Monday, 29 June 2026

FOOTBALL WORLD CUP 2026

Football World Cup 2026 has entered knock out stage.  Hereafter a team can either win or go home.  At this interesting juncture I am presenting you below the my blog on 2018 world cup which helps you to understand finer points of the game.  Please ready, enjoy and become better equipped to follow the game. 

-0-0-0-0-0-0-


World's biggest sport event is just 4 days away.  Like most of you, this time I wanted to be equipped with a better awareness about finer aspects of the game and hence this blog.

Football is the most popular sport on our planet, with around 3.5 billion fans.  Football mania is sure to grip even our country, which is otherwise cricket-mad!

FIFA is football's global governing body which is organizing the ensuing World Cup in Russia. Its headquarters is in Zurich, Switzerland and has 211 member countries, whereas there are only 193 member countries for the UN!  32 qualified countries are fighting for the World Cup.

1.Field of play

The field may vary in size, but must be a rectangle. Longer boundary lines are called touch-lines and the shorter ones are called the bylines.

2.The ball

Football weighs around 450 grams and is about 22 cm in diameter.

3. Formations

A formation is the way a team lines up to play on the field.  Two most preferred  formations in modern football are shown in the pic.


4.The match will be played between two teams of 11 players each, over two periods of 45 minutes each. If required, period may be extended by another 30 minutes time or may be decided by a penalty shoot-out. There is provision to extend the period to make good the loss of time due to stoppages.

5. Offside
A player is offside if he is nearer to the goal than both the ball and the second defender (1st defender is the goal keeper in this pic).  In this pic player A is offside whereas player B is not.  Mere presence in such a offside position is not an offence.  If he receives the pass and touches the ball then it is an offence and the referee awards an 'indirect free kick' to the opposing team. 

There is no offside offence, if the player receives the pass from
a goalie-kick, or a throw-in or a corner-kick.

6. Fouls and misconduct

Players must play the game fairly and safely.  Otherwise they will be penalized by awarding opponents a free kick or even a penalty if the foul is committed in the penalty box.

7. Free kick
A team wins a free kick whenever the defending team commits a foul outside their own penalty area.  The free kick is taken from the spot where the offence occurred.  Scoring chances become high if the offence is committed very close to the goal.

England's David Beckham's free kick goal  through a curving shot (remember the slogan 'Bend it like Beckham'?)scored against Greece during 2002 World Cup qualifier is considered iconic and remembered even today.  

Indirect free kicks are awarded against lesser infringements.  While free kicks can be shot straight into goal, an indirect free kick must be touched by a teammate first.

8. Penalty kick



A team wins a penalty kick for any foul or offence committed by the defending team in its own penalty area.  A goalkeeper gets only 700 milliseconds to save it!  Penalties shot to top corners are virtually unsaveable.  However kicks to the corners are risky and are most likely to miss the goal.

Penalty shootout
Similar penalty kicks are made in a 'penalty shootout', in deciding matches to decide the winner after a drawn match. The 1994 World 
Cup final was the first to be decided by a penalty shootout. Italy's star player Roberto Baggio ballooned the decisive penalty over the bar (see pic) and Brazil lifted the World Cup!

9. Throw-in
A team wins a throw-in when the ball crosses the touchline after touching an opposition player last.

10. Corners
A team wins a corner when the ball crosses the byline after touching a defender.  Chances of scoring are quite high in case of corner kicks.  A quality corner kick followed by a clever header can be a sure goal.

11. Dribbling

Skill of moving the ball past the opponents in tight spaces is known as dribbling.  Argentina's dribbling dynamo Maradona dribbling to take the ball past 5 opponents of England to score a goal during 1986 World Cup Quarter-finals is remembered even today.  (See pic).

12. The bicycle kick
Christiano Ronaldo (Portugal)'s classic bicycle kick to score a winning goal for Real Madrid Vs Juventus in the Champions League was performed on 3rd April 2018.

13. Heading
German striker Miroslav Klose (in pic) scored 5 goals in World Cup 2002 and all of them were headers!

14. Tackling
A tackle is a trick to take the ball away from an opponent.  Care should be taken to see that it doesn't result in a foul.

15. Shooting
Brazil's legend Pele was called the finest goal scorer and an all time great because of his accurate shooting skills to score a goal. In a glittering career that spanned 22 years (1955-77), he played 1,363 games and scored 1,281 goals!

16. Goalkeeping
Goalkeeper is the last line of a team's defence.  They have to be good at leaping, catching and kicking.  This key player is allowed to handle the ball only inside the team's penalty area, and nowhere else on the field.

Spain's mercurial goalkeeper Iker Casillas (see pic above) is considered one among the most successful.  

17.Referee 



An appointed referee will be in charge of the match.  He will be supported by two Assistant referees (with flags in pic). Referee too has to be very agile and fit.  It is estimated that he runs for about 19 kms in a match, much higher than any other player.  A referee has immense powers.  He controls the players by showing yellow (for offences) and red (for serious offences) cards.  A yellow card is a warning whereas a red card is an order to leave the pitch! Receiving a second yellow card amounts to a red card.

18.The Manager
A team without a Manager is like an army without a general.  They may win battles but not a war!
Vincent del Bosque crafted Spain's World Cup trimuph in 2010.

19.A team game
Football is a team game of 11 players who must work together to win.  They are guided by their Manager who strategizes the game plan. One or two players can win a cricket match, but not in football! 

20.The fans
Football fans are passionate participants who think of themselves as the team's 'twelfth player'.  Eight out of 10 fans believe that their support helps their team to win! Fan power is proved to help home sides, who generally win half of their matches.

21.India in World Cup
Indian football team did qualify for the 1950  Brazil World Cup, although by default as all other nations in their qualifying group withdrew.  However India itself withdrew from the World Cup.  Various reasons like travel cost, lack of practice time and even no permission to play barefoot are quoted to be the reasons for withdrawing from the World Cup. Since then India has never come anywhere close to winning a place to play the World Cup.

World Cup 2018 is certain to throw surprises although Brazil is said to be the most favoured team to win.  4-times champions Italy has failed to qualify for this tournament!  Next one month period of World Cup will be full of thrills and excitements.  May the best team win.  Let us get ready to enjoy!
-0-0-0-0-0-0-0-0-





Friday, 3 April 2026

ರಾಮಾಯಣದ ರಹಸ್ಯಗಳು - 10-04-2026 - Vani School, Basaveshvaranagar

  ರಾಮಾಯಣದ ರಹಸ್ಯಗಳು - ಹರಿಕಥೆ  - ರಾಗಿಗುಡ್ಡ 

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮ ಸವಿನಯ ನಮಸ್ಕಾರಗಳು.  

'ರಾಮಾಯಣದ ರಹಸ್ಯಗಳು' ಎಂಬ ಇಂದಿನ ಹರಿಕಥೆಗೆ ತಮೆಲ್ಲರಿಗೂ ಸುಸ್ವಾಗತ. ನಮ್ಮಗಳ  ಇಂದಿನ ಪ್ರಯತ್ನಕ್ಕೆ ತಮ್ಮೆಲ್ಲರ  ಆಶೀರ್ವಾದ ಅತಿ ಮುಖ್ಯವಾದದ್ದು. 

ಹರಿಕಥೆಯ ಶುಭಾರಂಭವನ್ನು ಶ್ರೀ ರಾಮನ ಸ್ಮರಣೆಯೊಂದಿಗೆ ಮಾಡೋಣ. 

ಜಯ ಜಾನಕೀ ನಾಥ........ ( Only one stanza) - 

---------------------------------------------------------------------------

ಸಭಿಕರೇ ---------------

ಕಳೆದ ಕೆಲವು ವರ್ಷಗಳಿಂದ ಮಾನವ ಕುಲ ಹಲವು ಸಂಕಷ್ಟಗಳಿಗೆ ಗುರಿಯಾಗಿದೆ.  ಆರು ವರ್ಷಗಳ ಹಿಂದೆ ಅಂದರೆ, ೧೯೨೦ರಲ್ಲಿ ಕೋವಿಡ್ ಮಹಾಮಾರಿ ಮನುಕುಲವನ್ನು ಕಾಡಿತ್ತು.  ಈಗ ಇಡೀ ಪ್ರಪಂಚ ಅಮೇರಿಕಾ-ಇಸ್ರೇಲ್-ಇರಾನ್ ಯುದ್ಧದ ಹೊಡತಕ್ಕೆ ತತ್ತರಿಸುತ್ತಿದೆ. ಇಂತಹ ಸಂಕಷ್ಟದ ದಿನಗಳ ನಿವಾರಣೆಗೆ ರಾಮಾಯಣದ ಸಂದೇಶ ಮಾತ್ರ ಮಾರ್ಗದರ್ಶನ ನೀಡಬಲ್ಲದು. ಹಾಗಾಗಿ ಇಂದಿನ ರಾಮನವಮಿ ಉತ್ಸವ ಹಿಂದೆಂದಿಗಿಂತಲೂ ಅವಶ್ಯಕವಾದದ್ದು ಎಂಬುದನ್ನು ನಾವೀಗ ಸ್ಮರಿಸಿಕೊಳ್ಳಬೇಕು.

ಬೋಲೋ ಶ್ರೀ ರಾಮಚಂದ್ರ ಕಿ      ಜೈ 

ಪವನ ಪುತ್ರ ಹನುಮನ ಕಿ              ಜೈ 

ಅಂಜನಿ ಪುತ್ರ ಹನುಮನಕಿ            ಜೈ 

____________________________________________________________

ಇಂದಿನ ನಮ್ಮ ಹರಿಕಥಾ ವಿಷಯ ಬರೋಣ .  "ರಾಮಾಯಣದ ರಹಸ್ಯಗಳು", ಇಂದಿನ ನಮ್ಮ ಹರಿಕಥಾ ವಿಷಯ. 

ರಾಮಾಯಣ ನಿಮಗೆಲ್ಲರಿಗೂ ಚೆನ್ನಾಗೆ ಗೊತ್ತು. ಅಂತಹ ರಾಮಾಯಣದಲ್ಲಿ ರಹಸ್ಯಗಳು ಇರಬಹುದೇ? 

ಸಭಿಕರೆ, ಪ್ರಪಂಚದ ಎಲ್ಲ ಭಾಷೆಗಳಲ್ಲೂ ರಾಮಾಯಣ ಇದೆ. 

ಎಲ್ಲವುದಕ್ಕೂ ಮೂಲ ನಮ್ಮ ಸಂಸ್ಕೃತದ ವಾಲ್ಮೀಕಿ ರಾಮಾಯಣ. 

ಕನ್ನಡದಲ್ಲಿ ತೊರವೆ ರಾಮಾಯಣ, ತಮಿಳಿನಲ್ಲಿ ಕಂಬ ರಾಮಾಯಣ, ತೆಲುಗಿನಲ್ಲಿ ರಂಗನಾಥ ರಾಮಾಯಣ, ಮಲಯಾಳಂನಲ್ಲಿ ಅಧ್ಯಾತ್ಮ ರಾಮಾಯಣ, ಹಿಂದಿಯಲ್ಲಿ ತುಳಸಿ ರಾಮಾಯಣ, ಬೆಂಗಾಲಿಯಲ್ಲಿ ಕೃತ್ತಿವಾಸ ರಾಮಾಯಣ, ಮರಾಠಿಯಲ್ಲಿ ಏಕನಾಥರ  ರಾಮಾಯಣ, ಇಂಗ್ಲಿಷ್ನಲ್ಲಿ ಟಿ.ಎಚ್. ಗ್ರಿಫಿತ್ ರ ರಾಮಾಯಣ--------------- ಹೀಗೆ ಪ್ರಪಂಚದ ಎಲ್ಲಾ ಭಾಷೆಗಳಲ್ಲಿ ರಾಮಾಯಣ ಇದೆ. 

ಹಾಗಾಗೇ 

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ

ಎಂದು ನಮ್ಮ ಕವಿ ಕುಮಾರ ವ್ಯಾಸ ಹಾಡಿದ್ದಾನೆ. 

ಬೇರೆ ಬೇರೆ ಕವಿಗಳು ಬೇರೆ ಬೇರೆ ಘಟನೆಗಳನ್ನು ಕಂಡು ತಮ್ಮ ರಾಮಾಯಣದಲ್ಲಿ ಬರೆದಿದ್ದಾರೆ. ಹಾಗಾಗಿ ಎಲ್ಲ ಘಟನೆಗಳ ಪರಿಚಯ ಎಲ್ಲಾ ಶ್ರೋತೃಗಳಿಗೂ ಇರುವುದಿಲ್ಲ. ನಮಗೆ ಪರಿಚಯವಿರದ ಘಟನೆಗಳೇ ನಮ್ಮ ಪಾಲಿಗೆu ರಹಸ್ಯಗಳು.  ಅಂತಹ ರಾಮಾಯಣದ ವಿವಿಧ ರಹಸ್ಯಗಳನ್ನು ತಮ್ಮ ಮುಂದೆ ಪ್ರಸ್ತುತಪಡಿಸುವುದೇ ಇಂದಿನ ಹರಿಕಥೆಯ ಉದ್ದೇಶ. 

ರಾಮಾಯಣ ಒಂದು ಚಿನ್ನದ ಗಣಿ. ಅದನ್ನು ಶೋಧಿಸುತ್ತಾ ಹೋದಷ್ಟೂ ನಮಗೆ ಹೊಸ ಹೊಸ ರತ್ನಗಳು ಅಂದರೆ ರಹಸ್ಯಗಳು ದೊರಕುತ್ತಾಹೋಗುತ್ತವೆ. 

-----------------------------------------------------------------------------------------------------------------------------

ಈಗ ಮತ್ತೊಮ್ಮೆ ಶ್ರೀ ರಾಮನ ಸ್ಮರಣೆ ಮಾಡೋಣ. 

ರಾಮ ರಾಮ ರಾಮ ರಾಮ ರಾಮ ಎನ್ನಿರೋ-----------

---------------------------------------------------------------------------------------------------------------

ಇಡೀ ಪ್ರಪಂಚಕ್ಕೆ ಆದಿ ಕವಿ ವಾಲ್ಮೀಕಿಗಳು, ಆದಿ ಕಾವ್ಯ ಶ್ರೀಮದ್ರಾಮಾಯಣ. ಬೇಡರಾಗಿ ಜನಿಸಿದ ವಾಲ್ಮೀಕಿಗಳಿಗೆ ರಾಮಾಯಣ ಬರೆಯಲು ಪ್ರೇರಣೆ ದೊರೆತದ್ದು ಹೇಗೆ? ಇದು ರಾಮಾಯಣದ ಮತ್ತೊಂದು ರಹಸ್ಯ. 

ನಾರದರ ಬೋಧನೆಯಿಂದ ಜ್ಞಾನವನ್ನು ಪಡೆದು ಋಷಿಗಳಾದ ವಾಲ್ಮೀಕಿಗಳು ಒಂದು ಬೆಳಗ್ಗೆ ತಮ್ಮ ಪ್ರಿಯ ಶಿಷ್ಯ ಭರದ್ವಾಜನೊಡನೆ ಬೆಳಗಿನ ಮಂಗಳ ಸ್ನಾನಕ್ಕಾಗಿ ತಮಸಾ ನದಿಯ ದಡಕ್ಕೆ ತೆರಳುತ್ತಾರೆ. ಪೂರ್ವದಲ್ಲಿ ಸೂರ್ಯ ಉದಯಿಸುತ್ತ ಇರುವ ನೋಟ ಮನೋಹರವಾಗಿರುತ್ತೆ. ನದಿಯ ತೀರದಲ್ಲಿ ಎರಡು ಕ್ರೌನ್ಚ ಪಕ್ಷಿಗಳು (ಕ್ರೌನ್ಚ ಪಕ್ಷಿ ಎಂದರೆ ಕೆಂಪು ಕತ್ತುಳ್ಳ ಕೊಕ್ಕರೆ ಎಂದಿಟ್ಟುಕೊಳ್ಳಿ), ಅದರಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣು ಪಕ್ಷಿಗಳು ಪ್ರಣಯದಲ್ಲಿ ತೊಡಗಿರುತ್ತವೆ. ಕವಿಹೃದಯದ ಕೋಮಲ ಮನಸ್ಸಿನ ವಾಲ್ಮೀಕಿಗಳು ಕ್ರೌನ್ಚ ಪಕ್ಷಿಗಳ ಪ್ರಣಯವನ್ನು ಬಹಳ ಕುತೂಹಲದಿಂದ ನೋಡುತ್ತಿರುತ್ತಾರೆ. ಆ ಸಮಯದಲ್ಲಿ ಇದ್ದಕಿದ್ದಂತೆ ದೂರದ ಮರದ ಮರೆಯಿಂದ ಬೇಡನೊಬ್ಬ ತೀಕ್ಷ್ಣವಾದ ಬಾಣವೊಂದನ್ನು ಗಂಡು ಕ್ರೌನ್ಚ ಪಕ್ಷಿಯ ಕೊರಳಿಗೆ ಗುರಿಯಿಟ್ಟು ಬಿಡುತ್ತಾನೆ. ಬಾಣ ಕೊರಳಿಗೆ ಬೀಳುತ್ತಲೇ, ಪಕ್ಷಿಯ ಕೊರಳು ತುಂಡಾಗಿ ಗಂಡು ಪಕ್ಷಿ ಸಾಯುತ್ತದೆ. ಸತ್ತ ಗಂಡು ಪಕ್ಷಿಯನ್ನು ನೋಡಿ ಹೆಣ್ಣು ಪಕ್ಷಿ ದುಃಖಿಸುತ್ತಾ ರೋದಿಸಲಾರಂಭಿಸುತ್ತದೆ. ಆ ದುಃಖದ ದೃಶ್ಯವನ್ನು ನೋಡಿ ವಾಲ್ಮೀಕಿಗಳ ಸಿಟ್ಟು ನೆತ್ತಿಗೇರಿರುತ್ತದೆ. ಕೋಪದಲ್ಲಿ ಅವರು ಬೇಡನಿಗೆ ಶಪಿಸುತ್ತಾ.----------

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ಎಂದು ಜೋರಾಗಿ ಹೇಳುತ್ತಾರೆ. ವಾಲ್ಮೀಕಿಗಳ ಶಾಪದ ಅರ್ಥವೇನೆಂದರೆ, 'ಓ ಬೇಡ, ಪ್ರಣಯದಲ್ಲಿದ ಕ್ರೌನ್ಚ ಪಕ್ಷಿಯನ್ನು ಕೊಂದಿರುವ ನಿನಗೆ, ಜೀವನದಲ್ಲಿ ಶಾಂತಿ ಎನ್ನುವುದು ಎಂದೆಂದಿಗೂ ಇಲ್ಲದಿರಲಿ' ಎಂದು. 

