Tuesday, 30 December 2025

Sri Purandarasaru - Harikathe - 22-01, 14-02, 22-02-26

 ೧) ಓಂ ಗಣೇಶಯನಮಃ 

ಓಂ ದಾಸ ಶ್ರೇಷ್ಠಯನಮಃ 

ಓಂ ಪುರಂದರ ಗುರುವೇನಮಃ  (ಸ, ಪ, ಸ ಧಾಟಿಯಲ್ಲಿ) 

*******

ಶ್ರೀ ಪುರಂದರ ದಾಸರು ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಗಳ ಇಂದಿನ ಪ್ರಯತ್ನಕ್ಕೆ ತಮ್ಮಂಥ ಗುರುಹಿರಿಯರ ಆಶೀರ್ವಾದವು ಅತಿ ಮುಖ್ಯವಾದದ್ದು. ಹರಿಕಥೆಯ ಆರಂಭವನ್ನು ಶ್ರೀ  ಪುರಂದರದಾಸರ ಸ್ಮರಣೆಯೊಂದಿಗೆ ಮಾಡೋಣ. 

*********

ದಾಸರೆಂದರೆ ಪುರಂದರ ದಾಸರಯ್ಯಾ (ಹಾಡು)

*********

ನಮ್ಮ ಭಾರತ ದೇಶವನ್ನು ಕಟ್ಟಿ ಬೆಳಸಿದವರು ದಾಸ ಶ್ರೇಷ್ಠರುಗಳು. ದಕ್ಷಿಣದಲ್ಲಿ ಪುರಂದರದಾಸರು, ತ್ಯಾಗರಾಜರು, ಉತ್ತರದಲ್ಲಿ ತುಳಸಿದಾಸರು, ಮೀರಾಬಾಯಿ, ಪಶ್ಚಿಮದಲ್ಲಿ  ಸಂತ ತುಕಾರಾಂ, ಏಕನಾಥರು, ಮತ್ತು ಪೂರ್ವದಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ದಾಸ ಶ್ರೇಷ್ಠರುಗಳ ಸಾಲಿನಲ್ಲಿ ಪ್ರಮುಖರು. ಆದರೆ ನಾವುಗಳು ಈಗ ಈ ದಾಸ ಶ್ರೇಷ್ಠರುಗಳ ವಾಣಿಯನ್ನು ಮರೆತಿದ್ದೇವೆ. ಪ್ರಪಂಚ ವಿನಾಶದತ್ತ ಸಾಗುತ್ತಿದೆಯೋ ಎಂದೆನಿಸುತ್ತಿದೆ. ಪ್ರಪಂಚ ರಶಿಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳ ಭೀತಿಯಲ್ಲಿ ತತ್ತರಿಸುತ್ತಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರ ನಮ್ಮನ್ನು ಆತಂಕದತ್ತ ತಳ್ಳಿದೆ. ನಮ್ಮ ಜನಗಳು ಸಮಚಿತ್ತ ಮತ್ತು ಸಮತಾಭಾವಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮಗಿರುವ ಏಕೈಕ ಸನ್ಮಾರ್ಗವೆಂದರೆ ನಮ್ಮ ದಾಸರುಗಳು ತೋರಿಸಿದ ಮಾರ್ಗ. ಆದುದರಿಂದ ಇಂದಿನ ಪುರಂದರ ಆರಾಧನೆಯ ಈ ಕಾರ್ಯಕ್ರಮ ಎಂದಿಗಿಂತಲೂ ಹೆಚ್ಚು ಅವಶ್ಯಕವಾದದ್ದು ಎಂದೇ ಹೇಳಬೇಕಾಗುತ್ತದೆ.

***********

ಪುರಂದರ ದಾಸರು ಜನಿಸಿದ್ದು ಪುಣೆ ಸಮೀಪದ ಪುರಂದರಗಡದಲ್ಲಿ ಎನ್ನುತ್ತದೆ ಒಂದು ಇತಿಹಾಸ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಪುರಂದರದಾಸರು ಜನಿಸಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಅರಗ ಗ್ರಾಮ ಎಂದು ತಿಳಿದುಬಂದಿದೆ. ಪುರಂದರದಾಸರ ಜೀವನ ಮತ್ತು ಸಾಧನೆಯ ಸಾಧನ ಕ್ಷೇತ್ರವಾಗಿದ್ದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಇಂದಿನ ಹಂಪಿ ಪಟ್ಟಣ.  

ಪುರಂದರ ದಸರಾ ಪೂರ್ವಾಶ್ರಮದ ಹೆಸರು ಸೀನಪ್ಪ ನಾಯಕ. ಇಹಲೋಕದ ಲೋಭ-ಮೋಹಗಳ ದಾಸನಾಗಿದ್ದ ಸೀನಪ್ಪ ನಾಯಕ ವಜ್ರ-ವೈಡೂರ್ಯಗಳ ವ್ಯಾಪಾರಿ. ಮುಗ್ಧ ಜನರುಗಳನ್ನು ವಂಚಿಸಿ ಅಪಾರ ಹಣವನ್ನು ಗಳಿಸಿದ್ದ ಸೀನಪ್ಪ ನಾಯಕ ನವಕೋಟಿ ನಾರಾಯಣನೆಂದೇ ಹೆಸರುವಾಸಿಯಾಗಿದ್ದವನು. 'ಎಂಜಲು ಕೈಯಲ್ಲಿ ಕಾಗೆ ಹೊಡೆಯೊಲ್ಲ' ಎಂಬ ಗಾದೆಯು ಕಡುಜಿಪುಣನಾದ ಸೀನಪ್ಪ ನಾಯಕನನ್ನು ನೋಡಿ ಸೃಷ್ಟಿಸಿದ ಗಾದೆಯೇ ಆಗಿತ್ತು. ದೇವರಪೂಜೆಗೆ ಹಚ್ಚಿದ್ದ ಊದಿನ ಕಡ್ಡಿಯನ್ನು, ಪೂಜೆಯನಂತರ ಆರಿಸಿ ನಾಳಿನ ಪೂಜೆಗೆ ಇಟ್ಟುಕೊಳ್ಳುವಷ್ಟು ಜಿಪುಣನಾಗಿದ್ದವನು ಸೀನಪ್ಪ ನಾಯಕ. ಬೇಳೆ ಹೆಚ್ಚು ಬೇಯಿಸಿ  ಸಾರು-ಹುಳಿಗಳನ್ನು ಮಾಡಿದರೆ, ಬೇಗನೆ ಹಳಸಿಹೋಗುತ್ತದೆ, ಬೇಳೆಯನ್ನು ಕಮ್ಮಿ ಬೇಯಿಸಿದರೆ ಸಾರು-ಹುಳಿಗಳನ್ನು ನಾಲ್ಕಾರು ದಿನ ಇಟ್ಟುಕೊಂಡು ತಿನ್ನಬಹುದು ಎಂದು ಹೆಂಡತಿಗೆ ಮತ್ತೆ ಮತ್ತೆ ಭೋದಿಸುತ್ತಿದ್ದ ಜಿಪುಣಾಗ್ರೇಸರ ಸೀನಪ್ಪ ನಾಯಕ. 

ಜಿಪುಣ ಸೀನಪ್ಪ ನಾಯಕನ ಹೆಂಡತಿಯಾದ ಸರಸ್ವತಿಯಮ್ಮ ಮಹಾನ್ ದೈವಭಕ್ತೆ. ದಿನ ನಿತ್ಯವನ್ನು ನಾರಾಯಣನ ಸ್ಮರಣೆಯಲ್ಲೇ ಕಳೆಯುತ್ತಿದ್ದವಳು ಸರಸ್ವತಿ.  

********************

ನಾರಾಯಣ ನಿನ್ನ ನಾಮದ (ಹಾಡು) 

*********************

ಪತಿಯ ಕಣ್ಣುತಪ್ಪಿಸಿ ದಾನ-ಧರ್ಮಗಳನ್ನು ಮಾಡುತ್ತಿದ್ದ ಧಾರಾಳಿ ಸರಸ್ವತಿ. ಪತಿಗೆ ಸನ್ಮಾರ್ಗವನ್ನು ತೋರಿಸು ಎಂದು ಪ್ರತಿನಿತ್ಯ ಬೇಡುತ್ತಿದ್ದವಳು ಸರಸ್ವತಿ.   

***********************

ಹೀಗಿರುವಾಗ ಸೀನಪ್ಪ ನಾಯಕನ ವಜ್ರ-ವೈಡೂರ್ಯಗಳ ಅಂಗಡಿಗೆ ಬ್ರಾಹ್ಮಣನೊಬ್ಬ ಬರುತ್ತಾನೆ. ಮಗನಿಗೆ ಉಪನಯನವನ್ನು ಮಾಡಬೇಕು, ಏನಾದರು ಸಹಾಯ ಮಾಡಿ ಎಂದು ಸೀನಪ್ಪನನ್ನು ಬೇಡುತ್ತಾನೆ. ಜಿಪುಣಾಗ್ರೇಸನಾದ ಸೀನಪ್ಪ ಒಂದು ಸವಕಲು ಕಾಸನ್ನು ಕೊಡುವುದಿಲ್ಲ, ಇಲ್ಲಿಂದ ಹೋರಡಿ ಎಂದು ಗದರುತ್ತಾನೆ. 

ಅದೇ ಬ್ರಾಹ್ಮಣ, ಸೀನಪ್ಪನು ಇಲ್ಲದಿದ್ದ ಸಮಯದಲ್ಲಿ ಸೀನಪ್ಪನ ಮನೆಗೆ ಬಂದು ಸೀನಪ್ಪನ ಹೆಂಡತಿಯಾದ ಸರಸ್ವತಿ ಅಮ್ಮಳನ್ನು ಬೇಡುತ್ತಾನೆ.  ನನ್ನ ಮಗನ ಉಪನಯನವನ್ನು ಮಾಡಬೇಕು. ಏನಾದರು ಸಹಾಯ ಮಾಡಿ ಎಂದು ಅಂಗಲಾಚುತ್ತಾನೆ. ನಿಮಗೆ ಸಹಾಯಮಾಡುವ ಮನಸಿದ್ದರು, ನನ್ನದು ಎಂಬುದು ಏನೂ ಇಲ್ಲ, ಪತಿಯನ್ನು ಕೇಳದೆ ಏನನ್ನೂ ಕೊಡಲಾರೆ ಎನ್ನುತ್ತಾಳೆ ಸರಸ್ವತಿ. 'ಹಾಗೇಕೆ ಹೇಳುವಿರಿ ಅಮ್ಮ, ನೀವು ತವರಿನಿಂದ ತಂದಿರುವ ಮೂಗುತಿಯನ್ನೇ ಕೊಡಿ ಎನ್ನುತ್ತಾನೆ ಬಡ ಬ್ರಾಹ್ಮಣ. ಅದೇ ಕ್ಷಣ ತನ್ನ ಮೂಗುತಿಯನ್ನು ಬಿಚ್ಚಿ ಅದನ್ನು ಬ್ರಾಹ್ಮಣನಿಗೆ ದಾನ ಮಾಡುತ್ತಾಳೆ   ಸರಸ್ವತಿ. 

ಸರಸ್ವತಿ ನೀಡಿದ ಮೂಗುತಿಯನ್ನು ತೆಗೆದುಕೊಂಡು ನೇರವಾಗಿ ಬ್ರಾಹ್ಮಣ ಹೊರಟಿದ್ದು ಸೀನಪ್ಪ ನಾಯಕನ ಅಂಗಡಿಯ ಕಡೆಗೆ. 'ನಾನೀಗ ಭಿಕ್ಷೆಯನ್ನು ಬೇಡುತ್ತಿಲ್ಲ. ಈ ಮೂಗುತಿಯನ್ನು ಮಾರಲು  ಬಂದಿದ್ದೇನೆ, ಎಷ್ಟು ಹಣ ನೀಡುವಿರಿ ಎಂದು ಸೀನಪ್ಪನನ್ನು ಕೇಳುತ್ತಾನೆ ಬಡ ಬ್ರಾಹ್ಮಣ. ಮೂಗುತಿಯನ್ನು ನೋಡಿದ ತಕ್ಷಣ ಸೀನಪ್ಪನಿಗೆ ಅದು ತನ್ನ ಹೆಂಡತಿಯದೆ ಮೂಗುತಿ ಎಂಬ ಅನುಮಾನ ಬರುತ್ತದೆ. ಮೂಗುತಿಯನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟು ಬೀಗ ಹಾಕಿದ ಸೀನಪ್ಪ ಓಡಿದ್ದು ಮನೆಯ ಕಡೆಗೆ.

 'ಸರಸ್ವತಿ, ಸರಸ್ವತಿ' ಎಂದು ಕೂಗುತ್ತಲೇ ಬಂದ ಗಂಡನನ್ನು ನೋಡಿ ಸರಸ್ವತಿ ಭಯಭೀತಳಾಗುತ್ತಾಳೆ. 'ನಿನ್ನ ಮೂಗುತಿ ಎಲ್ಲಿ, ತೋರಿಸು' ಎಂದು ಘರ್ಜಿಸಿದ ಪತಿಯ ಕೋಪಕ್ಕೆ ತತ್ತರಿಸಿದ ಸರಸ್ವತಿ, ದೇವರಕೋಣೆಯನ್ನು ಸೇರುತ್ತಾಳೆ. ಪತಿಯ ಕೋಪದಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ ಸಾಯುವುದೊಂದೇ ಎಂದು ನಿರ್ಧರಿಸಿದ ಸರಸ್ವತಿ 'ಪಾಂಡುರಂಗ.....ನಿನ್ನ ಪಾದವೇ ಗತಿ' ಎನ್ನುತ್ತಾ  ವಿಷವನ್ನು ಕುಡಿಯಲು ಮುಂದಾಗುತ್ತಾಳೆ. ಅದೇ ಕ್ಷಣದಲ್ಲಿ ಠನ್  ಎಂಬ ಶಬ್ದದೊಂದಿಗೆ ಸರಸ್ವತಿಯ ಮೂಗುತಿ ವಿಷದ ಬಟ್ಟಲೊಳಗೆ ಬಂದು ಬೀಳುತ್ತದೆ. ಇದು ಪಾಂಡುರಂಗನ ಪವಾಡವೇ ಎಂದು ಭಾವಿಸಿದ ಸರಸ್ವತಿ, ಮೂಗುತಿಯನ್ನು ಪತಿಯಾದ ಸೀನಪ್ಪನಿಗೆ ನೀಡುತ್ತಲೇ, ಮೂಗುತಿಯನ್ನು ನೋಡಿ ಆಶ್ಚರ್ಯಗೊಂಡ ಸೀನಪ್ಪ ಆಗ ಓಡಿದ್ದು ತನ್ನ ಅಂಗಡಿಯ ಕಡೆಗೆ. ಅಂಗಡಿಯಲ್ಲಿ ಆ ಬಡ ಬ್ರಾಹ್ಮಣ ಇರುವುದಿಲ್ಲ. ಅತಾತುರವಾಗಿ ತನ್ನ ಕಬ್ಬಿಣದ ಪೆಟ್ಟಿಗೆಯನ್ನು ತೆರೆದ ಸೀನಪ್ಪ ನಾಯಕನಿಗೆ ಅಲ್ಲಿ ಆ ಬ್ರಾಹ್ಮಣ ಕೊಟ್ಟಿದ್ದ ಮೂಗುತಿ ಕಾಣುವುದಿಲ್ಲ. ಸೀನಪ್ಪನಿಗೆ ಪರಮಾಶ್ಚರ್ಯವಾಗಿರುತ್ತದೆ. 

