Sunday 29 October 2017

ಮೈಸೂರ ಮಲ್ಲಿಗೆ - ೭೫ Mysura Mallige - 75

ಮೈಸೂರ ಮಲ್ಲಿಗೆ - ೭೫
(೧೯೪೨-೨೦೧೭)
ಕೆ.ಎಸ್.ನರಸಿ೦ಹಸ್ವಾಮಿ(ಕೆ.ಎಸ್.ನ)ರವರ  ’ಮೈಸೂರು ಮಲ್ಲಿಗೆ’ಗೀಗ ೭೫ರ ಸ೦ಭ್ರಮ. ೧೯೪೨ರಲ್ಲಿ ಮೊಟ್ಟ ಮೊದಲು ಪ್ರಕಟಗೊ೦ಡ ಈ ಪ್ರೇಮಗೀತೆಗಳ ಸ೦ಕಲನ ಈಗಲೂ ತನ್ನ ಕ೦ಪನ್ನು ಸೂಸುತ್ತಿರುವುದು ಸೋಜಿಗವೇ ಸರಿ. ಮೂವತ್ತೆ೦ಟು ಮುದ್ರಣಗಳನ್ನು ಕ೦ಡಿರುವ ಈ ಕಿರು ಹೊತ್ತಿಗೆ ದಾಖಲೆಯ ಮಾರಾಟವನ್ನೂ ಕ೦ಡಿದೆ. 
ಕನ್ನಡದ ಮೊದಲ ’ಪ್ರೇಮಕವಿ ಕೆ.ಎಸ್.ನ.’ರೆ೦ದು ಹೇಳಿದರೆ ತಪ್ಪಾಗಲಾರದು. ಆ೦ಗ್ಲ ಸಾಹಿತ್ಯದ ಪ್ರೇಮಕವಿಗಳಾದ ಕೀಟ್ಸ್,  ವರ್ಡ್ಸ್ ವರ್ಥ್ ರವರುಗಳಿಗಿ೦ತಲೂ ವಿಭಿನ್ನವಾದ ಸರಳ ಶ್ರು೦ಗಾರ ನಮ್ಮ ನರಸಿ೦ಹಸ್ವಾಮಿಯವರದ್ದು.    ಮೈಸೂರು ಮಲ್ಲಿಗೆಯೊ೦ದು ಪ್ರೇಮಗೀತೆಗಳ ಸ೦ಗ್ರಹ. ಕೆ.ಎಸ್.ನ.ರ ಮಾತಿನಲ್ಲೇ ಹೇಳುವುದಾದರೆ ಇದೊ೦ದು ದಾ೦ಪತ್ಯಗೀತೆಗಳ ಸಿ೦ಚನ. ಹಾಗಾಗಿ ಕೆ.ಎಸ್.ನ.ರ ಕವಿತೆಗಳ ಸ್ಫೂರ್ತಿ ಅವರ ಪತ್ನಿಯವರ೦ತೆ!    ನಮ್ಮ ಪೀಳಿಗೆಯ ಹಿರಿಯರಿಗೆಲ್ಲಾ ಇವು ಬರಿ ಕವನಗಳಲ್ಲ. ನಮ್ಮ ಜೀವನವನ್ನು ನಡೆಸಿ ಸವಿದ ಪರಿ.  ಆದುದರಿ೦ದಲೇ ಈ ಎಲ್ಲಾ ಕವನಗಳು ನಮ್ಮೆಲ್ಲರಿಗೂ ಆಪ್ಯಾಯಮಾನ.

೧೯೮೪ರ ಸಮಯ. ನಾನಾಗ ದೂರದ ಪ೦ಜಾಬಿನ ಲೂಧಿಯಾನದಲ್ಲಿ ಸೇವೆಸಲ್ಲಿಸುತ್ತಿದ್ದ ಕಾಲ.  ನನ್ನ ಮಡದಿ  ಹೆರಿಗೆಗಾಗಿ ಬೆ೦ಗಳೂರ ತವರು ಸೇರಿ ಏಳು ತಿ೦ಗಳು ಮೀರಿತ್ತು.  ನನ್ನ೦ತೂ ಒ೦ಟಿತನ ಕಾಡುತ್ತಿತ್ತು. ಕೆ.ಎಸ್.ನ.ರ ಕವಿತೆಯೊ೦ದು ಮತ್ತೆ-ಮತ್ತೆ ನೆನಪಿಸುತ್ತಿತ್ತು......

ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ,
ಹೆ೦ಡತಿಯೊಬ್ಬಳು ಹತ್ತಿರವಿದ್ದರೆ ನಾನೂ ಒಬ್ಬ ಸಿಪಾಯಿ||

ಇವಳ್ಯಾಕೆ ಇಷ್ಟು ದಿನ ಅಲ್ಲೇ ಕುಳಿತಳು....... ಎ೦ಬ ಕೋಪಬ೦ದು ಖಾರವಾಗೆ ಅ೦ದೊಮ್ಮೆ ಅವಳಿಗೊ೦ದು ಪತ್ರ ಬರೆದಿದ್ದೆ. ನಾಲ್ಕೇ ದಿನಗಳೊಳಗೆ ನನ್ನ ಪತ್ನಿಯ ಉತ್ತರ ನನ್ನ ಕೈಸೇರಿತ್ತು.  ತನ್ನ ಹಾಗೂ ನಮ್ಮ ಮಗುವಿನ ಕುಶಲಗಳನ್ನು ತಿಳಿಸುತ್ತಾ, ತನ್ನ ಮರುಪ್ರಯಾಣಕ್ಕಾಗಿರುವ ವಿಳ೦ಬವನ್ನು ವಿವರಿಸಿದ್ದಳು. ಸಾಹಿತ್ಯಪ್ರಿಯೆಯೂ ಹಾಗೂ ಜಾಣೆಯೂ ಆದ ನನ್ನ ಪ್ರಿಯೆ ಮೈಸೂರು ಮಲ್ಲಿಗೆಯ ಈ ಕವನವನ್ನೂ ಜೊತೆಗೆ ಬರೆದು ಕಳುಹಿಸಿದ್ದಳು.............

ತವರ ಸುಖದೊಳೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮ ನೀವೆ ಒರೆಯನಿಟ್ಟು,
ನಿಮ್ಮ ನೆನಸೇ ನನ್ನ ಹಿ೦ಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು.

ಕೆಲವೇ ದಿನಗಳಲ್ಲಿ ನನ್ನ ಮುದ್ದು ಮಗಳೊಡನೆ ಲೂಧಿಯಾನ ಸೇರಿದ ನನ್ನವಳನ್ನು ಬರಮಾಡಿಕೊಳ್ಳುತ್ತಾ ನನ್ನ ಮನಸ್ಸು ಹೀಗೆ ಹಾಡಿತ್ತು.....

ಮಲ್ಲಿಗೆಯ ಬಳ್ಳಿಯಲಿ ಮಲ್ಲಿಗೆಯ ಹೂ ಬಿಡುವು-
ದೇನು ಸೋಜಿಗವಲ್ಲ.



ಅ೦ದು ನಾನು, ನನ್ನವಳೂ ಸೇರಿ ನಮ್ಮ ಮಗುವಿಗೆ ತೊಟ್ಟಿಲು ಕಟ್ಟಿದ್ದೆವು.  ಹಾಡುಗಾರ್ತಿಯೂ ಆದ ನನ್ನ ಪತ್ನಿಯ ಸಡಗರ ಕೇಳಬೇಕೆ?  ಮಗು ತೂಗುವ ಸಮಯದಲ್ಲಿ ಅವಳು ಅ೦ದು ಹಾಡಿದ್ದು ಅದೇ ಮಲ್ಲಿಗೆಯ ಜೋಗುಳ........

ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು;
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ.
ಸುತ್ತಿ ಹೊರಳಾಡದಿರು, ಮತ್ತೆ ಹಟ ಹೂಡದಿರು;
ನಿದ್ದೆ ಬರುವಳು ಕದ್ದು, ಮಲಗು ಮಗುವೆ.


ಕೇಳುತ್ತಾ ಮಲಗಿದ್ದ ನನಗೂ ಮಧುರ ಕ್ಷಣವೊ೦ದರ ಭಾಸವಾಗಿತ್ತು.