ಕ್ರೌನ್ಚ ಪಕ್ಷಿಗಳ ಗೋಳನ್ನು ನೋಡಿ ಮನಕಲಕಿಹೋದ ವಾಲ್ಮೀಕಿಗಳು, ಮನಸ್ಸಿಲ್ಲದಿದ್ದರೂ ಸ್ನಾನವನ್ನು ಮಾಡಿ ತಮ್ಮ ನಿತ್ಯ ಕರ್ಮಗಳನ್ನು ಬೇಗನೆ ಮುಗಿಸಿ, ತಮ್ಮ ಶಿಷ್ಯ ಭರದ್ವಾಜನೊಡನೆ ತಮ್ಮ ಆಶ್ರಮವನ್ನು ಸೇರುತ್ತಾರೆ. ಅವರ ಮನಸಿನಲ್ಲಿ ಬೇರೆ ಬೇರೆ ರೀತಿಯ ಯೋಚನೆಗಳು ಹಾದು ಹೋಗುತ್ತಿರುತ್ತದೆ. "ಆ ಬೇಡನೇಕೆ ಕ್ರೌನ್ಚ ಪಕ್ಷಿಯನ್ನು ಕೊಂದ? ಸನ್ಯಾಸಿಯಾದ ನಾನೇಕೆ ಕೋಪಕ್ಕೊಳಗಾದೆ? ನಾನೇಕೆ ಆ ಬೇಡನನ್ನು ಶಪಿಸಿದೆ? ಸ್ವಲ್ಪ ಕಾಲದ ಹಿಂದೆ ತಾನೂ ಬೇಡನಾಗಿ, ಪ್ರಾಣಿಗಳ ಬೇಟೆಯನ್ನಾಡುತ್ತಿದ್ದೆನಲ್ಲವೇ? ಹೊಟ್ಟೆ ಪಾಡಿಗೆ ಬೇಟೆಯಾಡಿದ ಆ ಬೇಡನದೆನು ತಪ್ಪು?"

ಆ ಸಮಯದಲ್ಲಿ ವಾಲ್ಮೀಕಿಗಳ ಮುಂದೆ ಬ್ರಹ್ಮದೇವರು ಪ್ರತ್ಯಕ್ಷಗೊಳ್ಳುತ್ತಾರೆ. ವಾಲ್ಮೀಕಿಗಳನ್ನು ಸಂಭೋದಿಸುತ್ತಾ, 'ಓ ವಾಲ್ಮೀಕಿ, ಏಕೆ ದುಃಖದಿಂದ ಕುಳಿತಿರುವೆ? ಇಂದು ಬೆಳಗ್ಗೆ ನಿನ್ನ ಬಾಯಿಂದ ಅಯಾಚಿತವಾಗಿ, ಅಂದರೆ ತಾನೇ ತಾನಾಗಿ ಹೋರಾಟ ಶಬ್ದಗಳು ಬೇಡನಿಗಿತ್ತ ಶಾಪವಲ್ಲ, ಅದು ಶ್ರೀಮನ್ನಾರಾಯಣನ ಸ್ತುತಿ" ಎನ್ನುತ್ತಾರೆ. ಆಶ್ಚರ್ಯಗೊಂಡ  ವಾಲ್ಮೀಕಿಗಳು ಬ್ರಹ್ಮದೇವರಿಗೆ ವಂದಿಸಿ, 'ಬ್ರಹ್ಮದೇವರೇ, ಅದು ಹೇಗೆ ಶ್ರೀಮನ್ನಾರಾಯಣನ ಸ್ತುತಿಯಾಗುತ್ತದೆ?' ಎಂದು ಕೇಳುತ್ತಾರೆ. 

ಶ್ರೋತೃಗಳೇ ನೋಡಿ, ಸಂಸ್ಕೃತ ಭಾಷೆಯ ಆಪೂರ್ವ ಶಕ್ತಿಯೇ ಅಂತಹದ್ದು. ಒಂದೇ ಪದಕ್ಕೆ ಹಲವಾರು ಅರ್ಥಗಳು ಇಲ್ಲುಂಟು.  ಮಾ ನಿಷಾದ ಎಂದರೆ ಏನರ್ಥ? 'ಮಾ' ಅಂದರೆ  'ಆಗದಿರಲಿ' ಎಂದರ್ಥ. ನಿಷಾದ ಎಂದರೆ ಬೇಟೆಯಾಡುವ ಬೇಡ ಎಂದರ್ಥ. ಅದೇ ಪದಗಳಿಗೆ ಬೇರೆ ಅರ್ಥಗಳು ಉಂಟು. ಬ್ರಹ್ಮದೇವರು ವಾಲ್ಮೀಕಿಗಳಿಗೆ ವಿವರಿಸುತ್ತಾ, 'ಮಾ ಎಂದರೆ ಮಹಾತಾಯೀ ಲಕ್ಷ್ಮಿ ಎಂದರ್ಥ. ನಿಷಾದ ಎಂದರೆ ವಾಸಸ್ಥಾನ. ಲಕ್ಷ್ಮಿಯ ವಾಸಸ್ಥಾನ ಎಂದರೆ ಶ್ರೀಮನ್ನಾರಾಯಣ ಎಂದರ್ಥ. ಲಕ್ಷ್ಮಿ ವಾಸಸ್ಥಾನ ಶ್ರೀಮನ್ನಾರಾಯಣನ ಹೃದಯ ತಾನೇ? ಹಾಗಾಗಿ ನಿನ್ನ ಬೆಳಗಿನ ಮಾತುಗಳ ಅರ್ಥವೇ ಬೇರೆ. ಕಾಮಮೋಹಿತನಾದ ರಾವಣನನ್ನು ಕೊಂದು, ಲೋಕಕಲ್ಯಾಣವನ್ನು ಮಾಡಿರುವ ಶ್ರೀಮನ್ನಾರಾಯಣನೇ, ನಿನ್ನ ನಾಮವು ಬ್ರಹ್ಮಾ೦ಡದಲ್ಲಿ ಶಾಶ್ವತವಾಗಿ ಉಳಿಯಲಿ ಎಂದರ್ಥ. 

ವಾಲ್ಮೀಕಿ,  ನೀನಾಡಿದ ಮಾತುಗಳು ಬರಿ ಮಾತುಗಳಲ್ಲ, ಅದೊಂದು ಉತ್ತಮ ಛ೦ದಸ್ಸಿನಲ್ಲಿರುವ   ಶ್ಲೋಕ ನೋಡು. 

ಮಾ ನಿಷಾದ  ಪ್ರತಿಷ್ಠಾ ತ್ವ೦ 

ಅಗಮಃ ಶಾಶ್ವತೀ:  ಸಮಾ: 

ಯತ್ ಕ್ರೌನ್ಚಮಿಥುನಾದೇಕಂ   

ಅವಧೀ: ಕಾಮಮೋಹಿತಃ 

ನಿನ್ನ ಮಾತುಗಳಲ್ಲಿ ನಾಲ್ಕು ಸಾಲುಗಳಿವೆ.  ಪ್ರತಿ ಸಾಲಿನಲ್ಲೂ ಎಂಟು ಅಕ್ಷರಗಳಿವೆ. ಕಾವ್ಯಕ್ಕೆ ಇಂದೊಂದು ಸುಂದರ ಛಂದಸ್ಸು. ಇದನ್ನು ಇನ್ನು ಮುಂದೆ 'ಅನುಷ್ಟಪ್ ಛಂದಸ್ಸು' ಎಂದು ಕರೆಯೋಣ. ಇದೆ ಛಂದಸ್ಸಿನಲ್ಲಿ ವಾಲ್ಮೀಕಿ ನೀನು ಶ್ರೀಮದ್ರಾಮಯಣದ ಕಾವ್ಯವನ್ನು ರಚಿಸಿ ಲೋಕಕಲ್ಯಾಣವನ್ನುಂಟುಮಾಡು' ಎನ್ನುತ್ತಾರೆ ಬ್ರಹ್ಮದೇವರು. 

ಬ್ರಹ್ಮದೇವರಿಂದ ಹೊಸ ಪ್ರೇರೇಪಣೆಯನ್ನು ಪಡೆದ ವಾಲ್ಮೀಕಿಗಳು, ತಮ್ಮ ಬಾಯಿಂದ ಅಯಾಚಿತವಾಗಿ ಹೋರಾಟ ಅನುಷ್ಟಪ್ ಛಂದಸ್ಸಿನಲ್ಲೇ ರಾಮಾಯಣ ರಚನೆಯನ್ನು ಮಾಡಿರುವುದು ಈಗ ಇತಿಹಾಸ. ವಾಲ್ಮೀಕಿಗಳಿಂದ ರಚಿತವಾದ ಅನುಷ್ಟಪ್ ಛಂದಸ್ಸು ಈಗ ಇಡೀ ಸಂಸ್ಕೃತ ಕಾವ್ಯಲೋಕಕ್ಕೆ ಅಡಿಪಾಯವಾಗಿರುವುದೂ ಇತಿಹಾಸ. ಮುಂದೆ ಬಂದ  ವ್ಯಾಸರು ಮಹಾಭಾರತವನ್ನು ರಚಿಸಿದ್ದೂ ಅನುಷ್ಟಪ್ ಛಂದಸ್ಸಿನಲ್ಲೇ.

ಇದು ರಾಮಾಯಣ ಬರೆಯಲು ವಾಲ್ಮೀಕಿಗಳಿಗೆ ದೊರೆತ ಪ್ರೇರಣೆಯ ಕಥೆ. 

ತುಳಸೀ ದಾಸರು ರಾಮನ ಪರಮ ಭಕ್ತರು  ಅವರು ರಾಮನನ್ನು ಕೃಪಾಳು ಎಂದೇ ಬಣ್ಣಿಸಿದ್ದಾರೆ.


ಶ್ರೀರಾಮಚಂದ್ರ ಕೃಪಾಳು ಭಜಮನ……

----------------------------------------------------------------------------------------------------------------------------

 ಶ್ರೋತೃಗಳೇ--------

ಅಂದ ಹಾಗೆ ರಾಮಾಯಣ ನಡೆದ್ದದ್ದು ಯಾವಾಗ? ಇದೇ ಒಂದು ದೊಡ್ಡ ರಹಸ್ಯದ ವಿಷಯ. ಆ ರಹಸ್ಯವನೀಗ ಪರಿಶೀಲಿಸೋಣ. 

ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. 

ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

---------------------------------------------------------------------------------------------------

೭೦೦೦ ವರ್ಷದ ಹಿಂದೆ ನಮ್ಮನ್ನೆಲ್ಲಾ ಕಾಪಾಡಲು ಭೂಮಿಯ ಮೇಲೆ ಅವತರಿಸಿದ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು  ಹೇಗೆ ಸ್ವಾಗತಿಸಿದರು ಎಂಬುದನ್ನು ಈಗ ಕೇಳೋಣ. 

ರಾ ರಾ ರಾಜೀವಲೋಚನಾ ರಾಮ-----------(ಅನುಪಲ್ಲವಿ ತನಕ ಸಾಕು ) 

------------------------------------------------------------------------------------------------------



-------------------------------------------------------------------------------------------------


ಓಂ ಭೂರ್ಭುವಸ್ಸುವಃ |
ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ |
ಧಿಯೋ ಯೋ ನಃ ಪ್ರಚೋದಯಾತ್ ||

ಶ್ರೋತೃಗಳೇ, ನಾನೀಗ ಪಠಿಸಿದ್ದು ಗಾಯತ್ರಿ ಮಂತ್ರ. ರಾಮಾಯಣದ ಮಧ್ಯ ಗಾಯತ್ರಿ ಮಂತ್ರ ಏಕೆ ಬಂತು? ಗಾಯತ್ರಿ ಮಂತ್ರಕ್ಕೂ, ರಾಮಾಯಣಕ್ಕೂ ಏನು ಸಂಬಂಧ? ರಾಮಾಯಣ ಮುಂಚೆ ಬಂತೋ? ಅಥವಾ ಗಾಯತ್ರಿ ಮಂತ್ರ ಮುಂಚೆ ಬಂತೋ? ಎಂಬ ಅನುಮಾನಗಳು ನಿಮ್ಮಿಗಳನೀಗ ಕಾಡುತ್ತಿರಬಹುದು. 

ಗಾಯತ್ರಿ ಮಂತ್ರಕ್ಕೂ ರಾಮಾಯಣಕ್ಕೂ ಇರುವ ಸಂಬಂಧವೇ ರಾಮಾಯಣದ ಮತ್ತೊಂದು ರಹಸ್ಯ. 

ಗಾಯತ್ರಿ ಮಂತ್ರ ರಾಮಾಯಣಕ್ಕಿಂತ ಪ್ರಾಚೀನವಾದುದು. ಆತ್ಮಲಿಂಗವನ್ನು ಪ್ರಮೇಶ್ವರನಿಂದ ಪಡೆದುಕೊಂಡ ರಾವಣ, ಲಂಕೆಗೆ ಹಿಂತಿರುಗುವಾಗ ಗಾಯತ್ರಿ ಮಂತ್ರದ ಪಠಣದೊಂದಿಗೆ ಸಂಧ್ಯಾವಂದನೆಯನ್ನು ಮಾಡಿದ್ದನ್ನು ನಾವು ಕೇಳಿದ್ದೇವೆ. 

ಗಾಯತ್ರಿ ಮಂತ್ರದ ಅರ್ಥವೇನು?

ಗಾಯತ್ರಿ ಮಂತ್ರ ಪ್ರತ್ಯಕ್ಷ ದೈವ ಸೂರ್ಯನಾರಾಯಣನ ಪ್ರಾರ್ಥನೆ. ಮಹಾ ತೇಜಸ್ಸಿನಿಂದ ಕೂಡಿರುವ ಓ, ಸೂರ್ಯನಾರಾಯಣ, ನಿನ್ನ ತೇಜಸ್ಸು ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸಲಿ, ಚುರುಕುಗೊಳಿಸಲಿ, ಧಿಯೋ ಯೋ ನ: ಪ್ರಚೋದಯಾತ್ ಎಂದರ್ಥ. ಇಂದು ನಾವೆಲ್ಲರೂ ಪ್ರತಿದಿನ ಮಾಡುವ ಸೂರ್ಯನಾರಾಯಣನ ಸ್ಮರಣೆ. 

ಸಭಿಕರೆ, ನೋಡಿ ಗಾಯತ್ರಿ ಮಂತ್ರದ ಉದಾರ ಧ್ಯೇಯವನ್ನು! ನನ್ನ ಬುದ್ಧಿಯನ್ನು ಉದ್ದೀಪನಗೊಳಿಸು ಎನ್ನುವ ಸ್ವಾರ್ಥ ಅದರಲಿಲ್ಲ. ನಮ್ಮ ಬುದ್ಧಿಯನ್ನು ಉದ್ದೀಪನಗೊಳಿಸು, ಇಡೀ ಸಮಾಜವನ್ನೇ ಜಾಗೃತಗೊಳಿಸು ಎಂಬ ಉದಾರ ಧ್ಯೇಯ ಗಾಯತ್ರಿ ಮಂತ್ರದ್ದು.  

ತತ್ಸವಿತುರ್ವರೇಣ್ಯಂ------------------------------------------------------------------------------------------------

ಎಂಬಲ್ಲಿಂದ ಎಣಿಸಿದರೆ ಗಾಯತ್ರಿ ಮಂತ್ರದಲ್ಲಿ ೨೪ ಅಕ್ಷರಗಳಿವೆ.  ವಾಲ್ಮೀಕಿ ರಾಮಾಯಣದಲ್ಲಿ ೨೪೦೦೦ ಶ್ಲೋಕಗಳಿವೆ. ರಾಮಾಯಣದ ಮೊದಲ ಶ್ಲೋಕ ಯಾವುದು? 

ತಪ: ಸ್ವಾಧ್ಯಾಯ ನಿರತ೦
ತಪಸ್ವೀ ವಾಗ್ವಿದಾಂ ವರ೦
ನಾರದಂ ಪರಿಪಪ್ರಚ್ಛ 
ವಾಲ್ಮೀಕಿರ್ಮುನಿಪುಂಗವ೦

ರಾಮಾಯಣದ ಮೊದಲ ಶ್ಲೋಕದ ಮೊದಲ ಅಕ್ಷರ 'ತ'

ಹಾಗೆಯೇ ಹುಡುಕುತ್ತಹೋದರೆ ರಾಮಾಯಣದ ೧೦೦೧ನೇ ಶ್ಲೋಕದ ಮೊದಲ ಅಕ್ಷರ 'ತ್ಸ'. 