ಆ ಬಡ ಬ್ರಾಹ್ಮಣನು ಪುರಂದರ ವಿಠ್ಠಲನ  ದೇವಸ್ಥಾನದ ಗರ್ಭಗುಡಿಯ ಕಡೆಗೆ ಹೋಗಿದ್ದಾಗಿ ಅಂಗಡಿಯ ಕೆಲಸಗಾರರು ತಿಳಿಸುತ್ತಾರೆ. ಪತ್ನಿಯಾದ ಸರಸ್ವತಿಯೊಂದಿಗೆ ಸೀನಪ್ಪ ನಾಯಕ ಪಾಂಡುರಂಗನ ಗುಡಿಗೆ ಹೋಗುತ್ತಾನೆ.  ಗರ್ಭಗುಡಿಯಲ್ಲಿ ಸರಸ್ವತಿಗೆ ಆ ಬಡ ಬ್ರಾಹ್ಮಣ ಕಾಣಿಸುತ್ತಾನೆ, ಸೀನಪ್ಪನಿಗೆ ಕಾಣಿಸುವುದಿಲ್ಲ. ಜ್ಞಾನೋದಯವಾದ ಸೀನಪ್ಪ ನಾಯಕ ತನ್ನ ಎಲ್ಲ ಧನ-ಕನಕಗಳನ್ನು ಬಡಬಗ್ಗರಿಗೆ ದಾನ ಮಾಡುತ್ತಾನೆ. ಹೆಂಡತಿ ಕೊಟ್ಟ ತಂಬೂರಿ ಮತ್ತು ದಂಡವನ್ನು ಹಿಡಿದ ಸೀನಪ್ಪ ನಾಯಕ ಪುರಂದರ ವಿಠ್ಠಲನ ಧ್ಯಾನ ಮಾಡುತ್ತ ಗುರುಗಳಾದ ವ್ಯಾಸರಾಯರ ಆಶ್ರಮಕ್ಕೆ ಹೊರಡುತ್ತಾನೆ. 

******************

ಆದದ್ದೆಲ್ಲಾ ಒಳಿತೇ ಆಯಿತು (ಹಾಡು) 

********************

ಗುರುಗಳಾದ ವ್ಯಾಸರಾಯರಿಂದ ದಾಸ ಧೀಕ್ಷೆಯನ್ನು ಸ್ವೀಕರಿಸಿದ ಸೀನಪ್ಪ,  ಶ್ರೀ ಪುರಂದರ ದಾಸರೆಂದು ಮರುನಾಮಕರಣಗೊಳ್ಳುತ್ತಾರೆ. ನವಕೋಟಿ ನಾರಾಯಣರೆಂದು ಮೆರೆದೆದಿದ್ದ ಸೀನಪ್ಪ, ಪುರಂದರದಾಸರಾಗಿ ಹಿಡಿದಿದ್ದು ಮಧುಕರವೃತ್ತಿಯನ್ನು. 

******************

ಮಧುಕರವೃತ್ತಿ ನನ್ನದು (ಹಾಡು)

******************

ದಂಡಿಗೆ-ಬೆತ್ತಗಳನ್ನು ಹಿಡಿದು ಬರಿಗಾಲಲ್ಲಿ ಮನೆ ಮನೆಗಳಿಗೆ ತೆರಳುತ್ತಾ, ಹರಿನಾಮದ ಸಾರವನ್ನು ಸಾರುತ್ತಾ ಭಿಕ್ಷೆ ಸ್ವೀಕರಿಸುವುದೇ ಮಧುಕರ ವೃತ್ತಿಯಾಗಿತ್ತು ಪುರಂದರದಾಸರಿಗೆ. 

**************

ಹರಿಕಥೆ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು. ಈಗ ಒಂದು ಉಪಕಥೆ. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಕುರುಡನು ಇದ್ದನು. ಅವನು ಪ್ರತಿದಿನ ರಾತ್ರಿ ಸಮಯದಲ್ಲಿ ಓಡಾಡುವಾಗ ಬೆಳಕಿನ ಲ್ಯಾಟಿನ್ ಒಂದನ್ನು ಹಿಡಿದು ಓಡಾಡುತ್ತಿದ್ದನು. ಊರಿನ ಜನರೆಲ್ಲಾ ಅವನ ಪೆದ್ದತನವನ್ನು ನೋಡಿ ನಗುತ್ತಿರುತ್ತಾರೆ. ಒಬ್ಬ ಬುದ್ಧಿವಂತ ಆ ಕುರುಡನನ್ನು ಕೇಳಿಯೇ ಬಿಡುತ್ತಾನೆ. ಅಪ್ಪಾ ಕುರುಡ, ನಿನಗೆ ಕಣ್ಣೇ ಕಾಣದು. ನೀನು ಬೆಳಕಿನ ಲ್ಯಾಟಿನ್ ಹಿಡಿದು ಏನು ಪ್ರಯೋಜನ? ಕುರುಡು ನಕ್ಕು ಉತ್ತರಿಸುತ್ತಾ, ಈ ಬೆಳಕಿನ ಲ್ಯಾಟಿನ್ ಕಣ್ಣು ಕಾಣದ ನನಗಾಗಿ ಅಲ್ಲ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ತಮ್ಮಂತಹವರು ನನಗೆ ಡಿಕ್ಕಿ ಹೊಡೆಯದಿರಲಿ ಎಂದು ಎಂದು ಉತ್ತರಿಸುತ್ತಾನೆ. 

ಹೌದು, ನಮ್ಮಲ್ಲಿ ಹಲವರು ಕಣ್ಣಿದ್ದೂ ಕುರುಡುರು. ನಾನು, ನನ್ನದು ಎಂಬ ಅಂಧಕಾರದಲ್ಲಿ ಮುಳುಗಿರುವವರೆಲ್ಲಾ ಕಣ್ಣಿದ್ದು ಕುರುಡರೇ. ಹರಿನಾಮದ ಸ್ಮರಣೆಯನ್ನು ಮರೆತು, ಪ್ರಪಂಚದ ಲೋಭ-ಮೋಹಗಳಿಗೆ ತುತ್ತಾಗಿ, ಬರೀ ಪ್ರಾಪಂಚಿಕ ಸುಖಗಳನ್ನು ಅನುಭವಿಸುತ್ತಾ ಕಾಲಹರಣ ಮಾಡುತ್ತಿರುವರು ಕಣ್ಣಿದ್ದೂ ಕುರುಡರೇ. ಇಂತಹ ಕಣ್ಣಿರುವ ಕುರುಡರಿಗಾಗೇ ಪುರಂದರದಾಸರು ಹಾಡಿರುವುದು. 

***********************

ಕುರುಡು ನಾಯಿ ಸಂತೆಗೆ ಬಂತಂತೆ (ಹಾಡು) 

********************

ವೇದೋಪನಿಷತ್ತುಗಳು ಸಂಸ್ಕೃತದಲ್ಲಿದ್ದು ,  ಅವುಗಳನ್ನು ಅರ್ಥಮಾಡಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟ. ವೇದೋಪನಿಷತ್ತುಗಳ ಸಾರವನ್ನು ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೆ ಉಣಬಡಿಸಿದವರು ಪುರಂದರದಾಸರು. 

ಮಾನವ ಜನ್ಮ ದೊಡ್ಡದ್ದು..... , ಈಸಬೇಕು, ಇದ್ದು ಜೈಸಬೇಕು ....... , ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ....... , ಇವುಗಳೆಲ್ಲಾ ದಾಸರು ನಮ್ಮಗಳಿಗೆ ಉಣಬಡಿಸಿರುವ ವೇದೋಪನಿಷತ್ತುಗಳ ಸಾರವೇ. 

********************************

ಪುರಂದರದಾಸರನ್ನು ನಾವು ಕರ್ನಾಟಕ ಸಂಗೀತ ಪಿತಾಮಹ ಎಂದು ಗೌರವಿಸುತ್ತೇವೆ. ಭಕ್ತಿಯೇ ಪ್ರಧಾನವಾದ ಕರ್ನಾಟಕ ಸಂಗೀತವನ್ನು ಕಟ್ಟಿಬೆಳೆಸಿದವರು ಪುರಂದರದಾಸರು. ಕರ್ನಾಟಕ ಸಂಗೀತದ ಮೊದಲ ಪಾಠಕ್ಕೆ ದಾಸರು ಆರಿಸಿಕೊಂಡದ್ದು ಮಾಯಾಮಾಳವ ಗೌಳ ರಾಗ. ಸರಳೆ, ಜಂಟಿವರಸೆ, ಪಿಳ್ಳಾರಿ ಗೀತೆ ಮತ್ತು ಅಲಂಕಾರಗಳ ಪಾಠಗಳನ್ನು ರಚಿಸಿ ಭೋದಿಸಿದವರೇ ಪುರಂದರದಾಸರು. 

ಶ್ರೀ ಗಣನಾಥ (ಒಂದನೇ ಕಾಲ)

ವರವೀಣ  (ಎರಡನೇ ಕಾಲ)

ಕಮಲಜದಳ (ಮೂರನೇ ಕಾಲ) 

ಪುರಂದರ ದಾಸರು ರಚಿಸಿದ ಪಾಠಗಳೇ, ಇಂದಿಗೂ ಕರ್ನಾಟಕ ಸಂಗೀತದ ಮೊದಲ ಪಾಠಗಳಾಗಿ ಉಳಿದಿರುವುದು, ದಾಸರ ವೈಜ್ಞಾನಿಕ ದೂರದೃಷ್ಟಿಗೆ ಉದಾಹರಣೆ. 

************************

ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹರಾದರೂ, ಅವರು ಬೋಧಿಸಿದ್ದು  ಭಕ್ತಿ ಮಾರ್ಗವನ್ನು. 'ಕೇಳನೋ ಹರಿ, ತಾಳನೊ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ, ಕೇಳನೋ ಹರಿ ತಾಳನೊ' ಎಂಬುದು ಪುರಂದಸರ ಮೂಲ ಬೋಧನೆ. ದಾಸರ ಕೀರ್ತನೆಗಳಿಗೆಲ್ಲಾ ಕೃಷ್ಣಭಕ್ತಿಯೇ ಆಧಾರ. 

ಪಿಳ್ಳಂಗೋವಿಯ ಚೆಲ್ವ ಕೃಷ್ಣನ (ಹಾಡು) 

**********************


ಪುರಂದರ ದಾಸರ ಎಲ್ಲಾ ಕೃತಿಗಳೂ ಪುರಂದರ ವಿಠಲನಿಗೆ ಅರ್ಪಿತವಾಗಿವೆ. ಹಾಗಾದರೆ ಈ ಪುರಂದರ ವಿಠಲ ಯಾರು? ಪುರಂದರ ದಾಸರ ಜೀವನ ಮತ್ತು ಸಾಧನೆಯ ಕ್ಷೇತ್ರ ವಿಜಯ ನಗರದ ಹಂಪಿ ಎಂದು ನಮಗೆಲ್ಲಾ ಗೊತ್ತು. ಹಂಪಿಯ ಪ್ರವಾಸಕ್ಕೆ ನಾವು ತೆರಳಿದಾಗ ನಾವು ವಿಜಯ ವಿಠಲ ದೇವಸ್ಥಾನವನ್ನು ಮತ್ತು ಅದರ ಮುಂದಿನ ಕಲ್ಲಿನ ರಥವನ್ನೂ ನೋಡೇ ನೋಡುತ್ತೇವೆ. ಆ ವಿಜಯ ವಿಠಲನೇ ನಮ್ಮ ಪುರಂದರ ದಾಸರ ಪುರಂದರ ವಿಠಲ.


ಇಂದಿನ ಹಂಪಿಯ ವಿಜಯ ವಿಠಲನ ದೇವಸ್ಥಾನ ಶಿಥಿಲವಾಗಿದೆ. ವಿಜಯ ವಿಠಲನ ಮೂರ್ತಿ ಅಲ್ಲಿ ಈಗಿಲ್ಲ. ಹಂಪಿಯನ್ನು ಹಾಳು ಮಾಡಿದವರು ಯಾರು ಎಂಬುದು ತಮಗೆಲ್ಲಾ ತಿಳಿದೇ ಇದೆ. ಹಾಳು ಹಂಪಿಯ ಪ್ರವಾಸಕ್ಕೆ ಹೋದಾಗ ಕನ್ನಡಿಗರ ರಕ್ತ ಕುದಿಯುವುದು ಸಹಜ ಎಂದೇ ಹೇಳಬಹುದು. ವಿಜಯ ನಗರದ ಪತನದನಂತರ ವಿಜಯ ವಿಠಲನ ಮೂರುತಿಯನ್ನು, ಮಹಾರಾಷ್ಟ್ರದ ಪಂಢಾರಾ ಪುರಕ್ಕೆ ಕೊಂಡೊಯ್ದು ರಕ್ಷಿಸಲಾಯಿತು ಎನ್ನುತ್ತಾರೆ ಇತಿಹಾಸಕಾರರು. ಒಂದು ಸಂಶೋಧನೆಯ ಪ್ರಕಾರ,  ಹಂಪಿಯ ವಿಜಯ ವಿಠಲನೇ ಪಂಢರಾಪುರದ ಪಂಢರಿ ನಾಥನಾದ ಎಂದು ತಿಳಿದು ಬರುತ್ತದೆ. ಇದಕ್ಕೆ ಪುರಾವೆಯೋ ಎಂಬಂತೆ,  ಪಂಢರಾ ಪುರದವರು ಪಂಢರಿ ನಾಥನನ್ನು ಕನ್ನಡ ನಾಡಿನಿಂದ ಬಂದವನು, ಕಾನಡ ರಾಜಾ ಪಂಢರಿಚಾ ಎಂದು ಹಾಡಿ ಹೊಗಳುತ್ತಾರೆ.


ಕಾನಡ ರಾಜಾ ಪಂಢರಿಚಾ………(ಪಲ್ಲವಿ + ಅನು ಪಲ್ಲವಿ ಸಾಕು).


ಪುರಂದರದಾಸರು ಕೃಷ್ಣನ ಪರಮಭಕ್ತರು. ಅವರು ಒಮ್ಮೆ ನಮ್ಮ ಬೆಂಗಳೂರು ಸಮೀಪದ ಚನ್ನಪಟ್ಟಣದ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದಿದ್ದರಂತೆ. ಅಪ್ರಮೇಯ ಅನ್ನುವುದು ಶ್ರೀ ಕೃಷ್ಣನ ಮತ್ತೊಂದು ಹೆಸರು.. ನೀವೆಲ್ಲ ನೋಡಿರಬಹುದು. ಅಂಬೆಗಾಲ್ ಕೃಷ್ಣನ ಸುಂದರವಾದ ಮೂರ್ತಿ ಆ ದೇವಸ್ಥಾನದಲ್ಲಿದೆ. ಆ ಅಂಬೆಗಾಲ್ ಕೃಷ್ಣನ ಮೂರ್ತಿಯನ್ನು ನೋಡಿ ಭಕ್ತಿಪರವಶರಾದ ಪುರಂದರದಾಸರು ಆ ದೇವಸ್ತಾನದಲ್ಲೇ ಕುಳಿತು "ಜಗದೋದ್ಧಾರನ ಆಡಿಸದೆಳೆಶೋದೆ" ಎಂಬ ದೇವರನಾಮವನ್ನು ರಚಿಸಿ ಹಾಡಿದರಂತೆ. ಆ ದೇವರನಾಮದಲ್ಲಿ ದಾಸರು "ಅಪ್ರಮೇಯ" ಎಂಬ ಕೃಷ್ಣನ ಹೆಸರನ್ನು ಬಳಸಿರುವುದು ವಿಶೇಷ.  

