Thursday 19 May 2022

ಬಿಡುಗಡೆಯಾದ ಬೇಡಿ

ಬಿಡುಗಡೆಯಾದ ಬೇಡಿ  

***

ಬೇಡಿಗೆ ಬಿಡುಗಡೆ ದೊರೆತಿದೆ. ರಾಜೀವ್ ಗಾಂಧಿ ಹತ್ಯೆಗೈದ ಪೆರಾರಿವಲನ್ ಎಂಬುವರ ಬಿಡುಗಡೆಯಾಗಿದೆ. ಸರ್ವೋಚ್ಛ ನ್ಯಾಯಾಲಯ ಈ ತೀರ್ಪನ್ನು ನಿನ್ನೆ  ಪ್ರಕಟಿಸಿದೆ. ಈ ಹಿಂದೆ ತಮಿಳ್ ನಾಡಿನ AIADMK ಮತ್ತು DMK ಸರಕಾರಗಳೆರಡೂ ಅವರನ್ನು ಬಿಡುಗಡೆಗೊಳಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದವು. ಅದೊಂದು votebank ರಾಜಕೀಯ  ಅಂತಿಟ್ಟುಕೊಳ್ಳಿ. ಆದರೆ BJP ಪರರಾದ ಆ ರಾಜ್ಯದ ಗವರ್ನರ್ ರವರು, ಆ ಮನವಿಯನ್ನು ತಡೆ ಹಿಡಿದು ಅಂತೂ ಕಡೆಗೆ ಕೇಂದ್ರ ಸರಕಾರಕ್ಕೆ ರವಾನಿಸಿದ್ದರು. BJP ಮತ್ತು Congress ನೇತೃತ್ವದ ಕೇಂದ್ರ ಸರಕಾರಗಳೆರಡೂ ಆ ಮನವಿಯನ್ನು ತಿರಸ್ಕರಿಸಿದ್ದವು. ಈಗ ಸರ್ವೋಚ್ಛ ನ್ಯಾಯಾಲಯ ಮಧ್ಯೆ ಪ್ರವೇಶಿಸಿ, ೩೧ ವರ್ಷ ಜೈಲು ವಾಸ ಪೂರೈಸಿದ ಕೈದಿಯನ್ನು ಬಿಡುಗಡೆಗೊಳಿಸಿದೆ. 

ಈ ಬಿಡುಗಡೆ ಕೆಟ್ಟ ಪರಂಪರೆಗೊಂದು ನಾಂದಿ ಹಾಡಿದೆಯೇ?

-ಸನ್ನಡತೆಯ ಆಧಾರದ ಮೇಲೆ ಈ ತೀರ್ಪನ್ನು ನೀಡಲಾಗಿದೆ. ಇನ್ನುಳಿದ ಆರು ಕೈದಿಗಳನ್ನು ಬಿಡುಗಡೆಗೊಳಿಸಿದರೂ ಆಶ್ಚರ್ಯವಿಲ್ಲ. 

-DMK ಬಿಡುಗಡೆಯನ್ನು ಸ್ವಾಗತಿಸಿದೆ. ಸ್ಟಾಲಿನ್ ಪೆರಾರಿಯನ್ನು ಆಲಂಗಿಸಿ ಸ್ವಾಗತಿಸಿ ತಮ್ಮ ವೋಟ್ಬ್ಯಾಂಕನ್ನು ಗಟ್ಟಿಗೊಳಿಸಿದ್ದಾರೆ.  AIADMK ಕೂಡ ಅದೇ ಕಾರಣಕ್ಕೆ ಬಿಡುಗಡೆಯನ್ನು ಸ್ವಾಗತಿಸಿದೆ. 

-ಕಾಂಗ್ರೆಸ್ ಕೊಂಚ ವಿರೋಧವನ್ನು ವ್ಯಕ್ತ ಪಡಿಸಿದೆ. 

-ಬಿಜೆಪಿ ಕೂಡ ಮಗುಂ ಆಗೇ ಇದೆ. ಅದಕ್ಕೂ ರಾಜಕೀಯ ಲೆಕ್ಕಾಚಾರದ ಸಮಸ್ಯೆ. ತಮಿಳ್ ನಾಡಿನಲ್ಲಿ ಕೊಂಚ ಬೇರೂರುತ್ತಿರುವ ಸಮಯದಲ್ಲಿ ಅದಕ್ಕೂ ವಿವಾದ ಬೇಕಿಲ್ಲ. 

ಆತಂಕವಾದದ ಬೇಗೆಯಲ್ಲಿ ಬೇಯುತ್ತಿರುವ ನಮ್ಮ ದೇಶದಲ್ಲಿ ಈ ರೀತಿಯ ನಿರ್ಧಾರವೊಂದು ಬೇಕಿತ್ತೆ?ಭಾವಿ ಆತಂಕವಾದಿಗಳನ್ನು ಈ ಬಿಡುಗಡೆ ಪ್ರೋತ್ಸಾಹಿಸದೆ? ಎಂಬುದಕ್ಕೆ ಉತ್ತರ ನಿಮ್ಮಗಳಿಗೆ ತಿಳಿಯದಿರದು. ಬೆಕ್ಕು ಸನ್ಯಾಸಿಯ ಕತೆಯ ಹಾಗೆ, ಮಾಡಬೇಕಾದನ್ನೆಲ್ಲಾ  ಮಾಡಿ ಮುಂದೆ ಸನ್ನಡೆತೆಯ ಖಾವಿ ತೊಟ್ಟರೆ ಸಾಕೆ? ಭವಿಷ್ಯದಲ್ಲಿ ಇನ್ನು ಏನೇನಾಗುವುದೋ? ಕಾದು  ನೋಡುವುದೊಂದೇ ನಮಗುಳಿದಿರುವ ಆಯ್ಕೆ!

ಲಕ್ಷ್ಮೀನಾರಾಯಣ ಕೆ.