Friday 12 July 2024

PARVA

 1) ಭೈರಪ್ಪನವರು ವಿಶ್ವ ವಿಖ್ಯಾತ ಕಾದಂಬರಿಕಾರರು

     - ೩೦ ಕಾದಂಬರಿಗಳು , ಬೃಹತ್, ವೈಚಾರಿಕತೆ 

 ೨) ಪರ್ವ - ಮೇರು ಕೃತಿ 

      - ಧನಾತ್ಮಕ ವಿಶ್ಲೇಷಣೆ 

     - ಓದದವರು, ಅರ್ಧ ಓದಿದವರು, ಓದಿರುವರಿಗಾಗಿ 

    - ೧೯೭೯ ಬಿಡುಗಡೆ, ಕ್ರಾಂತಿ, ಚರ್ಚೆ 

    ಎಲ್ಲ ಭಾಷೆಗಳಲ್ಲಿ ಅನುವಾದ, ಸಂಸ್ಕೃತ, ಇಂಗ್ಲಿಷ್, ಚೈನೀಸ್, ರಶಿಯನ್ 

    - ಮರುಸೃಷ್ಠಿ, ಪವಾಡಗಳಿಲ್ಲ, ಐತಿಹಾಸಿಕ, ಕೃಷ್ಣ ಕೂಡ ಸಾಮಾನ್ಯ 

೩) ಎಲ್ಲ ಸಬಲ ಪಾತ್ರಗಳೇ, ಮನೋವೇದನೆ ಬಗ್ಗೆ ಬರೆದಿಲ್ಲ, ಇಲ್ಲಿದೆ 

    -ಮೌಲ್ಯಗಳ ಸಂಘರ್ಷ, ಬಹುಪತಿತ್ವ, ಸೂತಪೂತ್ರ, ಕಾನೀನ - ಇದರ ಚರ್ಚೆ 

೪) ಆರಂಭ - ಯುದ್ಧ ಸನ್ನಿಹಿತವಾದ ಕಾಲ - ಎಲ್ಲ ಪಾತ್ರಗಳಿಗೂ ನಡು ವಯಸ್ಸು 

     -ಆತ್ಮಾವಲೋಖನಕ್ಕೆ ಸರಿಯಾದ ಕಾಲ 

೫) ಯಾವ ಭೂಭಾಗ - ಮಗಧದಿಂದ ಗಾಂಧಾರ  - ಆರ್ಯವೃತ್ತ -

     ಕುರುಗಳು, ಪಾಂಚಾಲರು, ಮದ್ರರು, ತ್ರಿಗರ್ತರು - ಇವರುಗಳ ನಡುವಿನ ಕಥೆ 

---------------------------------------------------------------------------------------------------------------


೧) ಶಲ್ಯನಿಂದಲೇ ಏಕೆ - 

     - ಯುದ್ಧ ಸನ್ನಿಹಿತ, ಕುರುಗಳ ಬಗ್ಗೆ ಇತರ ರಾಜರುಗಳ ಧೋರಣೆ  

        ಅರಮನೆಯ ಆಗು ಹೋಗುಗಳು , ಜನಜೀವನ, ಸಾಮಾನ್ಯ ಸೈನಿಕರ ಅನಿಸಿಕೆ 


೨) ಶಲ್ಯ - ಮದ್ರ ರಾಜ, ಕರ್ಣನ ಸಾರಥಿ, ಮಾದ್ರಿಯ ಅಣ್ಣ 


೩) ಭೂಗೋಳಿಕ ಅಧ್ಯಯನ - ಐರಾವತಿ (ರವಿ) - ಚಂದ್ರಭಾಗ (ಚೀನಾಬ್) ನಡುವೆ ಮದ್ರ 

     ಹಸ್ತಿನಾವತಿ - ದಿಲ್ಲಿಗೆ ಈಶಾನ್ಯ (ಮೀರತ್), ಅದಕ್ಕೆ ವಾಯುವ್ಯ ಭಾಗ ಮದ್ರ (ಈಗಿನ ಪಾಕ್) 


೪) ಮಗ ರುಕ್ಮರಥನಿಗೆ ರಾಜ್ಯ ಕೊಟ್ಟಿದ್ದರು - ಆಕ್ಟಿವ್ ಆಗೇ ಇದ್ದ -

     ಪ್ರತಿಷ್ಠಿತ ಹಿರಿಯರ ತರಹ - ವಯಸ್ಸು ೬೪

 ೫) ಶಲ್ಯನ ಭೀಷ್ಮ ಭಕ್ತಿ = ೧೨೦ - ೮೪ = ೩೬  - ಹಿರಣ್ಯವತಿ ಸಂವಾದ 

      ೬೦ ವರ್ಷದ ಹಿಂದೆ ಮಾದ್ರಿಯನ್ನು ಕೇಳಿಕೊಂಡು ಭೀಷ್ಮ 

      - ಬಹುಪತಿತ್ವ, ನಿಯೋಗಳ ಬಗ್ಗೆ ಭೀಷ್ಮರ ಒಪ್ಪಿಗೆ, ಶಲ್ಯನದ್ದೂ 

೬) ರುಕ್ಮರಥ - ಹಿರಣ್ಯವತಿ - ೨೦ ವರ್ಷ - ಮದುವೆಯಿಲ್ಲ - ಸ್ವಯಂವರ ದುಬಾರಿ -

     ಕನ್ಯಾಶುಲ್ಕ ಅವಮಾನ - ಆತಂಕ, ಹಿರಿಯರ - ನಡುವಯಸ್ಕರ - ಯುವಕರ ತಿಕ್ಕಾಟ 

೭) ಪಾಂಡವರ ದೂತ ಒಬ್ಬ ಬ್ರಾಹ್ಮಣ - ಧರ್ಮ ಪಾಂಡವರ ಕಡೆಗೆ 

     ಪಂಚಾಳರ, ವಿರಾಟನ, ಕಾಶೀರಾಜನ ಬೆಂಬಲ ಪಾಂಡವರಿಗೆ 

     ರಾಜಸೂಯದ ಹಿರಿಮೆ ಪಾಂಡವರಿಗೆ 

     ನಕುಲ ಸಹದೇವರ - ಎಲ್ಲರ ಸೋದರಮಾವ ನೀವು - ನಮ್ಮ ಪಕ್ಷಕ್ಕೆ ಬನ್ನಿ 

     ಪ್ರತಿವಿಂಧ್ಯ - ಹಿರಣ್ಯವತಿಯರ ಪ್ರಸ್ತಾಪ, ಯುದ್ಧ ತಂತ್ರ 


೮) ತ್ರಿಗರ್ತ ರಾಜಕುಮಾರ - ರುಕ್ಮರಥನ ಸ್ನೇಹಿತ 

      ತ್ರಿಗರ್ತ ಕೌರವರ ಕಡೆ, 

       ಅರಣ್ಯ ಸುತ್ತಿಬಂದ ಪಾಂಡವರ ಕಡೆಗೆ ಬೆಂಬಲ ಕಮ್ಮಿ 

       ನಾಗರ ವೈರ, hidimba ಬಕಾಸುರರ ವೈರ 

       ಪ್ರತಿವಿಂದ್ಯನಿಗಿಂತ ದು ಮಗ ಲಕ್ಷಣ ಹೆಚ್ಚು ಸರಿ, ಬಹುಪತಿತ್ವದ ಭಯ 

೯) ಯುದ್ಧದ ತಯಾರಿಯಲ್ಲಿ ಮದ್ರ

     ರಥಗಳ ನಿರ್ಮಾಣ, ರಥಗಳ ರಿಪೇರಿ, 

    ಸಾಮಾನ್ಯ ಸೈನಿಕರಿಗೆ ಯುದ್ಧದ ಭಯ - ಯುದ್ಧ ಆಗುತ್ತೋ ಇಲ್ಲ್ವೋ, ನಮಗೇಕೆ ಮೈನೋವು 

    ಶಸ್ತ್ರ ತಯಾರಿಕರಿಗೆ ಯುದ್ಧವಾಗದಿದ್ದರೆ ನಷ್ಟ 


೧೦) ದು ಕಡೆಯಿಂದ ದುಶ್ಯಾಸನ ದೂತ 

        - ನಿಯೋಗಕ್ಕೆ ಹುಟ್ಟಿದವರು 

        - ದು ಬುದ್ಧಿವಂತಿಕೆ ಉದ್ದಕ್ಕೂ 

       - ಮಾದ್ರಿ ಏನು ಸುಖಪಟ್ಟಳು? 

       - ನಕುಲ ಸಹದೇವರ ಮೇಲೆ ವೈರವಿಲ್ಲ, ರಾಜ್ಯ ಅವರಿಗೆ 

      - ಶಲ್ಯ ಸೈನ್ಯದ ಆತಿಥ್ಯ ದು ದೇ 

      - ಅಪಾರ ಸೈನ್ಯವನ್ನು ನೋಡೇ ಪಾಂಡವರು ಶರಣಾಗತರಾಗುವರು 

----------------------------------------------------------------------------------------------------------------------------

   ಕುಂತಿಯ ಸ್ವಾಗತ 

   - ಶೂರಸೇನ (ಉಗ್ರನ ಅಣ್ಣ) ನ ಮಗಳು, ಕೃಷ್ಣನ ಸೋದರತ್ತೆ, 

  - ಪೃಥಾ ಎಂದು ಮೊದಲ ಹೆಸರು, ಭಾರಿ ಹೆಂಗಸು, ಹೆಸರಿನ ಹಾಗೆ 

  - ಕುಂತಿಭೋಜ ದತ್ತು, ಕುಂತಿ 

 - ಪಾಂಡವರ ತಾಯಿ , ಪಾಂಡವರ ವನವಾಸ ಸಮಯ ೧೨ _ ೧ = ೧೩ ವರ್ಷ ವಿದುರನ ಮನೆಯಲ್ಲಿ 

 - ನಿತ್ಯ ಗಂಗಾ ತಟದಲ್ಲಿ ಕಾಲ ಕಳೆಯುವಿಕೆ 

 - ಗಂಗೆ ಕುಂತಿಗೆ ಪ್ರತೀಕವಾಗಿ, ರೂಪಕವಾಗಿ ಬಳಕೆ, ಗಂಗೆಯಂತೆ ಕಷ್ಟ ಈಗ ಶಾಂತ 

 - ಏಕಾಂತದಲ್ಲಿ ಸ್ವಾಗತ , ಹಳೆಯ ನೆನಪುಗಳ ಬುತ್ತಿ, ಪರ್ವ ಸ್ವಾಗತಗಳ ಸರಣಿ 

 - ಕೃಷ್ಣ ಆಗದ ಸಂಧಾನಕ್ಕೆ ಏಕೆ ಬಂದ ? ಯುದ್ಧವಾಗಲಿ ಕುಂತಿ (ಕುಂತಿ ಮತ್ತು ದ್ರೌಪಾಡಿ ಮಾತ್ರ) 

 - ವಿದುರನ ಆಗಮನ ..... ಪಾಂಡವರಿಗೆ ಹಕ್ಕಿಲ್ಲ , ನಿಯೋಗ, ಸೂಜಿ ಮನೆಯಷ್ಟು ಕೊಡಲಾರೆ 

 - ಕೃಷ್ಣ ಕುಂತಿ, ಕರ್ಣ, ವಿದುರರನ್ನು ಭೇಟಿ ಮಾಡಿದ್ದೂ ದು ಗೆ ಹೇಗೋ ಗೊತ್ತು 

   ಬೇಧ ತಂತ್ರದಿಂದ ನಮ್ಮನ್ನು ಒಡೆಯಲು ಬಂದಿದ್ದಾನೆ 

-ಕೃಷ್ಣನ ಬಂಧನವಾಗಲಿ, ಮುಂಜಾಗರೂಕತೆ, ಅಂಗರಕ್ಷಕರ ಚಾಕಚಕ್ಯತೆಯಿಂದ ಪಾರು 

  ಪವಾಡಗಳಿಲ್ಲ, ವಿಶ್ವರೂಪವಿಲ್ಲ 



- ಕುಂತಿಗೆ ತನ್ನ ಸ್ವಯಂವರದ ನೆನಪು 

  ಭಾರಿ ಗಂಡಾದ ಪಾಂಡುವಿನ ಆಯ್ಕೆ, ಭಾರಿ ಆಸೆ, ಗಾಡಿಗಟ್ಟಲೆ ವರದಕ್ಷಿಣೆ 

  ಮೊದಲ ದಿನವೇ ನಿರಾಸೆ 

   ಕೈಲಾಗದವನು ಮೈ ಪರಚಿಕೊಳ್ಳುವಂತೆ, ತನಗೆ ಪ್ರತಿರಾತ್ರಿ ಹೊಡೆತ 

   ಕುಂತಿ ಬಂಜೆ - ಭೀಷ್ಮ, ಮಾದ್ರಿ ಎರಡನೇ ವಧು 

   ಅವಳಿಗೂ ನಿರಾಸೆ, ಬಿಲ್ಲಿನಲ್ಲೇ ಬಲವಿಲ್ಲದಿದ್ದರೆ ಹೆದೆ ಏನು ಮಾಡಿತು? 


-ಪಾಂಡುವಿನ ದಿಗ್ವಿಜಯ 

 ತಮ್ಮನಿಗೆ ಅಧಿಕಾರ, ಹಿಮಾಲಯ ತಪ್ಪಲಿಗೆ ಪತ್ನಿಯರೊಂದಿಗೆ ಪಾಂಡು, ಚಿಕಿತ್ಸೆಯ ಆಸೆ 

ಕುಂತಿ - ವಿವಾಹಪೂರ್ವದ ಕರ್ಣ - ಪಾಂಡು ಒಪ್ಪಲಿಲ್ಲ 

ಧೃ ಗೆ ಗಾಂಧಾರಿ ಕೊಟ್ಟು ಮಾಡುವೆ, ಪಾಂಡು ಆತಂಕ 

ಕುಂತಿಗೆ ನಿಯೋಗ - ದೇವಲೋಕದವರ ಆಹ್ವಾನ 

ಧರ್ಮಾಧಿಕಾರಿಯಿಂದ ಧರ್ಮ, ದುರ್ಬಲ 

ಮರುತನಿಂದ ಭೀಮ, ಕುಂತಿಗೆ ಮನಸೋತ ಮಾರುತ, ದೇವಲೋಕದ ಹೆಂಗಸರಿಗೆ ನಿನ್ನ ದಾಸಿಯರಾಗುವ ಯೋಗ್ಯತೆಯೂ ಇಲ್ಲ, ಬಾ ನನ್ನೊಂದಿಗೆ ಆಮಿಷ, ನಿರಾಕರಿಸಿದ ಕುಂತಿ 

ನಿಯೋಗಧರ್ಮ ಪಾಲನೆ, ನಾನು ಹೇಗೆ ಹಾದರಗಿತ್ತಿ? 

ಭೀಮ ಭಾರಿ ಮಗು, ಕುಂತಿಯ ಮಡಿಲೇ ಚಿಕ್ಕದು 


ಸ್ವಯಂ ಇಂದ್ರನೇ ಆಸೆಪಟ್ಟು ಬಂದು ನಿಯೋಗ, ಅರ್ಜುನ ಜನನ 

ಕುಂತಿಗೆ ಇಂದ್ರನಲ್ಲಿ ಆಕರ್ಷಣೆ, ಇಂದ್ರ ಚೆಲುವ, ಚತುರ 


ಗಾಂಧಾರಿಗೆ ಕೂಡ ಮಕ್ಕಳು,  ಆಧಾರ್ ಧರ್ಮನೇ ಹಿರಿಯ (ಎರಡು ತಿಂಗಳಿಗೆ) 


ಮಾದ್ರಿ ಬೇಡಿಕೆ, ಕುಂತಿಯ ಶಿಫಾರಿಸು, ಪಾಂಡು ಒಪ್ಪಿಗೆ 

ದೇವಲೋಕದ ಇಬ್ಬರು ವೈದ್ಯರೊಡನೆ ನಿಯೋಗ, ನಕುಲ ಸಹದೇವರ ಜನನ 


ಪಾಂಡುವಿಗೆ ಪುಂಶಕ್ತಿ ಸ್ವಲ್ಪ ಸ್ವಲ್ಪ 

ಕುಂತಿಯ ಕಣ್ಣ್ ತಪ್ಪಿಸಿ, ಮಾದ್ರಿಯನ್ನು ಕರೆದೊಯ್ಯುತ್ತಿದ್ದ ಪಾಂಡು 

ಒಂದು ದಿನ ಅಚಾತುರ್ಯ, ಪಾಂಡುವಿನ ಸಾವು, ಮಾದ್ರಿ ಸಹಗಮನ 


ನಾಳೆ ಕರ್ಣನ ಭೇಟಿ, ಹೋಗಬೇಕು 


ವಿದುರನ ಆಗಮನ ಮತ್ತೆ - ಕೃಷ್ಣನಿಗೆ ಏನು ಹೇಳಲಿ?  ಹಸ್ತಿನಾವತಿ ಬಿಟ್ಟು ಕದಲುವುದಿಲ್ಲ, 

ಪಾಂಡವರನ್ನು ಬೇಟಿಯಾಗುವುದಿಲ್ಲ, ಯುದ್ಧವಾಗಲಿ, ವಿಜಯಿಗಳಾದ ಮೇಲೆ ಭೇಟಿ - ದಿಟ್ಟ ಉತ್ತರ 

----------------------------------------------------------------------------------------------------------------------


೫) ಭೀಮ - ಪಾಂಡವರಲ್ಲಿ ಶಕ್ತಿವಂತ, ಭೈರಪ್ಪನವರ ಪಾಂಡವ ಪ್ರಮುಖ 


ಯುದ್ಧ ಸನ್ನಿಹಿತ - ಪಾಂಡವರ ಬೀದರ ವಿರಾಟನ ಉಪಪ್ಲಾವ್ಯದಲ್ಲಿ 

ಕೃಷ್ಣ - ಭೀಮರ ಸಂವಾದ, ಬೇಸಿಗೆಯ ಸುಡು ಬಿಸಿಲು - ಭಾರಿ ಕಿಟಕಿಗಳಿಗೆ ಲಾವಂಚದ ಚಾಪೆಗಳು 

ಚಾಪೆಗಳಿಗೆ ಕೊಡಗಳಲ್ಲಿ ನೀರು ಸಿಂಪಡಿಸು - ಭೈರಪ್ಪನವರ ಅಂದಿನ ಕಾಲದ ಐರ್ಕಂಡಿಷನ್ ವಿವರಣೆ 


ಕೃಷ್ಣ - ಭೀಮ ನಿನಗೆ ಹಿಡಂಬ,ಬಕಾಸುರ, ಕಿಮ್ಮೀರ (ತಮ್ಮ) ಅವರುಗಳ ಕಡೆಯವರ ವೈರ 

ಅವರೆಲ್ಲ ದು ಕಡೆಗೆ, ರಾಕ್ಷಸರ ರಾತ್ರಿ ಯುದ್ಧ ತಂತ್ರ -ಅದನ್ನು ಎದುರಿಸಲು ನಿನಗೆ ನಿನ್ನ ಮಾಘ ಘ ನ ಸಹಾಯ ಬೇಕು, ಅವನದು ರಾಕ್ಷಸ ರಕ್ತ - ಹೋಗಿ ಕರಿ - ಸಂಕೋಚಪಡಬೇಡ, ಹಿಡಿಮ್ಬ, ಘ ಮನಸ್ಸು ನನಗೆ ಗೊತ್ತು 

ಭೀಮನ ನೆನಪು - ಕೃಷ್ಣನಿಗೆ ಎಲ್ಲ ಗೊತ್ತು, ಎಲ್ಲರ ಮನಸ್ಸು ಗೊತ್ತು. 

ಖಾಂಡವ ಪ್ರಸ್ತಾವದ ಕಾಡನ್ನು ಕಡಿದು, ಇಂದ್ರಪ್ರಸ್ಥವನ್ನು ಕಟ್ಟುವಾಗ ಅವನ ಸಹಾಯ, ಮಾರ್ಗದರ್ಶನ, ಕ್ರಿಯಾಶೀಲತೆ, ಹೊಸತನ್ನು ಸಾಧಿಸುವ ತವಕ, ಉತ್ಸಾಹ ಕೃಷ್ಣನದ್ದು -

ಬೇರೆ ಪಾತ್ರಗಳ ಅನಿಸಿಕೆಗಳ ಮೂಲಕವೇ ಕೃಷ್ಣನ ಪಾತ್ರವನ್ನು ಕಟ್ಟಿಕೊಡುವ ಭೈ. 


ದ್ರೌ - ಭೀ ಸಂವಾದ, ದ್ರೌಪದಿ ಸ್ವಲ್ಪ ಕಪ್ಪಾದರು ಸುಂದರಿಯೇ , ವಯಸ್ಸು ೫೦. 

ಭೀ - ಐವರಲ್ಲಿ ನನಗೆ ನಿನ್ನಮೇಲೆ ಭರವಸೆ - ರಕ್ಷಣೆ, ಗೌರವ, ಕಾರ್ಯಸಾಧನೆಯಲ್ಲಿ ಎತ್ತಿದ ಕೈ 

ಬಿಚ್ಚು ಮನಸಿನ ಮಾತು ಭೀಮನೊಂದಿಗೆ ಮಾತ್ರ - ನನಗೆ ದು, ದುಷ್ಯ, ಧೃ ವಧೆಯಾಗಬೇಕು 

ಹಿಡಿಮ್ಬೆಯ ಕಡೆ ಹೋರಾಟ ಭೀಮನ ಬಗ್ಗೆ ದ್ರೌ ಆತಂಕ 



ಹಿಡಂಬ ನಾಡು - ಹಸ್ತಿ ದಕ್ಷಿಣಕ್ಕೆ ವಾರಣಾವತ (ಅರಗಿನ ಮನೆ) - ಅದರ ಸಮೀಪವೇ 

ರಸ್ತೆಯಲ್ಲಿ ಭೀಮನ ಸ್ವಾಗತ - ಅರಗಿನ ಮನೆ, ಹಿಡಿಎಂಬ ವನ ಪ್ರವೇಶ, hidimbeya ಪ್ರೇಮ, hidamba ನೊಂದಿಗೆ ಕಾಳಗ, ಹತ್ಯೆ, 

hidimbe ಯೊಂದಿಗೆ ಮಾಡುವೆ, ಕುಂತಿ ಸಮ್ಮತಿ 

hidimbeyondigina ಪ್ರಣಯ - ಸಮಬಲ ಜಟ್ಟಿಯೊಂದಿಗಿನ ಕುಸ್ತಿಯಂತೆ 

ದ್ರೌಪದಿಯೊಂದಿಗೆ ಹೋಲಿಕೆ - ದ್ರೌ ನಾಜೂಕು, hidimbeyadu ಬಿಚ್ಚು ಪ್ರಣಯ, ಪ್ರೇಮ 

ದ್ರೌ ಗೆ ಮಾಡಿದ್ದು - ಜಯದ್ರಥ, ಕೀಚಕ ರಿಂದ ರಕ್ಷಣೆ, ಹಿದಿಂಬಿಗೆ ಮಾಡಿದ್ದೂ ಏನೂ ಇಲ್ಲ 

ಜಯದ್ರಥ, ಕೀಚಕರು ಹಿಡಿಎಂಬೆಯನ್ನು ಕೆಣಕಿದ್ದರೆ - ತಲೆ ಬಂಡೆಗೆ ಚಚ್ಚಿ, ವೃಷಣವನ್ನೇ ಹಿಸುಕಿ 


ಘ ಜನನ, ಭಾರಿ ಮಗು 

ಕುಂತಿ ಎಚ್ಚರ, ಮೈಮರೆತ ಭೀಮ, ರಾಜ್ಯಗಳಿಸುವುದು ಮುಖ್ಯ, hidimbe ಯನ್ನು ಮಗುವನ್ನು ತೋರಸಿ 

ಏಕಚಕ್ರನಗರಿಗೆ ಪಯಣ 

ಬಕಾಸುರ ವಧೆ ನೆನಪು ಭೀಮನಿಗೆ 


hidimba ವನ ಬಂದಿತು 

ಮುಂಚೆಯೇ ಸುದ್ದಿ ತಿಳಿದ hidimbe ಯಿಂದ ಘ ನನ್ನ ಸ್ವಾಗತಕ್ಕೆ ಕಳುಹಿಸುವುದು 

ಭೀಮನನ್ನು ಹೆಗಲ ಮೇಲೆ ಹೊತ್ತು ತಂಡ ಘ 

hidimba - ಸಾಲಕಟಂಕಟಿ ಅವಳ ಇನ್ನೊಂದು ಹೆಸರು 

ಭೀ ಗೆ ರಾಕ್ಷಸ ಮುದ್ದು, ನಾಲ್ಕಾರು ಗುದ್ದುಗಳು ಬೇರೆ 

ನನ್ನ ಘ ನ ನೆನಪು ಬರಲಿಲ್ಲವೇ? ೧೨+೧ = ೧೩ ವರ್ಷಗಳಲ್ಲಿ ಏಕೆ ಬರಲಿಲ್ಲ? 

ಎಣ್ಣೆ ಸ್ನಾನ, ಉಪಚಾರ 

ಕಾಮಕಟಂಕಟಿ ಆಗಮನ, ಕಂಕುಳಲ್ಲಿ ಬರ್ಬರಕ, ಮೊಮ್ಮಗನನ್ನು ನೋಡಿ ಸಂತಸ 


hidimbe - ಘ ನನ್ನು ಸಹಾಯಕ್ಕೆ ಬರುವಂತೆ ಕೇಳಿದ್ದು, ಭೈ ಬರೆದಿಲ್ಲ , ನಮ್ಮ ಊಹೆಗೆ ಬಿಟ್ಟರೆ? 

ಭೀಮನ ವೃತ್ತಾಂತ ಮುಗಿಯಿತೆಂದಲ್ಲ, ಮುಂದೆ ಹೇಳುವೆ 

--------------------------------------------------------------------------------------------------------------------


೬) ದ್ರೌಪದಿ  

ಸಬಲ ಸ್ತ್ರೀ,

ಉಪಪ್ಲಾವ್ಯದಲ್ಲಿ ಪಾಂಡವರು 

ಉಪಪಾಂಡವರು ದ್ರೌ ಜೊತೆ 

ಹಿರಿಯ ಪ್ರತಿವಿಂಧ್ಯನಿಗೆ ೨೪, ಮದುವೆಯಿಲ್ಲ 

ಅಲ್ಲೇ ಇದ್ದ ಅಭಿಮನ್ಯುವಿಗಿನ್ನೂ ೧೬, ಮದುವೆಯಾಗಿದೆ, ದ್ರೌ ಬೇಸರ, ಬಿಲ್ಲುವಿದ್ಯದಲ್ಲೂ ಅಭಿ ಏ ಮುಂದು 

ಭೀಮನ ಮೈಕಟ್ಟು ಮಕ್ಕಳಿಗಿಲ್ಲ , ದ್ರೌ ಬೇಸರ 


೨೬ ವರ್ಷಗಳ ಹಿಂದಿನ ನೆನಪು, ಸ್ವಗತ 

ಮತ್ಸ್ಯಯಂತ್ರ ಬೇಧನ, ಅರ್ಜುನ ಗೆದಿದ್ದು, 

ದ್ರೌ ಬಗ್ಗೆ ಕುಂತಿಯ ಮೆಚ್ಚುಗೆ 

ಅರ್ಜುನ ನಾನು ಗೆದ್ದೇ, ಭೀಮ -ನಾನಿಲ್ಲದಿದ್ದರೆ ದ್ರೌ ದು ಪಾಡಾಗುತಿದ್ದಳು - ಧರ್ಮ ನಾನು ಹಿರಿಯ -ನಕುಲ ಸಹದೇವರು ಆಸಕ್ತರು - ತಕರಾರು 

ಕುಂತಿಯ ಅನುಭವ, ಯೋಜನೆ 

ಕುಂತಿಯಿಂದ ದ್ರೌಗೆ ಬ್ರೈನ್ವಾಶ್ - ಮೋಡ - ಭೂಮಿ ಉಪಮೆ 

ಐವರೊಂದಿಗೆ ದಾಂಪತ್ಯ - ನಾಲ್ಕು ದಿನಗಳ ಹಸಿವು ಒಂದೇ ದಿನ ತೀರಿಸುತ್ತಿದ್ದರು - ಮೈಬಾಕತನ 

ಭೈ ಪಡೋತ್ಪತ್ತಿ 

ದ್ರೌ ಸಿಟ್ಟು - ಕುಂತಿಗೇನು ಗೊತ್ತು? ಋತುವಿಲ್ಲ, ಹೆರಿಗೆ ಬಾಣಂತನಗಳಿಲ್ಲ, ಮೊಲೆಯುಣಿಸುವುದಿಲ್ಲ, ಪ್ರತಿನಿತ್ಯ ಕಾಮಕ್ಕೆ ತಯಾರಾಗಿ ನಿಂತಿರುವ  ಗಂಡಸಿನ ಸಮ ಹೆಂಗಸಲ್ಲ 


ಮೊದಮೊದಲು ದ್ರೌ ಗೆ ಅರ್ಜುನನ ಮೇಲೆ ಆಸೆ, ಅವನು ಚೆಲುವ, ಚತುರ 

ಕ್ರಮೇಣ ಭೀಮನ ಮೇಲೆ ಆಸೆ 

ಪ್ರೌಢಳಾಗುವ ತನಕ ಯಾರು ಸರಿ ಎಂದು ಹೆಣ್ಣು ತೀರ್ಮಾನಿಸಲಾರಳು.  ಅಂತಃಕರಣ ಅರ್ಥವಾಗುವುದು ೩೦ರ ನಂತರವೇ. ಸಮಸ್ತರಿಗೂ ಒಂದು ಸಂದೇಶ. 

ಅರ್ಜುನನ ಯಾತ್ರೆ - ಉಲೂಪಿ, chitrangade, ಸುಭದ್ರೆಯೊಂದಿಗೆ ವಿವಾಹ.  ಸುಭದ್ರೆ ಜಾಣೆ. ನನ್ನಂತರ ಮದುವೆ ಬೇಡ, ಷರತ್ತು ವಿಧಿಸಿ ಮದುವೆ.  ಮಗನನ್ನೂ ಪಡೆದಿದ್ದಾಳೆ. ನಾನು ಸೋತೆ, ಕುಂತಿ ನನ್ನ ಪರ ನಿಲ್ಲಲಿಲ್ಲ. 


ಯುದ್ಧಭೂಮಿಯಲ್ಲಿ ದು ಡಂಗುರ. ಧರ್ಮ ನನ್ನ ಕಡೆಗೆ, ನಿಯೋಗ, ಬಹುಪತಿತ್ವ  ಅನಾರ್ಯ. ನನಗೆ ಬೆಂಬಲ ನೀಡಿ. 

ಪ್ರತಿವಿಂಧ್ಯ _ ಅಮ್ಮ - ನಿಜವಾದ ಆರ್ಯಧರ್ಮ ಯಾವುದು?

ಬೇಸತ್ತ ದ್ರೌ - ಜೂಜು, ಕುಡಿತ, ಬೇಟೆ, ಹೆಂಗಸರ ಗೀಳು. ಯುದ್ಧ, ಜೂಜು ನಿರಾಕರಿಸುವಂತಿಲ್ಲ, ಹೀನ ನಿಯಮ. (ಅಂದಿನ ಆರ್ಯವೃತ್ತದ ರಾಜರುಗಳ ಜನಜೀವನದ ಚಿತ್ರಣ). 


ಶ್ರುತಸೋಮ _ ಅಮ್ಮ ನೀನು ನೊಂದೆ ಜೀವಿಸಿದೆ, ನಿನಗೆ ನಿಜವಾದ ಧೈರ್ಯ ಯಾವಾಗ ಬಂತು?

ಸಮಸ್ತ ಹೆಣ್ಣು ಕುಲದ ಪ್ರಶ್ನೆ. 

ಗಂಡಸರ ಸಭ್ಯತೆಯ ಮೇಲೆ ಭರವಸೆ ಯಾವಾಗ ಕುಸಿಯುತೋ, ಆಗ ಬಂತು. (ವಸ್ತ್ರಾಪಹರಣದ ಪ್ರಸಂಗ) 

ಧರ್ಮ ತನ್ನನ್ನೇ ತಾನು ಸೋತಿದ್ದ. ನನ್ನನ್ನು ಪಣಕ್ಕಿಡುವ ಅಧಿಕಾರವಿತ್ತೆ? 

ಎಲ್ಲರ ಮೌನ. ಭೀಷ್ಮರ ಸಬೂಬು - ತನ್ನನ್ನೇ ತಾನು ಸೋತ ವ್ಯಕ್ತಿಗೆ ಯಾವ ಹಕ್ಕು ಇಲ್ಲ.  ಆದರೂ ಹೆಂಡತಿ ಯಾವಾಗಲು ಗಂಡನ ಅಧೀನ. ಇದು ಧರ್ಮಸೂಕ್ಷ್ಮದ ಪ್ರಶ್ನೆ. 

ದುಶ್ಯಾಸನನಿಂದ ಸೀರೆ ಎಳೆತ. ನನ್ನ ಕಡೆಗೆ ಕೃಷ್ಣ. ಹಸ್ತಿಯನ್ನು ನೆಲಸಮ ಮಾಡಿ, ಮಾವಿನ ತೋಪನ್ನು ಮಾಡಿಯಾನು. 

ಕೃಷ್ಣನ ಭಯಕ್ಕೆ ಹೆದರಿದ ದು, ವಸ್ತ್ರಾಪಹರಣ ನಿಲ್ಲಿಸುವಂತೆ ದುಶ್ಯ್ ಗೆ ಆದೇಶ. 

ಕೃ ಪಾತ್ರದ ಹಿರಿಮೆಯ ರಕ್ಷಣೆ. 

ಭೀಮನ ಗುಡುಗು - ದು, ದುಷ್ಯರ ಹತ್ಯೆ. ದುಶ್ಯನ ಎಡೆಬಗೆದು ರಕ್ತ ಕೂಡಿವೆ. 

ದ್ರೌ ನಿಂದ ಕೇಶ ಶಪಥವಿಲ್ಲ. ದುಶ್ಯ್ ನ ಎದೆ ರಕ್ತದಿಂದ ತೊಳೆವ 



ದ್ರೌ ವಸ್ತ್ರಾಪಹರಣಕ್ಕೆ ತೆರೆ 

ಭೀಮನ ಗುಡುಗು 

ಧೃ, ಗಾಂಧಾರಿ ಎಚ್ಚರ - ದ್ರೌ ನೀನು ನಮ್ಮ ಮನೆಯ ಸೊಸೆ, ಏನು ವರಬೇಕು? ಕೇಳು?

ದ್ರೌ - ನನ್ನ ಮಕ್ಕಳಿಗೆ ದಾಸಪುತ್ರರೆಂಬ ಹಣೆಪಟ್ಟಿ ಬೇಡ. - ಪಾಂಡವರು ವಿಮುಕ್ತ 

ಧೃ - ದ್ರೌ ರಾಜ್ಯವನ್ನು ಕೇಳು , ಬೇಡವೆಂದ ಸ್ವಾಭಿಮಾನಿ ದ್ರೌ. 

ತಾನಾಗಿಯೇ ರಾಜ್ಯವನ್ನು ಹಿಂತಿರುಗಿಸಿದ ಧೃ 

ದು, ಕರ್ಣರ ವ್ಯಂಗ್ಯ - ಒಂದು ಹೆಣ್ಣಿನಿಂದ ಬದುಕುಳಿದರು (ಹೋರಾಟ ಪಾಂಡವರು, ದ್ರೌ ಗೆ ಕೇಳುವಂತೆ)

ಮತ್ತೆ ಜೂಜಿನ ಆಹ್ವಾನ - ತಡೆಯದಾದ ದ್ರೌ 

ಸೋಲು, ೧೨ + ೧ ಶಿಕ್ಷೆ 

ವನವಾಸದ ಆರಂಭದ ದಿನಗಳಲ್ಲಿ ದ್ರೌ ಸ್ವಗತ - ನಿಜವಾದ ಆರ್ಯಧರ್ಮವನ್ನು ತಿಳಿದವನು ಕೃಷ್ಣ ಮಾತ್ರ 

ಕೃ ಆಗಮನ - ಧರ್ಮನಿಗೆ ತರಾಟೆ (ಕೃಷ್ಣನ ಘನತೆಯನ್ನು ಎತ್ತಿಹಿಡಿದ್ದದ್ದು.) 


ಜಯದ್ರಥ - ದುಶ್ಶಲೆ ಗಂಡ, ಪ್ರಾಯದಲ್ಲಿ ದ್ರೌಗಿಂತ ಚಿಕ್ಕವ, ಒಬ್ಬಳೇ ಆಶ್ರಮದಲ್ಲಿ, ಅಪಹರಣ 

ಭೀ ಅರ್ಜುನರಿಂದ ದಂಡನೆ, ಬಂಧನ.  ಅಯ್ಯಯೋ ಇವನು ನಮ್ಮ ಭಾವಕಣರೋ, ಬಿಡುಗಡೆ ಮಾಡಿ 

ಧರ್ಮ. ದ್ರೌ ಬೈಗುಳ, ಬರಿ ಧರ್ಮಗೊಡ್ಡು 


ಕೀಚಕ ಪ್ರಸಂಗ - ಧರ್ಮ - ಅನುಸರಿಸಿಕೊಂಡು ಹೋಗು, ಅಜ್ಞಾತ ಮುಗಿಯಲಿ, ಕೆಚ್ಚಿಲ್ಲದ ಧರ್ಮ . 

ಭೀಮನಿಂದ ರಕ್ಷಣೆ 


ಸಧ್ಯಕ್ಕೆ ದ್ರೌ - ಮುಗಿದಿದೆ. 

----------------------------------------------------------------------------------------------------------------------

ಅರ್ಜುನ 

ಉಪಪ್ಲಾವ್ಯದಲ್ಲಿ ಕೃಷ್ಣ ಪಾಂಡವರೊಡನೆ 

ದು ದ್ವಾರಕೆಗೆ ಹೋದ ಸುದ್ದಿ, ಆತಂಕಗೊಂಡ ಕೃಷ್ಣ ದ್ವಾರಕೆಕಡೆಗೆ 

ಮಾರನೇದಿನ ಎಚ್ಚರಗೊಂಡ ಧರ್ಮ, ಅರ್ಜುನನನ್ನು ಹೋಗುವಂತೆ ಮಾಡಿದ್ದೂ.  (ಹೀಗೇಕೆ?)

ಕೃ ಜೊತೆಯೇ ಹೋಗಬಹುದಿತ್ತಲ್ಲ 

ದ್ವಾರಕೆಗೆ ಹೊರಟವರು ಅರ್ಜುನ, ಸುಭದ್ರೆ, ಸಾರಥಿ ತುಷ್ಟಾ  - ಸಣ್ಣ ಪಾತ್ರ ಕಥೆ ಬೆಳವಣಿಗೆಗೆ 


ಅರ್ಜುನನ ಸ್ವಾಗತ - ಜೂಜುಕೋರನಾದರೂ ಅಣ್ಣ ವಿವೇಕವಂತ. 

ಹಿಮಾಲಯಕ್ಕೆ ಹೋಗು, ಕಿರಾತರ ಯುದ್ಧ ತಂತ್ರ, ಶಾಸ್ತ್ರಗಳನ್ನು ಪಡೆದುಕೋ . 

ಕೀರಾತಾರ್ಜುನೀಯ, ಪಾಶುಪತಾಸ್ತ್ರ ಪ್ರದಾನ ಇಲ್ಲ 


ಹಿಮಾಲಯದ ಕಿರಾತರ ಭೇಟಿಯನಂತರ ದೇವಲೋಕಕ್ಕೆ ಪಯಣ . ನಿಯೋಗ ಪಿತೃಗಳ ಭೇಟಿ. 

ತಂತ್ರ, ಶಸ್ತ್ರ ಅರಸಿಕೂಡ 

ಇಂದ್ರನಂತರದ ಇಂದ್ರ - ಅರ್ಜುನಗೆ ಭವ್ಯ ಸ್ವಾಗತ, ಸನ್ಮಾನ 

ನಿವಾತಕವಚರ ಯುದ್ಧ, ಹತ್ಯೆ ಅರ್ಜುನನಿಂದ 

ಭವ್ಯ ಸಿಂಹಾಸನದ ಮೇಲೆ ಕುಳ್ಳಿರಿಸಿ "ವಿಜಯ"ನೆಂಬ ಬಿರುಧ ಪ್ರದಾನ 

ಊರ್ವಶಿಯೊಡನೆ ಸಂಘದ ಬಳುವಳಿ 

ತಂದೆಯ ಭೋಗದ ವಸ್ತುವಾದ ಊರ್ವಶಿ ಮಾತೃ ಸಮಾನಳು - ಅರ್ಜುನ ನಿರಾಕರಣೆ 

ಊರ್ವಶಿಯಿಂದ ನಂಪುಂಸಕನೆಂಬ ಬೈಗುಳ. (ಶಾಪವಿಲ್ಲ). 


ಸ್ವಾಗತ - ಕೀಚಕ ವಧೆ ಪ್ರಸಂಗ - ಏಕೆ ಬೇಕಿತ್ತು? ಅಜ್ಞಾತದಲ್ಲಿ ಗೊತ್ತಾಗಿದ್ದರೆ..... 

ಭೀಮನಿಗೆ ವಿವೇಕವಿಲ್ಲ.  ದ್ರೌ ಭೀಮನಲ್ಲಿ ಏಕೆ ಹೋದಳು? ಇಬ್ಬರೂ ಸೇರಿ ಧೃ, ಧರ್ಮರನನ್ನೇ ಟೀಕೆ ಮಾಡುತ್ತಾರೆ. "ಧರ್ಮಲಂಡ"ರು.  ಭೈ ವಿಶೇಷ ಪದ ಬಳಕೆ 


ದ್ವಾರಕೆ ಹತ್ತಿರವಾಗುತ್ತಿದೆ - ಸುಭದ್ರೆ - ಬಲರಾಮ ಅಷ್ಟಕಷ್ಟೆ - ನಿಮ್ಮಗಳ ವನವಾಸದ ೧೩ ವರ್ಷ ನಾನು ದ್ವಾರಕೆಯಲ್ಲಿದ್ದಾಗ ಬಲರಾಮ ನನ್ನ ಬಗ್ಗೆ ಯಾವ ಕಾಳಜಿ ತೋರಿಸಲಿಲ್ಲ. ಬಲರಾಮ ದು ಕಡೆಗೆ 


ಅರ್ಜುನ - ಕೃಷ್ಣರ ಭೇಟಿ, ಬಲರಾಮನ ಭೇಟಿಯ ಬಗ್ಗೆ ಭೈ ಉಲ್ಲೇಖ ಮಾಡಿಲ್ಲ.  ನ್ಯೂನ್ಯತೆ?

---------------------------------------------------------------------------------------------------------------------------

ಯಾದವ ಕುಲದ ವೃತ್ತಾಂತ 

ಯುಯುಧಾನಾ (ಸಾತ್ಯಕಿ) ಮುಖಾಂತರ - ಅವನು ಕೃ ಸ್ನೇಹಿತ, ವಾವೆಯಲ್ಲಿ ಚಿಕ್ಕಪ್ಪ ಕೂಡ, ಆದರೂ ವಯಸ್ಸು ೫೦ ಮಾತ್ರ, ಕೃಷ್ಣನಷ್ಟೇ. 


ಕಂಸನಿಂದ ಉಗ್ರಸೇನನ ಬಂಧನ, ಕಂಸನಂ ಧರ್ಬಾರು 

ಕಂಸ ಜರಾಸಂಧನ ಅಳಿಯ ಕೂಡ. ಜರಾಸಂಧ ಮಗಧ ಚಕ್ರವರ್ತಿ, ತನ್ನ ಎರಡು ಹೆಣ್ಣುಮಕ್ಕಳನ್ನು ಕಂಸನಿಗೆ ಕೊಟ್ಟು ವಿವಾಹ. 

ಕಂಸ - ಜರಾಸಂಧ ಜೋಡಿ, ಆಡಳಿತಕ್ಕೆ ಜರಾಸಂಧನ ಸಲಹೆಯ ಮೇಳ ನಿರ್ಭರ. 

ಕಂಸನ ರಾಜ್ಯದಲ್ಲಿ ಜ್ಯೋತಿಷಿಗಳ ಕಾಟ, ತಂಗಿ ದೇವಕಿಯ ಮಗನಿಂದ ನಿನ್ನ ಸಾವು (ಅಶಶರೀರವಾಣಿ ಇಲ್ಲ) 

ದೇವಕಿ - ವಾಸುದೇವರ ಬಂಧನ. ಮಕ್ಕಳುಗಳ ಹತ್ಯೆ. 

ಕೃಷ್ಣ ಹೇಗೋ ಪಾರು, ನಂದಗೋಕುಲಕ್ಕೆ, ಯಶೋದೆ ತಾಯೀ 

ರಾಧಾ ಕೃಷ್ಣರ ಪ್ರಣಯದ ಪ್ರಸ್ತಾಪವಿಲ್ಲ (ಮಾಡ ಬಹುದಿತ್ತು) 

೧೮ ವರ್ಷದ ಕೃಷ್ಣ ಮಥುರೆಗೆ 

ಕಂಸನಿಗೆ ತಿಳಿದಿತ್ತು, ಹತ್ಯೆ ಪ್ರಯತ್ನ್  

ಆನೆಯಿಂದ, ಚಾಣೂರ, ಮುಸ್ತಿಕರಿಂದ - ಕೃ ಯಿಂದ ಹತ್ಯೆ 

ಕಂಸನ ಹತ್ಯೆ, ಉಗ್ರಸೇನ ಮತ್ತೆ ರಾಜ. 


ಕಂಸ ಹತ್ತ್ಯೇ ಸುದ್ದಿ ಜರಾಸಂಧನಿಗೆ - ಮಥುರೆ ಮೇಲೆ ಎರಡು ಬಾರಿ ಆಕ್ರಮಣ, ಕೃಷ್ಣನ ಚಾಕಚಕ್ಯ್ತೆಯಿಂದ ಮಥುರೆ ಪಾರು.  ಮೂರನೇ ಬಾರಿ ಬಾರಿ ಸೈನ್ಯದೊಂದಿಗೆ ಜರಾಸಂಧ - ಕೃಷ್ಣನ ತಂತ್ರ, ಉಪದೇಶ - ಮಥುರೆಯ ಜನಗಳೊಂದಿಗೆ ದೂರದ ದ್ವಾರಕೆಗೆ ವಲಸೆ. 


ಜರಾಸಂಧನ ಹತ್ಯೆಗೆ ಭೀಮನ ಸಹಾಯ. ಮರುಉಪಕಾರಕ್ಕಾಗಿ ಖಂಡವಪ್ರಸ್ಥವನ್ನು ಇಂದ್ರಪ್ರಸ್ತವನ್ನಾಗಿಸಿ ಕೊಟ್ಟ ಕೃಷ್ಣ. 


ಜರಾಸಂಧ ಹತ್ಯೆ ಮಾಡಿರುವ ಭೀಮ.  ಹಾಗಾಗಿ ಯುಯುಧಾನನ ಪ್ರಕಾರ ಯಾದವ್ ಸೈನ್ಯದ ಬೆಂಬಲ ಪಾಂಡವರ ಕಡೆಗೆ. 


ಬಲರಾಮನ ವಿಚಾರ ಬೇರೆ. ದು ಗೆ ಅವನ ಬೆಂಬಲ . ಕೃಷ್ಣನ ಇಚ್ಛೆಗೆ ವಿರುದ್ಧ. ಬಲರಾಮ ಕೃಷ್ಣರ ಸಂಬಂಧ ಎಣ್ಣೆ-ಸೀಗೆಕಾಯಿ. ಸುಭದ್ರೆಯ ವಿಚಾರದಲ್ಲೂ ಬಲರಾಮ ಬೇರೆ. ಎಲ್ಲೆಲೋ ತಿರುಗಾಟ ಕೃಷ್ಣನದ್ದು. ಹೆಂಡತಿಯರ ಸುತ್ತ ಕೃಷ್ಣ. ಅವನ ಮಾತು ಏಕೆ ಕೇಳಬೇಕು?


ನರಕಾಸುರ ವಧೆ (ದ್ವಾರಕೆ ಹತ್ತಿರದ ರಕ್ಕಸ) ಕೃಷ್ಣನಿಂದ.  ಅವನ ೨೪ ಹೆಂಡಿರು ಮತ್ತು ಮಕ್ಕಳು ಅನಾಥೆಯಾರು.  ನಾವುಗಳು ಮದುವೆಯಾಗಬೇಕು, ಕೃಷ್ಣ.  ಒಪ್ಪದ ಯಾದವರು.  ಅವರನ್ನೆಲ್ಲ ಮದುವೆಯಾದ ಕೃಷ್ಣ. ೮ + ೨೪ = ೩೨ ಹೆಂಡಿರು.  ೧೬೦೦೦ ವಲ್ಲ. 

೩೨ ಹೆಂಡಿರನ್ನು ಹೇಗೆ ನಿಭಾಯಿಸಿದ? 

ನರಕನ ಧನ ಆಸ್ತಿಗಳಿಂದ ೨೪ ಹೆಂಡತಿಯರುಗಳಿಗೆ ಮನೆ ಮಠ ಮಾಡಿಕೊಟ್ಟ ಕೃಷ್ಣ.  ಕೃಷ್ಣನಿಲ್ಲದಾಗ ಅವುಗಳನ್ನು ಮಟ್ಟಹಾಕಿಕೊಂಡ ಬಲರಾಮ.  ೨೪ ಹೆಂಡಿರ ಜೀವನ ದುಸ್ತರ. 

ಒಬ್ಬ ಹೆಂಡತಿ (೨೪ರ ಪೈಕಿ), - ನಮ್ಮ ಹತ್ತಿರ ಬರಲು ಕೃಷ್ಣನಿಗೆ ಸಮಯವೆಲ್ಲಿ? ಮೂರುದಿನ ಮಾತ್ರವಿದ್ದ.  ಅಷ್ಟರಲ್ಲೇ ಅಂತಃಕರಣ ತೋರಿಸಿದ.  ಆಗಲೇ ಒಂದು ಮಗುವು ಆಯ್ತು. ಮತ್ತೆ ಬರಲೇ ಇಲ್ಲ, ಪರವಾಗಿಲ್ಲ. 

ಅದೇ ಹೆಂಡತಿಯ ಪೂರ್ವದ ಮಗ ಕೃತು.  ಹಡಗು ಕೆಲಸಗಾರ. 

ಸಣ್ಣಪುಟ್ಟ ಕೆಲಸ ಮಾಡಿ ೨೪ ಹೆಂಡತಿಯರ ಜೀವನ. 

೩೨ ಹೆಂಡಿರ ನಿಭಾವಣೆ ಕಷ್ಟ ಸಾಧ್ಯ. ನೈಜ ವಿವರಣೆ. 

-------------------------------------------------------------------------------------------------------------------------

ಕರ್ಣ 

ಕೊಡದೆ  ದು ಕೆಟ್ಟ 

ಕೊಟ್ಟು ದುರ್ಯೋಧನ ಕೆಟ್ಟ 

ಮುಟ್ಟಿ ಕೀಚಕ ಕೆಟ್ಟ 

ಮುಟ್ಟದೆ ರಾವಣ ಕೆಟ್ಟ 


ಮೂಲಭಾರತದಲ್ಲಿ ಕರ್ಣನದು ಮೇರು ಪಾತ್ರ 

ಕರ್ಣ, ಕರ್ಣನ್, ದಾನಶೂರ ಕರ್ಣ ಮುಂತಾದವು 

ಬಿ.ಅರ. ಪಂತಲು, ಕರ್ಣನ್ - ಉಳ್ಳತಿಲ್ ನಲ್ಲ ಉಳ್ಳಂ 

ಕರ್ಣರಸಾಯಣಮಲ್ತೆ ಭಾರತಮ್? ಪಂಪ 


-ನಾಯಿಯ ಪ್ರತೀಕ, ಉಪಮೆ 

ಸ್ವಾಮಿಭಕ್ತಿ, ನಿಯತ್ತು, ಅಲ್ಪತೃಪ್ತಿ 


ಕೃಷ್ಣ ಸಂಧಾನದ ವೇಳೆ - ಕೃಷ್ಣನಿಂದ ಕರ್ಣನ ಭೇಟಿ 

ಜನ್ಮರಹಸ್ಯವನ್ನು ಹೇಳಿ ಪಾಂಡವರ ಪಕ್ಷಕ್ಕೆ ಆಹ್ವಾನ, ಕರ್ಣನ ನಿರಾಕರಣೆ 


ಕರ್ಣನ ಸ್ವಗತ 

ಭಾರ್ಗವ ಶಿಷ್ಯ 

ಬ್ರಾಹ್ಮಣನಲ್ಲ ಎಂದು ಹೊರಗಟ್ಟಿದ್ದು 


ಬಿಲ್ಲು ಪ್ರದರ್ಶನ 

ಕರ್ಣನ ಆಗಮನ 

ಸೂತಪುತ್ರನೆಂದು ನಿರಾಕರಣೆ 

ದುರ್ಯೋಧನನಿಂದ ಮಾನ್ಯತೆ, ಅಂಗರಾಜ್ಯ ಅಭಿಷೇಕವಿಲ್ಲ 


ಮತ್ಸ್ಯಯೆಂತ್ರ ಬೇಧನದವೇಳೆ ದ್ರೌ ನಿಂದ ಅಪಮಾನ 


ಕುಂತಿ - ಕರ್ಣ ಭೇಟಿ 

ನೀನನ್ನ ಕೃಷ್ಣ ಕಳುಹಿಸಿದನೇ?, ನಾನೇ ಬಂದೆ 

ನೀನು ನನ್ನ ಮೊದಲನೇ ಮಗ 

ನನ್ನ ಹಿರಿತನವನ್ನು ದ್ರೌ ಒಪ್ಪುವಳೇ? 

ಪಾಂಡವರಿಗೆ ಹೇಳಿದ್ದೀಯಾ?

ನೀನು ಹೇಳುವುದಿಲ್ಲ, ಅವರೆಲ್ಲಿ ಯುದ್ಧ ಮಾಡುವುದಿಲ್ಲವೋ ಎಂದು ನಿನಗೆ ಭಯ. 

ಅವರ ಮೇಲೆ ಹಂಬಲ ನಿನಗೆ, ತಾಯ್ತನ ಜನ್ಮಕೊಟ್ಟದ್ದರಿಂದ ಮಾತ್ರ ಬರದು. 

ಹೇಲು ಉಚ್ಚೆ ಬಾಚಿ, ಮೊಲೆಯುಣ್ಣಿಸಿ, ಬೆರಳು ಹಿಡಿದು ನಡೆಸಿ ತಾಯ್ತನ ಬರುವುದು 


ಸಾಕಿಲ್ಲದಿರಬಹುದು, ಜನ್ಮ ನೀಡಿದ್ದು ಕಮ್ಮಿಯೇ? ಇದೋ ನಮಸ್ತೆ. 


ಕುಂತಿಯಿಂದ  ವರಗಳ ತೊಟ್ಟ ಬಣದ ಬೇಡಿಕೆ ಇಲ್ಲ. 

---------------------------------------------------------------------------------------------------------------------

೯) ಭೀಷ್ಮ 

ಯುದ್ಧ ಸನ್ನಿಹಿತವಾಗಿದೆ 

ಮಳೆಗಾಲ ಮುಗಿದಿದೆ, ಚಳಿಗಾಲ ಇನ್ನು ತಡ, ಅನುಕೂಲಕರ ಹವಾಮಾನ, ಹೆಚ್ಚಿನ ರಾಜರ 

ಸೈನಿಕರ ಬೆಂಬಲ ಸಾಧ್ಯ ಎಂದು ಸಿದ್ಧತೆ. 


ಶಲ್ಯನಿಗೆ ಯುದ್ಧದ ಚಪಲ 

೧/೪ ಸೈನ್ಯದೊಂದಿಗೆ ರುಕ್ಮರಥ ಮದ್ರದಲ್ಲಿ 

೩/೪ ಸೈನ್ಯದೊಂದಿಗೆ + ಎರಡು ಮಕ್ಕಳೊಡನೆ ಶಲ್ಯ ಯುದ್ಧಕ್ಕೆ 

ಶಲ್ಯ - ಮಕ್ಕಳು, ಸೈನಿಕರ ರಥ, ಶಸ್ತ್ರಾಸ್ತ್ರಗಳ ರಥ - ಆಹಾರ ಸಾಮಗ್ರಿ - ಹೆಣ್ಣುಗಳು ರಂಜನೆಗೆ -

ವೀರಾವೇಶದಿಂದ ಹೋರಾಡಿ ಒಳ್ಳೆ ಹೆಸರು ತರಲಿ 


ಶಲ್ಯನ ಸೈನ್ಯಕ್ಕೆ ದು ಭಾರಿ ಆತಿಥ್ಯ - ಏರ್ಪಾಡು 

ಶಲ್ಯನಿಗೆ ಸಂತೋಷ, ದು ಎಂದರೆ ಕಾರ್ಯಸಿದ್ಧಿ 


ಶಲ್ಯನ ಮೂಗಿಗೆ ತುಪ್ಪ - ೧೧ ಅಕ್ಷೋಹಿಣಿ ಸೈನ್ಯ ನೋಡೇ ಪಾಂಡವರು ಶರಣಾಗತ -

ಇಂದ್ರಪ್ರಸ್ಥ ಅಳಿಯಂದಿರಾದ ನಕುಲ-ಸಹದೇವರಿಗೆ, ವೈರ ಮೂವರ ಮೇಲೆ ಮಾತ್ರ 


ಪಾಂಡವರಿಗೆ ನೀಡಿದ ಬೆಂಬಲ ಹಿಂಪಾಡು ದು ಕಡೆ ವಾಲಿದ್ದು ಸರಿಯಾಯ್ತು. 


ಹಸ್ತಿ ತಲಪುತ್ತಲೇ ದು ವಿಂದಲೇ ಖುದ್ದು ಭವ್ಯ ಸ್ವಾಗತ 

ನಿಯೋಗ, ವಂಶಕ್ಕೆ ಸೇರಿಲ್ಲ, ಧಾರ್ಮ ನಮ್ಮ ಕಡೆ 


ನೀವೊಬ್ಬರೇ ಮಹಾರಾಜರು, ನೀವೇ ಮಹಾಸೇನಾನಿ ಎಂದು ಪುಸಲಾವಣೆ (ಜಾಣತನ)

ಇಲ್ಲ, ಭೀಷ್ಮರಾಗಲಿ - ಶಲ್ಯ 


ದು - ಶಲ್ಯನಿಗೆ 

ಪಾಂಡವರು ನಮ್ಮನ್ನು ಭ್ರಮೆಗೊಳಿಸಲು ಉಪಪ್ಲಾವ್ಯದಲ್ಲಿ (ವಿರಾಟ)

ಆಕ್ರಮಣ ಕಾಂಪಿಲ್ಯದಿಂದಲೇ (ದ್ರುಪದನೆ ಸರ್ವ ಸೂತ್ರಧಾರಿ)

ದು ಯುದ್ಧ ಜಾಣ್ಮೆ, ತಂತ್ರ - ಉದ್ದಕ್ಕೂ ಭೈ ನಿರೂಪಣೆ 


ಯುದ್ಧ 

ಭಾರಿ ಸೈನಿಕರ ಜಮಾವಣೆ ಎರದೂ ಕಡೆಯಿಂದ 

ಧಾನ್ಯದ ವಸೂಲಿ ಕರದ ರೂಪದಲ್ಲಿ 

ರೈತರಿಂದ ಗುಡಾರದಲ್ಲಿ ಹೂತಿಡುವಿಕೆ - ಬಗೆದು ತೆಗೆದ ಸೈನಿಕರು - ಸಾಗಣೆ 

ಹಳ್ಳಿ ಹೆಂಗಸರ ಮೇಲೆ ಅತ್ಯಾಚಾರ 

ರೋಸಿಹೋದ ಜನ - ಯಾಕಾದ್ರೂ ಯುದ್ಧ?


ಊರ-ತಿಂಡಿ ಕೊಳೆತು ಗಬ್ಬು 

ಹೇಲು ಉಚ್ಚೆ ಗಬ್ಬು - ನೈಜ ಚಿತ್ರಣ 


ಭೀಷ್ಮರಿಗೆ ಮಹಾಸೇನಾನಿ ಪಟ್ಟ 

೧೧ ವಿಭಾಗ ಸೈನ್ಯಕ್ಕೆ - ೧೧ ರಾಜರುಗಳ ನೇತೃತ್ವ - ಶಲ್ಯ ಕೂಡ ಒಂದಕ್ಕೆ 


ಭೀಷ್ಮ - ದ್ರೋಣ ಚರ್ಚೆ 

ಮೊದಲು ಆಕ್ರಮಣ ಬೇಡ - ತಡೆಯುವರು, ಹೊಡೆಯುವರು 

ಮೂಗು ತೂರಿಸಿದ ಕರ್ಣ - ನಾವೇ ಹೊಡೆಯುವರಾಗಬೇಕು 

ದ್ರೋಣರೇ ವಿಚಾರಮಾಡುತ್ತ ಇದ್ದಾರೆ - ನಿನ್ನದೇನಿ ತಲೆಹರಟೆ? (ಭೀಷ್ಮರ ಕುಟುಕು)


ಪಾಂಡವ-ಕೃಷ್ಣರನ್ನು ಕರೆದು ಭೀಷ್ಮರ ಒಪ್ಪಂದ 

ಯುದ್ಧ ನಿಯಮ (ಜೆನೆವ ಕನ್ವೆನ್ಷನ್ ತರ)

ಹಗಲು ಮಾತ್ರ 

ರತಿ-ರತಿ, ಆನೆ-ಆನೆ, ಅಶ್ವ-ಅಶ್ವ 

ಸೆರೆ ಸಿಕ್ಕವರು, ಶರಣು ಬಂದವರು - ಕೊಲ್ಲಬಾರದು 

ಯುದ್ಧ ಕರ್ಮಚಾರಿಗಳು - ಕುದುರೆ ಪಾಲಕರು, ಅಡಿಗೆಯವರು - ಆಕ್ರಮಣ ಬೇಡ, ಕೊಳ್ಳ ಬಾರದು 

ಎಷ್ಟರಮಟ್ಟಿಗೆ ಪಾಲನೆಯಾಯ್ತು? ಈಗ ಏನಾಗುತ್ತಿದೆ? 


ಭೀಷ್ಮರಿಂದ ಯುದ್ಧದ ಉದ್ದೇಶ ಘೋಷಣೆ 

ನಿಯೋಗ 

ವಂಶಸ್ಥರಲ್ಲ 

ಹಿಂದೆ ಖಂಡವಪ್ರಸ್ಥ ಕೊಟ್ಟಿದೆ ತಪ್ಪು - ದು ಜೂಜಿನ ಮುಖಾಂತರ ವಶ, ವಾಪಸ್ಸು ಇಲ್ಲ 

ಧರ್ಮ ನಮ್ಮ ಕಡೆ 

ಇಲ್ಲ ಎನ್ನುವವರು ಹೋಗಬಹುದು 


ಭೀಷ್ಮರ ಮನಸಿನಲ್ಲೇ ನಿಯೋಗದ ಬಗ್ಗೆ ದ್ವಂದ್ವ 

ಸಂಶಯ ಪರಿಹಾರಕ್ಕೆ ಕೃಷ್ಣದ್ವೈ ಆಶ್ರಮದ ಕಡೆಗೆ 

ದು ಆಕ್ಷೇಪ - ಯುದ್ಧ ಇನ್ನು ಎರಡು ದಿನ ಮಾತ್ರ - ಈಗೇಕೆ? 

ದು ಲೆಕ್ಕಿಸದ ಹೋರಾಟ ಭೀಷ್ಮ 


ಭೀಷ್ಮರ ಸ್ವಗತ 

ಶಂತನು - ಗಂಗೆ - ಹಿಮಾಲಯ ಬುಡಕಟ್ಟಿನ ಹೆಣ್ಣು - ಷರತ್ತಿನ ವಿವಾಹ - ಹುಟ್ಟುವ ಮಕ್ಕಳು ತವರಿನ ಕಡೆಗೆ 

೭ ಮಕ್ಕಳು ತವರಿಗೆ, ೮ನೇಯದಕ್ಕೆ ಆಕ್ಷೇಪ - ಹೊರಟುಹೋದ ಗಂಗೆ 


ಭೀಷ್ಮ ತಾಯಿ ಇಲ್ಲದ ಬೆಳದದ್ದು 

ಶಂತನು - ಸತ್ಯವತಿ - ಭೀಷ್ಮರ ಮಧ್ಯಸ್ಥಿಕೆ - ಷರತ್ತುಗಳು - ಬ್ರಹ್ಮಚರ್ಯ 


ಚಿತ್ರಾನ್ಗದ ಗಂಧರ್ವನಿಂದ ಹತ್ಯೆ, ೧೩ರ ವಿಚಿತ್ರ ವೀರ್ಯ 

ಸತ್ಯವತಿ ಕೋರಿಕೆ - ಭೀಷ್ಮನಿಂದ ಆಡಳಿತ 


ದ್ವೈ ಆಶ್ರಮ ಬಂತು 

ದ್ವೈ - ಭೀಷ್ಮ ನನ್ನ ಹಿರಿಯಣ್ಣ - ೬೦ ವರ್ಷಗಳ ಹಿಂದೆ ನೀನೆ ನನ್ನನ್ನು ಕರೆಸಿ ನಿಯೋಗ ಮಾಡಿಸದೇ - 

ಅಂಬಿಕೆ ಅಂಬಾಲಿಕೆಯರಿಗೆ - ಅಂದಿನ ಪಾಂಡು, ಧೃತರಾಷ್ಟ್ರಾದಿಗಳು ಕುರುವಂಶಕ್ಕೆ ಸೇರಿದರೆ, ಮುಂದಿನ ಪಾಂಡವರ ಬಗ್ಗೆ ಏಕೆ ಸಂಶಯ? 


ಭೀಷ್ಮಾರಿದ್ದಾಗಲೇ ದು ಸೈನಿಕರಿಂದ ದ್ವೈ ಆಶ್ರಮದ ಮೇಲೆ ಆಕ್ರಮಣ 

ಎತ್ತುಗಳು, ಗಾಡಿಗಳು, ಕರೆಯುವ ಹಸುಗಳು, ಧಾನ್ಯಗಳ ವಶ ಮತ್ತು ಸಾಗಣೆ 

ಆಶ್ರಮದ ಅಧಿಕಾರಿಗಳ ಪ್ರಶ್ನೆ - ನಾವು ಯಾವ ರಾಜರಿಂದಲೂ ಸಹಾಯ ಪಡೆದಿಲ್ಲ, ನಮಗೆ ನಾವೇ - ನಮ್ಮ ಮೇಲೆ ಲೂಟಿ ಏಕೆ?

