Thursday 4 October 2018

ದೀಪ ಧಾರಿಣಿ

ನಮ್ಮ ರತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆಯೆ?

ಎಡಬಾಗದ ಚಿತ್ರ 'ದೀಪ ಧಾರಿಣಿ' ಈ ದಿನ ಸುದ್ದಿಯಾಗಿದೆ. ಏಕೆಂದರೆ ಅದರ ರೂಪದರ್ಶಿ ಗೀತಾ ಉಪ್ಲೆಕರ್ ರವರು  ನೆನ್ನೆ ನಿಧನ ಹೊಂದಿದ್ದಾರೆ.  ಕಲಾವಿದರಾದ ಆಕೆಯ ತಂದೆ ಎಸ್.ಎಲ್ . ಹಲ್ದಂಕರ್ ರವರು ಈ  ಚಿತ್ರಕ್ಕೆ  ೮೦ ವರ್ಷಗಳ ಹಿಂದೆ ಜೀವವನ್ನು ನೀಡಿದರು. ಅದೀಗಲೂ  ಮೈಸೂರ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ರಾರಾಜಿಸುತ್ತಿದೆ. ಆ ಹೆಣ್ಣಿನ ಮುಖದಲ್ಲಿನ ಕಾಂತಿಯನ್ನು ನೋಡಿ, ಚಿತ್ರದಲ್ಲಿನ ನೆರಳು-ಬೆಳಕಿನ ಮೋಡಿಯನ್ನು ನೋಡಿ! ಇದು ಅಮೂಲ್ಯ ಕಲಾಕೃತಿಯೆಂಬುದರಲ್ಲಿ ಎರಡು ಮಾತಿಲ್ಲ. 

ಪಕ್ಕದಲ್ಲಿನ 'ಮೋನಾ ಲಿಸಾ'ಕ್ಕೆ ಹೋಲಿಸಿದರೆ ನಮ್ಮ 'ದೀಪ ಧಾರಿಣಿ'ಗೆ ಎರಡನೇ ಸ್ಥಾನ! ಮೋನಾ ಲಿಸಾವನ್ನು ಲಿಯಾನಾರ್ಡೋ ಡಾ ವಿಂಚಿಯವರು ೧೬ನೇ ಶತಮಾನದಲ್ಲಿ ಚಿತ್ರಿಸಿದರು.  ಅದೀಗ ಪ್ಯಾರಿಸ್ ನ  ಲವೂರೆ ಮೂಸೆಯಂನಲ್ಲಿ ಪ್ರದರ್ಶಿತಗೊಂಡಿದೆ.  ವಿಶ್ವದಲ್ಲೇ ಹೆಚ್ಚು ಜನ ವೀಕ್ಷಿಸಿದ ಚಿತ್ರ ಅದಂತೆ. ಅದರ ಬೆಲೆ ೮೦೦ ಮಿಲಿಯನ್ ಡಾಲರ್ ಗಳಿಗೂ ಹೆಚ್ಚ೦ತೆ! ಕಳೆದ ವರ್ಷ ಪ್ಯಾರಿಸ್ ಗೆ ಹೋಗಿ ನಾನದನ್ನು ವೀಕ್ಷಿಸಿದಾಗ ಅದರಲ್ಲಿ ನನಗೇನೂ ಅದ್ಭುತ ಕಂಡುಬರಲಿಲ್ಲ. ನಮ್ಮ ದೀಪ ಧಾರಿಣಿಯೇ ಮತ್ತೊಮ್ಮೆ ನೆನಪಿಗೆ ಬಂದಳು. 

ನಮ್ಮ ರತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆಯ? ವಿಶ್ವದ ಲಕ್ಷೋಪಲಕ್ಷ ಪ್ರವಾಸಿಗಳು ಬಂದು ನಮ್ಮ ರತ್ನಗಳನ್ನು ನೋಡುವಂತೆ ನಾವು ಮಾಡಬಲ್ಲೆವೆ ಎಂಬ ತುಡಿತ ಇಂದು ದೇಶಪ್ರೇಮಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ. 
ಲಕ್ಷ್ಮೀನಾರಾಯಣ ಕೆ 
ಬೆಂಗಳೂರು 

No comments:

Post a Comment