೨೦೦೧ನೇ ಶ್ಲೋಕದ ಮೊದಲ ಅಕ್ಷರ 'ವಿ'

ಹೀಗೆ ರಾಮಾಯಣದ ಪ್ರತಿ ಒಂದು ಸಾವಿರದ ಮೊದಲ ಶ್ಲೋಕದ ಮೊದಲ ಅಕ್ಷರಗಳನ್ನು ನಾವುಗಳು ಆರಿಸಿಕೊಳ್ಳುತ್ತಾಹೋದರೆ ನಮಗೆ ೨೪ ಅಕ್ಷರಗಳು ಸಿಕ್ಕುತ್ತವೆ. ಆ ೨೪ ಅಕ್ಷರಗಳನ್ನು ಅದೇ ಕ್ರಮದಲ್ಲಿ ಜೋಡಿಸಿ ನೋಡಿದರೆ ನಮಗೆ ಗಾಯತ್ರಿ ಮಂತ್ರ ದೊರಕ್ಕುತ್ತದೆ. ಹೀಗೆ ಗಾಯತ್ರಿ ಮಂತ್ರ ಎಂಬ ಅನರ್ಘ್ಯ ರತ್ನವನ್ನು ವಾಲ್ಮೀಕಿಗಳು  ತಮ್ಮ ರಾಮಾಯಣದಲ್ಲಿ ಅಡಗಿಸಿಟ್ಟಿದ್ದಾರೆ 

ಮೊದಲಕ್ಷರವನ್ನು ನಾವುಗಳು ಆರಿಸಿಕೊಂಡ ಆ ೨೪ ಶ್ಲೋಕಗಳನ್ನು ನಾವು ಪಠಿಸಿದರೆ ಅದೇ 'ಗಾಯತ್ರಿ ರಾಮಾಯಣ.'   ಗಾಯತ್ರಿ ರಾಮಾಯಣದ ೨೪ ಶ್ಲೋಕಗಳನ್ನು ನಾವು ಪಠಿಸಿದರೆ, ಇಡೀ ರಾಮಾಯಣವನ್ನು ಪಠಿಸಿದ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದು ವಾಲ್ಮೀಕಿಗಳು ನಮ್ಮೆಲ್ಲರಿಗೂ ತಿಳಿಸಿದ್ದಾರೆ. 
------------------------------------------------------------------------------------------------------------------------

ರಾಮಾಯಣ ಪಠಿಸುವುದು ಜನಸಾಮಾನ್ಯರಿಗೆ ಕಷ್ಟ. ೨೪,೦೦೦ ಶ್ಲೋಕಗಳು. 

ಗಾಯತ್ರಿ ರಾಮಾಯಣವನ್ನು ಪಠಿಸುವುದೂ ಕಷ್ಟ. ೨೪ ಶ್ಲೋಕಗಳು, ಅದೂ ಸಂಸ್ಕೃತದಲ್ಲಿ. 

ಪುರಂದರ ದಾಸರು ನಮ್ಮಂತಹವರಿಗೆ ಹೇಳಿದ್ದಾರೆ. ೨೪,೦೦೦ ಶ್ಲೋಕವೂ ಬೇಡ, ೨೪ ಶ್ಲೋಕಗಳೂ ಬೇಡ, ನಾನು ಎರಡಕ್ಷರದ ಒಂದು ಮಂತ್ರ ಹೇಳಿಕೊಡುತ್ತೇನೆ, ಕಲಿತುಕೊಳ್ಳುವಿರಾ ಎಂದು ನಮ್ಮನ್ನು ಕೇಳಿದ್ದಾರೆ. ಯಾವುದು ಆ ಮಂತ್ರ? 

ರಾಮ ಮಂತ್ರವ ಜಪಿಸೋ, ಹೇ ಮನುಜ (ಪೂರ್ತಿ ಹಾಡು) 

-------------------------------------------------------------------------------------------------------------------------



------------------------------------------------------------------------------------------------------------------------


------------------------------------------------------------------------------------------------------------------------

ನಮಗೆಲ್ಲ ಗೊತ್ತು. ರಾಮ, ಲಕ್ಷ್ಮಣ, ಭರತ, ಶತ್ರುಜ್ಞ, ದಶರಥ ಮಹಾರಾಜನ ಮಕ್ಕಳು. ಪರಮಾತ್ಮನ ಅವತಾರವಾದ ರಾಮಚಂದ್ರನಿಗೆ ಅಕ್ಕ-ತಂಗಿಯರು ಯಾರಾದರೂ ಇದ್ದರೆ? ಯಾರಾದರೂ ಉತ್ತರಿಸುವಿರಾ? ......................ಇದೇ ರಾಮಾಯಣದ ಮತ್ತೊಂದು ರಹಸ್ಯ. 

ಪುರಾಣಗಳ ಶೋಧನೆಯನ್ನು ಮಾಡಿದಾಗ, ಶ್ರೀ ರಾಮಚಂದ್ರನಿಗೆ 'ಶಾಂತ' ಎಂಬ ಸಹೋದರಿಯಿದ್ದಳು ಎಂಬುದಾಗಿ ತಿಳಿದು ಬರುತ್ತದೆ. ದಶರಥ ಹಾಗೂ ಕೌಶ

ಲ್ಯ ದಂಪತಿಗೆ ಜನಿಸಿದ ಮೊದಲ ಮಗುವೇ ಶಾಂತ ಎಂಬ ಹೆಣ್ಣು ಮಗಳು. ಶಾಂತ, ಪರಮೇಶ್ವರನ ಹೆಂಡತಿಯಾದ ಪಾರ್ವತಿಯ ಅವತಾರ. ಪರಮಾತ್ಮ ಅವತಾರ ಎತ್ತಿದಾಗಲೆಲ್ಲಾ, ಪಾರ್ವತೀ ಪರಮಾತ್ಮನ ಸಹೋದರಿಯಾಗಿ ಜನಿಸಿರುವುದನ್ನು ನಾವು ಕಾಣಬಹದು. ಕೃಷ್ಣಾವತಾರವಾದಾಗ ಕೃಷ್ಣನನ್ನು ಕಂಸನ ಕೈಯಿಂದ ರಕ್ಷಿಸಲು ಅವತರಿಸಿದವಳು ಕೂಡ ಪಾರ್ವತಿಯೇ. ಯಶೋದೆಯ ಮಗಳಾಗಿ ಜನಿಸಿದವಳು ಪಾರ್ವತಿಯ ಅವತಾರವಾದ ಯೋಗಮಾಯೆ. ಕೃಷ್ಣನನ್ನು ಯಶೋದೆಯ ಮಡಿಲಲ್ಲಿಟ್ಟು ಯೋಗಮಾಯೆಯನ್ನು ಕೊಂಡೊಯ್ದವನು ವಾಸುದೇವ.  ಶಿಶುವಾದ ಯೋಗಮಾಯೆಯನ್ನು ಸೆರೆಮನೆಯ ಗೋಡೆಗೆ ಅಪ್ಪಳಿಸಲು ಮುಂದಾದ ಕಂಸನ ಕೈಯಿಂದ ತಪ್ಪಿಸಿಕೊಂಡು ಆಗಸಕ್ಕೆ ಹಾರಿದವಳು ಯೋಗಮಾಯೆಯಾಗಿ ಅವತರಿಸಿದ್ದ ಪಾರ್ವತೀ ಮಾತೆ. ಪರಮಾತ್ಮನ ಸಹೋದರಿಯಾದ ಪಾರ್ವತಿಯನ್ನು ಮುತುಸ್ವಾಮಿ ದೀಕ್ಷಿತರು ಹೇಗೆ ಪ್ರಾರ್ಥಿಸಿದ್ದಾರೆ?


ಸರಸಿಜನಾಭ ಸೋದರಿ..............(ಒಂದು ಅನುಪಲ್ಲವಿಯವರೆಗೆ ಕಲಿತುಕೊಳ್ಳಿ) 

ಈಗ ರಾಮನ ಸಹೋದರಿಯಾದ ಶಾಂತಳ ಕಥೆಗೆ ಬರೋಣ.  ಶಾಂತಾಳನ್ನು ದಶರಥ ಮಹಾರಾಜಾ, ಕೌಸಲ್ಯೆಯ ತಂಗಿಯ ಗಂಡನಾದ ರೋಮಪಾದ ರಾಜನಿಗೆ ದತ್ತುಪುತ್ರಿಯಾಗಿ ನೀಡಿರುತ್ತಾನೆ.  ಮಹಾಜ್ಞಾನಿಯಾಗಿ ಬೆಳೆದ ಶಾಂತಾ ದೊಡ್ಡವಳಾದ ಮೇಲೆ ಮಹಾಜ್ಞಾನಿಯಾದ ಋಷ್ಯಶೃಂಗರನ್ನೇ ಮದುವೆಯಾಗುತ್ತಾಳೆ. ಶಾಂತಾ-ಋಷ್ಯಶೃಂಗರೆ ಮುಂದೆ ನಿಂತು ದಶರಥ ಮಹಾರಾಜನಿಂದ ಪುತ್ರಕಾಮೇಷ್ಟಿ ಯಾಗವನ್ನು ಮಾಡಿಸಿದ್ದು, ರಾಮನ ಜನನವಾದದ್ದು, ಇವುಗಳನ್ನೆಲ್ಲ ಸಾಕ್ಷಾತ್ ವಾಲ್ಮೀಕಿಗಳೇ ಬರೆದಿದ್ದಾರೆ. 


------------------------------------------------------------------------------------------------------------------------


-----------------------------------------------------------------------------------------------------------------------

ರಾಮಯ್ಯ ರಾಮಭದ್ರಾಯ 
ರಾಮಚಂದ್ರಾಯ ವೇದಸೆ 
ರಘುನಾಥಾಯ ನಾಥಾಯ 
ಸೀತಾಯ ಪತೇಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದಂತಹ ರಾಮನ ಬೇರೆ ಬೇರೆ ಹೆಸರುಗಳ ಶ್ಲೋಕ.  ರಾಮನನ್ನು 'ರಾಮಾ' ಎಂದು ಕರೆಯುತ್ತಿದ್ದವರು ದಶರಥ ಮಹಾರಾಜರು. ರಾಮಭದ್ರಾಯ - ಎಂದು ಕರೆಯುತ್ತಿದ್ದವರು ರಾಮನ ತಾಯೀ ಕೌಸಲ್ಯ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನುಂಟುಮಾಡುವವನು ಎಂದರ್ಥ.  ರಾಮಚಂದ್ರಯ್ಯ--------! ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು?  ಇದು ರಾಮಾಯಣದ ಮತ್ತೊಂದು ರಹಸ್ಯ. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿ, ರಾಮಾ ನೋಡಿಲ್ಲಿ ಚಂದ್ರ, ರಾಮ..........,ಚಂದ್ರ......... ರಾಮಚಂದ್ರ ಎಂದು ರಾಮನನ್ನು ರಾಮಚಂದ್ರ ಎಂದು ಬಾಯ್ತುಂಬಾ ಮೊದಲ ಬಾರಿಗೆ ಕರೆದವಳು ಮಂಥರೆ.  ಚಂದ್ರ ಸಿಕ್ಕಿದ ಎಂದು ಹಿಗ್ಗಿಹೋದ ರಾಮ ಸಮಾಧಾನಗೊಂಡನಂತೆ. ರಾಮನನ್ನು ಸಮಾಧಾನಪಡಿಸಿದ  ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಈ ಪ್ರಸಂಗ ಕನ್ನಡದ ಮಹಾಕವಿ ಕುವೆಂಪುರವರ ರಾಮಾಯಣದಲ್ಲಿ ಬರುತ್ತದೆ. ಮಂಥರೆಯ  'ಜಜ್ಜರಿತ ಮೈತ್ರಿ'ಯ ಪ್ರಸಂಗವನ್ನು ಕುವೆಂಪುರವರು ಸೊಗಸಾಗಿ ವರ್ಣಿಸಿದ್ದಾರೆ.  

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಉತ್ತರದ ಅಯೋಧ್ಯಯಿಂದ ದಕ್ಷಿಣದ ರಾಮೇಶ್ವರಂವರೆಗೂ ಮೊದಲು ಪಾದಯಾತ್ರೆಯನ್ನು ಮಾಡಿ ಸಮಸ್ತ ಭಾರತವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ರಾಮ. ರಾಮನ ಭಾರತ ಯಾತ್ರೆಗೆ ಕಾರಣೀಭೂತಳು ಮಂಥರೆ.


------------------------------------------------------------------------------------------------------------

ಶ್ರೋತೃಗಳೇ, 

ಇಂದಿನ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಗಿದ ಮೇಲೆ ಇಂಟರ್ನ್ಶಿಪ್ ಅಥವಾ ಆನ್ ದಿ ಜಾಬ್ ಟ್ರೈನಿಂಗ್ ಅಂಥ ಇರುತ್ತದೆ. ಆ ಇಂಟರ್ನ್ಶಿಪ್ ಟ್ರೈನಿಂಗಿನ ಮೂಲ ಹುಟ್ಟಿಕೊಂಡದ್ದೇ ರಾಮಾಯಣದಲ್ಲಿ ಎಂದರೆ ತಮಗೆ ಆಶ್ಚರ್ಯವಾಗಬಹುದು. ರಾಮನಿಗೆ ಶಾಸ್ತ್ರ ಹಾಗೂ ಶಸ್ತ್ರ ವಿಧ್ಯಾಬ್ಯಾಸಮಾಡಿಸಿದವರು ವಸಿಷ್ಠರು. ರಾಮ ಲಕ್ಷ್ಮಣರಿಗೆ ಇಂಟರ್ನ್ಶಿಪ್ ಟ್ರೇನಿಂಗ ನೀಡಿದವರು ವಿಶ್ವಾಮಿತ್ರರು. ತಾಟಕಿ ಸಂಹಾರ, ವಿಶ್ವಾಮಿತ್ರರ ಯಾಗ ಸಂರಕ್ಷಣೆ ಮಾಡಿದ್ದೆ ರಾಮ ಲಕ್ಷ್ಮಣರ ಇಂಟರ್ನ್ಶಿಪ್ ಟ್ರೇನಿಂಗ. 

ನಂತರ ರಾಮ ಲಕ್ಷ್ಮಣರನ್ನು ಸೀತಾಸ್ವಯಂವರಕ್ಕೆ ಕರೆದೊಯ್ದವರೂ ವಿಶ್ವಾಮಿತ್ರರೇ. ಜನಕ ಮಹಾರಾಜನ ಮಗಳಾದ ಸೀತೆ ಸಾಕ್ಷಾತ್ ಮಹಾಕಾಳಿಯ ಅವತಾರವೂ ಹೌದು. ಒಂದು ದಿನ ಬಾಲಕಿಯಾದ ಸೀತೆ ಆಟವಡುತಿದ್ದಾಗ ಆಕೆಯ ಚೆಂಡು ಶಿವಧನುಸ್ಸಿನ ಒಳಗೆ ಬಿದ್ದಿತ್ತು. ತನ್ನ ಚೆಂಡನ್ನು ಎತ್ತಿಕೊಳ್ಳುವಾಗ ತನ್ನ ಎಡಗೈನಿಂದಲೇ ಶಿವಧನುಸ್ಸನ್ನು ಎತ್ತಿ  ಸರಿಸಿದ ಬಾಲಕಿ ಸೀತೆಯನ್ನು ನೋಡಿ ದಂಗಾದವನ ತಂದೆಯಾದ ಜನಕ ಮಹಾರಾಜಾ. ಆ ದಿನವೇ ಜನಕ ಮಹಾರಾಜಾ ನಿರ್ಧಾರ ಮಾಡಿದ್ದು ...................ಶಿವಧನಸ್ಸುನ್ನು ಯಾರು ಎತ್ತಿ ಹೆದೆ ಏರಿಸುವರೋ, ಅವನಿಗೆ ಸೀತೆಯನ್ನು ಮದುವೆಮಾಡಿಕೊಡುವುದು ಎಂದು. 

ರಾವಣನಂತಹ ಅತಿರಥಮಹಾರಥರು ಪ್ರಯತ್ನಿಸಿದರೂ, ಶಿವಧನಸ್ಸನ್ನು ಎತ್ತಲು ಸಾಧ್ಯವಾದದ್ದು ವಿಷ್ಣುವಿನ ಅವತಾರವಾದ ಶ್ರೀ ರಾಮನಿಗೆ ಮಾತ್ರ. ಶ್ರೀ ರಾಮ ಸೀತೆಯರ ವಿವಾಹವನ್ನು ಅತ್ಯಂತ ವಿಜೃಂಭಣೆಯಿಂದ ನೆರೆವೇರಿಸಿದವನು ಜನಕ ಮಹಾರಾಜ.  ಸೀತಾರಾಮ ಕಲ್ಯಾಣದ ವೈಭೋಗವನ್ನು ತ್ಯಾಗರಾಜರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಸೀತಾಕಲ್ಯಾಣ ವೈಭೋಗಮೇ....................

----------------------------------------------------------------------------------------------------------

ಅಂದ ಹಾಗೆ ಹರಿಕಥೆ ಅಂದಮೇಲೆ ಒಂದು ಉಪಕಥೆ ಇರಲೇಬೇಕು.  ಈಗೊಂದು ಉಪಕಥೆ.

ಶಿವಧನುಸ್ಸನ್ನು ಮುರಿದವರು ಯಾರು?