ಜಗದೋದ್ಧಾರನ ದೇವರನಾಮದ ಮತ್ತೊಂದು ವಿಶೇಷ ಏನಪ್ಪಾ ಎಂದ್ರೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು ತಮ್ಮ ೧೯೬೬ರ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಲು ಆರಿಸಿಕೊಂಡಿದ್ದು ಇದೇ ದೇವರನಾಮವನ್ನೇ. 

ಜಗದೋದ್ಧಾರನ ದೇವರನಾಮ ಕಾಪಿ ರಾಗದ ಕೃತಿ. ಈ ದೇವರನಾಮಕ್ಕೆ ಕಾಪಿ ರಾಗದ ರಾಗಸಂಯೋಜನೆ ಮಾಡಿದವರು ಯಾರು ಗೊತ್ತೇ? ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ....... 

--------------------------------

ಅವರೇ ಬಿ.ಎಸ್. ರಾಜ್ ಅಯಂಗಾರ್.  ಕರ್ನಾಟಕದ ಸುಪ್ರಸಿದ್ದ ಹಾಡುಗಾರರು. ಅವರ ಹಳೆಯ ಗ್ರಾಮಫೋನ್ ರೆಕಾರ್ಡಿನ ಜಗದೋದ್ಧಾರನೆ ದೇವರನಾಮವನ್ನು ತಾವುಗಳು ಈಗಲೂ ಗೂಗ್ಲ್ನಲ್ಲಿ ಹುಡುಕಿ ಕೇಳಬಹುದು. 

ಈಗ ಅಂತಹ ಭಕ್ತಿಭಾವದ ದೇವರನಾಮವನ್ನು ಕೇಳೋಣ. 

ಜಗದ್ದೋಧಾರನ ಆಡಿಸಿದಳೇಶೋದೆ........ 

*******************

ಪುರಂದರ ದಾಸರು ಹದಿನಾರನೇ ಶತಮಾನದ ಹರಿದಾಸರು. ಅವರು ನೆಟ್ಟು ನೀರೆರದ ಕರ್ನಾಟಕ ಸಂಗೀತವನ್ನು ಮುಂದೆ ಬೆಳಸಿದವರು ತ್ಯಾಗರಾಜರು. ತ್ಯಾಗರಾಜರು ಹತ್ತೊಂಬತ್ತನೇ ಶತಮಾನದ ಹರಿದಾಸರು. ಈ ಎರಡು ಹರಿದಾಸರುಗಳ ನಡುವೆ ಮೂರು ಶತಮಾನಗಳ ಅಂತರ. ಪುರಂದರದಾಸರು ಕನ್ನಡದವರು, ತ್ಯಾಗರಾಜರು ತೆಲುಗಿನವರು.  ಆದರೂ ತ್ಯಾಗರಾಜರ ಮಾನಸಿಕ ಗುರುಗಳು ಪುರಂದರ ದಾಸರಾಗಿದ್ದರು. 

ತ್ಯಾಗರಾಜರ ರಚನೆಗಳಲ್ಲಿ ಪುರಂದರದಾಸರ ರಚನೆಗಳ ಪ್ರಭಾವ ಇರುವುದು ಸ್ವಾಭಾವಿಕವೇ ಎಂದು ಹೇಳಬಹುದು. ಉದಾಹರಣೆಗೆ ಪುರಂದರದಾಸರು ರಚಿಸಿದ ಈ ಕೀರ್ತನೆಯನ್ನು ನೋಡಿ. 

ಜಯ ಜಾನಕೀ ನಾಥ  (ಹಾಡು)

ನಾಟೈ ರಾಗದ ಪುರಂದರ ದಾಸರ  ಈ ಕೃತಿಯೇ, ತ್ಯಾಗರಾಜರ ನಾಟೈ ರಾಗದ ಜಗದಾನಂದಕಾರಕ ಕೃತಿಗೆ ಸ್ಪೂರ್ತಿಯಾಗಿದೆ. ಎರಡೂ ಕೃತಿಗಳ ರಾಗ, ಭಾವ, ಒಕ್ಕಣೆ ಒಂದೇ ಆಗಿರುವದನ್ನು ನಾವು ಗಮನಿಸಬೇಕು. 

ಜಗದಾನಂದಕಾರಕ (ಕೀರ್ತನೆ)  

ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ "ಕನ ಕನ ರುಚಿರ" ಎಂಬ ವರಾಳಿ ರಾಗದ ಕೀರ್ತನೆಯಲ್ಲಿ, ತ್ಯಾಗರಾಜರು ಪುರಂದರದಾಸರ ಸ್ಮರಣೆಯನ್ನು ಮಾಡಿದ್ದಾರೆ. ರಾಮನ ಅಪಾರ ಮಹಿಮೆಗಳಿಗೆ "ನಾರದ ಪರಾಶರ ಶುಕ ಶೌನಕ ಪುರಂದರ ನಗಜಾ ಧರಜ ಮುಖ್ಯಲು ಸಾಕ್ಷಿ" ಎಂದು ಹಾಡಿದ್ದಾರೆ. 

ತ್ಯಾಗರಾಜರು ರಚಿಸಿದ ಗೇಯ ನಾಟಕವಾದ "ಪ್ರಹ್ಲಾದ ಭಕ್ತ ವಿಜಯಂ"ನಲ್ಲೂ, ತ್ಯಾಗರಾಜರು ಪುರಂದರದಾಸರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. 

**************************

ಶ್ರೀಮನ್ನಾರಾಯಣ (ಕೀರ್ತನೆ) 

ಈ ಕೀರ್ತನೆಯನ್ನು ರಚಿಸಿ ಹಾಡಿದವರು ಅಣ್ಣಮ್ಮಚಾರ್ಯರು. 

ಅಣ್ಣಮ್ಮಚಾರ್ಯರು ಆಂಧ್ರಪ್ರದೇಶದ ಹರಿದಾಸರು. ಅವರು ಪುರಂದರ ದಾಸರ ಸಮಕಾಲೀನರು. ಯುವಕರಾದ ಪುರಂದರದಾಸರು, ಹಿರಿಯರಾದ ಅಣ್ಣಮ್ಮಚಾರ್ಯರನ್ನು ತಿರುಪತಿಯ ವೆಂಕಟೇಶ್ವರರ ಸಾನ್ನಿಧ್ಯಲ್ಲಿ ಭೇಟಿಯಾಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. 

ಅಂದೊಮ್ಮೆ ಯುವಕರಾದ ಪುರಂದರ ದಾಸರು ತಿರುಪತಿಯ ವೆಂಕಟೇಶ್ವರರ ಸನ್ನಿಧಿಯಲ್ಲಿ ಧ್ಯಾನಾಸಕ್ತರಾಗಿರುತ್ತಾರೆ. ಆಗ ಅವರಿಗೆ ಹಿರಿಯ ಸಂತರೊಬ್ಬರು ಹಾಡುತ್ತಿದ್ದ ಕೀರ್ತನೆಯೊಂದು ಕೇಳುತ್ತದೆ. 

ಪದುಮನಾಭ ಪರಮಪುರುಷ (ಬಾಲ ಗೀತೆ) 

ಹಿರಿಯ ಸಂತರೊಬ್ಬರು ತಮ್ಮ ರಚನೆಯ ಕೀರ್ತನೆಯೊಂದನ್ನು ಹಾಡುತಿದ್ದನ್ನು ಕೇಳಿ, ಪುರಂದರ ದಾಸರು ಪುಳಕಿತರಾಗುತ್ತಾರೆ.  ಒಮ್ಮಲೇ ಆ ಹಿರಿಯರ ಪದಗಳಿಗೆ ಧೀರ್ಘ ದಂಡ ನಮಸ್ಕಾರ ಮಾಡುತ್ತಾರೆ ಪುರಂದರ ದಾಸರು.  ಆ ಹಿರಿಯ ಸಂತರೇ, ಆಂಧ್ರ ಪ್ರದೇಶದ ಅಣ್ಣಮ್ಮ ಚಾರ್ಯರು ಎಂದು ಗುರುಗಳಯಾದ ವ್ಯಾಸರಾಯರು ಪರಿಚಿಸಯಿದಾಗ ಪುರಂದರ ದಾಸರು ಇನ್ನೂ ಹೆಚ್ಚು ಪುಳಕಿತರಾಗುತ್ತಾರೆ. ಯುವಕರಾದ ಪುರಂದರ ದಾಸರೇ "ಪದುಮನಾಭ, ಪರಮಪುರುಷ" ಗೀತೆಯ ರಚನಾಕಾರರೆಂದು ತಿಳಿದ ಅಣ್ಣಮ್ಮಚಾರ್ಯರು, ಪುರಂದರ ದಾಸರನ್ನು ಆಶೀರ್ವದಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಭದ್ರ ಅಡಿಪಾಯ ಹಾಕಿದ ಪುರಂದರ ದಾಸರನ್ನು, ಅಣ್ಣಮ್ಮಚಾರ್ಯರು ಹಾಡಿ ಹೊಗಳುತ್ತಾರೆ. ಅಣ್ಣಮಾಚಾರ್ಯರು ಪುರಂದರ ದಾಸರಿಗೆ ವೆಂಕಟೇಶ್ವರರ ಸನ್ನಿಧಿಯಲ್ಲೇ ಕೀರ್ತನೆಯೊಂದನ್ನು ರಚಿಸಿ ಹಾಡುವಂತೆ ಪ್ರೇರಿಪಿಸುತ್ತಾರೆ. ಆಗ ದಾಸರು ರಚಿಸಿದ ಹಾಡೇ…..

ವೆಂಕಟಾಚಲ ನಿಲಯಂ  (ಹಾಡು) 

ಅಣ್ಣಮ್ಮಚಾರ್ಯರನ್ನೂ ಮತ್ತು ಅವರುಗಳ ಶಿಷ್ಯರನ್ನೂ, ಪುರಂದರ ದಾಸರು ತಮ್ಮ ಆಶ್ರಮದಲ್ಲಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಪುರಂದರ ದಾಸರ  ಶಿಷ್ಯನಾದ ಅಪ್ಪಣ್ಣ ಅಡಿಗೆಯ ಮತ್ತು ಉಪಚಾರದ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.  ಪುರಂದರ ದಾಸರ ವೈರಿಗಳಿಗೆ ಅಣ್ಣಮ್ಮಚಾರ್ಯರಿಗೆ ಏರ್ಪಾಡಾದ ಭೋಜನ ಕೂಟ ಇಷ್ಟವಿರುವುದಿಲ್ಲ.

 ಊಟಕ್ಕೆ ಕುಳಿತ ಅಣ್ಣಮ್ಮಚಾರ್ಯರ ತಂಡಕ್ಕೆ ಅಪ್ಪಣ್ಣ ಮತ್ತು ಪುರಂದರ ದಾಸರು ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಾರೆ. ತುಪ್ಪ ಬಡಿಸುವ ಹೊತ್ತಿಗೆ ತುಪ್ಪದ ಪಾತ್ರೆ ತಳಗೆ ಬಿದ್ದುಹೋಗಿರುತ್ತದೆ. ಅಪ್ಪಣ್ಣ ಕಾಣೆಯಾಗಿರುತ್ತಾನೆ. ಗಾಬರಿಗೊಂಡ ಪುರಂದರ ದಾಸರು ಅಪ್ಪಣ್ಣನಿಗಾಗಿ ಹುಡುಕಾಡುತ್ತಿರುತ್ತಾರೆ. ಅಷ್ಟು ಹೊತ್ತಿಗೆ ಅಪ್ಪಣ್ಣ ತುಂಬಿದ ತುಪ್ಪದ ಪಾತ್ರೆಯನ್ನು ತಂದು ತುಪ್ಪವನ್ನು ಬಡಿಸುತ್ತಾನೆ. ಬಿದ್ದು ಹೋಗಿದ್ದ ತುಪ್ಪದ ಪಾತ್ರೆಯಲ್ಲಿ ತುಪ್ಪ ಹೇಗೆ ಬಂತು ಎಂಬುದು ಪುರಂದಸರಿಗೆ ಆಶ್ಚರ್ಯವನ್ನು ಉಂಟು ಮಾಡಿರುತ್ತದೆ.  ಭೋಜನ ಸಾಂಗವಾಗಿ ನಡೆಯುತ್ತದೆ. ಅಪ್ಪಣ್ಣ ಪಕ್ಕದ ಕೋಣೆಗೆ ಹೋಗಿ ಕಾಣೆಯಾಗುತ್ತಾನೆ. ಪಕ್ಕದ ಕೋಣೆಗೆ ದಾಸರು ಹೋಗಿ ನೋಡಿದಾಗ ಅಪ್ಪಣ್ಣನನ್ನು ಯಾರೋ ಕಂಬ ಒಂದಕ್ಕೆ ಕಟ್ಟಿರುತ್ತಾರೆ. ಹಾಗಾದರೆ ತುಪ್ಪ ಬಡಿಸಿ ಹೋದ ಅಪ್ಪಣ್ಣ ಯಾರು ಎಂದು ಯೋಚಿಸಿದ ದಾಸರಿಗೆ, ಸಾಕ್ಷಾತ್ ಪುರಂದರ ವಿಠ್ಠಲನೇ ಅಪ್ಪಣ್ಣನಾಗಿ ಬಂದು ತುಪ್ಪ ಬಡಿಸಿದ್ದು ಎಂಬ ಸತ್ಯ ತಿಳಿಯುತ್ತದೆ. 

********************************

ಈತನೀಗ ವಾಸುದೇವನೋ (ಹಾಡು) 

ಪುರಂದರ ದಾಸರ ಹರಿಕಥೆಯಲ್ಲಿ ಕನಕದಾಸರ ಕೀರ್ತನೆ ಏಕೆ ಬಂತು ಎಂದು ಯೋಚಿಸುತ್ತ ಇದ್ದೀರಾ? ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ, ಕನ್ನಡದ ಹರಿದಾಸರು.  ಇಬ್ಬರೂ ಸಮಕಾಲೀನರು ಕೂಡ.  ಇಬ್ಬರೂ ಗುರುಗಳಾದ ವ್ಯಾಸರಾಯರ ಶಿಷ್ಯರು. 

ಗುರು ವ್ಯಾಸರಾಯರ ಆಶ್ರಮದಲ್ಲಿ ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ ಸಂಗೀತಾಭ್ಯಾಸ ಮಾಡುತ್ತಿರುತ್ತಾರೆ. ಕುರುಬ ಜನಾಂಗದ ಕನಕದಾಸರು ವ್ಯಾಸ ರಾಯರ ಆಶ್ರಮದಲ್ಲಿ ಅಧ್ಯಯನ ಮಾಡುತ್ತಿರುವುದು ವ್ಯಾಸರಾಯರ ಹಲವು ಶಿಷ್ಯರಿಗೆ ಇಷ್ಟವಿರುವುದಿಲ್ಲ. ಮಾತು ಮಾತಿಗೂ ಕನಕದಾಸರನ್ನು ಆ ದುಷ್ಟ ಶಿಷ್ಯರುಗಳು ಹಂಗಿಸುತ್ತಿರುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪುರಂದರದಾಸರು, ವಿಷಯವನ್ನು ಗುರುಗಳಾದ ವ್ಯಾಸರಾಯರಿಗೆ ತಿಳಿಸುತ್ತಾರೆ. ಕನಕದಾಸರ ಮಹಾಜ್ಞಾನದ ಹಿರಿಮೆ ಆಶ್ರಮದ ಎಲ್ಲ ಶಿಷ್ಯರುಗಳಿಗೂ ತಿಳಿಯುವಂತೆ ಮಾಡಬೇಕೆಂದು ಪುರಂದರ ದಾಸರು, ಗುರುಗಳಾದ  ವ್ಯಾಸರಾಯರನ್ನು ಪ್ರಾರ್ಥಿಸುತ್ತಾರೆ. 

