ಅಮೇರಿಕದ ಲಿಬರ್ಟಿ ಪ್ರತಿಮೆಯ ದೇವಿ
ಭಾರತದ ಯುನಿಟಿ ಪ್ರತಿಮೆಯ ಪಟೇಲರನ್ನು ಭೇಟಿಯಾದಾಗ ಏನು ಹೇಳಿದಳು.............?
ಸ್ವಾತಂತ್ರ್ಯ ದೇವಿಯು ನಾನು
ಏಕತೆಯ ಪ್ರತೀಕ ನೀನು
ಹಡ್ಸನ್ ನದಿಯ ವಿಹಾರಿ ನಾನು
ನರ್ಮದೆಯಲಿ ಮಿಂದೆದ್ದ ಧೀರ ನೀನು
ಮಿತ್ರರ ಬಳುವಳಿ ನಾನು
ಬೆವರ ಗಳಿಕೆಯು ನೀನು
ಮನುಕುಲ ಕಾಣದ ದೇವತೆ ನಾನು
ಮನುಕುಲ ಕಂಡ ಅಪ್ರತಿಮ ವೀರನು ನೀನು
ಗಳಿಸಿರುವೆ ನಾನೀಗ ಭಾರಿ ಹಣಬಲ
ತಿಳಿಸಿರುವೆ ನೀನೀಗ ಜನಬಲದ ಹಂಬಲ
ಎಲ್ಲ ಬಯಪ ಸ್ವಾತಂತ್ರ್ಯ ನಾನು
ಸ್ವಾತಂತ್ರ್ಯ ಕಾವ ಏಕತೆಯು ನೀನು
ಸ್ವಾತಂತ್ರ್ಯಕೆ ಸಾಕಂತೆ ಒಪ್ಪಟ್ಟು ಸಮರ
ಏಕತೆಗೆ ಬೇಕಂತೆ ದುಪ್ಪಟ್ಟು ಎತ್ತರ
ದೊರಯಲಿ ಮನುಕುಲಕೆ ಶಾಂತಿಯು ಸರಸರ
(ರಚನೆ : ಲಕ್ಷ್ಮೀನಾರಾಯಣ ಕೆ. )
-0-0-0-0-0-
( ಪು. ತಿ .ನೋ.)
( ಪು. ತಿ .ನೋ.)
ಗಮನಿಸಿ :
ಕಳೆದ ತಿಂಗಳು ನಾನು 'ಸ್ಟಾಟ್ಯೂ ಅಫ್ ಲಿಬರ್ಟಿ'ಯನ್ನು ವೀಕ್ಷಿಸಿದಾಗ, ಮೇಲಿನ ಕವಿತೆಯನ್ನು ರಚಿಸಿದ್ದೇನೆ.
೧. 'ಸ್ಟಾಟ್ಯೂ ಅಫ್ ಲಿಬರ್ಟಿ' ಸ್ವಾತಂತ್ರ್ಯದ ಪ್ರತೀಕ . ಅದು ಅಮೆರಿಕಾದ ನ್ಯೂಯೋರ್ಕ್ ಸಮೀಪದ ಹಡ್ಸನ್ ನದಿಯ ದ್ವೀಪದಲ್ಲಿದೆ. ಆ ಪ್ರತಿಮೆ ರೋಮನ್ ದೇವತೆಯೊಬ್ಬಳದು ಎಂದು ಹೇಳಲಾಗಿದೆ.
೨. ಪಟೇಲರ 'ಸ್ಟಾಟ್ಯೂ ಆಫ್ ಯುನಿಟಿ' ಏಕತೆಯ ಪ್ರತೀಕ. ಅದು ಗುಜರಾತನ ನರ್ಮದಾ ನದಿಯ ಮೇಲಿದೆ.
೩. ಸ್ಟಾಟ್ಯೂ ಅಫ್ ಲಿಬರ್ಟಿ ಫ್ರಾನ್ಸನ ಜನರು ಅಮೆರಿಕಾಗೆ ನೀಡಿದ ಬಳುವಳಿ.
೪. ಸ್ಟಾಟ್ಯೂ ಆಫ್ ಯುನಿಟಿ (೧೮೨ ಮೀ.), ಸ್ಟಾಟ್ಯೂ ಅಫ್ ಲಿಬರ್ಟಿ ( ೯೩ ಮೀ.)ಗಿಂತ ಎರಡು ಪಟ್ಟು ಎತ್ತರವಿದೆ.
೫. 'ಒಂದು + ಪಟ್ಟು = ಒಪ್ಪಟ್ಟು' ಎಂದು ಬಳಸಲಾಗಿದೆ.
೬. ಬರುವ ಅಕ್ಟೋಬರ್ ೩೧ರಂದು ಪಟೇಲರ ಜನುಮ ದಿನ. ಪಟೇಲರ ಪ್ರತಿಮೆ ಲೋಕಾರ್ಪಣೆಗೊಂಡ ಮೊದಲ ವಾರ್ಷಿಕೋತ್ಸವವು ಅಂದೇ. ನನ್ನ ಕವಿತೆಯನ್ನು ಆ ದಿನ ಪ್ರಕಟಿಸಿ ಎಂದು ಈ ಮೂಲಕ ಕೋರುತ್ತೇನೆ.
From:
Lakshminarayana K
104, 2nd Main
Shreyas Colony
J.P. Nagar 7th Phase
Bengaluru - 560 078
Mobile & Whatsapp: 98455 62603
e mail: klakshminarayana1956@rediffmail.com
Lakshminarayana K
104, 2nd Main
Shreyas Colony
J.P. Nagar 7th Phase
Bengaluru - 560 078
Mobile & Whatsapp: 98455 62603
e mail: klakshminarayana1956@rediffmail.com