Sunday 16 December 2018

ಬ್ರಾಹ್ಮಣರು

ಬ್ರಾಹ್ಮಣ ಸಮುದಾಯದ ಮುಂದಿರುವ ಸವಾಲುಗಳು  

೧) ಎಲ್ಲರೂ ವೋಟ್ ಮಾಡಬೇಕು. ಮತದಾನದ ದಿನ ಪಿಕ್ನಿಕ್ ಹೋಗುವರಲ್ಲಿ ನಮ್ಮವರೇ ಜಾಸ್ತ್ತಿ .

 ಮೊನ್ನೆ ಜಯನಗರದ ಉಪಚುನಾವಣೆಯಲ್ಲಿ  ಏನಾಯಿತು ? ಬ್ರಾಹ್ಮಣ  ಶಾಸಕ (ಎರಡು ಬಾರಿ ) ವಿಜಯಕುಮಾರರು ನಿಧನರಾದ ಬಳಿಕ ಅವರ ತಮ್ಮನಿಗೆ ಬಿಜೆಪಿ ಟಿಕೆಟ್ ನೀಡಲಾಯ್ತು. ಅವರು ೩೦೦೦ಮತಗಳ ಅಂತರದಲ್ಲಿ ಸೋತರು .  ಪ್ರಜ್ಞಾವಂತ ಯುವ ಬ್ರಾಹ್ಮಣ ಮತದಾರರೆಲ್ಲಾ ಅಂದು ವೋಟ್ ಮಾಡದೆ ಕೆಲಸಕ್ಕೆ ತೆರಳಿದ್ದರು ಎಂದು ಮಾಹಿತಿ. ಅಂತಹ ವರ ಸಂಖ್ಯೆ ಸುಮಾರು ೧೦,೦೦೦ ಎಂದು ಅಂದಾಜಿಸಲಾಗಿದೆ .

ಎಲ್ಲರೂ ಈಗಲೇ ೨೦೧೯ರ ಚುನಾವಣೆಗೆ  ತಮ್ಮ ವೋಟನ್ನು ಇಂದೇ ನೊಂದಾಯಿಸಿಕೊಳ್ಳಿ . ನೊಂದಾಯಿಸಿದ್ದರೂ ಅದು ಚಾಲ್ತಿಯಲ್ಲಿದೆಯಾ ಇಂದೇ ಎಂದು ಖಾತರಿಪಡಿಸಿದೊಳ್ಳಿ.  ತಪ್ಪದೆ ಮತದಾನ ಮಾಡಿ .

ನಿಮ್ಮ ಮತವನ್ನು ನಿಮ್ಮ ಸಹಾಯಕ್ಕೆ ಬರುವಂಥವರಿಗೆ ನೀಡಿ .  NOTA ಬೇಡ.  NOTA ಆಯ್ಕೆಯು ಅಧಿಕಪ್ರಸಂಗ ನಮಗೆ ತಿರುಗುಬಾಣವಾದೀತು.  NOTAದ ಪ್ರಯೋಗ ಮಾಡುವರಲ್ಲಿ ನಮ್ಮರೆ ಹೆಚ್ಚು.    ಮೊನ್ನೆ ರಾಜಸ್ಥಾನ , ಮಧ್ಯಪ್ರದೇಶಗಳಲ್ಲಿ ಏನಾಯ್ತು, ಜ್ಞಾಪಿಸಿಕೊಳ್ಳಿ.

೨) ೨-೩ ಪರ್ಸೆಂಟ್ ಮಾತ್ರ ಬ್ರಾಹ್ಮಣರಿರಬಹದು. ಅವರುಗಳು ಮತದಾನ ಮಾಡುವಾಗ ಒಂದು ವೋಟ್ ಬ್ಯಾಂಕ್ ಆಗಬೇಕು .  ನಮ್ಮ ಬ್ರಾಹ್ಮಣ ಸಂಘಗಳು ಒಟ್ಟಾಗಿ ಕೆಲಸ ಮಾಡಬೇಕು.  ಬ್ರಾಹ್ಮಣರ ವಿರುದ್ಧ ಹೀನಾಯ ಹೇಳಿಕೆಗಳನ್ನು ಕೊಡುವ ಅಥವ ಕೆಲಸಮಾಡುವ ಯಾವುದೇ ಪಕ್ಷ ಅಥವ ಅಭ್ಯರ್ಥಿಗೆ ಮತನೀಡಬಾರದು.  ಕೂದಲೆಳೆಯ ಅಂತರದಲ್ಲಿ ಅಭ್ಯರ್ಥಿಗಳ ಗೆಲುವು-ಸೋಲು ನಿರ್ಧಾರವಾಗುತ್ತಿರುವಾಗ, ಒಂದು ಪರ್ಸೆಂಟ್ ವೋಟ್ಗೂ ಬೆಲೆ ಇರುತ್ತದೆ .  ನಮ್ಮವರ ಮತಗಳು ಹರಿದು ಹಂಚಿಹೋಗಬಾರದು.

೩) ನಮ್ಮವರ ಸಂಖ್ಯೆ ಕ್ಷೀಣಿಸುತ್ತಿದೆ. ಪಾರ್ಸಿಗಳಂತೆ  ಬ್ರಾಹ್ಮಣರು ಇಲ್ಲದಂತಾಗಬಹುದು . ಯಾರು ಹೊಣೆ? ನಮ್ಮ ಯುವ ದಂಪತಿಗಳಿಗೆ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಪಡೆಯಲು ಇಷ್ಟವಿಲ್ಲ .  ನಮ್ಮಗಳಿಗೇನು ಹಣಕಾಸಿನ ಕೊರತೆ ಇಲ್ಲ. ನಮ್ಮವರ ಸಂಖ್ಯೆ ಕ್ಷೀಣಿಸದೆ ಮತ್ತೇನಾಗುವುದು ? ಈ ಮನ್ಹಸ್ಥಿಥಿ ಬದಲಾಗಬೇಕು.  ನಮ್ಮವರ ಸಂಖ್ಯೆ ವೃದ್ಧಿಸಬೇಕು.


೪) ನಮ್ಮವರೇ ನಮ್ಮ ಶತ್ರುಗಳು .  ಟಿ ಮ್ ಕೃಷ್ಣ, ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಇತ್ಯಾದಿ.
ಬ್ರಾಹ್ಮಣ್ಯವನ್ನು  ವಿನಾಕಾರಣ  ಹೀಯಾಳಿಸುವುದನ್ನು ಖಂಡಿಸಿ.  ಅಂಥವರನ್ನು ದೂರವಿಡಿ


೫) ಬಡ ಬ್ರಾಹ್ಮಣರ  ಕೈ ಹಿಡಿಯಿರಿ.  ಮಾರ್ವಾಡಿಗಳಿಂದ ಕಲಿಯಿರಿ.  ವಿಧ್ಯಾಭ್ಯಾಸಕ್ಕೆ, ವ್ಯಾಪಾರಕ್ಕೆ ಮುಂದೆಬರುವರಿಗೆ ಎಲ್ಲಾ ರೀತಿಯ ಪ್ರೋತ್ಸಾಹ ಮತ್ತು ಸಹಾಯ ಮಾಡಿ .

೬) ಎಲ್ಲಾ ಬ್ರಾಹ್ಮಣ ಪಂಗಡಗಳು ಒಂದಾಗಿ .  ನಮ್ಮ-ನಮ್ಮಲ್ಲೇ ಕಿತ್ತಾಟ ಬೇಡ. ಬ್ರಾಹ್ಮಣ ಸಂಘಗಳನ್ನು ಬಲಪಡಿಸಿ.

೭) ಬ್ರಾಹ್ಮಣರ ಕೊಡಿಗೆಗಳಿಗೆ ಪ್ರಚಾರ ದೊರಕಲಿ . ಅಂಬೇಡ್ಕರರನ್ನು ಬೆಳಸಿ ಪೋಷಿಸಿದ್ದು ಬ್ರಾಹ್ಮಣ ಮೇಸ್ಟ್ರು. ಬ್ರಾಹ್ಮಣ ಮಹಿಳೆಯೊಬ್ಬಳು ಅವರನ್ನು ಮದುವೆಯಾಗಿ (ಎರಡನೇ ಮದುವೆ,  ಆಕೆ ಡಾಕ್ಟರ್ ಕೂಡ  ) ಕಡೆತನಕ ನೋಡಿಕೊಂಡಳು. ಅಂಬೇಡ್ಕರ್ ಸಂವಿಧಾನ ಬರೆಯುವುದಕ್ಕೆ ನೆರವು ನೀಡಿದವರು ಬ್ರಾಹ್ಮಣ ಸಂವಿಧಾನ ತಜ್ಞರೇ. (Alladi Krishnaswami Ayyar, N. Gopalaswami Ayengar).  ಇವರೆಲ್ಲಾ ರಚನ ಸಮಿತಿಯಲ್ಲಿದ್ದರು. 

ಯೇಸುದಾಸ್  ಸಂಗೀತ ಗುರುಗಳು ಚೆಮ್ಬೈ ವೈದ್ಯನಾಥ ಭಾಗವತರ್.

ಪಿಟೀಲು ವಿದ್ವಾನ್ ಚೌಡಯ್ಯನವರ ಗುರುಗಳು ಬ್ರಾಹ್ಮಣರಾದ ಬಿಡಾರಂ ಕೃಷ್ಣಪ್ಪನವರು .

ರಾಮಾಯಣ ಬರೆದದ್ದು ವಾಲ್ಮೀಕಿಗಳು (ಪ . ವರ್ಗ -ಬೇಡರು ).  ಮಹಾಭಾರತ ಬರೆದವರು ವ್ಯಾಸರು (ಮೀನುಗಾರ್ತಿಯ ಮಗ). ಕಾಳಿದಾಸರು ಕುರಬರು. ಕೃಷ್ಣ ಯಾದವ ಕುಲದವನು .  ಅವರೆಲ್ಲ ಬ್ರಾಹ್ಮಣರಿಗೆ ಪರಮಪೂಜ್ಯರು.

ದೂರದರ್ಶಿ ಸಮಾಜ ಸುಧಾರಣೆಗಳನ್ನು ಮಾಡಿ, ಹಿಂದುಳಿದವರಿಗೆ ಅವಕಾಶ ಮಾಡಿಕೊಟ್ಟವರು  ರಾಜಾರಾಮ್ ಮೋಹನ್ ರೈರಂಥ ಬ್ರಾಹ್ಮಣ ನಾಯಕರು .

