Monday, 15 September 2025

M S Subbulakshmi - Ramalalitha Kendra - Sep 20th

 


ಮುದಕಾರಾರ್ಥ -----------------------

---------------------------------------------------------------------------------------

ಎಲ್ಲರಿಗೂ ನಮಸ್ಕಾರ. 

 "ಭಾರತ ರತ್ನ ಎಂ.ಎಸ್. ಸುಬ್ಬುಲಕ್ಷ್ಮಿ" ಅವರ  ಹರಿಕಥೆಗೆ ತಮಗೆಲ್ಲರಿಗೂ ಸುಸ್ವಾಗತ. 

 ನಮ್ಮ ತಂಡದ  ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದ ಅತಿ ಮುಖ್ಯವಾದದ್ದು. ಕಳೆದ ೧೬ರ೦ದೇ ಭಾರತ ರತ್ನ ಸುಬ್ಬುಲಕ್ಷ್ಮಿ ಅವರ ಜನ್ಮದಿನವಾಗಿತ್ತು. ನಾಲ್ಕು ದಿನ ಹೆಚ್ಚಿಸಿ ಈ ದಿನ ನಮ್ಮ ಶ್ರೀ ರಾಮಲಲಿತ ಕಲಾ ಮಂದಿರದ ಮುಖ್ಯಸ್ಥರಾದ ಶ್ರೀ ಎಂ.ಆರ್.ಯೋಗಾನಂದರವರು ಎಂ.ಎಸ್.ಸುಬ್ಬುಲಕ್ಷ್ಮಿಯವರ ಜನ್ಮದಿನವನ್ನು ಆಚರಿಸುತ್ತಿರುವುದು ಬಹಳ ಸಂತೋಷದ ವಿಷಯ. ಹಾಗು ಎಂ.ಎಸ್.ಸುಬ್ಬುಲಕ್ಷ್ಮೀರವರನ್ನು ಕುರಿತಾದ ಹರಿಕಥೆಯನ್ನು ನಡೆಸಿಕೊಡಲು ನಮ್ಮ ತಂಡಕ್ಕೆ ಅವಕಾಶ ನೀಡಿರುವುದು ಇನ್ನೂ ಸಂತೋಷವಾದ ವಿಷಯ. ಶ್ರೀ ರಾಮಲಲಿತಾ ಕಲಾಮಂದಿರದ ಎಲ್ಲಾ ಪದಾಧಿಕಾರಿಕರಿಗಳಿಗೂ ನಮ್ಮ ಹೃತ್ಪೂರ್ವಕ ನಮನಗಳು. 

----------------------------------------------------------------------------------------------------------------------------------------

ಮಾಣಿಕ್ಯ ವೀಣಾ ಮುಫಲಾಲಯಂತೀಂ

ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಆಆ......
ಮಾಣಿಕ್ಯ ವೀಣಾಂ ಉಪಲಾಲಯಂತೀಂ
ಮದಾಲಸಾಂ ಮಂಜುಲ ವಾಗ್ವಿಲಾಸಾಂ
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ......
ಮಾಹೇಂದ್ರ ನೀಲದ್ಯುತಿ ಕೋಮಲಾಂಗೀಂ

ಮಾತಂಗಕನ್ಯಾಂ ಮನಸಾಸ್ಮರಾಮೀ....ಈ..
ಮನಸಾಸ್ಮರಾಮೀ

-----------------------------------------------------------------------------------------------------------------------

ಒಂದು ದಿನ ಕೈಲಾಸದಲ್ಲಿ ಸಾಕ್ಷಾತ್ ಪರಮೇಶ್ವರ ಕುಳಿತಿರುತ್ತಾನೆ. ಸರ್ವಾಲಂಕಾರ ಭೂಷಿತೆಯಾದ 

ಪಾರ್ವತಿ ತನ್ನ ಮಾಣಿಕ್ಯ ವೀಣೆಯನ್ನು ನುಡಿಸುತ್ತಾ  ಇರುತ್ತಾಳೆ.  ತನ್ನ ಮಾಣಿಕ್ಯ ವೀಣೆಯ ನಾದ-

ಮಾಧುರ್ಯಕ್ಕೆ ತಾನೇ ಪರವಶಳಾದ ಪಾರ್ವತಿ ಶಿವನಿಗೆ ಹೇಳುತ್ತಳೆ.......  "ಪ್ರಭು, ನನ್ನ ಮಾಣಿಕ್ಯ ವೀಣೆಯ ನಾದಮಾಧುರ್ಯಕ್ಕೆ ನಾನು ಮಾರು ಹೋಗಿದ್ದೇನೆ. ಈ ಮಾಣಿಕ್ಯ ವೀಣೆಯ ನಾದ ಮಾಧುರ್ಯ ನನ್ನ ತವರಾದ ಭೂಲೋಕದ ಜನರಿಗೂ ದೊರಕುವಂತಾಗಲಿ. ನನ್ನ ಮಾಣಿಕ್ಯ ವೀಣೆಯನ್ನು ಹೆಣ್ಣೊಂದರ ರೂಪದಲ್ಲಿ ಭೂಲೋಕಕ್ಕೆ ಏಕೆ ಕಳುಹಿಸಬಾರದು?"

ಶಿವನು ಉತ್ತರಿಸುತ್ತಾ "ಎಲ್ಲವನ್ನು ನೀನೆ ನಿರ್ಧಾರ ಮಾಡಿರುತ್ತೀಯ. ನನ್ನ ಅನುಮತಿಯನ್ನು ನೆಪ ಮಾತ್ರಕ್ಕೆ ಕೇಳುತ್ತೀಯಾ. ನಿನ್ನಿಷ್ಟದಂತೆ ನಿನ್ನ ಮಾಣಿಕ್ಯ ವೀಣೆಯ ಅವತಾರ ಹೆಣ್ಣೊಂದರ ರೂಪದಲ್ಲಿ ಭೂಲೋಕದಲ್ಲಾಗಲಿ" ಎಂದು ಅಭಯವಿತ್ತನಂತೆ. 

ಪಾರ್ವತಿ ದೇವಿ ಮುಂದುವರೆದು " ಸ್ವಾಮಿ, ನನ್ನ ಈ ಮಾಣಿಕ್ಯ ವೀಣೆ ನಿರ್ಜೀವ ವಸ್ತು.  ಇದಕ್ಕೆ ಏನೇನೂ ತಿಳಿಯದು. ಭೂಲೋಕದಲ್ಲಿ ನನ್ನ ಮಾಣಿಕ್ಯ ವೀಣೆಯ ರಕ್ಷಣೆಗಾಗಿ ತಾವೇ ಹೋಗಬೇಕು" ಎನ್ನುತ್ತಾಳೆ.  "ತಥಾಸ್ತು" ಎಂದು ಪರಮೇಶ್ವರ ಅನುಮೋದಿಸುತ್ತಾನೆ. 

ಕೆಲವು ದಿನಗಳನಂತರ ಪಾರ್ವತಿ ದೇವಿ ನಾರದರನ್ನು ಕರೆದು "ನಾರದರೆ, ನನ್ನ ಮಾಣಿಕ್ಯ ವೀಣೆ, ಲೋಕಕಲ್ಯಾಣಕ್ಕೆಂದು ಭೂಲೋಕದಲ್ಲಿ  ಹೆಣ್ಣಾಗಿ ಜನಿಸಿದೆ. ಆ ಹೆಣ್ಣು ಎಲ್ಲಿದೆ, ಹೇಗಿದೆ ಎಂದು ಪತ್ತೆ ಮಾಡಿ. ಬಂದು ನನಗೆ ವಿಷಯ ತಿಳಿಸಿ" ಎಂದು ಆಜ್ಞಾಪಿಸುತ್ತಳೆ. 

ಭೂಲೋಕಕ್ಕೆ ಪ್ರಯಾಣ ಮಾಡಿದ ನಾರದರು ಮೊದಲು ಬಂದಿದ್ದು ಹಿಮಾಲಯ ಪರ್ವತದ ಶಿಖರಕ್ಕೆ. ಕೊರೆಯುವ ಚಳಿ, ತುಪಾಕಿ ಗುಂಡುಗಳ ನಡುವೆ ಮಾಣಿಕ್ಯ ವೀಣೆ ಇರಲಾರಳೆಂದು,  ನಾರದರು ದಕ್ಷಿಣಕ್ಕೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಮಲ್ಲಿಗೆಯ ಸುವಾಸನೆ ಅವರ ಗಮನ ಸೆಳೆಯುತ್ತದೆ. ನೇರವಾಗಿ ಅವರು ಬಂದಿಳಿದದ್ದು ಮೀನಾಕ್ಷಿ ಸುಂದರೇಶ್ವರರ ವಾಸಸ್ಥಾನವಾದ ಮಧುರೈಗೆ. ಪಕ್ಕದಲ್ಲೇ ಇದ್ದ ಹನುಮಂತರಾಯರ ಬೀದಿಯ ಒಂದು ಪುಟ್ಟ ಮನೆಯಿಂದ  ಹೆಣ್ಣು ಕೂಸೊಂದರ  ಶ್ರುತಿಬದ್ದವಾದ ಅಳು ಕೇಳಿಬರುತ್ತೆ. ಮಾರು ವೇಷದಲ್ಲಿ ಆ ಮನೆಯನ್ನು ಪ್ರವೇಶಿಸಿದ ನಾರದರು ಮಗುವಿನ ತಾಯಿಯನ್ನು, ಮಗುವಿನ ಹೆಸರು ಏನೆಂದು ಕೇಳುತ್ತಾರೆ.  "ಸುಬ್ಬುಲಕ್ಷ್ಮಿ" ಎಂದು ತಾಯಿ ಉತ್ತರಿಸುತ್ತಾಳೆ. "ಸುಬ್ಬುಲಕ್ಷ್ಮಿ"ಯೇ ಪಾರ್ವತಿದೇವಿಯ ಮಾಣಿಕ್ಯ ವೀಣೆಯ ಅವತಾರವೆಂದು ತಿಳಿದ ನಾರದರು ಹಿರಿಹಿಗ್ಗಿ ಹೋಗುತ್ತಾರೆ.  ಪಕ್ಕದಲ್ಲೇ ಇರುವ ಮದ್ರಾಸಿನಲ್ಲಿ ಪರಮೇಶ್ವರರ ಅಂಶಧಾರಿಯಾದ "ಸದಾಶಿವಂ" ಎಂಬ ಬಾಲಕನ ಜನನವೂ  ಆಗಿರುವುದು ನಾರದರ ಗಮನಕ್ಕೆ ಬರುತ್ತದೆ. 

-------------------------------------------------------------------------------------------------------------------------

ಸಭಿಕರೆ....... ಕಥೆಯನ್ನೇನೋ ನೀವೆಲ್ಲಾ ಕೇಳಿದಿರಿ. ರಾಮಾಯಣದ್ದೋ, ಮಹಾಭಾರತದ್ದೋ, ಭಾಗವತದ್ದೋ ಹರಿಕಥೆಯಾಗಿದ್ದರೆ ತಾವೆಲ್ಲ ನಾನು ಹೇಳಿದ ಕಥೆಯನ್ನು ಒಪ್ಪುತ್ತಿದ್ದೀರಿ. ಇಂದಿನ ಕಥೆ ನಮ್ಮೊಡನೆ ಬದುಕಿ ಬಾಳಿದ ಸುಬ್ಬುಲಕ್ಷ್ಮಿಯವರದ್ದು. ಸಭೆಯಲ್ಲಿರುವ ಹಲವು ಹಿರಿಯರು ಸುಬ್ಬಲಕ್ಷ್ಮಿಯವರನ್ನು ಪ್ರತ್ಯಕ್ಷವಾಗಿ ನೋಡಿದ್ದೀರಿ, ಅವರ ಸಂಗೀತವನ್ನು ಕೇಳಿದ್ದೀರಿ. ನಾನು ಹೇಳಿದೆ ಕಥೆ ನಿಜವಿರಬಹುದೇ ಎಂಬ ಪ್ರಶ್ನೆ ತಮನ್ನು ಕಾಡುತ್ತಿದ್ದರೆ ಆಶ್ಚರ್ಯವಿಲ್ಲ. 

ಸುಬ್ಬಲಕ್ಷ್ಮಿಯವರನ್ನು ಕುರಿತು ಮೊದಲ ಬಾರಿಗೆ ಹರಿಕಥೆ ಮಾಡಿದವರೆಂದರೆ "ಹರಿಕಥಾ ವಿದುಷಿ , ಸಂಗೀತ ವಿದುಷಿ ರೇವತಿ ಶಂಕರನ್" ರವರು. ನಾನು ಹೇಳಿದ ಮಾಣಿಕ್ಯ ವೀಣೆಯ ಕಥೆಯ ಪರಿಕಲ್ಪನೆ ರೇವತೀರವರದ್ದು. ರಾಮಾಯಣ ಕಾಲದಲ್ಲಿ ಲವಕುಶರು ಹೇಗೆ ರಾಮನ ಸಮ್ಮುಖದಲ್ಲೇ ರಾಮಾಯಣದ ಹರಿಕಥೆ ಮಾಡಿದರೋ, ಹಾಗೆ ರೇವತಿಯವರು ೧೯೯೯ರಲ್ಲಿ ಎಂ.ಎಸ್. ಸುಬ್ಬಲಕ್ಷ್ಮಿಯವರ ಸಮ್ಮುಖದಲ್ಲೇ ಸುಬ್ಬಲಕ್ಷ್ಮಿಯವರ ಹರಿಕಥೆಯನ್ನು ಮಾಡಿದ್ದವರು. ಸುಬ್ಬುಲಕ್ಷ್ಮಿಯವರು ತಾವೇ ಮಾಣಿಕ್ಯ ವೀಣೆಯ ಅವತಾರವೆಂದು ಕೇಳಿ ನಸುನಕ್ಕರಂತೆ. ಹರಿಕಥೆಯನಂತರ ರೇವತಿಯವರನ್ನು ಆಶೀರ್ವದಿಸಿದ ಸುಬ್ಬುಲಕ್ಷ್ಮಿಯವರು "ನಾನು ಮಾಣಿಕ್ಯ ವೀಣೆಯ ಅವತಾರವೇ" ಎಂದು ಹೇಳುತ್ತಾ ಸಂತೋಷಪಟ್ಟರಂತೆ. 

ಈಗ ಎಂ. ಎಸ್. ಅಮ್ಮನವರೇ ಹಾಡಿ ಜನಪ್ರಿಯಗೊಳಿಸಿರುವ ಅಣ್ಣಮ್ಮಚಾರ್ಯರ ಒಂದು ಕೃತಿಯನ್ನು ಕೇಳೋಣ. 

---------------------------------------------------------------------------------------------------------------------

ಶ್ರೀಮನ್ನಾರಾಯಣ---------------------- 

------------------------------------------------------------------------------------------------------------------------

ಭಾರತ ರತ್ನ "ಮಧುರೈ ಷಣ್ಮುಗವಡಿವು  ಸುಬ್ಬುಲಕ್ಷ್ಮಿ"ಯವರು ಜನಿಸಿದ್ದು ತಮಿಳ್ನಾಡಿನ ಮಧುರೈನಲ್ಲಿ. ತಾಯಿಯ ಹೆಸರು ಷಣ್ಮುಗವಡಿವು ಎಂದು. ಷಣ್ಮುಗವಡಿವು ರವರು "ದೇವ ದಾಸಿ" ಕುಟುಂಬಕ್ಕೆ ಸೇರಿದ ಹೆಣ್ಣು ಮಗಳು. ಹಾಗಾಗಿ ಸುಬ್ಬುಲಕ್ಷ್ಮಿಯವರ ತಂದೆ ಯಾರು ಎಂಬುದಕ್ಕೆ ಖಚಿತ ಮಾಹಿತಿ ಇಲ್ಲ. ತಾಯಿಯ ಹೆಸರಲ್ಲೇ, ತಾಯಿಯ ನೆರಳಲ್ಲೇ ಬೆಳೆದವರು ಸುಬ್ಬುಲಕ್ಷ್ಮಿ. 

ಸುಬ್ಬುಲಕ್ಷ್ಮಿಯವರು ಜನಿಸಿದ್ದು ೧೬-೦೯-೧೯೧೬ರಂದು. ನ್ಯೂಮ್ಯಾರೊಲೊಜಿ ತಿಳಿದವರಿಗೆ ೧೬ರ ಮಹತ್ವ ಗೊತ್ತು. ೧೬ ಎಂದರೆ ೧ + ೬ = ೭, ಸಪ್ತಸ್ವರಗಳು ಎಂದರ್ಥ. ೯ ಎಂಬುದು ನವರಸಗಳ ಪ್ರತೀಕ. ಅಂದರೆ ಸುಬ್ಬುಲಕ್ಷ್ಮಿ ಅವರಿಗೆ ಸಪ್ತಸ್ವರಗಳು ಕರಗತವಾಗಿದ್ದವು ಮತ್ತು ಸಪ್ತ ಸ್ವರಗಳ ಮೂಲಕ ಅವರು ನವರಸಗಳನ್ನೂ ಸಮರ್ಪಕವಾಗಿ ವ್ಯಕ್ತ ಪಡಿಸುತ್ತಿದ್ದರು ಎಂದರ್ಥ. 

ಸುಬ್ಬುಲಕ್ಷ್ಮಿ ಅವರು ತಮ್ಮ ಹೆಸರಿಗೆ ತಕ್ಕಂತೆ ಬಾಳಿದವರು.  "ಸುಬ್ಬು" ಅಥವಾ "ಸುಬ್ಬ" ಎಂಬುದು ಸಂಸ್ಕೃತದ "ಶುಭ" ಎಂಬ ಪದದ ತದ್ಭವ. ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತಾ, ಸಂತೋಷ ಪಡಿಸುತ್ತಾ ಬಾಳಿದವರು ಸುಬ್ಬುಲಕ್ಷ್ಮಿ. 

ಸುಬ್ಬುಲಕ್ಷ್ಮಿಯವರಿಗೆ, ಶಕ್ತಿವೇಲು ಎಂಬ ಅಣ್ಣನೂ ಮತ್ತು vadivaambal ಎಂಬ ತಂಗಿಯೂ ಇದ್ದರು. 

ಸುಬ್ಬುಲಕ್ಷ್ಮಿಯವರನ್ನು ಪ್ರೀತಿಯಿಂದ ಅವರಮ್ಮ "ಕುಂಜಮ್ಮ, ಕುಂಜ" ಎಂದು ಕರೆಯುತ್ತಿದ್ದರು. 

ಷಣ್ಮುಗವಡಿವು ಅವರು ಸಂಗೀತ ವಿದುಷಿ. ಸುಬ್ಬುಲಕ್ಷ್ಮಿಯವರ ಅಜ್ಜಿಯಾದ ಅಕ್ಕಮ್ಮಾಳ್ ಕೂಡ ನುರಿತ ಪಿಟೀಲು ವಾದಕಿಯಾಗಿದ್ದವರು.  ಹೀಗೆ ಸುಬ್ಬುಲಕ್ಷ್ಮಿಯವರಿಗೆ ಸಂಗೀತ ಎನ್ನುವುದು ರಕ್ತದಲ್ಲೇ ಬಂದಿತ್ತು.  ಹಾಡುಗಾರಿಕೆ ಹಾಗು ವೀಣೆ ಎರಡರಲ್ಲೂ ಪರಿಣಿತಿ ಪಡೆದಿದ್ದ ಷಣ್ಮುಗವಡಿವು ಅವರು,  ಬರಿ ಮಧುರೈ ಪಟ್ಟಣವೇ ಏಕೆ, ದೂರದ ಮದ್ರಾಸಿನವರೆಗೂ ಹೋಗಿ ಕಚೇರಿಗಳನ್ನು ನೀಡುವಷ್ಟು ಪರಿಣಿತಿ ಹೊಂದಿದ್ದವರು ಅವರು.  ಹಾಗಾಗಿ ತಾಯಿಯಾದ ಷಣ್ಮುಗವಡಿವು ರವರೇ ಸುಬ್ಬುಲಕ್ಷ್ಮಿಯವರ ಮೊದಲ ಸಂಗೀತ ಗುರು. 

"ಮನೆಯೇ ಮೊದಲ ಪಾಠಶಾಲೆ 

ಜನನಿ ತಾನೇ ಮೊದಲ ಗುರುವು 

ಜನನಿಯಿಂದ ಪಾಠ ಕಲಿತ 

ಜನರು ಧನ್ಯರು"

ಎಂಬ ಕುವೆಂಪು ರವರ ವಾಣಿಯಂತೆ ತಾಯಿಯಿಂದ ಸಂಗೀತ ಪಾಠ ಕಲಿತೇ ಸುಬ್ಬುಲಕ್ಷ್ಮಿ ಯವರು ಪ್ರಸಿದ್ಧಿಯನ್ನು ಪಡೆದರು ಎಂದರೆ ತಪ್ಪಾಗಲಾರದು. 

--------------------------------------------------------------------------------------------------------------------

ಸುಬ್ಬುಲಕ್ಷ್ಮಿಯವರ ಸಂಗೀತ ಪಾಠ ಹೀಗೆ ಆರಂಭವಾಗಿತ್ತು. 

ಶ್ರೀ ಗಣನಾಥ  ಸಿಂಧೂರವರ್ಣ 

***************************
******************************
*****************************

ವರವೀಣಾ ಮೃದು ಪಾಣಿ 

**********************

*************************

ಕಮಲಾಜಾ ದಳ ವಿಮಲ ಸುನಯನ 

****************************

*****************************

****************************

-------------------------------------------------------------------------------------------------------------------

ಹೀಗೆ ಸುಬ್ಬುಲಕ್ಷ್ಮೀರವರ ಸಂಗೀತ ಶಿಕ್ಷಣ ಆರಂಭವಾಯಿತು.  ೫ನೇ ತರಗತಿಗೆ ಶಾಲಾ ಶಿಕ್ಷಣ ಮೊಟಕಾದರೂ, ಸಂಗೀತ ಶಿಕ್ಷಣ ಮುಂದುವರೆಯುತ್ತಲೇ ಇತ್ತು. ಸುಶ್ರಾವ್ಯವಾದ ಕಂಠ, ಶಿಸ್ತುಬದ್ಧ ಲಯ ಜ್ಞಾನ ಸುಬ್ಬುಲಕ್ಷ್ಮಿಯವರಿಗೆ ರಕ್ತದಲ್ಲೇ ಬಂದಿತ್ತು. ೧೦ನೇ ವಯಸ್ಸಿಗೆ ಸುಬ್ಬುಲಕ್ಷ್ಮಿಯವರು ನೂರಾರು ಕೀರ್ತನೆಗಳನ್ನು ಸುಶ್ರಾವ್ಯಯಾಗಿ ಹಾಡಲು ಕಲಿತಿದ್ದರು. 

ಅಂದಿನ ಕಾಲದಲ್ಲಿ "ಸೇತುಪತಿ ಶಾಲೆ" ಎಂಬುದು ಮಧುರೈನ ಹೆಸರುವಾಸಿಯಾದ ಶಾಲೆ.  ಸ್ವತಂತ್ರ ಹೋರಾಟಗಾರ, ಸಂಗೀತಗಾರ ಸುಬ್ರಮಣ್ಯ ಭಾರತಿಯವರು ಆ ಶಾಲೆಯ ಮೇಷ್ಟ್ರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ಒಂದು ದಿನ ಆ ಶಾಲೆಯಲ್ಲಿ ಷಣ್ಮುಗವಡಿವು ಅವರ ವೀಣಾ ವಾದನ ಕಚೇರಿ ನಡೆಯುತಿತ್ತು. ಕಾರ್ಯಕ್ರಮದ ಕಡೆಯ ಹೊತ್ತಿಗೆ ಷಣ್ಮುಗವಡಿವು ಅವರು, ಹತ್ತಿರದಲ್ಲೇ ಮಣ್ಣಿನಲ್ಲಿ ಆಟವಾಡುತ್ತಿದ್ದ ತಮ್ಮ ಮಗಳಾದ ಸುಬ್ಬುಲಕ್ಷ್ಮಿಯವರನ್ನು ವೇದಿಕೆಗೆ ಕರೆಯುತ್ತಾರೆ. ವೇದಿಕೆ ಏರಿದ ಮಗುವಿಗೆ ಹಾಡುವಂತೆ ಹೇಳುತ್ತಾರೆ.  