ಒಂದು ದಿನ ಆಶ್ರಮದಲ್ಲಿ ಚರ್ಚೆಯೊಂದು ಏರ್ಪಾಡಾಗಿರುತ್ತದೆ. ಚರ್ಚೆಯ ಸೂತ್ರದಾರರಾಗಿ ಗುರುಗಳಾದ ವ್ಯಾಸರಾಯರು ಆಸೀನರಾಗಿರುತ್ತಾರೆ. ಗುರುಗಳ ಪಕ್ಕವೇ ಪುರಂದರ ದಾಸರು ಕುಳಿತಿರುತ್ತಾರೆ. ಕನಕ ಮತ್ತು ಉಳಿದ ಶಿಷ್ಯಂದಿರು ತಳಗೆ ಕುಳಿತಿರುತ್ತಾರೆ. ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆ ಎಂಬ ಪ್ರಶ್ನೆಯನ್ನು ವ್ಯಾಸರಾಯರು ಸಭೆಯ ಮುಂದಿಡುತ್ತಾರೆ. ಕನಕನ ಬಗ್ಗೆ ದ್ವೇಷ ಕಾರುತ್ತಿದ್ದ ಹಲವು ಶಿಷ್ಯಂದಿರುಗಳು ತಮಗೆ ತೋಚಿದಂತೆ ಉತ್ತರಿಸುತ್ತಾರೆ. ಅವರ ಉತ್ತರಗಳನ್ನು ವ್ಯಾಸರಾಯರು ಒಪ್ಪುವುದಿಲ್ಲ. 

ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆಂಬ ಪ್ರಶ್ನೆಗೆ ಉತ್ತರಿಸುವ ಅವಕಾಶ ಕಡೆಯದಾಗಿ ಕನಕದಾಸರಿಗೆ ಬರುತ್ತದೆ. ಗುರುಗಳು ತಮ್ಮ ಶಿಷ್ಯೋತ್ತಮರುಗಳನ್ನು ಒಬ್ಬರಾಗಿ ತೋರಿಸುತ್ತ, ಇವರು ಸ್ವರ್ಗಕ್ಕೆ ಹೋಗುವರೇ? ಎಂದು ಕನಕನನ್ನು ಕೇಳುತ್ತಾರೆ. ಅವರ್ಯಾರು ಸ್ವರ್ಗಕ್ಕೆ ಹೋಗಲಾರರು ಎಂದು ಕನಕ ಉತ್ತರಿಸಿದಾಗ, ಸಮಸ್ತ ಶಿಷ್ಯರುಗಳು ಕನಕನ ಮೇಲೆ ಕೋಪಗೊಳ್ಳುತ್ತಾರೆ. 

ಗುರುಗಳ ಪಕ್ಕದಲ್ಲೇ ಕುಳಿತಿದ್ದ ದಾಸಶ್ರೇಷ್ಠರಾದ ಪುರಂದರ ದಾಸರು ಸ್ವರ್ಗಕ್ಕೆ ಹೋಗುವರೇ ಎಂದು ವ್ಯಾಸರಾಯರು ಕನಕನನ್ನು ಪ್ರಶ್ನಿಸಿದಾಗ, ಇಲ್ಲವೆಂದು ಕನಕ ತಲೆಯಾಡಿಸುತ್ತಾನೆ. ಶಿಷ್ಯರುಗಳು ಕೋಪದಿಂದ ಕನಕನನ್ನು ಅಧಿಕಪ್ರಸಂಗಿ ಎಂದು ನಿಂದಿಸುತ್ತಾರೆ. ವ್ಯಾಸರಾಯರು ಮುಂದುವರೆದು, ನಾನು ಸ್ವರ್ಗಕ್ಕೆ ಹೋಗುವೆನೇ ಎಂದು ಪ್ರಶ್ನಿಸಿದಾಗ, ಕನಕ ದಾಸರು ಇಲ್ಲವೆಂದು ತಲೆಯಾಡಿಸುತ್ತಾರೆ. ಶಿಷ್ಯರುಗಳ ಕೋಪ ಮುಗಿಲುಮುಟ್ಟಿರುತ್ತದೆ. 

ಕಡೆಯದಾಗಿ ವ್ಯಾಸರಾಯರು, ಕನಕ...... ನೀನು ಸ್ವರ್ಗಕ್ಕೆ ಹೋಗುವೆಯ ಎಂದು ಕೇಳಿದಾಗ ಕನಕ ಉತ್ತರಿಸುತ್ತಾ, "ನಾನು ಹೋದರೆ ಹೋಗಬಹುದು" ಎಂದು ಉತ್ತರಿಸುತ್ತಾರೆ. ಶಿಷ್ಯರುಗಳ ಕೋಪ ನೆತ್ತಿಗೇರಿರುತ್ತದೆ. ಒಮ್ಮಲೇ ಕನಕನ ಮೇಲೆರಗಿದ ಶಿಷ್ಯರುಗಳು, ಕನಕನನ್ನು ಗುರುಗಳ ಕ್ಷಮೆ ಕೋರುವಂತೆ ಆಗ್ರಹಿಸುತ್ತಾರೆ. ಶಿಷ್ಯರುಗಳನ್ನು ಸುಮ್ಮನಾಗಿಸಿದ ಗುರು ವ್ಯಾಸರಾಯರು, ಕನಕನ ಉತ್ತರದ ಅರ್ಥವೇನೆಂದು ಕನಕನನ್ನು ಕೇಳುತ್ತಾರೆ. ಕನಕ ವಿನಮ್ರತೆಯಿಂದ ಉತ್ತರಿಸುತ್ತಾ, "ನಾನು" ಎಂದರೆ 'ನಾನು ಎಂಬ ಅಹಂಕಾರ,'  ನಾನು ಎಂಬ ಅಹಂಕಾರ ನನ್ನಿಂದ  ಹೋದರೆ, ನಾನೂ  ಸ್ವರ್ಗಕ್ಕೆ ಹೋಗಬಹುದು ಎಂದು ವಿವರಿಸಿದಾಗ ಇಡೀ ಸಭೆಯಲ್ಲಿ ಮೌನ ಆವರಿಸಿರುತ್ತದೆ. ಕನಕ ದಾಸರ ಮಹಾಜ್ಞಾನದ ಪರಿಚಯ ಎಲ್ಲಾ ಆಶ್ರಮವಾಸಿಗಳಿಗೂ ಆಗ ತಿಳಿಯುತ್ತದೆ. 

****************

ಇಲ್ಲಿಗೆ ನಮ್ಮ ಶ್ರೀ ಪುರಂದರದಾಸರ ಹರಿಕಥೆ ಮುಗಿದಿದೆ. ಹರಿಕಥೆಗೆ ಮಂಗಳವೊಂದನ್ನು ಹಾಡೋಣ.

ತಂಬೂರಿ ಮೀಟಿದವ (ಹಾಡು) 

ಶ್ರೀ ರಾಮಚಂದ್ರ ಮುಕ್ತಾಯ  (ಶ್ಲೋಕ) 

-೦-೦-೦-೦-೦-೦-೦-೦-










Hindustani thaats

 https://www.facebook.com/share/r/1AMRabM4gY/?mibextid=wwXIfr

BILAWAL

KALYAN

KHAMAJ

KAFI

ASAVARI

BHAIRAVI

BHAIRAV

POORVI

TODI

MARWA


Thursday, 30 October 2025

ಕವನ - ವಾಚನ - ವ್ಯಾಖ್ಯಾನ

ಕವನ - ವಾಚನ - ವ್ಯಾಖ್ಯಾನ

 ೧) ಕವಿರಾಜಮಾರ್ಗ - ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. - ಶ್ರೀ ವಿಜಯ - ರಾಷ್ಟ್ರಕೂಟ ರಾಜ ನೃಪತುಂಗನ ಆಸ್ಥಾನದ ಕವಿ - ಕ್ರಿ.ಶಕ. ೮೧೫-೭೭ - ಕನ್ನಡದ ಮೊದಲ ಗ್ರಂಥ - ಪಂಪನಿಗಿಂತ ಎರಡು ಶತಮಾನಗಳಷ್ಟು ಹಳೆಯದು 

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.

ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮).


2) ಪಂಪನ ದೇಶಪ್ರೇಮ

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ


ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್


  • ಕನ್ನಡ ಸಾಹಿತ್ಯದ ರತ್ನತ್ರಯ: ಪಂಪ, ಪೊನ್ನ ಮತ್ತು ರನ್ನರೊಂದಿಗೆ 'ಕನ್ನಡ ಸಾಹಿತ್ಯದ ಮೂರು ರತ್ನಗಳು' ಎಂದು ಪರಿಗಣಿಸಲಾಗುತ್ತದೆ.

ಅವರು ಜೈನ ಬ್ರಾಹ್ಮಣ (ಜೈನ ಪಂಡಿತರು) ಗೆ ಸೇರಿದವರು ಮತ್ತು ಆಂಧ್ರಪ್ರದೇಶದ ಇಂದಿನ ಗುಂಟೂರು ಜಿಲ್ಲೆಯ ಕಮ್ಮನಾಡುವಿನ ವಂಗಿಪರ್ರುವಿನವರು . [ 8 [ 9 [ 10 [ 11 ]

ಹಂಪ ನಾಗರಾಜಯ್ಯನವರ ಪ್ರಕಾರ ವರದ ನದಿ ತೀರದ ಅಣ್ಣಿಗೇರಿ ಪಂಪನ ಹುಟ್ಟೂರು. ಸಮೀಪದಲ್ಲೇ ಸಿರ್ಸಿಯ ಬಳಿ ಬನವಾಸಿ ಎಂಬ ಊರು ಇದೆ. 

ಪೊನ್ನ ಜೈನ ಕವಿ

His most famous extant works in Kannada are "Shantipurana " (shantinatha purana), written in champu style (mixed prose-verse classical composition style inherited from Sanskrit),


೩) ಅನಿಲತನುಜನ ಸಿಂಹಧ್ವನಿಯಂ ಕೇಳ್ದಲ್ಲಿ

ತತ್ಸರೋವರದೆರ್ದೆ ಪವ್ವನೆ ಪಾರುವಂತೆ
ಪಾರಿದು ವನಾಕುಳಂ ಕೊಳದೊಳಿರ್ದ
ತದ್ವಿಹಗಕುಲಂ
ಆ ರವಮಂ ನಿರ್ಜಿತಕಂಠೀರವರವಮಂ
ನಿರಸ್ತಘನರವಮಂ ಕೋಪಾರುಣನೇತ್ರಂ
ಕೇಳ್ದು ನೀರೊಳಿರ್ದುಂ ಬೆಮರ್ದಂ
ಉರಗಪತಾಕಂ// //

ಶ್ರವಣಬೆಳಗೊಳದಲ್ಲಿ ರನ್ನನ ಕೆತ್ತಿದ ಕೈಬರಹ (ಕನ್ನಡ ಅಕ್ಷರಗಳಲ್ಲಿ) ಕವಿ ರತ್ನ ("ಕವಿಗಳಲ್ಲಿ ರತ್ನ") ಎಂದು ಬರೆಯಲಾಗಿದೆ


೪) ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು. ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯಾ?

೫) ಬೆಚ್ಚನೆಯಾ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಕಲ್ಲರಳೀ ಹೂವಾಗಿ । ಎಲ್ಲರಿಗೆ ಬೇಕಾಗಿ ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ ।
ಬಲ್ಲವರು ಹೇಳಿ ಸರ್ವಜ್ಞ||

ಕಪ್ಪು ಮೋಡ 

೬) ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಾಗಿ ಕರಿ ಕೂಗಿರೆಕಾಯಿ
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಜ್ಞಾನ ಬಾಳೆಕಾಯಿ | ೧ |
ಕರಿರಾಜಗೊಲಿದಂತ ಬದನೇಕಾಯಿ
ಅರಿಷಡ್ವರ್ಗದಿ ಒದಗಲಿ ಕಾಯಿ
ಕ್ರೂರ ವ್ಯಾಧಿಗಳೆಲ್ಲ ಹೀರೇಕಾಯಿ
ಘೋರ ದುಷ್ಕೃತ್ಯಗಳ ತೋರೇ ಕಾಯಿ | ೨ |
ಭಾರತಕ ಕಥೆ ಕರ್ಣ ತುಂಬಿದೆ ಕಾಯಿ
ವಾರಿಜಾಕ್ಷನೆ ಗತಿ ಎಂದಿಪ್ಪೆ ಕಾಯಿ
ಮುರಹರ ನಿನ್ನನರಿದವರೇ ಕಾಯಿ
ಗುರು ಕರುಣಾಮೃತ ಉಣಿಸೇ ಕಾಯಿ | ೩ |
ಉರುಗಾಧಿಪತಿ ಎಂಬ ಹೆಸರಿನ ಕಾಯಿ
ಬಾಡದಾದಿಕೇಶವ ನಿನ್ನ ಮೆತ್ತಿದ ಕಾಯಿ | ೪ |

ತರಕಾರಿ ಮುಂಡಿಗೆ 

೭) ವೇದಪುರುಷನ ಸುತನ ಸುತನ ಸ

ಹೋದರನ ಹೆಮ್ಮಗನ ಮಗನ ತ

ಳೋದರಿಯ ಮಾತುಳನ ಮಾವನತುಳ ಭುಜಬಲದಿ

ಕಾದಿ ಗೆಲಿದನಣ್ಣನವ್ವೆಯ

ನಾದಿನಿಯ ಜಠರದಲಿ ಜನಿಸಿದ

ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ


ಪದ-ಅರ್ಥ:

ವೇದಪುರುಷ-ಆದಿಪುರುಷ, ವೇದಗಳನ್ನು ರಕ್ಷಿಸಿದವನು (ವಿಷ್ಣು); ಸುತನ-ಮಗನ (ಬ್ರಹ್ಮನ); ಸುತನ-ಮಗನ (ನಾರದನ); ಸಹೋದರನ-ಒಡಹುಟ್ಟಿದವನ (ಮರೀಚಿಯ); ಹೆಮ್ಮಗನ-ಮೊಮ್ಮಗನ(ದೇವೇಂದ್ರನ); ಮಗನ-ದೇವೇಂದ್ರನ ಮಗನ (ಅರ್ಜುನನ); ತಳೋದರಿಯ-ಹೆಂಡತಿಯ-(ಸುಭದ್ರೆಯ); ಮಾತುಳನ-ಸೋದರಮಾವನ (ಕಂಸನ); ಮಾವನ(ರೂಪನ ಎಂಬ ಪಾಠಾಂತರವೂ ಇದೆ)-ಹೆಣ್ಣುಕೊಟ್ಟ ಮಾವ (ಜರಾಸಂಧನ); ಅತುಳ ಭುಜಬಲದಿ-ಅಪ್ರತಿಮ ಬಾಹುಬಲದಿಂದ;  ಕಾದಿ-ಹೋರಾಡಿ; ಗೆಲಿದನ-ಗೆದ್ದವನ (ಭೀಮನ); ಅಣ್ಣನ-ಹಿರಿಯ ಸಹೋದರನ (ಧರ್ಮಜನ); ಅವ್ವೆಯ-ತಾಯಿಯ (ಕುಂತಿಯ); ನಾದಿನಿಯ-ತಮ್ಮನ ಹೆಂಡತಿಯ (ದೇವಕಿಯ); ಜಠರದಲಿ-ಗರ್ಭದಲ್ಲಿ; ಆದಿಮೂರುತಿ (ಅನಾದಿಮೂರುತಿ ಎಂದೂ ಕೆಲವರು ಅರ್ಥೈಸಿಕೊಳ್ಳುತ್ತಾರೆ. ಅನಾದಿ ಮೂರುತಿ ಎಂದರೆ ಆದಿಯಿಲ್ಲದವನು. ಅರ್ಥದಲ್ಲೇನೂ ವ್ಯತ್ಯಾಸವಾಗುವುದಿಲ್ಲ)-ಸೃಷ್ಟಿಯಲ್ಲಿ ಮೊದಲಿಗನು (ಕೃಷ್ಣ); ಸಲಹೋ-ಕಾಪಾಡು. 


೮) ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು
ಇವರಿರ್ವರೊಳೇಳ್ಗೆವಡೆದವರಿಂದ
ಸವನಿಪುದಿಹಪರಸೌಖ್ಯ

೯) ಪದ್ಯಂ ವದ್ಯಂ ಗದ್ಯಂ ಹೃದ್ಯಂ


10) ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!

 

ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!

 

ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 

 

ಭೀಮಬಸವಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

Friday, 17 October 2025

ಪರ್ವ ಮಂಥನ

 ಪರ್ವ ಮಂಥನ 

-  ವಿಶ್ವ ವಿಖ್ಯಾತ ಕಾದಂಬರಿಕಾರರು 

- ಮಹಾ ಮಾನವ ಕೂಡ, ೯ ಕೋಟಿ ಟ್ರಸ್ಟ್, ಮನೆ ಕೂಡ ಸಾರ್ವಜನಿಕ ಉಪಯೋಗಕ್ಕೆ,  ಸಂತೇಶಿವರ ಮತ್ತು ೨೫ ಹಳ್ಳಿಗಳ ನೀರು ಮತ್ತು ರಸ್ತೆ, ಸಹನಾ ವಿಜಯಕುಮಾರ್ ಪೋಷಣೆ 


-0-0-0-0-0-0-

-ಹಾಸನದವರು, ಹೊಯ್ಸಳ ಕರ್ನಾಟಕರು, ನಮ್ಮವರು 

-೨೧ ಕಾದಂಬರಿಗಳು, ೩೦ ಗ್ರಂಥಗಳು, ಎಲ್ಲಾ ಬ್ರಹುದಾದದದ್ದೇ, ವೈಚಾರಿಕತೆಯನ್ನು ಜಾಗೃತಗೊಳಿಸುವ ಕಾದಂಬರಿಗಳೇ, ಯೂರೋಪಿನವರೋ, ಅಮೆರಿಕಾದವರೋ ಆಗಿದ್ದರೆ ೨-೩ ನೊಬೆಲ್ ದೊರೆಯುತಿತ್ತು,

ವಂಶವೃಕ್ಷ, ಗೃಹಭಂಗ, ಪರ್ವ, ಮಂದ್ರ, ಆವರಣ, ಯಾವುದಕ್ಕಾದರೂ ನೊಬೆಲ್ 


-0-0-0-0-0-

-ಭೈರಪ್ಪರವರನ್ನು  ಹತ್ತಿರದಿಂದ ಕಂಡದ್ದು, ಡಿಸೆಂಬರ್ ೨೦೧೭, ಸಂತೇಶಿವರಾದಲ್ಲಿ, ಅವರ ಮನೆಯ ಮುಂದೆಯೇ ಪೆಂಡಾಲ್, ಆ ದೇವಸ್ಥಾನದಲ್ಲಿ ಅಯ್ಯನವರು, ಹತ್ತಿರದ ಮನೆಯಲ್ಲಿ ಹಿಟ್ಟನ್ನು ಕೊಡದಿದ್ದದ್ದು, ಸನ್ಯಾಸಿ ಹಿಟ್ಟು ಕೊಟ್ಟದ್ದು, 

ಉತ್ಸವ ಮೂರ್ತಿ ಹೆಚ್ಚು ಉರುಳಾಡಿದರೆ, ಮೂಲ ದೇವರಿಗೆ ಮಹಿಮೆ ಕಡಿಮೆ

ಮೇರುಕೃತಿ ಪರ್ವ, ಯಾರಿಗೆ? ಓದೇ ಇಲ್ಲ, ಅರ್ಧ ಓದಿದವರು, ಓದಿದವರು ಎಲ್ಲರಿಗೂ, 

-0-0-0-0-0-0-


ತಯ್ಯಾರಿ 

ಪರ್ವ - ಹಸ್ತಿನಾವತಿ - ಮೀರುತ, ವಿರಾಟನಗರ- ಜೈಪುರ್, ದ್ವಾರಕೆ - ಗುಜರಾತ್, ಹಿಮಾಲಯ ಗುಡ್ಡಗಾಡು - ಭೀಮನ ದೇವಸ್ಥಾನ 

ಆವರಣ - ಭಾನು ಮುಸ್ತಾಕ್ ಮನೆಯಲ್ಲಿ ವಾಸ 

ಯಾನ - ಟಾಟಾ ಇನ್ಸ್ಟಿಟ್ಯೂಟ್ ಪ್ರೊಫೆಸಸೋರ್ಸ್ ಜೊತೆ ಚರ್ಚೆ, ಕ್ಯಾಂಪುಸ್ನಲ್ಲೇ ವಾಸ 

ಮಂದ್ರ - ೭೬ನೇ ವಯಸ್ಸಿನಲ್ಲಿ ಹಿಂದೂಸ್ತಾನಿ ಸಂಗೀತ ಪಾಠ 

-0-0-0-0-0-0-


ವಿರೋಧಿಗಳು 

ಪ್ರಧಾನ ಗುರುದತ್ತ - ಕೋಲ್ಕತ್ತಾ ಸಮಾವೇಶ 

ನಾನೇಕೆ ಜರೆಯುತ್ತೇನೆ?

-0-0-0-0-0-0-


೧೯೭೯ರಲ್ಲಿ ಬಿಡುಗಡೆಯಾದಾಗ ಪರ್ವ ಪರ ವಿರೋಧದ ಅಲೆ, ಭಾರಿ ಚರ್ಚೆ, ಮಹಾಭಾರತಕ್ಕೆ ಅಪಚಾರ, ೪೪ ವರ್ಷಗಳಲ್ಲಿ ಬೃಹದಾಗಿ ಬೆಳೆದಿದೆ, ಭಾರತದ ಎಲ್ಲ ಭಾಷೆಗಳಿಗೆ, ಸಂಸ್ಕೃತಕ್ಕೆ, ಇಂಗ್ಲಿಷ್ಗೆ, ರಶಿಯನ್ ಹಾಗು ಚೈನೀಸ್ ಭಾಷೆಗಳಿಗೆ ಅನುವಾದವಾಗಿದೆ. 

ವ್ಯಾಸಭಾರತದ ಮರುಸೃಷ್ಟಿ, ೨೦% ಒರಿಜಿನಲ್ + ೮೦% ನನ್ನ ಕಲ್ಪನೆ, ಇದು ಇತಿಹಾಸ, ಪವಾಡಗಳಿಗೆ ಅವಕಾಶವಿಲ್ಲ, ಅಕ್ಷಯವಸ್ತ್ರ, ವಿಶ್ವರೂಪ ದರ್ಶನ ಇಲ್ಲ, ಕೃಷ್ಣ ಕೂಡ ಎಲ್ಲರಂತೆ, ಆದರೆ ಬುದ್ಧಿವಂತ ಪ್ರಭಾವಿ ರಾಜಕಾರಣಿ, 

ಕುಂತಿ, ದ್ರೌಪದಿ, ಗಾಂಧಾರಿ, ಭೀಮ, ಅರ್ಜುನ, ದುರ್ಯೋಧನ, ಕರ್ಣ ಎಲ್ಲರ ಪ್ರಬಲ ಪಾತ್ರಗಳೇ ಅವುಗಳ ಮನೋವೇದನೆಗಳ ಚಿತ್ರಣ, ಸ್ವಗತಗಳ ಸರಣಿ, ಮನೋವೇದನೆಗಳ ಚಿತ್ರಣ 

ಮೌಲ್ಯಗಳ ಸಂಘರ್ಷ - ಬಹು ಪತಿತ್ವ, ಸೂತಪುತ್ರ ಇವುಗಳ ಚರ್ಚೆ 

ಕಥೆ ಆರಂಭ - ಯುದ್ಧ ಸನ್ನಿಹಿತವಾದ ಕಾಲ, ಎಲ್ಲರಿಗೂ ಮಧ್ಯ ವಯಸ್ಸು, ಆತ್ಮಾವಲೋಕನಕ್ಕೆ ಸರಿಯಾದ ಕಾಲ, ಜೀವನ ಇನ್ನು ಮುಗಿದಿರುವುದಿಲ್ಲ, 

ಭೂಗೋಳ, ಮಗಧದಿಂದ ಗಂಧರಾದವರೆಗೆ, ಆರ್ಯಾವರ್ತ, ಕುರುಗಳು, ಮದ್ರರು, ಪಾಂಚಾಲರು, ಬಾಹ್ಲಿಕರು, ತ್ರಿಗರ್ತರು, ಯಾದವರು, ಇವರುಗಳ ನಡುವಿನ ಕಥೆ 

ಶಲ್ಯನಿಂದ ಕಥೆಯ ಆರಂಭ ಏಕೆ? ಮಹಾಯುದ್ಧದ ಸಂಧರ್ಭದಲ್ಲಿ ಸಣ್ಣ ರಾಜರುಗಳ ಅನಿಸಿಕೆ ಹಾಗೂ ದೋರಣೆ. 

-೦-೦-೦-೦-೦-೦-


ಕುಂತಿ 

ಕುಂತಿಯ ಸ್ವಾಗತ - ವಿದುರನ ಮನೆಯಲ್ಲಿ ೧೩ ವರ್ಷದಿಂದ, ಗಂಗಾ ತಟದಲ್ಲಿ, ಗಂಗಾನದಿಯ ಪ್ರತೀಕ, ಶೂರಸೇನನ ಮಗಳು, ಕೃಷ್ಣನ ಸೋದರತ್ತೆ, ಪೃಥ, ದತ್ತುವಿನನಂತರ ಕುಂತಿ , ಕೃಷ್ಣ ಸಂಧಾನಕ್ಕೆ ಕೃಷ್ಣನ ಆಗಮನ, ಆಗದ ಸಂಧಾನಕ್ಕೆ ಕೃಷ್ಣ ಏಕೆ ಬಂದ? ವಿದುರನ ಆಗಮನ, ನಿಯೋಗಕ್ಕೆ ಹುಟ್ಟಿದ ಪಾಂಡವರಿಗೆ ರಾಜ್ಯ ಕೊಡೆನು, ಸೂಜಿಮೊನೆಯಷ್ಟು ಕೂಡ, ೫ ಹಳ್ಳಿಗಳಿರಲಿ, ನಿಯೋಗ ಧರ್ಮಸಮ್ಮವಾತವಲ್ಲವೇ? ನಾನು ತ್ಯಾಗ ಮಾಡಿಲ್ಲವೇ?  ಪಾಂಡುವಿನೊಂದಿಗೆ ವಿವಾಹ, ನಿರಾಸೆ, ಹೊಡೆತ, ಕೈಲಾಗದವನು ಮೈಯೆಲ್ಲ ಪರಚಿಕೊಂಡ,  ಬಂಜೆ ಎಂಬ ಪಟ್ಟ ಭೀಷ್ಮರಿಂದ, ಮಾದ್ರಿ ವಿವಾಹ, ಅವಳಿಗೂ ನಿರಾಸೆ, ಬಿಲ್ಲಿನಲ್ಲೇ ಶಕ್ತಿ ಇಲ್ಲದಿದ್ದರೆ, ಹೆದೆ ಏನು ಮಾಡಿತು? 

ಹಿಮಾಲಯ ತಪ್ಪಲಿಗೆ ಪಾಂಡು ಪತ್ನಿಯರೊಂದಿಗೆ, ನಿಯೋಗ, ಪಾಂಡವರ ಜನನ 

ಪಾಂಡುವಿಗೆ ಚಿಗುರಿದ ಪುರಷತ್ವ, ಆಘಾತ, ನಿಧನ, ಮಾದ್ರಿ ಸಹಗಮನ 

ನಾಳೆ ಕರ್ಣನ ಭೇಟಿ, ವಿದುರ-ಪಾಂಡವರಿಗೆ ಸಂದೇಶವೇನು? ಈಗ ನೋಡೆನು, ಯುದ್ಧವಾಗಲಿ, ಪಟ್ಟವಾದನಂತರವೇ ಭೇಟಿ 


ಭೀಮ 

ಪಾಂಡವರಲ್ಲಿ ಬಲಶಾಲಿ, ಅತಿ ಪ್ರಾಮುಖ್ಯತೆ , ಉಪಪ್ಲಾವ್ಯದಲ್ಲಿ ಬೀದರ, ಕೃಷ್ಣ-ಭೀಮ ಸಂವಾದ, ಲಾವಂಚದ ಚಾಪೆ, ರಾಕ್ಷಸರ ವೈರತ್ವ, ಘ ಸಹಾಯಬೇಕು. ಸಂಕೋಚಬೇಡ, ಹೋಗು, ಮನ್ನಿಸುವರು, ಖಾಂಡವ ಪ್ರಸ್ತ - ಇಂದ್ರಪ್ರಸ್ಥ-ಕೃಷ್ಣನ ಸಹಾಯ (ಬೇರೆ ಪಾತ್ರಗಳ ಮುಖಾಂತರ ಕೃಷ್ಣನ ವ್ಯಕ್ತಿತ್ವ) 

ದ್ರೌಪದಿ ಆಗಮನ - ನೀನೆ ಅಚ್ಚುಮೆಚ್ಚು, ಗೌರವ ಕಾಪಾಡುವ ಕಾರ್ಯ ಸಾಧನೆ, ಬಿಚ್ಚು ಮನಸಿನ ಮಾತು ನಿನ್ನಲ್ಲಿ ಮಾತ್ರ, ರಾಜ್ಯ ನನಗೆ ಬೇಡ, ದು, ದು, ಧೃ ಸಂಹಾರವಾಗಲಿ, ಹಿಡಂಬಿಯ ಆತಂಕ , ನೀನೆ ನನಗೆ ದಿಕ್ಕು 

ಹಿಡಂಬ ನಾಡು ಹಸ್ತಿನಾವತಿಯ ದಕ್ಷಿಣಕ್ಕೆ, ವಾರಣಾವತದ ಸಮೀಪ 

ಭೀಮನ ಸ್ವಗತ - ಅರಗಿನ ಮನೆ, ವಾರಣಾವತ, ಹಿಡಿ೦ಬೆ - ಲವ್ ಅಟ್ ಫಸ್ಟ್ ಸೈಟ್, ಹಿಡಿಎಂಬ-ಭೀಮ ವಧೆ , ನಂತರ ಮದುವೆ 

ಹಿಡಿಮ್ಬ್-ಭೀಮರ ಪ್ರಣಯ, ಸಮಾನ ಬಲದ ಜಟ್ಟಿಯೊಡನೆ ಮಲ್ಲಯುದ್ಧ , ದ್ರೌಪದಿ ನಾಜೂಕು, ದ್ರೌಪದಿಗೆ ಮಾಡಿದ್ದೂ ಎಷ್ಟು, ಜಯದ್ರಥ, ಕೀಚಕ, ಹಿಡಂಬಿಯಾಗಿದ್ದರೆ ಹೊಸಕಿಹಾಕುತ್ತಿದಳು 

ಘ ಭಾರಿ ಮಗು, ಕುಂತಿಯ ಆಗ್ರಹ, ಮುಂದಕ್ಕೆ, ಬಕಾಸುರ ವಧೆ, 

ಭೀಮನ ಆಗಮನ, ಹಿಡಿಗೆ ಪೂರ್ವಸೂಚನಾ, ಘ ಸ್ವಾಗತ, ಹೆಗಲ ಮೇಲೆ, 

ಹಿಡಿ ಭೀಮರ ಪುನರ್ಮಿಲನ, ರಾಕ್ಷಸ ಮುದ್ದು, ಎಣ್ಣೆ ಸ್ನಾನ, ಮಾಂಸದ ಊಟ, ನನ್ನ ನೆನಪು ಬರಲಿಲ್ಲವೇ< ೧೨+೧? 

ಕಾಮಕಟಂಕಟಿ - ಘ ಹೆಂಡತಿ, ಬರ್ಬರಕ ಮಗು, ನನ್ನದೇ ಮೊಮ್ಮಗು 


ದ್ರೌಪದಿ 

ಸಬಲ, ಗಟ್ಟಿತನ, ಸೂಕ್ಷ್ಮ ಮನಸ್ಸು, ಸಂವೇದನಾಶೀಲ ಪಾತ್ರ 

ಉಪಪ್ಲಾವ್ಯ-ಸಂತೋಷ-ಉಪ ಪಾ ಜೊತೆಗೆ 

ಪ್ರತಿವಿಂಧ್ಯ ೨೪ ವರ್ಷ ಮದುವೆ ಇಲ್ಲ, ಅಭಿಮನ್ಯು ೧೬ ವರ್ಷ - ಮದುವೆಯಾಗಿದೆ, ಬಿಲ್ಲುಪ್ರವೀಣರಲ್ಲ, ಭೀಮನ ಮೈಕಟ್ಟಿಲ್ಲ 

೨೬ ವರ್ಷದ ಹಿಂದೆ, ಮತ್ಸ್ಯಯಂತ್ರ ಬೇಧನ, ಸ್ಪರ್ಧೆ, ಐಕ್ಯಮತ್ಯ ಕಾಪಾಡಲು ಕುಂತಿ ಸಂಚು, ಜಗಳವನ್ನೇಕೆ ಸೊಸೆಯಂನ್ನಾಗಿ ಮಾಡಿಕೊಳ್ಲಲಿ,  ಮೋಡ-ಭೂಮಿ 

ಸಂಸಾರ ಮಾಡುವುದು ಹೇಗೆ? ಪ್ರತಿದಿನ ಒಬ್ಬಬ್ಬರು, ಮೈಬಾಕತನ, ಗಂಡಸಿಗೆ ಹೆಣ್ಣು ಸಮನಾಳಲ್ಲ, ಋತುಚಕ್ರವಿಲ್ಲ, ಹೆರಿಗೆ ಇಲ್ಲ, ಮೊಲೆ ಉಣ್ಣಿಸುವುದಿಲ್ಲ, ೩೦ ದಿನವೂ ರೆಡಿ, ಕುಂತಿ ಮೋಸಮಾಡಿದಳು 

ಆರಂಭದಲ್ಲಿ ಅರ್ಜುನ - ನಂತರ ಭೀಮ, ಪ್ರೌಢಳಾಗುವ ತನಕ ತಿಳಿಯುವುದಿಲ್ಲ 

ಅರ್ಜುನ ಯಾತ್ರೆ, ಉಲೂಪಿ, ಚಿತ್ರಗಂಧೆ, ಸುಭದ್ರೆ, ಸುಭದ್ರೆ ಜಾಣೆ, ಷರತ್ತು, ಗಂಡುಮಗು ಬೇರೆ, ನಾನು ಸೋತೆ, ಕುಂತಿ ನನ್ನ ಹಿತಕಾಯಲಿಲ್ಲ 

ದುರ್ಯೋಧನ - ಬೇರೆ ರಾಜರುಗಳಿಗೆ ನೀವೇಧನೆ - ನಿಯೋಗ, ಧಾರ್ಮ - ಬಹುಪತಿತ್ವ ಆರ್ಯಧರ್ಮವಲ್ಲ 

ಪ್ರತಿವಿಂಧ್ಯ - ನಿಜವಾದ ಆರ್ಯಧರ್ಮ ಯಾವದು? ಯುದ್ಧ, ಜೂಜು, ಹೆಣ್ಣು, ಹೆಂಡ 

ಶ್ರುತಸೋಮ - ಅಮ್ಮ ನಿನಗೆ ಧೈರ್ಯ ಯಾವಾಗ ಬಂತು? ಗಂಡಸರ ಮೇಲಿನ ಭರವಸೆ ಕುಸಿದಾಗ,

 ಸಭೆಯಲ್ಲಿ ಮಾನಭ೦ಗ  ಪ್ರಸಂಗದಲ್ಲಿ 

ನನ್ನನ್ನು ಪಣವಾಗಿಡುವ ಅಧಿಕಾರವಿತ್ತೆ? ಭೀಷ್ಮರ ಧರ್ಮಸೂಕ್ಷ್ಮದ ಉತ್ತರ 

ಗಂಡಂದಿರು ದಾಸರಾಗಿರಬಹುದು, ಕೃಷ್ಣ ಇದ್ದಾನೆ, ಮಾನಭಂಗ ನಿಂತಿತ್ತು 

ಭೀಮನ ಘರ್ಜನೆ - ದ್ರೌಪದಿ ಶಪಥವಿಲ್ಲ, ಧೃ ಗಾಂ ಎಚ್ಚರ, ವಾರ ಕೇಳು, ನನ್ನ ಮಕ್ಕಳಿಗೆ ದಾಸಪುತ್ರರೆಂಬ ಪಟ್ಟ ಬೇಡ, ರಾಜ್ಯ ಕೇಳದ ಸ್ವಾಭಿಮಾನಿ ದ್ರೌ, ಆದರೂ ನೀಡಿದ ಧೃ 

ಮರುದಿನವೇ ಎರಡನೇ ಬಾರಿಗೆ ಆಹ್ವಾನ, ಹೋರಾಟ ಧರ್ಮ, ಅಸಹಾಯಕ ದ್ರೌ 

ವನವಾಸದ ಆರಂಭದಲ್ಲಿ ಕೃಷ್ಣನ ಆಗಮನ, ಧರ್ಮನಿಗೆ ಗೃಹಚರ ಬಿಡಿಸಿದ್ದು, ನಿಜವಾದ ಆರ್ಯಧರ್ಮ ಕೃಷ್ಣನಿಗೆ ಮಾತ್ರ ಗೊತ್ತು. 

ಜಯದ್ರಥ ಪ್ರಸಂಗ , ಧರ್ಮರಾಯನ ಕ್ಷಮಾಪಣೆ ನ್ಯಾಯ, ರೋಸಿಹೋದ ದ್ರೌ, ಗಾಂಧಿ-ಪಾಕಿಸ್ತಾನ್ ಧರ್ಮದ ಗಬ್ಬುನಾತ 

ಕೀಚಕ ಪ್ರಸಂಗ - ಧರ್ಮ ಹೇಳಿದ್ದು, ಭೀಮನೊಬ್ಬನೇ 

ಅರ್ಜುನ 

ಯಾದವರು - ಯುಯುಧಾನ (ಸಾತ್ಯಕಿ) 


ಕರ್ಣ 

ನಾಯಿಯ ಪ್ರತೀಕ (ಸ್ವಾಮಿ ಭಕ್ತಿ, ನಿಯತ್ತು, ಅಲ್ಪತೃಪ್ತಿ) 

ಕೃಷ್ಣ - ಕರ್ಣ ಭೇಟಿ, ನಿರಾಕರಣ 

ಭಾರ್ಗವ ವಿದ್ಯಾಭ್ಯಾಸ - ಸ್ಪರ್ಧೆ - ಅವಮಾನ - 

ಕುಂತಿ - ಕರ್ಣ 

ಕೃಷ್ಣ ಕಳಿಸಿದನೇ?

ಅಮ್ಮ, ಪಾಂಡವರಿಗೆ ಹೇಳಿ ಬಂದಿದೀಯ? ದ್ರೌಪದಿ ಒಪ್ಪುವಳೇ? ಪಾಂಡವರಿಗೆ ಹೇಳಿದರೆ ಅವರು ಯುದ್ಧ ಮಾಡರು ಎಂಬ ಭಯವೇ? ಅವರೊಂದಿಗೆ ನಿಂಗೆ ತಾಯಿಯ ಭಾವನಾತ್ಮಕ ಸಂಬಂಧವಿದೆ. ತಾಯ್ತನ ಬರುವುದು -ಮೊಲೆ ಉಣಿಸು,  ಹೇಲು ಉಚ್ಚೆ, ಬೆರಳು, ವಿದ್ಯಾಭ್ಯಾಸ .  ಆದರೂ ಜನ್ಮ ನೀಡಿರುವೆ, ನಮಸ್ಕಾರ 

ಕೃಷ್ಣ ಜನ್ಮರಹಸ್ಯ ತಿಳಿಸಿ ಕೌರವನನ್ನು ಕೊಂದೆ - ಮೂಲದಲ್ಲಿ 

-೦-೦-೦-೦-


ಯುದ್ಧದ ವೇದಿಕೆ ಕಡೆಗೆ 

ಶಲ್ಯನನ್ನು ದುರ್ಯೋಧನ ಗೆದ್ದದ್ದು, ನಕುಲ ಸಹದೇವರಿಗೆ ಇಂದ್ರಪ್ರಸ್ತವೆಂಬ ಆಮಿಷ, 

ಸೈನ್ಯಕ್ಕೆ ಆಹಾರ ಕೊರತೆ, ಹಳ್ಳಿಗಳಿಂದ ವಸೂಲಿ, ವ್ಯಾಸರ ಆಶ್ರಮದಿಂದಲೂ 

ಚರ್ಚಿಲ್ - ಎರಡನೇ ಮಹಾಯುದ್ಧ - ಬೆಂಗಾಲದ ಕ್ಷಾಮ - ರಾಜರುಗಳು ಒಂದೇ 

ಊಟ, ಎಂಜಲು, ಹೇಲು, ಗಬ್ಬು ನಾತ 


ದ್ರೋಣ 

ಏಕಲವ್ಯ - ದ್ರೋಣ 

-೦-೦-೦-೦-


ಯುದ್ಧ ಭೂಮಿ 

ಧೃ - ಕೃಷ್ಣ ತಂತ್ರಗಾರ ಸೂಳೆಮಗ 

ಧೃ - ಚಾರು ದಾಸಿ - ಹಾಸ್ಯ ಪ್ರಸಂಗ 


ದ್ರೌಪದಿ ಮತ್ತೆ 

ಅಶ್ವಥಾಮನಿಂದ ಉಪಪಾಂಡವರ ಮತ್ತು ಧೃಷ್ಟ ಹತ್ಯೆ 

ದ್ರೌಪದಿ ಪ್ರಲಾಪ - ಅಭಿ ಸತ್ತಾಗ, ಘ ಸತ್ತಾಗ - ಈಗ ಸಮಾನಾಂತರ ದೂರ ಆಗ ಮಾನ, ಈಗ ಪ್ರಾಣ - 

ಅಶ್ವಥಮನನ್ನು ಬಂಧಮುಕ್ತ ಮಾಡು ಕರ್ಣ - ನಾನೇ ಅಗ್ನಿ ಸಂಸ್ಕಾರ ಮಾಡುತ್ತೇನೆ 


ಉಕ್ಕಿನ ಭೀಮ ಪ್ರಸಂಗ - ಕೃಷ್ಣನ ವಿವರಣೆ 


ಗಾಂಧಾರಿ 

ಕೃಷ್ಣ - ಪಟ್ಟಿ ಏಕೆ? ಗಾಂಧಾರಿ ವಿವರಣೆ, ಪಟ್ಟಿ ಬಿಚಿದ ಕೃಷ್ಣ - ಯುದ್ಧ ಭೂಮಿಗೆ - ಕುಂತಿ ಕೂಡ - ಮಕ್ಕಳ ಹೆಣವನ್ನು ಹುಡುಕಿಕೊಂಡು - ಯಾರಿಗೂ ಹೆಣಗಳು ಸಿಕ್ಕುವುದಿಲ್ಲ 

ಬೇರೆ ಭಾರತದಲ್ಲಿ -ಕುಂತಿ -  ಕರ್ಣನನ್ನು ನಾನೇ ಕೊಂದೆ, ಘ ನನ್ನ ನಾನೇ ಕೊಂದೆ 

ಬೇರೆ ಭಾರತದಲ್ಲಿ - ಶಕುನಿ ಶವ ನೋಡಿದ ಗಾಂಧಾರಿ 


ಕುಂತಿ 

ಉತ್ತರೆಯ ಮಗು ಸತ್ತು ಹುಟ್ಟಿತು , ನಮ್ಮ ವಂಶ ಬೆಳೆಯುವುದು ಹೇಗೆ?

ಯುದ್ಧದ ಬಸುರಿಯರು? ಹುಟ್ಟುವ ಮಕ್ಕಳಿಗೆ ತಂದೆ ಯಾರು? 


ಮುಕ್ತಾಯ 

ಜೀವನಕ್ಕೆ ಹತ್ತಿರ - ವಿನೂತನ ಸಂಸ್ಕರಣೆ - ಹೊಸತನದ ಪರ್ವ 

-0-0-0-0-0-






















Tuesday, 16 September 2025

M S Subbulakshmi - SRLKK - Sep 20 - Bullet Points

  


ಮುದಕಾರಾರ್ಥ -----------------------

---------------------------------------------------------------------------------------

ಎಲ್ಲರಿಗೂ ನಮಸ್ಕಾರ. 

 "ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ  ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ. 

----------------------------------------------------------------------------------------------------------------------------------------

ಮಾಣಿಕ್ಯ ವೀಣಾ ಮುಫಲಾಲಯಂತೀಂ

ಮದಾಲಸಾಂ ಮಂಜುಲ ವಾಗ್ವಿಲಾಸಾಂ

-----------------------------------------------------------------------------------------------------------------------

ಪ್ರಜ್ಞಾಳಿಂದ ಒಂದು ಕಥೆ. 

ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ. ಸರ್ವಾಲಂಕಾರ ಭೂಷಿತೆಯಾದ 

ಪಾರ್ವತಿ ತನ್ನ ಮಾಣಿಕ್ಯ ವೀಣೆಯನ್ನು ನುಡಿಸುತ್ತಾ  ಇರುತ್ತಾಳೆ.  

-------------------------------------------------------------------------------------------------------------------------

ಸಭಿಕರೆ....... ಕಥೆಯನ್ನೇನೋ ನೀವೆಲ್ಲಾ ಕೇಳಿದಿರಿ. ರಾಮಾಯಣದ್ದೋ, ಮಹಾಭಾರತದ್ದೋ, ಭಾಗವತದ್ದೋ ಹರಿಕಥೆಯಾಗಿದ್ದರೆ ತಾವೆಲ್ಲ ನಾನು ಹೇಳಿದ ಕಥೆಯನ್ನು ಒಪ್ಪುತ್ತಿದ್ದೀರಿ. 