ಕೇಂದ್ರದ ಬ್ರಾಹ್ಮಣ ಮಂತ್ರಿಗಳು
ನಿರ್ಮಲ ಸೀತಾರಾಮನ್  ಡಿಫೆನ್ಸ್
ಸುಷ್ಮಾ ಸ್ವರಾಜ್ - ಫಾರಿನ್ ಅಫ್ಫೇರ್ಸ್
ನಿತಿನ್ ಗಡ್ಕರಿ - ಸರ್ಫೇಸ್ ಟ್ರಾನ್ಸ್ಪೋರ್ಟ್
 ಜೈಟ್ಲೇಯ್ - ಫೈನಾನ್ಸ್
ಸುರೇಶ ಪ್ರಭು -
ಸುಮಿತ್ರಾ ಮಹಾಜನ್ (ಸ್ಪೀಕರ್ ಲೋಕಸಭಾ)

ಪ್ರಕಾಶ್ ಜಾವಡೇಕರ್

ಅನಂತ ಕುಮಾರ್ - (ದಿವಂಗತರು)
ಅಶ್ವಿನಿ ಚೌಬೆಯ್

ದೇವೇಂದ್ರ ಫಡ್ನವಿಸ್ (ಮಹಾರಾಷ್ಟ್ರ ಸಿಎಂ )
ಮನೋಹರ್ ಪರ್ರಿಕರ್
ಮಮತಾ  ಬಾನೆರ್ಜಿ
ಜಯಲಲಿತಾ
ಗುಂಡೂರಾವ್
ರಾಮಕೃಷ್ಣ ಹೆಗ್ಡೆ


೮) ಬ್ರಾಹ್ಮಣರ ಮುಖ್ಯ ಸೊತ್ತುಗಳು ಎಂದರೆ  ಉತ್ತಮ್ಮ ವಿದ್ಯಾಬ್ಯಾಸ, ಕಾರ್ಯಕ್ಷಮತೆ, ಅವಿರತ ದುಡಿಮೆ, ಪ್ರಾಮಾಣಿಕತೆ.  ಇವುಗಳನ್ನು ಮುಂದುವರೆಸಿಕೊಂಡು ಮುನ್ನೆಡಯಬೇಕು.

ಉದ್ಯಮ ಶೀಲತೆಯನ್ನೂ ಬೆಳಸಿಕೊಳ್ಳಬೇಕು . ಈಚಿನ ದಿನಗಳಲ್ಲಿ ಬ್ರಾಹ್ಮಣರು ಬೇರೆ ಬೇರೆ ಉದ್ದಿಮೆಗಳಲ್ಲಿ ಯಶಸ್ಸು ಕಾಣುತ್ತಿರುವುದು ಸಂತೋಷದ ವಿಷಯ.

 ಸ್ವದೇಶೇ ಪೂಜ್ಯತೆ ರಾಜ, ವಿದ್ವಾನ್ ಸರ್ವತ್ರ ಪೂಜ್ಯತೆ ಎಂಬ ಮಾತು ನೆನಪಿರಲಿ .  ವಿದ್ಯೆ ಇದ್ದರೆ ಎಲ್ಲಾದರೂ ಬದುಕಬಹುದು. ಜೊತೆಗೆ  ವಿವಿಧ  ಕೌಶಲ್ಯ (ಸ್ಕಿಲ್ ) ಗಳನ್ನೂ ಮೈಗೂಡಿಸಕೊಳ್ಳಬೇಕು.

೯) ಅನಿವಾಸಿ ಬ್ರಾಹ್ಮಣರು ಭಾರತದಲ್ಲಿ ಆಸ್ತಿಗಳನ್ನು ಮಾಡಿಡಬೇಕು .  ಉಳಿತಾಯವನ್ನು ಭಾರತದಲ್ಲೇ ಇಡಬೇಕು. ಬೇರೇ ದೇಶಗಳಲ್ಲಿ ಅತಂತ್ರ ಸ್ಥಿತಿ ಉಂಟಾದಾಗ ನಮ್ಮ ದೇಶವೇ ನಮಗೆ ಗತಿ.

೧೦) ತಂದೆ ತಾಯಿಗಳು ಮತ್ತು ಗುರುಹಿರಿಯರ ಬಗ್ಗೆ ಕಾಳಜಿ ಇರಲಿ. ನಮ್ಮ ಬೇರುಗಳನ್ನು ಮರೆಯುವುದು ಬೇಡ .

೧೧) ಬೇರೆ ಜಾತಿ-ಧರ್ಮಗಳೊಂದಿಗೆ ಘರ್ಷಣೆ ಬೇಡ. ನಮ್ಮ ಇತಿ-ಮಿತಿಗಳ ಅರಿವಿರಲಿ.   ಹೊಂದಿಕೊಂಡು ನಡೆಯಿರಿ.  ಬೇರೆಯವರಿಂದಲೂ ಸಹಾಯಗಳಿಸುತ್ತ ಮುಂದುವರಿಯಿರಿ .

೧೨) ಪೌರೋಹಿತ್ಯ, ಅಡುಗೆ ಕೆಲಸ, ಭವಿಷ್ಯ ಹೇಳುವುದು, ಸಂಗೀತ ಪಾಠ, ಸಾಹಿತ್ಯ-ಕಲೆ ಸೃಷ್ಟಿ, ಉಪಾಧ್ಯಾಯ ವೃತ್ತಿ ಮುಂತಾದವುಗಳು ಬ್ರಾಹ್ಮಣರಿಗೆ ವಂಶಪಾರಂಪರ್ಯವಾಗಿ ಬಂದಿವೆ.  ಅವುಗಳನ್ನು ನಾವುಗಳು ಹೆಚ್ಚು ರೂಡಿಸಿಕೊಂಡು ಸಂಪಾದಿಸಬೇಕು.

೧೩) ಸರ್ಕಾರಿ ಕಾರ್ಯಕ್ರಮಗಳ ಪ್ರಯೋಜನ ಪಡೆಯುವಲ್ಲಿ ನಮ್ಮ ಜನ ಹಿಂದು.

ಕ) ಸ್ವಯಂ ಉದ್ಯೋಗ ಶುರುಮಾಡಲು ರೂ. ೧೦ ಲಕ್ಷಗಳ ವರೆಗಿನ ಬ್ಯಾಂಕ್ ಸಾಲ, ಆಧಾರ ರಹಿತವಾಗಿ ಮತ್ತು ಯಾವುದೇ ಜಾಮೀನಿನ ಅವಶ್ಯಕತೆಯಿಲ್ಲದೆ ಮುದ್ರಾ ಯೋಜನೆಯಡಿ ದೊರೆತ್ತದೆ . 
ಖ) ದೊಡ್ಡ ಪ್ರಮಾಣದಲ್ಲಿ ಸ್ವಯಂ ಉದ್ಯೋಗ ಸ್ಥಾಪಿಸಲು ರೂ. ೧ ಕೋಟಿವರೆಗಿನ ಸಾಲ (೫೯ ನಿಮಿಷಗಳೊಳಗಿನ ಮಂಜೂರಿ)  ಆಧಾರ ರಹಿತವಾಗಿ ಮತ್ತು ಯಾವುದೇ ಜಾಮೀನಿನ ಅವಶ್ಯಕತೆ ಇಲ್ಲದೆ ಕೇಂದ್ರ ಸರ್ಕಾರದ ಯೋಜನೆಯಡಿ ಬ್ಯಾಂಕ್ಗಳಿಂದ ದೊರೆಯುತ್ತದೆ. 
ಗ) ಆಯ್ಶ್ಮಾನ್ ಭಾರತಡಿ ರೂ. ೫ ಲಕ್ಷದವರೆಗಿನ ಚಿಕಿತ್ಸಾ ವೆಚ್ಚ ಎಲ್ಲಾ ಬಡವರಿಗೆ ಉಚಿತವಾಗಿ ದೊರೆಯುತ್ತದೆ. 

ಈ ರೀತಿಯ ಇನ್ನೂ ಹತ್ತು-ಹಲವಾರು ಯೋಜನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳವತಿಯಿಂದ ಲಭ್ಯವಿದೆ.  ಇವುಗಳು ಪ್ರಯೋಜನ ಪಡೆಯಲು ನಮ್ಮವರು ಮುಂದೆಬರಬೇಕು.

೧೪) ವಿತಂಡವಾದಿಗಳು ನಮ್ಮಲ್ಲೇ ಹೆಚ್ಚು. ಅವರುಗಳು ನಮ್ಮವರನ್ನೇ ಮತ್ತು ನಮ್ಮ ಪರಂಪರೆಯನ್ನೇ ಜರೆಯುತ್ತಾರೆ. ಅವರುಗಳು ವೋಟ್ ಮಾಡುವುದಿಲ್ಲ, ಮಾಡಿದರೆ  ನಮ್ಮ ವಿರೋಧಿಗಳಿಗೆ ವೋಟ್ ಮಾಡುತ್ತಾರೆ ಅಥವಾ 'ನೋಟಾ' ಅಂತ ವೋಟ್ ಮಾಡುತ್ತಾರೆ!

೧೪) ಹೆಮ್ಮೆಯಿಂದ  ಹೇಳಿ, ನಾನೊಬ್ಬ ಬ್ರಾಹ್ಮಣ. 










Saturday 8 December 2018

Is buying car a waste?

Is buying car a waste?  Yes.....says Mr. R.C.Bhargava, the Chairman of Maruti Suzuki!
'People should start thinking why they need to buy a car.  One buys a car costing Rs.10 lakh.  And 80-90% of the time it is lying idle.  What a waste of capital' he asks.

Moreover where do they drive their cars? Traffic in Indian cities like Bengaluru has become a horrendous experience.  Hardly one can cover about 8 kms. in an hour during peak time!  No wonder an average man spends more than 3 hours every day for commuting.  Less said the better about the public transport system. 

With ever-depleting road space, often it is irritating to see most of the big cars being driven by single occupants. Traffic experts say that this is the root cause for all problems.  Is there a way out?

