Thursday, 30 October 2025

ಕವನ - ವಾಚನ - ವ್ಯಾಖ್ಯಾನ

ಕವನ - ವಾಚನ - ವ್ಯಾಖ್ಯಾನ

 ೧) ಕವಿರಾಜಮಾರ್ಗ - ಕನ್ನಡದಲ್ಲಿ ಕಾವ್ಯರಚನೆ ಮಾಡಬೇಕೆನ್ನುವ ಕವಿಗಳಿಗೆ ಬರೆದ ಕೈಪಿಡಿಯಿದು. - ಶ್ರೀ ವಿಜಯ - ರಾಷ್ಟ್ರಕೂಟ ರಾಜ ನೃಪತುಂಗನ ಆಸ್ಥಾನದ ಕವಿ - ಕ್ರಿ.ಶಕ. ೮೧೫-೭೭ - ಕನ್ನಡದ ಮೊದಲ ಗ್ರಂಥ - ಪಂಪನಿಗಿಂತ ಎರಡು ಶತಮಾನಗಳಷ್ಟು ಹಳೆಯದು 

ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್
ಭಾವಿಸಿದ ಜನಪದಂ ವಸುಧಾ ವಲಯ ವಿಲೀನ ವಿಶದ ವಿಷಯ ವಿಶೇಷಂ
ಅದರೊಳಗಂ ಕಿಸುವೊಳಲಾ ವಿದಿತ ಮಹಾ ಕೋಪಣ ನಗರದಾ ಪುಲಿಗೆರೆಯಾ
ಸಧಭಿಮಸ್ತುತಮಪ್ಪೊಂಕುಂದದ ನಡುವಣ ನಾಡೆ ನಾಡೆ ಕನ್ನಡದ ತಿರುಳ್

ಕವಿರಾಜಮಾರ್ಗದಲ್ಲಿ ಬಂದಿರುವ ಕನ್ನಡನಾಡಿನ ವರ್ಣನೆ ಇದಾಗಿದೆ.ಕಿಸುವೊಳಲು ಪಟ್ಟದಕಲ್ಲಿಗೆ ಮೊದಲಿದ್ದ ಹೆಸರು. ಪುಲಿಗೆರೆ ಇಂದಿನ ಲಕ್ಷ್ಮೇಶ್ವರ (ಗದಗ ಜಿಲ್ಲೆ). ಕೊಪಣ ಇಂದಿನ ಕೊಪ್ಪಳ. ಒಕ್ಕುಂದ ಬೆಳಗಾವಿ ಜಿಲ್ಲೆಯಲ್ಲಿರುವ ಒಕ್ಕುಂದ.

ಕವಿರಾಜಮಾರ್ಗ ಆ ಕಾಲದ ಕನ್ನಡನಾಡು, ನುಡಿ ಮತ್ತು ಜನರ ಬಗೆಗೆ ತಿಳಿವಳಿಕೆ ನೀಡಿರುವುದು ಅದರ ವಿಶೇಷತೆಯನ್ನು ಹೆಚ್ಚಿಸಿದೆ. ಆ ಕಾಲಕ್ಕೆ ಕನ್ನಡನಾಡಿನ ಸೀಮೆ ಕಾವೇರಿಯಿಂದ ಗೋದಾವರಿಯವರೆಗೆ ಹಬ್ಬಿತ್ತು (೧-೩೬). ಕಿಸುವೊಳಲು, ಕೊಪಣ, ಪುಲಿಗೆರೆ, ಒಂಕುಂದಗಳು ತಿರುಳ್ಗನ್ನಡದ ಪ್ರದೇಶಗಳೆಂದು ಖ್ಯಾತವಾಗಿದ್ದುವು (೧-೩೭). ಕನ್ನಡದಲ್ಲಿ ಅನೇಕ ಉಪಭಾಷೆಗಳು ರೂಢಿಯಲ್ಲಿದ್ದುವು (೧-೪೬) ನಾಡವರ ನುಡಿಬಲ್ಮೆ ಹಾಗೆ ಅಸದಳವಾಗಿತ್ತು. ಅವರು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳಾಗಿದ್ದರು (೧-೩೮).


2) ಪಂಪನ ದೇಶಪ್ರೇಮ

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರದ ಮಲ್ಲಿಗೆಗಂಡೊಡಮಾದ ಕೆಂದಲಂ
ಪಂ ಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ


ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ
ನಾಗಿಯುಮೇನೋ ತೀರ್ದಪುದೆ ತೀರದೊಡಂ ಮಱಿದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್


  • ಕನ್ನಡ ಸಾಹಿತ್ಯದ ರತ್ನತ್ರಯ: ಪಂಪ, ಪೊನ್ನ ಮತ್ತು ರನ್ನರೊಂದಿಗೆ 'ಕನ್ನಡ ಸಾಹಿತ್ಯದ ಮೂರು ರತ್ನಗಳು' ಎಂದು ಪರಿಗಣಿಸಲಾಗುತ್ತದೆ.

ಅವರು ಜೈನ ಬ್ರಾಹ್ಮಣ (ಜೈನ ಪಂಡಿತರು) ಗೆ ಸೇರಿದವರು ಮತ್ತು ಆಂಧ್ರಪ್ರದೇಶದ ಇಂದಿನ ಗುಂಟೂರು ಜಿಲ್ಲೆಯ ಕಮ್ಮನಾಡುವಿನ ವಂಗಿಪರ್ರುವಿನವರು . [ 8 [ 9 [ 10 [ 11 ]

ಹಂಪ ನಾಗರಾಜಯ್ಯನವರ ಪ್ರಕಾರ ವರದ ನದಿ ತೀರದ ಅಣ್ಣಿಗೇರಿ ಪಂಪನ ಹುಟ್ಟೂರು. ಸಮೀಪದಲ್ಲೇ ಸಿರ್ಸಿಯ ಬಳಿ ಬನವಾಸಿ ಎಂಬ ಊರು ಇದೆ. 

ಪೊನ್ನ ಜೈನ ಕವಿ

His most famous extant works in Kannada are "Shantipurana " (shantinatha purana), written in champu style (mixed prose-verse classical composition style inherited from Sanskrit),


೩) ಅನಿಲತನುಜನ ಸಿಂಹಧ್ವನಿಯಂ ಕೇಳ್ದಲ್ಲಿ

ತತ್ಸರೋವರದೆರ್ದೆ ಪವ್ವನೆ ಪಾರುವಂತೆ
ಪಾರಿದು ವನಾಕುಳಂ ಕೊಳದೊಳಿರ್ದ
ತದ್ವಿಹಗಕುಲಂ
ಆ ರವಮಂ ನಿರ್ಜಿತಕಂಠೀರವರವಮಂ
ನಿರಸ್ತಘನರವಮಂ ಕೋಪಾರುಣನೇತ್ರಂ
ಕೇಳ್ದು ನೀರೊಳಿರ್ದುಂ ಬೆಮರ್ದಂ
ಉರಗಪತಾಕಂ// //

ಶ್ರವಣಬೆಳಗೊಳದಲ್ಲಿ ರನ್ನನ ಕೆತ್ತಿದ ಕೈಬರಹ (ಕನ್ನಡ ಅಕ್ಷರಗಳಲ್ಲಿ) ಕವಿ ರತ್ನ ("ಕವಿಗಳಲ್ಲಿ ರತ್ನ") ಎಂದು ಬರೆಯಲಾಗಿದೆ


೪) ನುಡಿದರೆ ಮುತ್ತಿನ ಹಾರದಂತಿರಬೇಕು.
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು. ನುಡಿದರೆ ಸ್ಫಟಿಕದ ಸಲಾಕೆಯಂತಿರಬೇಕು. ನುಡಿದರೆ ಲಿಂಗ ಮೆಚ್ಚಿ ʼಅಹುದಹುದೆʼನಬೇಕು. ನುಡಿಯೊಳಗಾಗಿ ನಡೆಯದಿದ್ದರೆ, ಕೂಡಲಸಂಗಮದೇವನೆಂತೊಲಿವನಯ್ಯಾ?

೫) ಬೆಚ್ಚನೆಯಾ ಮನೆಯಿರಲು
ವೆಚ್ಚಕ್ಕೆ ಹೊನ್ನಿರಲು
ಇಚ್ಛೆಯನರಿವ ಸತಿ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ

ಕಲ್ಲರಳೀ ಹೂವಾಗಿ । ಎಲ್ಲರಿಗೆ ಬೇಕಾಗಿ ।
ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ ।
ಬಲ್ಲವರು ಹೇಳಿ ಸರ್ವಜ್ಞ||

ಕಪ್ಪು ಮೋಡ 

೬) ಪರಮ ಪುರುಷ ನೀ ನೆಲ್ಲಿಕಾಯಿ
ಸರಸಿಯೊಳಾಗಿ ಕರಿ ಕೂಗಿರೆಕಾಯಿ
ಹಿರಿದು ಮಾಡಿದ ಪಾಪ ನುಗ್ಗೇಕಾಯಿ
ಹರಿ ನಿನ್ನ ಜ್ಞಾನ ಬಾಳೆಕಾಯಿ | ೧ |
ಕರಿರಾಜಗೊಲಿದಂತ ಬದನೇಕಾಯಿ
ಅರಿಷಡ್ವರ್ಗದಿ ಒದಗಲಿ ಕಾಯಿ
ಕ್ರೂರ ವ್ಯಾಧಿಗಳೆಲ್ಲ ಹೀರೇಕಾಯಿ
ಘೋರ ದುಷ್ಕೃತ್ಯಗಳ ತೋರೇ ಕಾಯಿ | ೨ |
ಭಾರತಕ ಕಥೆ ಕರ್ಣ ತುಂಬಿದೆ ಕಾಯಿ
ವಾರಿಜಾಕ್ಷನೆ ಗತಿ ಎಂದಿಪ್ಪೆ ಕಾಯಿ
ಮುರಹರ ನಿನ್ನನರಿದವರೇ ಕಾಯಿ
ಗುರು ಕರುಣಾಮೃತ ಉಣಿಸೇ ಕಾಯಿ | ೩ |
ಉರುಗಾಧಿಪತಿ ಎಂಬ ಹೆಸರಿನ ಕಾಯಿ
ಬಾಡದಾದಿಕೇಶವ ನಿನ್ನ ಮೆತ್ತಿದ ಕಾಯಿ | ೪ |