------------------------------------------------------------------------------------------------------------------------

ಈಗ ಎಂ. ಎಸ್. ಅಮ್ಮನವರೇ ಹಾಡಿ ಜನಪ್ರಿಯಗೊಳಿಸಿರುವ ಅಣ್ಣಮ್ಮಚಾರ್ಯರ ಒಂದು ಕೃತಿಯನ್ನು ಕೇಳೋಣ. 


ಶ್ರೀಮನ್ನಾರಾಯಣ---------------------- 

------------------------------------------------------------------------------------------------------------------------

ಭಾರತ ರತ್ನ "ಮಧುರೈ ಷಣ್ಮುಗವಡಿವು  ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ. ತಾಯಿಯ ಹೆಸರು ಷಣ್ಮುಗವಡಿವು ಎಂದು. 

--------------------------------------------------------------------------------------------------------------------

ಸುಬ್ಬುಲಕ್ಷ್ಮಿಯವರ ಸಂಗೀತ ಪಾಠ ಹೀಗೆ ಆರಂಭವಾಗಿತ್ತು. 

ಶ್ರೀ ಗಣನಾಥ  ಸಿಂಧೂರವರ್ಣ 

***************************
******************************
*****************************

ವರವೀಣಾ ಮೃದು ಪಾಣಿ 

**********************

*************************

ಕಮಲಾಜಾ ದಳ ವಿಮಲ ಸುನಯನ 

****************************

*****************************

****************************

-------------------------------------------------------------------------------------------------------------------

 ೫ನೇ ತರಗತಿಗೆ ಶಾಲಾ ಶಿಕ್ಷಣ ಮೊಟಕಾದರೂ, ಸಂಗೀತ ಶಿಕ್ಷಣ ಮುಂದುವರೆಯುತ್ತಲೇ ಇತ್ತು. ಸುಶ್ರಾವ್ಯವಾದ ಕಂಠ, ಶಿಸ್ತುಬದ್ಧ ಲಯ ಜ್ಞಾನ ಸುಬ್ಬುಲಕ್ಷ್ಮಿಯವರಿಗೆ ರಕ್ತದಲ್ಲೇ ಬಂದಿತ್ತು. ೧೦ನೇ ವಯಸ್ಸಿಗೆ ಸುಬ್ಬುಲಕ್ಷ್ಮಿಯವರು ನೂರಾರು ಕೀರ್ತನೆಗಳನ್ನು ಸುಶ್ರಾವ್ಯಯಾಗಿ ಹಾಡಲು ಕಲಿತಿದ್ದರು

-----------------------------------------------------------------------------------------------------------------------------

ಅವರು ಆ ದಿನ ಹೇಗೆ ಹಾಡಿದರು ಎಂಬುದನ್ನು ನನ್ನ ಹನ್ನೊಂದು ವರ್ಷದ ತಂಗಿ ಪ್ರಜ್ಞಾ ನಿಮಗೆ ಹಾಡಿ  ತೋರಿಸುತ್ತಳೆ. 

ಪ್ರಜ್ಞಾಳಿಂದ ಕೀರ್ತನೆ 

----------------------------------------------------------------------------------------------------------------------------

ಷಣ್ಮುಗವಡಿವು ರವರ ಮಧುರೈ ಮನೆ ಸಂಗೀತದ  ಕೇಂದ್ರವಾಗಿತ್ತು. ಸುಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಐಯಂಗಾರ್, ಮುಸಿರಿ ಸುಬ್ರಮಣ್ಯ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮುಂತಾದವರು ಆಗಾಗ ಷಣ್ಮುಗವಡಿವು ಅವರ ಮನೆಗೆ ಭೇಟಿ ನೀಡುವುದು 

---------------------------------------------------------------------------------------------------------------------

ಬರೀ ಮದುರೈನಲ್ಲೇ ಕುಳಿತರೆ, ಅವಕಾಶಗಳು ಕಡಿಮೆ. ಮದ್ರಾಸಿಗೆ ವಲಸೆ ಹೋದರೆ ಹೆಚ್ಚು ಅವಕಾಶಗಳು ಸಿಗಬಹುದು ಎಂದು, ದೂರದ ಮದ್ರಾಸಿಗೆ ಮಗಳೊಂದಿಗೆ ವಲಸೆ ಹೊರಟವರು ತಾಯಿ ಷಣ್ಮುಗವಡಿವು.   

------------------------------------------------------------------------------------------------------------------------------

ಸರೋಜಾ ದಳನೇತ್ರೀ..... 

------------------------------------------------------------------------------------------------------------------------

----------------------- 

ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು.  ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ. 

ಉಪಕಥೆ_(ಕಿಟ್ಟು ಸೀನು ಕಥೆ)_______ 

-------------------------------------------------------------------------------------------------------------------

ಮ್ಯೂಸಿಕ್ ಅಕಾಡೆಮಿ ಯ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿನ ಅನಂತರ ಸುಬ್ಬುಲಕ್ಷ್ಮಿ ಅವರ ಸಂದರ್ಶನ ಕೋರಿ ಹಲವಾರು ಪತ್ರಕರ್ತರು  ಮುಂದೆ ಬಂದರು.  ಹೀಗೆ ಬಂದವರೇ ಅಂದಿನ ಪತ್ರಕರ್ತರಾದ ಸದಾಶಿವಂ ಅವರು. ಸಂದರ್ಶನದ ನೆಪದಲ್ಲಿ ಹಲವು ಬಾರಿ   ಸುಬ್ಬುಲಕ್ಷ್ಮಿ ಅವರನ್ನು ಭೇಟಿಯಾದ ಸದಾಶಿವಂ, ಸುಬ್ಬುಲಕ್ಷ್ಮಿ ಅವರಿಗೆ ಹತ್ತಿರದ ಗೆಳಯರಾದರು. ಸದಾಶಿವಂ ಅವರು ಅಷ್ಟುಹೊತ್ತಿಗಾಗಲೇ ಮದುವೆಯಾಗಿದ್ದವರಾದರೂ, ಸುಬ್ಬಲಕ್ಷ್ಮಿ ಅವರ ಗಾಯನ ಪ್ರತಿಭೆಗೆ ಮತ್ತು ಸೌಂದರ್ಯಕ್ಕೆ ಸದಾಶಿವಂ ಅವರು ಮಾರುಹೋಗಿದ್ದರು. 

---------------------------------------------------------------------------------------------------------------------

ಮಗಳಿಗೆ ವಯಸ್ಸು ೨೦ ತುಂಬಿದ್ದರಿಂದ ತಾಯಿ ಷಣ್ಮುಗವಡಿವು ಆತಂಕಗೊಂಡಿದ್ದರು. ಮಗಳಿಗೆ ಮದುವೆಯೊಂದನ್ನು ಮಾಡಿಬಿಟ್ಟರೆ ತಾವು ಧನ್ಯಳೆಂದು ಭಾವಿಸಿದ ಷಣ್ಮುಗವಡಿವು ಮತ್ತೆ ಮದುರೈ ಅತ್ತ ಹೊರಟೇಬಿಟ್ಟರು.  

----------------------------------------------------------------------------------------------------------------------

ಮದ್ರಾಸ್ ಗೆ ಬಂದಿಳಿದ ಸುಬ್ಬುಲಕ್ಷ್ಮಿ ಅವರು ಮೊದಲು ಬಾಗಿಲು ತಟ್ಟಿದ್ದೆ ಸದಾಶಿವಂ ಅವರ ಮನೆ. ಮುಂಚೆಯೇ ಮದುವೆಯಾಗಿದ್ದು ಎರಡು ಮಕ್ಕಳಿದ್ದ  ಸದಾಶಿವಂ ರವರು ಸ್ವಲ್ಪವೂ ಹಿಂಜರಿಯದೆ ಸುಬ್ಬುಲಕ್ಷ್ಮಿ ಅವರಿಗೆ ಆಶ್ರಯ ಕೊಟ್ಟರು. ಸುಬ್ಬಲಕ್ಷ್ಮಿ ಅವರ ಸಂಗೀತ ಸಾಧನೆಗೆ ಬೆನ್ನೆಲುಬಾಗಿ ನಿಂತರು. 

----------------------------------------------------------------------------------------------------------------------

ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು ತಯಾರಿಸುವ ಏರ್ಪಾಡು ಸದಾಶಿವಂ ಅವರದ್ದಾಗಿತ್ತು. ಸುಂದರ ಯುವತಿ ಸುಬ್ಬುಲಕ್ಷ್ಮಿ ಅವರು ಶಕುಂತಳೆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಅಂದಿನ ಕಾಲದಲ್ಲಿ ಸೌಂದರ್ಯದೊಂದಿಗೆ ಹಾಡುವ ಸಾಮರ್ಥ್ಯ ಇರವವರನ್ನು ಮಾತ್ರ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ನಾಯಕ ದುಷ್ಯಂತನ ಪಾತ್ರಕ್ಕೆ ಆಯ್ಕೆಯಾದವರು ಸುಪ್ರಸಿದ್ದ ಶಾಸ್ತ್ರೀಯ  ಗಾಯಕ G.N. ಬಾಲಸುಬ್ರಮಣ್ಯಂ ಅವರು. 


-----------------------------------------------------------------------------------------------------------------------

ತಮಿಳ್ ಹಾಡು 

-----------------------------------------------------------------------------------------------------------------------

ತಂದೆ ಕಣ್ವರು ಇಲ್ಲದ ಸಮಯ. ಆಗ ಬೇಟೆಯಾಡುತ್ತಾ ಆಶ್ರಮವನ್ನು ಪ್ರವೇಶಿಸಿದವನು ಮಹಾರಾಜ ದುಷ್ಯಂತ. ದುಷ್ಯಂತನಿಗೆ ಮೊದಲ ನೋಟದಲ್ಲೇ ಶಕುಂತಲೆಯ ಮೇಲೆ ಪ್ರೇಮ ಉಂಟಾಗುತ್ತದೆ. ಶಕುಂತಲೆಗೆ ಕೂಡ ಮೊದಲ ನೋಟದಲ್ಲೇ ದುಷ್ಯಂತನ ಮೇಲೆ ಪ್ರೇಮ್ ಉಂಟಾಗುತ್ತದೆ.  ಇಬ್ಬರೂ, ಗುಟ್ಟಾಗಿ ಗಾಂಧರ್ವ ವಿವಾಹವಾಗುತ್ತಾರೆ. 

------------------------------------------------------------------------------------------------------------------------

ಶಕುಂತಲೆ ಸಿನಿಮಾದ ಭಾರಿ ಯಶಸ್ಸನ್ನು ಕಂಡ ನಿರ್ಮಾಪಕ ಸದಾಶಿವಂ ಅವರು ಮುಂದೆ "ಮೀರಾ" ಚಿತ್ರವನ್ನು ನಿರ್ಮಾಣವನ್ನು ಮಾಡುವ ಕನಸು ಕಂಡಿರುತ್ತಾರೆ. ಈ ನಡುವೆ ಸದಾಶಿವಂ ಅವರ ಮೊದಲ ಪತ್ನಿ ಅವರು ಮರಣಹೊಂದುತ್ತಾರೆ. ಸದಾಶಿವಂ ಅವರು ಸುಬ್ಬುಲಕ್ಷ್ಮಿ ಅವರನ್ನು ಮರು ವಿವಾಹ ಮಾಡಿಕೊಳ್ಳುತ್ತಾರೆ.  ಸುಬ್ಬುಲಕ್ಷ್ಮಿ ಅವರಿಗಿಂತ ಸದಾಶಿವಂ ಅವರು ೧೫ ವರ್ಷಗಳಷ್ಟು ಹಿರಿಯರು 

---------------------------------------------------------------------------------------------------------------------

೧೬ನೇ ಶತಮಾನದಲ್ಲಿ ಜನಿಸಿದ "ಮೀರಾ" ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದ ಹೆಣ್ಣು ಮಗಳು.  ಬಾಲ್ಯದಿಂದಲೇ ಕೃಷ್ಣನ ಪರಮಭಕ್ತೆಯಾದ ಮೀರಾ, ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿರುತ್ತಾಳೆ. 

-----------------------------------------------------------------------------------------------------------------------------

ಗಿರಿಧರ ಗೋಪಾಲ ಹಾಡು 

----------------------------------------------------------------------------------------------------------------------------

ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ ವಾಸಿಸ ತೊಡಗುತ್ತಾಳೆ. ಮಾಹಾರಾಣಿಯಾದರೂ ಅರಮನೆಯನ್ನು ತೊರೆದು ಬಡ ಸಂತರು ಮತ್ತು ಬಡ ಜನಗಳೊಂದಿಗೆ ಇರುತ್ತಾ ಇದ್ದದ್ದು ಮಹಾರಾಜನಿಗೆ ಕೋಪವನ್ನು ತರಿಸುತ್ತದೆ.  ಲೆಕ್ಕಿಸದೆ ಮೀರಾ ಜನಸಾಮಾನ್ಯರೊಂದಿಗೆ ಇದ್ದು ಅರಮನೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. 

ತನ್ನ ಕೃಷ್ಣಭಕ್ತಿ ಮತ್ತು ಸಂಗೀತದಿಂದ ಹೆಸರುವಾಸಿಯಾದ ಮೀರಾಳನ್ನು ಅಕ್ಬರ್ ಭೇಟಿಯಾದ ಕಥೆಯನ್ನು ಈಗ ನನ್ನ ತಂಗಿ ಪ್ರಜ್ಞಾ ಹೇಳುತ್ತಾಳೆ. 

----------------------------------------------------------------------------------------------------------------------

ಪ್ರಜ್ಞಳಿಂದ ಅಕ್ಬರ್ ಕಥೆ 

------------------------------------------------------------------------------------------------------------------------

ತಾವೇ ಮಹಾರಾಣಿಯಾಗಿದ್ದರು ಮೀರಾ ಅವರು ಜನ ಸಾಮಾನ್ಯರ ಪರವಾಗಿದ್ದರು ಮತ್ತು ಜನಸಾಮಾನ್ಯರ ನಡುವೆಯೇ ಬಾಳಿದರು ಎಂಬುದಕ್ಕೆ ನಾವೀಗ ಹಾಡುವ ಮೀರಾ ಭಜನೆಯೇ  ಸಾಕ್ಷಿ.  


ಕರಮ್ ಕೆ ಗತಿ ನ್ಯಾರಿ ಹಾಡು 

----------------------------------------------------------------------------------------------------------------------------

ಕೃಷ್ಣಭಕ್ತಿ, ಸಂಗೀತ ಇದರಲ್ಲೇ ಮುಳುಗಿದ್ದ ಮೀರಾ ತನ್ನನ್ನು ಉದಾಸೀನ ಮಾಡುತ್ತಿದ್ದಳೆಂದು ಮೀರಾಳ ಪತಿಗೆ ಅನಿಸುತ್ತಾ ಇರುತ್ತೆ. ಇ---------------------------------------------------------------------------------------------------------------------

ಮೀರಾ ಸಿನಿಮಾ ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಜಯಭೇರಿ ಬಾರಿಸುತ್ತದೆ. 

ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗೂ ಅತಿ ಹೆಚ್ಚು ಹೋಲಿಕೆ ಇರುವುದನ್ನು ಸಭಿಕರು ಗಮನಿಸಬೇಕು.  