ಭೀಷ್ಮರ ತಡೆಯನ್ನು ಲೆಕ್ಕಿಸದ ಸೈನಿಕರು - ಕಣ್ತಪ್ಪಿಸಿ ಲೂಟಿ 


೧೯೪೩ - ಎರಡನೇ ಮಹಾಯುದ್ಧ - ಚರ್ಚಿಲ್ - ಬಂಗಾಳಕ್ಕೆ ಹೋಗಬೇಕಾದ ಧಾನ್ಯಗಲು ಸೈನಿಕರಿಗೆ - 

ಬಂಗಾಳದಲ್ಲಿ ಭೀಕರ ಕ್ಷಾಮ, ಗ್ರೇಟ್ ಬಂಗಾಳ ಫ್ಯಾಮಿನ್ - ಲಕ್ಷಾಂತರ ಸಾವು 

ಯುಗ ಯುಗ ಕಳೆದರು - ರಾಜರು ರಾಜರೇ - ಯುದ್ಧವೊಂದು ಅವರಿಗೆ ಕ್ರೀಡೆ - ಜನಸಾಮಾನ್ಯರಿಗೆ ಅದು ನರಳಾಟ - (ಇಂದಿನ ಉಕ್ರೇನ್ ವಾರ್, ಇಸ್ರೇಲ್ - ಪ್ಯಾಲೆಸ್ಟೈನ್ ವಾರ್) 

--------------------------------------------------------------------------------------------------------------------------

ದ್ರೋಣ 

ಅಗ್ನಿವೇಶರ ಶಿಷ್ಯ 

ದ್ರುಪದ ಸಹಪಾಠಿ - ಸ್ನೇಹಿತರು 

ದ್ರುಪದ ರಾಜನಾದ 

ದ್ರೋಣ ಭಾರ್ಗವರ ಕಡೆಗೆ 

ಸಾಹಯ ಕೋರಿ ದ್ರುಪದನಲ್ಲಿಗೆ 

ದ್ರುಪದನಿಂದ ಅವಮಾನ 

ದ್ರೋಣರ ಕೋಪ - ಪಣ ತೊಟ್ಟದ್ದು (ಕುಮಾರವ್ಯಾಸನಲ್ಲಿ) 


ದ್ರೋಣರಿಗೆ ಭೀಷ್ಮರ ಆಶ್ರಯ 

ಶಿಷ್ಯರಲ್ಲಿ ಅರ್ಜುನ ಅಪ್ರತಿಮ 

ಗುರುದಕ್ಷಿಣೆ 

ದ್ರುಪದನ ಕೈಕಾಲುಕಟ್ಟಿ ದ್ರೋಣರ ಮಂಚದ ಕಾಲಿಗೆ ಕಟ್ಟು 

೧/೨ ರಾಜ್ಯ ದ್ರೋಣರಿಗೆ , ಬಿಡುಗಡೆ, ೧/೨ ರಾಜ್ಯ ಭೀಷ್ಮರಿಂದ ವಶ 


ದ್ರೋಣರ ಯುದ್ಧ ದು ಕಡೆಯಿಂದ 

ಏಕಲವ್ಯನ ಆಗಮನ, ಅರಣ್ಯದ ಬಳುವಳಿ, ನಮಸ್ಕಾರ 

ಹೆಬ್ಬರಳು ನೋಡಿ ಶಿಷ್ಯನ ಗುರುತು 

ಮೂಲದ ಕಥೆ ಕುಮಾರವ್ಯಾಸನಲ್ಲಿ 

ಭೈ ಮಾರ್ಪಾಡು 

ಭೀಷ್ಮರ ಮೇಲೆ ಹೊಣೆ 

ಕಳಂಕ ನಿವಾರಣೆ 

ಮುರಿದ ಬೆರಳಿಗೆ ಮುಲಾಮು, ನಾಲ್ಕೇ ಬೆರಳ ಬಿಲ್ಲು ವಿದ್ಯೆ 

ಅರ್ಜುನ ಮೇಲಿನ ತಪ್ಪು ತಿಳುವಳಿಕೆ ನಿವಾರಣೆ 

ಏಕಲವ್ಯ ಈಗ ತಟಸ್ಥ 


ದ್ರೋಣರ ಮೇಲಿನ ಹಾಗೆ ದ್ರುಪದನಿಗೆ ಆರಿಲ್ಲ 

ಹಾಗಾಗೇ ಪಾಂಡವರಿಗೆ ಕುಮ್ಮಕ್ಕು - ಯುದ್ಧ ಸಹಾಯ 

ದ್ರುಪದನ ಮಗ ದುಷ್ಟದ್ಯುಮ್ನ ಈಗ ಪಾಂಡವರ ಮಹಾಸೇನಾನಿ 

----------------------------------------------------------------------------------------------------------------------------

೧೧) ಯುದ್ಧ ಭೂಮಿಯತ್ತ ಕಥೆ 

ಭೀಷ್ಮ - ಕರ್ಣರ ತಿಕ್ಕಾಟ - ಧು ಗೆ ತಲೆ ನೋವು 

ಕರ್ಣ, ನೀನು ಅರ್ಧರಾತಿ, ಬೊಗಳೆ ಜಾಸ್ತಿ 

ಭೀಷ್ಮ, ನೀವು ಅರಮನೆ ಸೇರಿದ ಹಾವು - ದು ಗೆ ಒಳಿತಿಲ್ಲ 

ನೀವು ಮಹಾಸೇನಾನಿಯಾಗಿರುವವರಗೆ ನಾನು ಯುದ್ಧ ಮಾಡೇ. ಅಸಹಾಯಕ ದು 

ಸಂಜಯ - ಯುದ್ಧ ವರದಿಗಾರ (ದಿವ್ಯ ಚಕ್ಷುಗಳಿಲ್ಲ)

ಬೇರೆ ಬೇರೆ ಕಡೆಗಳಿಂದ ಸುದ್ದಿ ಸಂಗ್ರಹ - ಸಹಾಯಕ ಬಾತ್ಮಿದಾರರು ಬೇರೆ 

೨-೩ ದಿನಗಳಿಗೊಮ್ಮೆ ಧೃ ಗೆ ವರದಿ 


ಯುದ್ಧ ವಿವರಣೆಯಲ್ಲಿ ವೈಭವೀಕರಣ, ಭೀಷ್ಮರ ವೀರಾವೇಶದ ವರ್ಣನೆ - ಧೃ ಗೆ ಹಿತವಾಗುವಂತೆ 

ಅಧಿಕಾರದಲ್ಲಿರುವವರನ್ನು ಮೆಚ್ಚಿಸುವಂತೆ ಇರಬೇಕು ಸುದ್ದಿ - ತಂದೆಯ ಪಾಠ 


ಭಗವದ್ಗೀತೆಯ ಪ್ರಸಂಗ 

ಅರ್ಜುನನ ದ್ವಂದ - ಶಸ್ತ್ರ ತ್ಯಾಗ 

ಡೇರೆಯಲ್ಲಿ ಕೃಷ್ಣನ ಉಪದೇಶ - ಸುಮಾರು ೨ ಘಂಟೆ ಮಾತ್ರ 

ಭೀಷ್ಮನ ಘೋಷಣೆಯ ಉಲ್ಲೇಖ - ನಿಯೋಗ, ವಂಶಕ್ಕೆ ಸೇರಿಲ್ಲ - ಧರ್ಮ ನಮ್ಮ ಕಡೆ 

ನಮ್ಮ ಕಡೆಯೇ ಧರ್ಮವೆಂದು ಸಾರಲು ಅರ್ಜುನ ಯುದ್ಧ ಮಾಡು 

ನೀನೊಬ್ಬ ಕುಳಿತರೆ, ಭೀಮಾದಿಗಳು ಯುದ್ಧ ಮಾಡೇ ಮಾಡುತ್ತಾರೆ . 


ಧೃ - ಕೃಷ್ಣ ತಂತ್ರಗಾರ ಸೂಳೆಮಗ 


ಧೃ - ದಾಸಿ ಶೌಚಾಲಯ  ಪ್ರಸಂಗ 

ಇಳಿ ವಯಸ್ಸಿನ ಚಪಲ - ದಾಸಿಯರ ಜಾಣ್ಮೆ 


ಭೀಷ್ಮರ ಯುದ್ಧ ಭೀಕರ - ಪಾಂಡವರಿಗೆ ಭಾರಿ ನಷ್ಟ 

ಕೃಷ್ಣನ ತಂತ್ರ - ಶಿಖಂಡಿಯನ್ನು ಮುಂದೆ ಮಾಡಿದ್ದು 

ಯುದ್ಧ ಭೂಮಿ ತೊರೆದ ಭೀಷ್ಮ, ಬಣಗಳ ಹಾಸಿಗೆ ಮೇಲೆ , ನಿರಾಹಾರ - ಸಾವು ಹತ್ತಿರ 


ಧು - ಭೀಷ್ಮ ಭೇಟಿ 

೧೦ ದಿನದ ಯುದ್ಧದಲ್ಲಿ ತಾವು ಮಾಡಿದ್ದೇನು? 

ಶುರುವಿನಲ್ಲಿ ೧೧-೭, ಈಗ ೫-೫

ಭೀಷ್ಮ - ನನ್ನನ್ನು ನೀನು ಸುಮ್ಮನೆ ಮಹಾಸೇನಾನಿ ಮಾಡಲಿಲ್ಲ 

ಅಪಾರ ಸೈನ್ಯ ಬೆಂಬಲ ನನ್ನಿಂದ ಪಡೆದೆ. 

ನಿನ್ನ ಕಡೆಯವರು ಮಗ್ನರಾಗಿ ಹೊರಡುತ್ತಿಲ್ಲ, ಪಾಂಡವರ ಕಡೆ ಹಾಗಿಲ್ಲ 

ಕರ್ಣ ಯುದ್ಧ ತೊರೆದದ್ದು ಏಕೆ? 


ಭೀಷ್ಮ - ಈಗಲೂ ಸಂಧಾನ ಮಾಡಿಸುವೆ 

ದು - ಸಂಧಾನವಾದರೂ ಭೀಷ್ಮನ ರೋಷ ಆರದು. ಸಂಧಿ ಬೇಡ 


ದ್ರೋಣರಿಗೆ ಮಹಾಸೇನಾನಿ ಪಟ್ಟ 

ಧರ್ಮನನ್ನು ಸೆರೆ ಹಿಡಿದುಕೊಡಿ, ಅದಕ್ಕಾಗಿಯೇ ಚಕ್ರವ್ಯೂಹ 

ಅರ್ಜುನನಿಲ್ಲ, ತ್ರಿಗರ್ತದ ಸುಶರ್ಮನ ಜೊತೆ ಯುದ್ಧಕ್ಕೆ ದೂರಕ್ಕೆ 

ಅಭಿಮನ್ಯು ಹೋರಾಟ, ಹಿಂದೆ ಭೀಮಾದಿಗಳು 

ಸಂಚು ಮಾಡಿ ಅಭಿಮನ್ಯುವನ್ನು ಮಾತ್ರ ಒಳಸೇರಿಸಿಕೊಂಡ ಜಯದ್ರಥ 

ಏಕಾಂಗಿ ಹೋರಾಟ, ಯುವ ಕಣ್ಮಣಿ 

ಕರ್ಣನಿಂದ ಮೋಸದ ಹತ್ಯೆ 


ಅಭಿಮನ್ಯು ಸಾವು, ಕುಪಿತ ಅರ್ಜುನ - ನಾಳೆ ಸಾಯಿಂಕಾಲದೊಳಗೆ ಜಯದ್ರಥನ ವಧೆ 

ಇಲ್ಲವಾದರೆ ಅಗ್ನಿಪ್ರವೇಶ 

ಕೃಷ್ಣನ ತಂತ್ರದಿಂದ ಪಾರು - ಪವಾಡವಿಲ್ಲ 


ಧೃಷ್ಟಧುಮ್ನನಿಂದ ದ್ರೋಣರ ಹತ್ಯೆ (ಅಶ್ವಥಮ ಹತಃ ಕುಂಜರ ಇಲ್ಲ) 


ಕರ್ಣ ಮಹಾಸೇನಾನಿ - ಘಟೋದ್ಗಜನ ಹತ್ಯೆ 

ವಲ್ಲದ ಮನಸಿನ ಶಲ್ಯ, ಕರ್ಣನ ಸಾರಥಿ  (ಡುಂಡಿ ಕವಿತೆ)

ಸಾರಥಿಧರ್ಮ ಪಾಲಿಸದ ಶಲ್ಯ, ಕರ್ಣನಿಗೆ ಮೂದಲಿಕೆ, ನೀನ್ಯಾವ ಬಿಲ್ಲುಗಾರ? 

ರಥ ತ್ಯಾಗ 

ರಥ ಹೂತು - ಅಜೂನನಿಂದ ಹತ್ಯೆ 


ಕರ್ಣನ ಶವ ಹುಡುಕಿಕೊಂಡು ಹೋರಾಟ ಕುಂತಿ, ವಿದುರನ ಜೊತೆ, ಅವರ ಸಾರಥಿ ಸಂಜಯ 

ಕುಂತಿ - ಕರ್ಣ ಸತ್ತಮೇಲೆ ಯುದ್ದದಲ್ಲಿ ಆಸಕ್ತಿಯಿಲ್ಲ. ಯಾರನ್ನು ಯಾರು ಕೊಂದಾರೊ ಎಂಬ ಆತಂಕ ಈಗಿಲ್ಲ 

ನನ್ನ ಮಕ್ಕಳು ಗೆಲ್ಲಬಹುದು, ನಾನು ಸೋತೆ 

ಕುಂತಿ - ನಾನು ನೀಡಿದ ತೊಟ್ಟು ರಕ್ತಕ್ಕೆ ಬಿಂದಿಗೆಗಟ್ಟಲೆ ರಕ್ತ ಸುರಿಸಿ ಸತ್ತ ಕರ್ಣ 

ಘಟೋದ್ಗಜನು ಅಷ್ಟೇ. (ಘಟೋದ್ಗಜಗೆ ನಾನು ವಂಚಿಸಿದೆ )


ಸಂಜಯನ ಅತಿ ಉತ್ಸಾಹ 

ಬ್ರೇಕಿಂಗ್ ನ್ಯೂಸ್ ನೀಡಲು ಧಾವಂತ 

ಪಾಂಡವರ ಪಾಳಯಕ್ಕೆ ಸಂಜಯ - ಕಾವಲುಗಾರರಿಂದ ತಡೆ - ಅವರಿಗೆ ವಿಷಯ ತಿಳಿಸಿದ ಸಂಜಯ 

ಮಹಾರಾಣಿ ಕುಂತಿಯ ಬಗ್ಗೆ ಇಲ್ಲದ್ದು ಹೇಳ್ತೀಯ - ಥಳಿತ 


ಶಲ್ಯ ಮಹಾಸೇನಾನಿ, ಧರ್ಮನಿಂದ ಸಾವು 


ದುಶ್ಯಾಸನ ಸಾವು - ಎದೆ ರಕ್ತ ಕುಡಿದ ಭೀಮ 


ಯುದ್ಧ ಭೂಮಿಯಲ್ಲೇ ಅವಿತುಕೊಂಡ ಧು 

ಪಾಂಡವರಿಂದ ಮೂದಲಿಕೆ, ಎಡ್ಡಾ ದು, 

ನಾನು ಒಬ್ಬ 

ನಮ್ಮಲ್ಲಿ ಯಾರೊಬ್ಬರನ್ನು ಆರಿಸಿಕೋ - ಧರ್ಮ 

ಅವಿವೇಕದ ಹೇಳಿಕೆಗೆ ಕೃಷ್ಣನ ಕೋಪ 


ಛಲವಾದಿ ದು ವಿನಿಂದ ಭೀಮನ ಆಯ್ಕೆ 

ಗದಾಯುದ್ಧವಿಲ್ಲ, ಗಾದೆ ಬಿಸಾಟು ಹೋರಾಟ ಭೀಮ? (anticlimax)?

ದು ಹೇಗೆ ಸತ್ತ? ಖಚಿತತೆ ಇಲ್ಲ 


ಅಶ್ವತ್ತಾಮ  - ದು ಸ್ನೇಹಿತ 

ಪಾಂಡವರ ಹತ್ಯೆಗೆ ರಾತ್ರಿ ಸಂಚು 

ತಪ್ಪುಗ್ರಹಿಸಿ ಉಪಪಾಂಡವರ ಹತ್ಯೆ, ಧೃಷ್ಟಧುಮ್ನ ನ ಹತ್ಯೆ ಕೂಡ 


ದ್ರೌಪದಿ ದುಃಖ 

೫ ಮಕ್ಕಳ ಹೆಣೆಗಳನ್ನು ತಬ್ಬಿ ರೋಧನ 

ಕೃಷ್ಣ, ನಾನು ಹತಭಾಗ್ಯೆ 

ಅರ್ಜುನ ಸುಭದ್ರೆಯನ್ನು ತಬ್ಬಿ ಅತ್ತ 

ಭೀಮ ಘ ನ ಶವವನ್ನು ಹೊತ್ತುತಂದ 

ಈಗ ಸಮಾನಾಂತರ ದೂರ , ಪ್ರೇಕ್ಷಕರಂತೆ 

ಐವರೂ ಶೂರರು ನಿಷ್ಕ್ರಿಯೆ - ಅಂದು ಮಾನಹಾನಿ, ಎಂದು ಪ್ರಾಣಹಾನಿ 


ಉಪಪಾಂಡವರು ಹುಟ್ಟಿದು - ಒಟ್ಟು ದಾಂಪತ್ಯದಲ್ಲಿ 

ತಂದೆ ಯಾರೆಂಬ ಖಚಿತತೆ ಇಲ್ಲ, ಎಲ್ಲರನ್ನು ತಂದೆ ಎನ್ನುತ್ತಿದ್ದ ಉಪಪಾಂಡವರು 

mother is truth, ಫಾದರ್ ಐಸ್ ಫಿಕ್ಷನ್ 


ದ್ರೌ ತಬ್ಬಲು ಮುಂದಾದ ಪಾಂಡವರು, ದೂರ ತಳ್ಳಿದ ದ್ರೌ 

ನನ್ನ ಮಕ್ಕಳಿಗೆ ನಾನೇ ಅಂತ್ಯಕ್ರಿಯೆ ಮಾಡುತ್ತೇನೆ. 

ಅಶ್ವಥಮನನ್ನು ಬಂಧಮುಕ್ತ ಮಾಡಿ, ಎಲ್ಲಾದರೂ ಬದುಕಿಕೊಳಲಿ 


ಪಾಂಡವರ ವಿಜಯ ಖಚಿತ 

ಕೃಷ್ಣ ಪಾಂಡವರೊಂದಿಗೆ ಧೃ ಕಡೆಗೆ 

ಭೀಮ ನಮಸ್ಕಾರ ಮಾಡುವಾಗ ಚೂರಿಯಿಂದ ಚುಚ್ಚಲೆತ್ನಿಸಿದ ಧೃ 

ಕೃಷ್ಣನ ಮುಂಜಾಗರೂಕತೆ - ಪಾರು (ಉಕ್ಕಿನ ಭೀಮನ ಪ್ರಸಂಗವಿಲ್ಲ) 

ಧೃ ಕೋಪ 

ರಕ್ಷಣೆ ಮಾಡಿದ್ದು ನಿನ್ನನ್ನು, ನಿನ್ನ ಚೂರಿ ಭೀಮನಿಗೆ ಏನು ಮಾಡುತಿತಿಲ್ಲ, ಅವನು ನಿಮ್ಮನ್ನು ತುಳಿದು ಸಾಯಿಸ್ತಿದ್ದ 


ಕೃಷ್ಣ - ಗಾಂಧಾರಿ - ಕಣ್ಣಿಗೆ ಪಟ್ಟಿ ಏಕೆ?

ಗಾಂಧಾರಿ - ಭೀಷ್ಮ ಗಾಂಧಾರಕ್ಕೆ ಬಂದಿದ್ರು, ಕುರುಡ ಧೃ ವನ್ನು ಮದುವೆಯಾಗಲು ಇಸ್ಟವಿತಿಲ್ಲ 

ಬೇಡವೆಂದರೂ ಕೇಳದ ತಂದೆ, ನೋಡುವುದಿಲ್ಲವೆಂದು ಕಣ್ಣಿಗೆ ಪಟ್ಟಿ ಕಟ್ಟಿಕೊಂಡೆ - ಹಾಗೆ ಮದುವೆಯಾಯಿತು, ಹಸ್ತಿನಾವತಿಗೆ ಬಂದೆ, ಭೀಷ್ಮನಿಂದ ಗುಣಗಾನ, ಪತಿಗೆ ಇಲ್ಲದ ಧೃಷ್ಟಿ ನನಗೆ ಬೇಡ 

ಎಲ್ಲರಿಂದಲೂ ಪ್ರಶಂಸೆ, ವೈಭವೀಕರಣ, ದೇವಿ ದೇವಿ ಎಂದು ಸಂಬೋಧನೆ, ಮೊದಮೊದಲು ಕಸಿವಿಸಿ,

ಆಮೇಲೆ ವ್ಯಾಮೋಹ, ಹೆಮ್ಮೆ 


ಯಾರು ಬಿಚ್ಚು ಎಂದು ಕೇಳಲಿಲ್ಲ 

ಪಟ್ಟಿಯಲ್ಲೇ ನನ್ನ ಪಾವಿತ್ರ್ಯ, ಕುರುಗಳ ಹೆಮ್ಮೆ 


ಪಟ್ಟಿ ಬಿಚ್ಚಿದ ಕೃಷ್ಣ 

ಮಕ್ಕಳ ಶವಗಳನ್ನು ಹುಡುಕಿ ಹೋರಾಟ ಗಾಂಧಾರಿ, ಯಾರ ಶವವು ಸಿಕ್ಕಲಿಲ್ಲ 

(ಶಕುನಿಯು ಸ್ವರ್ಗಕ್ಕೆ ಹೋಗುತ್ತಾನೆಯೇ?)

ಲೋಹದ ಚೂರುಗಳನ್ನು ಆಯುತ್ತಿದ್ದ ಜನತೆ 

ಆಭರಣಗಳನ್ನು ಕೀಳುತ್ತಿದ್ದ ಜನತೆ 

ಗಾಂಧಾರಿ - ನಮ್ಮ ಮನೆಗಳಲ್ಲಿ ಸಾವು, ಅವರುಗಳು ಲೂಟಿಯಲ್ಲಿ 

ಕೃಷ್ಣ - ಅವರ ಮನೆಗಳಲ್ಲೂ ಸಾವಾಗಿದೆ 


ಮುಂದೆ ನಿರೂಪಣೆಯಲ್ಲಿ ಗೊಂದಲ 

ಹಿಡಂಭವನಕ್ಕೆ ಕೃಷಿಭೂಮಿ ಮಾಡಲೆಂದು  ಬೆಂಕಿ, ಹಿಡಿಮ್ಬ್, ಬಾರ್ಬರಿಕ ಸಾವು (ಬಾರ್ಬರಿಕನ ಬೇರೆ ಕಥೆ) 

ಯಾದವೀ ಕಲಹ, ದ್ವಾರಕೆ ಸಮುದ್ರದಲ್ಲಿ ಮುಳುಗೇ 

ಯುದ್ಧಭೂಮಿಯಲ್ಲಿ ಅಭಿಮನ್ಯು ಹೆಂಡತಿ ಉತ್ತರೆಗೆ ಹೆರಿಗೆ ನೋವು - ಸತ್ತುಹುಟ್ಟಿದ ಮಗು 


ಯುದ್ಧದ ಬಸುರಿಯರು - ನಮ್ಮ ಮಕ್ಕಳಿಗೆ ತಂದೆ ಯಾರು? ಗಂಡಂದಿರು ನಮ್ಮನ್ನು ಸೇರಿಸರು 

ನಮ್ಮ ವಂಶಕ್ಕೆ ಕುಡಿಯಿಲ್ಲ - ಕುಂತಿ 

ಇಂತಹ ವಿಪರ್ಯಾಸ?


ಜನಮಾನಸಕ್ಕೆ ಹತ್ತಿರವಾದ ಮಹಾಭಾರತ 

ಭೈ ರವರ ಕಲ್ಪನೆ, ಸಂಶೋಧನೆ, ನೈಜತೆಯ ಕೋನ ಇವುಗಳಿಂದ ಹೊಸಬೆಳಕು, ಅಂತರಾಷ್ಟ್ರಿಯ ಖ್ಯಾತಿ 

-೦-೦-೦-೦-








    

Monday 1 July 2024

BHARAT RATNA M.S. SUBBULAKSHMI



ಎಲ್ಲರಿಗೂ ನಮಸ್ಕಾರ. 

 "ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ  ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ. 

ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದ ಅತಿ ಮುಖ್ಯವಾದದ್ದು.

ಕಾರ್ಯಕ್ರಮವನ್ನು ಸುಬ್ಬುಲಕ್ಷ್ಮಿ ಅವರೇ ಹಾಡಿರುವ ಅಣ್ಣಮಾಚಾರ್ಯರ ಜನಪ್ರಿಯ ಕೃತಿಯೊಂದನ್ನು ಹಾಡುವುದರ ಮೂಲಕ ಮಾಡೋಣ. 

ಶ್ರೀಮನ್ನಾರಾಯಣ........ 

********

ಮಾಣಿಕ್ಯ ವೀಣಾ ಮುಫಲಾಲಯಂತೀಂ

ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾಂ ಉಪಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ

ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ

ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ. ಸರ್ವಾಲಂಕಾರ ಭೂಷಿತೆಯಾದ 

ಪಾರ್ವತಿ ತನ್ನ ಮಾಣಿಕ್ಯ ವೀಣೆಯನ್ನು ನುಡಿಸುತ್ತಾ  ಇರುತ್ತಾಳೆ.  ತನ್ನ ಮಾಣಿಕ್ಯ ವೀಣೆಯ ನಾದ-

ಮಾಧುರ್ಯಕ್ಕೆ ತಾನೇ ಪರವಶಳಾದ ಪಾರ್ವತಿ ಶಿವನಿಗೆ ಹೇಳುತ್ತಳೆ.......  "ಪ್ರಭು, ನನ್ನ ಮಾಣಿಕ್ಯ ವೀಣೆಯ ನಾದಮಾಧುರ್ಯಕ್ಕೆ ನಾನು ಮಾರು ಹೋಗಿದ್ದೇನೆ. ಈ ಮಾಣಿಕ್ಯ ವೀಣೆಯ ನಾದ ಮಾಧುರ್ಯ ನನ್ನ ತವರಾದ ಭೂಲೋಕದ ಜನರಿಗೂ ದೊರಕುವಂತಾಗಲಿ. ನನ್ನ ಮಾಣಿಕ್ಯ ವೀಣೆಯನ್ನು ಹೆಣ್ಣೊಂದರ ರೂಪದಲ್ಲಿ ಭೂಲೋಕಕ್ಕೆ ಏಕೆ ಕಳುಹಿಸಬಾರದು?"

