ರಾಮ ಮಂದಿರ
***
ಕಟ್ಟೋಣ ಬನ್ನಿ ರಾಮ ಮಂದಿರವನು
ಅಯೋಧ್ಯಾ ಯೋಧನಿಗೆ ಗುಡಿಯೊಂದನು
ಶತ ಶತಮಾನಗಳ ಕನಸ ನನಸನ್ನು
ಭಾವೈಕ್ಯತೆಯ ಗೂಡೊಂದನು
ಪಿತೃ ವಾಕ್ಯ ಪರಿಪಾಲಕನೆನ್ನಿ, ಭ್ರಾತೃ ಪ್ರೇಮಿಯೆನ್ನಿ
ದುಷ್ಟ ಶಿಕ್ಷಕನೆನ್ನಿ, ಶಿಷ್ಟ ರಕ್ಷಕನೆನ್ನಿ
ರಾಮರಾಜ್ಯದ ಮಾದರಿಯ ಕಟ್ಟಿಕೊಟ್ಟವನು
ಮಿತ್ರರ ಪೊರೆವನೆನ್ನಿ, ಸೀತಾರಾಮನೆನ್ನಿ
ಮರ್ಯಾದಾ ಪುರುಷೋತ್ತಮನವನು
ಚಿತ್ರಕೂಟ, ದಂಡಕಾರಣ್ಯಗಳ ಬಳಸಿ
ಪಂಚವಟಿಯಲ್ಲಿ ಮಾಯಾಮೃಗದ ಬೆನ್ನೇರಿ
ಕಿಷ್ಕಿಂದೆಯಲಿ ಹನುಮನ ಜೊತೆಗೂಡಿ
ರಾಮೇಶ್ವರದಿ ಶಿವನನಾರಾಧಿಸಿ
ಭರತ ಖಂಡವ ಬೆಸೆದ ದಿವ್ಯ ಚೇತನ ಅವನು
ಕೇವಟನ ದೋಣಿಯನೇರಿದವನು
ಜಟಾಯುವಿಗೆ ಕೈವಲ್ಯ ಕರುಣಿಸಿದವನು
ಶಬರಿಯಾಥಿತ್ಯಕೆ ಮಾರುಹೋದವನು
ಅಳಿಲ ಸೇವೆಯ ಮೆಚ್ಚಿ ಹರಸಿದವನು
ದುರ್ಬಲರ ಕಾವ ಕರುಣಾ ಸಿಂಧುವವನು
ವಾಲ್ಮೀಕಿ ರಾಮಾಯಣದ ಹರಿಕಾರನಾದ
ಕಬೀರರ ಕಾವ್ಯಾಮೃತಕೆ ತಾ ಧಾರೆಯಾದ
ತ್ಯಾಗರಾಜರಿಗೆ ಜಗದಾನಂದ ಕಾರಕನಾದ
ರಾಮಾಯಣ ದರ್ಶನದಿ ಕನ್ನಡದ ಕಂಪಾದ
ನಮ್ಮ ಭಾವೈಕ್ಯತೆಯ ಗುಪ್ತಗಾಮಿನಿ ಅವನು
***
ರಚನೆ: ಲಕ್ಷ್ಮೀನಾರಾಯಣ ಕೆ .
ಮೊಬೈಲ್ : ೯೮೪೫೫ ೬೨೬೦೩
ಮಾಜಿ ಬ್ಯಾಂಕರ್
೧೦೪, ೨ನೇ ಮೇನ್
ಶ್ರೇಯಸ್ ಕಾಲೋನಿ
ಜೆ.ಪಿ. ನಗರ, ೭ನೇ ಹಂತ
ಬೆಂಗಳೂರು ೫೬೦ ೦೭೮
ಶ್ರೀ ರಾಮ ಕವನ ಕವಿಗೋಷ್ಠಿ
ಮಾನ್ಯರೆ,
ಶ್ರೀ ರಾಮ ಕವನ ಕವಿಗೋಷ್ಠಿಗೆ ನನ್ನ ಸ್ವರಚಿತ ಕವನವನ್ನು ಕಳುಹಿಸುತ್ತಿದ್ದೇನೆ.
ಧನ್ಯವಾದಗಳು
ಲಗತ್ತಿಸಿದ್ದೇನೆ.
ಮುಂದುವರೆದಿದೆ......
No comments:
Post a Comment