ಮುದಕಾರಾರ್ಥ -----------------------
---------------------------------------------------------------------------------------
ಎಲ್ಲರಿಗೂ ನಮಸ್ಕಾರ.
"ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ.
----------------------------------------------------------------------------------------------------------------------------------------
ಮಾಣಿಕ್ಯ ವೀಣಾ ಮುಫಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
-----------------------------------------------------------------------------------------------------------------------
ಪ್ರಜ್ಞಾಳಿಂದ ಒಂದು ಕಥೆ.
ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ. ಸರ್ವಾಲಂಕಾರ ಭೂಷಿತೆಯಾದ
ಪಾರ್ವತಿ ತನ್ನ ಮಾಣಿಕ್ಯ ವೀಣೆಯನ್ನು ನುಡಿಸುತ್ತಾ ಇರುತ್ತಾಳೆ.
-------------------------------------------------------------------------------------------------------------------------
ಸಭಿಕರೆ....... ಕಥೆಯನ್ನೇನೋ ನೀವೆಲ್ಲಾ ಕೇಳಿದಿರಿ. ರಾಮಾಯಣದ್ದೋ, ಮಹಾಭಾರತದ್ದೋ, ಭಾಗವತದ್ದೋ ಹರಿಕಥೆಯಾಗಿದ್ದರೆ ತಾವೆಲ್ಲ ನಾನು ಹೇಳಿದ ಕಥೆಯನ್ನು ಒಪ್ಪುತ್ತಿದ್ದೀರಿ.
------------------------------------------------------------------------------------------------------------------------
ಈಗ ಎಂ. ಎಸ್. ಅಮ್ಮನವರೇ ಹಾಡಿ ಜನಪ್ರಿಯಗೊಳಿಸಿರುವ ಅಣ್ಣಮ್ಮಚಾರ್ಯರ ಒಂದು ಕೃತಿಯನ್ನು ಕೇಳೋಣ.
ಶ್ರೀಮನ್ನಾರಾಯಣ----------------------
------------------------------------------------------------------------------------------------------------------------
ಭಾರತ ರತ್ನ "ಮಧುರೈ ಷಣ್ಮುಗವಡಿವು ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ. ತಾಯಿಯ ಹೆಸರು ಷಣ್ಮುಗವಡಿವು ಎಂದು.
--------------------------------------------------------------------------------------------------------------------
ಸುಬ್ಬುಲಕ್ಷ್ಮಿಯವರ ಸಂಗೀತ ಪಾಠ ಹೀಗೆ ಆರಂಭವಾಗಿತ್ತು.
ಶ್ರೀ ಗಣನಾಥ ಸಿಂಧೂರವರ್ಣ
***************************
******************************
*****************************
ವರವೀಣಾ ಮೃದು ಪಾಣಿ
**********************
*************************
ಕಮಲಾಜಾ ದಳ ವಿಮಲ ಸುನಯನ
****************************
*****************************
****************************
-------------------------------------------------------------------------------------------------------------------
೫ನೇ ತರಗತಿಗೆ ಶಾಲಾ ಶಿಕ್ಷಣ ಮೊಟಕಾದರೂ, ಸಂಗೀತ ಶಿಕ್ಷಣ ಮುಂದುವರೆಯುತ್ತಲೇ ಇತ್ತು. ಸುಶ್ರಾವ್ಯವಾದ ಕಂಠ, ಶಿಸ್ತುಬದ್ಧ ಲಯ ಜ್ಞಾನ ಸುಬ್ಬುಲಕ್ಷ್ಮಿಯವರಿಗೆ ರಕ್ತದಲ್ಲೇ ಬಂದಿತ್ತು. ೧೦ನೇ ವಯಸ್ಸಿಗೆ ಸುಬ್ಬುಲಕ್ಷ್ಮಿಯವರು ನೂರಾರು ಕೀರ್ತನೆಗಳನ್ನು ಸುಶ್ರಾವ್ಯಯಾಗಿ ಹಾಡಲು ಕಲಿತಿದ್ದರು.
-----------------------------------------------------------------------------------------------------------------------------
ಅವರು ಆ ದಿನ ಹೇಗೆ ಹಾಡಿದರು ಎಂಬುದನ್ನು ನನ್ನ ಹನ್ನೊಂದು ವರ್ಷದ ತಂಗಿ ಪ್ರಜ್ಞಾ ನಿಮಗೆ ಹಾಡಿ ತೋರಿಸುತ್ತಳೆ.