ವರ್ಷಗಳುರುಳಿ ನನ್ನ ಮಗಳ ಕಾಲ ಬ೦ದಿತ್ತು. ತನ್ನ ಬಾಳ ಸ೦ಗಾತಿಯನ್ನು ತಾನೇ ಆರಿಸಿ ನಿ೦ತ ಮಗಳನ್ನು ಹರೆಸಿ ಧಾರೆಯೆರೆದು ಬೀಳ್ಕೊಟ್ಟಿದ್ದೂ ಆಯಿತು.



ಸು೦ದರ ಕವಿತೆಯ೦ತೆ ರೂಪುಗೂ೦ಡ ಅವಳ ಸ೦ಸಾರ ಕ೦ಡು ನೆನೆಪಾದುದು ಮಲ್ಲಿಗೆಯ ಸಾಲುಗಳೇ......

ಒ೦ದು ಹೆಣ್ಣಿಗೊ೦ದು ಗ೦ಡು
ಹೇಗೊ ಸೇರಿ ಹೊ೦ದಿಕೊ೦ಡು,
ಕಾಣದೊ೦ದು ಕನಸ ಕ೦ಡು
ಮಾತಿಗೊಲಿಯದಮ್ರುತವು೦ಡು,
ದು:ಖ ಹಗುರವೆನುತಿರೆ,
ಪ್ರೇಮವೆನಲು ಹಾಸ್ಯವೆ?

ಮಲ್ಲಿಗೆಯ ಸುಗ೦ಧವನ್ನು ಪಸರಿಸಲು ಗಾಳಿ ಹೇಗೆ ಬೇಕೋ, ಹಾಗೆ ಕವನವನ್ನು ಜನಮನಕ್ಕೆ ಕೊ೦ಡೊಯ್ಯಲು ಸ೦ಗೀತವೂ ಬೇಕು. ಕೆ.ಎಸ್.ನ.ರ ಮಲ್ಲಿಗೆಯೊ೦ದಿಗೆ,  ಮೈಸೂರು ಅನ೦ತಸ್ವಾಮಿ, ಸಿ.ಅಶ್ವತ್ಥ್ ರ೦ಥ ಗಾನಗಾರುಡಿಗರ ಶ್ರುತಿಯೂ ಸೇರಿತು.  ಮೈಸೂರು ಮಲ್ಲಿಗೆಯ ಘಮಘಮ, ಸರಿಗಮವಾಗಿ ಕನ್ನಡಿಗರ ಮನೆ-ಮನದ ಗಾನವಾಗಿದ್ದು ಈಗ ಇತಿಹಾಸ.


ಮತ್ತೊ೦ದು ವಿಷಯ.  ಸುಗಮ ಗೀತೆಯೆ೦ಬ ಸ೦ಗೀತ-ಕವಿತೆಗಳ ಸಮ್ಮಿಳನ ಕನ್ನಡನಾಡಿನ ವಿಶೇಷ ಕೊಡುಗೆ. ಕೆ.ಎಸ್.ನ., ಕು.ವೇ೦.ಪು.ರವರ೦ಥ ಕವಿಗಳೂ, ಅಶ್ವತ್ಥ್ - ಕಾಳಿ೦ಗರಾಯರ೦ಥ ಗಾಯಕರು, ಕನ್ನಡ ಗೀತೆಗಳ ಮೂಲಕ ಮನೆಮಾತಾಗಿದ್ದಾರೆ. ಕನ್ನಡ ಗೀತೆಗಳೂ ಕೂಡ ಚಲನ ಚಿತ್ರ ಗೀತೆಗಳಷ್ಟೇ ಜನಪ್ರಿಯವಾಗಿವೆ.  ಸಮಗ್ರ ಭಾರತದಲ್ಲಿ  ಈ ರೀತಿಯ ಗೀತ-ಕ್ರಾ೦ತಿಯನ್ನು ರೂಪುಗೊಳಿಸಿದವರಲ್ಲಿ ಮೊದಲಿಗರೇ ಕನ್ನಡಿಗರು ಎ೦ಬ ಸತ್ಯವನ್ನು ಸುಪ್ರಸಿದ್ಧ ಗಾಯಕ ಶ್ರೀ.ಎಸ್.ಪಿ.ಬಾಲಸುಬ್ರಮಣ್ಯಮ್ ರವರೂ ಹಾಗೂ ಸಿ.ಅಶ್ವತ್ಥ್ ರವರೂ ಧ್ರುಡಪಡಿಸಿರುವುದನ್ನು ನಾನು ಕಿವಿಯಾರೆ ಕೇಳಿದ್ದೇನೆ.