ಶಿವನು ಉತ್ತರಿಸುತ್ತಾ "ಎಲ್ಲವನ್ನು ನೀನೆ ನಿರ್ಧಾರ ಮಾಡಿರುತ್ತೀಯ. ನನ್ನ ಅನುಮತಿಯನ್ನು ನೆಪ ಮಾತ್ರಕ್ಕೆ ಕೇಳುತ್ತೀಯಾ. ನಿನ್ನಿಷ್ಟದಂತೆ ನಿನ್ನ ಮಾಣಿಕ್ಯ ವೀಣೆಯ ಅವತಾರ ಹೆಣ್ಣೊಂದರ ರೂಪದಲ್ಲಿ ಭೂಲೋಕದಲ್ಲಾಗಲಿ" ಎಂದು ಅಭಯವಿತ್ತನಂತೆ. 

ಪಾರ್ವತಿ ದೇವಿ ಮುಂದುವರೆದು " ಸ್ವಾಮಿ, ನನ್ನ ಈ ಮಾಣಿಕ್ಯ ವೀಣೆ ನಿರ್ಜೀವ ವಸ್ತು.  ಇದಕ್ಕೆ ಏನೇನೂ ತಿಳಿಯದು. ಭೂಲೋಕದಲ್ಲಿ ನನ್ನ ಮಾಣಿಕ್ಯ ವೀಣೆಯ ರಕ್ಷಣೆಗಾಗಿ ತಾವೇ ಹೋಗಬೇಕು" ಎನ್ನುತ್ತಾಳೆ.  "ತಥಾಸ್ತು" ಎಂದು ಪರಮೇಶ್ವರ ಅನುಮೋದಿಸುತ್ತಾನೆ. 

ಕೆಲವು ದಿನಗಳನಂತರ ಪಾರ್ವತಿ ದೇವಿ ನಾರದರನ್ನು ಕರೆದು "ನಾರದರೆ, ನನ್ನ ಮಾಣಿಕ್ಯ ವೀಣೆ, ಲೋಕಕಲ್ಯಾಣಕ್ಕೆಂದು ಭೂಲೋಕದಲ್ಲಿ  ಹೆಣ್ಣಾಗಿ ಜನಿಸಿದೆ. ಆ ಹೆಣ್ಣು ಎಲ್ಲಿದೆ, ಹೇಗಿದೆ ಎಂದು ಪತ್ತೆ ಮಾಡಿ. ಬಂದು ನನಗೆ ವಿಷಯ ತಿಳಿಸಿ" ಎಂದು ಆಜ್ಞಾಪಿಸುತ್ತಳೆ. 

ಭೂಲೋಕಕ್ಕೆ ಪ್ರಯಾಣ ಮಾಡಿದ ನಾರದರು ಮೊದಲು ಬಂದಿದ್ದು ಹಿಮಾಲಯ ಪರ್ವತದ ಶಿಖರಕ್ಕೆ. ಕೊರೆಯುವ ಚಳಿ, ತುಪಾಕಿ ಗುಂಡುಗಳ ನಡುವೆ ಮಾಣಿಕ್ಯ ವೀಣೆ ಇರಲಾರಳೆಂದು,  ನಾರದರು ದಕ್ಷಿಣಕ್ಕೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಮಲ್ಲಿಗೆಯ ಸುವಾಸನೆ ಅವರ ಗಮನ ಸೆಳೆಯುತ್ತದೆ. ನೇರವಾಗಿ ಅವರು ಬಂದಿಳಿದದ್ದು ಮೀನಾಕ್ಷಿ ಸುಂದರೇಶ್ವರರ ವಾಸಸ್ಥಾನವಾದ ಮಧುರೈಗೆ. ಪಕ್ಕದಲ್ಲೇ ಇದ್ದ ಹನುಮಂತರಾಯರ ಬೀದಿಯ ಒಂದು ಪುಟ್ಟ ಮನೆಯಿಂದ  ಹೆಣ್ಣು ಕೂಸೊಂದರ  ಶ್ರುತಿಬದ್ದವಾದ ಅಳು ಕೇಳಿಬರುತ್ತೆ. ಮಾರು ವೇಷದಲ್ಲಿ ಆ ಮನೆಯನ್ನು ಪ್ರವೇಶಿಸಿದ ನಾರದರು ಮಗುವಿನ ತಾಯಿಯನ್ನು, ಮಗುವಿನ ಹೆಸರು ಏನೆಂದು ಕೇಳುತ್ತಾರೆ.  "ಸುಬ್ಬುಲಕ್ಷ್ಮಿ" ಎಂದು ತಾಯಿ ಉತ್ತರಿಸುತ್ತಾಳೆ. "ಸುಬ್ಬುಲಕ್ಷ್ಮಿ"ಯೇ ಪಾರ್ವತಿದೇವಿಯ ಮಾಣಿಕ್ಯ ವೀಣೆಯ ಅವತಾರವೆಂದು ತಿಳಿದ ನಾರದರು ಹಿರಿಹಿಗ್ಗಿ ಹೋಗುತ್ತಾರೆ.  ಪಕ್ಕದಲ್ಲೇ ಇರುವ ಮದ್ರಾಸಿನಲ್ಲಿ ಪರಮೇಶ್ವರರ ಅಂಶಧಾರಿಯಾದ "ಸದಾಶಿವಂ" ಎಂಬ ಬಾಲಕನ ಜನನವೂ  ಆಗಿರುವುದು ನಾರದರ ಗಮನಕ್ಕೆ ಬರುತ್ತದೆ. 


ಸಭಿಕರೆ....... ಕಥೆಯನ್ನೇನೋ ನೀವೆಲ್ಲಾ ಕೇಳಿದಿರಿ. ರಾಮಾಯಣದ್ದೋ, ಮಹಾಭಾರತದ್ದೋ, ಭಾಗವತದ್ದೋ ಹರಿಕಥೆಯಾಗಿದ್ದರೆ ತಾವೆಲ್ಲ ನಾನು ಹೇಳಿದ ಕಥೆಯನ್ನು ಒಪ್ಪುತ್ತಿದ್ದೀರಿ. ಇಂದಿನ ಕಥೆ ನಮ್ಮೊಡನೆ ಬದುಕಿ ಬಾಳಿದ ಸುಬ್ಬುಲಕ್ಷ್ಮಿಯವರದ್ದು. ಸಭೆಯಲ್ಲಿರುವ ಹಲವು ಹಿರಿಯರು ಸುಬ್ಬಲಕ್ಷ್ಮಿಯವರನ್ನು ಪ್ರತ್ಯಕ್ಷವಾಗಿ ನೋಡಿದ್ದೀರಿ, ಅವರ ಸಂಗೀತವನ್ನು ಕೇಳಿದ್ದೀರಿ. ನಾನು ಹೇಳಿದೆ ಕಥೆ ನಿಜವಿರಬಹುದೇ ಎಂಬ ಪ್ರಶ್ನೆ ತಮನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ. 

ಸುಬ್ಬಲಕ್ಷ್ಮಿಯವರನ್ನು ಕುರಿತು ಮೊದಲ ಬಾರಿಗೆ ಹರಿಕಥೆ ಮಾಡಿದವರೆಂದರೆ "ಹರಿಕಥಾ ವಿದುಷಿ , ಸಂಗೀತ ವಿದುಷಿ ರೇವತಿ ಶಂಕರನ್" ರವರು. ನಾನು ಹೇಳಿದ ಮಾಣಿಕ್ಯ ವೀಣೆಯ ಕಥೆಯ ಪರಿಕಲ್ಪನೆ ರೇವತೀರವರದ್ದು. ರಾಮಾಯಣ ಕಾಲದಲ್ಲಿ ಲವಕುಶರು ಹೇಗೆ ರಾಮನ ಸಮ್ಮುಖದಲ್ಲೇ ರಾಮಾಯಣದ ಹರಿಕಥೆ ಮಾಡಿದರೋ, ಹಾಗೆ ರೇವತಿಯವರು ೧೯೯೯ರಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿಯವರ ಸಮ್ಮುಖದಲ್ಲೇ ಸುಬ್ಬಲಕ್ಷ್ಮಿಯವರ ಹರಿಕಥೆಯನ್ನು ಮಾಡಿದ್ದವರು. ಸುಬ್ಬುಲಕ್ಷ್ಮಿಯವರು ತಾವೇ ಮಾಣಿಕ್ಯ ವೀಣೆಯ ಅವತಾರವೆಂದು ಕೇಳಿ ನಸುನಕ್ಕರಂತೆ. ಹರಿಕಥೆಯನಂತರ ರೇವತಿಯವರನ್ನು ಆಶೀರ್ವದಿಸಿದ ಸುಬ್ಬುಲಕ್ಷ್ಮಿಯವರು "ನಾನು ಮಾಣಿಕ್ಯ ವೀಣೆಯ ಅವತಾರವೇ" ಎಂದು ಹೇಳುತ್ತಾ ಸಂತೋಷಪಟ್ಟರಂತೆ. 

ಭಾರತ ರತ್ನ "ಮಧುರೈ ಷಣ್ಮುಗವಡಿವು  ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ. ತಾಯಿಯ ಹೆಸರು ಷಣ್ಮುಗವಡಿವು ಎಂದು. ಷಣ್ಮುಗವಡಿವು ರವರು "ದೇವ ದಾಸಿ" ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಹಾಗಾಗಿ ಸುಬ್ಬುಲಕ್ಷ್ಮಿಯವರ ತಂದೆ ಯಾರು ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ತಾಯಿಯ ಹೆಸರಲ್ಲೇ, ತಾಯಿಯ ನೆರಳಲ್ಲೇ ಬೆಳೆದವರು ಸುಬ್ಬುಲಕ್ಷ್ಮಿ. 

ಸುಬ್ಬುಲಕ್ಷ್ಮಿಯವರು ಜನಿಸಿದ್ದು ೧೬-೦೯-೧೯೧೬ರಂದು. ನ್ಯೂಮ್ಯಾರೊಲೊಜಿ ತಿಳಿದವರಿಗೆ ೧೬ರ ಮಹತ್ವ ಗೊತ್ತು. ೧೬ ಎಂದರೆ ೧ + ೬ = ೭, ಸಪ್ತಸ್ವರಗಳು ಎಂದರ್ಥ. ೯ ಎಂಬುದು ನವರಸಗಳ ಪ್ರತೀಕ. ಅಂದರೆ ಸುಬ್ಬುಲಕ್ಷ್ಮಿ ಅವರಿಗೆ ಸಪ್ತಸ್ವರಗಳು ಕರಗತವಾಗಿದ್ದವು ಮತ್ತು ಸಪ್ತ ಸ್ವರಗಳ ಮೂಲಕ ಅವರು ನವರಸಗಳನ್ನೂ ಸಮರ್ಪಕವಾಗಿ ವ್ಯಕ್ತ ಪಡಿಸುತ್ತಿದ್ದರು ಎಂದರ್ಥ. 

ಸುಬ್ಬುಲಕ್ಷ್ಮಿ ಅವರು ತಮ್ಮ ಹೆಸರಿಗೆ ತಕ್ಕಂತೆ ಬಾಳಿದವರು.  "ಸುಬ್ಬು" ಅಥವಾ "ಸುಬ್ಬ" ಎಂಬುದು ಸಂಸ್ಕೃತದ "ಶುಭ" ಎಂಬ ಪದದ ತದ್ಭವ. ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ, ಸಂತೋಷ ಪಡಿಸುತ್ತಾ ಬಾಳಿದವರು ಸುಬ್ಬುಲಕ್ಷ್ಮಿ. 

ಸುಬ್ಬುಲಕ್ಷ್ಮಿಯವರಿಗೆ, ಶಕ್ತಿವೇಲು ಎಂಬ ಅಣ್ಣನೂ ಮತ್ತು vadivaambal ಎಂಬ ತಂಗಿಯೂ ಇದ್ದರು. 

ಸುಬ್ಬುಲಕ್ಷ್ಮಿಯವರನ್ನು ಪ್ರೀತಿಯಿಂದ ಅವರಮ್ಮ "ಕುಂಜಮ್ಮ, ಕುಂಜ" ಎಂದು ಕರೆಯುತ್ತಿದ್ದರು

ಷಣ್ಮುಗವಡಿವು ಅವರು ಸಂಗೀತ ವಿದುಷಿ. ಹಾಡುಗಾರಿಕೆ ಹಾಗು ವೀಣೆ ಎರಡರಲ್ಲೂ ಪರಿಣಿತಿ ಪಡೆದಿದ್ದವರು. ಬರಿ ಮಧುರೈ ಪಟ್ಟಣವೇ ಏಕೆ, ದೂರದ ಮದ್ರಾಸಿನವರೆಗೂ ಹೋಗಿ ಕಚೇರಿಗಳನ್ನು ನೀಡುವಷ್ಟು ಪರಿಣಿತಿ ಹೊಂದಿದ್ದವರು ಅವರು.  ಹಾಗಾಗಿ ತಾಯಿಯಾದ ಷಣ್ಮುಗವಡಿವು ರವರೇ ಸುಬ್ಬುಲಕ್ಷ್ಮಿಯವರ ಮೊದಲ ಸಂಗೀತ ಗುರು. 

"ಮನೆಯೇ ಮೊದಲ ಪಾಠಶಾಲೆ 

ಜನನಿ ತಾನೇ ಮೊದಲ ಗುರುವು 

ಜನನಿಯಿಂದ ಪಾಠ ಕಲಿತ 

ಜನರು ಧನ್ಯರು"

ಎಂಬ ಕುವೆಂಪು ರವರ ವಾಣಿಯಂತೆ ತಾಯಿಯಿಂದ ಸಂಗೀತ ಪಾಠ ಕಲಿತೇ ಸುಬ್ಬುಲಕ್ಷ್ಮಿ ಯವರು ಪ್ರಸಿದ್ಧಿಯನ್ನು ಪಡೆದರು ಎಂದರೆ ತಪ್ಪಾಗಲಾರದು. 

ಸುಬ್ಬುಲಕ್ಷ್ಮಿಯವರ ಸಂಗೀತ ಪಾಠ ಹೀಗೆ ಆರಂಭವಾಗಿತ್ತು. 

ಶ್ರೀ ಗಣನಾಥ  ಸಿಂಧೂರವರ್ಣ 

***************************
******************************
*****************************

ವರವೀಣಾ ಮೃದು ಪಾಣಿ 

**********************

*************************

ಕಮಲಾಜಾ ದಳ ವಿಮಲ ಸುನಯನ 

****************************

*****************************

****************************

ಹೀಗೆ ಸುಬ್ಬುಲಕ್ಷ್ಮೀರವರ ಸಂಗೀತ ಶಿಕ್ಷಣ ಆರಂಭವಾಯಿತು.  ೫ನೇ ತರಗತಿಗೆ ಶಾಲಾ ಶಿಕ್ಷಣ ಮೊಟಕಾದರೂ, ಸಂಗೀತ ಶಿಕ್ಷಣ ಮುಂದುವರೆಯುತ್ತಲೇ ಇತ್ತು. ಸುಶ್ರಾವ್ಯವಾದ ಕಂಠ, ಶಿಸ್ತುಬದ್ಧ ಲಯ ಜ್ಞಾನ ಸುಬ್ಬುಲಕ್ಷ್ಮಿಯವರಿಗೆ ರಕ್ತದಲ್ಲೇ ಬಂದಿತ್ತು. ೧೦ನೇ ವಯಸ್ಸಿಗೆ ಸುಬ್ಬುಲಕ್ಷ್ಮಿಯವರು ನೂರಾರು ಕೀರ್ತನೆಗಳನ್ನು ಸುಶ್ರಾವ್ಯಯಾಗಿ ಹಾಡಲು ಕಲಿತಿದ್ದರು. 

ಅಂದಿನ ಕಾಲದಲ್ಲಿ "ಸೇತುಪತಿ ಶಾಲೆ" ಎಂಬುದು ಮಧುರೈನ ಹೆಸರುವಾಸಿಯಾದ ಶಾಲೆ.  ಸ್ವತಂತ್ರ ಹೋರಾಟಗಾರ, ಸಂಗೀತಗಾರ ಸುಬ್ರಮಣ್ಯ ಭಾರತಿಯವರು ಆ ಶಾಲೆಯ ಮೇಷ್ಟ್ರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ಒಂದು ದಿನ ಆ ಶಾಲೆಯಲ್ಲಿ ಷಣ್ಮುಗವಡಿವು ಅವರ ವೀಣಾ ವಾದನ ಕಚೇರಿ ನಡೆಯುತಿತ್ತು. ಕಾರ್ಯಕ್ರಮದ ಕಡೆಯ ಹೊತ್ತಿಗೆ ಷಣ್ಮುಗವಡಿವು ಅವರು, ಹತ್ತಿರದಲ್ಲೇ ಮಣ್ಣಿನಲ್ಲಿ ಆಟವಾಡುತ್ತಿದ್ದ ತಮ್ಮ ಮಗಳಾದ ಸುಬ್ಬುಲಕ್ಷ್ಮಿಯವರನ್ನು ವೇದಿಕೆಗೆ ಕರೆಯುತ್ತಾರೆ. ವೇದಿಕೆ ಏರಿದ ಮಗುವಿಗೆ ಹಾಡುವಂತೆ ಹೇಳುತ್ತಾರೆ.  

ಅಂತಹ ಸಂದರ್ಭಗಳಲ್ಲಿ ಈಗಿನ ಕಾಲದ ಹೆಚ್ಚು ಮಕ್ಕಳು ಹಾಡಲು ಹಿಂಜರಿಯುತ್ತಾರೆ. ಎಲ್ಲರೆದುರು "ಹಾಡು" ಎಂದು ಹೇಳಿದಕ್ಕೆ ಸಿಟ್ಟಾಗುತ್ತಾರೆ.  'ಯು ಮೇಡ್ ಮೀ  ಟು ಫೀಲ್ ಬ್ಯಾಡ ಇನ್ ಫ್ರಂಟ್ ಆಫ್ ಆಲ್" ಎಂದು ಸಿಟ್ಟು ಪ್ರದರ್ಶಿಸುತ್ತಾರೆ. 

ಲಂಗದ ಮೇಲಿನ ಮಣ್ಣು ಕೊಡವಿಕೊಂಡು,  ಯಾವ ಹಿಂಜರಿಕೆಯೂ ಇಲ್ಲದೆ ೧೦ ವರ್ಷದ ಬಾಲಕಿ ಸುಬ್ಬುಲಕ್ಷ್ಮಿ ಹಾಡಲು ಶುರು ಮಾಡುತ್ತಾರೆ.  ಅವರು ಆ ದಿನ ಹೇಗೆ ಹಾಡಿದರು ಎಂಬುದನ್ನು ನನ್ನ ಹನ್ನೊಂದು ವರ್ಷದ ತಂಗಿ ಪ್ರಜ್ಞಾ ನಿಮಗೆ ಹಾಡಿ  ತೋರಿಸುತ್ತಳೆ. 

ಪ್ರಜ್ಞಾಳಿಂದ ಕೀರ್ತನೆ 


 

ಷಣ್ಮುಗವಡಿವು ರವರ ಮಧುರೈ ಮನೆ ಸಂಗೀತದ  ಕೇಂದ್ರವಾಗಿತ್ತು. ಸುಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಐಯಂಗಾರ್, ಮುಸಿರಿ ಸುಬ್ರಮಣ್ಯ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮುಂತಾದವರು ಆಗಾಗ ಷಣ್ಮುಗವಡಿವು ಅವರ ಮನೆಗೆ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಅವರುಗಳ ಪೈಕಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ರವರಿಂದ ಸುಬ್ಬುಲಕ್ಷ್ಮಿ ಸಂಗೀತದ ಹೆಚ್ಚಿನ ಅಭ್ಯಾಸ ಮಾಡಿದರು. ಹಾಗಾಗಿ ತಾಯಿಯೇ ಸುಬ್ಬುಲಕ್ಷ್ಮಿ ಅವರ ಮೊದಲ ಗುರುವಾದರೆ,  ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು  ಸುಬ್ಬುಲಕ್ಷ್ಮಿಯವರಿಗೆ ನಂತರದ  ಸಂಗೀತ ಗುರುಗಳು. 

ಮಗಳು ಸುಬ್ಬುಲಕ್ಷ್ಮಿಯ ಸಂಗೀತ ಸಾಮರ್ಥ್ಯದ ಬಗ್ಗೆ ತಾಯಿ ಷಣ್ಮುಗವಡಿವು  ಅವರಿಗೆ ಅಪಾರ ಭರವಸೆ ಇತ್ತು.  ಹಾಗಾಗಿ ಮಗಳಿಗೆ ಕಚೇರಿಯ ಅವಕಾಶ ನೀಡುವಂತೆ ಮಧುರೈನ ಎಲ್ಲಾ ಪ್ರಮುಖರಿಗೂ ಷಣ್ಮುಗವಡಿವು ಕೇಳಿಕೊಳ್ಳುತ್ತಿದ್ದರು. ತಮಗೆ ಬಂದ ಅವಕಾಶಗಳನ್ನೂ ಮಗಳಿಗೆ ನೀಡುತ್ತಿದ್ದರು.  ಹೀಗಾಗಿ ಸುಬ್ಬಲಕ್ಷ್ಮಿಯವರು ತಮ್ಮ ೧೩ನೇ ವಯಸ್ಸಿಗೆ ಸಂಗೀತ ಕಚೇರಿಗಳನ್ನು ನೀಡಲು ಆರಂಭಿಸಿದರು. ಸುಶ್ರಾವ್ಯವಾದ ಕಂಠಸಿರಿಯ ಜೊತೆಗೆ ಸುಬ್ಬುಲಕ್ಷ್ಮಿ ಅವರ ಸೌಂದರ್ಯವೂ ಜನರನ್ನು ಆಕರ್ಷಿಸತೊಡಗಿತು. 

೧೯೩೬ರ ಸಮಯ.  ಆಗ ಸುಬ್ಬುಲಕ್ಷ್ಮಿ ಅವರಿಗೆ ಸುಮಾರು ೨೦ರ ಪ್ರಾಯ.  ಆಗ ತಮಿಳ್ ನಾಡಿನ ಕುಂಭ ಕೋಣಂ ನಲ್ಲಿ ೧೨ ವರುಷಗಳಿಗೊಮ್ಮೆ ಜರುಗುವ "ಕುಂಭ ಮೇಳ" ಏರ್ಪಟಿತ್ತು. ಅಂದಿನ ಕುಂಭಮೇಳದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಎರಡು ಭಾರಿ ಹಾಡಿ ಸುಬ್ಬುಲಕ್ಷ್ಮಿ ಅವರು ಜಯಭೇರಿ ಬಾರಿಸಿದ್ದರು. 