ಪ್ರಜ್ಞಾಳಿಂದ ಕೀರ್ತನೆ
----------------------------------------------------------------------------------------------------------------------------
ಷಣ್ಮುಗವಡಿವು ರವರ ಮಧುರೈ ಮನೆ ಸಂಗೀತದ ಕೇಂದ್ರವಾಗಿತ್ತು. ಸುಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಐಯಂಗಾರ್, ಮುಸಿರಿ ಸುಬ್ರಮಣ್ಯ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮುಂತಾದವರು ಆಗಾಗ ಷಣ್ಮುಗವಡಿವು ಅವರ ಮನೆಗೆ ಭೇಟಿ ನೀಡುವುದು
---------------------------------------------------------------------------------------------------------------------
ಬರೀ ಮದುರೈನಲ್ಲೇ ಕುಳಿತರೆ, ಅವಕಾಶಗಳು ಕಡಿಮೆ. ಮದ್ರಾಸಿಗೆ ವಲಸೆ ಹೋದರೆ ಹೆಚ್ಚು ಅವಕಾಶಗಳು ಸಿಗಬಹುದು ಎಂದು, ದೂರದ ಮದ್ರಾಸಿಗೆ ಮಗಳೊಂದಿಗೆ ವಲಸೆ ಹೊರಟವರು ತಾಯಿ ಷಣ್ಮುಗವಡಿವು.
------------------------------------------------------------------------------------------------------------------------------
ಸರೋಜಾ ದಳನೇತ್ರೀ.....
------------------------------------------------------------------------------------------------------------------------
-----------------------
ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು. ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ.
ಉಪಕಥೆ_(ಕಿಟ್ಟು ಸೀನು ಕಥೆ)_______
-------------------------------------------------------------------------------------------------------------------
ಮ್ಯೂಸಿಕ್ ಅಕಾಡೆಮಿ ಯ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿನ ಅನಂತರ ಸುಬ್ಬುಲಕ್ಷ್ಮಿ ಅವರ ಸಂದರ್ಶನ ಕೋರಿ ಹಲವಾರು ಪತ್ರಕರ್ತರು ಮುಂದೆ ಬಂದರು. ಹೀಗೆ ಬಂದವರೇ ಅಂದಿನ ಪತ್ರಕರ್ತರಾದ ಸದಾಶಿವಂ ಅವರು. ಸಂದರ್ಶನದ ನೆಪದಲ್ಲಿ ಹಲವು ಬಾರಿ ಸುಬ್ಬುಲಕ್ಷ್ಮಿ ಅವರನ್ನು ಭೇಟಿಯಾದ ಸದಾಶಿವಂ, ಸುಬ್ಬುಲಕ್ಷ್ಮಿ ಅವರಿಗೆ ಹತ್ತಿರದ ಗೆಳಯರಾದರು. ಸದಾಶಿವಂ ಅವರು ಅಷ್ಟುಹೊತ್ತಿಗಾಗಲೇ ಮದುವೆಯಾಗಿದ್ದವರಾದರೂ, ಸುಬ್ಬಲಕ್ಷ್ಮಿ ಅವರ ಗಾಯನ ಪ್ರತಿಭೆಗೆ ಮತ್ತು ಸೌಂದರ್ಯಕ್ಕೆ ಸದಾಶಿವಂ ಅವರು ಮಾರುಹೋಗಿದ್ದರು.
---------------------------------------------------------------------------------------------------------------------
ಮಗಳಿಗೆ ವಯಸ್ಸು ೨೦ ತುಂಬಿದ್ದರಿಂದ ತಾಯಿ ಷಣ್ಮುಗವಡಿವು ಆತಂಕಗೊಂಡಿದ್ದರು. ಮಗಳಿಗೆ ಮದುವೆಯೊಂದನ್ನು ಮಾಡಿಬಿಟ್ಟರೆ ತಾವು ಧನ್ಯಳೆಂದು ಭಾವಿಸಿದ ಷಣ್ಮುಗವಡಿವು ಮತ್ತೆ ಮದುರೈ ಅತ್ತ ಹೊರಟೇಬಿಟ್ಟರು.
----------------------------------------------------------------------------------------------------------------------
ಮದ್ರಾಸ್ ಗೆ ಬಂದಿಳಿದ ಸುಬ್ಬುಲಕ್ಷ್ಮಿ ಅವರು ಮೊದಲು ಬಾಗಿಲು ತಟ್ಟಿದ್ದೆ ಸದಾಶಿವಂ ಅವರ ಮನೆ. ಮುಂಚೆಯೇ ಮದುವೆಯಾಗಿದ್ದು ಎರಡು ಮಕ್ಕಳಿದ್ದ ಸದಾಶಿವಂ ರವರು ಸ್ವಲ್ಪವೂ ಹಿಂಜರಿಯದೆ ಸುಬ್ಬುಲಕ್ಷ್ಮಿ ಅವರಿಗೆ ಆಶ್ರಯ ಕೊಟ್ಟರು. ಸುಬ್ಬಲಕ್ಷ್ಮಿ ಅವರ ಸಂಗೀತ ಸಾಧನೆಗೆ ಬೆನ್ನೆಲುಬಾಗಿ ನಿಂತರು.