Mr. Bhargava has urged Government to offer incentives to promote shared mobility over individual mobility saying that everyone including automakers would benefit from such an approach!
Shared mobility improves utilization of vehicles as well as reducing congestion, parking problems and cost of transportation. He has further added that carpooling leads to better use of cars reducing the replacement cycle, thereby ensuring sustained demand for new cars!  Is this not what we term as 'lateral thinking'?
Delhi's odd-even experiment is worth reviving and replicating in other cities too. With the support of carpooling methods 'odd-even' will become more smoother and acceptable.  Incentives like reduction in taxes, Insurance charges, petrol cost for those who are compliant are welcome.
Thanks to many of our enthusiastic young techies who have developed carpooling apps.  Many corporates too are lending them the needed support.  Such apps mobilize verified users who commute between same routes at same time promoting easy 
sharing.  This has further reduced travelling cost to Rs.3 per km which is even cheaper than public transport, yet offering the convenience of a car. Many apps are integrated with Google Maps and even with Paytm to ensure convenient payments.
Now-a-days apps like 'Bounce' are making rounds which enable one to rent a Scooter/Bike. One can find a large pool of two-wheelers parked near most metro stations available on rent as cheap as Rs.3 per km.  This ensures last minute connectivity to metro travelers.  One can rent a two wheeler, reach home, keep it overnight and bring it back while riding to metro-station next day and still pay only on the basis of kms used. One can even leave it at a main road parking lot and go away!
TrinTrin is the public cycle sharing system of Mysuru, the world famous heritage city.  It is aimed at youngsters, to avoid usage of fuel driven vehicles. This eco-friendly transport is the hope for our smaller cities.
Metro connectivity is slowly making inroads into many big Indian cities. But the coverage seems to be too little and too late.  In most of the cities second and third phases are being planned and the progress of work is at a snail's pace. However people are mesmerized by the ease and speed of travel.  But the system needs supporting net-work for ensuring last mile connectivity.
Local Bus transport systems are often much criticized. BMTC, the local bus transport system of Bengaluru is doing a great service by carrying more than 50 lakh commuters everyday. BMTC is developed over several decades and it has not costed much to the Government. Compare this to Bengaluru Metro which has costed more than Rs.15,000 crores and carries only about 4 lakh passengers per day!
Cities like Bengaluru badly need a robust Suburban Railway system. They provide the link to smaller towns around to the heart of the city.  Compared to Metro, the investment required is less and the carrying capacity is huge.  Again Suburban Train systems are being delayed for various reasons like the tug-of-war between Centre and the States!

Almost all Indian big cities are witnessing fast growth.  Efficient public transport is the only solution.  Steps like car and bike pooling can provide the support by ensuring last mile connectivity. Ending the Government monopoly over public transport system may also hold the key for a better solution. But the biggest twin obstacles are the lack of determined will with our rulers and the rigid mind-set of our people.   Let us resolve to change for the better.

Thanks for reading.  Please send your valuable feedback.

-0-0-0-0-0-0-0-0-

Special Thanks:
To the sources of all pictures
used here.



Tuesday 6 November 2018

ಮಂಕುತಿಮ್ಮನಿಗೀಗ ೭೫


ಕನ್ನಡದ ಭಗವದ್ಗೀತೆ ಎಂದೇ  ಪ್ರಸಿದ್ಧಿ  ಹೊಂದಿರುವ ಡಿ.ವಿ.ಜಿ.ಯವರ 'ಮಂಕುತಿಮ್ಮನ ಕಗ್ಗ'ಕ್ಕೀಗ (ಬಿಡುಗಡೆ-೧೯೪೩) ೭೫ರ ಸಂಭ್ರಮ. ಸಮಸ್ತ ಕನ್ನಡಿಗರ ಮನೆ-ಮಾನಸದಲ್ಲಿ ನೆಲೆಸಿರುವ ಈ ಕೃತಿ ನಮ್ಮೆಲ್ಲರ ಪಾಲಿಗೆ ಬದುಕಿನ ದಾರಿದೀಪ. 

೧೯೬೬-೬೭ರ ಸಮಯ.  ನಾನಾಗ ೭ನೇ ತರಗತಿಯಲ್ಲಿ ಓದುತ್ತಿದೆ. ನಮ್ಮ ನೆಚ್ಚಿನ ಗುರುಗಳಾದ ನಾರಾಯಣಾಚಾರ್ಯರು ಮಂಕುತಿಮ್ಮನ ಕಗ್ಗದ ಕೆಲವು ಪದ್ಯಗಳ ಪಾಠ ಮಾಡುತಿದ್ದರು. ಮೊದಲ ಪದ್ಯಕ್ಕೆ ವಿವರಿಸುತ್ತಾ, 'ನಮ್ಮ ಶಾಲೆಯೇ ಈ 
(ಹೊಸ ಚಿಗುರು ಮತ್ತು ಹಳೆ ಬೇರು ಸೇರಿದ್ದರೆ ಮರದ ಚೆಲುವು .  ಅಂತೆಯೇ ಹೊಸ ಸಂಶೋಧನೆಗಳ ಜೊತೆ, ಋಷಿ-ಮುನಿಗಳ ಮಾರ್ಗದರ್ಶನವೂ ಸೇರಿಕೊಂಡರೆ, ಮಾನವಕುಲ ಯಶಸ್ಸನ್ನು ಕಾಣುವುದು). 

ಪದ್ಯಕ್ಕೆ ಉದಾಹರಣೆ.  ಮಕ್ಕಳಾದ ನೀವೆಲ್ಲಾ ಹೊಸ ಚಿಗುರುಗಳು. ಉಪಾಧ್ಯಾಯರುಗಳಾದ ನಾವೆಲ್ಲಾ ಹಳೆ ಬೇರುಗಳು. ನಾವು ಭೋಧಿಸುವ  ಸಮಾಜ ಶಾಸ್ತ್ರವೇ ಹಳೆ ತತ್ವ.  ಜೊತೆಗೆ ವಿಜ್ಞಾನವನ್ನೂ ಕಲಿಯುವ ನಿಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ' ಎಂದರು.  ಅಂದು ಸ್ವಲ್ಪ-ಸ್ವಲ್ಪ ಮಾತ್ರ ಅರ್ಥವಾಗಿತ್ತು. ದಶಕಗಳು ಕಳೆದು, ಹೊಸ ಶತಮಾನವೇ ಉದಯಿಸದರೂ ಈ ಪದ್ಯದ ಸಂದೇಶವನ್ನು ನಮ್ಮ ಜನತೆಯಿನ್ನೂ ಅರ್ಥಮಾಡಿಕೊಳ್ಳದಿರುವುದು ಮಾತ್ರ ವಿಪರ್ಯಾಸವೇ ಸರಿ!

ವರ್ಷಗಳುರುಳಿ ನಾನು ೧೦ನೇ ತರಗತಿಗೆ ಬಂದಿದ್ದೆ. ಕನ್ನಡದ ಮೇಷ್ಟ್ರಾದ   ಸುಬ್ಬಣ್ಣನವರು 
(ಪುಸ್ತಕದಿಂದ ಪಡೆದ ಜ್ಞಾನ ಡಿಗ್ರಿ ಪಡೆಯಲು ಮಾತ್ರ.  ಅನುಭವದಿಂದ ಮೂಡಿದ ಜ್ಞಾನವೇ ಜೀವನಕ್ಕೆ ದಾರಿದೀಪವಾಗಬಲ್ಲದು)

ಪಾಠ ಮಾಡುತ್ತಾ 'ಲೋ ದಡ್ಡ ಶಿಖಾಮಣಿಗಳ, ಬರೀ ಪುಸ್ತಕದ ಬದನೆಕಾಯ್  ಓದೋದ್ರಿಂದ  ಏನೂ ಬರೋಲ್ಲ ಕಣ್ರೊ.  ಬೆಳಿತಾ-ಬೆಳಿತಾ ನಿಮಗಾಗೊ  ಅನುಭವಗಳೇ ನಿಮಗೆ ಪಾಠ ಕಲ್ಸುತ್ತೆ  ಕಣ್ರೊ' ಅಂದಿದ್ರು. 

೧೯೭೦ರ ಸಮಯ.  ನಾನೂ ಕಾಲೇಜು ಮೆಟ್ಟಿಲು ಹತ್ತಿದೆ.  ಜಿ.ಪಿ. ರಾಜರತ್ನಂರವರು ನಮ್ಮ ಕಾಲೇಜಿಗೆ ಬಂದು ಭಾಷಣ ಮಾಡಿದ್ದರು . ಅಂದಿನ ವಿಷಯ  'ದೇವರಿದ್ದಾನೆಯೇ'? ಎಂಬುದು.  ಅನುಭವಿಗಳಾದ ಅವರು ಪ್ರಸ್ತಾಪಿಸಿದ್ದೂ  ಗುಂಡಪ್ಪನವರನ್ನೆ. 


ಇಹುದೋ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ 
ಮಹಿಮೆಯಿಂ ಜಗವಾಗಿ ಜೀವವೇಷದಲಿ 
ವಿಹರಿಪುದದೊಳ್ಳಿತೆಂಬುದು ನಿಸಾದವಾದೊಡಾ 
ಗಹನ ತತ್ತ್ವಕೆ ಶರಣೊ - ಮಂಕುತಿಮ್ಮ 
(ದೇವರು ಇದ್ದನೊ, ಇಲ್ಲವೊ ಎಂಬ ಜಿಜ್ಞಾಸೆ ಮಾನವನಲ್ಲಿದೆ.  ನಮ್ಮ ಸುತ್ತ ಕಾಣುವ ಜೀವರಾಶಿಗಳೆ ದೇವರ ಅಸ್ತಿತ್ವವನ್ನು ಸಾರುತ್ತವೆ).  

ನಮ್ಮ ಸುತ್ತ ಕಾಣುವ ಜೀವರಾಶಿಗಳೇ ದೇವರ ಅಸ್ತಿತ್ವಕ್ಕೆ ಪ್ರಮಾಣ ಎಂದು ಹೇಳಿದ್ದರು. ವಿಜ್ಞಾನದ ವಿದ್ಯಾರ್ಥಿಯಾದ ನನಗಂದು ಅದು ಸರಿಯೆನಿಸಿತ್ತು. 

