Wednesday, 25 June 2025

Vijaya vani

 ಶ್ರೀ ವಿಶ್ವೇಶ್ವರ ಭಟ್

ವಿಜಯ ವಾಣಿ

ಬೆಂಗಳೂರು


ಮಾನ್ಯರೆ


ಜುಲೈ ತಿಂಗಳ ಪ್ರಕಟಣೆಗೆ ಕವನಗಳು


ನನ್ನ ಮೂರು ಕವನಗಳನ್ನು ಕಳುಹಿಸುತ್ತಿದ್ದೇನೆ. ದಯಮಾಡಿ ಪ್ರಕಟಿಸಿ. ಈ ಕವನಗಳನ್ನು ಬೇರ್ಯಾರಿಗೂ ಕಳುಹಿಸಿಲ್ಲ.  ಜೂಲೈ ೪ರವರೆಗೆ ಕಾಯುತ್ತೇನೆ. 


೧) ಗೊರೂರು ರಾಮಸ್ವಾಮಿ ಅಯ್ಯಂಗಾರ್

ಜನುಮ ದಿನ - ೦೪ ಜುಲೈ

ನನ್ನ ನುಡಿ ನಮನ

***


ಗೊರೂರ ಭಾಗೀರಥಿ

ಅವಳೇ ಹೇಮಾವತಿ

ಹೇಮಾವತಿಯ ಧಾರೆಗೆ

ಗೊರೂರಾದ್ರು ಸಾಹಿತಿ


ಶಾಲೆ ಬಿಟ್ಟ ಗೊರೂರು

ಗಾಂಧಿ ಟೋಪಿ ಹಾಕಿದ್ರು

ಜೈಲ್ ಸೇರಿ ವಧೆ ತಿಂದ್ರೂ

ಭಾರತ್ ಮಾತೆ ಜೈ ಅಂದ್ರು


ಭೂತಯ್ಯನ ಮಗ ಅಯ್ಯ

ದೇವಯ್ಯನ ಮಗ ಗುಳ್ಳ

ಆದ್ರಲ್ಲಾ ಜಗಜಾಹೀರು

ಆ ಗಮ್ಮತ್ತೇ ನಮ್ಮ ಗೊರೂರು


ಹಳ್ಳಿ ಕಥೆ ಗೊರೂರು

ಅಮೇರಿಕಾಗ್ ಹೋಗಿದ್ರು

ಅಲ್ಲಿಂದೆಲ್ಲಾ ಕಂಡ್ರೂ

ನಮ್ಮ ಗೊರೂರೇ ಮೇಲಂದ್ರು

-೦-೦-೦-

ಡಾ. ಎಂ. ಬಾಲಮುರಳಿ ಕೃಷ್ಣ

ಜನುಮ ದಿನ - ೦೬ ಜುಲೈ

ನನ್ನ ನುಡಿ ನಮನ

***

'ನಗುಮೋಮು ಗನಲೇನಿ'

ರಾಮನ ನಗುಮೊಗವ ಕಾಣದ 

ತ್ಯಾಗರಾಜರ ಉದ್ಗಾರ 

ಆಭೇರಿ ರಾಗದ ಚಮತ್ಕಾರ 

ಬಾಲಮುರಳಿಯ ಕೊರಳಲಿ 

ಕಂಡಿತು ಸಾಕ್ಷಾತ್ಕಾರ 


'ದೇವಾದಿ ದೇವ ಶ್ರೀ ವಾಸುದೇವ'

ಮೊರೆಯಿಟ್ಟರು ಮೈಸೂರ ದಾಸರು 

ಬಾಲಮುರಳಿಯ ದನಿಯಲ್ಲಿ 

ಸುನಂದಾ ವಿನೋದಿನಿಯ ಒಸರು 

ಕುಣಿಯಿತು ಭಕುತರ ನಾಲಿಗೆಯಲ್ಲಿ 

ವಾಸುದೇವನ ಹೆಸರು 


ಜುಗಲು ಬಂಧಿಯ ಜೋಡಿ 

ಬಾಲಮುರಳಿಯ ಮೋಡಿ 

ಭೀಮಸೇನರ ಕೂಡಿ 

ಕಲ್ಯಾಣಿ ಯಮುನೆಯರ ಹಾಡಿ  

ಹರಿದಿತ್ತು ಮನ ಮನೆಗಳಲಿ 

ಭಕುತಿಯ ನಡೆ ನುಡಿ 


ನಾರದರ ವೀಣೆಯದು 'ಮಹತಿ'

ಬಾಲಮುರಳಿಯ ಕೈಯ ಹತ್ತಿ 

ಹೊಸ ರಾಗವಾಯ್ತು 

ನಾಲ್ಕೇ ಸ್ವರಗಳ ಉಳಿಸಿ ಬಳಸಿ 

ಸೃಜನಶೀಲ ಜೀವವದು 

ಸದಾ ಹೊಸತನದ ಬೆನ್ನ ಹತ್ತಿ 

-೦-೦-೦-

ವಿಶ್ವ ಹುಲಿ ದಿನ 

೨೯ ಜುಲೈ 

ನನ್ನ ನುಡಿ ನಮನ 

***

ಹುಲಿರಾಯ ಹುಲಿರಾಯ 

ಚಿನ್ನದ ಬಣ್ಣ ಚುರುಕು ಕಣ್ಣು 

ಚಿತ್ತಾರದ ಪಟ್ಟೆ ಉದ್ದನೆ ಬಾಲ 

ಮೀರಿ ಮೀರಿ ಮೀಸೆಯ ಮಹರಾಯ 


ನೀನಿರೆ ಕಾಡು ಹಸಿರಿನ ಬೀಡು 

ಮೊಡವ ಕರೆಯುವ 

ಮಳೆಯನು ಸುರಿಸುವ 

ನೆಲವನು ತಣಿಸುವ ನೆಮ್ಮದಿ ಹಾಡು 


ಕಾದರು ಕೊಂದರು ಸುಂದರ ನೀನು 

ವನಕುಲಕೆ ಅಭಯವು ನೀನು 

ನಿನ್ನ ನಡೆಯಲಿ ಗಾಂಭೀರ್ಯವದೇನು? 

ಭರತ ಭೂಮಿಯ ಹೆಮ್ಮೆಯು ನೀನು 

-೦-೦-೦-






No comments:

Post a Comment