---------------------------------------------------------------------------------------------------------------


--------------------------------------------------------------------------------------------------------


----------------------------------------------------------------------------------------------------------------------

ರಾಮನ ಬಾಲಲೀಲೆಗಳ ಸರಣಿಯನ್ನು ಮುಂದುವರೆಸುತ್ತಾ, ರಾಮನಿಗೆ ಬಾಲ್ಯ ಸ್ನೇಹಿತರು ಯಾರಾದರೂ ಇದ್ದಾರೆ ಎಂಬ ರಹಸ್ಯವನ್ನು ಪರಿಶೀಲಿಸೋಣ. ಕೃಷ್ಣನಿಗೋ ಇಡೀ ನಂದಗೋಕುಲದ ಭರ್ತಿ ಅವನಿಗೆ ಸ್ನೇಹಿತರು. ಮಕರಂದ, ಕುಚೇಲ ಇವರೆಲ್ಲಾ ಕೃಷ್ಣನ ಬಾಲ್ಯ ಸ್ನೇಹಿತರು.  ಜೊತೆಗೆ ರಾಧೆ ಎಂಬ ಗರ್ಲ್ ಫ್ರೆಂಡ್ ಬೇರೆ. ರಾಮನ ಬಾಲ್ಯ ಸ್ನೇಹಿತರು ಯಾರು?  ಇದೂ ಒಂದು ರಾಮಾಯಣದ ರಹಸ್ಯವೇ ಸರಿ. 

ಅವನೇ ಗುಹ, ಬೆಸ್ತರ ರಾಜ. ಗಂಗಾನದಿಯನ್ನು ದಾಟಲು ರಾಮನಿಗೆ ಸಹಾಯ ಮಾಡಿದ ಗುಹ ರಾಮನ ಬಾಲ್ಯ ಸ್ನೇಹಿತ.  ಈ ಮಾತನ್ನು ನಾನು ಹೇಳುತ್ತಿಲ್ಲ, ಸಾಕ್ಷಾತ್ ವಾಲ್ಮೀಕಿಗಳೇ ಹೇಳಿದ್ದಾರೆ. 

ತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮಸ್ಯಾತ್ಮಸಮ: ಸಖಾ-----------ಎಂದರೆ ರಾಮನ ಬಾಲ್ಯ ಸ್ನೇಹಿತ ಗುಹ ಎಂಬುದಾಗಿ ವಾಲ್ಮೀಕಿಗಳೇ ಹೇಳಿದ್ದಾರೆ. 

ಗಂಗಾ ನದಿಯನ್ನು ದಾಟಿಸಿದ ಗುಹನಿಗೆ ಎಷ್ಟು ದಕ್ಷಿಣೆಯನ್ನು ಕೊಡಬೇಕೆಂದು ರಾಮ ಕೇಳಿದಾಗ, ಗುಹ ಹೇಳಿದ್ದು ಒಂದೇ ಮಾತು.  ಗಂಗಾನದಿಯನ್ನು ನಾನು ನಿನಗೆ ದಾಟಿಸಿದ್ದೇನೆ, ಜೀವನವೆಂಬ ಭವಸಾಗರವನ್ನು, ರಾಮ ನನ್ನನ್ನು ನೀನು ದಾಟಿಸಬೇಕು ಎಂದು ಕೇಳಿಕೊಂಡಾಗ, ಬೆಸ್ತನಾದರೂ ಗುಹ ಎಷ್ಟು ಜ್ಞಾನಿಯಾಗಿದ್ದನೆಂಬುದು ನಮಗೆ ತಿಳಿಯುತ್ತದೆ. 

-----------------------------------------------------------------------------------------------------------

-------------------------------------------------------------------------------------------------------

ಗಂಗಾನದಿಯನ್ನು ದಾಟಿದ ಶ್ರೀರಾಮ ಮೊದಲು ಪ್ರವೇಶಿಸಿದ್ದು ಚಿತ್ರಕೂಟವೆಂಬ ಅರಣ್ಯವನ್ನು. ರಾಮ ಚಿತ್ರಕೂಟವನ್ನು ಪ್ರವೇಶಿಸುತ್ತಾಲೇ ಚಿತ್ರಕೂಟದ ದೇವಿಯನ್ನು ಶ್ರೀ ರಾಮ ಏನೆಂದು ಬೇಡಿಕೊಂಡನು ಎಂಬುದು ರಾಮಾಯಣದ ಮತ್ತೊಂದು ರಹಸ್ಯ. 

ಚಿತ್ರಕೂಟದ ಅರಣ್ಯವನ್ನು ಪ್ರವೇಶಿಸಿದ ರಾಮನಿಗೆ ಚಿತ್ರಕೂಟದ ವನದೇವಿ ನಮಿಸುತ್ತಾ, ರಾಮಾ, ನೀನು ಸೀತಾ ಲಕ್ಷ್ಮಣ ಸಮೇತ ನನ್ನ ಚಿತ್ರಕೂಟವನ್ನು ಪ್ರವೇಶಿಸಿದೀಯ, ಸುಸ್ವಾಗತ. ನಿನ್ನ ಸೇವೆಯಲ್ಲಿ ನಾನು ಏನು ಮಾಡಬಹುದು ಎಂದು ಕೇಳುತ್ತಾಳೆ. ಶ್ರೀ ರಾಮ 'ಚಿತ್ರಕೂಟದ ದೇವಿ, ನಿನಗೆ ವಂದನೆ.  ನಿನ್ನ ಅರಣ್ಯಕ್ಕೆ ನಾನು ನಡೆದು ಬಂದ ದಾರಿಯಲ್ಲಿ ಇರುವ ಕಲ್ಲು ಮುಳ್ಳುಗಳನೆಲ್ಲಾ ಇಲ್ಲದಂತೆ ಮಾಡು' ಎಂದು ಪ್ರಾರ್ಥಿಸುತ್ತಾನೆ.  ಆಶ್ಚರ್ಯಚಕಿತಳಾದ ವನದೇವತೆ, 'ರಾಮ, ನೀನು ಆ ದಾರಿಯನ್ನು ದಾಟಿ ಬಂದಾಯಿತಲ್ಲಾ, ಈಗೇಕೆ ಆ ದಾರಿಯಲ್ಲಿ ಕಲ್ಲು ಮುಳ್ಳುಗಳು ಇಲ್ಲದಂತೆ ಮಾಡಬೇಕು?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ 'ನಾನು ಬಂದಾಯಿತು, ಆದರೆ ನನ್ನ ತಮ್ಮ ಭರತ ನನ್ನನ್ನು ಹುಡುಕುತ್ತಾ ಇಲ್ಲಿಗೆ ಬರುತ್ತಾನೆ. ಅವನಿಗೆ ಕಲ್ಲು, ಮುಳ್ಳುಗಳು ಚುಚ್ಚದೆ ಇರಲಿ' ಎಂದು ಉತ್ತರಿಸುತ್ತಾನೆ. ಹಾಗೆ ಆಗಲಿ ಎಂದು ಅಭಯವನಿತ್ತ ವನದೇವತೆ ರಾಮನನ್ನು ಪ್ರಶ್ನಿಸುತ್ತಲೇ.... 'ರಾಮ, ನಿನ್ನ ತಮ್ಮ ಭರತ ಸೂರ್ಯ ವಂಶಿ. ವಜ್ರದಂತೆ ಅವನ ಶರೀರ ಭಾರಿ ಗಟ್ಟಿ. ನನ್ನ ಅರಣ್ಯದ ಕಲ್ಲು ಮುಳ್ಳುಗಳಿಗೆ ಅವನು ಅಂಜುವನೆ?' ಎಂದು ಕೇಳುತ್ತಾಳೆ. ರಾಮ ಉತ್ತರಿಸುತ್ತಾ....'ವನದೇವಿ, ನೀನು ಹೇಳುತ್ತಿರುವುದು ನಿಜ.  ವಜ್ರಕಾಯದ ಪರಾಕ್ರಮಿಯಾದ ನನ್ನ ತಮ್ಮ ಭರತನಿಗೆ ನಿನ್ನ ಅರಣ್ಯದ ಕಲ್ಲು ಮುಳ್ಳುಗಳು ಏನೂ ಮಾಡವು.  ಆದರೆ ಮುಳ್ಳುಗಳು ನನ್ನ ತಮ್ಮ ಭರತನ ಕಾಲಿಗೆ ಚುಚ್ಚಿದಾಗ, ನನ್ನ ಅಣ್ಣನಾದ ರಾಮನಿಗೆ ಈ ಮುಳ್ಳುಗಳು ಚುಚ್ಚಿದಾಗ ಅವನಿಗೆ ಎಷ್ಟು ನೋವಾಗಿತ್ತೋ' ಎಂದು ಯೋಚಿಸಿ ಬಹಳ ನೊಂದುಕೊಳ್ಳುತ್ತಾನೆ. ಅದಕ್ಕಾಗಿ ವನದೇವಿ ನಿನಗೆ ಈ ಪ್ರಾರ್ಥನೆ ಎಂದು ರಾಮ ವನದೇವಿಗೆ ತಿಳಿಸುತ್ತಾನೆ. 

ಈ ಘಟನೆಯಿಂದ ರಾಮನ ಭ್ರಾತೃಪ್ರೇಮ ಭರತನ ಮೇಲೆ ಎಷ್ಟಿತ್ತೆಂಬುದು ತಿಳಿಯುತ್ತದೆ. 

-------------------------------------------------------------------------------------------------------------

ಭವ ಸಾಗರವನ್ನು ದಾಟಿಸುವ ನಮ್ಮನ್ನು ರಕ್ಷಿಸಬಲ್ಲ ಏಕೈಕ ದೈವ ಶ್ರೀ ರಾಮ. ಅಂತಹ ಶ್ರೀ ರಾಮನನ್ನು ಮೈಸೂರು ವಾಸುದೇವಾಚಾರ್ಯರು ಹೇಗೆ ಪ್ರಾರ್ಥಿಸಿದ್ದಾರೆ ಎಂಬುದನ್ನು ಈಗ ಕೇಳೋಣ. 

ಬ್ರೋಚೇವಾರೆ ವರೂರ (ಪೂರ್ತಿ ಹಾಡು)

-------------------------------------------------------------------------------------------------------------

ರಾಮೋ ವಿಗ್ರಹವಾನ್ ಧರ್ಮ:

ಇಂದೊಂದು ರಾಮಾಯಣದ ಮೇರು ವಾಕ್ಯ. 'ರಾಮ ಧರ್ಮದ ಅಂದರೆ ಸನ್ನಡತೆಯ ಮೂರ್ತಿ ರೂಪ, rama is the very embodiment of dharma'  ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು ಎಂಬುದೇ ಒಂದು ದೊಡ್ಡ ರಹಸ್ಯ. 

ಶ್ರೋತೃಗಳೇ ನಿಮಗೆ ಆಶ್ಚರ್ಯವಾಗ ಬಹುದು. ಈ ಮಾತನ್ನು ಮಾರೀಚ ರಾವಣನಿಗೆ ಹೇಳಿದ್ದು. 

ರಾಮೋ ವಿಗ್ರಹವಾನ್ ಧರ್ಮ:

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

ಸೀತೆಯ ಅಪಹರಣದ ಸಂಚು ಮಾಡಿದ ರಾವಣ, ತನ್ನ ಮಾವ ಮಾರೀಚನ ಸಹಾಯಕ್ಕಾಗಿ ಆಗ್ರಹಿಸುತ್ತಾನೆ. ಸೀತೆಯ ಮುಂದೆ ಚಿನ್ನದ ಮಾಯಾಮೃಗವಾಗಿ ಕಾಣಿಸಿಕೊಳ್ಳುವಂತೆ ಆದೇಶಿಸುತ್ತಾನೆ. 

ವಿಶ್ವಾಮಿತ್ರ  ಯಾಗ ಸಂರಕ್ಷಣೆಯ ಸಮಯದಲ್ಲಿ, ರಾಮನ ಬಾಣದ ಹೊಡೆತಕ್ಕೆ ತತ್ತರಿಸಿ  ನೂರು ಯೋಜನ ಹಾರಿಬಿದ್ದ ಮಾರೀಚ ಈಗ ಸನ್ಯಾಸಿಯಾಗಿ ದಂಡಕಾರಣ್ಯದಲ್ಲಿ ತಪಸ್ಸನ್ನು ಮಾಡುತ್ತಿರುತ್ತಾನೆ. ದುಷ್ಟ ರಾವಣನ ಆಗ್ರಹವನ್ನು ಕೇಳಿ, ಮಾರೀಚ ರಾವಣನ ನ್ನು ಎಚ್ಚರಿಸುತ್ತಾ...... 'ರಾಮ ಧರ್ಮದ ಮೂರ್ತರೂಪ. ಅವನು ಮಹಾ ಪರಾಕ್ರಮಿ. ಅವನೊಂದಿಗಿನ ವೈರದಿಂದ ನೀನು ನಾಶವಾಗಿ ಹೋಗುತ್ತೀಯಾ, ಜೋಕೆ. ಸೀತೆಯನ್ನು ಅಪಹರಿಸುವ ಸಂಚು ಬೇಡ' ಎಂದು ಉಪದೇಶಿಸುತ್ತಾನೆ. ಕೋಪಗೊಂಡ ರಾವಣ 'ನನ್ನೊಡನೆ ಸಹಕರಿಸು, ಇಲ್ಲವೇ ಸಾಯಲು ಸಿದ್ಧನಾಗು' ಎಂದು ಮಾರೀಚನನ್ನು ಗದರಿಸುತ್ತಾನೆ. ಪರಿಸ್ಥಿತಿಯನ್ನು ಅರಿತುಕೊಂಡ ಮಾರೀಚ 'ರಾವಣ......  ನಿನ್ನೊಡನೆ ಸಹಕರಿಸದಿದ್ದರೆ ನಿನ್ನ ಕೈಯಿಂದ ಸಾಯುತ್ತೇನೆ.  ನಿನ್ನೊಡನೆ ಸಹಕರಿಸಿದರೆ ಸಾಕ್ಷಾತ್ ರಾಮನ ಕೈಯಲ್ಲಿ ಹತ್ಯೆಗೊಂಡು ಸ್ವರ್ಗವನ್ನು ಸೇರುತ್ತೇನೆ. ರಾಮನ ಕೈಯಲ್ಲಿ ಸಾಯುವುದೇ ಮೇಲೆ' ಎಂದು ರಾವಣನ ಸಂಚಿಗೆ ಒಪ್ಪಿಕೊಳ್ಳುತ್ತಾನೆ. 


ಧರ್ಮದ ಪ್ರತಿಮೂರ್ತಿಯಾದ ರಾಮನನ್ನು  ತ್ಯಾಗರಾಜರು ಜಗದಾನಂದಕಾರಕನೆಂದೇ ಬಣ್ಣಿಸಿದ್ದಾರೆ. 

ಜಗದಾನಂದಕಾರಕ…..(selected part)


-----------------------------------------------------------------------------------------------------------

ಶ್ರೋತೃಗಳೇ....

ಕಳೆದ ಕೆಲವು ದಿನಗಳಿಂದ ನಮ್ಮ ದೇಶದಲ್ಲಿ ಧುರಂಧರ್ ಹವಾ ಸೃಷ್ಟಿಯಾಗಿದೆ. ಧುರಂಧರ್ ಎಂದರೆ ಯಾರು? ಧುರಂಧರ್ ಎಂಬುದು ಸಂಸ್ಕೃತ ಪದ.  ಶತ್ರುದೇಶದೊಳಗೆ ನುಗ್ಗಿ, ಶತ್ರುಗಳನ್ನು ಬಗ್ಗುಬಡಿದು, ಮಾತೃಭೂಮಿಗೆ ಹಿಂದಿರುಗಬಲ್ಲವನೇ ಧುರಂಧರ. ಹಾಗಾದರೆ ನಮ್ಮ ದೇಶ ಕಂಡ ಮೊದಲ ಧುರಂಧರ ಯಾರು?

ಅವನೇ ನಮ್ಮ ಹನುಮಂತ.

ಬೋಲೋ  ಪವನ ಪುತ್ರ ಹನುಮಾನ್ ಕಿ..... ಜೈ 

ಅಂಜನಿ ಪುತ್ರ ಹನುಮನ ಕಿ......ಜೈ 

ರಾಮಭಕ್ತ ಹನುಮಾನ್ ಕಿ........ಜೈ 

ಸೀತೆಯನ್ನು ಕಳೆದುಕೊಂಡ ರಾಮ ಲಕ್ಷ್ಮಣರು, ಸೀತೆಯನ್ನು ಹುಡುಕುತ್ತಾ ಹನುಮನಂತನ ಭೇಟಿಯಾಗುತ್ತಾರೆ. ಹನುಮಂತನ ಮೂಲಕ ಸುಗ್ರೀವನೊಡನೆ ಸ್ನೇಹವಾಗುತ್ತದೆ. 

ಸೀತೆಯನ್ನು ಹುಡುಕಲು ಜಾಂಬವಂತರ  ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ ಸುಗ್ರೀವ, ಆ ತಂಡವನ್ನು ದಕ್ಷಿಣ ದಿಕ್ಕಿಗೆ ಕಳುಹಿಸುತ್ತಾನೆ. ಆ ತಂಡದಲ್ಲಿದ್ದ ನಮ್ಮ ಆಂಜನೇಯನ ಮೇಲೆ ಸಂಪೂರ್ಣ ಭರವಸೆ ಇದ್ದ ಶ್ರೀ ರಾಮ, ಅವನ ಕೈಗೆ ತನ್ನ ಮುದ್ರೆಯುಂಗುರವನ್ನು ನೀಡಿ ಸೀತೆಗೆ ಕೊಡುವಂತೆ ಆದೇಶಿಸುತ್ತಾನೆ. 