ತರಕಾರಿ ಮುಂಡಿಗೆ 

೭) ವೇದಪುರುಷನ ಸುತನ ಸುತನ ಸ

ಹೋದರನ ಹೆಮ್ಮಗನ ಮಗನ ತ

ಳೋದರಿಯ ಮಾತುಳನ ಮಾವನತುಳ ಭುಜಬಲದಿ

ಕಾದಿ ಗೆಲಿದನಣ್ಣನವ್ವೆಯ

ನಾದಿನಿಯ ಜಠರದಲಿ ಜನಿಸಿದ

ನಾದಿ ಮೂರುತಿ ಸಲಹೊ ಗದುಗಿನ ವೀರನಾರಯಣ


ಪದ-ಅರ್ಥ:

ವೇದಪುರುಷ-ಆದಿಪುರುಷ, ವೇದಗಳನ್ನು ರಕ್ಷಿಸಿದವನು (ವಿಷ್ಣು); ಸುತನ-ಮಗನ (ಬ್ರಹ್ಮನ); ಸುತನ-ಮಗನ (ನಾರದನ); ಸಹೋದರನ-ಒಡಹುಟ್ಟಿದವನ (ಮರೀಚಿಯ); ಹೆಮ್ಮಗನ-ಮೊಮ್ಮಗನ(ದೇವೇಂದ್ರನ); ಮಗನ-ದೇವೇಂದ್ರನ ಮಗನ (ಅರ್ಜುನನ); ತಳೋದರಿಯ-ಹೆಂಡತಿಯ-(ಸುಭದ್ರೆಯ); ಮಾತುಳನ-ಸೋದರಮಾವನ (ಕಂಸನ); ಮಾವನ(ರೂಪನ ಎಂಬ ಪಾಠಾಂತರವೂ ಇದೆ)-ಹೆಣ್ಣುಕೊಟ್ಟ ಮಾವ (ಜರಾಸಂಧನ); ಅತುಳ ಭುಜಬಲದಿ-ಅಪ್ರತಿಮ ಬಾಹುಬಲದಿಂದ;  ಕಾದಿ-ಹೋರಾಡಿ; ಗೆಲಿದನ-ಗೆದ್ದವನ (ಭೀಮನ); ಅಣ್ಣನ-ಹಿರಿಯ ಸಹೋದರನ (ಧರ್ಮಜನ); ಅವ್ವೆಯ-ತಾಯಿಯ (ಕುಂತಿಯ); ನಾದಿನಿಯ-ತಮ್ಮನ ಹೆಂಡತಿಯ (ದೇವಕಿಯ); ಜಠರದಲಿ-ಗರ್ಭದಲ್ಲಿ; ಆದಿಮೂರುತಿ (ಅನಾದಿಮೂರುತಿ ಎಂದೂ ಕೆಲವರು ಅರ್ಥೈಸಿಕೊಳ್ಳುತ್ತಾರೆ. ಅನಾದಿ ಮೂರುತಿ ಎಂದರೆ ಆದಿಯಿಲ್ಲದವನು. ಅರ್ಥದಲ್ಲೇನೂ ವ್ಯತ್ಯಾಸವಾಗುವುದಿಲ್ಲ)-ಸೃಷ್ಟಿಯಲ್ಲಿ ಮೊದಲಿಗನು (ಕೃಷ್ಣ); ಸಲಹೋ-ಕಾಪಾಡು. 


೮) ಕುವರನಾದೊಡೆ ಬಂದ ಗುಣವೇನದರಿಂದ

ಕುವರಿಯಾದೊಡೆ ಕುಂದೇನು
ಇವರಿರ್ವರೊಳೇಳ್ಗೆವಡೆದವರಿಂದ
ಸವನಿಪುದಿಹಪರಸೌಖ್ಯ

೯) ಪದ್ಯಂ ವದ್ಯಂ ಗದ್ಯಂ ಹೃದ್ಯಂ


10) ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!

 

ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!

 

ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 

 

ಭೀಮಬಸವಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

No comments:

Post a Comment