ಈಗಿನ ಕಾಲದ ಮಕ್ಕಳಿಗೆ ಅವರ ತಂದೆತಾಯಂದಿರು ಸಾವಿರಾರು ರುಪಾಯೀ ಫಿ ಕೊಟ್ಟು ಸಂಗೀತ ಪಾಠ ಹೇಳಿಸುತ್ತಿರುತ್ತಾರೆ. ಆದರೂ, ಇಂತಹ  ಸಂದರ್ಭಗಳಲ್ಲಿ ಈಗಿನ ಕಾಲದ ಹೆಚ್ಚು ಮಕ್ಕಳು ಹಾಡಲು ಹಿಂಜರಿಯುತ್ತಾರೆ. ಎಲ್ಲರೆದುರು "ಹಾಡು" ಎಂದು ಹೇಳಿದಕ್ಕೆ ಸಿಟ್ಟಾಗುತ್ತಾರೆ.  'ಯು ಮೇಡ್ ಮೀ  ಟು ಫೀಲ್ ಬ್ಯಾಡ ಇನ್ ಫ್ರಂಟ್ ಆಫ್ ಆಲ್" ಎಂದು ಸಿಟ್ಟು ಪ್ರದರ್ಶಿಸುತ್ತಾ, ಇಂಗ್ಲಿಷ್ನಲ್ಲಿ ಡೈಲಾಗ್ ಕೂಡ ಹೊಡೀತಾರೆ. ಆದರೆ ನಮ್ಮ ಸುಬ್ಬುಲಕ್ಷ್ಮಿಯವರು ಹಾಗಿದ್ದ ಮಗುವಾಗಿತ್ತಿಲ್ಲ.  

ಷಣ್ಮುಗವಡಿವು ಅವರದ್ದೂ, ಬಡತನದ ಸಂಸಾರ. ಬಾಲಕಿ ಸುಬ್ಬುಲಕ್ಷ್ಮಿ ಅವರು ಹಾಕಿದ್ದೋ, ಮಾಸಿದ ಲಂಗ. ಷಣ್ಮುಗವಡಿವು ಅವರ ಹಳೆಯ ಸೀರೆಯಿಂದ ಹೊಲಿದಿದ್ದೋ ಏನೋ, ಬಾಲಕಿಯ ರೌಕೆ ತೋಳು ಒಂದು ಮೇಲೆ, ಒಂದು ತಳಗೆ. ಹಾಗೆಯೇ ಯಾವ ಹಿಂಜರಿಕೆಯೂ ಇಲ್ಲದೆ ಅಂದು ವೇದಿಕೆ ಏರಿದ್ದು ಬಾಲಕಿ ಸುಬ್ಬುಲಕ್ಷ್ಮಿ. 

ಲಂಗದ ಮೇಲಿನ ಮಣ್ಣು ಕೊಡವಿಕೊಂಡು,  ಯಾವ ಹಿಂಜರಿಕೆಯೂ ಇಲ್ಲದೆ ೧೦ ವರ್ಷದ ಬಾಲಕಿ ಸುಬ್ಬುಲಕ್ಷ್ಮಿ ಹಾಡಲು ಶುರು ಮಾಡುತ್ತಾರೆ.  ಅವರು ಆ ದಿನ ಹೇಗೆ ಹಾಡಿದರು ಎಂಬುದನ್ನು ನನ್ನ ಹನ್ನೊಂದು ವರ್ಷದ ತಂಗಿ ಪ್ರಜ್ಞಾ ನಿಮಗೆ ಹಾಡಿ  ತೋರಿಸುತ್ತಳೆ. 

---------------------------------------------------------------------------------------------------------------------------

ಪ್ರಜ್ಞಾಳಿಂದ ಕೀರ್ತನೆ 

----------------------------------------------------------------------------------------------------------------------------

ಷಣ್ಮುಗವಡಿವು ರವರ ಮಧುರೈ ಮನೆ ಸಂಗೀತದ  ಕೇಂದ್ರವಾಗಿತ್ತು. ಸುಪ್ರಸಿದ್ಧ ಸಂಗೀತಗಾರರಾದ ಅರಿಯಾಕುಡಿ ರಾಮಾನುಜ ಐಯಂಗಾರ್, ಮುಸಿರಿ ಸುಬ್ರಮಣ್ಯ ಅಯ್ಯರ್, ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮುಂತಾದವರು ಆಗಾಗ ಷಣ್ಮುಗವಡಿವು ಅವರ ಮನೆಗೆ ಭೇಟಿ ನೀಡುವುದು ಸಾಮಾನ್ಯವಾಗಿತ್ತು. ಅವರುಗಳ ಪೈಕಿ ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ರವರಿಂದ ಸುಬ್ಬುಲಕ್ಷ್ಮಿ ಸಂಗೀತದ ಹೆಚ್ಚಿನ ಅಭ್ಯಾಸ ಮಾಡಿದರು. ಹಾಗಾಗಿ ತಾಯಿಯೇ ಸುಬ್ಬುಲಕ್ಷ್ಮಿ ಅವರ ಮೊದಲ ಗುರುವಾದರೆ,  ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು  ಸುಬ್ಬುಲಕ್ಷ್ಮಿಯವರಿಗೆ ನಂತರದ  ಸಂಗೀತ ಗುರುಗಳು. 

ಮಗಳು ಸುಬ್ಬುಲಕ್ಷ್ಮಿಯ ಸಂಗೀತ ಸಾಮರ್ಥ್ಯದ ಬಗ್ಗೆ ತಾಯಿ ಷಣ್ಮುಗವಡಿವು  ಅವರಿಗೆ ಅಪಾರ ಭರವಸೆ ಇತ್ತು.  ಹಾಗಾಗಿ ಮಗಳಿಗೆ ಕಚೇರಿಯ ಅವಕಾಶ ನೀಡುವಂತೆ ಮಧುರೈನ ಎಲ್ಲಾ ಪ್ರಮುಖರಿಗೂ ಷಣ್ಮುಗವಡಿವು ಕೇಳಿಕೊಳ್ಳುತ್ತಿದ್ದರು. ತಮಗೆ ಬಂದ ಅವಕಾಶಗಳನ್ನೂ ಮಗಳಿಗೆ ನೀಡುತ್ತಿದ್ದರು.  ಹೀಗಾಗಿ ಸುಬ್ಬಲಕ್ಷ್ಮಿಯವರು ತಮ್ಮ ೧೩ನೇ ವಯಸ್ಸಿಗೆ ಸಂಗೀತ ಕಚೇರಿಗಳನ್ನು ನೀಡಲು ಆರಂಭಿಸಿದರು. ಸುಶ್ರಾವ್ಯವಾದ ಕಂಠಸಿರಿಯ ಜೊತೆಗೆ ಸುಬ್ಬುಲಕ್ಷ್ಮಿ ಅವರ ಸೌಂದರ್ಯವೂ ಜನರನ್ನು ಆಕರ್ಷಿಸತೊಡಗಿತು. 

ಬರೀ ಮದುರೈನಲ್ಲೇ ಕುಳಿತರೆ, ಅವಕಾಶಗಳು ಕಡಿಮೆ. ಮದ್ರಾಸಿಗೆ ವಲಸೆ ಹೋದರೆ ಹೆಚ್ಚು ಅವಕಾಶಗಳು ಸಿಗಬಹುದು ಎಂದು, ದೂರದ ಮದ್ರಾಸಿಗೆ ಮಗಳೊಂದಿಗೆ ವಲಸೆ ಹೊರಟವರು ತಾಯಿ ಷಣ್ಮುಗವಡಿವು.   ಆಗ ತಾಯಿ ಮಗಳಿಗೆ ಆಶ್ರಯ ನೀಡಿದವರು ವೀಣಾ ಧನಮ್ಮಾಳ್.  ವೀಣಾ ಧನಮ್ಮಾಳ್ ಕೂಡ ಒಬ್ಬ ದೇವದಾಸಿ ಮನೆತನದ ಹೆಣ್ಣು ಮಗಳು.  ಆದರೇನು? ಆಕೆ ಆಗಿನ ಕಾಲದ ಸುಪ್ರಸಿದ್ದ ವೀಣಾ ಕಲಾವಿದೆ ಮತ್ತು ಹಾಡುಗಾರ್ತಿ. ಹೆಸರುವಾಸಿಯಾದ ಸಂಗೀತದ ಜೋಡಿ ಟಿ.ಬೃಂದಾ ಮತ್ತು ಟಿ.ಮುಕ್ತ ಅವರ ಮೊಮ್ಮಕ್ಕಳು. ಸುಪ್ರಸಿದ್ದ ನೃತ್ಯಗಾರ್ತಿ ಪದ್ಮ ವಿಭೂಷಣೇ ಬಾಲಸರಸ್ವತಿ ಕೂಡ ವೀಣಾ ಧನಮ್ಮಾಳ್ ಅವರ ಮೊಮ್ಮಗಳು.  ನೋಡಿದಿರಾ...... ದೇವದಾಸಿಯರ ಕುಟುಂಬವಾದರೇನು? ವೀಣಾ ಧನಮ್ಮಾಳ್ ಅವರ ಕುಟುಂಬ ಸರಸ್ವತಿಯ ಆವಾಸಸ್ಥಾನವಾಗಿತ್ತು. 

ತಾಯಿ ಷಣ್ಮುಗವಡಿವು ಅವರು ಶತಪ್ರಯತ್ನಪಟ್ಟರೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿ ಕಾರ್ಯಕ್ರಮ ಸುಬ್ಬುಲಕ್ಷ್ಮಿ ಅವರ ಪಾಲಿಗೆ ದೊರಕದಾಯಿತು. ವೀಣಾ ಧನಮ್ಮಾಳ್  ಅವರ ಶಿಫಾರಿಸು ಕೂಡ ಕೆಲಸ ಮಾಡದಾಯಿತು. ಸುಪ್ರಸಿದ್ದ ನರ್ತಕಿ ಪದ್ಮ ಸುಬ್ರಮಣ್ಯಮ್ಮು ಅವರ ತಂದೆ, ಟಿ. ಸುಬ್ರಮಣ್ಯಂರವರ ಪ್ರಯತ್ನದಿಂದಲೂ, ಸುಬ್ಬುಲಕ್ಷ್ಮಿ ಅವರಿಗೆ ಮದ್ರಾಸ್ಖ್ಯ ಮ್ಯೂಸಿಕ್ ಅಕಾಡೆಮಿಯ ಅವಕಾಶ ಸಿಕ್ಕಲೇ ಇಲ್ಲ. ಮುಖ್ಯ  ಕಾರಣವೇನೆಂದರೆ ಹೆಣ್ಣು ಮಕ್ಕಳು ಅಂದಿನ ಕಾಲದಲ್ಲಿ ದೊಡ್ಡ ವೇದಿಕೆಯೇರುವುದನ್ನು ಪುರುಷ ಪ್ರಧಾನ್ಯ ಸಮಾಜ ಸಹಿಸುತ್ತಿರಲಿಲ್ಲ. 

ಆದರೂ, ಅದೃಷ್ಟ ಎನ್ನವುದು ಸುಬ್ಬಲಕ್ಷ್ಮಿ ಅವರ ಪಾಲಿಗೆ ಇತ್ತೋ, ಏನೋ. ಕಡೆಗೂ ಮದ್ರಾಸ್ ಮ್ಯೂಸಿಕ್ ಅಕ್ಯಾಡೆಮಿಯ ಪೂರ್ವನಿಯೋಜಿತ ಕಾರ್ಯಕ್ರಮಕ್ಕೆ ಸುಪ್ರಸಿದ್ದ ಹಾಡುಗಾರ ಅರಿಯಾಕುಡಿ ರಾಮಾನುಜ ಅಯ್ಯಂಗಾರ್ ಕಾರಣಾಂತರಗಳಿಂದ ಬರಲಾಗಲಿಲ್ಲ. ವಿಷಯ ತಿಳಿದದ್ದು ಕಾರ್ಯಕ್ರಮದ ಬೆಳ ಸಮಯದಲ್ಲಿ.  ಬೇರೆ ಮಾರ್ಗವಿಲ್ಲದೆ ಅಂದಿನ ಕಾರ್ಯಕರ್ತರು 

"ಆ ದಿನ ಬೇಕಾದರೆ ಸುಬ್ಬುಲಕ್ಷ್ಮಿ ಹಾಡಿಕೊಳ್ಳಲಿ" ಎಂದು ಆಜ್ಞಾಪಿಸಿದರು. ಆದರೇನು, ಪಕ್ಕ ವಾದ್ಯದವರು ಯಾರೂ ಸುಬ್ಬಲಕ್ಷ್ಮಿಯೊಂದಿಗೆ ನುಡಿಸಲು ಒಪ್ಪಲೇ ಇಲ್ಲ.  ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳಿಗೆ ಪಕ್ಕವಾದ್ಯ ನುಡಿಸುವುದೆಂದರೆ, ಒಂದು ನಿಕೃಷ್ಟ ಭಾವನೆ ಇತ್ತು. ಹೆಣ್ಣು ಮಕ್ಕಳು ಏನು ಹಾಡಿ ಯರು ಎಂಬ ಧೋರಣೆ ಬೇರೆ. ಮೇಲಾಗಿ, ಸುಬ್ಬುಲಕ್ಷ್ಮಿ ಅವರು ದೇವದಾಸಿ ಮನೆತನಕ್ಕೆ ಸೇರಿದವಳು ಎಂಬ ಕೀಳು ಭಾವನೆ ಬೇರೆ. ಅಂದು ಅಸಹಾಯಕರಾಗಿ ಕುಳಿತಿದ್ದ, ತಾಯಿ ಮಗಳ ನೆರವಿಗೆ ಬಂದವರು ನಮ್ಮ ಕರ್ನಾಟಕದ ಸುಪ್ರಸಿದ್ದ ಪಿಟೀಲು ವಾದಕರಾದ ಪಿಟೀಲು ಚೌಡಯ್ಯನವರು. ಆಗಿನ ಕಾಲಕ್ಕೆ ಮದ್ರಾಸಿನಲ್ಲೂ ಭಾರಿ ಹೆಸರು ಮಾಡಿದ್ದ ಹಿರಿಯ ಕಲಾವಿದರು ಚೌಡಯ್ಯನವರಾಗಿದ್ದರು. ಚೌಡಯ್ಯನವರ ಸ್ನೇಹಿತರೆಲ್ಲಾ, 'ನೋಡು ಚೌಡಯ್ಯ, ಗೊತ್ತುಗುರಿಯಿಲ್ಲದ ಹೆಣ್ಣುಮಕ್ಕಳಿಗೆಲ್ಲಾ ನೀನು ಪಕ್ಕವಾದ್ಯ ನುಡಿಸಲು ಆರಂಭಿಸಿದರೆ, ಮುಂದೆ ನಿನಗೆ ಕಚೇರಿಗಳು ಸಿಗದ ಹಾಗೆ ಆಗಬಹುದು, ಹುಷಾರ್' ಎಂದು ಎಚ್ಚರಿಸಿದರು, ಎದೆಗುಂದದೆ, ಸುಬ್ಬಲಕ್ಷ್ಮಿಯವರ ಹಿಂದೆ ಕಲ್ಲುಬಂಡೆಯಾಗಿ ಅವರ ಬೆಂಬಲಕ್ಕೆ ನಿಂತವರು ನಮ್ಮ ಚೌಡಯ್ಯನವರು.  ಪಾಲಿಗೆ ಬಂದ ಅವಕಾಶವನ್ನು ಅಪ್ಪಿಕೊಂಡ ಯುವತಿ ಸುಬ್ಬುಲಕ್ಷ್ಮಿ ವೇದಿಕೆಯನ್ನು ಏರೆಬಿಟ್ಟರು.  ಅಂದಿನ ಕಚೇರಿಗೆ ಸಾಕ್ಷಿಯಾದವರು ಚೆಮ್ಬೈ ವೈದ್ಯನಾಥ ಭಾಗವತರ್, ಮುಸುರಿ ಸುಬ್ರಮಣ್ಯ ಅಯ್ಯರ್ ಮುಂತಾದವರು.  ಆ ದಿನ ಸುಬ್ಬುಲಕ್ಷ್ಮಿ ಅವರ ಕಾರ್ಯಕ್ರಮ ಹೇಗಿತ್ತು ಎಂಬುದನ್ನು ನಾವೀಗ ನೋಡಣ . 

------------------------------------------------------------------------------------------------------------------------------

ಸರೋಜಾ ದಳನೇತ್ರೀ..... 

------------------------------------------------------------------------------------------------------------------------

ಯುವತಿ ಸುಬ್ಬಲಕ್ಷ್ಮಿ ಅವರು ಕಚೇರಿ ಇಡೀ ಅಮೋಘವಾಗಿ ಹಾಡಿ ಗೆದ್ದರು. ಎಲ್ಲಾ ಗಣ್ಯರು ಮುಕ್ತ ಕಂಠದಿಂದ ಸುಬ್ಬುಲಕ್ಷ್ಮಿ ಅವರನ್ನು "ಸಂಗೀತ ಕ್ಷೇತ್ರದ ಹೊಸ ನಕ್ಷತ್ರ" ಎಂದೇ ಬಣ್ಣಿಸಿದರು.  ವೀಣೆ ಸಾಂಬಶಿವ ಅಯ್ಯರ್ ಎಂಬುವರು ಸುಬ್ಬುಲಕ್ಷ್ಮಿ ಅವರ ಸಂಗೀತವನ್ನು ಪ್ರಶಂಸಿಸುತ್ತಾ "ಅಮ್ಮನವರ ಮಾಣಿಕ್ಯ ವೀಣೆ ಸುಬ್ಬುಲಕ್ಷ್ಮಿ ಅವರ ಕೊರಳಿನಲ್ಲೇ ಇದೆ" ಎಂದು ಹೇಳಿದರು. 

ಅಂದು ಸುಬ್ಬಲಕ್ಷ್ಮಿ ಅವರೊಡನೆ ಗೆದ್ದು ಬೀಗಿದವರು ಪಿಟೀಲು ಚೌಡಯ್ಯ ನವರು ಕೂಡ. ಸುಬ್ಬಲಕ್ಷ್ಮಿ ಅವರ ಯಶಸ್ಸಿಗೆ ಭದ್ರ ಬುನಾದಿ ಹಾಕಿ ಕೊಟ್ಟವರಲ್ಲಿ  ಒಬ್ಬ ಪ್ರಮುಖರು  ನಮ್ಮ ಚೌಡಯ್ಯ ನವರು ಮತ್ತು ಅವರು ಕನ್ನಡಿಗರು ಎಂಬುದನ್ನು ನಾವು ಮರೆಯುವಂತಿಲ್ಲ.

----------------------------------------------------------------------------------------------------------------------------- 

ಸಂಗೀತ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು.  ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ. 

ಉಪಕಥೆ_(ಕಿಟ್ಟು ಸೀನು ಕಥೆ)_______ 

-------------------------------------------------------------------------------------------------------------------

ಮ್ಯೂಸಿಕ್ ಅಕಾಡೆಮಿ ಯ ಕಾರ್ಯಕ್ರಮದ ಅಭೂತ ಪೂರ್ವ ಯಶಸ್ಸಿನ ಅನಂತರ ಸುಬ್ಬುಲಕ್ಷ್ಮಿ ಅವರ ಸಂದರ್ಶನ ಕೋರಿ ಹಲವಾರು ಪತ್ರಕರ್ತರು  ಮುಂದೆ ಬಂದರು.  ಹೀಗೆ ಬಂದವರೇ ಅಂದಿನ ಪತ್ರಕರ್ತರಾದ ಸದಾಶಿವಂ ಅವರು. ಸಂದರ್ಶನದ ನೆಪದಲ್ಲಿ ಹಲವು ಬಾರಿ   ಸುಬ್ಬುಲಕ್ಷ್ಮಿ ಅವರನ್ನು ಭೇಟಿಯಾದ ಸದಾಶಿವಂ, ಸುಬ್ಬುಲಕ್ಷ್ಮಿ ಅವರಿಗೆ ಹತ್ತಿರದ ಗೆಳಯರಾದರು. ಸದಾಶಿವಂ ಅವರು ಅಷ್ಟುಹೊತ್ತಿಗಾಗಲೇ ಮದುವೆಯಾಗಿದ್ದವರಾದರೂ, ಸುಬ್ಬಲಕ್ಷ್ಮಿ ಅವರ ಗಾಯನ ಪ್ರತಿಭೆಗೆ ಮತ್ತು ಸೌಂದರ್ಯಕ್ಕೆ ಸದಾಶಿವಂ ಅವರು ಮಾರುಹೋಗಿದ್ದರು. 

---------------------------------------------------------------------------------------------------------------------

ಮಗಳಿಗೆ ವಯಸ್ಸು ೨೦ ತುಂಬಿದ್ದರಿಂದ ತಾಯಿ ಷಣ್ಮುಗವಡಿವು ಆತಂಕಗೊಂಡಿದ್ದರು. ಮಗಳಿಗೆ ಮದುವೆಯೊಂದನ್ನು ಮಾಡಿಬಿಟ್ಟರೆ ತಾವು ಧನ್ಯಳೆಂದು ಭಾವಿಸಿದ ಷಣ್ಮುಗವಡಿವು ಮತ್ತೆ ಮದುರೈ ಅತ್ತ ಹೊರಟೇಬಿಟ್ಟರು. ದೇವದಾಸಿ ಮನೆಗಳಲ್ಲಿ ಮದುವೆ ಅಂದರೆ ಅದು ಬೇರೆಯ ಥರ. ಎಪ್ಪತ್ತರ ದಶಕದ "ಗೆಜ್ಜೆ ಪೂಜೆ" ಸಿನಿಮಾ ತಾವೆಲ್ಲ ನೋಡಿದೀರಿ. ಭಾರಿ ಶ್ರೀಮಂತ ವ್ಯಕ್ತಿಯೊಂದಿಗೆ ಸುಬ್ಬಲಕ್ಷ್ಮಿ ಅವರ ಮದುವೆ  ಅಲ್ಲ "ಗೆಜ್ಜೆ ಪೂಜೆ"ಗೆ ಏರ್ಪಾಡುಮಾಡಿ ನಿಂತಿದ್ದವರು ತಾಯಿ ಷಣ್ಮುಗವಡಿವು. ಮದುವೆಯಾಗೋ ವರನಿಗೆ ಮದುವೆ ಒಂದನೇಯದೋ, ಎರಡನೇಯದೋ, ಮೂರನೆಯದೋ.... ಯಾವುದನ್ನೂ ನೋಡುತ್ತಿರಲಿಲ್ಲ. ಅವನಿಗೆ ಎಷ್ಟು ವಯಸ್ಸು ಎಂಬುದು ನಗಣ್ಯವಾಗಿತ್ತು. ಮದುವೆ ದೊಡ್ಡ ಆಸ್ತಿವಂತನಾಗಿದ್ದರೆ ಸಾಕು, ಗೆಜ್ಜೆಪೂಜೆಯ ಮಾಡುವೆ ನಡೆದೇ ಹೋಗುತ್ತಿತ್ತು. 

 ಸುಬ್ಬುಲಕ್ಷ್ಮಿ ಅವರು ಎಷ್ಟು ವಿರೋಧಿಸಿದರೂ ತಾಯಿ ಕೇಳದಾದರು.  ಸಭಿಕರೆ_____ ಅಂತಹ ಸಂದರ್ಭದಲ್ಲಿ ಸುಬ್ಬುಲಕ್ಷ್ಮಿ ಅವರ ಮನಸಿನಲ್ಲಿ ಏಂತಹ ತೊಳಲಾಟ ಉಂಟಾಗಿರಬಹುದು ಎಂಬುದನ್ನು ಸ್ವಲ್ಪ ಯೋಚಿಸಿ. ಸಂಗೀತ ಕ್ಷೇತ್ರದಲ್ಲಿ ತನಗೆ ಉಜ್ವಲ ಭವಿಷ್ಯವಿದೆ ಎಂಬ ಆತ್ಮವಿಶ್ವಾಸವಿದ್ದ  ಸುಬ್ಬುಲಕ್ಷ್ಮಿ ಅವರು ದೃಢವಾದ ನಿರ್ಧಾರಕ್ಕೆ ಬಂದಿದ್ದರು. ಗಟ್ಟಿಗಿತ್ತಿ ಹೆಣ್ಣಾಗಿ ನಿಂತರು. ಸ್ತ್ರೀ ಶಕ್ತಿಯ ಪ್ರತಿರೂಪವಾಗಿ ನಿಂತ ಅವರು ಸಮಾಜದ ಕೆಟ್ಟ ಪದ್ದತಿಗೆ ಎದುರಾಗಿ ನಿಂತರು. ತಾಯಿಗೂ ತಿಳಿಯದಂತೆ ಗುಟ್ಟಾಗಿ ಮದ್ರಾಸ್ ರೈಲು ಹತ್ತೇಬಿಟ್ಟರು. ಗೆಜ್ಜೆ ಪೂಜೆ ಸಿನಿಮಾದ  ನಾಯಕಿ ಕಲ್ಪನಾ ಅವರು ಸೋತ ಸತ್ತರೆ, ಸುಬ್ಬುಲಕ್ಷ್ಮಿ ನಿಜ ಜೀವನದಲ್ಲಿ ಗೆದ್ದು ನಿಂತಿದ್ದರು. ಅಂದು ಗೆದ್ದಿದ್ದು ಸುಬ್ಬುಲಕ್ಷ್ಮಿ ಮಾತ್ರವಾಗಿರಲಿಲ್ಲ, ಅಂದು ಗೆದ್ದಿದ್ದು ಸಮಸ್ತ ಭಾರತದ ಹೆಣ್ಣುಮಕ್ಕಳ ಗೌರವ ಕೂಡ. 

----------------------------------------------------------------------------------------------------------------------

ಮದ್ರಾಸ್ ಗೆ ಬಂದಿಳಿದ ಸುಬ್ಬುಲಕ್ಷ್ಮಿ ಅವರು ಮೊದಲು ಬಾಗಿಲು ತಟ್ಟಿದ್ದೆ ಸದಾಶಿವಂ ಅವರ ಮನೆ. ಮುಂಚೆಯೇ ಮದುವೆಯಾಗಿದ್ದು ಎರಡು ಮಕ್ಕಳಿದ್ದ  ಸದಾಶಿವಂ ರವರು ಸ್ವಲ್ಪವೂ ಹಿಂಜರಿಯದೆ ಸುಬ್ಬುಲಕ್ಷ್ಮಿ ಅವರಿಗೆ ಆಶ್ರಯ ಕೊಟ್ಟರು. ಸುಬ್ಬಲಕ್ಷ್ಮಿ ಅವರ ಸಂಗೀತ ಸಾಧನೆಗೆ ಬೆನ್ನೆಲುಬಾಗಿ ನಿಂತರು. 

ವ್ಯವಹಾರ ಮತ್ತು ವಹಿವಾಟ್ಟು ಗಳಲ್ಲಿ  ಸದಾಶಿವಂರವರು ಸಿದ್ಧಹಸ್ತರಾಗಿದ್ದವರು. ಸುಬ್ಬುಲಕ್ಷ್ಮಿ  ಅವರ ಗಾಯನ ಸಾಮರ್ಥ್ಯ ಮತ್ತು ದೈವೀಕ ಸೌಂದರ್ಯದ ಬೆಲೆಯನ್ನು ಸದಾಶಿವಂ ಚೆನ್ನಾಗಿ ಅರಿತಿದ್ದರು. ಹಾಗಾಗಿ ೨೨ರ ಯುವತಿ ಸುಬ್ಬುಲಕ್ಷ್ಮಿ ಅವರನ್ನು ಸಿನಿಮಾ ನಾಯಕಿಯನ್ನಾಗಿಸುವ ಯೋಜನೆ ಸದಾಶಿವಂ ಅವರದಾಗಿತ್ತು. 

ತಮಿಳ್ ಭಾಷೆಯಲ್ಲಿ "ಶಕುಂತಳಯ್" ಸಿನಿಮಾವನ್ನು ತಯಾರಿಸುವ ಏರ್ಪಾಡು ಸದಾಶಿವಂ ಅವರದ್ದಾಗಿತ್ತು. ಸುಂದರ ಯುವತಿ ಸುಬ್ಬುಲಕ್ಷ್ಮಿ ಅವರು ಶಕುಂತಳೆ ಪಾತ್ರಕ್ಕೆ ಹೇಳಿಮಾಡಿಸಿದಂತ್ತಿದ್ದರು. ಅಂದಿನ ಕಾಲದಲ್ಲಿ ಸೌಂದರ್ಯದೊಂದಿಗೆ ಹಾಡುವ ಸಾಮರ್ಥ್ಯ ಇರವವರನ್ನು ಮಾತ್ರ ಸಿನಿಮಾಗಳಲ್ಲಿ ನಾಯಕಿಯನ್ನಾಗಿ ಆಯ್ಕೆ ಮಾಡುತ್ತಿದ್ದರು. ನಾಯಕ ದುಷ್ಯಂತನ ಪಾತ್ರಕ್ಕೆ ಆಯ್ಕೆಯಾದವರು ಸುಪ್ರಸಿದ್ದ ಶಾಸ್ತ್ರೀಯ  ಗಾಯಕ G.N. ಬಾಲಸುಬ್ರಮಣ್ಯಂ ಅವರು. 

ನಿಮಗೆಲ್ಲ ಶಕುಂತಳೆಯ ಕಥೆ ತಿಳಿದೇ ಇದೆ.  ಭಾರತದ ಎಲ್ಲ ಭಾಷೆಗಳಲ್ಲೂ ಹಲವು ಭಾರಿ ತೆರೆ ಕಂಡಿರುವ ಕಥೆ ಶಕುಂತಳೆಯದ್ದು.  

"ಅಭಿಜ್ಞಾನ ಶಾಕುಂತಲಂ" ಎಂಬುದು ಸಂಸ್ಕ್ರತದ ಮೇರು ಕವಿ ಕಾಳಿದಾಸರು ಬರೆದ ನಾಟಕ. ಋಷಿ  ವಿಶ್ವಾಮಿತ್ರ ಮತ್ತು ದೇವಲೋಕದ ಅಪ್ಸರೆ ಮೇನಕೆಯರ ಮಗಳು ಶಕುಂತಳೆ.  ಕಣ್ವ ಮಹರಿಷಿಗಳು ಶಕುಂತಳೆಯ ಸಾಕು ತಂದೆ. 

ಸುಂದರ ಯುವತಿಯಾಗಿ ಬೆಳೆದು ನಿಂತ ಶಕುಂತಲೆಗೆ ಅನಸೂಯಾ ಮತ್ತು ಪ್ರಿಯಂವದಾ ಎಂಬ ಇಬ್ಬರು ಸ್ನೇಹಿತೆಯರು. ಸುಂದರ ಯುವತಿಯಾದ ಶಕುಂತಲೆಗೆ ತನ್ನ ಪ್ರಿಯತಮನ ಆಗಮನದ ನೀರೀಕ್ಷೆ. ಆ ಭಾವನೆಗಳನ್ನು ವ್ಯಕ್ತಪಡಿಸುತ್ತಾ ಅಮೋಘವಾಗಿ ಅಭಿನಯಿಸಿದ ಸುಬ್ಬುಲಕ್ಷ್ಮಿ ಅಷ್ಟೇ ಅಮೋಘವಾಗಿ ಹಾಡಿದ್ದಾರೆ. 

-----------------------------------------------------------------------------------------------------------------------

ತಮಿಳ್ ಹಾಡು 

-----------------------------------------------------------------------------------------------------------------------

ತಂದೆ ಕಣ್ವರು ಇಲ್ಲದ ಸಮಯ. ಆಗ ಬೇಟೆಯಾಡುತ್ತಾ ಆಶ್ರಮವನ್ನು ಪ್ರವೇಶಿಸಿದವನು ಮಹಾರಾಜ ದುಷ್ಯಂತ. ದುಷ್ಯಂತನಿಗೆ ಮೊದಲ ನೋಟದಲ್ಲೇ ಶಕುಂತಲೆಯ ಮೇಲೆ ಪ್ರೇಮ ಉಂಟಾಗುತ್ತದೆ. ಶಕುಂತಲೆಗೆ ಕೂಡ ಮೊದಲ ನೋಟದಲ್ಲೇ ದುಷ್ಯಂತನ ಮೇಲೆ ಪ್ರೇಮ್ ಉಂಟಾಗುತ್ತದೆ.  ಇಬ್ಬರೂ, ಗುಟ್ಟಾಗಿ ಗಾಂಧರ್ವ ವಿವಾಹವಾಗುತ್ತಾರೆ. ವಿವಾಹದ ನೆನಪಿಗಾಗಿ ದುಷ್ಯಂತ, ಶಂಕುಂತಲೆಗೆ ಮುದ್ರೆಯುಂಗರವೊಂದನ್ನು ನೀಡಿರುತ್ತಾನೆ. ಈ ನಡುವೆ, ಶಕುಂತಲೆ ಗರ್ಭಿಣಿ ಕೂಡ ಆಗಿರುತ್ತಾಳೆ. ರಾಜ್ಯಭಾರದ ಒತ್ತಡದಿಂದ, ಮಹಾರಾಜಾ ದುಷ್ಯಂತ ತನ್ನ ರಾಜಧಾನಿಗೆ ಹಿಂದಿರುಗುತ್ತಾನೆ. ಬೇಗನೆ ತನ್ನ ಅರಮನೆಗೆ ಕರೆಸಿಕೊಳ್ಳುವುದಾಗಿ ದುಷ್ಯಂತ, ಶಕುಂತಲೆಗೆ ಆಶ್ವಾಸನೆಯನ್ನು ಕೊಟ್ಟಿರುತ್ತಾನೆ. ದುಷ್ಯಂತನ ನೆನಪಿನಲ್ಲೇ ಶಕುಂತಲೆ ಕಣ್ವರ ಆಶ್ರಮದಲ್ಲಿ ಕಾಲ ಕಳೆಯುತ್ತಿರುತ್ತಾಳೆ. 

ಈ ನಡುವೆ, ಒಂದು ದಿನ ಕಣ್ವರ ಆಶ್ರಮಕ್ಕೆ ಕೋಪಿಷ್ಠ ಮುನಿ ದೂರ್ವಾಸರ ಆಗಮನವಾಗುತ್ತದೆ. ದುಷ್ಯಂತನ ನೆನಪಿನಲ್ಲೇ ಮುಳುಗಿಹೋದಿದ್ದ ಶಕುಂತಲೆ, ಮುನಿ ದುರ್ವಾಸರ ಆಗಮನವನ್ನು ಗಮನಿಸುವುದೇ ಇಲ್ಲ. ಇದರಿಂದ ಕೋಪಗೊಂಡ ದೂರ್ವಾಸರು, ಶಂಕುಂತಲೆಗೆ ಶಾಪವನ್ನು ನೀಡಿ 'ಶಕುಂತಲೆ, ನೀನು ಯಾರ ನೆನಪಿನಲ್ಲಿ ನನ್ನನ್ನು ಗಮನಿಸದೆ ಹೋದೆಯೋ, ಅದೇ ವ್ಯಕ್ತಿ ನಿನ್ನನ್ನು ಮರೆಯುವಂತಾಗಲಿ' ಎಂದು ಶಾಪವನ್ನು ನೀಡಿತ್ತಾನೆ. ತನ್ನ ತಪ್ಪಿನ ಅರಿವಾದ ಶಕುಂತಲೆ, ದೂರ್ವಾಸರ ಕ್ಷಮೆಯನ್ನು ಬೇಡುತ್ತಾಳೆ. ದೂರ್ವಾಸರು ತಮ್ಮ ಶಾಪಕ್ಕೆ ಉಪಶಮನವೊಂದನ್ನು ಸೂಚಿಸುತ್ತಾರೆ. 'ದುಷ್ಯಂತ ನಿನಗೆ ನೀಡಿರುವ ಮುದ್ರೆಯುಂಗುರವನ್ನು ನೀನು ಅವನಿಗೆ ತೋರಿಸದರೆ, ಅವನಿಗೆ ನಿನ್ನ ನೆನಪಾಗುತ್ತದೆ' ಎಂದು ಶಾಪಕ್ಕೆ ಪರಿಹಾರವನ್ನು ದೂರ್ವಾಸರು ನೀಡುತ್ತಾರೆ. 

ಈ ಎಲ್ಲಾ ಘಟನೆಗಳು ಕಳೆದನಂತರ, ತಂದೆಯಾದ ಕಣ್ವರು ತಮ್ಮ ಆಶ್ರಮಕ್ಕೆ ಹಿಂದಿರುಗುತ್ತಾರೆ. ಶಕುಂತಲೆ-ದುಷ್ಯಂತರ ವಿವಾಹದ ಸುದ್ದಿಯನ್ನು ಕೇಳಿ, ಕಣ್ವರಿಗೆ ಸಂತೋಷವಾಗುತ್ತದೆ. ಗರ್ಭಿಣಿಯಾದ ಶಕುಂತಲೆಯನ್ನು, ಆಶ್ರಮದ ಮುನಿಗಳೊಂದಿಗೆ ದುಷ್ಯಂತನ ಅರಮನೆಗೆ ಕಳುಹಿಸುವ ಏರ್ಪಾಡನ್ನು ಋಷಿ ಕಣ್ವರು ಮಾಡುತ್ತಾರೆ. ಪ್ರಯಾಣದ ಮಾರ್ಗ ಮಧ್ಯೆ, ನದಿಯೊಂದರಲ್ಲಿ ಸ್ನಾನ ಮಾಡುವಾಗ ಶಂಕುಂತಲೆಯ ಮುದ್ರೆಯುಂಗರ ಅವಳ ಬೆರಳುಗಳಿಂದ ಜಾರಿಹೋಗಿರುತ್ತದೆ. ಅದು ಶಕುಂತಲೆಗೆ ಗೊತ್ತಾಗುವುದೇ ಇಲ್ಲ. 

ದುಷ್ಯಂತನನ್ನು ಅರಮನೆಯಲ್ಲಿ ಭೇಟಿಯಾದ ಶಂಕುಂತಲೆಯನ್ನು ದುಷ್ಯಂತ ಗುರುತಿಸುವುದೇ ಇಲ್ಲ. ಏಕೆಂದರೆ, ಮುನಿ ದೂರ್ವಾಸರ ಶಾಪ ಅವನಿಗೂ ತಟ್ಟಿರುತ್ತದೆ. ಮುನಿ ದೂರ್ವಾಸರ ಶಾಪ ಪರಿಹಾರದ ನೆನಪಾದ ಶಕುಂತಲೆ, ದುಷ್ಯಂತ ನೀಡಿದ ಮುದ್ರೆಯುಂಗರವನ್ನು ದುಷ್ಯಂತನಿಗೆ ತೋರಿಸಲು ತನ್ನ ಬೆರಳುಗಳನ್ನು ಮುಂದೆ ಚಾಚುತ್ತಾಳೆ.  ಆದರೆ ಅವಳ ಬೆರಳಿನಲ್ಲಿ ಮುಂದ್ರೆಯುಂಗುರ ಇರುವದೇ ಇಲ್ಲ. ದುಷ್ಯಂತನಿಂದ ತಿರಸ್ಕೃತಳಾದ ಶಕುಂತಲೆಯನ್ನು, ಕಣ್ವರ ಆಶ್ರಮದ ಋಷಿಮುನಿಗಳು ತಿರಸ್ಕರಿಸುತ್ತಾರೆ. 'ನಿನ್ನ-ರಾಜನ ವಿವಾಹದ ವಿಷಯ ನಿಜವಾದರೆ, ನೀನು ಅರಮನೆಯಲ್ಲೇ ಇರುತ್ತೀಯ, ಅದು ಸುಳ್ಳಾದರೆ ನಿನ್ನ ದಾರಿ ನಿನಗೆ, ನಮ್ಮ ದಾರಿ ನಮಗೆ' ಎಂದು ಹೇಳಿ ಋಷಿಮುನಿಗಳು ಶಕುಂತಲೆಯನ್ನು ಬಿಟ್ಟು ಹೋಗುತ್ತಾರೆ. 

ಎಲ್ಲರಿಂದಲೂ ದೂರವಾಗಿ, ಏಕಾಂಗಿಯಾದ ಶಕುಂತಲೆ ಬೇರೆ ಆಶ್ರಮವೊಂದನ್ನು ಸೇರುತ್ತಾಳೆ. ಈ ನಡುವೆ ಮೀನುಗಾರನೊಬ್ಬನಿಗೆ ಶಕುಂತಲೆಯ ಮುದ್ರೆಯುಂಗುರ, ಮೀನುಗಾರನೊಬ್ಬನಿಗೆ ಮೀನಿನ ಹೊಟ್ಟೆಯೊಂದರಲ್ಲಿ ದೊರಕ್ಕುತ್ತದೆ.  ಆ ಉಂಗುರ ರಾಜ ದುಷ್ಯಂತನಿಗೆ ಸೇರಿದ್ದು ಎಂದು ಗುರುತಿಸಿದ ಆ ಮೀನುಗಾರ, ಅದನ್ನು ರಾಜ ದುಷ್ಯಂತನಿಗೆ ಒಪ್ಪಿಸುತ್ತಾನೆ. ಮುಂದ್ರೆಯುಂಗುರವನ್ನು ನೋಡುತ್ತಲೇ, ದುಷ್ಯಂತನಿಗೆ ಶಕುಂತಲೆಯ ನೆನಪು ಮರುಕಳಿಸುತ್ತದೆ. ತನ್ನ ತಪ್ಪಿನ ಅರಿವಾದ ದುಷ್ಯಂತ ಶಕುಂತಲೆಗಾಗಿ ಹುಡುಕಾಡುತ್ತಾನೆ. ಕಡೆಗೆ ದುಷ್ಯಂತ-ಶಕುಂತಳೆಯರ ಮಿಲನವಾಗುತ್ತದೆ. ಜೊತೆಗೆ ರಾಜಕುಮಾರನಾದ ಭರತ ಕೂಡ.  ಮುಂದೆ ಚಕ್ರವರ್ತಿಯಾದ ಭರತನ ಹೆಸರನಿಂದಲೇ, ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿರುವುದು ಎಂಬುದನ್ನು ನಾವು ಇಲ್ಲಿ ಸ್ಮರಿಸಿಕೊಳ್ಳಬಹುದು.

ಶೃಂಗಾರ ರಸ ಪ್ರಧಾನವಾದ ಶಕುಂತಲೆಯ ಪಾತ್ರಕ್ಕೆ ಸುಬ್ಬುಲಕ್ಷ್ಮಿಯವರು ಹೇಳಿಮಾಡಿಸಿದ ನಟಿಯಾಗಿರುತ್ತಾರೆ. 

------------------------------------------------------------------------------------------------------------------------

ಶಕುಂತಲೆ ಸಿನಿಮಾದ ಭಾರಿ ಯಶಸ್ಸನ್ನು ಕಂಡ ನಿರ್ಮಾಪಕ ಸದಾಶಿವಂ ಅವರು ಮುಂದೆ "ಮೀರಾ" ಚಿತ್ರವನ್ನು ನಿರ್ಮಾಣವನ್ನು ಮಾಡುವ ಕನಸು ಕಂಡಿರುತ್ತಾರೆ. ಈ ನಡುವೆ ಸದಾಶಿವಂ ಅವರ ಮೊದಲ ಪತ್ನಿ ಅವರು ಮರಣಹೊಂದುತ್ತಾರೆ. ಸದಾಶಿವಂ ಅವರು ಸುಬ್ಬುಲಕ್ಷ್ಮಿ ಅವರನ್ನು ಮರು ವಿವಾಹ ಮಾಡಿಕೊಳ್ಳುತ್ತಾರೆ.  ಸುಬ್ಬುಲಕ್ಷ್ಮಿ ಅವರಿಗಿಂತ ಸದಾಶಿವಂ ಅವರು ೧೫ ವರ್ಷಗಳಷ್ಟು ಹಿರಿಯರು ಎಂಬುದು ಗಮನಿಸಬೇಕಾದ ವಿಷಯ. ತಾಯಿ ಮನೆಯನ್ನು ತೊರೆದು ಬಂದಿದ್ದ ಸುಬ್ಬುಲಕ್ಷ್ಮಿ ಅವರಿಗೆ ಬೇರೆ ಮಾರ್ಗವೇ ಇರಲಿಲ್ಲ. ಮತ್ತು ಸದಾಶಿವಂರವರೂ ಕೂಡ ಸುಬ್ಬಲಕ್ಷ್ಮಿ ಅವರಿಗೆ ಆಪ್ತರಾಗಿ ಹೋಗಿದ್ದರು. ಹಾಗಾಗಿ ಸುಬ್ಬುಲಕ್ಷ್ಮಿ ಮತ್ತು ಸದಾಶಿವಂರವರ ಮಾಡುವೆ ಅಂದು ನಡದೇ ಹೋಯಿತು. 

ತಮ್ಮ ಪತ್ನಿ ಸುಬ್ಬುಲಕ್ಷ್ಮಿ ಅವರನ್ನು ಇಡೀ ಭಾರತ ದೇಶದ ಮಹಾನ್ ನಾಯಕಿಯನ್ನಾಗಿಸುವ ಕನಸು ಕಂಡವರು ಸದಾಶಿವಂ ಅವರು. ಅದಕ್ಕಾಗಿಯೇ ಅವರು "ಮೀರಾ" ಚಿತ್ರದ ನಿರ್ಮಾಣವನ್ನು ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ  ಮಾಡುವ ಯೋಜನೆಯನ್ನು ಸಿದ್ಧಪಡಿಸುತ್ತಾರೆ. ಎರಡೂ ಚಿತ್ರಗಳಲ್ಲಿ "ನಾಯಕಿ ಮೀರಾ" ಆಗಿ ಅಭಿನಯಿಸಿದವರು ಸುಬ್ಬುಲಕ್ಷ್ಮಿ ಅವರು.  ಸುಶ್ರಾವ್ಯವಾದ ಕಂಠ ಮತ್ತು ಅಪಾರ ಸೌಂದರ್ಯ ಎರಡನ್ನು ಪಡೆದಿದ್ದ ಸುಬ್ಬುಲಕ್ಷ್ಮಿ, ಮೀರಾಳ ಪಾತ್ರಕ್ಕೆ ಹೇಳಿಮಾಡಿಸಿದವರಾಗಿರುತ್ತಾರೆ. 

---------------------------------------------------------------------------------------------------------------------

೧೬ನೇ ಶತಮಾನದಲ್ಲಿ ಜನಿಸಿದ "ಮೀರಾ" ರಾಜಸ್ಥಾನದ ರಜಪೂತ ವಂಶಕ್ಕೆ ಸೇರಿದ ಹೆಣ್ಣು ಮಗಳು.  ಬಾಲ್ಯದಿಂದಲೇ ಕೃಷ್ಣನ ಪರಮಭಕ್ತೆಯಾದ ಮೀರಾ, ಕೃಷ್ಣನನ್ನೇ ತನ್ನ ಪತಿಯೆಂದು ಭಾವಿಸಿರುತ್ತಾಳೆ. ದೊಡ್ಡವಳಾದ ಮೇಲೆ ಮೀರಾಳ ವಿವಾಹ ಭೋಜರಾಜ್ ಸಿಸೋಡಿಯಾ ಎಂಬ ರಜಪೂತ ರಾಜನೊಂದಿಗೆ ಆಗುತ್ತದೆ. ಮಹಾರಾಣಿಯಾದ ಅನಂತರವೂ ಮೀರಾಳ ಕೃಷ್ಣ ಭಕ್ತಿ ಮುಂದುವರೆದಿರುತ್ತದೆ.  ತನ್ನ ಪರಮ ದೈವಾದ ಗಿರಿಧರ ಗೋಪಾಲನಿಗೆ ದೇವಸ್ಥಾನ ಒಂದನ್ನು ಕಟ್ಟಿಸಬೇಕೆಂದು ಮೀರಾ ತನ್ನ ಗಂಡನಲ್ಲಿ ಪ್ರಾರ್ಥಿಸಿಕೊಳ್ಳುತ್ತಳೆ.  ಮಂದಿರದ ನಿರ್ಮಾಣವಾಗುತ್ತಲೇ ಮೀರಾ ಭಕ್ತಿಪರವಶಳಾಗಿ ಹಾಡುತ್ತಳೆ. ಆ ಹಾಡಿನ ಗಾಯನವೂ ಸುಬ್ಬುಲಕ್ಷ್ಮಿ ಅವರದ್ದೇ. 

-----------------------------------------------------------------------------------------------------------------------------

ಗಿರಿಧರ ಗೋಪಾಲ ಹಾಡು 

----------------------------------------------------------------------------------------------------------------------------

ಅರಮನೆಯನ್ನು ತೊರೆದು ಮೀರಾ ಭಕ್ತ ಜನರೊಡನೆ ಗಿರಿಧರ ಗೋಪಾಲನ ಮಂದಿರದಲ್ಲೇ ವಾಸಿಸ ತೊಡಗುತ್ತಾಳೆ. ಮಾಹಾರಾಣಿಯಾದರೂ ಅರಮನೆಯನ್ನು ತೊರೆದು ಬಡ ಸಂತರು ಮತ್ತು ಬಡ ಜನಗಳೊಂದಿಗೆ ಇರುತ್ತಾ ಇದ್ದದ್ದು ಮಹಾರಾಜನಿಗೆ ಕೋಪವನ್ನು ತರಿಸುತ್ತದೆ.  ಲೆಕ್ಕಿಸದೆ ಮೀರಾ ಜನಸಾಮಾನ್ಯರೊಂದಿಗೆ ಇದ್ದು ಅರಮನೆಯ ಕೆಂಗಣ್ಣಿಗೆ ಗುರಿಯಾಗುತ್ತಾಳೆ. 