ಕಾಲ ಮುಂದುವರೆದು ನನ್ನ ವಿದ್ಯಾಭ್ಯಾಸ ಮುಗಿದಿತ್ತು.  ಬ್ಯಾಂಕ್ ನೌಕರಿ ಹಿಡಿದು ಬಡ್ತಿಯನ್ನೂ ಪಡೆದಿದ್ದೆ.  ದೂರದ ಪಂಜಾಬಿನ ಸಣ್ಣ ಊರೊಂದಕ್ಕೆ ಪ್ರಯಾಣ 
(ಬದುಕೆಂಬ ಜಟಕಾ ಬಂಡಿಗೆ ವಿಧಿಯೇ ಸಾಹೇಬ.  ನಾವೆಲ್ಲಾ ಕುದುರೆಗಳು ಮಾತ್ರ. ವಿಧಿ ಓಡಿಸಿದ ಕಡೆ ನಾವು ಓಡಬೇಕೆ ಹೊರೆತು, ನಮಗೆ ಬೇರೆ ಆಯ್ಕೆಗಳಿಲ್ಲ). 

ಬೆಳೆಸಿದ್ದೆ.  ಸ್ವಲ್ಪ ದೂರದ ರೈಲು-ನಿಲ್ದಾಣಕ್ಕೆ ಹೊರಟಿದ್ದು ಜಟಕಾ ಗಾಡಿಯೊಂದರಲ್ಲಿ.   ನನ್ನವರೆಲ್ಲರನ್ನೂ ಬಿಟ್ಟು ಏಕಾಂಗಿಯಾಗಿ  ಹೊರಟಾಗ ಮನಸ್ಸು ಭಾರವಾಗಿತ್ತು. ಎಲ್ಲಾ ವಿಧಿಯಾಟ, ನನ್ನದೇನೂ ಇಲ್ಲ ಅನ್ನಿಸಿತ್ತು. 



ಅಂದಿನ ದಿನಗಳಲ್ಲಿ ಇಂಗ್ಲಿಷ್ ಸಿನಿಮಾ ನೋಡುವುದೆಂದರೆ ಹೆಚ್ಚುಗಾರಿಕೆ. 
(ನಗು, ನಗಿಸು, ನಕ್ಕು-ನಗುತ್ತಾ ಬಾಳುವ ವರವನ್ನು ಪಡೆ ಎಂದು ಡಿ.ವಿ.ಜಿ.ಯವರು ತಿಳಿಹೇಳಿದ್ದಾರೆ).  

ದಿಲ್ಲಿಯಲ್ಲಿ ಚಾರ್ಲಿ ಚಾಪ್ಲಿನರ  'ಮಾಡರ್ನ್ ಟೈಮ್ಸ್' ಸಿನಿಮಾ ನೋಡಿದ್ದೆ.  ಕೈಗಾರಿಕಾ ಕ್ರಾಂತಿ ಉಂಟು ಮಾಡಿದ ಏರುಪೇರುಗಳನ್ನು ಚಾಪ್ಲಿನ್ ಹಾಸ್ಯದ  ಹೊನಲಿನಲ್ಲಿ ಮನಮುಟ್ಟುವಂತೆ ನಿರೂಪಿಸಿದ್ದರು.  'ನಗಿಸಿವುದು ಪರಧರ್ಮ' ಎಂದೇ ಬಾಳಿ ಸಾಧಿಸಿದ ಚಾಪ್ಲಿನ್, ಮತ್ತೊಂದು ಕಡೆ 'ಮಳೆಯಲ್ಲಿ ನೆನೆಯುವುದೆಂದರೆ ನನಗಿಷ್ಟ. ಆಗ ನಾನಳುವುದು ಯಾರಿಗೂ ಕಾಣದು' ಎಂದು ಹೇಳಿಕೊಂಡಿರುವುದು ಎಲ್ಲರ ಮನಸ್ಸನ್ನೂ ಒಮ್ಮೆಯಾದರೂ ಕಲಕದಿರದು. 

೧೯೮೧ರ ಕಡೇ ದಿನಗಳು. ಆಗ ನನಗಂದು ವಿವಾಹದ ಸಂಭ್ರಮ. ಹತ್ತು-ಹಲವು ಉಡುಗೊರೆಗಳು ಬಂದಿದ್ದವು. ಗಮನ ಸೆಳೆದದ್ದು ಆತ್ಮೀಯರೊಬ್ಬರು ನೀಡಿದ ಎರಡು ಪುಸ್ತಕಗಳು. ಒಂದು 'ನರಸಿಂಹಸ್ವಾಮಿಯವರ ಮೈಸೂರ ಮಲ್ಲಿಗೆ, ಮತ್ತೊಂದೇ ಮಂಕುತಿಮ್ಮನ ಕಗ್ಗ'.  ಕಗ್ಗದ ಕವಿತೆಯೊಂದು ಹೀಗಿತ್ತು. 


(ಬೆಟ್ಟದಡಿಯ ಹುಲ್ಲಾಗು, ಮನೆಗೆ ಮಲ್ಲಿಗೆಯಾಗು, ಕಷ್ಟಗಳನ್ನೆದುರಿಸುವಾಗ ಕಲ್ಲಿನಂತಾಗು, ಬಡವರಿಗೆ ಹಾಯ ಮಾಡು, ಎಲ್ಲರಲ್ಲೂ ಬೆರೆತು ಬಾಳು ಎನ್ನುತ್ತೆ ಈ ಪದ್ಯದ ಸಾರಾಂಶ ). 

'ಮನೆಗೆ ಮಲ್ಲಿಗೆಯಾಗು' ಎಂಬುದು ವಿವಾಹ ಜೀವನದ ಮಾರ್ಗದರ್ಶಿಯಾದರೆ, 'ಎಲ್ಲರೊಳಗೊಂದಾಗು' ಎಂಬ ಸಾಲು ಸಮಗ್ರ ಜೀವನದ ಹಾದಿಯನ್ನು ತೋರಿಸಿತ್ತು. 

ಪ್ರಾಯದ ಆ ದಿನಗಳಲ್ಲಿ ಬೇಗ ಎಲ್ಲವನ್ನೂ ಗಳಿಸಿಕೊಳ್ಳುವ ಹಪಹಪಿ. ಡಿ.ವಿ.ಜಿ. -


ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ 
ಚಿನ್ನದಾತುರಕಿಂತ ಹೆಣ್ಣುಗಂಡೊಲವು 
ಮನ್ನಣೆಯ ದಾಹವೀಯೆಲ್ಲಕಂ ತೀಕ್ಷ್ಣತಮ 
ತಿನ್ನುವುದಾತ್ಮವನೆ - ಮಂಕುತಿಮ್ಮ  

(ಅನ್ನಕ್ಕಿಂತ ಚಿನ್ನದಾಸೆ ಹೆಚ್ಚು. ಚಿನ್ನಕಿಂತ ಹೆಣ್ಣು-ಗಂಡಿನಾಸೆ ಹೆಚ್ಚು.  ಸಮಾಜದಲ್ಲಿ ಗೌರವ ಗಳಿಸುವ ಆಸೆ ಇವೆಲ್ಲವಕ್ಕಿಂತ ದೊಡ್ದದಾಗಿ ಮನುಷ್ಯನನ್ನು ಕಾಡುತ್ತದೆ). 

ಯವರ ಮೇಲಿನ ಸಾಲುಗಳ ಎಚ್ಚರ ಸಮಂಜಸವಾಗಿದ್ದರೂ, ಬಿಸಿರಕ್ತ ಕೇಳಬೇಕಲ್ಲ!
ಆ ದಿನಗಳಲ್ಲಿ ಸ್ಕೇಲ್-೨ ಬಡ್ತಿ ಯಾವಾಗ? ಮನೆಸಾಲ ಹೆಚ್ಚಾಗುವುದ್ಯಾವಾಗ? ಎಂಬ ಪ್ರಶ್ನೆಗಳದ್ದೇ ನಿತ್ಯ ಜಪವಾಗಿತ್ತು.

ಅಸಮದಲಿ ಸಮತೆಯನು ವಿಷಮದಲಿ ಮೈತ್ರಿಯನು 
ಅಸಮಂಜಸದಿ ಸಮನ್ವಯ ಸೂತ್ರ ನಯವ 
ವೆಸನಮಯ ಸಂಸಾರದಲಿ ವಿನೋದವ ಕಾಂಬ 
ರಸಿಕತೆಯೆ ಯೋಗವೆಲೊ - ಮಂಕುತಿಮ್ಮ  

(ಹಣ-ಹಕ್ಕು-ಮನ್ನಣೆಗಳಲ್ಲಿ ತಾರತಮ್ಯ ಇದ್ದದೆ. ದ್ವೇಷ-ಭಿನ್ನಾಭಿಪ್ರಾಯಗಳು ಇದ್ದದೆ. ನೋವುಗಳು ಸಂಸಾರದಲ್ಲಿ ಇದ್ದದೆ. ಇವುಗಳನ್ನೆಲ್ಲ ಸರಿದೂಗಿಸಿಕೊಂಡು ಸಂತೋಷವಾಗಿರುವನೆ ರಸಿಕ ಎನ್ನುತ್ತಾರೆ ಗುಂಡಪ್ಪನವರು). 

ಎಂಬ ಸಾಲುಗಳ ಅರಿವಿದ್ದರೂ, ಎಲ್ಲ ಗಳಿಸಬೇಕೆಂಬ ತುಡಿತ ತಗ್ಗಿತ್ತಿಲ್ಲ. 

ಪಂಜಾಬಿನ ಲೂಧಿಯಾನದಲ್ಲಿ ಸೇವೆ ಸಲ್ಲಿಸುತಿದ್ದ ಸಮಯದಲ್ಲಿ ದೂರದ ನೇಪಾಳದ ಗಡಿಯಿಂದ ವಲಸೆಬಂದ ಬಡ ಯುವಕನೊಬ್ಬ ನಮ್ಮ ಬ್ಯಾಂಕ್ನಲ್ಲಿ ದಿನಗೂಲಿಯ ನೌಕರನಾಗಿದ್ದ. ಒಂದೊಮ್ಮೆ  ಬ್ಯಾಂಕ್ ನಿಯಮಗಳ ಪ್ರಕಾರ ಅವನನ್ನು ಕೆಲಸದಿಂದ ತೆಗೆಯಲಾಗಿತ್ತು. ನಾನು ತೆರೆಮರೆಯಲ್ಲಿ ನಡೆಸಿದ ಸಣ್ಣ ಪ್ರಯತ್ನದಿಂದಾಗಿ ಅವನನ್ನು ಖಾಯಂ ನೌಕರನಾಗಿ ನೇಮಿಸಿಕೊಳ್ಳಲಾಯಿತು. ಸ್ನೇಹಿತರ ಪ್ರಶಂಸೆಯಿಂದ ನಾನು ಉಬ್ಬಿಹೋಗಿದ್ದೆ. ಅಂದು ನನ್ನ ಎಚ್ಚರಿಸಿದ್ದು ಕಗ್ಗದ ಸಾಲುಗಳೆ!



