Wednesday, 13 November 2019

ಕಲಿ ಮಗಳೆ ನೀನು



ಕಲಿ ಮಗಳೆ ನೀನು 

ಕಲಿಯಲಿಲ್ಲ ನಾನು, ಕಲಿ ಮಗಳೆ ನೀನು 
ಶೋಷಿತಳು ನಾನು, ಸುಶಿಕ್ಷತಳಾಗು ನೀನು 
ನಿರಾಶ್ರಿತಳು ನಾನು, ನನ್ನಾಶಾಕಿರಣ ನೀನು 

ಬೀದಿ ಬದಿಯಲ್ಲಿ ನಾನು, ಬಾನೆತ್ತರಕೇರು ನೀನು 
ಕೈಗೂಡಲಿ ತಾಯ ಹರಕೆ, ಈಡೇರಲಿ ನಿನ್ನ ಬಯಕೆ 



1 comment: