪೂರ್ವಸೂಚನಾ, ಘ ಸ್ವಾಗತ, ಹೆಗಲ ಮೇಲೆ, 

ಹಿಡಿ ಭೀಮರ ಪುನರ್ಮಿಲನ, ರಾಕ್ಷಸ ಮುದ್ದು, ಎಣ್ಣೆ ಸ್ನಾನ, ಮಾಂಸದ ಊಟ, ನನ್ನ ನೆನಪು ಬರಲಿಲ್ಲವೇ< ೧೨+೧? 

ಕಾಮಕಟಂಕಟಿ - ಘ ಹೆಂಡತಿ, ಬರ್ಬರಕ ಮಗು, ನನ್ನದೇ ಮೊಮ್ಮಗು 

ದ್ರೌಪದಿ 

ಸಬಲ, ಗಟ್ಟಿತನ, ಸೂಕ್ಷ್ಮ ಮನಸ್ಸು, ಸಂವೇದನಾಶೀಲ ಪಾತ್ರ 

ಉಪಪ್ಲಾವ್ಯ-ಸಂತೋಷ-ಉಪ ಪಾ ಜೊತೆಗೆ 

ಪ್ರತಿವಿಂಧ್ಯ ೨೪ ವರ್ಷ ಮದುವೆ ಇಲ್ಲ, ಅಭಿಮನ್ಯು ೧೬ ವರ್ಷ - ಮದುವೆಯಾಗಿದೆ, ಬಿಲ್ಲುಪ್ರವೀಣರಲ್ಲ, ಭೀಮನ ಮೈಕಟ್ಟಿಲ್ಲ 

೨೬ ವರ್ಷದ ಹಿಂದೆ, ಮತ್ಸ್ಯಯಂತ್ರ ಬೇಧನ, ಸ್ಪರ್ಧೆ, ಐಕ್ಯಮತ್ಯ ಕಾಪಾಡಲು ಕುಂತಿ ಸಂಚು, ಜಗಳವನ್ನೇಕೆ ಸೊಸೆಯಂನ್ನಾಗಿ ಮಾಡಿಕೊಳ್ಲಲಿ,  ಮೋಡ-ಭೂಮಿ 

ಸಂಸಾರ ಮಾಡುವುದು ಹೇಗೆ? ಪ್ರತಿದಿನ ಒಬ್ಬಬ್ಬರು, ಮೈಬಾಕತನ, ಗಂಡಸಿಗೆ ಹೆಣ್ಣು ಸಮನಾಳಲ್ಲ, ಋತುಚಕ್ರವಿಲ್ಲ, ಹೆರಿಗೆ ಇಲ್ಲ, ಮೊಲೆ ಉಣ್ಣಿಸುವುದಿಲ್ಲ, ೩೦ ದಿನವೂ ರೆಡಿ, ಕುಂತಿ ಮೋಸಮಾಡಿದಳು 

ಆರಂಭದಲ್ಲಿ ಅರ್ಜುನ - ನಂತರ ಭೀಮ, ಪ್ರೌಢಳಾಗುವ ತನಕ ತಿಳಿಯುವುದಿಲ್ಲ 

ಅರ್ಜುನ ಯಾತ್ರೆ, ಉಲೂಪಿ, ಚಿತ್ರಗಂಧೆ, ಸುಭದ್ರೆ, ಸುಭದ್ರೆ ಜಾಣೆ, ಷರತ್ತು, ಗಂಡುಮಗು ಬೇರೆ, ನಾನು ಸೋತೆ, ಕುಂತಿ ನನ್ನ ಹಿತಕಾಯಲಿಲ್ಲ 