------------------------------------------------------------------------------------------------------------------------

ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ,  ಪ್ರಧಾನಿ ನೆಹರು, ಸರೋಜಿನಿ ನಾಯ್ಡು 

-------------------------------------------------------------------------------------------------------------------------- 

Vaishnav jan to tene kahiye jay


Vaishnav jan to tene kahiye jay

peerh paraaye janney ray
--------------------------------------------------------------------------------------------------------------------------

೧೯೬೩ರಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ವೆಂಕಟೇಶ್ವರರ ಸುಪ್ರಭಾತ ಇಂದಿಗೂ ಭಾರತ ದೇಶದ ಮನೆ ಮನಗಳ ಸುಪ್ರಭಾತವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯವೇ. 

Kousalya supraja Rama poorva sandhya pravarthathe
Uttishta Narasardula karthavyam dhaivamanhikam.
-----------------------------------------------------------------------------------

ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ದಂಪತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ.  ವೆಂಕಟೇಶ್ವರ ಸುಪ್ರಭಾತದ ಸಮಸ್ತ ಮಾರಾಟದ ಹಕ್ಕುಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ್ದಾರೆ. ಅದರಿಂದ ಬರುವ ಎಲ್ಲ ಆದಾಯ ತಿರುಪತಿ ದೇವಸ್ಥಾನದವರು ನಡೆಸುವ ವೇದ ಪಾಠಶಾಲೆಗೆ ಇಂದಿಗೂ ಸಲ್ಲುತ್ತದೆ. 



------------------------------------------------------------------------------------------------------------

ನಾಚಿಯಪ್ಪನ್ ಕಥೆ : ಗೌರಿಯಿಂದ 

-------------------------------------------------------------------------------------------------------------------------
೧೯೬೬ ಸುಬ್ಬುಲಕ್ಷ್ಮಿಯವರ ಜೀವನದ ಮೇರುಕಾಲವೆಂದೇ ಹೇಳಬಹುದು. ವಿಶ್ವ ಸಂಸ್ಥೆಯಿಂದ ಬಂದ ಕರೆಯ ಮೇರೆಗೆ  ೧೯೬೬ರ ಅಕ್ಟೋಬರ್ ೨೩ರಂದು ಸುಬ್ಬುಲಕ್ಷ್ಮಿ ಅವರು ನ್ಯೂ ಯೋರ್ಕ್ನ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಡಿದ್ದು ಈಗ ಇತಿಹಾಸ. ವಿಶ್ವದ 
-----------------------------------------------------------------------------------------------------------

ಆಡಿಸಿದಳೇಶೊದ ಹಾಡು 
---------------------------------------------------------------------------------------------------------------

ಕನ್ನಡದ ದಾಸರ ಕೃತಿಗಳನ್ನು ಜನಪ್ರಿಯಗೊಳಿಸುವಲ್ಲಿ ಸುಬ್ಬುಲಕ್ಷ್ಮಿಯವರ ಕೊಡುಗೆ ಅಪಾರ. ಸುಬ್ಬುಲಕ್ಷ್ಮಿ ಅವರ ಪ್ರಯತ್ನಕ್ಕೆ "ಆಡಿಸಿದಳೇಶೋದ" ಕೃತಿಯನ್ನು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಾಡಿದ್ದೇ ಸಾಕ್ಷಿ. 

ಅಂದಿನ ದಿನ ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ಮತ್ತೊಂದು ಹಾಡೆಂದರೆ ಅದು "ಮೈತ್ರೀಮ್ ಭಜತ” ಎಂಬ ಕಂಚಿ ಪರಮಾಚಾರ್ಯರ ಕೃತಿ. 
-------------------------------------------------------------------------------------------------------------

ಮೈತ್ರೀಮ್ ಭಜತಾಂ ಹಾಡು  

ಯುದ್ಧಮ್ ತ್ಯಜಾತಂ, ಅಂದರೆ ಯುದ್ಧಗಳು ನಿಲ್ಲಲಿ, ತ್ಯಜತ ಪರೇಷ್ವ ಅಕ್ರಮ ಅಕ್ರಮಣಂ ಅಂದರೆ ಬೇರೆ ದೇಶಗಳ ಮೇಲೆ ಅಕ್ರಮ ಆಕ್ರಮಣಗಳು ನಿಲ್ಲಲಿ ಎಂದು. ಈಗ ನೋಡಿ, ಉಕ್ರೈನ್-ರಷ್ಯಾ, ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳು ಆರಂಭವಾಗಿ ವರ್ಷಗಳೇ ಉರುಳಿವೆ.  ಆದರೂ ಯುದ್ಧ ಮಾತ್ರ ನಿಂತಿಲ್ಲ.  ಯುದ್ಧವೇನೋ ದೊಡ್ಡ ದೊಡ್ಡ ನಾಯಕರುಗಳ ಪ್ರತಿಷ್ಠೆಗಾಗಿ ಶುರುವಾಗುತ್ತವೆ. ಆದರೆ, ಅದರ ದುಷ್ಪರಿಣಾಮಗಳನ್ನು ಎದುರಿಸುವರು ಮಾತ್ರ ನಮ ನಿಮ್ಮಂಥ ಸಾಮಾನ್ಯ ಪ್ರಜೆಗಳೇ!

 "ಮೈತ್ರೀಮ್ ಭಜತ" ಕೃತಿ ಕೂಡ ವಿಶ್ವಸಂಸ್ಥೆಯ ಧ್ಯೆಯವನ್ನು ಪ್ರತಿಬಿಂಬಿಸುವುದನ್ನು ನಾವು ಮತ್ತೆ ಮತ್ತೆ ಗಮನಿಸಬೇಕಾದ ಅಂಶ. 
----------------------------------------------------------------------------------------------------------------
ಮೈತ್ರೀಮ್ ಭಜತಾಂ ಹಾಡು 
------------------------------------------------------------------------------------------------------------


ವಿಶ್ವ ಸಂಸ್ಥೆಯ ಕಾರ್ಯಕ್ರಮದನಂತರ ಪತ್ರಕರ್ತರೊಬ್ಬರು ಸಂದರ್ಶನವೊಂದರಲ್ಲಿ ಸುಬ್ಬಲಕ್ಷ್ಮಿಯವರಿಗೆ ಪ್ರಶ್ನೆಯೊಂದನ್ನು ---------------------

ದೈನಿಕ ಅಭ್ಯಾಸದ ಮಹತ್ವ 

------------------------------------------------------------------------------------------------------------

ಸುಬ್ಬುಲಕ್ಷ್ಮಿ ಅವರಿಗೆ ಪ್ರತಿಸ್ಪರ್ಧಿಗಳು ಇತ್ತಿಲ್ಲ ಎಂದೇನಲ್ಲ. ಹೆಸರಾಂತ ವಿದುಷಿಯರಾದ ಡಿ.ಕೆ.  ಪಟ್ಟಮ್ಮಾಳ್ ಅವರು ಮತ್ತು ಎಂ.ಎಲ್. ವಸಂತ ಕುಮಾರಿಯವರು ಸುಬ್ಬಲಕ್ಷ್ಮಿ ಅವರ ಸಮಕಾಲೀನರೇ. ಡಿ.ಕೆ. ಪಟ್ಟಮಾಳ್ ಅವರು ಲಯ ವಿಶೇಷಕ್ಕೆ ಹೆಸರುವಾಸಿಯಾದರೆ, ಮನೋಧರ್ಮ ಸಂಗೀತಕ್ಕೆ ಎಂ.ಎಲ್. ವಸಂತ ಕುಮಾರಿ ಅವರು ಹೆಸರುವಾಸಿಯಾಗಿದ್ದವರು.  ಎಲ್ಲರನ್ನೂ ಮೀರಿಸಿದ ಭಕ್ತಿ ಸಂಗೀತ ಸುಬ್ಬಲಕ್ಷ್ಮಿ ಅವರದ್ದು. 
-------------------------------------------------------------------------------------------------------
೬೦ರ ದಶಕದಲ್ಲಿ ಸುಬ್ಬುಲಕ್ಷ್ಮಿ ಅವರು ಪ್ರಕಟಿಸಿದ ಮತ್ತೊಂದು ಅನರ್ಘ್ಯ ರತ್ನವೆಂದರೆ, ಸ್ವಾತಿ ತಿರುನಾಳ್ ಮಹಾರಾಜರ ಕೃತಿಯಾದ "ಭಾವಯಾಮಿ ರಘುರಾಮಮ್".  ಸಂಪೂರ್ಣ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸಿದವರು ಸುಬ್ಬಲಕ್ಷ್ಮಿ ಅವರು. 
ಅದನ್ನೀಗ ಕೇಳೋಣ. 



---------------------------------------------------------------------------------------------------
ಭರತನ ಮೇಲೆ ರಾಮನ ಪ್ರೀತಿಯ ಕಥೆ ಗೌರಿಯಿಂದ 
----------------------------------------------------------------------------------------------------------------
ರಾಮಾಯಣದಲ್ಲಿ ಸಾಕ್ಷಾತ್ ರಾಮನೇ ಪೇಚಿಗೆ ಸಿಲುಕಿದ ಪ್ರಸಂಗವೊಂದರ ಕಥೆಯನ್ನು ಈಗ ಪ್ರಜ್ಞಾ ಹೇಳುತ್ತಾಳೆ. 


ಒಂದು ರಾಮಾಯಣದ ಕಥೆ ಪ್ರಜ್ಞಳಿಂದ 


------------------------------------------------------------------------------------------------------------


ಸುಬ್ಬುಲಕ್ಷ್ಮಿಯವರು ಶಂಕರಾಚಾರ್ಯರ ಹಲವು ಕೃತಿಗಳನ್ನು ಹಾಡಿದ್ದಾರೆ.  ಅವುಗಳಲ್ಲಿ "ಭಜ ಗೋವಿಂದಂ" ಕೃತಿ ತುಂಬಾ ಜನಪ್ರಿಯವಾದುದು. 

ತನಿ ಆವರ್ತನಂ 
-----------------------------------------------------------------------------------


ಭಜಗೋವಿಂದಂ ಕೃತಿಯ ಸಂದೇಶವನ್ನು ಸಾರುವ ಒಂದು ಹಾಸ್ಯಭರಿತ ಲೌಕಿಕ ಕಥೆ ಈಗ ಪ್ರಜ್ಞಳಿಂದ. 


---------------------------------------------------------------------------------------------------------------------------------------------


---------------------------------------------------------------------------------------------------

-----------------------------------------------------------------------------------------------------------------------------------------------


 ಶ್ರೀ ರಂಗ ಗದ್ಯವನ್ನು ಸುಶ್ರಾವ್ಯವಾಗಿ ಹಾಡಿ ಬೆಳಕಿಗೆ ತಂದವರು ಸುಬ್ಬಲಕ್ಷ್ಮಿ ಅವರು. ಶ್ರೀ ರಂಗ ಗದ್ಯವನ್ನು ರಚಿಸಿದವರು ಸಾಕ್ಷಾತ್ ಶ್ರೀ ರಾಮಾನುಜಾಚಾರ್ಯರೇ. ರಾಮಾನುಜಾಚಾರ್ಯರ ಶ್ರೀರಂಗ ಗದ್ಯದಿಂದ ಸ್ಫೂರ್ತಿಪಡೆದೆ,   ಮುಂದೆ ತಮಿಳ್ ಸಂತರಾದ ವೇದಾಂತ ದೇಶಿಕರ್ ಅವರು 'ರಘುವೀರ ಗದ್ಯ'ವನ್ನು ರಚಿಸಿದ್ದು.  ವೇದಾಂತ ದೇಶಿಕರ್ ಅವರು ತಮಿಳ್ ನಾಡಿನ ತಿರುವಹಿಂದ್ರಾಪುರಮ್ ನ ಕೋದಂಡರಾಮ ಪರಮ ಭಕ್ತರು. ಅವರು ರಘುವೀರ ಗದ್ಯದಲ್ಲಿ ವರ್ಣಿಸಿರುವುದು ಕೋದಂಡರಾಮನ ಶೌರ್ಯದ ವೀರಾವೇಶವನ್ನು. ರಾಮಾಯಣ ಯುದ್ಧದಲ್ಲಿ ಒಮ್ಮೆ........ 



ರಘುವೀರ ಗದ್ಯವನ್ನು ಪ್ರಥಮ ಭಾರಿಗೆ ಹಾಡಿ ಜನಪ್ರಿಯಗೊಳಿಸಿದವರೂ ಎಂ. ಎಸ್. ಅಮ್ಮನವರೇ. ಅದನ್ನೀಗ  ಕೇಳೋಣ.  


ಜಯ ಜಯ ಮಹಾವೀರ. 


--------------------------------------------------------------------------------------------------------------------------------------


ಉತ್ತರ ಪ್ರದೇಶದ ತುಳಸಿದಾಸರು ಶ್ರೀರಾಮನ ಪರಮಭಕ್ತರು. ಶ್ರೀ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ಬರೆದ ಕೀರ್ತಿ ತುಳಸೀದಾಸರಿಗೆ ಸಲ್ಲುತ್ತದೆ.  ತುಳಸೀದಾಸರ ಹನುಮಾನ್ ಚಾಲೀಸವನ್ನು ಮೊದಲ ಬಾರಿಗೆ ಹಾದಿ ಜನಪ್ರಿಯಗೊಳಿಸಿದವರು ನಮ್ಮ ಭಾರತರತ್ನ ಸುಬ್ಬುಲಕ್ಷ್ಮಿ ಅವರು. ಹನುಮಾನ್ ಚಲಿಸದ ರಚನೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಅದನ್ನೀಗ ಕೇಳೋಣ. 


ಪ್ರಜ್ಞಾಳಿಂದ ಅಕ್ಬರ್-ತುಳಸೀದಾಸರ ಕಥೆ. 

-------------------------------------------------------------------------------------------------------------------------------------

ಹನುಮಾನ್ ಚಾಲೀಸಾ ಹಾಡುಗಾರಿಕೆ 

------------------------------------------------------------------------------------------------------------------------------------------------

ಭೂಮಿ ಮತ್ತು ಸೂರ್ಯನ ನಡುವಿನ ದೂರ, ಹನುಮಾನ್ ಚಲಿಸದಲ್ಲಿ. - ಗೌರಿಯಿಂದ 

---------------------------------------------------------------------------------------------------------------------------------------------------


೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ತಮಿಳ್ ನಾಡಿನ ಚೆನ್ನೈನಲ್ಲಿ ವಾಸಿಸ ತೊಡಗಿದರು.  ೧೯೯೭ರಲ್ಲಿ ಸುಬ್ಬಲಕ್ಷ್ಮಿ ಅವರ ಪತಿಯವರಾದ ಸದಾಶಿವಂ ಅವರು ನಿಧನರಾದರು. 

೧೯೯೮ರ ಅಟಲ್ ಬಿಹಾರಿ ವಾಜಪೇಯೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ರತ್ನದಿಂದ ಸುಬ್ಬಲಕ್ಷ್ಮಿ ಅವರ ಘನತೆ ಹೆಚ್ಚುವುದಿರಲಿ, ಸುಬ್ಬುಲಕ್ಷ್ಮಿ ಅವರಿಂದ ಭಾರತ ರತ್ನ ಪ್ರಶಸ್ತಿಯ ಘನತೆ  ಹೆಚ್ಚಿತ್ತೆಂದರೆ ತಪ್ಪಾಗಲಾರದು. 




ಮಂಗಳ 


madhyamavati shloka


-೦-೦-೦-೦-೦-೦-