(ಮೊಳಕೆಯೊಡೆಯುವುದು, ಕಾಯಿ ಹಣ್ಣಾಗುವುದು, ಸೂರ್ಯ-ಚಂದ್ರರು ಬೆಳಕನ್ನು ನೀಡುವುದು, ಇವುಗಳೆಲ್ಲ ಪ್ರಕೃತಿಯ ವಿಸ್ಮಯವೆ ಸರಿ. ಆದರೆ ಆ ಕ್ರಿಯೆಗಳೆಲ್ಲಾ ಸದ್ದಿಲ್ಲದೆ ನಡೆಯುತ್ತವೆ. ಅದೇ ರೀತಿ ನಾವು ಮಾಡಿದ ಸಣ್ಣ-ಪುಟ್ಟ ಕೆಲಸಗಳ ಬಗ್ಗೆ ಕೊಚ್ಚಿಕೊಳ್ಳುವುದು ಸರಿಯಲ್ಲ). 

ಸಂಸಾರ ಮುಂದುವರೆದು ಮಕ್ಕಳು ಬೆಳೆದು ನಿಂತಾಗ ಅವರ ಭವಿಷ್ಯದ ಚಿಂತೆ. 
ನಮ್ಮ ಆತಂಕ-ಹೋರಾಟಗಳ ಹೊರೆತಾಗು, ಕಡೆಗೆ ನಿಜವಾಗಿದ್ದು ಕಗ್ಗದ 'ದಿಕ್ಕುವರಿಗವರವರೆ' ಎಂಬ ಸಾಲುಗಳೆ! ಹಿಂತುರಿಗಿ ನೋಡಿದಾಗ ನಮ್ಮ 

(ಮಕ್ಕಳ ಭವಿಷ್ಯದ ಬಗ್ಗೆ ಹಿರಿಯರು  ಅತಿಯಾಗಿ ಮೂಗು ತೂರಿಸುವುದು ಸರಿಯಲ್ಲ.  ಅವರುಗಳು ಅವರ ಮಾರ್ಗವನ್ನು ಕಂಡುಕೊಳ್ಳಲು ಬಿಡುವುದೆ ಸರಿ). 

ಮಾರ್ಗದರ್ಶನಕ್ಕಿಂತ, ನಮ್ಮ ಮಕ್ಕಳುಗಳು ಕಂಡುಕೊಂಡ ದಾರಿಯೇ ಸರಿಯೆನಿಸಿದ್ದು ಸುಳ್ಳಲ್ಲ. 

ಮಂಕುತಿಮ್ಮನ ಕಗ್ಗ ಇಡೀ ವಿಶ್ವದ ಮಹಾಕಾವ್ಯಗಳಲೊಂದು ಎಂಬುದರಲ್ಲಿ ಎರಡು ಮಾತಿಲ್ಲ.  ಆದರೂ ಅಲ್ಲಿಲ್ಲಿ ಸಣ್ಣ-ಪುಟ್ಟ ದೋಷಗಳು ಇಲ್ಲವೆಂದೇನಿಲ್ಲ.  

೧. ಕಗ್ಗದ ಭಾಷೆ ವಚನ ಸಾಹಿತ್ಯದಂತೆ ಸರಳವಲ್ಲ. 
೨. ಒಂದು ಪದ್ಯಕ್ಕೂ ಮತ್ತೊಂದಕ್ಕೂ ಸಂಬಂಧವಿಲ್ಲದಿರುವಂತೆ ಕಂಡುಬರುವುದೂ 
        ಉಂಟು. 
೩. ಈ ಪದ್ಯವನ್ನು ನೋಡಿ.......                                                                        
             (ಹುಲಿ, ಸಿಂಹ ಮುಂತಾದ ಪ್ರಾಣಿಗಳು ಉಸಿರಾಡಿ, ನಾವು ಸೇವಿಸುವ ಗಾಳಿಯನ್ನು ಕಲುಷಿತಗೊಳಿಸುತ್ತವೆ).            

ನಾವಾಡುವ ಉಸಿರನ್ನು ಇತರ ಪ್ರಾಣಿಗಳೂ ಉಸಿರಾಡಿ ಕಲುಷಿತಗೊಳಿಸುತ್ತಿವೆಎಂಬುದು ಸರಿಯೆ? ಪ್ರಕೃತಿಯನ್ನೇ ವಿನಾಶದ             ಅಂಚಿಗೆ ತಳ್ಳಿರುವ ಮಾನವನೆ ಸ್ವಾರ್ಥಿಯಲ್ಲವೆ? 


೪. ನಮ್ಮ ಬದುಕಿನ ಜಟಕಾ ಬಂಡಿಗೆ 'ವಿಧಿ' ಸಾಹೇಬನೆ? ನಾವೆ ಏಕಾಗಬಾರದು?  ನಮ್ಮಿಚ್ಛೆಯಂತೆ ಗಾಡಿಯನ್ನು ಓಡಿಸುವ ಪ್ರಯತ್ನವನ್ನು ಕೈಬಿಡಬೇಕೆ? ಎಂಬ ಸಂದೇಹಗಳು ಕೆಲವರಲ್ಲಾದರೂ ಮೂಡಿರಬಹುದು. 

ಸ್ವತಃ ಗುಂಡಪ್ಪನವರೆ ಕಡೆಯ ಪದ್ಯವೊಂದನ್ನು ಬರೆಯುತ್ತಾ 

 ಸಂದೇಹವೀ ಕೃತಿಯೊಳಿಲ್ಲವೆಂದಲ್ಲ 
ಇಂದು ನಂಬಿಹುದೆ ಮುಂದೆಂದುಮೆಂದಲ್ಲ 
ಕುಂದು ತೋರ್ದಂದದನು  ತಿದ್ದಿಕೊಳೆ ಮನಸುಂಟು 
ಇಂದಿಗೀ ಮತವುಚಿತ - ಮಂಕುತಿಮ್ಮ 
(ನನ್ನ ಕೃತಿಯಲ್ಲಿ ತಪ್ಪಿಲ್ಲವೆಂದಲ್ಲ.  ಇಂದಿನ ಸತ್ಯಗಳೇ  ಎಲ್ಲಕಾಲಕ್ಕೂ ಎಂದೇನಲ್ಲ.  ತಪ್ಪುಗಳನ್ನು ತೋರಿಸಿದರೆ ತಿದ್ದಿಕೊಳ್ಳಲು ಸಿದ್ದನಿದ್ದೇನೆ ಎಂದಿದ್ದಾರೆ ಡಿ.ವಿ.ಜಿ.). 

ಎಂದು ಹೇಳಿ ವಿನಮ್ರತೆ ಮೆರೆದಿದ್ದಾರೆ. 

ಕೇವಲ ಪ್ರೌಢಶಾಲೆವರೆಗೆ ಮಾತ್ರ ಓದಿದ್ದ ಡಿ.ವಿ. ಗುಂಡಪ್ಪನವರು ಅಪಾರವಾದ ಜೀವನಾನುಭವದಿಂದ ಕಲಿತು, ಅದನ್ನೆಲ್ಲಾ ತಮ್ಮ ಕಗ್ಗದಲ್ಲಿ ಅಡಗಿಸಿಟ್ಟಿದ್ದಾರೆಂಬುದು ಸಮಸ್ತ ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಕನ್ನಡಿಗರ ಕುರಿತಾದ 'ಕುರಿತೋದದೆಯುಮ್ ಕಾವ್ಯ ಪ್ರಯೋಗ ಪರಿಣತ ಮತಿಗಳ್' ಎಂಬ 'ಅಮೋಘವರ್ಷ-ಶ್ರೀವಿಜಯರ' ಉದ್ಘಾರಕ್ಕೆ ಜೀವಂತ ಉದಾಹರಣೆ ನಮ್ಮ ಗುಂಡಪ್ಪನವರೆಂದರೆ ಅತಿಶಯೋಕ್ತಿಯ ಮಾತಲ್ಲ. 

(Thanks to the sources of pictures used in this blog).
                                                                 
















Tuesday 16 October 2018

ದಸರಾ-ನಾರಿ ಶಕ್ತಿಯ ಪ್ರತೀಕ


೧೯೮೭ರ ದಸರಾ ಸಮಯ. ಯುವಕನಾಗಿದ್ದ ನಾನು ಪುಟ್ಟ ಮನೆಯೊಂದನ್ನು ಕಟ್ಟುವ ಕನಸು ಕಂಡಿದ್ದೆ. ಸಣ್ಣದೊಂದು ನಿವೇಶನ ಖರೀದಿಸಲೂ ಅಂದು ನನ್ನ ಕೈಯಲ್ಲಿ ಸಾಕಷ್ಟು ಹಣವಿತ್ತಿಲ್ಲ. ಹತ್ತಿರದ ಸಂಬಂಧಿಯೊಬ್ಬರಿಂದ ಕೈಸಾಲವೊಂದನ್ನು ಪಡೆಯಲು ನನ್ನ ಹೆಂಡತಿಯೊಂದಿಗೆ ಮೈಸೂರಿಗೆ ಹೋಗಿದ್ದೆ. ಸಾಲ ದೊರೆಯದೆ ನಿರಾಶರಾದ ನಾವು, ಸಮಯ 
ಕಳೆಯಲು ಮೈಸೂರ ಅರಮನೆಗೆ ತೆರಳಿದೆವು. ಅರಮನೆಯ ವಿವರಣೆಕಾರರೊಬ್ಬರು ನಮಗೆ  ಅಂದಿನ ಮಹಾರಾಜರಾದ ನಾಲ್ವಡಿ  ಕೃಷ್ಣರಾಜ ಒಡೆಯರ್ ರವರು  ಕೆ. ಆರ್. ಎಸ್. ಅಣೆಕಟ್ಟನ್ನು (೧೯೨೦) ನಿರ್ಮಿಸಿದ ಕಥೆಯನ್ನು ಮನಮುಟ್ಟುವಂತೆ ಹೇಳಿದರು. 