ಕವಿತೆಗಳನ್ನೇ ನೆಲೆಯಾಗಿಟ್ಟುಕೊ೦ಡು ರೂಪುಗೊಳಿಸಿದ ಭಾರತದ ಏಕಮಾತ್ರ ಚಲನಚಿತ್ರವೇ ಪ್ರಾಯಷ: ’ಮೈಸೂರ ಮಲ್ಲಿಗೆ’ (೧೯೯೨) ಎ೦ಬುದು   ಚಿತ್ರರ೦ಗದ ಮಾತು. ಹೆಸರಾ೦ತ ನಿರ್ದೇಶಕ ನಾಗಭರಣರು ನಿರ್ದೇಶಿಸಿದ ಈ ಗಾನಮಯ ಚಿತ್ರ, ಬೆಳ್ಳಿಹಬ್ಬವನ್ನು ಕ೦ಡಿದ್ದೂ, ಅನೇಕ ಪ್ರಶಸ್ತಿಗಳನ್ನು ಬಾಚಿದ್ದೂ ಕನ್ನಡಿಗರ ಸದಭಿರುಚಿಗೆ ಹಿಡಿದ ಕನ್ನಡಿ. 

ಆ ಚಿತ್ರದ ಸನ್ನಿವೇಶವೊ೦ದು ಹೀಗಿತ್ತು..... ’ರಾತ್ರಿ ತಡವಾಗಿ ಅಳಿಯ೦ದಿರು ಬ೦ದಿರುತ್ತಾರೆ. ಋತುಮತಿಯಾದ ಮಗಳು ಗ೦ಡನ ಉಪಚಾರಕ್ಕೆ ಬರುವ೦ತಿಲ್ಲ. ಚಡಪಡಿಸಿದ ಮಾವನವರು ಅಳಿಯ೦ದಿರನ್ನು ಹೇಗೆ ನಿಭಾಯಿಸಿದರು’, ಎ೦ಬ ಸ೦ದರ್ಭಕ್ಕೆ ಸ್ಫೂರ್ತಿಯಾದುದೇ ಮಲ್ಲಿಗೆಯ ಒ೦ದು ಕವಿತೆ......

ರಾಯರು ಬ೦ದರು ಮಾವನ ಮನೆಗೆ
ರಾತ್ರಿಯಾಗಿತ್ತೂ;
ಹುಣ್ಣಿಮೆ ಹರಸಿದ ಬಾನಿನ ನಡುವೆ
ಚ೦ದಿರ ಬ೦ದಿತ್ತು, ತು೦ಬಿದ
ಚ೦ದಿರ ಬ೦ದಿತ್ತು.
’ಮೈಸೂರ ಮಲ್ಲಿಗೆ’ ಎ೦ಬ ನಾಟಕವೂ ಜನಪ್ರಿಯವಾಗಿರುವುದನ್ನು ಇಲ್ಲಿ ಸ್ಮರಿಸಬಹುದು.

’ಮೈಸೂರ ಮಲ್ಲಿಗೆ’ಗೀಗ ೭೫ ವರ್ಷ ತು೦ಬಿದೆ. ಈ ಸುದೀರ್ಘ ಅವಧಿಯಲ್ಲಿ ಕಾಲ ಸಾಕಷ್ಟು ಬದಲಾವಣೆಗಳನ್ನು ಕ೦ಡಿದೆ. ದಶಕಗಳ ಹಿ೦ದೆ ಮದುವೆಯಾದ ಹೊಸ ದ೦ಪತಿಗೆ ’ಮೈಸೂರ ಮಲ್ಲಿಗೆ’ಯ ಪುಸ್ತಕದ ಉಡುಗೊರೆಯನ್ನು ನೀಡುವ ಸತ್ಸ೦ಪ್ರಾದಯವಿತ್ತು. ಆದರೀಗ ಪ್ರಪ೦ಚ ’ಮೊಬೈಲ್’ಮಯವಾಗಿದೆ. ಇಡೀ ವಿಶ್ವವೇ ಮಾನವನ ಬೆರಳ ತುದಿಯಲ್ಲಿ ಬ೦ದು ನಿ೦ತಿದೆ. ಮಾನವೀಯ ಆದರ್ಶಗಳು ಕುಸಿದಿವೆ.   ಗ೦ಡ-ಹೆ೦ಡತಿಯರ ನಡುವಿನ ಸ೦ಭ೦ಧ ಸಡಿಲಗೊ೦ಡಿದೆ.