ಜಾಂಬವಂತರ ತಂಡ ದಕ್ಷಿಣದ ತುತ್ತುದಿಯ ಸಮುದ್ರದ ದಡಕ್ಕೆ ಬಂದು ನಿಲ್ಲುತ್ತದೆ. ಲಂಕಾ ಪಟ್ಟಣವನ್ನು ತಲುಪಲು ನೂರು ಯೋಜನಾ ಸಮುದ್ರವನ್ನು ಹಾರಬೇಕಾದಾಗ, ದಿಕ್ಕು ತೋಚದ ವಾನರ ತಂಡ ಪೆಚ್ಚಾಗಿ ಕುಳಿತುಕೊಳ್ಳುತ್ತದೆ. ಹನುಮಂತನು ಒಂದು ಮೂಲೆಯಲ್ಲಿ ಕುಳಿತುಕೊಂಡಿರುತ್ತಾನೆ. 

ಹನುಮಂತನ ಅಘಾದ ಶಕ್ತಿಯ ಅರಿವಿದ್ದ ಜಾಂಬವಂತರು, ಹನುಮಂತನೊಡನೆ ಮಾತನಾಡುತ್ತ...... 'ಹನುಮಂತ ನೀನು ವಾಯುಪುತ್ರ.  ಬಾಲ್ಯದಲ್ಲಿ ಸೂರ್ಯನನ್ನು ಹಿಡಿಯಲು ಆಕಾಶಕ್ಕೆ ಹಾರಿದ ಶಕ್ತಿವಂತ. ನೂರು ಯೋಜನಾ ಸಮುದ್ರವನ್ನು ಹಾರಿ ಲಂಕಾ ಪಟ್ಟಣವನ್ನು ತಲುಪುವುದು ನಿನಗೆ ಮಾತ್ರ ಸಾಧ್ಯ. ಎದ್ದೇಳು' ಎಂದು ಹುರಿದುಂಬಿಸಲು, ಸಮೀಪವ ಇದ್ದ  ಪರ್ವತವನ್ನು ಹತ್ತಿ ನಿಂತ ಹನುಮಂತ ಮುಗಿಲ್ಲೆತ್ತರಕ್ಕೆ ಬೆಳೆದು ನಿಲ್ಲುತ್ತಾನೆ. ಹನುಮಂತನ ವಿಶ್ವರೂಪವನ್ನು ನೋಡಿದ ವಾನರ ಸೇನೆ ಬೆರಗಾಗಿ ಹೋಗುತ್ತದೆ. ಮುಗಿಲ ಎತ್ತರದ ಹನುಮಂತ ಒಮ್ಮೆ ಘರ್ಜಿಸಿದಾಗ ಏನಾಯ್ತು?

ಘಟಿಕಾ ಚಲದಿ ನಿಂತ  (ಪೂರ್ತಿ ಹಾಡು)


-----------------------------------------------------------------------------------------------------------------------------

ಹನುಮಂತನ ಸಮುದ್ರ ಲಂಘನದ ಕಥೆ, (ಪ್ರಜ್ಞಳಿಂದ)

-----------------------------------------------------------------------------------------------------------------------------

----------------------------------------------------------------------------------------------------------------------------
ರಾಮನಾಮದ ಬಲದಿಂದ ಬಂಡೆ ತೇಲಿತು - ಪ್ರಜ್ಞಳಿಂದ ಕಥೆ. 

---------------------------------------------------------------------------------------------------------------------------

ರಾಮ ರಾವಣರ ಮಧ್ಯೆ ಘೋರ ಯುದ್ಧವಾಗುತ್ತದೆ. 

ವೀರಾವೇಶದಿಂದ ಹೋರಾಡಿದ ಲಕ್ಷ್ಮಣ ರಾವಣ ಪುತ್ರ ಇಂದ್ರಜಿತುವಿನ ಸಂಹಾರ ಮಾಡುತ್ತಾನೆ.  ಪುತ್ರ ಇಂದ್ರಜಿತುವಿನ ಹತ್ಯೆಯಿಂದ ರೋಷಗೊಂಡ ರಾವಣ, ರಾಮನ ಕಪಿ ಸೇನೆಯ ಮೇಲೆ 'ಮೂಲಬಲ'ವೆಂಬ ಎರಡು ಲಕ್ಷ ರಾಕ್ಷಸರ ಪಡೆಯ ಸೈನ್ಯದಿಂದ ದಾಳಿಮಾಡುತ್ತಾನೆ. ರಾವಣನ ಮೂಲಬಲದ ಹೋದತ್ತಕ್ಕೆ ತತ್ತರಿಸಿದ ಕಪಿಸೈನ್ಯ ದಿಕ್ಕಾಪಾಲಾಗಿ ಓಡಲಾರಂಭಿಸುತ್ತದೆ. ಕಪಿಸೈನ್ಯದ ರಕ್ಷಣೆಗಾಗಿ ಪಣತೊಟ್ಟ ಶ್ರೀ ರಾಮ, ರಾವಣ ಮೂಲಬಲದ ಮೇಲೆ ಗಂಧರ್ವಾಸ್ತ್ರವೆಂಬ ಸಮ್ಮೋಹಿನಿ ಅಸ್ತ್ರವನ್ನು ಪ್ರಯೋಗಿಸುತ್ತಾನೆ. ಗಂಧರ್ವಾಸ್ತ್ರದ ಮೋದಿಯ ಫಲವಾಗಿ ಮೂಲಬಲದ ರಾಕ್ಷರಿಗೆ ಮಂಕುಹಿಡಿದಂತಾಗುತ್ತದೆ. ರಾಕ್ಷಸರಿಗೆ  ಎಲ್ಲೆಲ್ಲೂ ಶ್ರೀ ರಾಮನೇ  ಕಾಣುವಂತಾಗುತ್ತದೆ. ಪ್ರತಿಯೊಬ್ಬ ರಾಕ್ಷಸನಿಗೂ ಪಕ್ಕದ ರಾಕ್ಷಸನೇ ರಾಮನಂತೆ ಕಾಣಿಸುತ್ತದೆ. ಅದನ್ನೇ ಪುರಂದರ ದಾಸರು 'ಅವನಿಗೆ ಇವ ರಾಮ, ಇವನಿಗೆ ಅವ ರಾಮ' ಎಂದು ವರ್ಣಿಸಿದ್ದಾರೆ. ಸಂಮೋಹಕ್ಕೆ ಒಳಗಾದ ರಾಕ್ಷಸರು ತಮ್ಮ ತಮ್ಮೊಳಗೆ ಕಾದಾಡಿ ಮಡಿಯುತ್ತಾರೆ. ಹೀಗೆ ರಾವಣನ ಮೂಲಬಲ ಹಾಗೂ ಅವನ ಎರಡು ಲಕ್ಷ ರಾಕ್ಷಸರ ಪದೇ ನಿರ್ನಾಮಗೊಳ್ಳುತ್ತದೆ.  

ಈ ಯುದ್ಧದ ವರ್ಣನೆಯನ್ನು ಪುರಂದರ ದಾಸರು ತಮ್ಮ ದೇವರನಾಮದಲ್ಲಿ ಸೊಗಸಾಗಿ ಮಾಡಿದ್ದಾರೆ. 

ಅಲ್ಲಿ ನೋಡಲು ರಾಮ, ಇಲ್ಲಿ ನೋಡಲು ರಾಮ (ಪೂರ್ತಿ ಹಾಡು) 

-----------------------------------------------------------------------------------------------------------------------------
ಇಡೀ ರಾಮಾಯಣವನ್ನು ಗದ್ಯ ರೂಪದಲ್ಲಿ ಪ್ರಸ್ತುತಪಡಿಸಿದವರು ತಮಿಳ್ ನಾಡಿನ ಕವಿ ವೇದಾಂತ ದೇಶಿಕರ್ರವರು. ತಮಿಳ್ ನಾಡಿನ ತಿರುವಹಿಂದ್ರಾಪುರಂನ ಕೋದಂಡ ರಾಮನ ಪರಮ ಭಕ್ತರಾದ ವೇದಾಂತ ದೇಶಿಕರ್ ಅವರು ಕೋದಂಡ ರಾಮನ shauryaವನ್ನು ತಮ್ಮ ರಘುವೀರ ಗದ್ಯದಲ್ಲಿ ಪ್ರಸ್ತುತಪಡಿಸಿದ್ದಾರೆ. 

ರಾವಣನ ಸೇನಾಧಿಪತಿ ಪ್ರಹಸ್ತನ ಹತ್ಯೆಯಾನಂತರ ರಾವಣ ತಾನೇ ರಣರಂಗಕ್ಕೆ ಬರುತ್ತಾನೆ. ಲಕ್ಷ್ಮಣನ ಮೇಲೆ ಘೋರ ಯುದ್ಧವನ್ನಾಡಿದ ರಾವಣ, ಅಮೋಘವಾದ ಅಸ್ತ್ರವೊಂದನ್ನು ಪ್ರಯೋಗಿಸಿ ಲಕ್ಷ್ಮಣನನ್ನು ಮೂರ್ಚಿತನನ್ನಾಗಿ ಮಾಡುತ್ತಾನೆ.  ಯುದ್ಧದ ಪಾರಿತೋಷಕವೆಂದು ಲಕ್ಷ್ಮಣನ ಶರೀರವನ್ನು ರಾವಣ ಎತ್ತಿಕೊಂಡು ಹೋಗಲು ಪ್ರಯತ್ನಿಸುತ್ತಾನೆ.  ಕೈಲಾಸವನ್ನು ಎತ್ತಿ ನಡುಗಿಸಿದ ರಾವಣನಿಗೆ, ಲಕ್ಷ್ಮಣನನ್ನು ಎತ್ತಲು ಆಗುವುದಿಲ್ಲ.  ಎಲ್ಲವನ್ನು ನೋಡುತ್ತಿದ್ದ ಹನುಮಂತ ರಾವಣನನ್ನು ಹಿಮ್ಮೆಟ್ಟಿಸಿ, ಲೀಲಾಜಾಲವಾಗಿ ಲಕ್ಷ್ಮಣನನ್ನು ಎತ್ತಿಕೊಂಡು ಹೋಗಿ ಸುರಕ್ಷಿತ ತಾಣಕ್ಕೆ ಕರೆದೊಯುತ್ತಾನೆ. 

ಹನುಮಂತ ಹಿಂತುರುಗಿ ರಣರಂಗಕ್ಕೆ ಬರುವ ಹೊತ್ತಿಗೆ ರಾಮ ರಾವಣರ ಯುದ್ಧವಾಗುತ್ತಿರುತ್ತದೆ. ರಾವಣ ರಥದ ಮೇಲಿದ್ದರೆ, ಶ್ರೀ ರಾಮ ಭೂಮಿಯ ಮೇಲೆ ನಿಂತಿರುತ್ತಾನೆ. ಮುನ್ನುಗ್ಗಿ ರಾಮನನ್ನು ತನ್ನ ಕುತ್ತಿಗೆಯ ಮೇಲೇರಿಸಿಕೊಂಡ ಹನುಮಂತ, ರಾಮನ ಬಲವನ್ನು ಹೆಚ್ಚಿಸುತ್ತಾನೆ. ವೀರಾವೇಶದಿಂದ ಹೋರಾಡಿದ ರಾಮನ ಬಾಣಗಳಿಗೆ ರಾವಣ ತತ್ತರಿಸಿ ಹೋಗುತ್ತಾನೆ, ನಿರಾಯುಧನಾಗಿ ಹೋಗುತ್ತಾನೆ.  ರಾವಣನ ಅಸಹಾಯಕ ಪರಿಸ್ಥಿತಿಯನ್ನು ಕಂಡ ರಾಮ, 'ರಾವಣ, ನೀನು ಸೋತು ನಿರಾಯುಧನಾಗಿದ್ದೀಯ. ಇಂತಹ ಪರಿಸ್ಥಿತಿಯಲ್ಲಿ ನಾನು ನಿನ್ನ ಹತ್ಯೆ ಮಾಡುವುದಿಲ್ಲ.  ಈಗ ನಿನ್ನ ಮನೆಗೆ ಹೋಗಿ ವಿಶ್ರಾಂತಿ ಪಡೆದುಕೋ. ನಾಳೆ ಮತ್ತೆ ಯುದ್ಧ ಮಾಡುವಿಯಂತೆ' ಎನ್ನುತ್ತಾನೆ. ವೀರ ರಾಮನ ಈ ಔದಾರ್ಯದ ಪ್ರಸಂಗವನ್ನು ರಘುವೀರ ಗದ್ಯದಲ್ಲಿ ವೇದಾಂತ ದೇಶಿಕರು ಹೇಗೆ ವರ್ಣಿಸಿದ್ದಾರೆ ಎಂಬುದನ್ನು ನೋಡೋಣ. 



ರಘುವೀರ ಗದ್ಯ ಗಾಯನ 

----------------------------------------------------------------------------------------------------------------------------


----------------------------------------------------------------------------------------------------------------------------
  

-------------------------------------------------------------------------------------------------------------------------------
ಜನನಿ ಜನ್ಮ ಭೂಮಿಶ್ಚ 
ಸ್ವರ್ಗಾದಪಿ ಗರೀಯಸೀ 

ಕಥೆ ಪ್ರಜ್ಞಳಿಂದ 

--------------------------------------------------------------------------------------------------------------------------
ಇಂದಿನ ರಾಮಾಯಣದ ರಹಸ್ಯಗಳು ಎಂಬ ಹರಿಕಥೆ ರಾಮಾಯಣವನ್ನು ಸ್ವಾರಸ್ಯಕರ ರೀತಿಯಲ್ಲಿ ಪ್ರಸ್ತುತಪಡಿಸುವ ಒಂದು ಹೊಸ ಪ್ರಯತ್ನ.  ನಮ್ಮ ಇಂದಿನ ಹರಿಕಥೆಯನ್ನು ಆಲಿಸಿ ಆಶೀರ್ವದಿಸದ ತಮಗೆಲ್ಲಾ ನಮಸ್ಕಾರಗಳು.  ಶ್ರೀ ರಾಮನಿಗೆ ಒಂದು ಮಂಗಳವನ್ನು ಈಗ 

ಮಧ್ಯಮಾವತಿ ಶ್ಲೋಕ ----------------------------------









Tuesday, 30 December 2025

Sri Purandarasaru - Harikathe - 22-01, 14-02, 22-02-26

 ೧) ಓಂ ಗಣೇಶಯನಮಃ 

ಓಂ ದಾಸ ಶ್ರೇಷ್ಠಯನಮಃ 

ಓಂ ಪುರಂದರ ಗುರುವೇನಮಃ  (ಸ, ಪ, ಸ ಧಾಟಿಯಲ್ಲಿ) 

*******

ಶ್ರೀ ಪುರಂದರ ದಾಸರು ಎಂಬ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಗಳ ಇಂದಿನ ಪ್ರಯತ್ನಕ್ಕೆ ತಮ್ಮಂಥ ಗುರುಹಿರಿಯರ ಆಶೀರ್ವಾದವು ಅತಿ ಮುಖ್ಯವಾದದ್ದು. ಹರಿಕಥೆಯ ಆರಂಭವನ್ನು ಶ್ರೀ  ಪುರಂದರದಾಸರ ಸ್ಮರಣೆಯೊಂದಿಗೆ ಮಾಡೋಣ. 

*********

ದಾಸರೆಂದರೆ ಪುರಂದರ ದಾಸರಯ್ಯಾ (ಹಾಡು)

*********

ನಮ್ಮ ಭಾರತ ದೇಶವನ್ನು ಕಟ್ಟಿ ಬೆಳಸಿದವರು ದಾಸ ಶ್ರೇಷ್ಠರುಗಳು. ದಕ್ಷಿಣದಲ್ಲಿ ಪುರಂದರದಾಸರು, ತ್ಯಾಗರಾಜರು, ಉತ್ತರದಲ್ಲಿ ತುಳಸಿದಾಸರು, ಮೀರಾಬಾಯಿ, ಪಶ್ಚಿಮದಲ್ಲಿ  ಸಂತ ತುಕಾರಾಂ, ಏಕನಾಥರು, ಮತ್ತು ಪೂರ್ವದಲ್ಲಿ ರಾಮಕೃಷ್ಣ ಪರಮಹಂಸರು ಮತ್ತು ಸ್ವಾಮಿ ವಿವೇಕಾನಂದರು ದಾಸ ಶ್ರೇಷ್ಠರುಗಳ ಸಾಲಿನಲ್ಲಿ ಪ್ರಮುಖರು. ಆದರೆ ನಾವುಗಳು ಈಗ ಈ ದಾಸ ಶ್ರೇಷ್ಠರುಗಳ ವಾಣಿಯನ್ನು ಮರೆತಿದ್ದೇವೆ. ಪ್ರಪಂಚ ವಿನಾಶದತ್ತ ಸಾಗುತ್ತಿದೆಯೋ ಎಂದೆನಿಸುತ್ತಿದೆ. ಪ್ರಪಂಚ ರಶಿಯಾ-ಉಕ್ರೇನ್ ಯುದ್ಧ ಮತ್ತು ಇಸ್ರೇಲ್-ಪ್ಯಾಲೆಸ್ಟೈನ್ ಯುದ್ಧಗಳ ಭೀತಿಯಲ್ಲಿ ತತ್ತರಿಸುತ್ತಿದೆ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದಿರುವ ಹಿಂಸಾಚಾರ ನಮ್ಮನ್ನು ಆತಂಕದತ್ತ ತಳ್ಳಿದೆ. ನಮ್ಮ ಜನಗಳು ಸಮಚಿತ್ತ ಮತ್ತು ಸಮತಾಭಾವಗಳನ್ನು ಮರೆಯುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ನಮಗಿರುವ ಏಕೈಕ ಸನ್ಮಾರ್ಗವೆಂದರೆ ನಮ್ಮ ದಾಸರುಗಳು ತೋರಿಸಿದ ಮಾರ್ಗ. ಆದುದರಿಂದ ಇಂದಿನ ಪುರಂದರ ಆರಾಧನೆಯ ಈ ಕಾರ್ಯಕ್ರಮ ಎಂದಿಗಿಂತಲೂ ಹೆಚ್ಚು ಅವಶ್ಯಕವಾದದ್ದು ಎಂದೇ ಹೇಳಬೇಕಾಗುತ್ತದೆ.