ದೂರದರ್ಶಿತ್ವವುಳ್ಳ ಮಹಾರಾಜರು ಸರ್. ಎಂ. ವಿಶ್ವೇಶ್ವರಯ್ಯರವರಂಥ ಧೀಮಂತ ವ್ಯಕ್ತಿಯನ್ನು ತಮ್ಮ ದಿವಾನರಾಗಿ (ಮಹಾಮಂತ್ರಿ) ನೇಮಿಸಿದ್ದರು.       
ವಿಶ್ವೇಶ್ವರಯ್ಯನವರು ಅಣೆಕಟ್ಟಿನ ನಕ್ಷೆಯನ್ನು ರೂಪಿಸಿ ನಿರ್ಮಾಣದ ಹೊಣೆಯನ್ನು ಹೊತ್ತಿದ್ದರು. ಅಂದು ಮೈಸೂರೊಂದು ಪುಟ್ಟ ಸಂಸ್ಥಾನ.  ಹಣಕಾಸಿನ ಸಂಗ್ರಹಣೆ ಸುಲಭವಿರಲಿಲ್ಲ.  ಬ್ರಿಟಿಷರು ಸೇರಿದಂತೆ ಎಲ್ಲಾ ಮೂಲಗಳಿಂದ ಸಾಲಕ್ಕಾಗಿ ವಿನಂತಿಸಿ ಮಹಾರಾಜರು ಕಂಗಾಲಾಗಿದ್ದರು. ಮಹಾರಾಜರ ದುಮ್ಮಾನವನ್ನರಿತ 
ಅವರ ಪತ್ನಿಯವರಾದ ಮಹಾರಾಣಿ ಪ್ರತಾಪ ಕುಮಾರಿ ಅಮ್ಮಣ್ಣಿಯವರು, ತಮ್ಮ ಎಲ್ಲಾ ಅಮೂಲ್ಯ ಆಭರಣಗಳನ್ನು ಅಡವಿಟ್ಟು ಸಾಲಪಡೆಯುವ ಸಲಹೆ ನೀಡಿದರು. ಬೇರೆ ಮಾರ್ಗ ಕಾಣದ ಮಹಾರಾಜರು ಹಾಗೆ ಮಾಡಿ ಹಣ ಸಂಗ್ರಹಿಸಿದರು. ಮಹಾರಾಣಿಯವರು ತ್ಯಾಗಕ್ಕೆ ಇಡೀ ಮೈಸೂರು ಮನಮಿಡಿಯಿತು.  ಅಣೆಕಟ್ಟು ನಿರ್ಮಾಣಕ್ಕಾಗಿ ದುಡಿಯುತ್ತಿದ್ದ ಮಹಿಳಾ ಕೂಲಿಗಳೂ ಸಹ ತಮ್ಮ  ವೇತನ ಪಾವತಿಯ ಮುಂದೂಡಿಕೆಗೆ ಸಮ್ಮತಿಸಿದರು. ಪತ್ನಿಯರಿಂದ ಪ್ರೇರೇಪಿತರಾದ ಪುರುಷ ಕೂಲಿಕಾರರೂ ವೇತನವಿಲ್ಲದ ದುಡಿದರು.  ಹೀಗಾಗಿ ನಾರಿಶಕ್ತಿ ಹಾಗೂ 

ತ್ಯಾಗಗಳಿಂದಲೇ ಕೃಷ್ಣರಾಜಸಾಗರ ಅಣೆಕಟ್ಟು ನಿರ್ಮಾಣವಾಯಿತೆಂದರ ತಪ್ಪಲ್ಲ. 

ಕಥೆಯನ್ನು ತನ್ಮಯತೆಯಿಂದ ಕೇಳುತಿದ್ದ ನನ್ನ ಪತ್ನಿಕೂಡ ಬಾವುಕಳಾದಂತೆ ಅಂದು ಕಂಡುಬಂತು. 'ನನ್ನಲ್ಲಿರುವ ಸಣ್ಣ-ಪುಟ್ಟ ಒಡವೆಗಳನ್ನು ಮಾರಿಯಾದರೂ 
ಪುಟ್ಟ ನಿವೇಶನವೊಂದನ್ನು ಖರೀದಿಸೋಣ' ಎಂದ ಅವಳ ಮಾತುಗಳಿಂದ ಅಂದು ನನ್ನ ಕಣ್ಣಡಿಗಳಲ್ಲೂ ಹನಿಗಳು ಮೂಡಿದ್ದು ಸುಳ್ಳಲ್ಲ. ಅದೇ ನಾರಿ-ಶಕ್ತಿಯಿಂದ ನನಗೂ ಪ್ರೇರೇಪಣೆ ದೊರೆತು ನಾನೂ ನನ್ನ 'ಪುಟ್ಟ ಅರಮನೆ'ಯೊಂದನ್ನು ನಿರ್ಮಿಸಿದೆ ಎಂಬ ನೆನಪು ನಮ್ಮಲ್ಲಿ ಇಂದಿಗೂ ಹಸಿರಾಗಿ ಉಳಿದಿದೆ. 

ನಮ್ಮ ಕಥೆ ಓದಿದಕ್ಕೆ ಧನ್ಯವಾದಗಳು. ಈಗ ಹೇಳಿ 'ದಸರಾ ನಾರಿ-ಶಕ್ತಿಯ ಪ್ರತೀಕವಲ್ಲವೆ'?
-೦-೦-೦-೦-೦-೦-೦-
(I am indebted to the sources of the pictures used here.  Thanks to them)

Monday 15 October 2018

DASARA, the symbol of Naari-Shakti!

Mysuru Dasara

It was Dasara time during 1987.  I had planned to construct a house of my own.  Unable to mobilize money for purchase of a small housing site, I had gone to Mysuru along with my wife Smt. Anasuya to seek a hand-loan from her maternal uncle.  For some reasons we could not get the loan.  With a gloomy mood and no other work 
to do, we chose to visit the Mysuru Palace where the tourist guide told us the inspiring story of construction of KRS dam.

Krishna Raja Wodeyar (IV) was the greatest Mysuru King who built the KRS dam. Wodeyar had the far-sight of appointing           
Bharat Ratna Sir.M.Visveshvaraiah as his Deewan who planned and took up construction of the dam.  For a small Kingdom like Mysuru, it was very difficult to mobilize money.  When the job got struck-up in between for want of money, Maharaja sought loan from various quarters including the British Rulers.  Maharaja and Vishvesvaraiah
 were deeply worried.  Maharani Paratapa Kumari Ammani understood the King's problem, and came forward to offer her entire set of jewels for pledge.  King had no other way.  He pledged Maharani's jewels to Bombay Gold Market and brought money!  Inspired by Maharani's sacrifice, women workers of the dam offered to postpone receiving wages.  They also compelled their husbands to do so. And because of the spirit of Naari-shakti, the 
dam was completed. 

My wife who passionately heard the entire story was looking moved. She offered to sell whatever small jewels and silver items she had to get me money for purchase of the housing site.  With her active support I too was able to construct my 'small palace'.

Can there be a better example of Naari-shakti and the spirit of their sacrifice?  
Naari-shakti Zindabad
-0-0-0-0-0-0-0-

(I am indebted to the sources of the pictures used here.  Thanks to them)

Sunday 14 October 2018

Dasara, Cricket, Me too!

Mysuru Dasara

October is the month of 'Dasara' all over our Country.  Dasara symbolizes the spirit of conquest of 'Maa Shakthi' over the 'evil forces'.

Mysuru Dasara is world-famous and has a history of more than 400 years.  It was a 10-day festival started by erstwhile Mysuru Kings to showcase their rich history, culture and achievements.  After Independence it has become 'people's dasara' dedicated to  'Maa Chamundeswari', the presiding deity of Mysuru. 
Mysuru Palace

Mysuru Dasara takes our memory to the glory of Mysuru Kings, especially to the regime of Nalvadi Krishna Raja Wodeyar (he ruled between 1902-40).  He was hailed as the best ruler in the entire 
sub-continent of India even by the British.  Let us have a look at his far-sighted contributions.
1.Indian Institute of Science (1909), Bengaluru. Since opening it has remained our Country's best place of learning and always one among top 100 learning places in the world. 
2.Krishna Raja Sagara Dam (1924)
3.State Bank of Mysore (1913)
4.Visveswaraiah Iron & Steel Plant, Bhadravathi (1923)
5.Bengaluru became the first city in India to get electric street         lights  (1905)
6.He was the first ruler in the entire country to introduce 
reservations for the under-privileged (1918).
6.Under his patronage Mysuru became the centre of Carnatic music with great musicians like Violin Chowdiah, Veena Sheshana and composer Mysuru Vasudevachar.

This list is endless.  Wodeyar's contributions to his State (Karnataka) are by far greater than the combined achievements of so-called elected Governments since 1947. If there can be great rulers like Wodeyar, isn't monarchy a better system when compared to democracy which has its own quota of follies?
-0-0-0-
Coming to the world of cricket, we are playing a series with the 'once mighty' West Indies.  More than Indian team's dominance in the series, I am concerned about the decline of West Indies cricket.
West Indies ruled world cricket from 60s to 80s with high quality and fearsome players like Sobers, Hall, Lloyd, Richards, Marshall, Lara and Walsh. The saddest part of world cricket is perhaps the decline of West Indies.  West Indians are natural athletes most suited for cricket.  But I have heard that youth there now-a-days are attracted towards quick money making sports like basket ball and athletics.  

West Indian Usain Bolt, the world's greatest sprinter of the present times was a childhood fan of Tendulkar and wanted to be a cricketer like him.  But he chose to sprint 100, 200 metres to achieve short-cut to a more famous glory!

What ICC is doing to promote cricket? Compared to our younger days quality teams have just reduced in numbers to just four......... Australia, England, India and South Africa! Instead of taking cricket to the world we have witnessed the decline of teams like West Indies, Pakistan, Sri Lanka and Zimbabwe.  

Test Cricket has become a one-sided contest between the dominating host teams and the hapless visitors. If neutral Umpires are okay, why not neutral pitches?  Can't a cricket-rich country like India create a practice Stadium wherein Australian and English pitches and conditions are simulated? Will eliminating one-day cricket do good in reducing the load on cricketers and spectators? Will steps like including a couple of players from weaker test playing countries in our Ranji teams help? Will introducing day-night test cricket draw more spectators? 

