ಗೊರೂರ ಭಾಗೀರಥಿ
ಅವಳೇ ಹೇಮಾವತಿ
ಹೇಮಾವತಿಯ ಧಾರೆಗೆ
ಗೊರೂರಾದ್ರು ಸಾಹಿತಿ
ಶಾಲೆ ಬಿಟ್ಟ್ ಗೊರೂರು
ಗಾಂಧಿ ಟೋಪಿ ಧರಿಸಿದರು
ಜೈಲ್ ಸೇರ್ ಒದೆ ತಿಂದ್ರು
ಭಾರತ್ ಮಾತೆ ಜೈ ಅಂದ್ರು
ಭೂತಯ್ಯನ ಮಗ ಅಯ್ಯ
ದೇವಯ್ಯನ ಮಗ ಗುಳ್ಳ
ಆದ್ರಲ್ಲಾ ಜಗಜಾಹೀರು
ಆ ಗಮ್ಮತ್ತೇ ನಮ್ಮ ಗೊರೂರು
ಹಳ್ಳಿ ಕಥೆ ಗೊರೂರು
ಅಮೇರಿಕಾಗೆ ಹೋಗಿದ್ರು
ಅಲ್ಲಿರುದೆಲ್ಲಾ ಕಂಡ್ರೂ
ನಮ್ಮ ಗೊರೂರೇ ಮೇಲಂದ್ರು
No comments:
Post a Comment