ದುರ್ಯೋಧನ - ಬೇರೆ ರಾಜರುಗಳಿಗೆ ನೀವೇಧನೆ - ನಿಯೋಗ, ಧಾರ್ಮ - ಬಹುಪತಿತ್ವ ಆರ್ಯಧರ್ಮವಲ್ಲ 

ಪ್ರತಿವಿಂಧ್ಯ - ನಿಜವಾದ ಆರ್ಯಧರ್ಮ ಯಾವದು? ಯುದ್ಧ, ಜೂಜು, ಹೆಣ್ಣು, ಹೆಂಡ 

ಶ್ರುತಸೋಮ - ಅಮ್ಮ ನಿನಗೆ ಧೈರ್ಯ ಯಾವಾಗ ಬಂತು? ಗಂಡಸರ ಮೇಲಿನ ಭರವಸೆ ಕುಸಿದಾಗ,

 ಸಭೆಯಲ್ಲಿ ಮಾನಭ೦ಗ  ಪ್ರಸಂಗದಲ್ಲಿ 

ನನ್ನನ್ನು ಪಣವಾಗಿಡುವ ಅಧಿಕಾರವಿತ್ತೆ? ಭೀಷ್ಮರ ಧರ್ಮಸೂಕ್ಷ್ಮದ ಉತ್ತರ 

ಗಂಡಂದಿರು ದಾಸರಾಗಿರಬಹುದು, ಕೃಷ್ಣ ಇದ್ದಾನೆ, ಮಾನಭಂಗ ನಿಂತಿತ್ತು 

ಭೀಮನ ಘರ್ಜನೆ - ದ್ರೌಪದಿ ಶಪಥವಿಲ್ಲ, ಧೃ ಗಾಂ ಎಚ್ಚರ, ವಾರ ಕೇಳು, ನನ್ನ ಮಕ್ಕಳಿಗೆ ದಾಸಪುತ್ರರೆಂಬ ಪಟ್ಟ ಬೇಡ, ರಾಜ್ಯ ಕೇಳದ ಸ್ವಾಭಿಮಾನಿ ದ್ರೌ, ಆದರೂ ನೀಡಿದ ಧೃ 

ಮರುದಿನವೇ ಎರಡನೇ ಬಾರಿಗೆ ಆಹ್ವಾನ, ಹೋರಾಟ ಧರ್ಮ, ಅಸಹಾಯಕ ದ್ರೌ 

ವನವಾಸದ ಆರಂಭದಲ್ಲಿ ಕೃಷ್ಣನ ಆಗಮನ, ಧರ್ಮನಿಗೆ ಗೃಹಚರ ಬಿಡಿಸಿದ್ದು, ನಿಜವಾದ ಆರ್ಯಧರ್ಮ ಕೃಷ್ಣನಿಗೆ ಮಾತ್ರ ಗೊತ್ತು. 

ಜಯದ್ರಥ ಪ್ರಸಂಗ , ಧರ್ಮರಾಯನ ಕ್ಷಮಾಪಣೆ ನ್ಯಾಯ, ರೋಸಿಹೋದ ದ್ರೌ, ಗಾಂಧಿ-ಪಾಕಿಸ್ತಾನ್ ಧರ್ಮದ ಗಬ್ಬುನಾತ 

ಕೀಚಕ ಪ್ರಸಂಗ - ಧರ್ಮ ಹೇಳಿದ್ದು, ಭೀಮನೊಬ್ಬನೇ 

ಅರ್ಜುನ 

ಯಾದವರು - ಯುಯುಧಾನ (ಸಾತ್ಯಕಿ) 

ಕರ್ಣ 

ನಾಯಿಯ ಪ್ರತೀಕ (ಸ್ವಾಮಿ ಭಕ್ತಿ, ನಿಯತ್ತು, ಅಲ್ಪತೃಪ್ತಿ) 

ಕೃಷ್ಣ - ಕರ್ಣ ಭೇಟಿ, ನಿರಾಕರಣ 

ಭಾರ್ಗವ ವಿದ್ಯಾಭ್ಯಾಸ - ಸ್ಪರ್ಧೆ - ಅವಮಾನ - 

ಕುಂತಿ - ಕರ್ಣ 

ಕೃಷ್ಣ ಕಳಿಸಿದನೇ?

ಅಮ್ಮ, ಪಾಂಡವರಿಗೆ ಹೇಳಿ ಬಂದಿದೀಯ? ದ್ರೌಪದಿ ಒಪ್ಪುವಳೇ? ಪಾಂಡವರಿಗೆ ಹೇಳಿದರೆ ಅವರು ಯುದ್ಧ ಮಾಡರು ಎಂಬ ಭಯವೇ? ಅವರೊಂದಿಗೆ ನಿಂಗೆ ತಾಯಿಯ ಭಾವನಾತ್ಮಕ ಸಂಬಂಧವಿದೆ. ತಾಯ್ತನ ಬರುವುದು -ಮೊಲೆ ಉಣಿಸು,  ಹೇಲು ಉಚ್ಚೆ, ಬೆರಳು, ವಿದ್ಯಾಭ್ಯಾಸ .  ಆದರೂ ಜನ್ಮ ನೀಡಿರುವೆ, ನಮಸ್ಕಾರ 