***********

ಪುರಂದರ ದಾಸರು ಜನಿಸಿದ್ದು ಪುಣೆ ಸಮೀಪದ ಪುರಂದರಗಡದಲ್ಲಿ ಎನ್ನುತ್ತದೆ ಒಂದು ಇತಿಹಾಸ. ಇತ್ತೀಚಿನ ಸಂಶೋಧನೆಗಳ ಪ್ರಕಾರ ಪುರಂದರದಾಸರು ಜನಿಸಿದ್ದು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಅರಗ ಗ್ರಾಮ ಎಂದು ತಿಳಿದುಬಂದಿದೆ. ಪುರಂದರದಾಸರ ಜೀವನ ಮತ್ತು ಸಾಧನೆಯ ಸಾಧನ ಕ್ಷೇತ್ರವಾಗಿದ್ದು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಇಂದಿನ ಹಂಪಿ ಪಟ್ಟಣ.  

ಪುರಂದರ ದಸರಾ ಪೂರ್ವಾಶ್ರಮದ ಹೆಸರು ಸೀನಪ್ಪ ನಾಯಕ. ಇಹಲೋಕದ ಲೋಭ-ಮೋಹಗಳ ದಾಸನಾಗಿದ್ದ ಸೀನಪ್ಪ ನಾಯಕ ವಜ್ರ-ವೈಡೂರ್ಯಗಳ ವ್ಯಾಪಾರಿ. ಮುಗ್ಧ ಜನರುಗಳನ್ನು ವಂಚಿಸಿ ಅಪಾರ ಹಣವನ್ನು ಗಳಿಸಿದ್ದ ಸೀನಪ್ಪ ನಾಯಕ ನವಕೋಟಿ ನಾರಾಯಣನೆಂದೇ ಹೆಸರುವಾಸಿಯಾಗಿದ್ದವನು. 'ಎಂಜಲು ಕೈಯಲ್ಲಿ ಕಾಗೆ ಹೊಡೆಯೊಲ್ಲ' ಎಂಬ ಗಾದೆಯು ಕಡುಜಿಪುಣನಾದ ಸೀನಪ್ಪ ನಾಯಕನನ್ನು ನೋಡಿ ಸೃಷ್ಟಿಸಿದ ಗಾದೆಯೇ ಆಗಿತ್ತು. ದೇವರಪೂಜೆಗೆ ಹಚ್ಚಿದ್ದ ಊದಿನ ಕಡ್ಡಿಯನ್ನು, ಪೂಜೆಯನಂತರ ಆರಿಸಿ ನಾಳಿನ ಪೂಜೆಗೆ ಇಟ್ಟುಕೊಳ್ಳುವಷ್ಟು ಜಿಪುಣನಾಗಿದ್ದವನು ಸೀನಪ್ಪ ನಾಯಕ. ಬೇಳೆ ಹೆಚ್ಚು ಬೇಯಿಸಿ  ಸಾರು-ಹುಳಿಗಳನ್ನು ಮಾಡಿದರೆ, ಬೇಗನೆ ಹಳಸಿಹೋಗುತ್ತದೆ, ಬೇಳೆಯನ್ನು ಕಮ್ಮಿ ಬೇಯಿಸಿದರೆ ಸಾರು-ಹುಳಿಗಳನ್ನು ನಾಲ್ಕಾರು ದಿನ ಇಟ್ಟುಕೊಂಡು ತಿನ್ನಬಹುದು ಎಂದು ಹೆಂಡತಿಗೆ ಮತ್ತೆ ಮತ್ತೆ ಭೋದಿಸುತ್ತಿದ್ದ ಜಿಪುಣಾಗ್ರೇಸರ ಸೀನಪ್ಪ ನಾಯಕ. 

ಜಿಪುಣ ಸೀನಪ್ಪ ನಾಯಕನ ಹೆಂಡತಿಯಾದ ಸರಸ್ವತಿಯಮ್ಮ ಮಹಾನ್ ದೈವಭಕ್ತೆ. ದಿನ ನಿತ್ಯವನ್ನು ನಾರಾಯಣನ ಸ್ಮರಣೆಯಲ್ಲೇ ಕಳೆಯುತ್ತಿದ್ದವಳು ಸರಸ್ವತಿ.  

********************

ನಾರಾಯಣ ನಿನ್ನ ನಾಮದ (ಹಾಡು) 

*********************

ಪತಿಯ ಕಣ್ಣುತಪ್ಪಿಸಿ ದಾನ-ಧರ್ಮಗಳನ್ನು ಮಾಡುತ್ತಿದ್ದ ಧಾರಾಳಿ ಸರಸ್ವತಿ. ಪತಿಗೆ ಸನ್ಮಾರ್ಗವನ್ನು ತೋರಿಸು ಎಂದು ಪ್ರತಿನಿತ್ಯ ಬೇಡುತ್ತಿದ್ದವಳು ಸರಸ್ವತಿ.   

***********************

ಹೀಗಿರುವಾಗ ಸೀನಪ್ಪ ನಾಯಕನ ವಜ್ರ-ವೈಡೂರ್ಯಗಳ ಅಂಗಡಿಗೆ ಬ್ರಾಹ್ಮಣನೊಬ್ಬ ಬರುತ್ತಾನೆ. ಮಗನಿಗೆ ಉಪನಯನವನ್ನು ಮಾಡಬೇಕು, ಏನಾದರು ಸಹಾಯ ಮಾಡಿ ಎಂದು ಸೀನಪ್ಪನನ್ನು ಬೇಡುತ್ತಾನೆ. ಜಿಪುಣಾಗ್ರೇಸನಾದ ಸೀನಪ್ಪ ಒಂದು ಸವಕಲು ಕಾಸನ್ನು ಕೊಡುವುದಿಲ್ಲ, ಇಲ್ಲಿಂದ ಹೋರಡಿ ಎಂದು ಗದರುತ್ತಾನೆ. 

ಅದೇ ಬ್ರಾಹ್ಮಣ, ಸೀನಪ್ಪನು ಇಲ್ಲದಿದ್ದ ಸಮಯದಲ್ಲಿ ಸೀನಪ್ಪನ ಮನೆಗೆ ಬಂದು ಸೀನಪ್ಪನ ಹೆಂಡತಿಯಾದ ಸರಸ್ವತಿ ಅಮ್ಮಳನ್ನು ಬೇಡುತ್ತಾನೆ.  ನನ್ನ ಮಗನ ಉಪನಯನವನ್ನು ಮಾಡಬೇಕು. ಏನಾದರು ಸಹಾಯ ಮಾಡಿ ಎಂದು ಅಂಗಲಾಚುತ್ತಾನೆ. ನಿಮಗೆ ಸಹಾಯಮಾಡುವ ಮನಸಿದ್ದರು, ನನ್ನದು ಎಂಬುದು ಏನೂ ಇಲ್ಲ, ಪತಿಯನ್ನು ಕೇಳದೆ ಏನನ್ನೂ ಕೊಡಲಾರೆ ಎನ್ನುತ್ತಾಳೆ ಸರಸ್ವತಿ. 'ಹಾಗೇಕೆ ಹೇಳುವಿರಿ ಅಮ್ಮ, ನೀವು ತವರಿನಿಂದ ತಂದಿರುವ ಮೂಗುತಿಯನ್ನೇ ಕೊಡಿ ಎನ್ನುತ್ತಾನೆ ಬಡ ಬ್ರಾಹ್ಮಣ. ಅದೇ ಕ್ಷಣ ತನ್ನ ಮೂಗುತಿಯನ್ನು ಬಿಚ್ಚಿ ಅದನ್ನು ಬ್ರಾಹ್ಮಣನಿಗೆ ದಾನ ಮಾಡುತ್ತಾಳೆ   ಸರಸ್ವತಿ. 

ಸರಸ್ವತಿ ನೀಡಿದ ಮೂಗುತಿಯನ್ನು ತೆಗೆದುಕೊಂಡು ನೇರವಾಗಿ ಬ್ರಾಹ್ಮಣ ಹೊರಟಿದ್ದು ಸೀನಪ್ಪ ನಾಯಕನ ಅಂಗಡಿಯ ಕಡೆಗೆ. 'ನಾನೀಗ ಭಿಕ್ಷೆಯನ್ನು ಬೇಡುತ್ತಿಲ್ಲ. ಈ ಮೂಗುತಿಯನ್ನು ಮಾರಲು  ಬಂದಿದ್ದೇನೆ, ಎಷ್ಟು ಹಣ ನೀಡುವಿರಿ ಎಂದು ಸೀನಪ್ಪನನ್ನು ಕೇಳುತ್ತಾನೆ ಬಡ ಬ್ರಾಹ್ಮಣ. ಮೂಗುತಿಯನ್ನು ನೋಡಿದ ತಕ್ಷಣ ಸೀನಪ್ಪನಿಗೆ ಅದು ತನ್ನ ಹೆಂಡತಿಯದೆ ಮೂಗುತಿ ಎಂಬ ಅನುಮಾನ ಬರುತ್ತದೆ. ಮೂಗುತಿಯನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟು ಬೀಗ ಹಾಕಿದ ಸೀನಪ್ಪ ಓಡಿದ್ದು ಮನೆಯ ಕಡೆಗೆ.

 'ಸರಸ್ವತಿ, ಸರಸ್ವತಿ' ಎಂದು ಕೂಗುತ್ತಲೇ ಬಂದ ಗಂಡನನ್ನು ನೋಡಿ ಸರಸ್ವತಿ ಭಯಭೀತಳಾಗುತ್ತಾಳೆ. 'ನಿನ್ನ ಮೂಗುತಿ ಎಲ್ಲಿ, ತೋರಿಸು' ಎಂದು ಘರ್ಜಿಸಿದ ಪತಿಯ ಕೋಪಕ್ಕೆ ತತ್ತರಿಸಿದ ಸರಸ್ವತಿ, ದೇವರಕೋಣೆಯನ್ನು ಸೇರುತ್ತಾಳೆ. ಪತಿಯ ಕೋಪದಿಂದ ತಪ್ಪಿಸಿಕೊಳ್ಳಲು ಇರುವ ಮಾರ್ಗ ಸಾಯುವುದೊಂದೇ ಎಂದು ನಿರ್ಧರಿಸಿದ ಸರಸ್ವತಿ 'ಪಾಂಡುರಂಗ.....ನಿನ್ನ ಪಾದವೇ ಗತಿ' ಎನ್ನುತ್ತಾ  ವಿಷವನ್ನು ಕುಡಿಯಲು ಮುಂದಾಗುತ್ತಾಳೆ. ಅದೇ ಕ್ಷಣದಲ್ಲಿ ಠನ್  ಎಂಬ ಶಬ್ದದೊಂದಿಗೆ ಸರಸ್ವತಿಯ ಮೂಗುತಿ ವಿಷದ ಬಟ್ಟಲೊಳಗೆ ಬಂದು ಬೀಳುತ್ತದೆ. ಇದು ಪಾಂಡುರಂಗನ ಪವಾಡವೇ ಎಂದು ಭಾವಿಸಿದ ಸರಸ್ವತಿ, ಮೂಗುತಿಯನ್ನು ಪತಿಯಾದ ಸೀನಪ್ಪನಿಗೆ ನೀಡುತ್ತಲೇ, ಮೂಗುತಿಯನ್ನು ನೋಡಿ ಆಶ್ಚರ್ಯಗೊಂಡ ಸೀನಪ್ಪ ಆಗ ಓಡಿದ್ದು ತನ್ನ ಅಂಗಡಿಯ ಕಡೆಗೆ. ಅಂಗಡಿಯಲ್ಲಿ ಆ ಬಡ ಬ್ರಾಹ್ಮಣ ಇರುವುದಿಲ್ಲ. ಅತಾತುರವಾಗಿ ತನ್ನ ಕಬ್ಬಿಣದ ಪೆಟ್ಟಿಗೆಯನ್ನು ತೆರೆದ ಸೀನಪ್ಪ ನಾಯಕನಿಗೆ ಅಲ್ಲಿ ಆ ಬ್ರಾಹ್ಮಣ ಕೊಟ್ಟಿದ್ದ ಮೂಗುತಿ ಕಾಣುವುದಿಲ್ಲ. ಸೀನಪ್ಪನಿಗೆ ಪರಮಾಶ್ಚರ್ಯವಾಗಿರುತ್ತದೆ. 

ಆ ಬಡ ಬ್ರಾಹ್ಮಣನು ಪುರಂದರ ವಿಠ್ಠಲನ  ದೇವಸ್ಥಾನದ ಗರ್ಭಗುಡಿಯ ಕಡೆಗೆ ಹೋಗಿದ್ದಾಗಿ ಅಂಗಡಿಯ ಕೆಲಸಗಾರರು ತಿಳಿಸುತ್ತಾರೆ. ಪತ್ನಿಯಾದ ಸರಸ್ವತಿಯೊಂದಿಗೆ ಸೀನಪ್ಪ ನಾಯಕ ಪಾಂಡುರಂಗನ ಗುಡಿಗೆ ಹೋಗುತ್ತಾನೆ.  ಗರ್ಭಗುಡಿಯಲ್ಲಿ ಸರಸ್ವತಿಗೆ ಆ ಬಡ ಬ್ರಾಹ್ಮಣ ಕಾಣಿಸುತ್ತಾನೆ, ಸೀನಪ್ಪನಿಗೆ ಕಾಣಿಸುವುದಿಲ್ಲ. ಜ್ಞಾನೋದಯವಾದ ಸೀನಪ್ಪ ನಾಯಕ ತನ್ನ ಎಲ್ಲ ಧನ-ಕನಕಗಳನ್ನು ಬಡಬಗ್ಗರಿಗೆ ದಾನ ಮಾಡುತ್ತಾನೆ. ಹೆಂಡತಿ ಕೊಟ್ಟ ತಂಬೂರಿ ಮತ್ತು ದಂಡವನ್ನು ಹಿಡಿದ ಸೀನಪ್ಪ ನಾಯಕ ಪುರಂದರ ವಿಠ್ಠಲನ ಧ್ಯಾನ ಮಾಡುತ್ತ ಗುರುಗಳಾದ ವ್ಯಾಸರಾಯರ ಆಶ್ರಮಕ್ಕೆ ಹೊರಡುತ್ತಾನೆ. 

******************

ಆದದ್ದೆಲ್ಲಾ ಒಳಿತೇ ಆಯಿತು (ಹಾಡು) 

********************

ಗುರುಗಳಾದ ವ್ಯಾಸರಾಯರಿಂದ ದಾಸ ಧೀಕ್ಷೆಯನ್ನು ಸ್ವೀಕರಿಸಿದ ಸೀನಪ್ಪ,  ಶ್ರೀ ಪುರಂದರ ದಾಸರೆಂದು ಮರುನಾಮಕರಣಗೊಳ್ಳುತ್ತಾರೆ. ನವಕೋಟಿ ನಾರಾಯಣರೆಂದು ಮೆರೆದೆದಿದ್ದ ಸೀನಪ್ಪ, ಪುರಂದರದಾಸರಾಗಿ ಹಿಡಿದಿದ್ದು ಮಧುಕರವೃತ್ತಿಯನ್ನು. 

******************

ಮಧುಕರವೃತ್ತಿ ನನ್ನದು (ಹಾಡು)

******************

ದಂಡಿಗೆ-ಬೆತ್ತಗಳನ್ನು ಹಿಡಿದು ಬರಿಗಾಲಲ್ಲಿ ಮನೆ ಮನೆಗಳಿಗೆ ತೆರಳುತ್ತಾ, ಹರಿನಾಮದ ಸಾರವನ್ನು ಸಾರುತ್ತಾ ಭಿಕ್ಷೆ ಸ್ವೀಕರಿಸುವುದೇ ಮಧುಕರ ವೃತ್ತಿಯಾಗಿತ್ತು ಪುರಂದರದಾಸರಿಗೆ. 

**************

ಹರಿಕಥೆ ಅಂದ ಮೇಲೆ ಒಂದು ಉಪಕಥೆ ಇರಲೇ ಬೇಕು. ಈಗ ಒಂದು ಉಪಕಥೆ. ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬ ಕುರುಡನು ಇದ್ದನು. ಅವನು ಪ್ರತಿದಿನ ರಾತ್ರಿ ಸಮಯದಲ್ಲಿ ಓಡಾಡುವಾಗ ಬೆಳಕಿನ ಲ್ಯಾಟಿನ್ ಒಂದನ್ನು ಹಿಡಿದು ಓಡಾಡುತ್ತಿದ್ದನು. ಊರಿನ ಜನರೆಲ್ಲಾ ಅವನ ಪೆದ್ದತನವನ್ನು ನೋಡಿ ನಗುತ್ತಿರುತ್ತಾರೆ. ಒಬ್ಬ ಬುದ್ಧಿವಂತ ಆ ಕುರುಡನನ್ನು ಕೇಳಿಯೇ ಬಿಡುತ್ತಾನೆ. ಅಪ್ಪಾ ಕುರುಡ, ನಿನಗೆ ಕಣ್ಣೇ ಕಾಣದು. ನೀನು ಬೆಳಕಿನ ಲ್ಯಾಟಿನ್ ಹಿಡಿದು ಏನು ಪ್ರಯೋಜನ? ಕುರುಡು ನಕ್ಕು ಉತ್ತರಿಸುತ್ತಾ, ಈ ಬೆಳಕಿನ ಲ್ಯಾಟಿನ್ ಕಣ್ಣು ಕಾಣದ ನನಗಾಗಿ ಅಲ್ಲ. ಕಣ್ಣಿದ್ದೂ ಕುರುಡರಂತೆ ವರ್ತಿಸುವ ತಮ್ಮಂತಹವರು ನನಗೆ ಡಿಕ್ಕಿ ಹೊಡೆಯದಿರಲಿ ಎಂದು ಎಂದು ಉತ್ತರಿಸುತ್ತಾನೆ. 