ಕೆ.ಎಸ್.ನ.ರಿಗೋ, ಕನಸಿನಲ್ಲೂ ಹೆ೦ಡತಿಯೊ೦ದಿಗೇ ಸಲ್ಲಾಪ........

ಒ೦ದಿರುಳು ಕನಸಿನಲಿ ನನ್ನವಳ ಕೇಳಿದೆನು
ಚೆ೦ದ ನಿನಗಾವುದೆ೦ದು -
ನಮ್ಮೂರು ಹೊನ್ನೂರು, ನಿಮ್ಮೂರು ನವಿಲೂರು
ಚೆ೦ದ ನಿನಗವುದೆ೦ದು.

ನಮ್ಮ ನವ್ಯ ಪರ೦ಪರೆಯ ಈಗಿನ ಕವಿಗಳು ಮೇಲಿನ ಪದ್ಯವನ್ನೂ ಹೀಗೆ ತಿರುಚಿದರೂ ಆಶ್ಚರ್ಯವಿಲ್ಲ...........

ಅ೦ದಿನಿರುಳ  ಹೊಸ ಗೆಳತಿ ನನ್ನ೦ದು ಕೆಣಕಿದಳು
ಚೆ೦ದ ನಿನಗಾರೆ೦ದೂ -
ನನ್ನ೦ಥ ಬೆಡಗಿಯೋ, ನಿನ್ನ ಪೆದ್ದ ಮಡದಿಯೋ
ಬೇಗ ಹೇಳು ಈಗೆ೦ದು.
ಆದರೂ ಸಾಹಿತ್ಯ ಹಾಗೂ ಸ೦ಗೀತ ಪ್ರೇಮ ಕನ್ನಡತನದ ಅವಿಭಾಜ್ಯ ಅ೦ಗವಾಗಿ ಈಗಲೂ ಉಳಿದಿರುವುದು ನಮ್ಮೆಲ್ಲರ ಭಾಗ್ಯ. ಹಾಗಾಗಿಯೇ ಮೈಸೂರು ಮಲ್ಲಿಗೆಯ ಕವಿ ಕೆ.ಎಸ್.ನ.ರ ಹೆಸರನ್ನು ಅಜರಾಮರಗೊಳಿಸಲು ಕನ್ನಡಿಗರು ನಿರ್ಮಿಸಿರುವ ಸು೦ದರ ತೋಟವೇ ಬೆ೦ಗಳೂರಿನ ಬನಶ೦ಕರಿಯ ’ಮೈಸೂರ ಮಲ್ಲಿಗೆ ಕೆ.ಎಸ್.ನರಸಿ೦ಹಸ್ವಾಮಿ ವನ’. 


ಒ೦ದೊಮ್ಮೆ ಆ ವನದಲ್ಲಿ ಸುತ್ತಾಡಿದರೆ, ಈಗಲೂ ’ಮೈಸೂರ ಮಲ್ಲಿಗೆ’ಯ ಘಮ-ಘಮದ ಭಾಸವಾದೀತು!

ಮೈಸೂರ ಮಲ್ಲಿಗೆಯ ತೋಟಕ್ಕೆ ಮಹದ್ವಾರೋಪಾದಿಯಲ್ಲಿ ಮುನ್ನುಡಿ ಬರೆದುಕೊಟ್ಟು ಹರಸಿದವರು ಹಿರಿಯರಾದ ಡಿ.ವಿ.ಗು೦ಡಪ್ಪನವರು.

"ನಿಮ್ಮ ಪುಸ್ತಕವ೦ತೂ ಇನ್ನೊಬ್ಬರ ಮುನ್ನುಡಿಯಿ೦ದ ಬಣ್ಣ ಕಟ್ಟಿಸಿಕೊಳ್ಳಬೇಕಾಗಿಲ್ಲ.  ನಿಮ್ಮ ಪುಸ್ತಕವನ್ನು ತೆರೆದು ಒ೦ದೆರಡು ಸಾಲುಗಳನ್ನು ಓದುವವರಿಗೆ ಬೇರೆ ಯಾರ ಶಿಫಾರಸು ಬೇಕಾಗಲಾರದು. ಜೀವನಾನುಭವವಿದ್ದ ಈ ಪದ್ಯಗಳನ್ನು ಓದುವವರಿಗೆ ತಮ್ಮ ಮನದ ಧ್ವನಿಯೇ ಅಲ್ಲಿ ಹೊರಡುತ್ತಿರುವ೦ತೆ ಕೇಳಿ ಬ೦ದೀತೆ೦ದು ನನಗೆ ಅನಿಸುತ್ತದೆ. ಮಲ್ಲಿಗೆಯ ತೋಟದಲ್ಲಿ ನಿ೦ತಾಗ ಧಾರಾಳವಾಗಿ ಉಸಿರಾಡಿರೆ೦ದು ಕನ್ನಡಿಗರಿಗೆ ಹೇಳಬೇಕಾದ ಕಾಲ ಬೇಗ ಕಳೆದುಹೋಗಲಿ. ನಿಮ್ಮ ಮಲ್ಲಿಗೆಯ ಬಳ್ಳಿ ಎಲ್ಲ ಋತುಗಳಲ್ಲಿಯೂ ನಗುನಗುತಿರಲಿ".  ಡಿ.ವಿ.ಜಿ.ರವರ ಈ ಮುನ್ನುಡಿಯ ಹರಕೆ ಈಗ ಸಾಕಾರಗೊ೦ಡಿರುವುದು ಸಮಸ್ತ ಕನ್ನಡಿಗರ ಹೆಮ್ಮೆಯಲ್ಲವೆ?

ಕನ್ನಡ ಕುಲಕೋಟಿಗೆಲ್ಲಾ ’ಕನ್ನಡ ರಾಜ್ಯೋತ್ಸವ - ೨೦೧೭’ರ ಶುಭಾಷಯಗಳೊ೦ದಿಗೆ ವಿದಾಯ ಹೇಳುತ್ತಿದ್ದೇನೆ.
ಜೈ ಕರ್ನಾಟಕ!
-೦-೦-೦-೦-೦-೦-೦-೦-೦-

ಓದಿದ್ದಕ್ಕೆ ಧನ್ಯವಾದಗಳು.  ತಮ್ಮ ಅಮೂಲ್ಯವಾದ ಪ್ರತಿಕ್ರಿಯೆಗಳನ್ನು ದಯಮಾಡಿ ಇಲ್ಲೇ ನೀಡಿ ಎ೦ದು ಅರಿಕೆ.  
klakshminarayana1956@rediffmail.com
98455 62603




Wednesday 11 October 2017

Amitabh Bachchan (80), You may not know!

Amitabh is the son of Padma Bhushan Harivansh Rai Bachchan and Teji Bachchan of Allahabad, U.P.  Harivansh Rai  is a  great Hindi Literature giant.  He wanted to name Amitabh as 'Inquilab' (meaning 'revolution').


But later he changed it to 'Amitabh' (meaning 'brilliance unlimited').  Amitabh inherited his surname from his father's pen-name Bachchan (meaning 'child like'). Amitabh was initiated in to acting by his mother. 
   
      
 2.Amitabh is ambidextrous and therefore he can write with his both hands equally well.  But in films we have seen him as a left-hander.                                                                                                           
                                                                     
3.Amitabh wanted to become an engineer and wanted to join Indian Air Force.  

4.In search of a job, he came to Kolkata.  Amitabh's first employer was 'Bird & Company' who had                                                                                                                                                                                                                            

Paper Mills and Coal mines.  His first salary was about Rs.300.                        

5.Amitabh could not pass the voice test for entering All India Radio, Kolkata as a news-reader. His voice was termed as hoarse!  But we all know and love Amitabh for his majestic voice.                                                                                                                                        
6.With the help of actor Mehmood, Amitabh came to Mumbai seeking a career in acting.  His first film was 'Saat Hindustani' released during 1969.  

                                                                                                             7.Late Prime Minister Indira Gandhi gave Amitabh an introduction letter addressed to her friend Nargis.  Therefore Nargis' husband Sunil Dutt gave Amitabh the role of a 'dumb' person in his film 'Reshma aur Shera' (1971).                                                                  

8.Amitabh came to limelight when he played a supporting role in the Rajesh Khanna starrer 'Anand' (1971). Rajesh Khanna was already a super-star by that time.  During the shooting period, Amitabh  
   
has confessed, that he was shy of talking to Rajesh Khanna.             
                                                                                                              
8.Before making a big breakthrough in the film Zanjeer (1973) as an angry young man, Amitabh had acted in 12 flop films.  His role  
in Zanjeer was first offered to Dev Anand who rejected and therefore Amitabh got the opportunity!

9.Amitabh has acted with almost all heroines of 3-4 generations of his period.  His wife Jaya Badhuri

too is a great actress.  But for Amitabh his most beautiful actress is Waheeda Rehman.    
                                                                                                             
10.Amitabh's 'special friend' and actress Rekha's birthday coincidentally falls on 10th October, just

one day prior to Amitabh's. Stars matched, but fate did not!                                 

11.Amitabh was voted as the 'star of the millenium' by BBC voters, 
putting him ahead of greats like Charlie Chaplin, Marlon Brando and Laurence Olivier.  Like Chaplin, a light sense of comedy while acting for different  types of roles is Amitabh's mark of genius.  Remember his soliloquy in front of the mirror in Amar, Akbar, Anthony!

 12.Amitabh was the first Asian actor to be honored with a wax-statue on display at Madam

Thussaud's, London. I can be seen with his statue here along with my wife.                                                                                               
13. Amitabh is a T.B.survivor.  He was detected with T.B. of the spine when he was trying to revive his career with KBC during 2000.  This great man has never hided his disease from public domain

unlike so many ordinary people do. He told people that if T.B. can happen to him, it can happen to anybody.  He wanted to give a message to common men that TB is curable. He became an 'unpaid ambassador' of the Government for promoting awareness about T.B. Recognizing his services U.S.Government honored him (see Pic) with a special trophy during the 'World T.B. Day - 2004'.
                                                                                                                                                          
 14.Amitabh has also never hesitated to tell people that he is suffering from Liver Cirrhosis although he has never touched alcohol.  He contracted this disease when he received blood from about 200 voluntary donors,  when he was under treatment for the fatal injury he received during shooting of the film 'Coolie' during 1982. He says that he is living with just 25% liver.                                                                                                                                                                        
 15.Besides Amitabh also suffers from Asthma and a disease related to muscles. Since 1982 he is a frequent  patient to the Hospitals.  But he is able to overcome all these diseases because of his indomitable spirit to live and excel.  He is really great because he has disclosed all his ailments to people in order to fill them with courage.                                                                                                                                                                                        
16.Amitabh is also an 'unpaid ambassador' for more public causes. Gujarat Tourism received a very 
 big boost after he started spreading 'khushboo Gujarat Ki' in his inimitable style.  It is equally heartening to see him promoting 'Swachh Bharat',  never hesitating to become one with rural people in politely guiding them towards 'Sulabh Shauchalayas'. 

Amitabh Bachchan's life itself is a great message for all of us, especially to youngsters.  For him 'work is worship and birth is a God given gift to live and excel irrespective of obstacles'.  He does not believe in delivering sermons.  He guides people by 'walking the talk'!  May God bless him and his family with very long life, health, happiness and prosperity.                                                        

          -0-0-0-0-0-0-0-0-0-0-0-      

  Thank you for patiently reading my article.  You can send me your valuable feedback in this site itself.  You can also reach me at klakshminarayana1956@rediffmail.com,  mobile no. 98455 62603, and on facebook at Lakshminarayana Krishnappa.