----------------------------------------------------------------------------------------------------------------------
ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು ತಯಾರಿಸುವ ಏರ್ಪಾಡು ಸದಾಶಿವಂ ಅವರದ್ದಾಗಿತ್ತು. ಸುಂದರ ಯುವತಿ ಸುಬ್ಬುಲಕ್ಷ್ಮಿ ಅವರು ಶಕುಂತಳೆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಅಂದಿನ ಕಾಲದಲ್ಲಿ ಸೌಂದರ್ಯದೊಂದಿಗೆ ಹಾಡುವ ಸಾಮರ್ಥ್ಯ ಇರವವರನ್ನು ಮಾತ್ರ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ನಾಯಕ ದುಷ್ಯಂತನ ಪಾತ್ರಕ್ಕೆ ಆಯ್ಕೆಯಾದವರು ಸುಪ್ರಸಿದ್ದ ಶಾಸ್ತ್ರೀಯ ಗಾಯಕ G.N. ಬಾಲಸುಬ್ರಮಣ್ಯಂ ಅವರು.
-----------------------------------------------------------------------------------------------------------------------
ತಮಿಳ್ ಹಾಡು
-----------------------------------------------------------------------------------------------------------------------
ತಂದೆ ಕಣ್ವರು ಇಲ್ಲದ ಸಮಯ. ಆಗ ಬೇಟೆಯಾಡುತ್ತಾ ಆಶ್ರಮವನ್ನು ಪ್ರವೇಶಿಸಿದವನು ಮಹಾರಾಜ ದುಷ್ಯಂತ. ದುಷ್ಯಂತನಿಗೆ ಮೊದಲ ನೋಟದಲ್ಲೇ ಶಕುಂತಲೆಯ ಮೇಲೆ ಪ್ರೇಮ ಉಂಟಾಗುತ್ತದೆ. ಶಕುಂತಲೆಗೆ ಕೂಡ ಮೊದಲ ನೋಟದಲ್ಲೇ ದುಷ್ಯಂತನ ಮೇಲೆ ಪ್ರೇಮ್ ಉಂಟಾಗುತ್ತದೆ. ಇಬ್ಬರೂ, ಗುಟ್ಟಾಗಿ ಗಾಂಧರ್ವ ವಿವಾಹವಾಗುತ್ತಾರೆ.
------------------------------------------------------------------------------------------------------------------------
ಶಕುಂತಲೆ ಸಿನಿಮಾದ ಭಾರಿ ಯಶಸ್ಸನ್ನು ಕಂಡ ನಿರ್ಮಾಪಕ ಸದಾಶಿವಂ ಅವರು ಮುಂದೆ "ಮೀರಾ" ಚಿತ್ರವನ್ನು ನಿರ್ಮಾಣವನ್ನು ಮಾಡುವ ಕನಸು ಕಂಡಿರುತ್ತಾರೆ. ಈ ನಡುವೆ ಸದಾಶಿವಂ ಅವರ ಮೊದಲ ಪತ್ನಿ ಅವರು ಮರಣಹೊಂದುತ್ತಾರೆ. ಸದಾಶಿವಂ ಅವರು ಸುಬ್ಬುಲಕ್ಷ್ಮಿ ಅವರನ್ನು ಮರು ವಿವಾಹ ಮಾಡಿಕೊಳ್ಳುತ್ತಾರೆ. ಸುಬ್ಬುಲಕ್ಷ್ಮಿ ಅವರಿಗಿಂತ ಸದಾಶಿವಂ ಅವರು ೧೫ ವರ್ಷಗಳಷ್ಟು ಹಿರಿಯರು
---------------------------------------------------------------------------------------------------------------------
೧೬ನೇ ಶತಮಾನದಲ್ಲಿ ಜನಿಸಿದ "ಮೀರಾ" ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದ ಹೆಣ್ಣು ಮಗಳು. ಬಾಲ್ಯದಿಂದಲೇ ಕೃಷ್ಣನ ಪರಮಭಕ್ತೆಯಾದ ಮೀರಾ, ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿರುತ್ತಾಳೆ.