Indian team will be going next month to Australia for a full-fledged tour.  This can be best chance to register our first-ever Test series 
win in Australia as Smith and Warner are out undergoing punishment-ban.

But our team's woes witnessed in England are continuing to haunt us.  Opening pair, middle order batting problems are a cause of worry. Both Jadeja and Ashwin must learn to play the role of supporting all-rounders.  Let us hope Saha will join back as first keeper. While our pace-attack is dependable, 
Prithivi Shaw seems to be the silver-lining.

Three T20 games to begin with may not help.  Once again enough 3-day practice games are not planned. Let us hope they will plan not to lose the first test, to ensure a modest beginning.

Shashtri as coach is not enough.  They should have enrolled a former Australian fast bowler as bowling coach.  Remember Australian Bruce Reid was our Bowling Coach when India did its best in the drawn series during 2003-04. Somebody like Dravid should be taken as batting coach.  But I don't think our think-tank  has thought in these lines.
-0-0-0-
Is 'me too' movement creating more sound than light? Aren't both men and women fallible? Is there a point in digging the past?

Has our society moved towards taking a lenient view on issues related to consent and relationship?  Should 'me too' be limited to 'physical-issues' alone? Can't men too raise 'me too' issues? Is there not a limitation period for raising such issues? Should not we put things behind and move on? I prefer to leave it to your judgment!
-0-0-0-0-0-0-0-




Thursday 4 October 2018

ದೀಪ ಧಾರಿಣಿ

ನಮ್ಮ ರತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆಯೆ?

ಎಡಬಾಗದ ಚಿತ್ರ 'ದೀಪ ಧಾರಿಣಿ' ಈ ದಿನ ಸುದ್ದಿಯಾಗಿದೆ. ಏಕೆಂದರೆ ಅದರ ರೂಪದರ್ಶಿ ಗೀತಾ ಉಪ್ಲೆಕರ್ ರವರು  ನೆನ್ನೆ ನಿಧನ ಹೊಂದಿದ್ದಾರೆ.  ಕಲಾವಿದರಾದ ಆಕೆಯ ತಂದೆ ಎಸ್.ಎಲ್ . ಹಲ್ದಂಕರ್ ರವರು ಈ  ಚಿತ್ರಕ್ಕೆ  ೮೦ ವರ್ಷಗಳ ಹಿಂದೆ ಜೀವವನ್ನು ನೀಡಿದರು. ಅದೀಗಲೂ  ಮೈಸೂರ ಜಯಚಾಮರಾಜೇಂದ್ರ ಆರ್ಟ್ ಗ್ಯಾಲರಿಯಲ್ಲಿ ರಾರಾಜಿಸುತ್ತಿದೆ. ಆ ಹೆಣ್ಣಿನ ಮುಖದಲ್ಲಿನ ಕಾಂತಿಯನ್ನು ನೋಡಿ, ಚಿತ್ರದಲ್ಲಿನ ನೆರಳು-ಬೆಳಕಿನ ಮೋಡಿಯನ್ನು ನೋಡಿ! ಇದು ಅಮೂಲ್ಯ ಕಲಾಕೃತಿಯೆಂಬುದರಲ್ಲಿ ಎರಡು ಮಾತಿಲ್ಲ. 

ಪಕ್ಕದಲ್ಲಿನ 'ಮೋನಾ ಲಿಸಾ'ಕ್ಕೆ ಹೋಲಿಸಿದರೆ ನಮ್ಮ 'ದೀಪ ಧಾರಿಣಿ'ಗೆ ಎರಡನೇ ಸ್ಥಾನ! ಮೋನಾ ಲಿಸಾವನ್ನು ಲಿಯಾನಾರ್ಡೋ ಡಾ ವಿಂಚಿಯವರು ೧೬ನೇ ಶತಮಾನದಲ್ಲಿ ಚಿತ್ರಿಸಿದರು.  ಅದೀಗ ಪ್ಯಾರಿಸ್ ನ  ಲವೂರೆ ಮೂಸೆಯಂನಲ್ಲಿ ಪ್ರದರ್ಶಿತಗೊಂಡಿದೆ.  ವಿಶ್ವದಲ್ಲೇ ಹೆಚ್ಚು ಜನ ವೀಕ್ಷಿಸಿದ ಚಿತ್ರ ಅದಂತೆ. ಅದರ ಬೆಲೆ ೮೦೦ ಮಿಲಿಯನ್ ಡಾಲರ್ ಗಳಿಗೂ ಹೆಚ್ಚ೦ತೆ! ಕಳೆದ ವರ್ಷ ಪ್ಯಾರಿಸ್ ಗೆ ಹೋಗಿ ನಾನದನ್ನು ವೀಕ್ಷಿಸಿದಾಗ ಅದರಲ್ಲಿ ನನಗೇನೂ ಅದ್ಭುತ ಕಂಡುಬರಲಿಲ್ಲ. ನಮ್ಮ ದೀಪ ಧಾರಿಣಿಯೇ ಮತ್ತೊಮ್ಮೆ ನೆನಪಿಗೆ ಬಂದಳು. 

ನಮ್ಮ ರತ್ನಗಳ ಬಗ್ಗೆ ನಮಗೆ ಹೆಮ್ಮೆ ಇದೆಯ? ವಿಶ್ವದ ಲಕ್ಷೋಪಲಕ್ಷ ಪ್ರವಾಸಿಗಳು ಬಂದು ನಮ್ಮ ರತ್ನಗಳನ್ನು ನೋಡುವಂತೆ ನಾವು ಮಾಡಬಲ್ಲೆವೆ ಎಂಬ ತುಡಿತ ಇಂದು ದೇಶಪ್ರೇಮಿಗಳನ್ನು ಕಾಡುತ್ತಿರುವುದು ಸುಳ್ಳಲ್ಲ. 
ಲಕ್ಷ್ಮೀನಾರಾಯಣ ಕೆ 
ಬೆಂಗಳೂರು 

Tuesday 2 October 2018

ಲಾಲ್ ಬಹದ್ದೂರ್ ಶಾಸ್ತ್ರಿ ನಿಜವಾದ ಭಾರತ ರತ್ನ


ಇಂದು ಶಾಸ್ತ್ರಿ ಜಯಂತಿಯೂ ಹೌದು ಎಂಬುದನ್ನು ಮರೆತು ನಾನು ಘೋರ ಅಪರಾಧ ಮಾಡಿದೆನೋ ಎಂಬ ಭಾವ ಕಾಡುತಿದೆ.   ಶಾಸ್ತ್ರೀಜಿ ಕ್ಷಮೆ ಇರಲಿ. 

ಬಡ ಕುಟುಂಬದಲ್ಲಿ ಜನಿಸಿ ಹೋರಾಟ ಮತ್ತು ಸಾಮರ್ಥ್ಯಗಳಿಂದಲೇ ಮುಂದೆ ಬಂದವರು ಶಾಸ್ತ್ರಿ.  ಅವರು ಎಂದೂ ಅಧಿಕಾರಕ್ಕೆ ಆಸೆಪಟ್ಟವರಲ್ಲ.  ಎಲ್ಲೋ ನಡೆದ ರೈಲ್ವೆ ಅಪಘಾತದ ಹೊಣೆಹೊತ್ತು ಮಂತ್ರಿಸ್ಥಾನಕ್ಕೆ ರಾಜೀನಾಮೆ ನೀಡಿದ ಅವರೆಲ್ಲಿ?  ಅಧಿಕಾರದ ದಾಹಕ್ಕಾಗಿ ಏನನ್ನೂ ಮಾಡಲು ಹೇಸದ ಈಗಿನ ರಾಜಕಾರಣಿಗಳೆಲ್ಲಿ?

ಆಕಸ್ಮಿಕವಾಗಿ ಬಂದ ಪ್ರಧಾನಿ ಹುದ್ದೆಗೆ ನಿಸ್ವಾರ್ಥದಿಂದ ದುಡಿದ ಧೀಮಂತ ಅವರು.  ಒಂದಡೆ ಹಸಿವಿನಿಂದ ನರಳುತ್ತಿದ್ದ ದೇಶ, ಮತ್ತೊಂದೆಡೆ ಕಾಲ್ಕೆರೆದು ಯುದ್ಧಕ್ಕೆ ಸನ್ನದ್ದರಾದ ಶತ್ರುಗಳು. ಎರಡೂ ಸವಾಲುಗಳನ್ನು 'ಜೈ ಜವಾನ್, ಜೈ ಕಿಸಾನ್' ಎಂಬ ಒಂದೇ ಕರೆನೀಡಿ ಸಮರ್ಥವಾಗಿ ನಿಭಾಯಿಸಿದ ಮೇರುವ್ಯಕ್ತಿ.  ಹಸಿರು ಕ್ರಾಂತಿಯ ಹರಿಕಾರ ಮತ್ತು ಸಮರವೀರ!

ಶಾಸ್ತ್ರಿಯವರಿಂದ ನಾವು ಕಲಿಯಬೇಕಾದ ಮೊದಲ ಗುಣ ಪ್ರಾಮಾಣಿಕತೆ .  ಪ್ರಧಾನಿ ಕಾರನ್ನು ಸಂಸಾರದ ಉಪಯೋಗಕ್ಕೆ ಬಳೆಸಲು  ಶಾಸ್ತ್ರೀ ಬಿಲ್ಕುಲ್ ಒಪ್ಪುತ್ತಿರಲಿಲ್ಲ.  ಕಾರು ಕೊಳ್ಳಲು ಅವರ ಹತ್ತಿರ ಹಣವಿರಲಿಲ್ಲ.  ಅಂದಿನ ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಂದೆ ಕೇವಲ ರೂ. ೫೦೦೦ ಸಾಲಕ್ಕೆ ಕೈಯೊಡ್ಡಿದವರು.  ಸಾಲದ ಮರುಪಾವತಿ ಮಾಡುವಷ್ಟರಲ್ಲೇ ನಿಧನರಾದರು .  ಅವರ ಧರ್ಮಪತ್ನಿ ಶ್ರೀಮತಿ ಲಲಿತ ಶಾಸ್ತ್ರಿಯವರು ಗಂಡನ ಪೆನ್ಷನ್ ಹಣದಲ್ಲಿ ಸಾಲವನ್ನು ಮರುಪಾವತಿಸಿದರು ಎಂಬುದನ್ನು ನಾವು ನೆನಯಲೇ ಬೇಕು .  ಅದೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೆಲವರು ಪಂಗನಾಮ ಹಾಕಿ ಇತ್ತೀಚೆಗೆ ಓಡಿದರು ಎಂಬ ಸುದ್ದಿ ಕೇಳಿ  ನನಗೆ ಶಾಸ್ತ್ರಿಯವರ ನೆನಪಾಯ್ತು.  

