'ಕೋವಿಡ್ ಮಾನವ ಸೃಷ್ಟಿಯೇ?' ಎಂಬುದೊಂದು ತನಿಖೆಯ ವಿಚಾರ. ಆದರೆ, ಈ ಕಾಲ್ಪನಿಕ ಕಾದಂಬರಿಯ ಕಥಾವಸ್ತುವಿನ ವಿಸ್ತಾರ ಇನ್ನೂ ವಿಶಾಲವಾದದು. ಚೀನಾದಿಂದ ಹೊರಹೊಮ್ಮಿದ 'ಕೋವಿಡ್-೧೯' ಎಂಬ ಮಹಾಮಾರಿ, ಈಗ ಇಡೀ ವಿಶ್ವವನ್ನಾವರಿಸಿದೆ. ಕಷ್ಟಸಹಿಷ್ಣುವಾದ ಮನುಕುಲವು, ಕೋವಿಡ್-೧೯ಕ್ಕಿಂತಲೂ ಘೋರವಾದ ಮಹಾಮಾರಿಯನ್ನು ಕಳೆದ ಶತಮಾನದಲ್ಲೇ ಎದುರಿಸಿ ಜಯಿಸಿಯಾಗಿದೆ. ಪುಟ್ಟ ವೈರಾಣುವೊಂದಕ್ಕೆ ಬೆದರಿ, ಕೈ ಕಟ್ಟಿ ಕೂರುವ ಜಾಯಮಾನ ಮಾನವನದಲ್ಲ. 'ಜೀವಗಳು ಮತ್ತು ಜೀವನೋಪಾಯಗಳ (Lives Vs Livelihoods)' ನಡುವಿನ ಹೋರಾಟ, ವಿಶ್ವಾದ್ಯಂತ ಮುಂದುವರೆಯುತ್ತಿರುವುದು ಒಂದು ಧನಾತ್ಮಕ ಬೆಳವಣಿಗೆಯೇ ಸರಿ.
ಇಂದೊಂದು ಕಾಲ್ಪನಿಕ ಕಾದಂಬರಿಯಾದರೂ, ಇಲ್ಲಿನ ಪಾತ್ರಗಳ ಮತ್ತು ಕಥೆಗಳ ಸೃಷ್ಟಿಗೆ, ನಮ್ಮ ಸುತ್ತಲೂ ಜರುಗುತ್ತಿರುವ ನೈಜ ಘಟನೆಗಳೇ ಮೂಲಾಧಾರ. ಮನುಕುಲ ಹಾಗೂ ನಮ್ಮ ದೇಶ ಭಾರತ, ಕೋವಿಡ್ ವಿರುದ್ಧ ನಡೆಸುತ್ತಿರುವ ಸಮರದ ಪಕ್ಷಿನೋಟವನ್ನು, ಓದುಗರ ಮುಂದಿಡುವುದೇ ಈ ಪುಸ್ತಕದ ಉದ್ದೇಶ.
No comments:
Post a Comment