ತನ್ನ ಕೃಷ್ಣಭಕ್ತಿ ಮತ್ತು ಸಂಗೀತದಿಂದ ಹೆಸರುವಾಸಿಯಾದ ಮೀರಾಳನ್ನು ಅಕ್ಬರ್ ಭೇಟಿಯಾದ ಕಥೆಯನ್ನು ಈಗ ನನ್ನ ತಂಗಿ ಪ್ರಜ್ಞಾ ಹೇಳುತ್ತಾಳೆ. 

----------------------------------------------------------------------------------------------------------------------

ಪ್ರಜ್ಞಳಿಂದ ಅಕ್ಬರ್ ಕಥೆ 

------------------------------------------------------------------------------------------------------------------------

ತಾವೇ ಮಹಾರಾಣಿಯಾಗಿದ್ದರು ಮೀರಾ ಅವರು ಜನ ಸಾಮಾನ್ಯರ ಪರವಾಗಿದ್ದರು ಮತ್ತು ಜನಸಾಮಾನ್ಯರ ನಡುವೆಯೇ ಬಾಳಿದರು ಎಂಬುದಕ್ಕೆ ನಾವೀಗ ಹಾಡುವ ಮೀರಾ ಭಜನೆಯೇ  ಸಾಕ್ಷಿ.  

-----------------------------------------------------------------------------------------------------------------------

ಕರಮ್ ಕೆ ಗತಿ ನ್ಯಾರಿ ಹಾಡು 

----------------------------------------------------------------------------------------------------------------------------

ಕೃಷ್ಣಭಕ್ತಿ, ಸಂಗೀತ ಇದರಲ್ಲೇ ಮುಳುಗಿದ್ದ ಮೀರಾ ತನ್ನನ್ನು ಉದಾಸೀನ ಮಾಡುತ್ತಿದ್ದಳೆಂದು ಮೀರಾಳ ಪತಿಗೆ ಅನಿಸುತ್ತಾ ಇರುತ್ತೆ. ಇದರಿಂದ ಭೋಜರಾಜನ ಕೋಪ ನೆತ್ತಿಗೇರುತ್ತದೆ. ತನ್ನ ಬಗೆಗಿನ ಮೀರಾಳ ಉದಾಸೀನಕ್ಕೆ ಗಿರಿಧರ ಗೋಪಾಲನೇ ಕಾರಣ ಎಂದು ಭಾವಿಸಿದ ಭೋಜರಾಜ, ತಾನೇ ಮೀರಾಳಿಗಾಗಿ ಕಟ್ಟಿಸಿದ ಗಿರಿಧರ ಗೋಪಾಲನ ಮಂದಿರವನ್ನು ಮದ್ದು ಗುಂಡುಗಳನ್ನು ಸಿಡಿಸಿ ನಾಶ ಪಡಿಸುವಂತೆ ಆಜ್ಞಾಪಿಸುತ್ತಾನೆ.  ಬೇಸರಗೊಂಡ ಮೀರಾ ಕೃಷ್ಣನನ್ನು ಸೇರಲು ಮಥುರಾ ಮಾರ್ಗವಾಗಿ ದ್ವಾರಕೆಯನ್ನು ತಲುಪುತ್ತಾಳೆ.  ದ್ವಾರಕೆಯಲ್ಲೇ ಮೀರಾ ಕೃಷ್ಣನೊಂದಿಗೆ ಐಕ್ಯಳಾಗುತ್ತಾಳೆ. --------------------------------------------------------------------------------------------------------------------------------------

ಮೀರಾ ಸಿನಿಮಾ ತಮಿಳು ಮತ್ತು ಹಿಂದಿ ಎರಡೂ ಭಾಷೆಗಳಲ್ಲಿ ಜಯಭೇರಿ ಬಾರಿಸುತ್ತದೆ. 

ಮೀರಾಳ ಜೀವನ ಮತ್ತು ಸಾಧನೆಗೂ ಮತ್ತು ಸುಬ್ಬುಲಕ್ಷ್ಮಿ ಅವರ ಜೀವನ ಮತ್ತು ಸಾಧನೆಗೂ ಅತಿ ಹೆಚ್ಚು ಹೋಲಿಕೆ ಇರುವುದನ್ನು ಸಭಿಕರು ಗಮನಿಸಬೇಕು.  ಮೀರಾಳಂತೆಯೇ ಸುಬ್ಬುಲಕ್ಷ್ಮಿ ಅವರು ದೈವ ಭಕ್ತೆ. ಮೀರಾಳಂತೆ ಸಂಸಾರಕ್ಕೆ ಅಂಟಿಕೊಳ್ಳದೇ ಸುಬ್ಬುಲಕ್ಷ್ಮಿ ಅವರು  ಭಗವನ್ನಾಮ ಸ್ಮರಣೆಯಲ್ಲೇ ಜೀವನವನ್ನು ಕಳೆದವರು.  ಮೀರಾಳಂತೇ ಸುಬ್ಬುಲಕ್ಷ್ಮಿ ಅವರು ಕೂಡ ಜನಸಾಮಾನ್ಯರಿಗೆ ಹತ್ತಿರವಾಗಿ ಬಾಳಿದವರು, ದಾನ ಧರ್ಮಗಳನ್ನು ಮಿತಿ ಇಲ್ಲದೆ ಮಾಡಿದವರು.  ಮೀರಾಳ ಹಾಡುಗಳು ಹಾಗೂ ಕೃತಿಗಳು ಹೇಗೆ ಶತಮಾನಗಳು ಉರುಳಿದರೂ ಜೀವಂತವಾಗಿರುವವೋ ಅದೇ ರೀತಿ ಸುಬ್ಬುಲಕ್ಷ್ಮಿ ಅವರ ಹಾಡುಗಳು ಮತ್ತು ಸ್ತೋತ್ರಗಳು ಶತಮಾನಗಳು ಉರುಳಿದರೂ ಉಳಿಯುವಂತಹವು. 

------------------------------------------------------------------------------------------------------------------------

ಹಿಂದಿ ಭಾಷೆಯ ಮೀರಾ ಸಿನಿಮಾದ ಬಿಡುಗಡೆಯ ವೇಳೆ ಸುಬ್ಬುಲಕ್ಷ್ಮಿ ಅವರಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ,  ಪ್ರಧಾನಿ ನೆಹರು, ಸರೋಜಿನಿ ನಾಯ್ಡು ಮುಂತಾದವರ ಪರಿಚಯವಾಗುತ್ತದೆ.  ಸುಬ್ಬುಲಕ್ಷ್ಮಿ ಅವರ ಸಂಗೀತ ಪ್ರತಿಭೆಯನ್ನು ಮನಸಾರೆ ಹೊಗಳಿದ ಪ್ರಧಾನಿ ನೆಹರು "ನಾನು ಒಬ್ಬ  ಪ್ರಧಾನಿ ಮಾತ್ರ, ಆದರೆ ನೀನು ಸಂಗೀತ ಪ್ರಪಂಚಕ್ಕೆ ಮಹಾರಾಣಿ" ಎಂದು ಹೇಳಿದ್ದನ್ನು ಹಿರಿಯರೆಲ್ಲಾ ಈಗಲೂ ನೆನಪಿಸಿಕೊಳ್ಳುತ್ತಾರೆ. 

ಗಾಂಧೀಜಿ ಅವರ ಆಶಯದಂತೆ ಸುಬ್ಬುಲಕ್ಷ್ಮಿ ಅವರು ಹಾಡಿದ "ವೈಷ್ಣವ ಜನತೋ ತೇನೆ  ಕಹಿಯೆಜೆ" ಹಾಡು ಜನಮಾನಸದಲ್ಲಿ ಇಂದಿಗೂ ಉಳಿದಿರುವುದನ್ನು ತಾವೆಲ್ಲಾ ನೋಡಿದ್ದೀರಿ. 

-------------------------------------------------------------------------------------------------------------------------- 

Vaishnav jan to tene kahiye jay


Vaishnav jan to tene kahiye jay

peerh paraaye janney ray
--------------------------------------------------------------------------------------------------------------------------

೧೯೬೩ರಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ವೆಂಕಟೇಶ್ವರರ ಸುಪ್ರಭಾತ ಇಂದಿಗೂ ಭಾರತ ದೇಶದ ಮನೆ ಮನಗಳ ಸುಪ್ರಭಾತವಾಗಿ ಉಳಿದಿರುವುದು ಎಲ್ಲರಿಗೂ ತಿಳಿದ ವಿಷಯವೇ. 

Kousalya supraja Rama poorva sandhya pravarthathe
Uttishta Narasardula karthavyam dhaivamanhikam.
-----------------------------------------------------------------------------------

ಸುಬ್ಬುಲಕ್ಷ್ಮಿ ಹಾಗೂ ಸದಾಶಿವಂ ದಂಪತಿ ದಾನ-ಧರ್ಮಗಳಲ್ಲಿ ಎತ್ತಿದ ಕೈ.  ವೆಂಕಟೇಶ್ವರ ಸುಪ್ರಭಾತದ ಸಮಸ್ತ ಮಾರಾಟದ ಹಕ್ಕುಗಳನ್ನು ತಿರುಪತಿ ದೇವಸ್ಥಾನಕ್ಕೆ ನೀಡಿದ್ದಾರೆ. ಅದರಿಂದ ಬರುವ ಎಲ್ಲ ಆದಾಯ ತಿರುಪತಿ ದೇವಸ್ಥಾನದವರು ನಡೆಸುವ ವೇದ ಪಾಠಶಾಲೆಗೆ ಇಂದಿಗೂ ಸಲ್ಲುತ್ತದೆ. 


೧೯೬೨-೬೩ರ ದಿನಗಳಲ್ಲಿ ನಮ್ಮ ದೇಶ ಬಲಿಷ್ಠ ಚೀನಾದಾ ವಿರುದ್ಧ ಯುದ್ಧ ಮಾಡಬೇಕಾಗಿಬಂತು.  ಯುದ್ಧದಲ್ಲಿ ಸೋಲನ್ನು ಕಂಡ ಭಾರತ ಅಪಾರ ಸಂಖ್ಯೆಯಲ್ಲಿ ತನ್ನ ಸೈನಿಕರನ್ನು ಕಳೆದುಕೊಂಡಿತು. ಮೃತ ಸೈನಿಕರ ಕುಟುಂಬಗಳಿಗೆ ಪರಿಹಾರವನ್ನು ಬೇಡಿ ಸೈನಿಕರ ತಂಡವೊಂದು ಸುಬ್ಬುಲಕ್ಷ್ಮಿ ಅವರ ಕಚೇರಿಯೊಂದಕ್ಕೆ ಬಂದಿತ್ತು. ಕಚೇರಿ ನಡುವೆಯೇ ಸುಬ್ಬುಲಕ್ಷ್ಮಿ ಅವರು ತಾವು ಬಲಗೈಯಲ್ಲಿ ಧರಿಸಿದ್ದ ಒಂದು ಜೊತೆ ಚಿನ್ನದ ಬಳೆಯನ್ನು ಸೈನಿಕರಿಗೆ ಕಾಣಿಕೆಯಾಗಿ ನೀಡಿದರು. ಸುಬ್ಬುಲಕ್ಷ್ಮಿ ಅವರ ಕೊಡುಗೈ ದಾನವನ್ನು ಮೆಚ್ಚಿದ ಜನಸ್ತೋಮ ಧೀರ್ಘ ಕರತಾಡನವನ್ನು ಮಾಡಿದರು.  ಅಷ್ಟೇ ಅಲ್ಲಾ, ಕಚೇರಿಯಲ್ಲಿ ನೆರೆದ ಎಲ್ಲಾ  ಹೆಂಗಸರೂ ತಮ್ಮ ಮೈಮೇಲಿದ್ದ ಚಿನ್ನಾಭರಣಗಳನ್ನು ಕಳೆಚಿ ಸೈನಿಕರಿಗೆ ಕಾಣಿಕೆಯಾಗಿ ನೀಡಿದ್ದು ಈಗ ಇತಿಹಾಸ.  ಆ ದಿನ ಸುಮಾರು ೨ ಕೆಜಿಯಷ್ಟು ಬಂಗಾರ ಸೈನಿಕರ ಜೋಳಿಗೆಯನ್ನು ಸೇರಿತು ಎಂಬುದನ್ನು ಹಿರಿಯರು ಈಗಲೂ ನೆನೆಸಿಕೊಳ್ಳುತ್ತಾರೆ. 
------------------------------------------------------------------------------------------------------------

ನಾಚಿಯಪ್ಪನ್ ಕಥೆ : 

-------------------------------------------------------------------------------------------------------------------------
೧೯೬೬ ಸುಬ್ಬುಲಕ್ಷ್ಮಿಯವರ ಜೀವನದ ಮೇರುಕಾಲವೆಂದೇ ಹೇಳಬಹುದು. ವಿಶ್ವ ಸಂಸ್ಥೆಯಿಂದ ಬಂದ ಕರೆಯ ಮೇರೆಗೆ  ೧೯೬೬ರ ಅಕ್ಟೋಬರ್ ೨೩ರಂದು ಸುಬ್ಬುಲಕ್ಷ್ಮಿ ಅವರು ನ್ಯೂ ಯೋರ್ಕ್ನ ವಿಶ್ವಸಂಸ್ಥೆಯ ಸಭಾಂಗಣದಲ್ಲಿ ಹಾಡಿದ್ದು ಈಗ ಇತಿಹಾಸ. ವಿಶ್ವದ ಕೆಲವೇ ಕೆಲವು ಸಂಗೀತಗಾರರಿಗೆ ಮಾತ್ರ ಈ ಅವಕಾಶ ದೊರಕಿರುವುದನ್ನು ನಾವು ಗಮನಿಸಬೇಕು.  ಅಂದಿನ ವಿಶ್ವ ಸಂಸ್ಥೆಯ ಕಚೇರಿಯಲ್ಲಿ ಹಾಡಲು ಕನ್ನಡದ ಹರಿದಾಸರಾದ ಪುರಂದರ ದಾಸರ "ಆಡಿಸಿದಳೇಶೋದ" ಕೃತಿಯನ್ನು ಆಯ್ಕೆಮಾಡಿಕೊಂಡಿದ್ದು ಕನ್ನಡಿಗರಾದ ನಮ್ಮೆಲರಿಗೂ ಹೆಮ್ಮೆಯ ವಿಷಯ. ವಿಶ್ವ ಸಂಸ್ಥೆಯ ಧ್ಯೆಯವಾದ "ಜಗದೋದ್ದಾರವನ್ನು" ಮಾಡಿದವನು ಶ್ರೀ ಕೃಷ್ಣ.  ಹಾಗಾಗೇ "ಜಗದೋದ್ಧಾರನ ಆಡಿಸಿದಳೇಶೋದ" ಎಂಬ ದಾಸರ ಪದವನ್ನು ಸುಬ್ಬುಲಕ್ಷ್ಮಿ ಅವರು ಹಾಡಿದ್ದು ಅಂದಿನ ಸಭಿಕರಿಗೆಲ್ಲರಿಗೂ ಸಂತಸ ತಂದಿದ್ದು ನಮ್ಮೆಲರಿಗೂ ಸಂತೋಷದ ವಿಷಯ . 
-----------------------------------------------------------------------------------------------------------

ಆಡಿಸಿದಳೇಶೊದ ಹಾಡು 
---------------------------------------------------------------------------------------------------------------

ಕನ್ನಡದ ದಾಸರ ಕೃತಿಗಳನ್ನು ಜನಪ್ರಿಯಗೊಳಿಸುವಲ್ಲಿ ಸುಬ್ಬುಲಕ್ಷ್ಮಿಯವರ ಕೊಡುಗೆ ಅಪಾರ. ಸುಬ್ಬುಲಕ್ಷ್ಮಿ ಅವರ ಪ್ರಯತ್ನಕ್ಕೆ "ಆಡಿಸಿದಳೇಶೋದ" ಕೃತಿಯನ್ನು ವಿಶ್ವಸಂಸ್ಥೆಯ ವೇದಿಕೆಯಲ್ಲಿ ಹಾಡಿದ್ದೇ ಸಾಕ್ಷಿ. 

ಅಂದಿನ ದಿನ ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿ ಅವರು ಹಾಡಿದ ಮತ್ತೊಂದು ಹಾಡೆಂದರೆ ಅದು "ಮೈತ್ರೀಮ್ ಭಜತ” ಎಂಬ ಕಂಚಿ ಪರಮಾಚಾರ್ಯರ ಕೃತಿ. 
-------------------------------------------------------------------------------------------------------------

ಮೈತ್ರೀಮ್ ಭಜತಾಂ ಹಾಡು  

ಯುದ್ಧಮ್ ತ್ಯಜಾತಂ, ಅಂದರೆ ಯುದ್ಧಗಳು ನಿಲ್ಲಲಿ, ತ್ಯಜತ ಪರೇಷ್ವ ಅಕ್ರಮ ಅಕ್ರಮಣಂ ಅಂದರೆ ಬೇರೆ ದೇಶಗಳ ಮೇಲೆ ಅಕ್ರಮ ಆಕ್ರಮಣಗಳು ನಿಲ್ಲಲಿ ಎಂದು. ಈಗ ನೋಡಿ, ಉಕ್ರೈನ್-ರಷ್ಯಾ, ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳು ಆರಂಭವಾಗಿ ವರ್ಷಗಳೇ ಉರುಳಿವೆ.  ಆದರೂ ಯುದ್ಧ ಮಾತ್ರ ನಿಂತಿಲ್ಲ.  ಯುದ್ಧವೇನೋ ದೊಡ್ಡ ದೊಡ್ಡ ನಾಯಕರುಗಳ ಪ್ರತಿಷ್ಠೆಗಾಗಿ ಶುರುವಾಗುತ್ತವೆ. ಆದರೆ, ಅದರ ದುಷ್ಪರಿಣಾಮಗಳನ್ನು ಎದುರಿಸುವರು ಮಾತ್ರ ನಮ ನಿಮ್ಮಂಥ ಸಾಮಾನ್ಯ ಪ್ರಜೆಗಳೇ!

 "ಮೈತ್ರೀಮ್ ಭಜತ" ಕೃತಿ ಕೂಡ ವಿಶ್ವಸಂಸ್ಥೆಯ ಧ್ಯೆಯವನ್ನು ಪ್ರತಿಬಿಂಬಿಸುವುದನ್ನು ನಾವು ಮತ್ತೆ ಮತ್ತೆ ಗಮನಿಸಬೇಕಾದ ಅಂಶ. 
----------------------------------------------------------------------------------------------------------------
ಮೈತ್ರೀಮ್ ಭಜತಾಂ ಹಾಡು 
------------------------------------------------------------------------------------------------------------


ವಿಶ್ವ ಸಂಸ್ಥೆಯ ಕಾರ್ಯಕ್ರಮದನಂತರ ಪತ್ರಕರ್ತರೊಬ್ಬರು ಸಂದರ್ಶನವೊಂದರಲ್ಲಿ ಸುಬ್ಬಲಕ್ಷ್ಮಿಯವರಿಗೆ ಪ್ರಶ್ನೆಯೊಂದನ್ನು ---------------------

ದೈನಿಕ ಅಭ್ಯಾಸದ ಮಹತ್ವ 

------------------------------------------------------------------------------------------------------------

ಸುಬ್ಬುಲಕ್ಷ್ಮಿ ಅವರಿಗೆ ಪ್ರತಿಸ್ಪರ್ಧಿಗಳು ಇತ್ತಿಲ್ಲ ಎಂದೇನಲ್ಲ. ಹೆಸರಾಂತ ವಿದುಷಿಯರಾದ ಡಿ.ಕೆ.  ಪಟ್ಟಮ್ಮಾಳ್ ಅವರು ಮತ್ತು ಎಂ.ಎಲ್. ವಸಂತ ಕುಮಾರಿಯವರು ಸುಬ್ಬಲಕ್ಷ್ಮಿ ಅವರ ಸಮಕಾಲೀನರೇ. ಡಿ.ಕೆ. ಪಟ್ಟಮಾಳ್ ಅವರು ಲಯ ವಿಶೇಷಕ್ಕೆ ಹೆಸರುವಾಸಿಯಾದರೆ, ಮನೋಧರ್ಮ ಸಂಗೀತಕ್ಕೆ ಎಂ.ಎಲ್. ವಸಂತ ಕುಮಾರಿ ಅವರು ಹೆಸರುವಾಸಿಯಾಗಿದ್ದವರು.  ಎಲ್ಲರನ್ನೂ ಮೀರಿಸಿದ ಭಕ್ತಿ ಸಂಗೀತ ಸುಬ್ಬಲಕ್ಷ್ಮಿ ಅವರದ್ದು. 
-------------------------------------------------------------------------------------------------------
೬೦ರ ದಶಕದಲ್ಲಿ ಸುಬ್ಬುಲಕ್ಷ್ಮಿ ಅವರು ಪ್ರಕಟಿಸಿದ ಮತ್ತೊಂದು ಅನರ್ಘ್ಯ ರತ್ನವೆಂದರೆ, ಸ್ವಾತಿ ತಿರುನಾಳ್ ಮಹಾರಾಜರ ಕೃತಿಯಾದ "ಭಾವಯಾಮಿ ರಘುರಾಮಮ್".  ಸಂಪೂರ್ಣ ರಾಮಾಯಣವನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯಗೊಳಿಸಿದವರು ಸುಬ್ಬಲಕ್ಷ್ಮಿ ಅವರು. 
ಅದನ್ನೀಗ ಕೇಳೋಣ. 

ರಾಗಂ: ರಾಗಮಾಲಿಕಾ

ತಾಳಂ: ರೂಪಕಂ

ಸಂಯೋಜಕ:   ಸ್ವಾತಿ ತಿರುನಾಳ್

ಆವೃತ್ತಿ: ಎಂ ಎಸ್ ಸುಬ್ಬಲಕ್ಷ್ಮಿ

 

ಪಲ್ಲವಿ :   (SAVERI) :                [ARO: S R1 M1 P D1 S ||   AVA: S N3 D2 P M1 G3 R1 S   ||    ,

ಭಾವಯಾಮಿ ರಾಹುರಾಮಂ ಭವ್ಯ ಸುಗುಣರಾಮಮ್

 

ಅನುಪಲ್ಲವಿ : (SAVERI)

ಭಾವುಕವುತರನಪರಾ ಅಪಂಗಲೀಲಾಲಸಿತಮ್

 

ಚರಣಂಗಳು :

ನಟ್ಟಕುರಂಜಿ (ಬಾಲಕಂಡಂ )     [ARO: S R2 G3 M1 N2 D2 N2 P D2 N2 S || 

    AVA: S N2 D2 M1 G3 R2 G3 M2 P G3 R2 S   ||    ,

ದಿನಕರವಾಯತಿಲಕಂ ದಿವ್ಯಗಾದಿಸುತಾಸವನ

ವಾನರಚಿತಸುಬಾಹುಮುಖ ವದಮಹಲ್ಯಾಪಾವನಮ್

ಅನಾಗಮೀಶಚಾಪಭಂಗಂ ಜನಕಸುತಪ್ರಾಣೇಶಮ್

ಘನಕುಪಿತಭೃಗುರಾಮ ಗರ್ವಾಹಮಿತಾಸಕೇತಮ್

 

ಧನ್ಯಾಸಿ (ಅಯೋಧ್ಯಾಕಾಂಡಂ)     [ARO: S G2 M1 P N2 S   ||   AVA: S N2 D1 P M1 G2 R1 S   ||    ,

ವಿಹತಮಭಿಷೇಕಮದಃ ವಿಪಿನಾಗತಮರ್ಯವಚಃ

ಸಹಿತಾಸೀತಾ ಸೌಮಿತ್ರೀಂ ಸನ್ತತಮಶೀಲಮ್

ಗುಹಾನಿಲಯಾಗತಾಂ ಚಿತ್ರಕೂಟಗಾಥಾಭಾರತದತ್ತಾ

ಮಹಿತರತ್ನಮಯಪಾದುಕಾ ಮದನ ಸುಂದರಾಂಗಮ್


ಭಾವಯಾಮಿ ಕೃತಿಯನ್ನು ಮನಸಿಟ್ಟು ಕೇಳಿದರೆ ರಾಮಾಯಣದ ಎಲ್ಲಾ ಘಟನೆಗಳು ಕಣ್ಣಿಗೆ ಕಟ್ಟಿದಂತೆ ನಮ್ಮ ಮುಂದೆ ಬಂದು ಹಾದುಹೋಗುತ್ತವೆ. 
---------------------------------------------------------------------------------------------------
ಭರತನ ಮೇಲೆ ರಾಮನ ಪ್ರೀತಿಯ ಕಥೆ ಗೌರಿಯಿಂದ 
----------------------------------------------------------------------------------------------------------------
ರಾಮಾಯಣದಲ್ಲಿ ಸಾಕ್ಷಾತ್ ರಾಮನೇ ಪೇಚಿಗೆ ಸಿಲುಕಿದ ಪ್ರಸಂಗವೊಂದರ ಕಥೆಯನ್ನು ಈಗ ಪ್ರಜ್ಞಾ ಹೇಳುತ್ತಾಳೆ. 