ಕೃಷ್ಣ ಜನ್ಮರಹಸ್ಯ ತಿಳಿಸಿ ಕೌರವನನ್ನು ಕೊಂದೆ - ಮೂಲದಲ್ಲಿ 

-೦-೦-೦-೦-

ಯುದ್ಧದ ವೇದಿಕೆ ಕಡೆಗೆ 

ಶಲ್ಯನನ್ನು ದುರ್ಯೋಧನ ಗೆದ್ದದ್ದು, ನಕುಲ ಸಹದೇವರಿಗೆ ಇಂದ್ರಪ್ರಸ್ತವೆಂಬ ಆಮಿಷ, 

ಸೈನ್ಯಕ್ಕೆ ಆಹಾರ ಕೊರತೆ, ಹಳ್ಳಿಗಳಿಂದ ವಸೂಲಿ, ವ್ಯಾಸರ ಆಶ್ರಮದಿಂದಲೂ 

ಚರ್ಚಿಲ್ - ಎರಡನೇ ಮಹಾಯುದ್ಧ - ಬೆಂಗಾಲದ ಕ್ಷಾಮ - ರಾಜರುಗಳು ಒಂದೇ 

ಊಟ, ಎಂಜಲು, ಹೇಲು, ಗಬ್ಬು ನಾತ 

ದ್ರೋಣ 

ಏಕಲವ್ಯ - ದ್ರೋಣ 

-೦-೦-೦-೦-

ಯುದ್ಧ ಭೂಮಿ 

ಧೃ - ಕೃಷ್ಣ ತಂತ್ರಗಾರ ಸೂಳೆಮಗ 

ಧೃ - ಚಾರು ದಾಸಿ - ಹಾಸ್ಯ ಪ್ರಸಂಗ 

ದ್ರೌಪದಿ ಮತ್ತೆ 

ಅಶ್ವಥಾಮನಿಂದ ಉಪಪಾಂಡವರ ಮತ್ತು ಧೃಷ್ಟ ಹತ್ಯೆ 

ದ್ರೌಪದಿ ಪ್ರಲಾಪ - ಅಭಿ ಸತ್ತಾಗ, ಘ ಸತ್ತಾಗ - ಈಗ ಸಮಾನಾಂತರ ದೂರ ಆಗ ಮಾನ, ಈಗ ಪ್ರಾಣ - 

ಅಶ್ವಥಮನನ್ನು ಬಂಧಮುಕ್ತ ಮಾಡು ಕರ್ಣ - ನಾನೇ ಅಗ್ನಿ ಸಂಸ್ಕಾರ ಮಾಡುತ್ತೇನೆ 


ಉಕ್ಕಿನ ಭೀಮ ಪ್ರಸಂಗ - ಕೃಷ್ಣನ ವಿವರಣೆ 

ಗಾಂಧಾರಿ 

ಕೃಷ್ಣ - ಪಟ್ಟಿ ಏಕೆ? ಗಾಂಧಾರಿ ವಿವರಣೆ, ಪಟ್ಟಿ ಬಿಚಿದ ಕೃಷ್ಣ - ಯುದ್ಧ ಭೂಮಿಗೆ - ಕುಂತಿ ಕೂಡ - ಮಕ್ಕಳ ಹೆಣವನ್ನು ಹುಡುಕಿಕೊಂಡು - ಯಾರಿಗೂ ಹೆಣಗಳು ಸಿಕ್ಕುವುದಿಲ್ಲ 

ಬೇರೆ ಭಾರತದಲ್ಲಿ -ಕುಂತಿ -  ಕರ್ಣನನ್ನು ನಾನೇ ಕೊಂದೆ, ಘ ನನ್ನ ನಾನೇ ಕೊಂದೆ 

ಬೇರೆ ಭಾರತದಲ್ಲಿ - ಶಕುನಿ ಶವ ನೋಡಿದ ಗಾಂಧಾರಿ 

ಕುಂತಿ 

ಉತ್ತರೆಯ ಮಗು ಸತ್ತು ಹುಟ್ಟಿತು , ನಮ್ಮ ವಂಶ ಬೆಳೆಯುವುದು ಹೇಗೆ?

ಯುದ್ಧದ ಬಸುರಿಯರು? ಹುಟ್ಟುವ ಮಕ್ಕಳಿಗೆ ತಂದೆ ಯಾರು? 

ಮುಕ್ತಾಯ 

ಜೀವನಕ್ಕೆ ಹತ್ತಿರ - ವಿನೂತನ ಸಂಸ್ಕರಣೆ - ಹೊಸತನದ ಪರ್ವ