ಈ ನಡುವೆ ಸಂಗೀತಗಾರ, ಕಾಂಗ್ರೆಸ್ ನಾಯಕ ನಟೇಶ ಅಯ್ಯರ್ ಎಂಬುವರ ಮುಖಾಂತರ ಸುಬ್ಬುಲಕ್ಷ್ಮಿ ಅವರಿಗೆ ತಿರುಚ್ಚಿಯ ಕಾವೇರಿ ತೀರದ ರಾಕ್ ಫೋರ್ಟ್ ದೇವಸ್ಥಾನದ ಆವರಣದಲ್ಲಿ ಹಾಡುವ ಅವಕಾಶ ಒದಗಿ ಬಂತು.  ಕಚೇರಿಯ ಅವಕಾಶವೇನೋ ದೊಡ್ಡದೇ! ಆದರೆ ಸುಬ್ಬುಲಕ್ಷ್ಮಿ ಅವರಿಗೆ ಪಕ್ಕವಾದ್ಯಗಳನ್ನು  ನುಡಿಸಲು ಯಾವ ಕಲಾವಿದರೂ ಮುಂದೆಬರಲಿಲ್ಲ.  ಹೆಣ್ಣು ಮಕ್ಕಳು ಅಂದಿನ ಕಾಲದಲ್ಲಿ ದೊಡ್ಡ ವೇದಿಕೆ ಎರವುದನ್ನು  ಪುರುಷ ಪ್ರಾಧಾನ್ಯ ಸಮಾಜ ಸಹಿಸುತ್ತಿರಲಿಲ್ಲ. ಹೆಣ್ಣು ಮಕ್ಕಳು ಏನು ಸಂಗೀತ ಹಾಡಿಯಾರು ಎಂಬ ನಿಕೃಷ್ಟ ಧೋರಣೆಯ ಕಾಲ. ಹೆಣ್ಣು ಮಕ್ಕಳ ಹಾಡುಕಾರಿಕೆಗೆ ಪ್ರತಿಷ್ಠಿತ ಪಕ್ಕವಾದ್ಯಕಾರರು ಪಕ್ಕವಾದ್ಯ ನುಡಿಸಲು ಒಪ್ಪುತ್ತಲೇ ಇರದ ಕಾಲ ಅದಾಗಿತ್ತು. ತಾಯಿ ಷಣ್ಮುಗವಡಿವು ಅವರ ಚಿಂತೆ ಕೇಳುವರೇ ಇಲ್ಲದಂತಾಗಿತ್ತು. ಆಗ ತಾಯಿ-ಮಗಳ ನೆರವಿಗೆ ಮುಂದಾದವರೇ ನಮ್ಮ ಕನ್ನಡ ನಾಡಿನ ಹೆಮ್ಮೆಯ ಪುತ್ರ ಪಿಟೀಲು ಚೌಡಯ್ಯ ನವರು. ಹೆಣ್ಣು ಮಗಳೊಬ್ಬಳಿಗೆ ಪಿಟೀಲು ನುಡಿಸಲು ಮುಂದಾದ ಚೌಡಯ್ಯ ನವರನ್ನು ಎಲ್ಲಾ ಹಿರಿಯ ಕಲಾವಿದರು ಛೇಡಿಸಿದರು, ಚೌಡಯ್ಯ ನವರು ಮಾತ್ರ ಜಗ್ಗಲಿಲ್ಲ. "ಚೌಡಯ್ಯ.......ಗೊತ್ತು ಗುರಿಯಿಲ್ಲದ ಹೆಣ್ಣುಮಗಳಿಗೆ ನೀನು ಪಿಟೀಲು ನುಡಿಸಿದರೆ, ಮುಂದೆ ನಿನಗೆ ಕಚೇರಿಗಳು ಸಿಗದಾದೀತು" ಎಂಬ ಬೆದರಿಕೆಗೂ ಚೌಡಯ್ಯ ನವರು ಬೆದರಲಿಲ್ಲ. 

ಚೌಡಯ್ಯ ನವರ ಸಹಕಾರದೊಂದಿಗೆ ಸುಬ್ಬುಲಕ್ಷ್ಮಿ ಅವರು ತಿರುಚಿ ರಾಕ್ ಫೋರ್ಟ್ ಟೆಂಪಲ್ ನ ಕಚೇರಿಯಲ್ಲಿ ಅಮೋಘವಾಗಿ ಹಾಡಿ  ಗೆದ್ದರು.  ಅವರೊಡನೆ ಗೆದ್ದು ಬೀಗಿದವರು ನಮ್ಮ ಪಿಟೀಲು ಚೌಡಯ್ಯ ನವರು ಕೂಡ. 

ತಿರುಚಿ ಕಚೇರಿಯನಂತರ ತಾಯಿ ಷಣ್ಮುಗವಡಿವು ಚೌಡಯ್ಯ ನವರನ್ನೇ ಹೆಚ್ಚು ನೆಚ್ಚಿಕೊಂಡವರಾಗಿದ್ದರು. "ಚೌಡಯ್ಯನವರೇ...... ತಮಿಳ್ ನಾಡಿನಲ್ಲಿ ನನ್ನ ಮಗಳಿಗೆ ಹೆಚ್ಚು ಅವಕಾಶಗಳು ಬರುತ್ತಿಲ್ಲ.  ನಾವೂ ನಿಮ್ಮ ಮೈಸೂರಿಗೆ ಬರುತ್ತೇವೆ. ನಮಗೆ ಅವಕಾಶಗಳನ್ನು ಅಲ್ಲಿ ಕೊಡಿಸಿ" ಎಂದು ಬೇಡಿಕೊಂಡರು.  ಧಾರಾಳಿಗಳಾದ ಚೌಡಯ್ಯನವರು ಇಲ್ಲವೆನ್ನಲಿಲ್ಲ.  ಮೇಲಾಗಿ ತಾಯಿ-ಮಗಳಿಗೆ ತಮ್ಮ ಮೈಸೂರು ಮನೆಯಲ್ಲೇ ಉಳಿದುಕೊಳ್ಳುವ ಅವಕಾಶವನ್ನು ಮಾಡಿಕೊಟ್ಟವರು ಚೌಡಯ್ಯ ನವರು.  

ಆಗ ಮೈಸೂರಿನಲ್ಲಿ ನಾಲ್ವಡಿ ಕೃಷ್ಣರಾಜ ವಡೆಯ್ಯರ್ ರವರ ಆಡಳಿತವಿದ್ದ ಕಾಲ. ವೀಣೆ ಶೇಷಣ್ಣ, ಬಿಡಾರಂ ಕೃಷ್ಣಪ್ಪ, ಮೈಸೂರು ವಾಸುದೇವಾಚಾರ್ ಅವರಂತಹ ಮಾಹಾನ್ ಸಂಗೀತಗಾರರು ಕೃಷ್ಣರಾಜ ವಡೆಯ್ಯರ್ ಅವರ ಆಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದ ಕಾಲ. ಅವರೆಲ್ಲರಿಗೂ ಅರಮನೆಯಿಂದ  ಕೈತುಂಬಾ ಮಾಸಾಶನ ದೊರೆಯುತ್ತಿದ್ದ ಕಾಲ. ಹಾಗಾಗಿ ದೇಶದ ಎಲ್ಲ ಕಲಾವಿದರು ಮೈಸೂರಿನ ಕಡೆ ಮುಖಮಾಡುತಿದ್ದ ಕಾಲ. ತಾಯಿ ಷಣ್ಮುಗಾವಡಿವು ಮಗಳು ಸುಬ್ಬುಲಕ್ಷ್ಮಿಗೆ ಅವಕಾಶವನ್ನು ಹುಡುಕಿಕೊಂಡು ಮೈಸೂರು ಸೇರಿದರಲ್ಲಿ ಆಶ್ಚರ್ಯವಿರಲಿಲ್ಲ. 

ಚೌಡಯ್ಯ ನವರ ಮನೆಯಲ್ಲಿ ತಾಯಿ-ಮಗಳು ಆರು ತಿಂಗಳ ಕಾಲ ತಂಗಿದ್ದು ಈಗ ಇತಿಹಾಸ. ಯುವತಿ ಸುಬ್ಬುಲಕ್ಷ್ಮಿ ಚೌಡಯ್ಯ ನವರಿಂದಲೂ ಹಲವಾರು ಕೀರ್ತನೆಗಳನ್ನು, ಪಲ್ಲವಿಗಳನ್ನು ಕಲಿತು ನುರಿತ ಗಾಯಕಿಯಾಗಿ ರೂಪಗೊಂಡರು. ಆದರೂ ಹೇಳಿಕೊಳ್ಳುವಂತಹ ಅವಕಾಶಗಳು ಯುವತಿ ಸುಬ್ಬುಲಕ್ಷ್ಮಿ ಅವರಿಗೆ ಆಗಿನ ಕಾಲದಲ್ಲಿ ಮೈಸೂರಿನಲ್ಲಿ ದೊರಕದಿದ್ದದ್ದು ವಿಪರ್ಯಾಸ ಅಂತಲೇ ಹೇಳಬಹುದು. 

ಆ ಸಮಯದಲ್ಲಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ಸಂಗೀತ ಸಮ್ಮೇಳನ ನಡೆಯಲಿದ್ದು, ಚೌಡಯ್ಯ ನವರ ಸಲಹೆ ಮೇರೆಗೆ ತಾಯಿ ಷಣ್ಮುಗವಡಿವು ಮತ್ತು ಮಗಳು ಸುಬ್ಬುಲಕ್ಷ್ಮಿ ಮದ್ರಾಸಿಗೆ ಪ್ರಯಾಣ ಮಾಡಿದರು. ಆಗ ತಾಯಿ ಮಗಳಿಗೆ ಆಶ್ರಯ ನೀಡಿದವರು ವೀಣಾ ಧನಮ್ಮಾಳ್.  ವೀಣಾ ಧನಮ್ಮಾಳ್ ಕೂಡ ಒಬ್ಬ ದೇವದಾಸಿ ಮನೆತನದ ಹೆಣ್ಣು ಮಗಳು.  ಆದರೇನು? ಆಕೆ ಆಗಿನ ಕಾಲದ ಸುಪ್ರಸಿದ್ದ ವೀಣಾ ಕಲಾವಿದೆ ಮತ್ತು ಹಾಡುಗಾರ್ತಿ. ಹೆಸರುವಾಸಿಯಾದ ಸಂಗೀತದ ಜೋಡಿ ಟಿ.ಬೃಂದಾ ಮತ್ತು ಟಿ.ಮುಕ್ತ ಅವರ ಮೊಮ್ಮಕ್ಕಳು. ಸುಪ್ರಸಿದ್ದ ನೃತ್ಯಗಾರ್ತಿ ಪದ್ಮ ವಿಭೂಷಣೇ ಬಾಲಸರಸ್ವತಿ ಕೂಡ ವೀಣಾ ಧನಮ್ಮಾಳ್ ಅವರ ಮೊಮ್ಮಗಳು.  ನೋಡಿದಿರಾ...... ದೇವದಾಸಿಯರ ಕುಟುಂಬವಾದರೇನು? ವೀಣಾ ಧನಮ್ಮಾಳ್ ಅವರ ಕುಟುಂಬ ಸರಸ್ವತಿಯ ಆವಾಸಸ್ಥಾನವಾಗಿತ್ತು. 

ಇತ್ತ ಚೌಡಯ್ಯ ನವರು ಶತಪ್ರಯತ್ನಪಟ್ಟರೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕಾರ್ಯಕ್ರಮ ಸುಬ್ಬುಲಕ್ಷ್ಮಿ ಅವರ ಪಾಲಿಗೆ ದೊರಕದಾಯಿತು. ವೀಣಾ ಧನಮ್ಮಾಳ್  ಅವರ ಶಿಫಾರಿಸು ಕೂಡ ಕೆಲಸ ಮಾಡದಾಯಿತು. ಮುಖ್ಯ ಕಾರಣವೇನೆಂದರೆ ಹೆಣ್ಣು ಮಕ್ಕಳು ಅಂದಿನ ಕಾಲದಲ್ಲಿ ದೊಡ್ಡ ವೇದಿಕೆಯೇರುವುದನ್ನು ಪುರುಷ ಪ್ರಾಧಾನ್ಯ ಸಮಾಜ ಸಹಿಸುತ್ತಿರಲಿಲ್ಲ. 

ಕಡೆಗೂ ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿಯ ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ಸುಪ್ರಸಿದ್ದ ಹಾಡುಗಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕಾರಣಾಂತರಗಳಿಂದ ಬರಲಾಗಲಿಲ್ಲ. ವಿಷಯ ತಿಳಿದದ್ದು ಕಾರ್ಯಕ್ರಮದ ಬೆಳಗ್ಗೆ ಸಮಯದಲ್ಲಿ.  ಬೇರೆ ಮಾರ್ಗವಿಲ್ಲದೆ ಅಂದಿನ ಕಾರ್ಯಕರ್ತರು 

"ಆ ದಿನ ಬೇಕಾದರೆ ಸುಬ್ಬುಲಕ್ಷ್ಮಿ ಹಾಡಿಕೊಳ್ಳಲಿ" ಎಂದು ಆಜ್ಞಾಪಿಸಿದರು. ಪಾಲಿಗೆ ಬಂದ ಅವಕಾಶವನ್ನು ಅಪ್ಪಿಕೊಂಡ ಯುವತಿ ಸುಬ್ಬುಲಕ್ಷ್ಮಿ ವೇದಿಕೆಯನ್ನು ಏರೆಬಿಟ್ಟರು. ಜೊತೆಗೆ ಬೆನ್ನೆಲುಬಾಗಿ ಪಿಟೀಲು ಸಾಥ್ ನೀಡಿದವರು ಪಿಟೀಲು ಚೌಡಯ್ಯ ನವರು. ಅಂದಿನ ಕಚೇರಿಗೆ ಸಾಕ್ಷಿಯಾದವರು ಚೆಮ್ಬೈ ವೈದ್ಯನಾಥ ಭಾಗವತರ್, ಮುಸುರಿ ಸುಬ್ರಮಣ್ಯ ಅಯ್ಯರ್ ಮುಂತಾದವರು.  ಆ ದಿನ ಸುಬ್ಬುಲಕ್ಷ್ಮಿ ಅವರ ಕಾರ್ಯಕ್ರಮ ಹೇಗಿತ್ತು ಎಂಬುದನ್ನು ನಾವೀಗ ಹಾಡಿತೋರಿಸುತ್ತೇವೆ. 

ಸರೋಜಾ ದಳನೇತ್ರೀ..... 

ಯುವತಿ ಸುಬ್ಬಲಕ್ಷ್ಮಿ ಅವರು ಕಚೇರಿ ಇಡೀ ಅಮೋಘವಾಗಿ ಹಾಡಿ ಗೆದ್ದರು. ಎಲ್ಲಾ ಗಣ್ಯರು ಮುಕ್ತ ಕಂಠದಿಂದ ಸುಬ್ಬುಲಕ್ಷ್ಮಿ ಅವರನ್ನು "ಸಂಗೀತ ಕ್ಷೇತ್ರದ ಹೊಸ ನಕ್ಷತ್ರ" ಎಂದೇ ಬಣ್ಣಿಸಿದರು.  ವೀಣೆ ಸಾಂಬಶಿವ ಅಯ್ಯರ್ ಎಂಬುವರು ಸುಬ್ಬುಲಕ್ಷ್ಮಿ ಅವರ ಸಂಗೀತವನ್ನು ಪ್ರಶಂಸಿಸುತ್ತಾ "ಅಮ್ಮನವರ ಮಾಣಿಕ್ಯ ವೀಣೆ ಸುಬ್ಬುಲಕ್ಷ್ಮಿ ಅವರ ಕೊರಳಿನಲ್ಲೇ ಇದೆ" ಎಂದು ಹೇಳಿದರು. 

ಅಂದು ಸುಬ್ಬಲಕ್ಷ್ಮಿ ಅವರೊಡನೆ ಗೆದ್ದು ಬೀಗಿದವರು ಪಿಟೀಲು ಚೌಡಯ್ಯ ನವರು ಕೂಡ. ಸುಬ್ಬಲಕ್ಷ್ಮಿ ಅವರ ಯಶಸ್ಸಿಗೆ ಭದ್ರ ಬುನಾದಿ ಹಾಕಿ ಕೊಟ್ಟವರಲ್ಲಿ  ಒಬ್ಬ ಪ್ರಮುಖರು  ನಮ್ಮ ಚೌಡಯ್ಯ ನವರು ಮತ್ತು ಅವರು ಕನ್ನಡಿಗರು ಎಂಬುದನ್ನು ನಾವು ಮರೆಯುವಂತಿಲ್ಲ. 

ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು.  ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ. 

ಉಪಕಥೆ________ 

ಮ್ಯೂಸಿಕ್ ಅಕಾಡೆಮಿ ಯ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿನ ಅನಂತರ ಸುಬ್ಬುಲಕ್ಷ್ಮಿ ಅವರ ಸಂದರ್ಶನ ಕೋರಿ ಹಲವಾರು ಪತ್ರಕರ್ತರು  ಮುಂದೆ ಬಂದರು.  ಹೀಗೆ ಬಂದವರೇ ಅಂದಿನ ಪತ್ರಕರ್ತರಾದ ಸದಾಶಿವಂ ಅವರು. ಸಂದರ್ಶನದ ನೆಪದಲ್ಲಿ ಹಲವು ಬಾರಿ   ಸುಬ್ಬುಲಕ್ಷ್ಮಿ ಅವರನ್ನು ಭೇಟಿಯಾದ ಸದಾಶಿವಂ, ಸುಬ್ಬುಲಕ್ಷ್ಮಿ ಅವರಿಗೆ ಹತ್ತಿರದ ಗೆಳಯರಾದರು. ಸದಾಶಿವಂ ಅವರು ಅಷ್ಟುಹೊತ್ತಿಗಾಗಲೇ ಮದುವೆಯಾಗಿದ್ದವರಾದರೂ, ಸುಬ್ಬಲಕ್ಷ್ಮಿ ಅವರ ಗಾಯನ ಪ್ರತಿಭೆಗೆ ಮತ್ತು ಸೌಂದರ್ಯಕ್ಕೆ ಸದಾಶಿವಂ ಅವರು ಮಾರುಹೋಗಿದ್ದರು. 

ಮಗಳಿಗೆ ವಯಸ್ಸು ೨೦ ತುಂಬಿದ್ದರಿಂದ ತಾಯಿ ಷಣ್ಮುಗವಡಿವು ಆತಂಕಗೊಂಡಿದ್ದರು. ಮಗಳಿಗೆ ಮದುವೆಯೊಂದನ್ನು ಮಾಡಿಬಿಟ್ಟರೆ ತಾವು ಧನ್ಯಳೆಂದು ಭಾವಿಸಿದ ಷಣ್ಮುಗವಡಿವು ಮತ್ತೆ ಮದುರೈ ಅತ್ತ ಹೊರಟೇಬಿಟ್ಟರು. ದೇವದಾಸಿ ಮನೆಗಳಲ್ಲಿ ಮದುವೆ ಅಂದರೆ ಅದು ಬೇರೆಯ ಥರ. ಎಪ್ಪತ್ತರ ದಶಕದ "ಗೆಜ್ಜೆ ಪೂಜೆ" ಸಿನಿಮಾ ತಾವೆಲ್ಲ ನೋಡಿದೀರಿ. ಭಾರಿ ಶ್ರೀಮಂತ ವ್ಯಕ್ತಿಯೊಂದಿಗೆ ಸುಬ್ಬಲಕ್ಷ್ಮಿ ಅವರ ಮದುವೆ  ಅಲ್ಲ "ಗೆಜ್ಜೆ ಪೂಜೆ"ಗೆ ಏರ್ಪಾಡುಮಾಡಿ ನಿಂತಿದ್ದವರು ತಾಯಿ ಷಣ್ಮುಗವಡಿವು. ಸುಬ್ಬುಲಕ್ಷ್ಮಿ ಅವರು ವಿರೋಧಿಸಿದರೂ ತಾಯಿ ಕೇಳದಾದರು.  ಸಭಿಕರೆ_____ ಅಂತಹ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿ ಅವರ ಮನಸಿನಲ್ಲಿ ಏಂತಹ ತೊಳಲಾಟ ಉಂಟಾಗಿರಬಹುದು ಎಂಬುದನ್ನು ಸ್ವಲ್ಪ ಯೋಚಿಸಿ. ಸಂಗೀತ ಕ್ಷೇತ್ರದಲ್ಲಿ ತನಗೆ ಉಜ್ವಲ ಭವಿಷ್ಯವಿದೆ ಎಂಬ ಆತ್ಮವಿಶ್ವಾಸವಿದ್ದ  ಸುಬ್ಬುಲಕ್ಷ್ಮಿ ಅವರು ದೃಢವಾದ ನಿರ್ಧಾರಕ್ಕೆ ಬಂದಿದ್ದರು. ಗಟ್ಟಿಗಿತ್ತಿ ಹೆಣ್ಣಾಗಿ ನಿಂತರು. ಸ್ತ್ರೀ ಶಕ್ತಿಯ ಪ್ರತಿರೂಪವಾಗಿ ನಿಂತ ಅವರು ಸಮಾಜದ ಕೆಟ್ಟ ಪದ್ದತಿಗೆ ಎದುರಾಗಿ ನಿಂತರು. ತಾಯಿಗೂ ತಿಳಿಯದಂತೆ ಗುಟ್ಟಾಗಿ ಮದ್ರಾಸ್ ರೈಲು ಹತ್ತೇಬಿಟ್ಟರು. ಗೆಜ್ಜೆ ಪೂಜೆ ಸಿನಿಮಾದ  ನಾಯಕಿ ಕಲ್ಪನಾ ಅವರು ಸೋತ ಸತ್ತರೆ, ಸುಬ್ಬುಲಕ್ಷ್ಮಿ ನಿಜ ಜೀವನದಲ್ಲಿ ಗೆದ್ದು ನಿಂತಿದ್ದರು. 

ಮದ್ರಾಸ್ ಗೆ ಬಂದಿಳಿದ ಸುಬ್ಬುಲಕ್ಷ್ಮಿ ಅವರು ಬಾಗಿಲು ತಟ್ಟಿದ್ದೆ ಸದಾಶಿವಂ ಅವರ ಮನೆ. ಮುಂಚೆಯೇ ಮದುವೆಯಾಗಿದ್ದು ಎರಡು ಮಕ್ಕಳಿದ್ದ  ಸದಾಶಿವಂ ರವರು ಸ್ವಲ್ಪವೂ ಹಿಂಜರಿಯದೆ ಸುಬ್ಬುಲಕ್ಷ್ಮಿ ಅವರಿಗೆ ಆಶ್ರಯ ಕೊಟ್ಟರು. ಸುಬ್ಬಲಕ್ಷ್ಮಿ ಅವರ ಸಂಗೀತ ಸಾಧನೆಗೆ ಬೆನ್ನೆಲುಬಾಗಿ ನಿಂತರು. 