ಹೌದು, ನಮ್ಮಲ್ಲಿ ಹಲವರು ಕಣ್ಣಿದ್ದೂ ಕುರುಡುರು. ನಾನು, ನನ್ನದು ಎಂಬ ಅಂಧಕಾರದಲ್ಲಿ ಮುಳುಗಿರುವವರೆಲ್ಲಾ ಕಣ್ಣಿದ್ದು ಕುರುಡರೇ. ಹರಿನಾಮದ ಸ್ಮರಣೆಯನ್ನು ಮರೆತು, ಪ್ರಪಂಚದ ಲೋಭ-ಮೋಹಗಳಿಗೆ ತುತ್ತಾಗಿ, ಬರೀ ಪ್ರಾಪಂಚಿಕ ಸುಖಗಳನ್ನು ಅನುಭವಿಸುತ್ತಾ ಕಾಲಹರಣ ಮಾಡುತ್ತಿರುವರು ಕಣ್ಣಿದ್ದೂ ಕುರುಡರೇ. ಇಂತಹ ಕಣ್ಣಿರುವ ಕುರುಡರಿಗಾಗೇ ಪುರಂದರದಾಸರು ಹಾಡಿರುವುದು. 

***********************

ಕುರುಡು ನಾಯಿ ಸಂತೆಗೆ ಬಂತಂತೆ (ಹಾಡು) 

********************

ವೇದೋಪನಿಷತ್ತುಗಳು ಸಂಸ್ಕೃತದಲ್ಲಿದ್ದು ,  ಅವುಗಳನ್ನು ಅರ್ಥಮಾಡಿಕೊಳ್ಳುವುದು ಜನಸಾಮಾನ್ಯರಿಗೆ ಕಷ್ಟ. ವೇದೋಪನಿಷತ್ತುಗಳ ಸಾರವನ್ನು ಸರಳ ಕನ್ನಡದಲ್ಲಿ ಜನ ಸಾಮಾನ್ಯರಿಗೆ ಉಣಬಡಿಸಿದವರು ಪುರಂದರದಾಸರು. 

ಮಾನವ ಜನ್ಮ ದೊಡ್ಡದ್ದು..... , ಈಸಬೇಕು, ಇದ್ದು ಜೈಸಬೇಕು ....... , ಅಲ್ಲಿದೆ ನಮ್ಮ ಮನೆ, ಇಲ್ಲಿ ಬಂದೆ ಸುಮ್ಮನೆ....... , ಇವುಗಳೆಲ್ಲಾ ದಾಸರು ನಮ್ಮಗಳಿಗೆ ಉಣಬಡಿಸಿರುವ ವೇದೋಪನಿಷತ್ತುಗಳ ಸಾರವೇ. 

********************************

ಪುರಂದರದಾಸರನ್ನು ನಾವು ಕರ್ನಾಟಕ ಸಂಗೀತ ಪಿತಾಮಹ ಎಂದು ಗೌರವಿಸುತ್ತೇವೆ. ಭಕ್ತಿಯೇ ಪ್ರಧಾನವಾದ ಕರ್ನಾಟಕ ಸಂಗೀತವನ್ನು ಕಟ್ಟಿಬೆಳೆಸಿದವರು ಪುರಂದರದಾಸರು. ಕರ್ನಾಟಕ ಸಂಗೀತದ ಮೊದಲ ಪಾಠಕ್ಕೆ ದಾಸರು ಆರಿಸಿಕೊಂಡದ್ದು ಮಾಯಾಮಾಳವ ಗೌಳ ರಾಗ. ಸರಳೆ, ಜಂಟಿವರಸೆ, ಪಿಳ್ಳಾರಿ ಗೀತೆ ಮತ್ತು ಅಲಂಕಾರಗಳ ಪಾಠಗಳನ್ನು ರಚಿಸಿ ಭೋದಿಸಿದವರೇ ಪುರಂದರದಾಸರು. 

ಶ್ರೀ ಗಣನಾಥ (ಒಂದನೇ ಕಾಲ)

ವರವೀಣ  (ಎರಡನೇ ಕಾಲ)

ಕಮಲಜದಳ (ಮೂರನೇ ಕಾಲ) 

ಪುರಂದರ ದಾಸರು ರಚಿಸಿದ ಪಾಠಗಳೇ, ಇಂದಿಗೂ ಕರ್ನಾಟಕ ಸಂಗೀತದ ಮೊದಲ ಪಾಠಗಳಾಗಿ ಉಳಿದಿರುವುದು, ದಾಸರ ವೈಜ್ಞಾನಿಕ ದೂರದೃಷ್ಟಿಗೆ ಉದಾಹರಣೆ. 

************************

ಪುರಂದರ ದಾಸರು ಕರ್ನಾಟಕ ಸಂಗೀತದ ಪಿತಾಮಹರಾದರೂ, ಅವರು ಬೋಧಿಸಿದ್ದು  ಭಕ್ತಿ ಮಾರ್ಗವನ್ನು. 'ಕೇಳನೋ ಹರಿ, ತಾಳನೊ, ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ, ಕೇಳನೋ ಹರಿ ತಾಳನೊ' ಎಂಬುದು ಪುರಂದಸರ ಮೂಲ ಬೋಧನೆ. ದಾಸರ ಕೀರ್ತನೆಗಳಿಗೆಲ್ಲಾ ಕೃಷ್ಣಭಕ್ತಿಯೇ ಆಧಾರ. 

ಪಿಳ್ಳಂಗೋವಿಯ ಚೆಲ್ವ ಕೃಷ್ಣನ (ಹಾಡು) 

**********************


ಪುರಂದರ ದಾಸರ ಎಲ್ಲಾ ಕೃತಿಗಳೂ ಪುರಂದರ ವಿಠಲನಿಗೆ ಅರ್ಪಿತವಾಗಿವೆ. ಹಾಗಾದರೆ ಈ ಪುರಂದರ ವಿಠಲ ಯಾರು? ಪುರಂದರ ದಾಸರ ಜೀವನ ಮತ್ತು ಸಾಧನೆಯ ಕ್ಷೇತ್ರ ವಿಜಯ ನಗರದ ಹಂಪಿ ಎಂದು ನಮಗೆಲ್ಲಾ ಗೊತ್ತು. ಹಂಪಿಯ ಪ್ರವಾಸಕ್ಕೆ ನಾವು ತೆರಳಿದಾಗ ನಾವು ವಿಜಯ ವಿಠಲ ದೇವಸ್ಥಾನವನ್ನು ಮತ್ತು ಅದರ ಮುಂದಿನ ಕಲ್ಲಿನ ರಥವನ್ನೂ ನೋಡೇ ನೋಡುತ್ತೇವೆ. ಆ ವಿಜಯ ವಿಠಲನೇ ನಮ್ಮ ಪುರಂದರ ದಾಸರ ಪುರಂದರ ವಿಠಲ.


ಇಂದಿನ ಹಂಪಿಯ ವಿಜಯ ವಿಠಲನ ದೇವಸ್ಥಾನ ಶಿಥಿಲವಾಗಿದೆ. ವಿಜಯ ವಿಠಲನ ಮೂರ್ತಿ ಅಲ್ಲಿ ಈಗಿಲ್ಲ. ಹಂಪಿಯನ್ನು ಹಾಳು ಮಾಡಿದವರು ಯಾರು ಎಂಬುದು ತಮಗೆಲ್ಲಾ ತಿಳಿದೇ ಇದೆ. ಹಾಳು ಹಂಪಿಯ ಪ್ರವಾಸಕ್ಕೆ ಹೋದಾಗ ಕನ್ನಡಿಗರ ರಕ್ತ ಕುದಿಯುವುದು ಸಹಜ ಎಂದೇ ಹೇಳಬಹುದು. ವಿಜಯ ನಗರದ ಪತನದನಂತರ ವಿಜಯ ವಿಠಲನ ಮೂರುತಿಯನ್ನು, ಮಹಾರಾಷ್ಟ್ರದ ಪಂಢಾರಾ ಪುರಕ್ಕೆ ಕೊಂಡೊಯ್ದು ರಕ್ಷಿಸಲಾಯಿತು ಎನ್ನುತ್ತಾರೆ ಇತಿಹಾಸಕಾರರು. ಒಂದು ಸಂಶೋಧನೆಯ ಪ್ರಕಾರ,  ಹಂಪಿಯ ವಿಜಯ ವಿಠಲನೇ ಪಂಢರಾಪುರದ ಪಂಢರಿ ನಾಥನಾದ ಎಂದು ತಿಳಿದು ಬರುತ್ತದೆ. ಇದಕ್ಕೆ ಪುರಾವೆಯೋ ಎಂಬಂತೆ,  ಪಂಢರಾ ಪುರದವರು ಪಂಢರಿ ನಾಥನನ್ನು ಕನ್ನಡ ನಾಡಿನಿಂದ ಬಂದವನು, ಕಾನಡ ರಾಜಾ ಪಂಢರಿಚಾ ಎಂದು ಹಾಡಿ ಹೊಗಳುತ್ತಾರೆ.


ಕಾನಡ ರಾಜಾ ಪಂಢರಿಚಾ………(ಪಲ್ಲವಿ + ಅನು ಪಲ್ಲವಿ ಸಾಕು).


ಪುರಂದರದಾಸರು ಕೃಷ್ಣನ ಪರಮಭಕ್ತರು. ಅವರು ಒಮ್ಮೆ ನಮ್ಮ ಬೆಂಗಳೂರು ಸಮೀಪದ ಚನ್ನಪಟ್ಟಣದ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದಿದ್ದರಂತೆ. ಅಪ್ರಮೇಯ ಅನ್ನುವುದು ಶ್ರೀ ಕೃಷ್ಣನ ಮತ್ತೊಂದು ಹೆಸರು.. ನೀವೆಲ್ಲ ನೋಡಿರಬಹುದು. ಅಂಬೆಗಾಲ್ ಕೃಷ್ಣನ ಸುಂದರವಾದ ಮೂರ್ತಿ ಆ ದೇವಸ್ಥಾನದಲ್ಲಿದೆ. ಆ ಅಂಬೆಗಾಲ್ ಕೃಷ್ಣನ ಮೂರ್ತಿಯನ್ನು ನೋಡಿ ಭಕ್ತಿಪರವಶರಾದ ಪುರಂದರದಾಸರು ಆ ದೇವಸ್ತಾನದಲ್ಲೇ ಕುಳಿತು "ಜಗದೋದ್ಧಾರನ ಆಡಿಸದೆಳೆಶೋದೆ" ಎಂಬ ದೇವರನಾಮವನ್ನು ರಚಿಸಿ ಹಾಡಿದರಂತೆ. ಆ ದೇವರನಾಮದಲ್ಲಿ ದಾಸರು "ಅಪ್ರಮೇಯ" ಎಂಬ ಕೃಷ್ಣನ ಹೆಸರನ್ನು ಬಳಸಿರುವುದು ವಿಶೇಷ.  

ಜಗದೋದ್ಧಾರನ ದೇವರನಾಮದ ಮತ್ತೊಂದು ವಿಶೇಷ ಏನಪ್ಪಾ ಎಂದ್ರೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು ತಮ್ಮ ೧೯೬೬ರ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಲು ಆರಿಸಿಕೊಂಡಿದ್ದು ಇದೇ ದೇವರನಾಮವನ್ನೇ. 

ಜಗದೋದ್ಧಾರನ ದೇವರನಾಮ ಕಾಪಿ ರಾಗದ ಕೃತಿ. ಈ ದೇವರನಾಮಕ್ಕೆ ಕಾಪಿ ರಾಗದ ರಾಗಸಂಯೋಜನೆ ಮಾಡಿದವರು ಯಾರು ಗೊತ್ತೇ? ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ....... 

--------------------------------

ಅವರೇ ಬಿ.ಎಸ್. ರಾಜ್ ಅಯಂಗಾರ್.  ಕರ್ನಾಟಕದ ಸುಪ್ರಸಿದ್ದ ಹಾಡುಗಾರರು. ಅವರ ಹಳೆಯ ಗ್ರಾಮಫೋನ್ ರೆಕಾರ್ಡಿನ ಜಗದೋದ್ಧಾರನೆ ದೇವರನಾಮವನ್ನು ತಾವುಗಳು ಈಗಲೂ ಗೂಗ್ಲ್ನಲ್ಲಿ ಹುಡುಕಿ ಕೇಳಬಹುದು. 

ಈಗ ಅಂತಹ ಭಕ್ತಿಭಾವದ ದೇವರನಾಮವನ್ನು ಕೇಳೋಣ. 

ಜಗದ್ದೋಧಾರನ ಆಡಿಸಿದಳೇಶೋದೆ........ 

*******************

ಪುರಂದರ ದಾಸರು ಹದಿನಾರನೇ ಶತಮಾನದ ಹರಿದಾಸರು. ಅವರು ನೆಟ್ಟು ನೀರೆರದ ಕರ್ನಾಟಕ ಸಂಗೀತವನ್ನು ಮುಂದೆ ಬೆಳಸಿದವರು ತ್ಯಾಗರಾಜರು. ತ್ಯಾಗರಾಜರು ಹತ್ತೊಂಬತ್ತನೇ ಶತಮಾನದ ಹರಿದಾಸರು. ಈ ಎರಡು ಹರಿದಾಸರುಗಳ ನಡುವೆ ಮೂರು ಶತಮಾನಗಳ ಅಂತರ. ಪುರಂದರದಾಸರು ಕನ್ನಡದವರು, ತ್ಯಾಗರಾಜರು ತೆಲುಗಿನವರು.  ಆದರೂ ತ್ಯಾಗರಾಜರ ಮಾನಸಿಕ ಗುರುಗಳು ಪುರಂದರ ದಾಸರಾಗಿದ್ದರು. 

ತ್ಯಾಗರಾಜರ ರಚನೆಗಳಲ್ಲಿ ಪುರಂದರದಾಸರ ರಚನೆಗಳ ಪ್ರಭಾವ ಇರುವುದು ಸ್ವಾಭಾವಿಕವೇ ಎಂದು ಹೇಳಬಹುದು. ಉದಾಹರಣೆಗೆ ಪುರಂದರದಾಸರು ರಚಿಸಿದ ಈ ಕೀರ್ತನೆಯನ್ನು ನೋಡಿ. 

ಜಯ ಜಾನಕೀ ನಾಥ  (ಹಾಡು)

ನಾಟೈ ರಾಗದ ಪುರಂದರ ದಾಸರ  ಈ ಕೃತಿಯೇ, ತ್ಯಾಗರಾಜರ ನಾಟೈ ರಾಗದ ಜಗದಾನಂದಕಾರಕ ಕೃತಿಗೆ ಸ್ಪೂರ್ತಿಯಾಗಿದೆ. ಎರಡೂ ಕೃತಿಗಳ ರಾಗ, ಭಾವ, ಒಕ್ಕಣೆ ಒಂದೇ ಆಗಿರುವದನ್ನು ನಾವು ಗಮನಿಸಬೇಕು. 

ಜಗದಾನಂದಕಾರಕ (ಕೀರ್ತನೆ)  

ತ್ಯಾಗರಾಜರ ಪಂಚರತ್ನ ಕೃತಿಗಳಲ್ಲಿ ಒಂದಾದ "ಕನ ಕನ ರುಚಿರ" ಎಂಬ ವರಾಳಿ ರಾಗದ ಕೀರ್ತನೆಯಲ್ಲಿ, ತ್ಯಾಗರಾಜರು ಪುರಂದರದಾಸರ ಸ್ಮರಣೆಯನ್ನು ಮಾಡಿದ್ದಾರೆ. ರಾಮನ ಅಪಾರ ಮಹಿಮೆಗಳಿಗೆ "ನಾರದ ಪರಾಶರ ಶುಕ ಶೌನಕ ಪುರಂದರ ನಗಜಾ ಧರಜ ಮುಖ್ಯಲು ಸಾಕ್ಷಿ" ಎಂದು ಹಾಡಿದ್ದಾರೆ. 

ತ್ಯಾಗರಾಜರು ರಚಿಸಿದ ಗೇಯ ನಾಟಕವಾದ "ಪ್ರಹ್ಲಾದ ಭಕ್ತ ವಿಜಯಂ"ನಲ್ಲೂ, ತ್ಯಾಗರಾಜರು ಪುರಂದರದಾಸರಿಗೆ ಗೌರವ ನಮನಗಳನ್ನು ಸಲ್ಲಿಸಿದ್ದಾರೆ. 

**************************

ಶ್ರೀಮನ್ನಾರಾಯಣ (ಕೀರ್ತನೆ) 

ಈ ಕೀರ್ತನೆಯನ್ನು ರಚಿಸಿ ಹಾಡಿದವರು ಅಣ್ಣಮ್ಮಚಾರ್ಯರು. 

ಅಣ್ಣಮ್ಮಚಾರ್ಯರು ಆಂಧ್ರಪ್ರದೇಶದ ಹರಿದಾಸರು. ಅವರು ಪುರಂದರ ದಾಸರ ಸಮಕಾಲೀನರು. ಯುವಕರಾದ ಪುರಂದರದಾಸರು, ಹಿರಿಯರಾದ ಅಣ್ಣಮ್ಮಚಾರ್ಯರನ್ನು ತಿರುಪತಿಯ ವೆಂಕಟೇಶ್ವರರ ಸಾನ್ನಿಧ್ಯಲ್ಲಿ ಭೇಟಿಯಾಗಿದ್ದರು ಎಂದು ಇತಿಹಾಸದಲ್ಲಿ ದಾಖಲಾಗಿದೆ. 