ಒಂದು ರಾಮಾಯಣದ ಕಥೆ ಪ್ರಜ್ಞಳಿಂದ 








ಸುಬ್ಬುಲಕ್ಷ್ಮಿಯವರು ಶಂಕರಾಚಾರ್ಯರ ಹಲವು ಕೃತಿಗಳನ್ನು ಹಾಡಿದ್ದಾರೆ.  ಅವುಗಳಲ್ಲಿ "ಭಜ ಗೋವಿಂದಂ" ಕೃತಿ ತುಂಬಾ ಜನಪ್ರಿಯವಾದುದು. 


ಕನ್ನಡ ಅರ್ಥ ಸಮೇತ

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||

ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..!
ಅಂತ್ಯ ಕಾಲವು ಸಮೀಪಿಸಿರುವಾಗ ನಿನ್ನ ವ್ಯಾಕರಣ ಜ್ಞಾನ, ನಿನ್ನ ಅಪಾರ ವಿದ್ಯೆ ನಿನ್ನನ್ನು ಕಾಪಾಡುವುದಿಲ್ಲ. 

ಭಜಗೋವಿಂದಂ ಕೃತಿಯ ಸಂದೇಶವನ್ನು ಸಾರುವ ಒಂದು ಹಾಸ್ಯಭರಿತ ಲೌಕಿಕ ಕಥೆ ಈಗ ಪ್ರಜ್ಞಳಿಂದ. 

ತನಿ ಆವರ್ತನ 
---------------------------------------------------------------------------------------------------------------------------------------------

ಒಂದು ಉಪಕಥೆ ಪ್ರಜ್ಞಳಿಂದ 
---------------------------------------------------------------------------------------------------

-----------------------------------------------------------------------------------------------------------------------------------------------


 ಶ್ರೀ ರಂಗ ಗದ್ಯವನ್ನು ಸುಶ್ರಾವ್ಯವಾಗಿ ಹಾಡಿ ಬೆಳಕಿಗೆ ತಂದವರು ಸುಬ್ಬಲಕ್ಷ್ಮಿ ಅವರು. ಶ್ರೀ ರಂಗ ಗದ್ಯವನ್ನು ರಚಿಸಿದವರು ಸಾಕ್ಷಾತ್ ಶ್ರೀ ರಾಮಾನುಜಾಚಾರ್ಯರೇ. ರಾಮಾನುಜಾಚಾರ್ಯರ ಶ್ರೀರಂಗ ಗದ್ಯದಿಂದ ಸ್ಫೂರ್ತಿಪಡೆದೆ,   ಮುಂದೆ ತಮಿಳ್ ಸಂತರಾದ ವೇದಾಂತ ದೇಶಿಕರ್ ಅವರು 'ರಘುವೀರ ಗದ್ಯ'ವನ್ನು ರಚಿಸಿದ್ದು.  ವೇದಾಂತ ದೇಶಿಕರ್ ಅವರು ತಮಿಳ್ ನಾಡಿನ ತಿರುವಹಿಂದ್ರಾಪುರಮ್ ನ ಕೋದಂಡರಾಮ ಪರಮ ಭಕ್ತರು. ಅವರು ರಘುವೀರ ಗದ್ಯದಲ್ಲಿ ವರ್ಣಿಸಿರುವುದು ಕೋದಂಡರಾಮನ ಶೌರ್ಯದ ವೀರಾವೇಶವನ್ನು. ರಾಮಾಯಣ ಯುದ್ಧದಲ್ಲಿ ಒಮ್ಮೆ........ 



ರಘುವೀರ ಗದ್ಯವನ್ನು ಪ್ರಥಮ ಭಾರಿಗೆ ಹಾಡಿ ಜನಪ್ರಿಯಗೊಳಿಸಿದವರೂ ಎಂ. ಎಸ್. ಅಮ್ಮನವರೇ. ಅದನ್ನೀಗ  ಕೇಳೋಣ.  


ಜಯ ಜಯ ಮಹಾವೀರ. 


--------------------------------------------------------------------------------------------------------------------------------------


ಉತ್ತರ ಪ್ರದೇಶದ ತುಳಸಿದಾಸರು ಶ್ರೀರಾಮನ ಪರಮಭಕ್ತರು. ಶ್ರೀ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ಬರೆದ ಕೀರ್ತಿ ತುಳಸೀದಾಸರಿಗೆ ಸಲ್ಲುತ್ತದೆ.  ತುಳಸೀದಾಸರ ಹನುಮಾನ್ ಚಾಲೀಸವನ್ನು ಮೊದಲ ಬಾರಿಗೆ ಹಾದಿ ಜನಪ್ರಿಯಗೊಳಿಸಿದವರು ನಮ್ಮ ಭಾರತರತ್ನ ಸುಬ್ಬುಲಕ್ಷ್ಮಿ ಅವರು. ಹನುಮಾನ್ ಚಲಿಸದ ರಚನೆಯ ಹಿಂದೆ ಒಂದು ರೋಚಕ ಕಥೆಯೇ ಇದೆ. ಅದನ್ನೀಗ ಕೇಳೋಣ. 


ಪ್ರಜ್ಞಾಳಿಂದ ಅಕ್ಬರ್-ತುಳಸೀದಾಸರ ಕಥೆ. 

-------------------------------------------------------------------------------------------------------------------------------------

ಹನುಮಾನ್ ಚಾಲೀಸಾ ಹಾಡುಗಾರಿಕೆ 

------------------------------------------------------------------------------------------------------------------------------------------------

ಭೂಮಿ ಮತ್ತು ಸೂರ್ಯನ ನಡುವಿನ ದೂರ, ಹನುಮಾನ್ ಚಲಿಸದಲ್ಲಿ. - ಗೌರಿಯಿಂದ 

---------------------------------------------------------------------------------------------------------------------------------------------------


೧೯೮೨ರ ನಂತರ ಸುಬ್ಬುಲಕ್ಷ್ಮಿಯವರು ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸುವುದನ್ನು ನಿಲ್ಲಿಸಿ, ತಮಿಳ್ ನಾಡಿನ ಚೆನ್ನೈನಲ್ಲಿ ವಾಸಿಸ ತೊಡಗಿದರು.  ೧೯೯೭ರಲ್ಲಿ ಸುಬ್ಬಲಕ್ಷ್ಮಿ ಅವರ ಪತಿಯವರಾದ ಸದಾಶಿವಂ ಅವರು ನಿಧನರಾದರು. 

೧೯೯೮ರ ಅಟಲ್ ಬಿಹಾರಿ ವಾಜಪೇಯೀ ಅವರು ಪ್ರಧಾನ ಮಂತ್ರಿಯಾಗಿದ್ದಾಗ ಸುಬ್ಬುಲಕ್ಷ್ಮಿ ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಭಾರತ ರತ್ನದಿಂದ ಸುಬ್ಬಲಕ್ಷ್ಮಿ ಅವರ ಘನತೆ ಹೆಚ್ಚುವುದಿರಲಿ, ಸುಬ್ಬುಲಕ್ಷ್ಮಿ ಅವರಿಂದ ಭಾರತ ರತ್ನ ಪ್ರಶಸ್ತಿಯ ಘನತೆ  ಹೆಚ್ಚಿತ್ತೆಂದರೆ ತಪ್ಪಾಗಲಾರದು. 


೮೮ ವರ್ಷದ ತುಂಬು ಹಾಗು ಸಾರ್ಥಕ ಜೀವನ ನಡೆಸಿದ ಸುಬ್ಬುಲಕ್ಷ್ಮಿಯವರು ೨೦೦೪ರಲ್ಲಿ ಪರಮಾತ್ಮನ ಪಾದ ಸೇರಿದರು.  


ಇಲ್ಲಿಗೆ ನಮ್ಮ ಭಾರತ ರತ್ನ ಸುಬ್ಬುಲಕ್ಷ್ಮಿ ಅವರ ಹರಿಕಥೆಯನ್ನು ಮುಕ್ತಾಯಗೊಳಿಸುತ್ತಿದ್ದೇವೆ.  ಬಾಲಕಿಯರಾದ ನಮ್ಮನ್ನು ಆಶೀರ್ವದಿಸಿ ನಮ್ಮ ಹರಿಕಥೆಯನ್ನು ಕೇಳಿದ ತಮ್ಮೆಲ್ಲರಿಗೂ ಧನ್ಯವಾದಗಳು. 


ಮಂಗಳ 


madhyamavati shloka


-೦-೦-೦-೦-೦-೦-





















 

Saturday, 6 September 2025

ABDUL KALAM POEM

        O my spirit, stop nowhere! 


                Sea shores soared your ambition  

               Struggle kindled  your vision     

                 Mosques and temples tempered your mission.


O my spirit, stop nowhere!

Quran and Gita mingled in your veena


Music and mantra embedded in your tantra


Spirituality guided your Science.


O my spirit, stop nowhere!

You rose like a  missile


Agni was not a mere name


it was your nation’s fame.


O my spirit, stop nowhere

You saw rise and rise, you saw fall and fall


Success has many fathers, feather  them


Failures are orphans, father them.


O my spirit, stop nowhere!

Earth shook under your feet


It was atom power


Compassion shook your heart


Was it ‘atma’  power?


O my spirit, stop nowhere!

Elevation to power, not for ever


Ignite minds, fire wings


Sow dreams


Man goes, but his mission continues!

GORURA BHAGEERATHI

 ಗೊರೂರ ಭಾಗೀರಥಿ

ಅವಳೇ ಹೇಮಾವತಿ

ಹೇಮಾವತಿಯ ಧಾರೆಗೆ

ಗೊರೂರಾದ್ರು ಸಾಹಿತಿ


ಶಾಲೆ ಬಿಟ್ಟ್ ಗೊರೂರು

ಗಾಂಧಿ ಟೋಪಿ ಧರಿಸಿದರು

ಜೈಲ್ ಸೇರ್ ಒದೆ ತಿಂದ್ರು

ಭಾರತ್ ಮಾತೆ ಜೈ ಅಂದ್ರು


ಭೂತಯ್ಯನ ಮಗ ಅಯ್ಯ

ದೇವಯ್ಯನ ಮಗ ಗುಳ್ಳ

ಆದ್ರಲ್ಲಾ ಜಗಜಾಹೀರು

ಆ ಗಮ್ಮತ್ತೇ ನಮ್ಮ ಗೊರೂರು


ಹಳ್ಳಿ ಕಥೆ ಗೊರೂರು

ಅಮೇರಿಕಾಗೆ ಹೋಗಿದ್ರು

ಅಲ್ಲಿರುದೆಲ್ಲಾ ಕಂಡ್ರೂ

ನಮ್ಮ ಗೊರೂರೇ ಮೇಲಂದ್ರು

Wednesday, 27 August 2025

ನಾಡಹಬ್ಬ ದಸರಾ

ನಾಡಹಬ್ಬ ದಸರಾ  

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.  'ನಾಡಹಬ್ಬ ದಸರಾ' ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ.  ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ ಆಶೀರ್ವಾದಗಳು ಅತಿಮುಖ್ಯವಾದದು.

ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ಮೈಸೂರಿನ ಅಧಿದೇವತೆ ತಾಯಿ ಚಾಮುಂಡೇಶ್ವರಿ. ಹರಿಕಥೆಯ ಆರಂಭವನ್ನು ತಾಯಿ ಚಾಮುಂಡೇಶ್ವರಿಯ ಸ್ಮರಣೆಯೊಂದಿಗೆ ಮಾಡೋಣ. 

ಶ್ರೀ ಚಾಮುಂಡೇಶ್ವರಿ........ 

ಇಂದು ದಸರಾ ಆಚರಣೆಯ ಮಹತ್ವದ ದಿನ. ಇಂದು ಮಹಾನವಮಿಯ ಹಬ್ಬ. ನಾಳಿನ ವಿಜಯದಶಮಿಗೆ ಸಿದ್ಧತೆಯನ್ನು ನಡೆಸಲು ಇಂದು ನಾವು ಆಯುಧ ಪೂಜೆಯನ್ನು ಮಾಡುವ ಹಬ್ಬ. ಆಯುಧಗಳು ಶೌರ್ಯದ, ವಿಜಯದ ಸಂಕೇತವಾದರೆ, ದಿನನಿತ್ಯದ ಆಯುಧಗಳು ನಮ್ಮ ದುಡಿಮೆಯ ಸಂಕೇತ. 

ನಮ್ಮ ದೇಶದಲ್ಲಿ ದಸರಹಬ್ಬವನ್ನು ವರ್ಷದಲ್ಲಿ ಎರಡು ಬಾರಿ ಆಚರಿಸುತ್ತೇವೆ. ವರ್ಷದ ಆರಂಭದಲ್ಲಿ ಬರುವ ವಸಂತ ನವರಾತ್ರಿ ಹಾಗೂ ಮತ್ತೊಂದು ಇಂದಿನ ಶರನ್ನವರಾತ್ರಿ. ಚೈತ್ರಮಾಸದ ಯುಗಾದಿಯಿಂದ ರಾಮನವಮಿಯವರೆಗೂ ಆಚರಿಸುವ ದಸರವೇ ವಸಂತ ನವರಾತ್ರಿ. ಆಶ್ವೀಜ ಮಾಸದ ಶುಕ್ಲಪಕ್ಷದ ಪಾಡ್ಯದಿಂದ ವಿಜಯದಶಮಿಯವರೆಗೆ ಆಚರಿಸುವ ದಸರವೇ ಇಂದಿನ ಶರನ್ನವರಾತ್ರಿ. ಮಳೆಗಾಲದಿಂದ ತೊಯ್ದ ಭೂಮಿ ಹಚ್ಚಹಸಿರಾಗಿ ಕಂಗೊಳಿಸುವ ದಿನಗಳೇ ಶರತ್ ಋತುವಿನ ದಿನಗಳು.

ವಸಂತ ನವರಾತ್ರಿಗೆ ಶೃಂಗಾರ ರಸವೇ ಪ್ರಧಾನ. ಹೊಸ ಚಿಗುರು ಹಳೆ ಬೇರಿನಿಂದ ಕಂಗೊಳಿಸುವ ಭೂಮಾತೆಯೇ ಶೃಂಗಾರದ ಎಂದರೆ ಪ್ರಣಯ ಭಾವದ ಸಂಕೇತ ಎಂದು ನಾವು ಹೇಳಬಹುದು. ಸಂಗೀತ, ಸಾಹಿತ್ಯ, ನಾಟಕ ಇತ್ಯಾದಿಗಳೇ ವಸಂತ ನವರಾತ್ರಿಯ ವಿಶೇಷಗಳು. 

ಇಂದಿನ ಶರನ್ನವರಾತ್ರಿಗೆ ವೀರರಸವೇ ಪ್ರಧಾನ. ಶರನ್ನವರಾತ್ರಿ ಸ್ತ್ರೀಶಕ್ತಿಯನ್ನು ಆರಾಧಿಸುವ ಹಬ್ಬ. ದುಷ್ಟ ಶಕ್ತಿಗಳ ವಿರುದ್ಧ ತಾಯಿ ಚಾಮುಂಡೇಶ್ವರಿ   ವಿಜಯವನ್ನು ಗಳಿಸಿದ ದಿನವೇ ದುರ್ಗಾಷ್ಟಮಿ. ಶ್ರೀ ರಾಮ ರಾವಣ ಸಂಹಾರ ಮಾಡಿದ ದಿನವೇ ವಿಜಯದಶಮಿ. 

ಆದರೆ ನಮ್ಮ ದೇಶ ಪರಕೀಯರ ಆಡಳಿತಕ್ಕೆ ಸಿಕ್ಕಿ ಹಾಳಾಗಿ ಹೋಯ್ತು ನೋಡಿ. ನಮ್ಮ ಚರಿತ್ರೆಯ ಪುಸ್ತಕದ ತುಂಬಾ ನಾವು ಮುಸ್ಲಿಂ ದಾಳಿಕೋರರಿಗೆ ಸೋತೆವು, ಬ್ರಿಟಿಷರ ದಬ್ಬಾಳಿಕೆಗೆ ಸೋತೆವು ಎಂಬ ಸೋಲಿನ ಭಾವವನ್ನು ಉಂಟುಮಾಡುವ ಪಾಠಗಳನ್ನೇ ಓದಿದ್ದೇವೆ. ಬ್ರಿಟಿಷರು  ಮೆಕಾಲೆ ಶಿಕ್ಷಣ ಪದ್ಧತಿಯನ್ನು ನಮ್ಮ ಮೇಲೆ ಹೇರಿ ನಮ್ಮ ಮನಸ್ಸಿನಲ್ಲಿ ನೆಗೆಟಿವ್ ಭಾವನೆಗಳನ್ನೇ, ಎಂದರೆ ಋಣಾತ್ಮಕ ಭಾವನೆಗಳನ್ನೇ  ಬಿತ್ತಿ ಹೋಗಿದ್ದಾರೆ. ಹೋರಾಟವನ್ನು ಆರಂಭಿಸುವ ಮೊದಲೇ ನಾವು ಸೋಲನ್ನು ಮನಸ್ಸಿನಲ್ಲೇ ಒಪ್ಪಿಕೊಂಡುಬಿಟ್ಟಿರುತ್ತೇವೆ.  ಆ ನೆಗೆಟಿವ್ ಮೈಂಡ್ ಸೆಟ್ಟಿನಿಂದ ಹೊರಬರಬೇಕು. ಅದಕ್ಕಾಗಿಯೇ ವಿಜಯದ ಸಂದೇಶವನ್ನು ಸಾರುವ ದಸರಾ ಹಬ್ಬ ನಮಗೆ ಬಹಳ ಮುಖ್ಯವಾದುದು.  

ಚರಿತ್ರೆಯಲ್ಲಿ ನಾವು ಮೊಗಲರ, ಬ್ರಿಟಿಷರ ಪಾಠವನ್ನೇ ಹೆಚ್ಚು ಓದುತ್ತೇವೆ. ಮೊಗಲರನ್ನು ಸದೆಬಡಿದ ಶಿವಾಜಿ, ರಾಣಾ ಪ್ರತಾಪ್ ಸಿಂಗ್, ಇವರುಗಳು ಪಾಠದಲ್ಲಿ ಹೀಗೆ ಬಂದು ಹಾಗೆ ಹೊರಟುಹೋಗಿರುತ್ತಾರೆ. ಗುಪ್ತರ ಕಾಲವನ್ನು ಭಾರತದ ಸುವರ್ಣಯುಗ ಎಂದು ಕರೆಯುತ್ತಾರೆ. ದಕ್ಷಿಣ ಭಾರತವನ್ನು ಕಾಂಬೋಡಿಯಾದವರೆಗೆ ವಿಸ್ತರಿಸಿ, ದಕ್ಷಿಣ ಭಾರತವನ್ನು ಹದಿಮೂರು ಶತಮಾನಗಳವರೆಗೆ ಆಳಿದ ಚೋಳರ ಪಾಠವನ್ನು ನಾವು ಮರೆತೇಬಿಟ್ಟಿದ್ದೇವೆ. ತಂಜಾವೂರಿನಲ್ಲಿ ಚೋಳರು ಕಟ್ಟಿದ ಬೃಹದೀಶ್ವರ ದೇವಸ್ಥಾನವೇ ಚೋಳರ ವಿಜಯಕ್ಕೆ ಜೀವಂತ  ಸಾಕ್ಷಿಯಾಗಿ ಇಂದಿಗೂ ನಿಂತಿದೆ. 

ದಸರಾ ಆಚರಣೆಯಿಂದ ಸ್ಪೂರ್ತಿಯನ್ನು ಪಡೆದ ನಮ್ಮ ಭಾರತ ಈಗ ವಿಶ್ವಗುರುವಾಗಿ ಹೊರಹೊಮ್ಮುತ್ತಿರುವುದು ಸಂತೋಷದ ವಿಷಯ. ನಮ್ಮ ಭಾರತೀಯ ಹೆಣ್ಣುಮಕ್ಕಳ ಸಿಂದೂರವನ್ನು ಅಳಿಸಿದ ಉಗ್ರವಾದಿಗಳ ಹೆಡೆಮುರಿಯನ್ನು ಆಪರೇಷನ್ ಸಿಂದೂರದ ಮೂಲಕ ಕಟ್ಟಿಹಾಕಿದ ನಮ್ಮ ಸೈನಿಕರ ಪರಾಕ್ರಮವನ್ನು ನಾವು ಇಂದು ನೆನಪಿಸಿಕೊಳ್ಳಲೇ ಬೇಕು. 

ನಮ್ಮ ಸಿನಿಮಾಗಳಲ್ಲೂ ನೋಡಿ, ಸೀರೆ ಒಟ್ಟು ಕುಂಕುಮ ಇಟ್ಟ ಹೆಣ್ಣೆಂದರೆ ಅವಳು ಶಕ್ತಿಹೀನಳು, ದುರ್ಬಲೆ ಎಂದೇ ಬಿಂಬಿಸುತ್ತಾರೆ. ಹರಿದ ಜೀನ್ಸ್ ಪ್ಯಾಂಟ್ ಹಾಕಿದ ಹೆಣ್ಣೇ ಡ್ಯಾಶಿಂಗ್ ಹೆಣ್ಣು ಎಂದು ತೋರಿಸುತ್ತಾರೆ. ನಮ್ಮ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ದೇವಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಇವರೆಲ್ಲಾ ಸೀರೆ ಉಟ್ಟ ಭಾರತೀಯ ನಾರಿಯರೆ ಆಗಿತ್ತಿಲ್ಲವೇ? ಇಂದಿನ  ಎಂ.ಎಸ್. ಸುಬ್ಬುಲಕ್ಷ್ಮಿ, ಲತಾ ಮಂಗೇಶ್ಕರ್, ಸುಧಾ ಮೂರ್ತಿ ಇವರುಗಳು ಕೂಡ ಸೀರೆ ಉಟ್ಟ ಮಹಿಳೆಯರಲ್ಲವೇ?  ದಸರಾ ಹಬ್ಬದ ನವದುರ್ಗೆಯರೇ ನಮ್ಮ ದೇಶದ ಹೆಣ್ಣುಮಕ್ಕಳಿಗೆ ಸ್ಫೂರ್ತಿ ತಾನೇ? 

ಈಗ ಹರಿಕಥೆಯ ಆರಂಭವನ್ನು ನವದುರ್ಗಾ ಕವಚ ಸ್ತುತಿಯ ಮೂಲಕ ಮಾಡೋಣ. 

ಪ್ರಥಮಂ ಶೈಲಪುತ್ರೀಚಾ....... 

ನವರಾತ್ರಿಯ ಮೊದಲ ದಿನ ನಾವು ದುರ್ಗೆಯ ಶೈಲಪುತ್ರಿಯ ಅವತಾರವನ್ನು ಪೂಜಿಸುತ್ತೇವೆ. ಅದನ್ನೇ ನಾವು ನವದುರ್ಗಾಕವಚ ಸ್ತೋತ್ರದಲ್ಲಿ 'ಪ್ರಥಮಂ ಶೈಲಪುತ್ರೀಚಾ' ಎಂದು ಹಾಡುತ್ತೇವೆ.  ಶೈಲಪುತ್ರಿ ಹಿಂದಿನ ಅವತಾರದಲ್ಲಿ 'ಸತಿ' ಎಂಬ ಅವತಾರವನ್ನು ಎತ್ತಿದ್ದಳು.  ಸತಿ ಬ್ರಹ್ಮನ ಮಗನಾದ ದಕ್ಷನ ಮಗಳಾಗಿದ್ದಳು. ದಕ್ಷನ ಮಗಳಯಾದ ಸತಿದೇವಿಗೆ ದಾಕ್ಷಾಯಿಣಿ ಎಂಬ ಹೆಸರೂ ಇದೆ.  ಸತಿದೇವಿ  ಬಾಲ್ಯದಿಂದಲೂ ಶಿವನನ್ನೇ ತನ್ನ ಪತಿಯೆಂದು ಆರಾಧಿಸುತ್ತಿದ್ದಳು. ಇದು ತಂದೆಯಾದ ದಕ್ಷನಿಗೆ ಇಷ್ಟವಿರಲಿಲ್ಲ.  ಸ್ಮಶಾನವನ್ನು ಕಾಯುವ ಬೂದಿಬಡುಕನಾದ ಶಿವನಿಗೆ  ತನ್ನ ಮಗಳನ್ನು ಕೊಡುವುದಿಲ್ಲ ಎಂದು ದಕ್ಷನು ಹಠತೊಟ್ಟಿದ್ದನು. ತಂದೆಯ ವಿರೋಧದ ನಡುವೆಯೂ ಸತಿ, ಶಿವನನ್ನೇ ಮದುವೆಯಾದಳು. ಕೋಪಗೊಂಡ ದಕ್ಷನು ತನ್ನ ಮಗಳಾದ ಸತಿಯೊಂದಿಗೆ ತನ್ನ ಸಂಬಂಧವನ್ನೇ ಕಡಿದುಕೊಂಡನು. ಆದರೂ ಮಗಳಾದ ಸತಿಗೆ ತಂದೆಯ ಮೇಲೆ ಪ್ರೀತಿ ಇದ್ದೆ ಇತ್ತು. 