ವ್ಯವಹಾರ ಮತ್ತು ವಹಿವಾಟ್ಟು ಗಳಲ್ಲಿ  ಸದಾಶಿವಂರವರು ಸಿದ್ಧಹಸ್ತರಾಗಿದ್ದವರು. ಸುಬ್ಬುಲಕ್ಷ್ಮಿ  ಅವರ ಗಾಯನ ಸಾಮರ್ಥ್ಯ ಮತ್ತು ದೈವೀಕ ಸೌಂದರ್ಯದ ಬೆಲೆಯನ್ನು ಸದಾಶಿವಂ ಚೆನ್ನಾಗಿ ಅರಿತಿದ್ದರು. ಹಾಗಾಗಿ ೨೨ರ ಯುವತಿ ಸುಬ್ಬುಲಕ್ಷ್ಮಿ ಅವರನ್ನು ಸಿನಿಮಾ ನಾಯಕಿಯನ್ನಾಗಿಸುವ ಯೋಜನೆ ಸದಾಶಿವಂ ಅವರದಾಗಿತ್ತು. 

ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು ತಯಾರಿಸುವ ಏರ್ಪಾಡು ಸದಾಶಿವಂ ಅವರದ್ದಾಗಿತ್ತು. ಸುಂದರ ಯುವತಿ ಸುಬ್ಬುಲಕ್ಷ್ಮಿ ಅವರು ಶಕುಂತಳೆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಅಂದಿನ ಕಾಲದಲ್ಲಿ ಸೌಂದರ್ಯದೊಂದಿಗೆ ಹಾಡುವ ಸಾಮರ್ಥ್ಯ ಇರವವರನ್ನು ಮಾತ್ರ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ನಾಯಕ ದುಷ್ಯಂತನ ಪಾತ್ರಕ್ಕೆ ಆಯ್ಕೆಯಾದವರು ಸುಪ್ರಸಿದ್ದ ಶಾಸ್ತ್ರೀಯ  ಗಾಯಕ G.N. ಬಾಲಸುಬ್ರಮಣ್ಯಂ ಅವರು. 

ನಿಮಗೆಲ್ಲ ಶಕುಂತಳೆಯ ಕಥೆ ತಿಳಿದೇ ಇದೆ.  ಭಾರತದ ಎಲ್ಲ ಭಾಷೆಗಳಲ್ಲೂ ಹಲವು ಭಾರಿ ತೆರೆ ಕಂಡಿರುವ ಕಥೆ ಶಕುಂತಳೆಯದ್ದು.  

"ಅಭಿಜ್ಞಾನ ಶಾಕುಂತಲಂ" ಎಂಬುದು ಸಂಸ್ಕ್ರತದ ಮೇರು ಕವಿ ಕಾಳಿದಾಸರು ಬರೆದ ನಾಟಕ. ಋಷಿ  ವಿಶ್ವಾಮಿತ್ರ ಮತ್ತು ದೇವಲೋಕದ ಅಪ್ಸರೆ ಮೇನಕೆಯರ ಮಗಳು ಶಕುಂತಳೆ.  ಕಣ್ವ ಮಹರಿಷಿಗಳು ಶಕುಂತಳೆಯ ಸಾಕು ತಂದೆ. 

ಸುಂದರ ಯುವತಿಯಾಗಿ ಬೆಳೆದು ನಿಂತ ಶಕುಂತಲೆಗೆ ಅನಸೂಯಾ ಮತ್ತು ಪ್ರಿಯಂವದಾ ಎಂಬ ಇಬ್ಬರು ಸ್ನೇಹಿತೆಯರು. ಸುಂದರ ಯುವತಿಯಾದ ಶಕುಂತಲೆಗೆ ತನ್ನ ಪ್ರಿಯತಮನ ಆಗಮನದ ನೀರೀಕ್ಷೆ. ಆ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಅಮೋಘವಾಗಿ ಅಭಿನಯಿಸಿದ ಸುಬ್ಬುಲಕ್ಷ್ಮಿ ಅಷ್ಟೇ ಅಮೋಘವಾಗಿ ಹಾಡಿದ್ದಾರೆ. 

ತಮಿಳ್ ಹಾಡು 




ಇವಿಷ್ಟು ಶಕುಂತಲೆಯ ಕಥೆ. ಶಕುಂತಲೆ ಸಿನಿಮಾದ ಭಾರಿ ಯಶಸ್ಸನ್ನು ಕಂಡ ನಿರ್ಮಾಪಕ ಸದಾಶಿವಂ ಅವರು ಮುಂದೆ "ಮೀರಾ" ಚಿತ್ರವನ್ನು ನಿರ್ಮಾಣವನ್ನು ಮಾಡುವ ಕನಸು ಕಂಡಿರುತ್ತಾರೆ. ಈ ನಡುವೆ ಸದಾಶಿವಂ ಅವರ ಮೊದಲ ಪತ್ನಿ ಅವರು ಮರಣಹೊಂದುತ್ತಾರೆ. ಸದಾಶಿವಂ ಅವರು ಸುಬ್ಬುಲಕ್ಷ್ಮಿ ಅವರನ್ನು ಮರು ವಿವಾಹ ಮಾಡಿಕೊಳ್ಳುತ್ತಾರೆ.  ಸುಬ್ಬುಲಕ್ಷ್ಮಿ ಅವರಿಗಿಂತ ಸದಾಶಿವಂ ಅವರು ೧೫ ವರ್ಷಗಳಷ್ಟು ಹಿರಿಯರು ಎಂಬುದು ಗಮನಿಸಬೇಕಾದ ವಿಷಯ. 

ತಮ್ಮ ಪತ್ನಿ ಸುಬ್ಬುಲಕ್ಷ್ಮಿ ಅವರನ್ನು ಇಡೀ ಭಾರತ ದೇಶದ ಮಹಾನ್ ನಾಯಕಿಯನ್ನಾಗಿಸುವ ಕನಸು ಕಂಡವರು ಸದಾಶಿವಂ ಅವರು. ಅದಕ್ಕಾಗಿಯೇ ಅವರು "ಮೀರಾ" ಚಿತ್ರದ ನಿರ್ಮಾಣವನ್ನು ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ  ಮಾಡುವ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಎರಡೂ ಚಿತ್ರಗಳಲ್ಲಿ "ನಾಯಕಿ ಮೀರಾ" ಆಗಿ ಅಭಿನಯಿಸಿದವರು ಸುಬ್ಬುಲಕ್ಷ್ಮಿ ಅವರು.  ಸುಶ್ರಾವ್ಯವಾದ ಕಂಠ ಮತ್ತು ಅಪಾರ ಸೌಂದರ್ಯ ಎರಡನ್ನು ಪಡೆದಿದ್ದ ಸುಬ್ಬುಲಕ್ಷ್ಮಿ, ಮೀರಾಳ ಪಾತ್ರಕ್ಕೆ ಹೇಳಿಮಾಡಿಸಿದವರಾಗಿರುತ್ತಾರೆ. 

೧೬ನೇ ಶತಮಾನದಲ್ಲಿ ಜನಿಸಿದ "ಮೀರಾ" ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದ ಹೆಣ್ಣು ಮಗಳು.  ಬಾಲ್ಯದಿಂದಲೇ ಕೃಷ್ಣನ ಪರಮಭಕ್ತೆಯಾದ ಮೀರಾ, ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿರುತ್ತಾಳೆ. ದೊಡ್ಡವಳಾದ ಮೇಲೆ ಮೀರಾಳ ವಿವಾಹ ಭೋಜರಾಜ್ ಸಿಸೋಡಿಯಾ ಎಂಬ ರಜಪೂತ ರಾಜನೊಂದಿಗೆ ಆಗುತ್ತದೆ. ಮಹಾರಾಣಿಯಾದ ಅನಂತರವೂ ಮೀರಾಳ ಕೃಷ್ಣ ಭಕ್ತಿ ಮುಂದುವರೆದಿರುತ್ತದೆ.  ತನ್ನ ಪರಮ ದೈವಾದ ಗಿರಿಧರ ಗೋಪಾಲನಿಗೆ ದೇವಸ್ಥಾನ ಒಂದನ್ನು ಕಟ್ಟಿಸಬೇಕೆಂದು ಮೀರಾ ತನ್ನ ಗಂಡನಲ್ಲಿ ಪ್ರಾರ್ಥಿಸಿಕೊಳ್ಳುತ್ತಳೆ.  ಮಂದಿರದ ನಿರ್ಮಾಣವಾಗುತ್ತಲೇ ಮೀರಾ ಭಕ್ತಿಪರವಶಳಾಗಿ ಹಾಡುತ್ತಳೆ. ಆ ಹಾಡಿನ ಗಾಯನವೂ ಸುಬ್ಬುಲಕ್ಷ್ಮಿ ಅವರದ್ದೇ. 

ಗಿರಿಧರ ಗೋಪಾಲ ಹಾಡು 

ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ ವಾಸಿಸ ತೊಡಗುತ್ತಾಳೆ. ಮಾಹಾರಾಣಿಯಾದರೂ ಅರಮನೆಯನ್ನು ತೊರೆದು ಬಡ ಸಂತರು ಮತ್ತು ಬಡ ಜನಗಳೊಂದಿಗೆ ಇರುತ್ತಾ ಇದ್ದದ್ದು ಮಹಾರಾಜನಿಗೆ ಕೋಪವನ್ನು ತರಿಸುತ್ತದೆ.  ಲೆಕ್ಕಿಸದೆ ಮೀರಾ ಜನಸಾಮಾನ್ಯರೊಂದಿಗೆ ಇದ್ದು ಅರಮನೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. 

ತನ್ನ ಕೃಷ್ಣಭಕ್ತಿ ಮತ್ತು ಸಂಗೀತದಿಂದ ಹೆಸರುವಾಸಿಯಾದ ಮೀರಾಳನ್ನು ಅಕ್ಬರ್ ಭೇಟಿಯಾದ ಕಥೆಯನ್ನು ಈಗ ನನ್ನ ತಂಗಿ ಪ್ರಜ್ಞಾ ಹೇಳುತ್ತಾಳೆ. 

ಪ್ರಜ್ಞಳಿಂದ ಅಕ್ಬರ್ ಕಥೆ 


ತಾವೇ ಮಹಾರಾಣಿಯಾಗಿದ್ದರು ಮೀರಾ ಅವರು ಜನ ಸಾಮಾನ್ಯರ ಪರವಾಗಿದ್ದರು ಮತ್ತು ಜನಸಾಮಾನ್ಯರ ನಡುವೆಯೇ ಬಾಳಿದಾರು ಎಂಬುದಕ್ಕೆ ನಾವೀಗ ಹಾಡುವ ಮೀರಾ ಭಜನೆಯೇ  ಸಾಕ್ಷಿ.  

ಕರಮ್ ಕೆ ಗತಿ ನ್ಯಾರಿ ಹಾಡು 


ಕೃಷ್ಣಭಕ್ತಿ, ಸಂಗೀತ ಇದರಲ್ಲೇ ಮುಳುಗಿದ್ದ ಮೀರಾ ತನ್ನನ್ನು ಉದಾಸೀನ ಮಾಡುತ್ತಿದ್ದಳೆಂದು ಮೀರಾಳ ಪತಿಗೆ ಅನಿಸುತ್ತಾ ಇರುತ್ತೆ. ಇದರಿಂದ ಭೋಜರಾಜನ ಕೋಪ ನೆತ್ತಿಗೇರುತ್ತದೆ. ತನ್ನ ಬಗೆಗಿನ ಮೀರಾಳ ಉದಾಸೀನಕ್ಕೆ ಗಿರಿಧರ ಗೋಪಾಲನೇ ಕಾರಣ ಎಂದು ಭಾವಿಸಿದ ಭೋಜರಾಜ, ತಾನೇ ಮೀರಾಳಿಗಾಗಿ ಕಟ್ಟಿಸಿದ ಗಿರಿಧರ ಗೋಪಾಲನ ಮಂದಿರವನ್ನು ಮದ್ದು ಗುಂಡುಗಳನ್ನು ಸಿಡಿಸಿ ನಾಶ ಪಡಿಸುವಂತೆ ಆಜ್ಞಾಪಿಸುತ್ತಾನೆ.  ಬೇಸರಗೊಂಡ ಮೀರಾ ಕೃಷ್ಣನನ್ನು ಸೇರಲು ಮಥುರಾ ಮಾರ್ಗವಾಗಿ ದ್ವಾರಕೆಯನ್ನು ತಲುಪುತ್ತಾಳೆ.  ದ್ವಾರಕೆಯಲ್ಲೇ ಮೀರಾ ಕೃಷ್ಣನೊಂದಿಗೆ ಐಕ್ಯಳಾಗುತ್ತಾಳೆ. 

ಮೀರಾ ಸಿನಿಮಾ ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಜಯಭೇರಿ ಬಾರಿಸುತ್ತದೆ. 

ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗೂ ಅತಿ ಹೆಚ್ಚು ಹೋಲಿಕೆ ಇರುವುದನ್ನು ಸಭಿಕರು ಗಮನಿಸಬೇಕು.  ಮೀರಾಳಂತೆಯೇ ಸುಬ್ಬುಲಕ್ಷ್ಮಿ ಅವರು ದೈವ ಭಕ್ತೆ. ಮೀರಾಳಂತೆ ಸಂಸಾರಕ್ಕೆ ಅಂಟಿಕೊಳ್ಳದೇ ಸುಬ್ಬುಲಕ್ಷ್ಮಿ ಅವರು  ಭಗವನ್ನಾಮ ಸ್ಮರಣೆಯಲ್ಲೇ ಜೀವನವನ್ನು ಕಳೆದವರು.  ಮೀರಾಳಂತೇ ಸುಬ್ಬುಲಕ್ಷ್ಮಿ ಅವರು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿ ಬಾಳಿದವರು, ದಾನ ಧರ್ಮಗಳನ್ನು ಮಿತಿ ಇಲ್ಲದೆ ಮಾಡಿದವರು.  ಮೀರಾಳ ಹಾಡುಗಳು ಹಾಗೂ ಕೃತಿಗಳು ಹೇಗೆ ಶತಮಾನಗಳು ಉರುಳಿದರೂ ಜೀವಂತವಾಗಿರುವವೋ ಅದೇ ರೀತಿ ಸುಬ್ಬುಲಕ್ಷ್ಮಿ ಅವರ ಹಾಡುಗಳು ಮತ್ತು ಸ್ತೋತ್ರಗಳು ಶತಮಾನಗಳು ಉರುಳಿದರೂ ಉಳಿಯುವಂತಹವು. 

ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ,  ಪ್ರಧಾನಿ ನೆಹರು, ಸರೋಜಿನಿ ನಾಯ್ಡು ಮುಂತಾದವರ ಪರಿಚಯವಾಗುತ್ತದೆ.  ಸುಬ್ಬುಲಕ್ಷ್ಮಿ ಅವರ ಸಂಗೀತ ಪ್ರತಿಭೆಯನ್ನು ಮನಸಾರೆ ಹೊಗಳಿದ ಪ್ರಧಾನಿ ನೆಹರು "ನಾನು ಒಬ್ಬ  ಪ್ರಧಾನಿ ಮಾತ್ರ, ಆದರೆ ನೀನು ಸಂಗೀತ ಪ್ರಪಂಚಕ್ಕೆ ಮಹಾರಾಣಿ" ಎಂದು ಹೇಳಿದ್ದನ್ನು ಹಿರಿಯರೆಲ್ಲಾ ಈಗಲೂ ನೆನಪಿಸಿಕೊಳ್ಳುತ್ತಾರೆ. 

ಗಾಂಧೀಜಿ ಅವರ ಆಶಯದಂತೆ ಸುಬ್ಬುಲಕ್ಷ್ಮಿ ಅವರು ಹಾಡಿದ "ವೈಷ್ಣವ ಜನತೋ ತೇನೆ  ಕಹಿಯೆಜೆ" ಹಾಡು ಜನಮಾನಸದಲ್ಲಿ ಇಂದಿಗೂ ಉಳಿದಿರುವುದನ್ನು ತಾವೆಲ್ಲಾ ನೋಡಿದ್ದೀರಿ.  

Vaishnav jan to tene kahiye jay


Vaishnav jan to tene kahiye jay

peerh paraaye janney ray

೧೯೬೩ರಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ವೆಂಕಟೇಶ್ವರರ ಸುಪ್ರಭಾತ ಇಂದಿಗೂ ಭಾರತ ದೇಶದ ಮನೆ ಮನಗಳ ಸುಪ್ರಭಾತವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯವೇ. 

Kousalya supraja Rama poorva sandhya pravarthathe
Uttishta Narasardula karthavyam dhaivamanhikam.

ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ದಂಪತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ.  ವೆಂಕಟೇಶ್ವರ ಸುಪ್ರಭಾತದ ಸಮಸ್ತ ಮಾರಾಟದ ಹಕ್ಕುಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ್ದಾರೆ. ಅದರಿಂದ ಬರುವ ಎಲ್ಲ ಆದಾಯ ತಿರುಪತಿ ದೇವಸ್ಥಾನದವರು ನಡೆಸುವ ವೇದ ಪಾಠಶಾಲೆಗೆ ಇಂದಿಗೂ ಸಲ್ಲುತ್ತದೆ. 


೧೯೬೨-೬೩ರ ದಿನಗಳಲ್ಲಿ ನಮ್ಮ ದೇಶ ಬಲಿಷ್ಠ ಚೀನಾದಾ ವಿರುದ್ಧ ಯುದ್ಧ ಮಾಡಬೇಕಾಗಿಬಂತು.  ಯುದ್ಧದಲ್ಲಿ ಸೋಲನ್ನು ಕಂಡ ಭಾರತ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಕಳೆದುಕೊಂಡಿತು. ಮೃತ ಸೈನಿಕರ ಕುಟುಂಬಗಳಿಗೆ ಪರಿಹಾರವನ್ನು ಬೇಡಿ ಸೈನಿಕರ ತಂಡವೊಂದು ಸುಬ್ಬುಲಕ್ಷ್ಮಿ ಅವರ ಕಚೇರಿಯೊಂದಕ್ಕೆ ಬಂದಿತ್ತು. ಕಚೇರಿ ನಡುವೆಯೇ ಸುಬ್ಬುಲಕ್ಷ್ಮಿ ಅವರು ತಾವು ಬಲಗೈಯಲ್ಲಿ ಧರಿಸಿದ್ದ ಒಂದು ಜೊತೆ ಚಿನ್ನದ ಬಳೆಯನ್ನು ಸೈನಿಕರಿಗೆ ಕಾಣಿಕೆಯಾಗಿ ನೀಡಿದರು. ಸುಬ್ಬುಲಕ್ಷ್ಮಿ ಅವರ ಕೊಡುಗೈ ದಾನವನ್ನು ಮೆಚ್ಚಿದ ಜನಸ್ತೋಮ ಧೀರ್ಘ ಕರತಾಡನವನ್ನು ಮಾಡಿದರು.  ಅಷ್ಟೇ ಅಲ್ಲಾ, ಕಚೇರಿಯಲ್ಲಿ ನೆರೆದ ಎಲ್ಲಾ  ಹೆಂಗಸರೂ ತಮ್ಮ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳೆಚಿ ಸೈನಿಕರಿಗೆ ಕಾಣಿಕೆಯಾಗಿ ನೀಡಿದ್ದು ಈಗ ಇತಿಹಾಸ.  ಆ ದಿನ ಸುಮಾರು ೨ ಕೆಜಿಯಷ್ಟು ಬಂಗಾರ ಸೈನಿಕರ ಜೋಳಿಗೆಯನ್ನು ಸೇರಿತು ಎಂಬುದನ್ನು ಹಿರಿಯರು ಈಗಲೂ ನೆನೆಸಿಕೊಳ್ಳುತ್ತಾರೆ. 


೧೯೬೬ ಸುಬ್ಬುಲಕ್ಷ್ಮಿಯವರ ಜೀವನದ ಮೇರುಕಾಲವೆಂದೇ ಹೇಳಬಹುದು. ವಿಶ್ವ ಸಂಸ್ಥೆಯಿಂದ ಬಂದ ಕರೆಯ ಮೇರೆಗೆ  ೧೯೬೬ರ ಅಕ್ಟೋಬರ್ ೨೩ರಂದು ಸುಬ್ಬುಲಕ್ಷ್ಮಿ ಅವರು ನ್ಯೂ ಯೋರ್ಕ್ನ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಡಿದ್ದು ಈಗ ಇತಿಹಾಸ. ವಿಶ್ವದ ಕೆಲವೇ ಕೆಲವು ಸಂಗೀತಗಾರರಿಗೆ ಮಾತ್ರ ಈ ಅವಕಾಶ ದೊರಕಿರುವುದನ್ನು ನಾವು ಗಮನಿಸಬೇಕು.  ಅಂದಿನ ವಿಶ್ವ ಸಂಸ್ಥೆಯ ಕಚೇರಿಯಲ್ಲಿ ಹಾಡಲು ಕನ್ನಡದ ಹರಿದಾಸರಾದ ಪುರಂದರ ದಾಸರ "ಆಡಿಸಿದಳೇಶೋದ" ಕೃತಿಯನ್ನು ಆಯ್ಕೆಮಾಡಿಕೊಂಡಿದ್ದು ಕನ್ನಡಿಗರಾದ ನಮ್ಮೆಲರಿಗೂ ಹೆಮ್ಮೆಯ ವಿಷಯ. ವಿಶ್ವ ಸಂಸ್ಥೆಯ ಧ್ಯೆಯವಾದ "ಜಗದೋದ್ದಾರವನ್ನು" ಮಾಡಿದವನು ಶ್ರೀ ಕೃಷ್ಣ.  ಹಾಗಾಗೇ "ಜಗದೋದ್ಧಾರನ ಆಡಿಸಿದಳೇಶೋದ" ಎಂಬ ದಾಸರ ಪದವನ್ನು ಸುಬ್ಬುಲಕ್ಷ್ಮಿ ಅವರು ಹಾಡಿದ್ದು ಅಂದಿನ ಸಭಿಕರಿಗೆಲ್ಲರಿಗೂ ಸಂತಸ ತಂದಿದ್ದು ನಮ್ಮೆಲರಿಗೂ ಸಂತೋಷದ ವಿಷಯ . 


ಆಡಿಸಿದಳೇಶೊದ ಹಾಡು 

ಕನ್ನಡದ ದಾಸರ ಕೃತಿಗಳನ್ನು ಜನಪ್ರಿಯಗೊಳಿಸುವಲ್ಲಿ ಸುಬ್ಬುಲಕ್ಷ್ಮಿಯವರ ಕೊಡುಗೆ ಅಪಾರ. ಸುಬ್ಬುಲಕ್ಷ್ಮಿ ಅವರ ಪ್ರಯತ್ನಕ್ಕೆ "ಆಡಿಸಿದಳೇಶೋದ" ಕೃತಿಯನ್ನು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಾಡಿದ್ದೇ ಸಾಕ್ಷಿ. 

ಅಂದಿನ ದಿನ ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ಮತ್ತೊಂದು ಹಾಡೆಂದರೆ ಅದು "ಮೈತ್ರೀಮ್ ಭಜತ” ಎಂಬ ಕಂಚಿ ಪರಮಾಚಾರ್ಯರ ಕೃತಿ. 