-----------------------------------------------------------------------------------------------------------------------------
ಗಿರಿಧರ ಗೋಪಾಲ ಹಾಡು
----------------------------------------------------------------------------------------------------------------------------
ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ ವಾಸಿಸ ತೊಡಗುತ್ತಾಳೆ. ಮಾಹಾರಾಣಿಯಾದರೂ ಅರಮನೆಯನ್ನು ತೊರೆದು ಬಡ ಸಂತರು ಮತ್ತು ಬಡ ಜನಗಳೊಂದಿಗೆ ಇರುತ್ತಾ ಇದ್ದದ್ದು ಮಹಾರಾಜನಿಗೆ ಕೋಪವನ್ನು ತರಿಸುತ್ತದೆ. ಲೆಕ್ಕಿಸದೆ ಮೀರಾ ಜನಸಾಮಾನ್ಯರೊಂದಿಗೆ ಇದ್ದು ಅರಮನೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ.
ತನ್ನ ಕೃಷ್ಣಭಕ್ತಿ ಮತ್ತು ಸಂಗೀತದಿಂದ ಹೆಸರುವಾಸಿಯಾದ ಮೀರಾಳನ್ನು ಅಕ್ಬರ್ ಭೇಟಿಯಾದ ಕಥೆಯನ್ನು ಈಗ ನನ್ನ ತಂಗಿ ಪ್ರಜ್ಞಾ ಹೇಳುತ್ತಾಳೆ.
----------------------------------------------------------------------------------------------------------------------
ಪ್ರಜ್ಞಳಿಂದ ಅಕ್ಬರ್ ಕಥೆ
------------------------------------------------------------------------------------------------------------------------
ತಾವೇ ಮಹಾರಾಣಿಯಾಗಿದ್ದರು ಮೀರಾ ಅವರು ಜನ ಸಾಮಾನ್ಯರ ಪರವಾಗಿದ್ದರು ಮತ್ತು ಜನಸಾಮಾನ್ಯರ ನಡುವೆಯೇ ಬಾಳಿದರು ಎಂಬುದಕ್ಕೆ ನಾವೀಗ ಹಾಡುವ ಮೀರಾ ಭಜನೆಯೇ ಸಾಕ್ಷಿ.
ಕರಮ್ ಕೆ ಗತಿ ನ್ಯಾರಿ ಹಾಡು
----------------------------------------------------------------------------------------------------------------------------
ಕೃಷ್ಣಭಕ್ತಿ, ಸಂಗೀತ ಇದರಲ್ಲೇ ಮುಳುಗಿದ್ದ ಮೀರಾ ತನ್ನನ್ನು ಉದಾಸೀನ ಮಾಡುತ್ತಿದ್ದಳೆಂದು ಮೀರಾಳ ಪತಿಗೆ ಅನಿಸುತ್ತಾ ಇರುತ್ತೆ. ಇ---------------------------------------------------------------------------------------------------------------------
ಮೀರಾ ಸಿನಿಮಾ ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಜಯಭೇರಿ ಬಾರಿಸುತ್ತದೆ.
ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗೂ ಅತಿ ಹೆಚ್ಚು ಹೋಲಿಕೆ ಇರುವುದನ್ನು ಸಭಿಕರು ಗಮನಿಸಬೇಕು.
------------------------------------------------------------------------------------------------------------------------
ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ, ಪ್ರಧಾನಿ ನೆಹರು, ಸರೋಜಿನಿ ನಾಯ್ಡು
--------------------------------------------------------------------------------------------------------------------------
Vaishnav jan to tene kahiye jay
Vaishnav jan to tene kahiye jay
peerh paraaye janney ray
Uttishta Narasardula karthavyam dhaivamanhikam.