ಶಾಸ್ತ್ರಿಯವರ ಅಕಾಲಿಕ ನಿಧನದಿಂದ ದೇಶ ಬಡವಾಯ್ತು ಮತ್ತು ಧಿಕ್ಕುತಪ್ಪಿತು ಎಂಬುದು ಸುಳ್ಳಲ್ಲ. 

ಶಾಸ್ತ್ರಿದಿನದಂದು ನಮಗೆ ಮತ್ತೆ ಮತ್ತೆ  ನೆನಪಾಗುವ ಘೋಷವಾಕ್ಯ 'ಜೈ ಜವಾನ್, ಜೈ ಕಿಸಾನ್'. 

ಲಕ್ಷ್ಮೀನಾರಾಯಣ 
ಬೆಂಗಳೂರು   

Sunday 30 September 2018

ಗಾಂಧೀಜಿ ಪರಿಪೂರ್ಣರೆ?

ಮನುಕುಲ ಕಂಡ ಮಹಾನ್ ವ್ಯಕ್ತಿಯೆಂದೇ ಗಾಂಧೀಜಿಯವರನ್ನು  ಬಣ್ಣಿಸಲಾಗಿದೆ.  ಹೌದು, ನಮ್ಮ ದೇಶದ ಸ್ವಾತಂತ್ರ ಸಂಗ್ರಾಮದ ಮೇರುನಾಯಕರಾದ ಅವರು  ಹಲವು ಕೊಡುಗೆಗಳನ್ನು ನೀಡಿದ್ದಾರೆ.

೧.  ಗ್ರಾಮೀಣ ಭಾರತ: ರೈತನೇ ಭಾರತದ ಬೆನ್ನೆಲುಬು ಹಾಗೂ ಹಳ್ಳಿಗಳ ವಿಕಾಸವೇ ಭಾರತದ ವಿಕಾಸ ಎಂಬ ಸಂದೇಶವನ್ನು ಗಾಂಧೀಜಿ ನಮಗೆ ನೀಡಿದರು.


೨. ಸ್ವಚ್ಛ ಭಾರತ: ಸ್ವಚ್ಛತೆಯ ಬಗ್ಗೆ ನಮ್ಮ ಗಮನವನ್ನು ಮೊದಲ ಬಾರಿಗೆ ಸೆಳೆದವರು ಗಾಂಧೀಜಿ.  ಸ್ವಚ್ಛ ಭಾರತ ಎಂಬ ಅಭಿಯಾನಕ್ಕೆ ಪ್ರಥಮವಾಗಿ ನಾಂದಿ ಹಾಡಿದವರು ಗಾಂಧೀಜಿಯವರೆ. 

೩.ಸ್ವಾವಲಂಭಿ ಭಾರತ: ದೇಶದ ಗುಡಿಕೈಗಾರಿಕೆಗಳಿಂದ ಸ್ವಾವಲಂಬನೆ ಸಾಧ್ಯ ಎಂಬ ದೂರಧೃಷ್ಟಿಯನ್ನು ನಮಗೆ ತೋರಿಸಿದವರು ಗಾಂಧೀಜಿ.  'ಮೇಕ್ ಇನ್ ಇಂಡಿಯ' ಎಂಬುದು ಗಾಂಧೀಜಿಯವರು ಆರಂಭಿಸಿದ ಅಭಿಯಾನದ ಮುಂದುವರಿದ ಭಾಗ. 

೪. ಸತ್ಯಾಗ್ರಹ: ಅನ್ಯಾಯದ ವಿರುದ್ಧ ಅಹಿಂಸಾತ್ಮಕವಾಗಿ ಹೋರಾಡುವುದೇ ಸತ್ಯಾಗ್ರಹ ಎಂಬ ತಂತ್ರಗಾರಿಕೆಯನ್ನು ನಮಗೆ ತಿಳಿಸಿಕೊಟ್ಟರು ಗಾಂಧೀಜಿ.


೫.ಅಸ್ಪೃಶ್ಯತೆ  ವಿರುದ್ಧ ಹೋರಾಟ: ಅಸ್ಪೃಶ್ಯತೆಯೊಂದು  ಸಾಮಾಜಿಕ ಪಿಡುಗು ಹಾಗೂ ಎಲ್ಲರೂ ಸಮಾನರು ಎಂಬುದು ಗಾಂಧೀಜಿಯವರ ಅಭಿಪ್ರಾಯ.  ದೇಶದಲ್ಲಿ ಈಗ ಮುಂದುವರೆದಿರುವ ಸಾಮಾಜಿಕ ನ್ಯಾಯಕ್ರಾಂತಿಯ ರೂವಾರಿಗಳು ಗಾಂಧೀಜಿಯವರೇ. 

ಆದರೇ 
೧. ಪ್ರಧಾನಿ ಆಯ್ಕೆ: ಎಲ್ಲಾ ಅರ್ಹತೆಗಳನ್ನೂ ಹೊಂದಿದ್ದ ಪಟೇಲರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ತಪ್ಪುಗಳಲ್ಲಿ ದೊಡ್ಡದು ಎಂಬುದು ನನ್ನ ಅಭಿಪ್ರಾಯ.  ದೇಶದ ಹಿತದೃಷ್ಟಿಯಿಂದ ನಿಸ್ವಾರ್ಥ ಹಾಗೂ ನಿಷ್ಟೂರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಭಾವ ಅಂದು ಪಟೇಲರಲ್ಲಿ ಮಾತ್ರವಿತ್ತು.   ಅವರು ಪ್ರಧಾನಿಯಾಗಿದ್ದರೆ ದೇಶ ಇನ್ನೂ ಬಲಿಷ್ಠವಾಗಿರುತಿತ್ತು ಎಂಬುದರಲ್ಲಿ ಯಾವ ಅನುಮಾನವೂ ನನಗಿಲ್ಲ.


.ಹುಲಿಗಳನ್ನು ಇಲಿಗಳನ್ನಾಗಿ  ಮಾಡಿದರೆ? ಹಾಗೇ ಸುಭಾಷ್ ಚಂದ್ರ ಬೋಸರಂಥ ನಾಯಕರ ಉತ್ಸಾಹಕ್ಕೆ, ಅಹಿಂಸೆಯ ಹೆಸರಿನಲ್ಲಿ ತಣ್ಣೀರು ಸುರಿದದ್ದು ಮತ್ತು ಅಂಥವರನ್ನು ಕಡೆಗಾಣಿಸಿದ್ದು ಗಾಂಧೀಜಿಯವರು ಮಾಡಿದ ಮತ್ತೊಂದು ತಪ್ಪು. ಒಂದು ಕೆನ್ನೆಗೆ ಬಾರಿಸಿದರೆ, ಮತ್ತೊಂದು ಕೆನ್ನೆಯನ್ನು ತೋರಿಸು ಎಂಬ ಪಾಠ ಭಾರತೀಯರನ್ನು ದುರ್ಬಲ ವ್ಯಕ್ತಿಗಳನ್ನಾಗಿ ಮಾಡಿತೇ ಎಂಬ ಪ್ರಶ್ನೆ ಆಗಾಗ ನನ್ನನ್ನು ಕಾಡುತ್ತದೆ. 

೩.ದೇಶ ವಿಭಜನೆಯಲ್ಲಾದ ಹಿನ್ನಡೆ: ಒಡೆದು ಆಳು ಎಂಬ ಬ್ರಿಟಿಷರ ತಂತ್ರಕ್ಕೆ ನಾವು ಸುಲಭ ತುತ್ತಾದೆವು.  ನಾವು ಅದರ ಪರಿಣಾಮವನ್ನು ಈಗಲೂ ಅನುಭವಿಸುತ್ತಿದ್ದೇವೆ.  ಇದಕ್ಕೆ ಯಾರು ಹೊಣೆ?  ಪಟೇಲರು  ತಂತ್ರಗಾರಿಕೆ ಮಾಡದಿದ್ದರೆ ನಮ್ಮ ಹೈದರಾಬಾದ್  ಕೂಡ ಪಾಕಿಸ್ತಾನ ಆಗುತಿದ್ದರಲ್ಲಿ ಅನುಮಾನ ಬೇಡ. ಕಾಶ್ಮೀರ ಮುಂತಾದ ಸಮಸ್ಯೆಗಳಿಗೆ ಅಂದೇ ಇತಿಶ್ರೀ ಹಾಡಬಹುದಿತ್ತು.   ಮತ್ತೊಂದು ಕೆನ್ನೆ ತೋರಿಸುವ ಮನೋಭಾವವೇ ನಮಗೆ ಮುಳುವಾಯಿತೆ/ಮತ್ತೆ  ಮತ್ತೆ ಮುಳುವಾಗುತ್ತಿದೆಯೆ  ಎಂಬ ದ್ವಂದ ನಮ್ಮೆಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. 

ಈ ಎಲ್ಲಾ ವಿಚಾರಧಾರೆಗಳ ನಡುವೆ 'nobody is perfect'  ಎಂಬ ಮಾತು ನೆನಪಿಗೆ ಬರುತ್ತದೆ.  ಆದರೂ ನಮ್ಮ ದೇಶ ಹಾಗೂ ಅದರ ವಿಚಾರಧಾರೆಗಳನ್ನು ರೂಪಿಸುವಲ್ಲಿ ಅಪಾರ ಪ್ರಭಾವ ಬೀರಿದವರಲ್ಲಿ ಗಾಂಧೀಜಿಯವರು ಪ್ರಮುಖರು ಎಂಬುದರಲ್ಲಿ ಎರಡು ಮಾತಿಲ್ಲ . 
-೦-೦-೦-೦-೦-೦-೦-೦-೦-
(ಮೇಲಿನ ಚಿತ್ರಗಳ ಮೂಲಕ್ಕೆ ನಾನು ಆಭಾರಿ)