ಮೈತ್ರೀಮ್ ಭಜತಾಂ ಹಾಡು  

ಯುದ್ಧಮ್ ತ್ಯಜಾತಂ, ಅಂದರೆ ಯುದ್ಧಗಳು ನಿಲ್ಲಲಿ, ತ್ಯಜತ ಪರೇಷ್ವ ಅಕ್ರಮ ಅಕ್ರಮಣಂ ಅಂದರೆ ಬೇರೆ ದೇಶಗಳ ಮೇಲೆ ಅಕ್ರಮ ಆಕ್ರಮಣಗಳು ನಿಲ್ಲಲಿ ಎಂದು. "ಮೈತ್ರೀಮ್ ಭಜತ" ಕೃತಿ ಕೂಡ ವಿಶ್ವಸಂಸ್ಥೆಯ ಧ್ಯೆಯವನ್ನು ಪ್ರತಿಬಿಂಬಿಸುವುದನ್ನು ನಾವು ಮತ್ತೆ ಮತ್ತೆ ಗಮನಿಸಬೇಕಾದ ಅಂಶ. 



ಸುಬ್ಬುಲಕ್ಷ್ಮಿ ಅವರಿಗೆ ಪ್ರತಿಸ್ಪರ್ಧಿಗಳು ಇತ್ತಿಲ್ಲ ಎಂದೇನಲ್ಲ. ಹೆಸರಾಂತ ವಿದುಷಿಯರಾದ ಡಿ.ಕೆ.  ಪಟ್ಟಮ್ಮಾಳ್ ಅವರು ಮತ್ತು ಎಂ.ಎಲ್. ವಸಂತ ಕುಮಾರಿಯವರು ಸುಬ್ಬಲಕ್ಷ್ಮಿ ಅವರ ಸಮಕಾಲೀನರೇ. ಡಿ.ಕೆ. ಪಟ್ಟಮಾಳ್ ಅವರು ಲಯ ವಿಶೇಷಕ್ಕೆ ಹೆಸರುವಾಸಿಯಾದರೆ, ಮನೋಧರ್ಮ ಸಂಗೀತಕ್ಕೆ ಎಂ.ಎಲ್. ವಸಂತ ಕುಮಾರಿ ಅವರು ಹೆಸರುವಾಸಿಯಾಗಿದ್ದವರು.  ಎಲ್ಲರನ್ನೂ ಮೀರಿಸಿದ ಭಕ್ತಿ ಸಂಗೀತ ಸುಬ್ಬಲಕ್ಷ್ಮಿ ಅವರದ್ದು. 




ಸುಬ್ಬುಲಕ್ಷ್ಮಿಯವರು ಶಂಕರಾಚಾರ್ಯರ ಹಲವು ಕೃತಿಗಳನ್ನು ಹಾಡಿದ್ದಾರೆ.  ಅವುಗಳಲ್ಲಿ "ಭಜ ಗೋವಿಂದಂ" ಕೃತಿ ತುಂಬಾ ಜನಪ್ರಿಯವಾದುದು. 


ಕನ್ನಡ ಅರ್ಥ ಸಮೇತ

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ನಿನ್ನ ವ್ಯಾಕರಣ ಜ್ಞಾನ, ನಿನ್ನ ಅಪಾರ ವಿದ್ಯೆ ನಿನ್ನನ್ನು ಕಾಪಾಡುವುದಿಲ್ಲ. 

ಭಜಗೋವಿಂದಂ ಕೃತಿಯ ಸಂದೇಶವನ್ನು ಸಾರುವ ಒಂದು ಹಾಸ್ಯಭರಿತ ಲೌಕಿಕ ಕಥೆ ಈಗ ಪ್ರಜ್ಞಳಿಂದ. 

ಒಂದು ಉಪಕಥೆ ಪ್ರಜ್ಞಳಿಂದ 

೬೦ರ ದಶಕದಲ್ಲಿ ಸುಬ್ಬುಲಕ್ಷ್ಮಿ ಅವರು ಪ್ರಕಟಿಸಿದ ಮತ್ತೊಂದು ಅನರ್ಘ್ಯ ರತ್ನವೆಂದರೆ, ಸ್ವಾತಿ ತಿರುನಾಳ್ ಮಹಾರಾಜರ ಕೃತಿಯಾದ "ಭಾವಯಾಮಿ ರಘುರಾಮಮ್".  ಸಂಪೂರ್ಣ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸಿದವರು ಸುಬ್ಬಲಕ್ಷ್ಮಿ ಅವರು. 
ಅದನ್ನೀಗ ಕೇಳೋಣ. 

ರಾಗಂ: ರಾಗಮಾಲಿಕಾ

ತಾಳಂ: ರೂಪಕಂ

ಸಂಯೋಜಕ:   ಸ್ವಾತಿ ತಿರುನಾಳ್

ಆವೃತ್ತಿ: ಎಂ ಎಸ್ ಸುಬ್ಬಲಕ್ಷ್ಮಿ

 

ಪಲ್ಲವಿ :   (SAVERI) :                [ARO: S R1 M1 P D1 S ||   AVA: S N3 D2 P M1 G3 R1 S   ||    ,

ಭಾವಯಾಮಿ ರಾಹುರಾಮಂ ಭವ್ಯ ಸುಗುಣರಾಮಮ್

 

ಅನುಪಲ್ಲವಿ : (SAVERI)

ಭಾವುಕವುತರನಪರಾ ಅಪಂಗಲೀಲಾಲಸಿತಮ್

 

ಚರಣಂಗಳು :

ನಟ್ಟಕುರಂಜಿ (ಬಾಲಕಂಡಂ )     [ARO: S R2 G3 M1 N2 D2 N2 P D2 N2 S || 

    AVA: S N2 D2 M1 G3 R2 G3 M2 P G3 R2 S   ||    ,

ದಿನಕರವಾಯತಿಲಕಂ ದಿವ್ಯಗಾದಿಸುತಾಸವನ

ವಾನರಚಿತಸುಬಾಹುಮುಖ ವದಮಹಲ್ಯಾಪಾವನಮ್

ಅನಾಗಮೀಶಚಾಪಭಂಗಂ ಜನಕಸುತಪ್ರಾಣೇಶಮ್

ಘನಕುಪಿತಭೃಗುರಾಮ ಗರ್ವಾಹಮಿತಾಸಕೇತಮ್

 

ಧನ್ಯಾಸಿ (ಅಯೋಧ್ಯಾಕಾಂಡಂ)     [ARO: S G2 M1 P N2 S   ||   AVA: S N2 D1 P M1 G2 R1 S   ||    ,

ವಿಹತಮಭಿಷೇಕಮದಃ ವಿಪಿನಾಗತಮರ್ಯವಚಃ

ಸಹಿತಾಸೀತಾ ಸೌಮಿತ್ರೀಂ ಸನ್ತತಮಶೀಲಮ್

ಗುಹಾನಿಲಯಾಗತಾಂ ಚಿತ್ರಕೂಟಗಾಥಾಭಾರತದತ್ತಾ

ಮಹಿತರತ್ನಮಯಪಾದುಕಾ ಮದನ ಸುಂದರಾಂಗಮ್


ಭಾವಯಾಮಿ ಕೃತಿಯನ್ನು ಮನಸಿಟ್ಟು ಕೇಳಿದರೆ ರಾಮಾಯಣದ ಎಲ್ಲಾ ಘಟನೆಗಳು ಕಣ್ಣಿಗೆ ಕಟ್ಟಿದಂತೆ ನಮ್ಮ ಮುಂದೆ ಬಂದು ಹಾದುಹೋಗುತ್ತವೆ. 

ರಾಮಾಯಣದಲ್ಲಿ ಸಾಕ್ಷಾತ್ ರಾಮನೇ ಪೇಚಿಗೆ ಸಿಲುಕಿದ ಪ್ರಸಂಗವೊಂದರ ಕಥೆಯನ್ನು ಈಗ ಪ್ರಜ್ಞಾ ಹೇಳುತ್ತಾಳೆ. 




ಒಂದು ರಾಮಾಯಣದ ಕಥೆ ಪ್ರಜ್ಞಳಿಂದ 


೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ತಮಿಳ್ ನಾಡಿನ ಚೆನ್ನೈನಲ್ಲಿ ವಾಸಿಸ ತೊಡಗಿದರು.  ೧೯೯೭ರಲ್ಲಿ ಸುಬ್ಬಲಕ್ಷ್ಮಿ ಅವರ ಪತಿಯವರಾದ ಸದಾಶಿವಂ ಅವರು ನಿಧನರಾದರು. 

೧೯೯೮ರ ಅಟಲ್ ಬಿಹಾರಿ ವಾಜಪೇಯೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ರತ್ನದಿಂದ ಸುಬ್ಬಲಕ್ಷ್ಮಿ ಅವರ ಘನತೆ ಹೆಚ್ಚುವುದಿರಲಿ, ಸುಬ್ಬುಲಕ್ಷ್ಮಿ ಅವರಿಂದ ಭಾರತ ರತ್ನ ಪ್ರಶಸ್ತಿಯ ಘನತೆ  ಹೆಚ್ಚಿತ್ತೆಂದರೆ ತಪ್ಪಾಗಲಾರದು. 


೮೮ ವರ್ಷದ ತುಂಬು ಹಾಗು ಸಾರ್ಥಕ ಜೀವನ ನಡೆಸಿದ ಸುಬ್ಬುಲಕ್ಷ್ಮಿಯವರು ೨೦೦೪ರಲ್ಲಿ ಪರಮಾತ್ಮನ ಪಾದ ಸೇರಿದರು.  


ಇಲ್ಲಿಗೆ ನಮ್ಮ ಭಾರತ ರತ್ನ ಸುಬ್ಬುಲಕ್ಷ್ಮಿ ಅವರ ಹರಿಕಥೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ.  ಬಾಲಕಿಯರಾದ ನಮ್ಮನ್ನು ಆಶೀರ್ವದಿಸಿ ನಮ್ಮ ಹರಿಕಥೆಯನ್ನು ಕೇಳಿದ ತಮ್ಮೆಲ್ಲರಿಗೂ ಧನ್ಯವಾದಗಳು. 


ಮಂಗಳ 


-೦-೦-೦-೦-೦-೦-





















  ೧) ಸ್ವಾಗತ, ತಮ್ಮ ಆಶೀರ್ವಾದ 

೨) ಮಾಣಿಕ್ಯ ವೀಣಾಮ್ ಉಪಲಾಲಯಂತಿ ......... 


೩) ಮಾಣಿಕ್ಯ ವೀಣೆಯ ಕಥೆ - ಇದು ನಿಜವೇ? 

ಮಾಣಿಕ್ಯ ವೀಣೆ ನಿರ್ಜೀವಾದ್ದು.  ನೀವು ಹೋಗಿ 

ಎಂ ಎಸ್ ನಮ್ಮೊಡನ್ನಿದ್ದರು 


೪) ರೇವತಿ ಶಂಕರನ್ - ಎಂ. ಎಸ್. ಕುರಿತ ಮೊದಲ ಹರಿಕಥಾ - ಎಂ.ಎಸ್. ಅನುಮೋದನೆ 

ಸಾಕ್ಷಾತ್ ರಾಮನ ಮುಂದೆ ಲಾವಾ ಕುಶರು ರಾಮಾಯಣಡಾ ಕಥೆಯನ್ನು ಹಾಡಿದಂತೆ ೧೯೯೯. 

ನಾನು ಆ ಸಕಾಶಾತ್ ಪಾರ್ವತೀ ದೇವಿ ನುಡಿಸುವ ಮಾಣಿಕ್ಯ ವೀಣೆಯೆ? 

೫) ಮಧುರೈ ಷಣ್ಮುಗವಡಿವು ಸುಬ್ಬಲಕ್ಷ್ಮಿ , ಕುಂಜಮ್ಮ ಪೆಟ್ ನೇಮ್ 

ಸುಬ್ಬ = ಶುಭ 

ಮಲ್ಲಿಗೆ ಮಧುರೈ 

೧೬-೦೯-೨೦೧೬ ನ್ಯೂಮೆರೊಲೊಜಿ ವಿಶೇಷ 

ತಂದೆಯ ಬಗ್ಗೆ ನಿಖರವಾದ ಮಾಹಿತಿಯಿಲ್ಲ - ದೇವದಾಸಿ ಮನೆತನ 

ಎಂ ಎಸ್. ಅಳುತ್ತ ಇದ್ದದ್ದೇ ಶ್ರುತಿ. ಇದಕ್ಕೆ ಹಾಲು ಕೊಡ ಬೇಡ. 

ಒಬ್ಬ ಅಣ್ಣ, ಒಬ್ಬ ತಂಗಿ  ಶಕ್ತಿವೇಲ್, ವಾಡಿವಂಬಲ್ 

ಎಜುಕೇಶನ್ ೫ನೇ ತರಗತಿವರೆಗೆ ಮಾತ್ರ 

ತಾಯಿಯೇ ಮೊದಲ ಗುರು 

ಮನೆಯೇ ಮೊದಲ ಪಾಠ ಶಾಲೆ 

ಜನನಿ ತಾನೇ ಮೊದಲ ಗುರುವು 

ಜನನಿಯಿಂದ ಪಾಠ ಕಲಿತ 

ಜನರು ಧನಿರು - ಕುವೆಂಪು 

ಶ್ರೀ ಗಣನಾಥ ಸಿಂಧೂರ ವರ್ಣ 

೧೦ನೇ ವಯಸ್ಸಿಗೆ ಹಾಡುಗಾರಿಕೆ ಹಾಗೂ ವೀಣೆ ಎರಡರಲ್ಲೂ ಪರಿಣಿತಿ 

ತಾಯಿಯ ಕಚೇರಿಯ ನಡುವೆ ಪುಟ್ಟ ಬಾಲಕಿಯ ಹಾಡುಗಾರಿಕೆ 

ಯು ಮೇಡ್ ಮೇ ಫೀಲ್ ಬ್ಯಾಡ ಇನ್ಫರ್ವ್ಣ್ತ್ ಆ ಓಥೆರ್ಸ್ 

ಮಧುರೈನ ಸೇತುಪತಿ ಸ್ಕೂಲ್ - ಸುಬ್ರಮಣ್ಯ ಭಾರತೀ ಅಲ್ಲಿ ಶಿಕ್ಷಕರಾಗಿದ್ದವರು 

ಪ್ರಜ್ಞಾಳ ಕೀರ್ತನೆ ನೇ ವಯಸ್ಸಿಗೆ HMV ಅವರಿಂದ ಮೊದಲ ಕೀರ್ತನೆ ರೆಕಾರ್ಡಿಂಗ್ 

೧೦

೧೩ ವಯಸ್ಸಿಗೆ ಕಚೇರಿಗಳು 


೬) ಉಜ್ವಲ ಭವಿಷ್ಯಕ್ಕಾಗಿ ತಾಯಿಯ ಹೋರಾಟ 

ಅರಿಯಾಕುಡಿ, ಚೆಮ್ಬೈ, ಮೂಸೂರಿ, ಸೆಮ್ಮಂಗುಡಿ ಮುಂತಾದವರು ಅಮ್ಮನ ಮನೆಗೆ 

ಸೆಮ್ಮಂಗುಡಿಯಿಂದ ಕಲಿಕೆ. 

೭) ಕುಂಭಕೋಣಂ ಕುಂಭ ಮೇಳದಲ್ಲಿ ಕಚೇರಿಗೆ ಅವಕಾಶ 

ಕೆ. ಸುಬ್ರಮಣ್ಯಮ್ (ಪದ್ಮ ಸುಬ್ರಮಣ್ಯಮ್ ನಾಟ್ಯಗಾರ್ತಿ) ತಂದೆ ಸಂಚಾಲಕರು 

ವಲ್ಲದ ಮನಸ್ಸು , ಆದರೂ ಕೊಟ್ಟರು 

ಉದಾಸೀನ ಮಾಡಿ ಕೇಳದ ಸುಬ್ರಮಣ್ಯಮ್ ಮತ್ತೆ ಅವಕಾಶ ಕೊಟ್ಟು ಕೇಳಿದಾತೃ. 

ಹೊಗಳಿದರು 

೯) ತಾಯಿ ಮದ್ರಾಸ್ಗೆ ಕರೆದುಕೊಂಡು ಪೆಯನ್ನ 

ಬಾಡಿಗೆ ಮಾನೆ.  ವೀಣಾ ಧನಮ್ಮಾಳ್ ಆಶ್ರಯ  

ಅರಿಯಾಕುಡಿ ಬಾರದ್ದರಿಂದ ಎಂ. ಎಸ್. ಗೆ ಅವಕಾಶ 


೧೦) ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಯಲ್ಲಿ ಆಕಸ್ಮಿಕವಾಗಿ ಕಚೇರಿ ಪ್ರಾಪ್ತಿ ೧೯೩೬

ಸರೋಜಾ ದಳ ನೇತ್ರೀ 

ಪಿಟೀಲು ಚೌಡಯ್ಯ ನೆರವು , ಹೆಂಗಸರಿಗೆ ಬಾರಿಸುತಿತಿಲ್ಲ , ಹುಬ್ಬೇರಿದವು 

ಅಭೂತ ಪೂರ್ವ ಪ್ರಶಂಸೆ 

ಗಣ್ಯರ ಇರುವಿಕೆ , ಮೂಸುರಿ, ಚೆಮ್ಬೈ, ಟೈಗರ್ ವರದಾಚಾರ್  ವೀಣೆ ಸಾಂಬಶಿವ ಐಯ್ಯೆರ್ - ಮಾಣಿಕ್ಯ ವೀಣೆ ನಿನ್ನ ಕೊರಳಲ್ಲೇ ಇದೆ 

ಉಪಕಥೆ - ೧ 

೧೧) ಪತ್ರಕರ್ತರಾದ ಸದಾಶಿವಂ ಭೀತಿ, ಸಂದರ್ಶನೇ 

ಸದಾಶಿವಂ ಅವರೊಂದಿಗೆ ಗೆಳೆತನ 

೧೨) ಎಂ ಎಸ್. ಗೆ ೨೦, ತಾಯಿಯೊಡನೆ ಮದುರೈಗೆ ವಾಪಾಸ್. ಮದುವೆಗೆ ಏರ್ಪಾಡು. ಎಂ.ಎಸ್. ನಕಾರ. ಏಕಾಂಗಿಯಾಗಿ ಮದ್ರಾಸ್ಗೆ ಪಯಣ, ಸದಾಶಿವಂ ರವರಲ್ಲಿ ಆಶ್ರಯ.  ಆಗ ಎಂ.ಎಸ್. ಗೆ ೨೦ ವರ್ಷ 

೧೧)  ಶಕುಂತಳಾಯ್ ಸಿನಿಮಾ - ಸದಾಶಿವಂ ನಿರ್ಮಾಪಕ - ೧೯೩೮

ಖರಹರ ಪ್ರಿಯ ಹಾಡು - ೧೯೩೮

೧೯೪೦ - ವಿವಾಹ 

೧೨) ಮೀರಾ ಸಿನಿಮಾ - ತಮಿಳ್ ಮತ್ತು ಹಿಂದಿ ಭಾಷೆಗಳಲ್ಲಿ 

೧೯೪೪, ೧೯೪೫ ತಮಿಳ್ ಅಂಡ್ ಹಿಂದಿ 

ನೆಹರು, ಗಾಂಧಿ ಅವರಿಂದ ವೀಕ್ಷಣೆ, ಪ್ರಶಂಸೆ 

ನಾನು ಪ್ರಧಾನಿ ಮಾತ್ರ, ನೀನು ಸಂಗೀತದ ರಾಣಿ 

ಗಾಂಧಿ ಕೋರಿಕೆ ಮೇರೆಗೆ ವೈಷ್ಣವ ಜನತೋ 

ಗಾಂಧಿ ಸತ್ತನಂತರವು ಪ್ರಸಾರ 

ಅಕ್ಬರ್ ಕಥೆ ಪ್ರಾಜ್ಞಳಿಂದ 

ಎರಡು ಮೀರಾ ಹಾಡುಗಳು 

ಮೀರಾ ಹಾಗೂ ಸುಬ್ಬುಲಕ್ಷ್ಮಿಯರ ನಡುವಿನ ಸ್ವಾಮ್ಯ 

೧೩) ವೆಂಕಟೇಶ್ವರ ಸುಪ್ರಭಾತ - ಮನೆ ಮಾತಾದ ಎಂ.ಎಸ್. 

ಅದರ ಸಂಪೂರ್ಣ ಆದಾಯ TTD ನ್ ವೇದ ಪಾಠಶಾಲೆ ಗೆ 

ದಾನ ಧರ್ಮಕ್ಕೆ ಹೆಸರುವಾಸಿ 

ಬೆಂಗಳೂರು ನಾಗರತ್ನಮ್ಮ ನವರ ಕಥೆ 

೧೯೬೨ ಚೀನಾ ವಾರ್ 

ಕಚೇರಿಯಲ್ಲಿ ಕಲೆಕ್ಷನ್ 

೫ ಕೆಜಿ ಬಂಗಾರ ಕಥೆ ಪ್ರಜ್ಞಾ 

೧೩) UNO ದಲ್ಲಿ ಹಾಡುಗಾರಿಕೆ 

೧೯೬೬

ರಾಜಾಜಿ, ಇಂದಿರಾ ಗಾಂಧಿ ನೆರವು 

ಜಗದೋದ್ಧಾರನಾ , ದಸರಾ ಪದಗಳನ್ನು ಪ್ರಸಿದ್ಧಿಗೆ ತಂದದ್ದು 

ಮೈತ್ರೀಮ್ ಭಜತಾಂ 

ಬಡೇ ಗುಲಾಮ್ ಅಲಿ ಖಾನ್ ಸುಸ್ವರಲಕ್ಷ್ಮಿ ಸುಬ್ಬುಲಕ್ಷ್ಮಿ 

ಪಟ್ಟಮಲ್ ಲಯ 

ಎಂ ಎಲ್ ವಿ ಮನೋಧರ್ಮ 

ಎಂ.ಎಸ್. ಭಕ್ತಿ ಸಂಗೀತ 


೧೬) ೧೯೭೮ರ ಹೊತ್ತಿಗೆ ಆರ್ಥಿಕ ಕಷ್ಟ, ಬಂಗಲೆ ಮಾರಾಟ, ಬಾಡಿಗೆ ಮನೆಯಲ್ಲಿ ವಾಸ 

TTD ಯಿಂದ ಅನ್ನಮಾಚಾರ್ಯ 

ಪರಿಪೂರ್ಣತೆಗೆ ಆದ್ಯತೆ, ೨೦೦ ಬಾರಿ, ಈಗ ಒನ್ ವಾರಕ್ಕೆ ೨೦೦ ಕೀರ್ತನೆ 

ಶ್ರೀಮನ್ನಾ ನಾರಾಯಣ ಕೀರ್ತನೆ 

ವಲ್ಲದ ಮನಸ್ಸಿನಿಂದ ಹಣ ಸ್ವೀಕಾರ 

ಪೂರ್ಣ ಹಕ್ಕು ttd ಗೆ 

ಅನ್ನಮಾಚಾರ್ಯ ಮೂರ್ತಿ 


೧೯೯೮ರಲ್ಲಿ ಭಾರತ ರತ್ನ 

೨೦೦೪ರಲ್ಲಿ ಮರಣ 


೧೫) ಭಜ ಗೋವಿಂದಂ - ಉಪಕಥೆ - ೨ 


೧೬) ಭಾವಯಾಮಿ ರಘುರಾಮಮ್ 

ಭಾರತ ಸೀತೆ ಪಾದುಕೆ ಕಥೆ 


೧೭) ನಿವೃತ್ತಿ - ಸದಾಶಿವಂ ಸಾವು 


೧೮) ೨೦೦೪ ರಲ್ಲಿ ಮರಣ 

-೦-೦-೦-೦-೦-೦-