ಒಂದು ರಾಮಾಯಣದ ಕಥೆ ಪ್ರಜ್ಞಳಿಂದ
-----------------------------------------------------------------------------------------------------------------------------------------------
ಶ್ರೀ ರಂಗ ಗದ್ಯವನ್ನು ಸುಶ್ರಾವ್ಯವಾಗಿ ಹಾಡಿ ಬೆಳಕಿಗೆ ತಂದವರು ಸುಬ್ಬಲಕ್ಷ್ಮಿ ಅವರು. ಶ್ರೀ ರಂಗ ಗದ್ಯವನ್ನು ರಚಿಸಿದವರು ಸಾಕ್ಷಾತ್ ಶ್ರೀ ರಾಮಾನುಜಾಚಾರ್ಯರೇ. ರಾಮಾನುಜಾಚಾರ್ಯರ ಶ್ರೀರಂಗ ಗದ್ಯದಿಂದ ಸ್ಫೂರ್ತಿಪಡೆದೆ, ಮುಂದೆ ತಮಿಳ್ ಸಂತರಾದ ವೇದಾಂತ ದೇಶಿಕರ್ ಅವರು 'ರಘುವೀರ ಗದ್ಯ'ವನ್ನು ರಚಿಸಿದ್ದು. ವೇದಾಂತ ದೇಶಿಕರ್ ಅವರು ತಮಿಳ್ ನಾಡಿನ ತಿರುವಹಿಂದ್ರಾಪುರಮ್ ನ ಕೋದಂಡರಾಮ ಪರಮ ಭಕ್ತರು. ಅವರು ರಘುವೀರ ಗದ್ಯದಲ್ಲಿ ವರ್ಣಿಸಿರುವುದು ಕೋದಂಡರಾಮನ ಶೌರ್ಯದ ವೀರಾವೇಶವನ್ನು. ರಾಮಾಯಣ ಯುದ್ಧದಲ್ಲಿ ಒಮ್ಮೆ........
ರಘುವೀರ ಗದ್ಯವನ್ನು ಪ್ರಥಮ ಭಾರಿಗೆ ಹಾಡಿ ಜನಪ್ರಿಯಗೊಳಿಸಿದವರೂ ಎಂ. ಎಸ್. ಅಮ್ಮನವರೇ. ಅದನ್ನೀಗ ಕೇಳೋಣ.
ಜಯ ಜಯ ಮಹಾವೀರ.
--------------------------------------------------------------------------------------------------------------------------------------
ಉತ್ತರ ಪ್ರದೇಶದ ತುಳಸಿದಾಸರು ಶ್ರೀರಾಮನ ಪರಮಭಕ್ತರು. ಶ್ರೀ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ಬರೆದ ಕೀರ್ತಿ ತುಳಸೀದಾಸರಿಗೆ ಸಲ್ಲುತ್ತದೆ. ತುಳಸೀದಾಸರ ಹನುಮಾನ್ ಚಾಲೀಸವನ್ನು ಮೊದಲ ಬಾರಿಗೆ ಹಾದಿ ಜನಪ್ರಿಯಗೊಳಿಸಿದವರು ನಮ್ಮ ಭಾರತರತ್ನ ಸುಬ್ಬುಲಕ್ಷ್ಮಿ ಅವರು. ಹನುಮಾನ್ ಚಲಿಸದ ರಚನೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಅದನ್ನೀಗ ಕೇಳೋಣ.
ಪ್ರಜ್ಞಾಳಿಂದ ಅಕ್ಬರ್-ತುಳಸೀದಾಸರ ಕಥೆ.
-------------------------------------------------------------------------------------------------------------------------------------
ಹನುಮಾನ್ ಚಾಲೀಸಾ ಹಾಡುಗಾರಿಕೆ
------------------------------------------------------------------------------------------------------------------------------------------------
ಭೂಮಿ ಮತ್ತು ಸೂರ್ಯನ ನಡುವಿನ ದೂರ, ಹನುಮಾನ್ ಚಲಿಸದಲ್ಲಿ. - ಗೌರಿಯಿಂದ
---------------------------------------------------------------------------------------------------------------------------------------------------
೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ತಮಿಳ್ ನಾಡಿನ ಚೆನ್ನೈನಲ್ಲಿ ವಾಸಿಸ ತೊಡಗಿದರು. ೧೯೯೭ರಲ್ಲಿ ಸುಬ್ಬಲಕ್ಷ್ಮಿ ಅವರ ಪತಿಯವರಾದ ಸದಾಶಿವಂ ಅವರು ನಿಧನರಾದರು.
೧೯೯೮ರ ಅಟಲ್ ಬಿಹಾರಿ ವಾಜಪೇಯೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ರತ್ನದಿಂದ ಸುಬ್ಬಲಕ್ಷ್ಮಿ ಅವರ ಘನತೆ ಹೆಚ್ಚುವುದಿರಲಿ, ಸುಬ್ಬುಲಕ್ಷ್ಮಿ ಅವರಿಂದ ಭಾರತ ರತ್ನ ಪ್ರಶಸ್ತಿಯ ಘನತೆ ಹೆಚ್ಚಿತ್ತೆಂದರೆ ತಪ್ಪಾಗಲಾರದು.
ಮಂಗಳ
madhyamavati shloka
-೦-೦-೦-೦-೦-೦-
No comments:
Post a Comment