ಒಮ್ಮೆ ದಕ್ಷನು ಒಂದು ಮಹಾಯಾಗವನ್ನು ಮಾಡಿದನು.  ಆ ಯಾಗಕ್ಕೆ ಅವನು ಸಕಲ ದೇವತೆಗಳನ್ನೂ ಆಹ್ವಾನಿಸಿದ್ದನು. ಆದರೆ, ತನ್ನ ಸ್ವಂತ ಮಗಳೇ ಆದ ಸತಿಯನ್ನು ಮತ್ತು ತನ್ನ ಅಳಿಯನಾದ ಶಿವನನ್ನೂ ಯಾಗಕ್ಕೆ ಆಹ್ವಾನಿಸಲೇ ಇಲ್ಲ. ಆದರೂ, ಮಗಳಾದ ಸತಿಗೆ ಮನಸ್ಸು ತಡೆಯಲಿಲ್ಲ. ಶಿವನ ವಿರೋಧದ ನಡುವೆಯೂ ಸತಿ ದಕ್ಷನ ಯಜ್ಞಕ್ಕೆ ಬಂದೇಬಿಟ್ಟಳು. ಕರೆಯದೇ ಬಂದ ಸತಿಯನ್ನು, ಮಗಳು ಎಂಬಾ ಪ್ರೀತಿಯನ್ನೂ ತೊರೆದು, ದಕ್ಷನು ಅವಮಾನಿಸಿದನು.  ಮಗಳ ಎದುರೇ, ಅವಳ ಗಂಡನಾದ ಶಿವನನ್ನು ಇನ್ನಿಲ್ಲದಂತೆ ಜರೆದು ಅವಮಾನಿಸಿದನು. ಪತಿದೇವರಾದ ಶಿವನ ನಿಂದನೆಯನ್ನು ಕೇಳಲಾಗದ ಸತಿ, ರೋಷದಲ್ಲಿ ದಕ್ಷನ ಅಗ್ನಿಕುಂಡಕ್ಕೆ ಧುಮುಕಿ, ಆತ್ಮಾಹುತಿಯನ್ನು ಮಾಡಿಕೊಂಡಳು. ವಿಷಯ ತಿಳಿದ ಶಿವನ ಕೋಪ ಕೈಲಾಸ ಶಿಖರದೆತ್ತರಕ್ಕೆ ಏರಿತು. ಸುಟ್ಟು ಕರಕಲಾದ ತನ್ನ ಪತ್ನಿ ಸತಿಯ ದೇಹವನ್ನು ತನ್ನ ಹೆಗಲಮೇಲೆ ಹೊತ್ತು, ಶಿವನು ತಾಂಡವ ನೃತ್ಯಮಾಡಲು ಆರಂಭಿಸಿದನು. ಶಿವನ ತಂಡವಾದ ಕೋಪಾಗ್ನಿಗೆ ಸಮಸ್ತ ಬ್ರಹ್ಮಾಂಡವೇ ಸುಟ್ಟುಹೋಗುವಂತಾಗಿತ್ತು.  ವಿನಾಶವನ್ನು ತಪ್ಪಿಸಲು ಮಹಾವಿಷ್ಣುವು ತನ್ನ ಸುರ್ದರ್ಶನ ಚಕ್ರವನ್ನು ಸತಿಯ ಸುಟ್ಟು ಕರಕಲಾದ ದೇಹದ ಮೇಲೆ ಪ್ರಯೋಗಿಸಿದನು. ಸತಿಯ ದೇಹ 52 ತುಂಡುಗಳಾಗಿ, ಭೂಮಂಡಲದ  52 ಸ್ಥಾನಗಳಲ್ಲಿ ಬಿದ್ದಿತ್ತು.  ಆ 52 ಸ್ಥಾನಗಳೇ ಈಗ 52 ಶಕ್ತಿಪೀಠಗಳೆಂದೇ  ಪ್ರಸಿದ್ಧವಾಗಿವೆ. ಈ ಶಕ್ತಿ ಪೀಠಗಳು ಈಗ ಭಾರತ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ, ಟಿಬೆಟ್, ಭೂತಾನ್  ಮತ್ತು ಪಾಕಿಸ್ತಾನಗಳಲ್ಲಿ ಇವೆ. 

ಕಾಶಿ ವಿಶಾಲಾಕ್ಷಿ, ಕಂಚಿ ಕಾಮಾಕ್ಷಿ, ಮೈಸೂರು ಚಾಮುಂಡಿ, ಅಸ್ಸಾಮಿನ ಖಾಮಕ್ಯ ದೇವಿ , ಕೋಲ್ಕತ್ತಾ ಕಾಳಿ ಇವುಗಳು ಭಾರತದಲ್ಲಿರುವ ಮುಖ್ಯ ಶಕ್ತಿಪೀಠಗಳು. ಪಾಕಿಸ್ತಾನದ ಹಿಂಗ್ಲಾ ದೇವಿ, ಶ್ರೀಲಂಕಾದ ಟ್ರಿಂಕಾಮಲೆ ದೇವಿ, ಬಾಂಗ್ಲಾದೇಶದ ಡಾಕೇಶ್ವರಿ ಇವುಗಳು ಕೂಡ ಶಕ್ತಿಪೀಠಗಳೇ. ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿರುವ ಈ ಶಕ್ತಿಪೀಠಗಳು ಈಗಲೂ ಜೀವಂತವಾಗಿರುವುದೇ ದುರ್ಗಾಮಾತೆಯ ಮಹಿಮೆಗೆ ಸಾಕ್ಷಿ. 

ಈಗ ದುರ್ಗಾದೇವಿಯನ್ನು ಮತ್ತೊಮ್ಮೆ ಪ್ರಾರ್ಥಿಸೋಣ. 

ದುರ್ಗಾ ದೇವಿ....... 

ಪ್ರಥಮಂ ಶೈಲಪುತ್ರೀಚಾ....... ನವರಾತ್ರಿಯ ಮೊದಲನೇ ದಿನ ನಾವು ದುರ್ಗಾಮಾತೆಯನ್ನು ಶೈಲಪುತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ದಕ್ಷಬ್ರಹ್ಮನ ಯಜ್ಞಕುಂಡದೊಳಗೆ ಧುಮುಕಿ ಆತ್ಮಾಹುತಿಯನ್ನು ಮಾಡಿಕೊಂಡ ಶಿವಪತ್ನಿ ಸತಿದೇವಿಯೇ, ಹಿಮವಂತನ ಮಗಳಾಗಿ ಜನಿಸಿ ಶೈಲಪುತ್ರಿ ಎಂದು ನಾಮಕರಣಗೊಂಡಳು. ಪರ್ವತರಾಜನ ಮಗಳಾದುದರಿಂದ ಶೈಲಪುತ್ರಿಗೆ ಪಾರ್ವತಿ ಎಂಬ ಹೆಸರೂ ಇತ್ತು. ಶೈಲಪುತ್ರಿ ಕೂಡ ಅಪರಿಮಿತ ಸುಂದರಿ ಮತ್ತು ಜಾಣೆ. ಬಾಲ್ಯದಿಂದಲೂ ಶಿವನನ್ನೇ ಆರಾಧಿಸುತ್ತಾ, ಶಿವನನ್ನೇ ಮದುವೆಯಾಗುವೆನೆಂದು ಪಣತೊಟ್ಟಿ ಬೆಳೆದವಳೇ ಶೈಲಪುತ್ರಿ. 

ದ್ವಿತೀಯಂ ಬ್ರಹ್ಮಚಾರಣಿ......, ಎಂದರೆ ನವರಾತ್ರಿಯ ಎರಡನೇ ದಿನ ನಾವು ದುರ್ಗಾಮಾತೆಯನ್ನು ಬ್ರಹ್ಮಚಾರಿಣಿಯ ರೂಪದಲ್ಲಿ ಪೂಜೆಮಾಡುತ್ತೇವೆ. ಬ್ರಹ್ಮಚಾರಿಣಿ ಎಂದರೆ ಅವಿವಾಹಿತ ಹೆಣ್ಣು. ಬಿಳಿ ಸೀರೆಯನ್ನುಟ್ಟು ಕಂಗೊಳಿಸುತ್ತಿದ್ದ ಸೌಂದರ್ಯವತಿಯೇ ದುರ್ಗೆಯ ಅವತಾರವಾದ ಬ್ರಹ್ಮಚಾರಿಣಿ. ಬ್ರಹ್ಮಚಾರಿಣಿಯ ಜ್ಞಾನಾರ್ಜನೆಯನಂತರ, ಮಾಡಿದ್ದು ಶಿವನನ್ನು ಕುರಿತಾದ ತಪಸ್ಸು. 

ಸತಿದೇವಿಯ ಆತ್ಮಾಹುತಿಯನಂತರ ದುಃಖಿತನಾದ ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿಹೋಗುತ್ತಾನೆ. ಈ ನಡುವೆ ತಾರಕಾಸುರನೆಂಬ ಮಹಾದುಷ್ಟ ರಾಕ್ಷಸನ ಉಪಟಳದಿಂದ ಮನುಷ್ಯರು, ಋಷಿಮುನಿಗಳು ಮತ್ತು ಸಕಲ ದೇವತೆಗಳು ಕಂಗಾಲಾಗಿಹೋಗಿರುತ್ತಾರೆ. ಶಿವ-ಪಾರ್ವತಿಯರ ಪುತ್ರನಿಂದ ಮಾತ್ರ ಮರಣವೆಂಬ ವರವನ್ನು ತಾರಕಾಸುರ ಬಹಳ ಯೋಚಿಸಿ ಬ್ರಹ್ಮನಿಂದ ಪಡೆದಿರುತ್ತಾನೆ. ಶಿವನ ಪತ್ನಿಯಾದ ಸತಿದೇವಿಯು ಮರಣಹೊಂದಿದ್ದು, ಶಿವನು ಗಾಢವಾದ ಧ್ಯಾನದಲ್ಲಿ ಮಗ್ನನಾಗಿರುವ ಕಾರಣ, ಶಿವಪುತ್ರನು ಜನಿಸುವ ಸಂಭವವೇ ಇಲ್ಲವೆಂಬ ಭಯದಿಂದ ದೇವತೆಗಳೆಲ್ಲಾ ಭಯಗ್ರಸ್ತರಾಗಿರುತ್ತಾರೆ. ಹಾಗಾಗಿ ಶಿವನು ತಪಸ್ಸನ್ನು ಭಗ್ನಗೊಳಿಸಿ, ಅವನಲ್ಲಿ ಪಾರ್ವತಿಯನ್ನು ವರಿಸುವಂತಹ ಶೃಂಗಾರ ಭಾವನೆಗಳನ್ನು ಉಂಟುಮಾಡುವ ಕೆಲಸವನ್ನು, ದೇವತೆಗಳು ಶೃಂಗಾರಾದ ದೇವತೆಗಳಾದ ರತಿ-ಮನ್ಮಥರಿಗೆ ವಹಿಸುತ್ತಾರೆ. ರತಿ-ಮನ್ಮಥರ ಗಾಯನ-ನರ್ತನ ಹಾಗೂ ಹೂಬಾಣಗಳಿಂದ ಎಚ್ಚರಗೊಂಡ ಶಿವನು, ಕೋಪದಲ್ಲಿ ತನ್ನ ಮೂರನೇ ಕಣ್ಣನ್ನು ತೆರೆದು, ಮನ್ಮಥನನ್ನು ಸುಟ್ಟು ಭಸ್ಮಮಾಡುತ್ತಾನೆ. ಎಚ್ಚರಗೊಂಡ ಈಶ್ವರ ತನ್ನೆದುರು ಕಾಣಿಸಿಕೊಂಡ ಚಂದ್ರಘಂಟಾದೇವಿಯ ರೂಪದಲ್ಲಿದ್ದ ಪಾರ್ವತಿಯನ್ನು ನೋಡಿ ಮೋಹಿತನಾಗುತ್ತಾನೆ. 

ಪಾರ್ವತಿಯನ್ನು ನಾವು ನವರಾತ್ರಿಯ ಮೂರನೇ ದಿನ ಚಂದ್ರಘಂಟ ದೇವಿಯ ರೂಪದಲ್ಲಿ ಆರಾಧಿಸುತ್ತೇವೆ. ಚಂದ್ರ ಶೃಂಗಾರದ, ಪ್ರಣಯದ ಸಂಕೇತ. ಅಂತಹ ಚಂದ್ರನನ್ನೇ ತನ್ನ ಶಿರದಲ್ಲಿ ಧರಿಸಿದ್ದ ಸುಂದರಿಯೇ ಚಂದ್ರಘಂಟಾ ದೇವಿ. ಹಿಮವಂತನ ಸಾಮ್ರಾಜ್ಯವೇ ಹಿಮಾಲಯ ಪರ್ವತ. ಹಿಮಾಲಯ ಪರ್ವತದ ಕೇದಾರನಾಥದ ಸಮೀಪವಿರುವ ತ್ರಿಯೋಗಿ ನಾರಾಯಣ ಎಂಬ ಹೋಮಕುಂಡ ಈಗಲೂ ಇದೆ. ಆ ಹೋಮಕೊಂಡುದ ಸ್ಥಾನವೇ ಶಿವ-ಪಾರ್ವತಿಯರ ವಿವಾಹವಾದ ಮಂಟಪ. ಹಾಗಾಗಿ ತ್ರಿಯೋಗಿ ನಾರಾಯಣ ಹೋಮಕುಂಡದ ಯಾತ್ರೆಯನ್ನು ಮಾಡಿದ ಭಕ್ತರೆಲ್ಲರೂ, ಈಗಲೂ ಸಮಿತ್ತನ್ನು ಅರ್ಪಿಸುವ ಆಚರಣೆ ಇದೆ. 

ಹಿಮವಂತ ಮಹಾರಾಜನು ತನ್ನ ಮಗಳಾದ ಪಾರ್ವತಿಯ ವಿವಾಹವನ್ನು ಶಿವನೊಡನೆ ಅದ್ದೂರಿಯಾಗಿ ನೆರವೇರಿಸುತ್ತಾನೆ.  ಸಕಲ ಋಷಿಮುನಿಗಳು, ದೇವತೆಗಳೂ ನೆರೆದಿದ್ದ ಆ ವಿವಾಹದ ಎಲ್ಲಾ ಏರ್ಪಾಡನ್ನು, ಪಾರ್ವತಿಯ ಸೋದರನಾದ ವಿಷ್ಣುವೇ ನಿಂತು ಮಾಡಿರುತ್ತಾನೆ. ಆದುದರಿಂದಲೇ ಪಾರ್ವತಿಯನ್ನು ನಾವು ಸರಸಿಜನಾಭ ಸೋದರಿ....... (ಈ ಕೀರ್ತನೆಯ ಪಲ್ಲವಿಯನ್ನು ಕಲಿತುಕೊಳ್ಳಬೇಕು) ಎಂದು ವರ್ಣಿಸುತ್ತೇವೆ. 

ಈಗ ಹಿಮಗಿರಿಯ ಪುತ್ರಿಯಾದ ಪಾರ್ವತಿಯನ್ನು ಪ್ರಾರ್ಥಿಸೋಣ. 

ಸರೋಜದಳನೇತ್ರಿ-------------

 ನವದುರ್ಗೆಯ ಸ್ತೋತ್ರದಲ್ಲಿ ಕೂಷ್ಮಾಂಡೇತಿ ಚತುರ್ತಕಂ ಎಂದು ಹಾಡಲಾಗಿದೆ. ಎಂದರೆ ನಾವು ನವರಾತ್ರಿಯ ನಾಲ್ಕನೆಯ ದಿನ ಪಾರ್ವತಿಯನ್ನು ಕೂಷ್ಮಾಂಡ ದೇವಿಯ ರೂಪದಲ್ಲಿ ಪ್ರಾರ್ಥಿಸುತ್ತೇವೆ. ಕೂಷ್ಮಾಂ ಎಂದರೆ ಸೂಕ್ಷ್ಮ ಎಂದರ್ಥ. ಅಂಡ ಎಂದರೆ ಬಸಿರು ಎಂದರ್ಥ. ಶಿವನನ್ನು ವಿವಾಹವಾದ ಪಾರ್ವತಿ ಈಗ ಗರ್ಭವನ್ನು ಧರಿಸಿ, ಸ್ಕಂದನನ್ನು ತನ್ನ ಬಸಿರಿನಲ್ಲಿ ಕುಳ್ಳಿರಿಸಿಕೊಂಡಿರುತ್ತಾಳೆ. 

ನವರಾತ್ರಿಯ ಐದನೇ ದಿನ ನಾವು ಪಾರ್ವತಿಯನ್ನು ಸ್ಕಂದಮಾತೆಯ ರೂಪದಲ್ಲಿ ಆರಾಧಿಸುತ್ತೇವೆ. ಹಾಗಾಗಿ ನವರಾತ್ರಿಯ ಐದನೇ ದಿನ ನಾವು ಪಾರ್ವತಿಗೆ ದೇವಸ್ಥಾನಗಳಲ್ಲಿ ಬಾಣಂತಿಯ ಅಲಂಕಾರವನ್ನು ಹಾಕಿರುತ್ತೇವೆ. ಎಲ್ಲಾ ಬಾಣಂತಿಯರು ಪಾರ್ವತಿಯರು, ಮತ್ತು ಅವರುಗಳ ಮಡಿಲಲ್ಲಿರುವ ಎಲ್ಲಾ ಕಂದಮ್ಮಗಳು ಸುಬ್ರಮಣ್ಯನೇ ಎಂಬ ಭಾವನೆಯನ್ನು ನಾವು ನಮ್ಮ  ಮನೆಮನೆಗಳಲ್ಲಿ ಕಾಣುತ್ತೇವೆ. ಸ್ಕಂದನನ್ನು ಅಕ್ಕರೆಯಿಂದ ಬೆಳಸಿದ ಪಾರ್ವತಿ, ಬಾಲಕನಾದ ಸ್ಕಂದನಿಗೆ ವೇಲಾಯುಧವನ್ನು ಕೊಟ್ಟು ತಾರಕಾಸುರ ಸಂಹಾರಕ್ಕೆ ಪ್ರೇರೇಪಿಸುತ್ತಾಳೆ. ಬಾಲಕನಾದ ಸ್ಕಂದ ತಾರಕಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಉಂಟುಮಾಡುತ್ತಾನೆ. 

ಈ ಸಂಧರ್ಭದಲ್ಲಿ, ಬೆಂಗಳೂರಿಗರಾದ ನಾವು ಮೇಜರ್ ಸಂದೀಪ್ ಉನ್ನಿಕೃಷ್ಣನ್ ಅವರನ್ನು ನೆನಯಲೇ ಬೇಕು. 2008ರಲ್ಲಿ ಪಾಕಿಸ್ತಾನದ ಉಗ್ರವಾದಿಗಳೊಂದಿಗೆ ಮುಂಬೈನಲ್ಲಿ ಹೋರಾಡುತ್ತಾ, ತಮ್ಮ ಪ್ರಾಣವನ್ನೇ ಬಲಿದಾನವಾಗಿ ನೀಡಿದ ಮಹಾವೀರ ಮೇಜರ್ ಸಂದೀಪ್ ಉನ್ನಿಕೃಷ್ಣನ್. ಸಂದೀಪನ ತಂದೆ ಉನ್ನಿಕೃಷ್ಣನ್ ಮತ್ತು ತಾಯಿ ಧನಲಕ್ಷ್ಮೀ ಅವರು. ನಮ್ಮ ಮನೆಗಳಲ್ಲಿ ಒಂದು ಮಾತಿದೆ......  ಮನೆ ಮನೆಗಳಲ್ಲಿ ಭಗತ್ ಸಿಂಗರು ಹುಟ್ಟಲಿ, ಆದರೆ ನಮ್ಮ ಮನೆಯಲ್ಲಿ ಬೇಡ ಎಂದು.  ಆದರೆ ಧನಲಕ್ಷ್ಮೀ ಅವರು ಹಾಗೆ ಯೋಚಿಸಲೇ ಇಲ್ಲ. ಹಿಂದೆಮುಂದೆ ಯೋಚಿಸದೆ ತಮ್ಮ ಪುತ್ರನಾದ ಸಂದೀಪನನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿದ ಮಹಾತಾಯಿ ಧನಲಕ್ಷ್ಮೀ ಅವರು. ಮಗನ ಬಲಿದಾನದ ಘಟನೆಯ ದುಃಖವನ್ನು ಸಹಿಸಿ ನಮ್ಮೊಡನೆ ಬಾಳುತ್ತಿರುವ ಮಹಾತಾಯಿ ಆಕೆ. ಸಂದೀಪ್ ಉನ್ನಿಕೃಷ್ಣನ್ ಅವರಂತಹ ಸೈನಿಕರ  ಬಲಿದಾನದಿಂದಲೇ ನಾವು ನೀವು, ನಮ್ಮ ಭಾರತ ದೇಶದಲ್ಲಿ ಸುರಕ್ಷಿತವಾಗಿದ್ದೇವೆ ಎನ್ನುವುದನ್ನು ನೆನಪಿಸಿಕೊಳ್ಳುವ ಹಬ್ಬವೇ ದಸರಾ ಹಬ್ಬ. 

ನವರಾತ್ರಿಯ ಆರನೆಯ ದಿನ ನಾವು ದುರ್ಗಾಮಾತೆಯನ್ನು ಕಾತ್ಯಾಯಿನಿಯ ರೂಪದಲ್ಲಿ ಆರಾಧಿಸುತ್ತೇವೆ. ಕಾತ್ಯಾಯನ ಋಷಿಗಳ ತಪಸ್ಸಿಗೆ ಒಲಿದು ಅವರ ಮಗಳಾಗಿ ಜನಿಸಿದ ದುರ್ಗೆಯನ್ನು ನಾವು ಕಾತ್ಯಾಯಿನಿ ಎಂದು ಕರೆಯುತ್ತೇವೆ. ನವರಾತ್ರಿಯ ಏಳನೆಯ ದಿನ ನಾವು ಪಾರ್ವತಿಯನ್ನು ಕಾಲರಾತ್ರಿಯ ರೂಪದಲ್ಲಿ ಆರಾಧಿಸುತ್ತೇವೆ. ಏಳನೇ ದಿನವೇ ನವರಾತ್ರಿಯ ಸರಸ್ವತಿ ಹಬ್ಬದ ದಿನವೂ ಹೌದು. 

ನವರಾತ್ರಿಯ ಎಂಟನೇ ದಿನವೇ ದುರ್ಗಾಷ್ಟಮಿ. ದುರ್ಗೆಯ ಮತ್ತೊಂದು ಹೆಸರೇ ಚಾಮುಂಡೇಶ್ವರಿ. ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದ್ದು ದುರ್ಗಾಷ್ಟಮಿಯ ಮತ್ತು ಮಹಾ ನವಮಿಯ ನಡುವಿನ ಸಂಧಿಕಾಲದಂದು. ಮಹಿಷಾಸುರನ ಸಂಹಾರವನ್ನು ಮಾಡಿ ಲೋಕಕಲ್ಯಾಣವನ್ನು ಮಾಡಿದ ಪಾರ್ವತಿಯನ್ನೇ ನಾವು ನವಮಮಂ ಸಿದ್ಧಧಾತ್ರೀಚಾ ಎಂದು ಆರಾಧಿಸುತ್ತೇವೆ. 

ಈಗ ನಾವು ವಿದ್ಯಾಧಿ ದೇವತೆಯಾದ ಸರಸ್ವತಿಯ ಪ್ರಾರ್ಥನೆಯನ್ನು ಮಾಡೋಣ. 

ನಿಮಗೆ ಚೆನ್ನಾಗಿ ಬರುವ ಸರಸ್ವತಿಯ  ಹಾಡನ್ನು ಹಾಡಿ  

ತಾಯಿ ಕಾಳಿಮಾತೆಯ ಅನುಗ್ರಹದಿಂದ ಖ್ಯಾತಿಯನ್ನು ಪಡೆದ ವ್ಯಕ್ತಿಗಳಲ್ಲಿ ಕವಿರತ್ನ ಕಾಳಿದಾಸ ಎಲ್ಲರಿಗಿಂತಲೂ ಪ್ರಮುಖನು. ಕಾಡು ಕುರುಬ ಜನಾಂಗದಲ್ಲಿ ಜನಿಸಿದ ಕಾಳಿದಾಸ, ಕಾಳಿಮಾತೆಯ ಅನುಗ್ರಹದಿಂದ ಮಹಾಪಂಡಿತನಾಗಿ ರೂಪುಗೊಂಡನು. ಅಭಿಜ್ಞಾನ ಶಾಕುಂತಳಾ, ರಘುವಂಶ, ವಿಕ್ರಮೋರ್ವಶೀಯ, ಕುಮಾರಸಂಭವ ಮುಂತಾದ ಮಹಾ ನಾಟಕಗಳನ್ನು ಸಂಸ್ಕೃತದಲ್ಲಿ ರಚಿಸಿದ ಮಹಾನಾಟಕಕಾರನೇ ನಮ್ಮ ಕಾಳಿದಾಸ.  ಕಾಳಿದಾಸ ರಚಿಸಿರುವ ಶ್ಯಾಮಲಾ ದಂಡಕವನ್ನು ಈಗ ಕೇಳೋಣ. 

ಮಾಣಿಕ್ಯವೀಣಾ------------------------

 ತೆನಾಲಿ ರಾಮಕೃಷ್ಣನ ಹೆಸರನ್ನು ನೀವೆಲ್ಲಾ ಕೇಳಿರುವಿರಿ.  ಕೃಷ್ಣದೇವರಾಯರ ಆಸ್ಥಾನದಲ್ಲಿ ವಿದೂಷಕನಾಗಿದ್ದ ತೆನಾಲಿ ರಾಮಕೃಷ್ಣ ಕೂಡ ಕಾಳಿಮಾತೆಯ ಆಶೀರ್ವಾದದಿಂದಲೇ ಘನಪಂಡಿತನಾದವನು. ಒಮ್ಮೆ ತೆನಾಲಿ  ರಾಮಕೃಷ್ಣನಿಗೆ ಕಾಳಿಮಾತೆಯ ದರ್ಶನವಾದಾಗ, ತೆನಾಲಿ ರಾಮ, ಆಕೆಯನ್ನು ನೋಡಿ ಗಹಗಹಿಸಿ ನಗಲು ಆರಂಭಿಸುತ್ತಾನೆ.  ಕಾಳಿಮಾತೆ ಏಕೆ ನಗುತ್ತಿರುವೆ ಎಂದು ಕೇಳಿದಾಗ, ತೆನಾಲಿ ರಾಮ ಉತ್ತರಿಸುತ್ತಾ 'ಅಮ್ಮಾ, ನಮಗೆ ಒಂದೇ ಮೂಗು ಇದೆ. ನೆಗಡಿಯಾದಾಗ ಎರಡು ಕೈಗಳು ಇರುವುದರಿಂದ, ಹೇಗೋ ಸಂಭಾಳಿಸಿಕೊಳ್ಳುತೇವೆ. ತಾಯಿ, ನಿನಾಗಾದರೋ, ಆರು ಮುಖ, ಆರು ಮೂಗುಗಳಿವೆ, ಇರುವುದು ನಾಲ್ಕೇ ಕೈಗಳು, ನಿನಗೆ ನಿನಗೆ ನೆಗಡಿ ಬಂದಾಗ ಹೇಗೆ ನಿಭಾಯಿಸುವೆಯೋ, ಸಾಕ್ಷಾತ್ ಶಿವನೇ ಬಲ್ಲ' ಎಂದು ಮತ್ತೆ ಜೋರಾಗಿ ನಗುತ್ತಾನೆ.  ಆಗ ಕಾಳಿಮಾತೆಗೂ ತುಂಬಾ ನಗುಬರುತ್ತದೆ. ತೆನಾಲಿ ರಾಮನ ಹಾಸ್ಯಪ್ರಜ್ಞೆಯನ್ನು ಮೆಚ್ಚಿದ ಕಾಳಿಮಾತೆ, ತೆನಾಲಿ ರಾಮನಿಗೆ ಹಾಸ್ಯಪ್ರಪಂಚದಲ್ಲೇ ನೀನು ಖ್ಯಾತಿ ಹೊಂದು ಎಂದು ಆಶೀರ್ವದಿಸುತ್ತಾಳೆ. ತೆನಾಲಿ ರಾಮ ಮತ್ತು ಕೃಷ್ಣದೇವರಾಯರ ನಡುವಿನ ಹಾಸ್ಯಪ್ರಸಂಗಗಳನ್ನು ವಿಶ್ವವಿಖ್ಯಾತವಾಗಿರುವುದು ತಮಗೆಲ್ಲಾ ಗೊತ್ತೇ ಗೊತ್ತು. 

ದಸರಾ ಎಂದರೆ ಮೈಸೂರು, ಮೈಸೂರು ಎಂದರೆ ದಸರಾ. ದಸರಾ ಆಚರಿಸುವ ಪರಂಪರೆ ಮೊದಲು ಆರಂಭವಾಗಿದ್ದು ವಿಜಯನಗರ ಸಾಮ್ರಾಜ್ಯದಲ್ಲಿ.  ತಾವುಗಳು ಹಂಪಿ ಪ್ರವಾಸಕ್ಕೆ ಹೋದಾಗ ಈಗಲೂ, ಭವ್ಯವಾದ ಮಹಾನವಮಿ ದಿಬ್ಬವನ್ನು ಈಗಲೂ ನೋಡಬಹುದು. ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯರ ಕಾಲದಲ್ಲಿ ಅತ್ಯಂತ ವೈಭವಯುತವಾಗಿತ್ತು. ಅಂದಿನ ಕಾಲದ ಹಂಪಿಯ ದಸರಾ ಎಂದರೆ ವಿಜಯನಗರದ ಅರಸರ ಸೇನಾಬಲ ಪ್ರದರ್ಶನ.  ದುರ್ಗಾಪೂಜೆಯೊಡನೆ ಆರಂಭವಾದ ದಸರಾ ವಿಜಯದಶಮಿಯಂದು ಅಂತ್ಯಗೊಳ್ಳುತ್ತಿತ್ತು. ಕೃಷ್ಣದೇವರಾಯರ ಕಾಲದಲ್ಲಿ ಮುತ್ತುರತ್ನಗಳನ್ನು ರಸ್ತೆ ಬದಿಯಲ್ಲಿ ಮಾರುತ್ತಿದ್ದರು ಎಂದರೆ ಆಗಿನ ಕಾಲದ ವೈಭವ ಎಷ್ಟಿತ್ತೆಂದು  ತಾವುಗಳು ಊಹಿಸಿಕೊಳ್ಳಬಹುದು. ಅಂತಹ ವೈಭವೋಪೇತವಾದ ವಿಜಯನಗರ ಸಾಮ್ರಾಜ್ಯ, ಬಹಮನಿ ಸುಲ್ತಾನರ ಆಕ್ರಮಣದಿಂದ ನಾಶವಾಗಿಹೋಯಿತು. ಅರಮನೆಯೊಳಗಿನ ಸಂಚುಕೋರರು, ಶತ್ರುಗಳೊಂದಿಗೆ ಸೇರಿದ್ದು ವಿಜಯನಗರಕ್ಕೆ ಮಾರಕವಾಯಿತು. 

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಮೈಸೂರು ಅರಸರು, ಅಂದು ಹಂಪಿಯಿಂದ ಚಾಮುಂಡಿಯ ವಿಗ್ರಹವನ್ನು ಮತ್ತು ಅಂಬಾರಿಯನ್ನೂ ರಕ್ಷಿಸಿ ತಂದರು ಎಂದು ಇತಿಹಾಸಕಾರರು ಹೇಳುತ್ತಾರೆ. ಮೈಸೂರು ದಸರಾವನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಮೊದಲನೇ ರಾಜ ಒಡೆಯರವರಿಗೆ ಸೇರುತ್ತದೆ. ಅವರು 1610ರಲ್ಲಿ ದಸರಾವನ್ನು ಶ್ರೀರಂಗಪಟ್ಟಣದಲ್ಲಿ ಆರಂಭಿಸಿದರು. ಮುಮ್ಮಡಿ ಕೃಷ್ಣರಾಜ ಒಡೆಯರ್, 1805ರಲ್ಲಿ ದಸರಾ ಆಚರಣೆಯನ್ನು ಮೈಸೂರಿಗೆ ಸ್ಥಳಾಂತರಿಸಿದರು. ಅಂದಿನ ದಸರಾದಲ್ಲಿ ಚಾಮುಂಡಿಯ ಪೂಜೆ ಮತ್ತು ಆಯುಧ ಪೂಜೆಗಳೇ ಮುಖ್ಯವಾಗಿದ್ದವು. ವಿಜಯದಶಮಿಯ ಶೋಭಾಯಾತ್ರೆಯಂದು, ಮಹಾರಾಜರೇ ಚಿನ್ನದ ಅಂಬಾರಿಯ ಮೇಲೆ ಆಸೀನರಾಗಿರುತ್ತಿದ್ದರು. ಮೈಸೂರು ಅರಮನೆಯಿಂದ ಹೊರಟ ಜಂಬೂ ಸವಾರಿ, ಬನ್ನಿಮಂಟಪ ತಲುಪಿ ಅಂತ್ಯಗೊಳ್ಳುತ್ತಿತ್ತು. ಅಂದಿನ ಕಾಲದ ಮೈಸೂರು ದಸರಾ ವಿಶ್ವವಿಖ್ಯಾತವಾಗಿತ್ತು. 

ಭಾರತಕ್ಕೆ ಸ್ವಾತಂತ್ರ್ಯ ಬಂದನಂತರ ಮೈಸೂರು ಅರಸರ ಆಡಳಿತ ಅಂತ್ಯಗೊಂಡಿತು. 1971ರಿಂದ ಆನೆಯ ಅಂಬಾರಿಯ ಮೇಲೆ ಚಾಮುಂಡಿಯ ವಿಗ್ರಹವನ್ನು ಕೂರಿಸಿ ದಸರಾ ಮೆರವಣಿಗೆಯನ್ನು ನಡೆಸಲಾಗುತ್ತಿದೆ. ಆದರೆ ಚಾಮುಂಡಿಯ ಮೇಲಿನ ಭಕ್ತಿ ಮತ್ತು ದಸರಾವನ್ನು ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. 

ಈಗ ಮತ್ತೊಮ್ಮೆ ದೇವಿಯ ಪ್ರಾರ್ಥನೆಯನ್ನು ಮಾಡೋಣ. 

ಯಾವ ಹಾಡು ಎಂಬುದನ್ನು ನೀವೇ ಆರಿಸಿಕೊಳ್ಳಿ. 

ಮಹಾವೀರನಾದ ಶ್ರೀರಾಮ, ಲೋಕಕಂಟಕನಾಗಿದ್ದ ರಾವಣನನ್ನು ಸಂಹಾರ ಮಾಡಿದ್ದೂ ವಿಜಯದಶಮಿಯಂದೇ. ಆ ಕತೆಯನ್ನೀಗ ಕೇಳೋಣ. 

ಸೀತಾನೇಷ್ವಣೆಯ ಕತೆಯಿಂದ ಆರಂಭಿಸಿ. 



























Sunday, 17 August 2025

ರಾಣಿ ಅಬ್ಬಕ್ಕ ದೇವಿ

                                                              ರಾಣಿ ಅಬ್ಬಕ್ಕ ದೇವಿ 

                                 ವಿಜಯ ಕರ್ನಾಟಕ ದೀಪಾವಳಿ ಸಂಚಿಕೆ (೨೦೨೫)ಗಾಗಿ 

ಲೇಖಕರು 

ಕುಮಾರಿ 'ಗೌರಿ ನಂಜುಂಡ ಪ್ರಸಾದ್' 

೧೧ನೇ ತರಗತಿ (ವಾಣಿಜ್ಯ ವಿಭಾಗ) 

ನ್ಯಾಷನಲ್ ಪಬ್ಲಿಕ್ ಸ್ಕೂಲ್ 

ರಾಜಾಜಿನಗರ, ಬೆಂಗಳೂರು 

ಮೊಬೈಲ್: ೯೯೦೦೧ ೨೭೨೭೫, ೮೯೫೧೦ ೬೬೪೩೬

-೦-೦-೦-

ಭಾರತದ ಸ್ವಾತಂತ್ರ್ಯ ಹೋರಾಟದ ಕಥೆ, ಯಾವುದೇ ಒಬ್ಬ ಭಾರತೀಯನ ಕಥೆಯಲ್ಲ. ಇದು  ಪ್ರತಿಯೊಬ್ಬ ಭಾರತೀಯನ ಕಥೆ. ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಸ್ವತಂತ್ರ ಭಾರತವನ್ನು ಕಟ್ಟಲು ಹೋರಾಡಿದ ಕಥೆ, ಈಗ ನಾವು ಹೆಮ್ಮೆಯ ಭಾರತೀಯರಾಗಿ ಗರ್ವದಿಂದ ಇಡೀ ಜಗತ್ತಿಗೆ ಹಂಚಿಕೊಳ್ಳಲಾಗುವಂತಹ ಕಥೆ. ಭಾರತೀಯ ಸ್ವಾತಂತ್ರ್ಯ ಹೋರಾಟದ ಮುನ್ನೂರು ವರ್ಷಗಳ ಕಾಲವೆಂದರೆ, ಪ್ರತಿಯೊಬ್ಬ ದೇಶಭಕ್ತನೂ ಬಹು ಪ್ರಯಾಸದಿಂದ ಬ್ರಿಟಿಷರನ್ನು ಭಾರತದಿಂದ ಬಿಟ್ಟು ಓಡಿಸಲು ಪ್ರಯತ್ನಿಸಿ, ನಂತರ ಯಶಸ್ಸು ಗಳಿಸಿದ ಪಯಣ. ಆ ನಮ್ಮ ಕನಸುಗಳನ್ನು ನನಸು ಮಾಡಲು ನಮ್ಮ ಹೋರಾಟಗಾರರು ಅಹೋರಾತ್ರಿ ಯೋಜಿಸಿ, ಕಠಿಣ ಪರಿಶ್ರಮ ಪಟ್ಟು ಬೆವರು ಸುರಿಸಿದ್ದಾರೆ. ಅವರು ಪಟ್ಟ ಪ್ರಯಾಸಗಳಿಂದಲೇ, ನಾವು ಇಂದು ಆ ಪರಿಶ್ರಮದ ಸಿಹಿಯಾದ ಫಲಗಳನ್ನು ಸೇವಿಸುತ್ತಿದ್ದೇವೆ. 

ಸ್ವಾತಂತ್ರ್ಯ ಹೋರಾಟಗಾರರು ಎಂದ ಕೂಡಲೇ, ಕೆಲವು ಪ್ರಸಿದ್ಧ ಹೆಸರುಗಳು ನಮ್ಮ ನೆನಪಿಗೆ ಬರುತ್ತವೆ. ಗಾಂಧೀಜಿ, ಭಗತ್ ಸಿಂಗ್, ಮಂಗಳ್ ಪಾಂಡೆ, ರಾಣಿ ಲಕ್ಷ್ಮಿಬಾಯಿ, ಸರೋಜಿನಿ ನಾಯ್ಡು ಮುಂತಾದವರು ನಮ್ಮ ನೆನಪಿನ ಚೌಕಟ್ಟಿಗೆ ಬರುತ್ತಾರೆ. ಆದರೆ, ಬ್ರಿಟಿಷರು ಭಾರತವನ್ನು ಆಕ್ರಮಿಸುವುದಕ್ಕೂ ಮೊದಲು, ಈಗ ಹೆಸರಿಸಿದ ಸ್ವಾತಂತ್ರ್ಯ ಹೋರಾಟಗಾರರು ಹುಟ್ಟುವುದಕ್ಕೂ ಮೊದಲು, ಭಾರತದಲ್ಲಿ ನೆಲಸಿದ್ದ ಒಬ್ಬ ರಾಣಿ, ತನ್ನ ರಾಜ್ಯದ ಸ್ವಾತಂತ್ರ್ಯಕ್ಕಾಗಿ, ಭಾರತದ ಮೇಲೆ ದುರಾಸೆಯ ನೋಟವನ್ನು ಹರಿಸಿದ್ದ ಮೊದಲ ಪರದೇಶಿಯರ  ವಿರುದ್ಧ ವೀರಾವೇಶದಿಂದ ಹೋರಾಡಿದ್ದಳು. ಹೌದು, ಅವಳೇ ರಾಣಿ ಅಬ್ಬಕ್ಕ ದೇವಿ, ಚೌಟ ವಂಶದ ಹೆಣ್ಣುಮಗಳು. ನಮ್ಮ ಕರ್ನಾಟಕದ ಉಲ್ಲಾಳ ಎನ್ನುವ ಸ್ಥಳದಲ್ಲಿ ತನ್ನ ರಾಜಧಾನಿಯನ್ನು ಸ್ಥಾಪಿಸಿ, ಪೋರ್ಚುಗೀಸರ ವಿರುದ್ಧ ಯುದ್ಧಮಾಡಿ, ಅವರಿಗೆ ಬುದ್ಧಿ ಕಲಿಸಿದ ಧೀರ ಮಹಿಳೆಯೇ ರಾಣಿ ಅಬ್ಬಕ್ಕ ದೇವಿ. ಈಗ ಅವಳ ಪರಿಚಯವನ್ನು ಮಾಡಿಕೊಳ್ಳೋಣ. 

ಅಬ್ಬಕ್ಕ ದೇವಿ ಚೌಟ ವಂಶದ ರಾಜ ಪರಿವಾರದಲ್ಲಿ ಜನಿಸಿದಳು. ಅಬ್ಬಕ್ಕನ ಆರಂಭಿಕ ಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದವರು ಅವಳ ಮಾವನವರಾದ ತಿರುಮಲರಾಯರು. ತಿರುಮಲರಾಯರು ವಿಜಯನಗರ ಸಾಮ್ರಾಜ್ಯದ ಸಾಮಂತ ರಾಜರಾಗಿದ್ದರು. ಇವರ ನೇತೃತ್ವದಲ್ಲಿ ಚೌಟ ವಂಶದವರು, ಮೊದಲ ಬಾರಿಗೆ ಗುಜರಾತಿನಿಂದ ಕರ್ನಾಟಕದ ತುಳುನಾಡಿನವರೆಗೆ ವಲಸೆ ಬಂದರು. ಉಲ್ಲಾಳವೇ ಅವರ ರಾಜಧಾನಿಯಾಗಿತ್ತು. ಚಿಕ್ಕಂದಿನಿಂದಲೇ ಅಬ್ಬಕ್ಕಳಿಗೆ  ಬಿಲ್ಲುಗಾರಿಕೆ, ಕುದುರೆ ಸವಾರಿ ಮುಂತಾದವುಗಳ ತರಬೇತಿಯನ್ನು ನೀಡಲಾಗಿತ್ತು. ಮುಂದೆ ಅವಳು ಯುದ್ಧನೀತಿ, ಯುದ್ಧ ತಂತ್ರಗಳು, ರಾಜನೀತಿ, ಆಡಳಿತ ನೀತಿಗಳಲ್ಲೂ ಪರಿಣತೆಯನ್ನು ಪಡೆದುಕೊಂಡಿದ್ದಳು. ಇದಕ್ಕೆಲ್ಲಾ ಮೂಲ ಕಾರಣ ತಿರುಮಲರಾಯರೇ. ಅವರ ನೇತೃತ್ವದಲ್ಲಿ ಅಬ್ಬಕ್ಕಳ ವಿದ್ಯಾಭ್ಯಾಸ, ಯುದ್ಧಾಭ್ಯಾಸಗಳು ಯಶಸ್ವಿಯಾಗಿ ಆಗಿತ್ತು. ಕೆಲವೇ ವರ್ಷಗಳಲ್ಲಿ ಅಬ್ಬಕ್ಕ, ಸಕಲ ಗುಣಗಳನ್ನು ಹೊಂದಿದ್ದ ಧೈರ್ಯಶಾಲಿ ಹಾಗೂ ಬುದ್ಧಿವಂತ ಮಹಿಳೆಯಾಗಿ ಬೆಳೆದಳು. ಇದನ್ನೆಲ್ಲಾ ಗಮನಿಸುತ್ತಿದ್ದ ತಿರುಮಲರಾಯರು ಅಬ್ಬಕ್ಕಳನ್ನು ಮೆಚ್ಚಿ, ಅವಳನ್ನು ಅವರ ರಾಜ್ಯದ ರಾಣಿಯೆಂದು ಪಟ್ಟವನ್ನು ಕಟ್ಟಿದರು. ಅಬ್ಬಕ್ಕ ಉಲ್ಲಾಳದ ರಾಣಿಯೆಂದು ನೇಮಿತಳಾದಳು. 

ಉಲ್ಲಾಳ, ನಮಗೆಲ್ಲರಿಗೂ ತಿಳಿದಿರುವಂತೆ ತುಳುನಾಡಿನ ಒಂದು ಭಾಗ. ಚೌಟ ವಂಶದಲ್ಲಿ 'ಅಳಿಯ ಸಂತಾನ' ಎನ್ನುವ ಒಂದು ಪದ್ಧತಿಯಿತ್ತು. ಅವರದ್ದು ಮಾತೃಪ್ರಧಾನ ವಂಶ. ಅಬ್ಬಕ್ಕಳ ರಾಜ್ಯದಲ್ಲಿ ಮಹಿಳೆಯರೇ ಪ್ರಧಾನ ಪತ್ರಗಳನ್ನು ವಹಿಸಿಕೊಳ್ಳುತ್ತಿದ್ದರು. ಅಧಿಕಾರ ಹಾಗೂ ಜವಾಬ್ದಾರಿಗಳನ್ನುಳ್ಳ  ಕೆಲಸಗಳನ್ನು ಮಾಡುತ್ತಿದ್ದವರು ಹೆಂಗಸರೇ. ತಿರುಮಲರಾಯರೇ, ಅಬ್ಬಕ್ಕ ದೇವಿಗೆ ಒಂದು ಒಳ್ಳೆಯ ಸಂಬಂಧವನ್ನು ಹುಡುಕಿ ಮದುವೆಯನ್ನು ಕೂಡ ಮಾಡಿದ್ದರು. ಅಬ್ಬಕ್ಕ ದೇವಿಯ ಪತಿಯ ಹೆಸರು ಲಕ್ಷ್ಮಪ್ಪ ಅರಸ ಬಂಗರಾಜ. ಆತ ಮಂಗಳೂರಿನ ಬಂಗ ಎನ್ನುವ ರಾಜ್ಯದ ರಾಜನಾಗಿದ್ದನು. ಈ ಸಂಬಂಧದಿಂದ ಎರಡೂ ರಾಜ್ಯಗಳ ರಾಜಕೀಯ ಮೈತ್ರಿ ಬಲವಾಯಿತು. ಆದರೆ ಅಬ್ಬಕ್ಕ ಹಾಗೂ ಲಕ್ಷ್ಮಪ್ಪ ಅರಸನ ಸಂಬಂಧ ಬಹು ಬೇಗನೆ ಮುರಿಯಿತು. ಅವಳ ಮೂರು ಹೆಣ್ಣುಮಕ್ಕಳೊಡನೆ ಅಬ್ಬಕ್ಕ ಮತ್ತೆ ಉಲ್ಲಾಳಕ್ಕೆ ವಲಸೆ ಬಂದು ನೆಲಸಿದಳು. 

ಅಬ್ಬಕ್ಕ ಸಿಂಹಾಸನವನ್ನು ಏರಿದಾಗ, ಅವಳ ಉಲ್ಲಾಳ  ಅಷ್ಟೇನು ವಿಶೇಷವಲ್ಲದ  ಸಣ್ಣ ಊರಾಗಿತ್ತು. ಆದರೆ ಅದು ಕರಾವಳಿ ಪ್ರದೇಶವಾಗಿದ್ದುದರಿಂದ, ಅಲ್ಲಿ ಯಾರಾದರೂ ಪರಿಣಾಮಕಾರಿ ಆಡಳಿತವನ್ನು ಮಾಡಿದರೆ, ಅದು ಪ್ರಮುಖ ಪಟ್ಟಣವಾಗಿ ಹೊರಹೊಮ್ಮಬಹುದಾಗಿತ್ತು. ಇದಕ್ಕೆ ಸರಿಯಾಗಿ ಅಬ್ಬಕ್ಕ ಉಲ್ಲಾಳದ ರಾಣಿಯಾಗಿದ್ದಳು. ಉಲ್ಲಾಳದ  ಆರ್ಥಿಕತೆ ಅಡಕೆ, ಮೆಣಸು ಹಾಗೂ ಜವಳಿ ಮಾರಾಟದ ಮೇಲೆ ಅವಲಂಬಿತವಾಗಿತ್ತು. ಜೊತೆಗೆ ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆಯೂ ಆಗಾಗ ವ್ಯಾಪಾರ ನಡೆಯುತ್ತಿತ್ತು. ಉಲ್ಲಾಳ ಬಹಳ ಅನುಕೂಲಕರ ಸ್ಥಾನದಲ್ಲಿತ್ತು. ಪಶ್ಚಿಮ ಘಟ್ಟಗಳಲ್ಲಿ ಉತ್ಪಾದಿಸಿದ ಎಲ್ಲಾ ಸರಕುಗಳನ್ನು ಸಮುದ್ರದ ಮೂಲಕ ಹಡಗುಗಳಲ್ಲಿ ಬೇರೆಬೇರೆ ದೇಶಗಳಿಗೆ ರಫ್ತು ಮಾಡಬಹುದಾಗಿತ್ತು. ಉಲ್ಲಾಳ ವಿಜಯನಗರದ ಅಧೀನ ರಾಜ್ಯ ಕೂಡ ಆಗಿತ್ತು. ಆದರೆ, ಅಬ್ಬಕ್ಕ ರಾಣಿಯಾಗುವ ಹೊತ್ತಿಗೆ, ವಿಜಯನಗರ ಸಾಮ್ರಾಜ್ಯ ದುರ್ಬಲಗೊಳ್ಳುತ್ತಿತ್ತು. ಉಲ್ಲಾಳದಲ್ಲಿ ಮಾತೃಪ್ರಧಾನದ ಸಂಪ್ರದಾಯ ಇದ್ದರೂ, ಆಗಿನ ಕಾಲದಲ್ಲಿ ಮಹಿಳೆಯರಿಗೆ ಅಧಿಕಾರದ ಹುದ್ದೆಗಳನ್ನು ಕೊಡಲು ಹಿಂಜರಿಯುತ್ತಿದ್ದರು. ಇದಕ್ಕಾಗಿ, ಅಬ್ಬಕ್ಕ ಆಡಳಿತವನ್ನು ದೃಢವಾಗಿ ಮಾಡಬೇಕಾಗಿತ್ತು. ದುಡ್ಡು-ಕಾಸಿನ ವಿಚಾರಗಳು, ನ್ಯಾಯ ಒದಗಿಸುವುದು, ವ್ಯಾಪಾರದ ನಿರ್ವಹಣೆಗಳೊಂದಿಗೆ  ಯುದ್ಧನೀತಿಯಲ್ಲೂ ಅಬ್ಬಕ್ಕ ದೇವಿ ಪರಿಣತೆಯನ್ನು ಗಳಿಸಿಕೊಂಡಿದ್ದಳು. ಉಲ್ಲಾಳದ ಹಿತ ಕಾಯಲು, ಅರಬ್ ಹಾಗೂ ಸ್ಥಳೀಯ ವ್ಯಾಪಾರಿಗಳೊಡನೆ ಉತ್ತಮ ಸಂಬಂಧಗಳನ್ನು ಅಬ್ಬಕ್ಕ ಕಾಪಾಡಿಕೊಂಡಿದ್ದಳು.  ಸುತ್ತಮುತ್ತಲಿನಲ್ಲಿದ್ದ ರಾಜ್ಯಗಳು ಮೇಲಿಂದ ಮೇಲೆ ಉಲ್ಲಾಳದ ಮೇಲೆ ದಂಡೆತ್ತಿ ಬರುತ್ತಿದ್ದವು. ಅವರುಗಳನ್ನು ಕೂಡ ವೀರ ಅಬ್ಬಕ್ಕ ದೇವಿ ಸದೆಬಡೆದು, ರಾಜ್ಯವನ್ನು ನಿಷ್ಕಂಟಕವನ್ನಾಗಿ ಮಾಡುತ್ತಿದಳು. ದೊಡ್ಡ ಸಮಸ್ಯೆಗಳು ಹುಟ್ಟಿಬರುವುದಕ್ಕೂ ಮುನ್ನವೇ, ಉಲ್ಲಾಳ ನೆಲೆಸಿದ್ದ ಸ್ಥಳದ ಸೂಕ್ಷ್ಮತೆಯಿಂದಾಗಿ  ಅವಳ ರಾಜ್ಯ, ಪರದೇಶಿಗಳ ಆಕ್ರಮಣಕ್ಕೆ ಗುರಿಯಾಗಬಹುದು ಎಂದು ಅಬ್ಬಕ್ಕ ಚೆನ್ನಾಗಿ ತಿಳಿದಿದ್ದಳು. ಹಾಗಾಗಿಯೇ ಅವಳು ಸೈನಿಕರಿಗೆ ತರಬೇತಿ ನೀಡಿ, ಕೋಟೆಗಳನ್ನು ನಿರ್ಮಿಸಿ, ನೌಕಾಪಡೆಯನ್ನೂ ಬಲಪಡಿಸಿಕೊಂಡಳು. ಇದೇ, ಅವಳು ಮುಂದೆ ಮಾಡಿದ ಸಾಧನೆಗಳಿಗೆ ಅಡಿಪಾಯವನ್ನು ನಿರ್ಮಿಸಿತ್ತು. 

ಅಬ್ಬಕ್ಕ ರಾಣಿಯಾಗುವಷ್ಟರಲ್ಲೇ ಪೋರ್ಚುಗೀಸ್ ವ್ಯಾಪಾರಿಗಳು ಭಾರತದಲ್ಲಿ ಕಾಲಿಟ್ಟಾಗಿತ್ತು. 1498ರಲ್ಲೇ ವಾಸ್ಕೋಡಗಾಮ ಕೇರಳದವರೆಗೂ ಪಯಣ ಮಾಡಿದ್ದನು. ಕೆಲವೇ ವರ್ಷಗಳಲ್ಲಿ ಪೋರ್ಚುಗೀಸರು ಭಾರತದೊಡಗಿನ ವ್ಯಾಪಾರದಲ್ಲಿ ಪೂರ್ಣಾಧಿಕಾರವನ್ನು ಸ್ಥಾಪಿಸಲು ಇಚ್ಛಿಸಿದ್ದರು. ಈ ನೆಪದಲ್ಲಿ ಆ ವಿದೇಶಿಗಳು, ಮೆಲ್ಲನೆ ಅಕ್ಕಪಕ್ಕದ ರಾಜ್ಯಗಳ ರಾಜರುಗಳನ್ನು ಅವರತ್ತ ಸೇರಿಸಿಕೊಳ್ಳುವ ಹೊಂಚು ಹಾಕಿದ್ದರು. ಕರ್ನಾಟಕದ ರಾಜ್ಯಗಳನ್ನು ತಮ್ಮ ಕೈವಶವನ್ನಾಗಿಸಿಕೊಳ್ಳಲು ಇಚ್ಛಿಸಿದ್ದವರು ಪೋರ್ಚುಗೀಸರು. ಸ್ಥಳೀಯ ರಾಜರುಗಳು ಅವರ ಆದೇಶಗಳಂತೆ ನಡೆಯದಿದ್ದರೆ ಅವರನ್ನು ಬೆದರಿಸುವುದು, ಶಿಕ್ಷಿಸುವುದು ಮುಂತಾದ ಹಿಂಸಾಚಾರಗಳನ್ನು ಮಾಡುತ್ತಿದ್ದರು. ಆ ವಿದೇಶಿಗಳು ಮಾಡಿದ ಅತ್ಯಾಚಾರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ. 

ಉಲ್ಲಾಳದ ಬಂದರಿನಿಂದ ಮೆಣಸು, ಅಕ್ಕಿ, ಅಡಕೆ ಇತ್ಯಾದಿಗಳ ವ್ಯಾಪಾರ ನಡೆಯುತ್ತಿತ್ತು. ಆದರೆ ಪೋರ್ಚುಗೀಸರಿಗೆ ಆ ವ್ಯಾಪಾರಗಳ ಮೇಲೆ ಸಂಪೂರ್ಣ ಅಧಿಕಾರ ಬೇಕಾಗಿತ್ತು. ಉಲ್ಲಾಳದವರಿಗೆ ಅರಬರೊಡನೆಯೂ ಒಳ್ಳೆಯ ಸಂಬಂಧ ಇತ್ತು. ಆದರೆ ಪೋರ್ಚುಗೀಸರಿಗೆ ಇದು ಇಷ್ಟವಿರಲಿಲ್ಲ. ಅರಬರನ್ನು ಹೊರಹಾಕುವುದು ಮತ್ತು ಉಲ್ಲಾಳದ ಬಂದರಿನ ಮೇಲೆ ತಮ್ಮ ಸಂಪೂರ್ಣ ಅಧಿಕಾರವನ್ನು ಸ್ಥಾಪಿಸುವುದು ಪೋರ್ಚುಗೀಸರ ಯೋಜನೆಯಾಗಿತ್ತು. ಪೋರ್ಚುಗೀಸರ ದಬ್ಬಾಳಿಕೆಗೆ ಹೆದರಿದ ಸಣ್ಣಪುಟ್ಟ ಸ್ಥಳೀಯ ರಾಜರುಗಳು ಅವರಿಗೆ ಕಪ್ಪ ಸಲ್ಲಿಸಲು ಸಿದ್ಧರಾದರು. ಆದರೆ ಅಬ್ಬಕ್ಕ ದೇವಿಯೊಬ್ಬಳು ಕಪ್ಪ ಸಲ್ಲಿಸಲು ನಿರಾಕರಿಸಿದಳು. ಇದರಿಂದ ಪೋರ್ಚುಗೀಸರಿಗೆ ಅಬ್ಬಕ್ಕ ದೇವಿಯೊಡನೆ ಶತ್ರುತ್ವ ಹುಟ್ಟಿತು. ಅಬ್ಬಕ್ಕಳಿಗೆ ಬುದ್ಧಿ ಕಲಿಸಬೇಕೆಂದು, ಪೋರ್ಚುಗೀಸರು ಉಲ್ಲಾಳದ ಹಡಗುಗಳನ್ನು ಮುಂದೆಹೋಗದಂತೆ ತಡೆದರು. ಪೋರ್ಚುಗೀಸರು ಅವರ ‘ಕಾರ್ಟಾಸ್’ ಎಂಬ ದಾಖಲೆಯಿಲ್ಲದೆ ಸಾಗುತ್ತಿದ್ದ ಉಲ್ಲಾಳದವರ  ಹಡಗುಗಳನ್ನು ತಡೆದು ಶಿಕ್ಷಿಸುತ್ತಿದ್ದರು. ಅರಬ್ ಹಾಗೂ ಪರ್ಷಿಯಾ ದೇಶಗಳೊಡನೆ ಸ್ವತಂತ್ರವಾಗಿ ವ್ಯಾಪಾರ ಮಾಡುತ್ತಿದ್ದ ಉಲ್ಲಾಳದ ವ್ಯಾಪಾರಿಗಳನ್ನು ಈಗ ಕಟ್ಟಿಹಾಕಿದಂತೆ ಆಗಿತ್ತು. ಅಷ್ಟೇ ಅಲ್ಲದೆ, ಅಬ್ಬಕ್ಕ ದೇವಿಯ ಗಂಡನಾಗಿದ್ದ ಲಕ್ಷ್ಮಪ್ಪನನ್ನು ಪೋರ್ಚುಗೀಸರು ಅವರ ಕಡೆಗೆ ಸೇರಿಸಿಕೊಂಡಿದ್ದರು. ಇದರಿಂದ ಉಲ್ಲಾಳ ರಾಜಕೀಯವಾಗಿ ದುರ್ಬಲಗೊಂಡಿತ್ತು. ಅಬ್ಬಕ್ಕ ಪೋರ್ಚುಗೀಸರ ಪೂರ್ಣಾಧಿಕಾರದ ಕನಸನ್ನು ನಾಶಮಾಡುತ್ತಿದ್ದಳು. ಇದರಿಂದ ರೋಷಗೊಂಡ ಪೋರ್ಚಗೀಸರು ಅಬ್ಬಕ್ಕಳೊಡನೆ ಮುಖಾಮುಖಿಯಾಗಿ ಯುದ್ಧಮಾಡಬೇಕೆಂದು ಇಚ್ಛಿಸಿದರು. 

ಮೊದಲನೆಯದಾಗಿ, ‘ಕಾರ್ಟಾಸ್’ ಎಂಬ ದಾಖಲೆ ಇಲ್ಲದ ಉಲ್ಲಾಳದ ಹಡಗುಗಳನ್ನು ತಡೆದು, ಅರಬ್ ಹಾಗೂ ಉಳ್ಳಾಲದ ವ್ಯಾಪಾರ ಸಂಬಂಧಗಳಲ್ಲಿ ಮೂಗು ತೂರಿಸುತ್ತಿದ್ದ, ಪೋರ್ಚುಗೀಸರನ್ನು ನೋಡಿ ಅಬ್ಬಕ್ಕಳಿಗೆ ಸಿಟ್ಟು ಬಂದಿತ್ತು. ಹೀಗಾಗಿ, ಅವಳು ತನ್ನ ರಾಜ್ಯದ ವ್ಯಾಪಾರಿಗಳಿಗೆ ನ್ಯಾಯ ಒದಗಿಸಲು ಪೋರ್ಚುಗೀಸರೊಡನೆ ಹೋರಾಡಿದಳು. ಅಬ್ಬಕ್ಕ ದೇವಿ ತನ್ನ ನೌಕಾ ಪಡೆಗೆ ಪೋರ್ಚುಗೀಸರ ಹಡಗುಗಳ ಮೇಲೆ ದಾಳಿಮಾಡುವಂತೆ ಆಜ್ಞೆಮಾಡಿದಳು. ಪೋರ್ಚುಗೀಸರಿಗೆ ಉಲ್ಲಾಳದಂತಹ ಸಣ್ಣ ರಾಜ್ಯ ಈ ರೀತಿಯಲ್ಲಿ ಹೋರಾಡುವುದನ್ನು ನೋಡಿ ಆಶ್ಚರ್ಯವಾಯಿತು. ಉಲ್ಲಾಳವನ್ನೇ ನಾಶಮಾಡುವ ಒಂದು ದಂಡಯಾತ್ರೆಯ ತಯಾರಿಯನ್ನು ಪೋರ್ಚುಗೀಸರು ಮಾಡಿದರು. 

1568ರಲ್ಲಿ ಉಲ್ಲಾಳವನ್ನು ನಾಶಮಾಡಬೇಕೆಂದು ಜನರಲ್ ಜೊವೊ ಅವರ ನೇತೃತ್ವದಲ್ಲಿ ಪೋರ್ಚುಗೀಸರು ಆಕ್ರಮಣವನ್ನು ಮಾಡಿ, ಉಲ್ಲಾಳದ ಬಂದರನ್ನು ವಶಪಡಿಸಿಕೊಂಡರು. ಅಬ್ಬಕ್ಕ ಹಾಗೂ ಅವಳ ಜನರನ್ನು ಪೋರ್ಚುಗೀಸರ ಸೈನ್ಯ ಹೆದರಿಸಿ, ಬಚ್ಚಿಟ್ಟುಕೊಳ್ಳುವ ಹಾಗೆ ಮಾಡಿತ್ತು. ಸ್ವಲ್ಪ ಸಮಯ ಉಲ್ಲಾಳ ನಿಜವಾಗಿಯೂ ಸೋತಿತು ಎಂಬಂತೆ ಇತ್ತು. ಆದರೆ ಅಬ್ಬಕ್ಕ ಹೆದರುವಂತಹಳಾಗಿರಲಿಲ್ಲ. ಸೋಲಲು ನಿರಾಕರಿಸಿದ ಅಬ್ಬಕ್ಕ ತನ್ನ ಸೈನಿಕರನ್ನು ಪುನಃ ಒಟ್ಟುಗೂಡಿಸಿದಳು.  ರಾತ್ರಿಯ ಹೊತ್ತಿನಲ್ಲಿ ಅವಳ ಸೈನಿಕರನ್ನು, ಪ್ರಜೆಗಳನ್ನು, ಬೆಸ್ತರನ್ನು ಮತ್ತು ಮಹಿಳೆಯರನ್ನು ಕೂಡ ಸೇರಿಸಿಕೊಂಡು ಪೋರ್ಚುಗೀಸರ ವಿರುದ್ಧ ಪ್ರತಿದಾಳಿ ಮಾಡಿದಳು. ಕತ್ತಲೆಯ ಹಾಗೂ ತಮ್ಮ ಭೂಪ್ರದೇಶದ ಜ್ಞಾನವನ್ನು ಉಪಯೋಗಿಸಿಕೊಂಡ ಅಬ್ಬಕ್ಕಳ ಪಡೆ, ಪೋರ್ಚುಗೀಸರನ್ನು ಸದೆಬಡಿಯಿತು. ಇದಾದ ನಂತರ ಮುಂದುವರೆದ ಯುದ್ಧದಲ್ಲಿ ಅಬ್ಬಕ್ಕ, ಜನರಲ್ ಜೊವೊ ಅವರನ್ನೇ ಕೊಂದು ವಿಜಯಗಳಿಸಿದಳು. 

ಅಬ್ಬಕ್ಕಳಿಗೆ ತನ್ನ ವಿಜಯ ಕೆಲವೇ ದಿನ ಇರುತ್ತದೆ, ಪುನಃ ಪೋರ್ಚುಗೀಸರು ದಾಳಿ ಮಾಡುತ್ತಾರೆ ಎಂಬ ಅನುಮಾನ ಇದ್ದೇ ಇತ್ತು. ಹಾಗಾಗಿ ಅವಳು ಅಕ್ಕಪಕ್ಕದ ರಾಜರುಗಳೊಡನೆ ಮೈತ್ರಿಯನ್ನು ಕೋರಿದಳು. ಅಬ್ಬಕ್ಕ, ಕಾಲಿಕಟ್ಟಿನ ಜಾಮೊರಿನ್ ಒಡನೆ ಮಿತ್ರತ್ವವನ್ನು ಬೆಳಸಿ, ಅವನ ನೌಕಾಪಡೆಯನ್ನು ತನ್ನ ಕಡೆಗೆ ಮಾಡಿಕೊಂಡಳು. ಅವಳು ಬಿಜಾಪುರದ ಸುಲ್ತಾನನೊಡನೆಯೂ ಸಂಬಂಧವನ್ನು ಬೆಳಸಿಕೊಂಡಳು. ಶಸ್ತ್ರಾಸ್ತ್ರಗಳ ಗಳಿಕೆಗೆ ಸಹಾಯ ಮಾಡಿದ ಅರಬ್ ವ್ಯಾಪಾರಿಗಳಿಗೆ, ವ್ಯಾಪಾರ ಮುಂದುವರೆಸುವಂತೆ ಅಬ್ಬಕ್ಕ ಅಭಯವನ್ನು ನೀಡಿದಳು. 

1568ರಲ್ಲಿ ಸೋಲಿನಿಂದ ಅವಮಾನಗೊಂಡ ಪೋರ್ಚುಗೀಸರು, ಪದೇಪದೇ ಉಲ್ಲಾಳದ ಮೇಲೆ ದಾಳಿ ನಡೆಸಿದರು. ಪೋರ್ಚುಗೀಸರು ಉಲ್ಲಾಳದ ವ್ಯಾಪಾರಿಗಳ ಮೇಲೂ ಕಣ್ಣು ಇಟ್ಟಿರುತ್ತಿದ್ದರು. ಅಬ್ಬಕ್ಕ ಇದಕ್ಕೆಲ್ಲಾ ತನ್ನ ಗೆರಿಲ್ಲಾ ತಂತ್ರಗಳಿಂದ ಉತ್ತರ ನೀಡಿದಳು. ಅವಳ ಸಣ್ಣಸಣ್ಣ ದೋಣಿಗಳು ವೇಗದಿಂದ ಸಾಗಿ, ಪೋರ್ಚುಗೀಸರ ಯುದ್ಧ ಹಡಗುಗಳಿಗೆ ಕಿರುಕುಳ ನೀಡಿದವು. ಆದರೆ ಸವಾಲುಗಳು ಹೆಚ್ಚುತ್ತಾಹೋದವು. ಅಬ್ಬಕ್ಕಳ ಗಂಡನೇ ಆಗಿದ್ದ ಲಕ್ಷ್ಮಪ್ಪ, ಪೋರ್ಚುಗೀಸರೊಡನೆ ಸೇರಿ, ಉಲ್ಲಾಳದಲ್ಲಿ ನಡೆಯುತ್ತಿದ್ದ ಎಲ್ಲವನ್ನೂ ಗುಪ್ತಚರನಾಗಿ ಅವರಿಗೆ ತಿಳಿಸುತ್ತಿದ್ದನು. ಇದರಿಂದ ಅಬ್ಬಕ್ಕಳಿಗೆ ಬಹಳ ಕಷ್ಟ ಉಂಟಾಯಿತು. ನಂತರ ನಡೆದ ಒಂದು ಸಂಚಿನಲ್ಲಿ, ಅಬ್ಬಕ್ಕಳಿಗೆ ಒಳಗಿನಿಂದಲೇ ದ್ರೋಹಮಾಡಲಾಯಿತು. ಪೋರ್ಚುಗೀಸರ ಭರವಸೆಗಳಿಂದ ಆಕರ್ಷಿತರಾದ ಕೆಲವು ಮುಖಂಡರು ಅವಳ ಯೋಜನೆಗಳ ಬಗ್ಗೆ ಪೋರ್ಚುಗೀಸರಿಗೆ ಮುಂಚಿತವಾಗೇ ತಿಳಿಸಿಬಿಟ್ಟಿದ್ದರು. ನಂತರದ ಹೋರಾಟದಲ್ಲಿ ಅಬ್ಬಕ್ಕಳನ್ನು ಸೆರೆ ಹಿಡಿಯಲಾಯಿತು. ಸೆರೆಮನೆಯಲ್ಲಿ ಕೂಡ ಅಬ್ಬಕ್ಕ ಪೋರ್ಚುಗೀಸರಿಗೆ ಹೆದರಲಿಲ್ಲ. ಧೈರ್ಯಗೆಡದೆ ತನ್ನ ಹೋರಾಟವನ್ನು ಮುಂದುವರೆಸಿದಳು. ಕೊನೆಗೂ ರಾಣಿ ಅಬ್ಬಕ್ಕ, ಪೋರ್ಚುಗೀಸರ ಆಜ್ಞೆಗಳನ್ನು ಧಿಕ್ಕರಿಸಿಯೇ ಸತ್ತಳು. ಎಂದೂ ಶರಣಾಗತಿಯ ಒಪ್ಪಂದಕ್ಕೆ ಸಹಿ ಹಾಕದೆ, ಎಂದಿಗೂ ಪೋರ್ಚುಗೀಸರಿಗೆ ಗೌರವ ಸಲ್ಲಿಸದೆ, ಅಜೇಯಳಾಗಿ, ತನ್ನ ಮಾತೃಭೂಮಿಗಾಗಿ ತನ್ನ ಪ್ರಾಣವನ್ನೇ ಬಲಿದಾನ ಮಾಡಿದ ಮಹಾತಾಯಿ ರಾಣಿ ಅಬ್ಬಕ್ಕ ದೇವಿ. 

ಅಬ್ಬಕ್ಕ ದೇವಿ ಮತ್ತು ಪೋರ್ಚುಗೀಸರ ನಡುವೆ ನಡೆದ ಯುದ್ಧಗಳು ಬರೀ ಹೋರಾಟಗಳಾಗಿರಲಿಲ್ಲ. ಸಾಮ್ರಾಜ್ಯಶಾಹಿ ಶಕ್ತಿಗಳ ಮುಂದೆ ಬಗ್ಗದೆ ನಿಂತು, ಭಾರತೀಯರ ಸ್ವಾತಂತ್ರ್ಯದ ಘನತೆಯನ್ನು ಎತ್ತಿಹಿಡಿಯುವ ಪ್ರಯತ್ನಗಳಾಗಿದ್ದವು. ಅಬ್ಬಕ್ಕಳಿಗೆ ಅವಳ ಗಂಡನೇ ಮತ್ತು ಅವಳ ಪ್ರಜೆಗಳೇ ದ್ರೋಹ ಬಗೆದರೂ, ಅವಳು ಎಂದೂ ತಲೆಬಾಗಿಸಲಿಲ್ಲ, ಮಾತೃಭೂಮಿಯನ್ನು ಬಿಟ್ಟುಕೊಡಲಿಲ್ಲ. ಅಬ್ಬಕ್ಕಳ ಉಲ್ಲಾಳ ಚಿಕ್ಕದಾಗಿದ್ದರೂ, ಅವಳ ಹೋರಾಟದ ಆತ್ಮ ವಿಶಾಲವಾಗಿತ್ತು. 'ನಿಜವಾದ ಶಕ್ತಿ ಇರುವುದು ದೊಡ್ಡ ದೊಡ್ಡ ಸಾಮ್ರಾಜ್ಯಗಳಲಲ್ಲ, ಬದಲಾಗಿ ಅದು ಇರುವುದು ಹೋರಾಡುವ ಧೈರ್ಯದಲ್ಲಿ,' ಎಂಬುದೇ ರಾಣಿ ಅಬ್ಬಕ್ಕ ದೇವಿಯ ಹೋರಾಟದ ಬದುಕಿನ ಪಾಠ. 

                                                                                     -೦-೦-೦-