ಅಂದೊಮ್ಮೆ ಯುವಕರಾದ ಪುರಂದರ ದಾಸರು ತಿರುಪತಿಯ ವೆಂಕಟೇಶ್ವರರ ಸನ್ನಿಧಿಯಲ್ಲಿ ಧ್ಯಾನಾಸಕ್ತರಾಗಿರುತ್ತಾರೆ. ಆಗ ಅವರಿಗೆ ಹಿರಿಯ ಸಂತರೊಬ್ಬರು ಹಾಡುತ್ತಿದ್ದ ಕೀರ್ತನೆಯೊಂದು ಕೇಳುತ್ತದೆ. 

ಪದುಮನಾಭ ಪರಮಪುರುಷ (ಬಾಲ ಗೀತೆ) 

ಹಿರಿಯ ಸಂತರೊಬ್ಬರು ತಮ್ಮ ರಚನೆಯ ಕೀರ್ತನೆಯೊಂದನ್ನು ಹಾಡುತಿದ್ದನ್ನು ಕೇಳಿ, ಪುರಂದರ ದಾಸರು ಪುಳಕಿತರಾಗುತ್ತಾರೆ.  ಒಮ್ಮಲೇ ಆ ಹಿರಿಯರ ಪದಗಳಿಗೆ ಧೀರ್ಘ ದಂಡ ನಮಸ್ಕಾರ ಮಾಡುತ್ತಾರೆ ಪುರಂದರ ದಾಸರು.  ಆ ಹಿರಿಯ ಸಂತರೇ, ಆಂಧ್ರ ಪ್ರದೇಶದ ಅಣ್ಣಮ್ಮ ಚಾರ್ಯರು ಎಂದು ಗುರುಗಳಯಾದ ವ್ಯಾಸರಾಯರು ಪರಿಚಿಸಯಿದಾಗ ಪುರಂದರ ದಾಸರು ಇನ್ನೂ ಹೆಚ್ಚು ಪುಳಕಿತರಾಗುತ್ತಾರೆ. ಯುವಕರಾದ ಪುರಂದರ ದಾಸರೇ "ಪದುಮನಾಭ, ಪರಮಪುರುಷ" ಗೀತೆಯ ರಚನಾಕಾರರೆಂದು ತಿಳಿದ ಅಣ್ಣಮ್ಮಚಾರ್ಯರು, ಪುರಂದರ ದಾಸರನ್ನು ಆಶೀರ್ವದಿಸುತ್ತಾರೆ. ಕರ್ನಾಟಕ ಸಂಗೀತಕ್ಕೆ ಭದ್ರ ಅಡಿಪಾಯ ಹಾಕಿದ ಪುರಂದರ ದಾಸರನ್ನು, ಅಣ್ಣಮ್ಮಚಾರ್ಯರು ಹಾಡಿ ಹೊಗಳುತ್ತಾರೆ. ಅಣ್ಣಮಾಚಾರ್ಯರು ಪುರಂದರ ದಾಸರಿಗೆ ವೆಂಕಟೇಶ್ವರರ ಸನ್ನಿಧಿಯಲ್ಲೇ ಕೀರ್ತನೆಯೊಂದನ್ನು ರಚಿಸಿ ಹಾಡುವಂತೆ ಪ್ರೇರಿಪಿಸುತ್ತಾರೆ. ಆಗ ದಾಸರು ರಚಿಸಿದ ಹಾಡೇ…..

ವೆಂಕಟಾಚಲ ನಿಲಯಂ  (ಹಾಡು) 

ಅಣ್ಣಮ್ಮಚಾರ್ಯರನ್ನೂ ಮತ್ತು ಅವರುಗಳ ಶಿಷ್ಯರನ್ನೂ, ಪುರಂದರ ದಾಸರು ತಮ್ಮ ಆಶ್ರಮದಲ್ಲಿ ಭೋಜನಕ್ಕೆ ಆಹ್ವಾನಿಸುತ್ತಾರೆ. ಪುರಂದರ ದಾಸರ  ಶಿಷ್ಯನಾದ ಅಪ್ಪಣ್ಣ ಅಡಿಗೆಯ ಮತ್ತು ಉಪಚಾರದ ಜವಾಬ್ದಾರಿಯನ್ನು ಹೊತ್ತಿರುತ್ತಾನೆ.  ಪುರಂದರ ದಾಸರ ವೈರಿಗಳಿಗೆ ಅಣ್ಣಮ್ಮಚಾರ್ಯರಿಗೆ ಏರ್ಪಾಡಾದ ಭೋಜನ ಕೂಟ ಇಷ್ಟವಿರುವುದಿಲ್ಲ.

 ಊಟಕ್ಕೆ ಕುಳಿತ ಅಣ್ಣಮ್ಮಚಾರ್ಯರ ತಂಡಕ್ಕೆ ಅಪ್ಪಣ್ಣ ಮತ್ತು ಪುರಂದರ ದಾಸರು ಭಕ್ಷ್ಯ ಭೋಜ್ಯಗಳನ್ನು ಬಡಿಸುತ್ತಾರೆ. ತುಪ್ಪ ಬಡಿಸುವ ಹೊತ್ತಿಗೆ ತುಪ್ಪದ ಪಾತ್ರೆ ತಳಗೆ ಬಿದ್ದುಹೋಗಿರುತ್ತದೆ. ಅಪ್ಪಣ್ಣ ಕಾಣೆಯಾಗಿರುತ್ತಾನೆ. ಗಾಬರಿಗೊಂಡ ಪುರಂದರ ದಾಸರು ಅಪ್ಪಣ್ಣನಿಗಾಗಿ ಹುಡುಕಾಡುತ್ತಿರುತ್ತಾರೆ. ಅಷ್ಟು ಹೊತ್ತಿಗೆ ಅಪ್ಪಣ್ಣ ತುಂಬಿದ ತುಪ್ಪದ ಪಾತ್ರೆಯನ್ನು ತಂದು ತುಪ್ಪವನ್ನು ಬಡಿಸುತ್ತಾನೆ. ಬಿದ್ದು ಹೋಗಿದ್ದ ತುಪ್ಪದ ಪಾತ್ರೆಯಲ್ಲಿ ತುಪ್ಪ ಹೇಗೆ ಬಂತು ಎಂಬುದು ಪುರಂದಸರಿಗೆ ಆಶ್ಚರ್ಯವನ್ನು ಉಂಟು ಮಾಡಿರುತ್ತದೆ.  ಭೋಜನ ಸಾಂಗವಾಗಿ ನಡೆಯುತ್ತದೆ. ಅಪ್ಪಣ್ಣ ಪಕ್ಕದ ಕೋಣೆಗೆ ಹೋಗಿ ಕಾಣೆಯಾಗುತ್ತಾನೆ. ಪಕ್ಕದ ಕೋಣೆಗೆ ದಾಸರು ಹೋಗಿ ನೋಡಿದಾಗ ಅಪ್ಪಣ್ಣನನ್ನು ಯಾರೋ ಕಂಬ ಒಂದಕ್ಕೆ ಕಟ್ಟಿರುತ್ತಾರೆ. ಹಾಗಾದರೆ ತುಪ್ಪ ಬಡಿಸಿ ಹೋದ ಅಪ್ಪಣ್ಣ ಯಾರು ಎಂದು ಯೋಚಿಸಿದ ದಾಸರಿಗೆ, ಸಾಕ್ಷಾತ್ ಪುರಂದರ ವಿಠ್ಠಲನೇ ಅಪ್ಪಣ್ಣನಾಗಿ ಬಂದು ತುಪ್ಪ ಬಡಿಸಿದ್ದು ಎಂಬ ಸತ್ಯ ತಿಳಿಯುತ್ತದೆ. 

********************************

ಈತನೀಗ ವಾಸುದೇವನೋ (ಹಾಡು) 

ಪುರಂದರ ದಾಸರ ಹರಿಕಥೆಯಲ್ಲಿ ಕನಕದಾಸರ ಕೀರ್ತನೆ ಏಕೆ ಬಂತು ಎಂದು ಯೋಚಿಸುತ್ತ ಇದ್ದೀರಾ? ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ, ಕನ್ನಡದ ಹರಿದಾಸರು.  ಇಬ್ಬರೂ ಸಮಕಾಲೀನರು ಕೂಡ.  ಇಬ್ಬರೂ ಗುರುಗಳಾದ ವ್ಯಾಸರಾಯರ ಶಿಷ್ಯರು. 

ಗುರು ವ್ಯಾಸರಾಯರ ಆಶ್ರಮದಲ್ಲಿ ಪುರಂದರ ದಾಸರು ಮತ್ತು ಕನಕದಾಸರು ಇಬ್ಬರೂ ಸಂಗೀತಾಭ್ಯಾಸ ಮಾಡುತ್ತಿರುತ್ತಾರೆ. ಕುರುಬ ಜನಾಂಗದ ಕನಕದಾಸರು ವ್ಯಾಸ ರಾಯರ ಆಶ್ರಮದಲ್ಲಿ ಅಧ್ಯಯನ ಮಾಡುತ್ತಿರುವುದು ವ್ಯಾಸರಾಯರ ಹಲವು ಶಿಷ್ಯರಿಗೆ ಇಷ್ಟವಿರುವುದಿಲ್ಲ. ಮಾತು ಮಾತಿಗೂ ಕನಕದಾಸರನ್ನು ಆ ದುಷ್ಟ ಶಿಷ್ಯರುಗಳು ಹಂಗಿಸುತ್ತಿರುತ್ತಾರೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪುರಂದರದಾಸರು, ವಿಷಯವನ್ನು ಗುರುಗಳಾದ ವ್ಯಾಸರಾಯರಿಗೆ ತಿಳಿಸುತ್ತಾರೆ. ಕನಕದಾಸರ ಮಹಾಜ್ಞಾನದ ಹಿರಿಮೆ ಆಶ್ರಮದ ಎಲ್ಲ ಶಿಷ್ಯರುಗಳಿಗೂ ತಿಳಿಯುವಂತೆ ಮಾಡಬೇಕೆಂದು ಪುರಂದರ ದಾಸರು, ಗುರುಗಳಾದ  ವ್ಯಾಸರಾಯರನ್ನು ಪ್ರಾರ್ಥಿಸುತ್ತಾರೆ. 

ಒಂದು ದಿನ ಆಶ್ರಮದಲ್ಲಿ ಚರ್ಚೆಯೊಂದು ಏರ್ಪಾಡಾಗಿರುತ್ತದೆ. ಚರ್ಚೆಯ ಸೂತ್ರದಾರರಾಗಿ ಗುರುಗಳಾದ ವ್ಯಾಸರಾಯರು ಆಸೀನರಾಗಿರುತ್ತಾರೆ. ಗುರುಗಳ ಪಕ್ಕವೇ ಪುರಂದರ ದಾಸರು ಕುಳಿತಿರುತ್ತಾರೆ. ಕನಕ ಮತ್ತು ಉಳಿದ ಶಿಷ್ಯಂದಿರು ತಳಗೆ ಕುಳಿತಿರುತ್ತಾರೆ. ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆ ಎಂಬ ಪ್ರಶ್ನೆಯನ್ನು ವ್ಯಾಸರಾಯರು ಸಭೆಯ ಮುಂದಿಡುತ್ತಾರೆ. ಕನಕನ ಬಗ್ಗೆ ದ್ವೇಷ ಕಾರುತ್ತಿದ್ದ ಹಲವು ಶಿಷ್ಯಂದಿರುಗಳು ತಮಗೆ ತೋಚಿದಂತೆ ಉತ್ತರಿಸುತ್ತಾರೆ. ಅವರ ಉತ್ತರಗಳನ್ನು ವ್ಯಾಸರಾಯರು ಒಪ್ಪುವುದಿಲ್ಲ. 

ಆಶ್ರಮವಾಸಿಗಳಲ್ಲಿ ಸ್ವರ್ಗಕ್ಕೆ ಯಾರು ಹೋಗುತ್ತಾರೆಂಬ ಪ್ರಶ್ನೆಗೆ ಉತ್ತರಿಸುವ ಅವಕಾಶ ಕಡೆಯದಾಗಿ ಕನಕದಾಸರಿಗೆ ಬರುತ್ತದೆ. ಗುರುಗಳು ತಮ್ಮ ಶಿಷ್ಯೋತ್ತಮರುಗಳನ್ನು ಒಬ್ಬರಾಗಿ ತೋರಿಸುತ್ತ, ಇವರು ಸ್ವರ್ಗಕ್ಕೆ ಹೋಗುವರೇ? ಎಂದು ಕನಕನನ್ನು ಕೇಳುತ್ತಾರೆ. ಅವರ್ಯಾರು ಸ್ವರ್ಗಕ್ಕೆ ಹೋಗಲಾರರು ಎಂದು ಕನಕ ಉತ್ತರಿಸಿದಾಗ, ಸಮಸ್ತ ಶಿಷ್ಯರುಗಳು ಕನಕನ ಮೇಲೆ ಕೋಪಗೊಳ್ಳುತ್ತಾರೆ. 

ಗುರುಗಳ ಪಕ್ಕದಲ್ಲೇ ಕುಳಿತಿದ್ದ ದಾಸಶ್ರೇಷ್ಠರಾದ ಪುರಂದರ ದಾಸರು ಸ್ವರ್ಗಕ್ಕೆ ಹೋಗುವರೇ ಎಂದು ವ್ಯಾಸರಾಯರು ಕನಕನನ್ನು ಪ್ರಶ್ನಿಸಿದಾಗ, ಇಲ್ಲವೆಂದು ಕನಕ ತಲೆಯಾಡಿಸುತ್ತಾನೆ. ಶಿಷ್ಯರುಗಳು ಕೋಪದಿಂದ ಕನಕನನ್ನು ಅಧಿಕಪ್ರಸಂಗಿ ಎಂದು ನಿಂದಿಸುತ್ತಾರೆ. ವ್ಯಾಸರಾಯರು ಮುಂದುವರೆದು, ನಾನು ಸ್ವರ್ಗಕ್ಕೆ ಹೋಗುವೆನೇ ಎಂದು ಪ್ರಶ್ನಿಸಿದಾಗ, ಕನಕ ದಾಸರು ಇಲ್ಲವೆಂದು ತಲೆಯಾಡಿಸುತ್ತಾರೆ. ಶಿಷ್ಯರುಗಳ ಕೋಪ ಮುಗಿಲುಮುಟ್ಟಿರುತ್ತದೆ. 

ಕಡೆಯದಾಗಿ ವ್ಯಾಸರಾಯರು, ಕನಕ...... ನೀನು ಸ್ವರ್ಗಕ್ಕೆ ಹೋಗುವೆಯ ಎಂದು ಕೇಳಿದಾಗ ಕನಕ ಉತ್ತರಿಸುತ್ತಾ, "ನಾನು ಹೋದರೆ ಹೋಗಬಹುದು" ಎಂದು ಉತ್ತರಿಸುತ್ತಾರೆ. ಶಿಷ್ಯರುಗಳ ಕೋಪ ನೆತ್ತಿಗೇರಿರುತ್ತದೆ. ಒಮ್ಮಲೇ ಕನಕನ ಮೇಲೆರಗಿದ ಶಿಷ್ಯರುಗಳು, ಕನಕನನ್ನು ಗುರುಗಳ ಕ್ಷಮೆ ಕೋರುವಂತೆ ಆಗ್ರಹಿಸುತ್ತಾರೆ. ಶಿಷ್ಯರುಗಳನ್ನು ಸುಮ್ಮನಾಗಿಸಿದ ಗುರು ವ್ಯಾಸರಾಯರು, ಕನಕನ ಉತ್ತರದ ಅರ್ಥವೇನೆಂದು ಕನಕನನ್ನು ಕೇಳುತ್ತಾರೆ. ಕನಕ ವಿನಮ್ರತೆಯಿಂದ ಉತ್ತರಿಸುತ್ತಾ, "ನಾನು" ಎಂದರೆ 'ನಾನು ಎಂಬ ಅಹಂಕಾರ,'  ನಾನು ಎಂಬ ಅಹಂಕಾರ ನನ್ನಿಂದ  ಹೋದರೆ, ನಾನೂ  ಸ್ವರ್ಗಕ್ಕೆ ಹೋಗಬಹುದು ಎಂದು ವಿವರಿಸಿದಾಗ ಇಡೀ ಸಭೆಯಲ್ಲಿ ಮೌನ ಆವರಿಸಿರುತ್ತದೆ. ಕನಕ ದಾಸರ ಮಹಾಜ್ಞಾನದ ಪರಿಚಯ ಎಲ್ಲಾ ಆಶ್ರಮವಾಸಿಗಳಿಗೂ ಆಗ ತಿಳಿಯುತ್ತದೆ. 

****************

ಇಲ್ಲಿಗೆ ನಮ್ಮ ಶ್ರೀ ಪುರಂದರದಾಸರ ಹರಿಕಥೆ ಮುಗಿದಿದೆ. ಹರಿಕಥೆಗೆ ಮಂಗಳವೊಂದನ್ನು ಹಾಡೋಣ.

ತಂಬೂರಿ ಮೀಟಿದವ (ಹಾಡು) 

ಶ್ರೀ ರಾಮಚಂದ್ರ ಮುಕ್ತಾಯ  (ಶ್ಲೋಕ) 

-೦-೦-೦-೦-೦-೦-೦-೦-