Thursday, 20 July 2023

Sankshipta Ramayana - Adamya Trust

 ಓಂ ನಮೋ ವೆಂಕಟೇಶಯನಮಃ! 


ಓಂ ನಮೋ ನರಸಿಂಹಯನಮಃ!!


ಓಂ ನಮೋ ಶ್ರೀ ರಾಮಾಯನಮಃ!!!

*******

ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.

ಸಂಕ್ಷಿಪ್ತ ರಾಮಾಯಣದ ದ ಇಂದಿನ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದವನ್ನು ಬೇಡುತ್ತೇವೆ. 

 *********

ಈಗ ಸುಪ್ರಸಿದ್ಧ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ಕೇಳೋಣ.  ಈ ಕೀರ್ತನೆಯಲ್ಲಿ ರಾಮಾಯಣದ  ಉಲ್ಲೇಖ  ಇರುವುದನ್ನು ತಾವು ಕಾಣಬಹುದು. 

ಅಣ್ಣಮ್ಮಚಾರ್ಯರು ಹೇಳ್ತಾರೆ--------- ಶ್ರೀಮನ್ನಾರಾಯಣನೇ ತಿರುಪತಿ ವೆಂಕಟೇಶ್ವರ.  ತಿರುಪತಿ ವೆಂಕಟೇಶ್ವರರೇ ಶ್ರೀ ರಾಮ ಅಂತ. 

ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

ಅತಿಶಯ ಮಹಿಮೆಗಳಲ್ಲಿ ಮೆರೆಯುವಎಲ್ಲರಿಗಾಧರನು ತಾನೇ 

ಇವನಿಗಾರೂ ಸರಿ ದೈವವ ಕಾಣೆನುಎಲ್ಲೆಲ್ಲಿ ಅರಸಲು ಇವನೇ 

ಶ್ರೀವೆಂಕಟ ಪ್ರಭುವು

(Full song) 

ಹದಿನೈದನೇ ಶತಮಾನದ ಮಹಾನ್  ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ತಾವೀಗ ಕೇಳಿದಿರಿ. ಅಣ್ಣಮಾಚಾರ್ಯರು ನಮ್ಮ ಪುರಂದರದಾಸರ ಸಮಕಾಲೀನರು, ಅಂದರೆ ಈ ಎರಡು ಮಹಾನುಭಾವರು ಹದಿನೈದನೇ ಶತಮಾನದಲ್ಲಿ ಒಂದೇ ಕಾಲದಲ್ಲಿ ಜೀವಿಸಿದ್ದವರು. 

ತಿರುಪತಿ ಅಧಿಪತಿಯಾದ  ಶ್ರೀ ವೆಂಕಟೇಶ್ವರರ ಮೇಲೆ ಸಹಸ್ರಾರು ಕೀರ್ತನೆಗಳನ್ನು ಅಣ್ಣಮಾಚಾರ್ಯರು ರಚಿಸಿದ್ದಾರೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು ಗಾಯಕಿ  ಭಾರತ ರತ್ನ  ಎಂ.ಎಸ್. ಸುಬ್ಬಲಕ್ಷ್ಮಿಯವರ ಕೋಗಿಲೆ ಕಂಠದಲ್ಲಿ ಅಣ್ಣಮಾಚಾರ್ಯರ ಹಲವು ಕೀರ್ತನೆಗಳನ್ನು ಧ್ವನಿಮುದ್ರಿಸಿ ಪ್ರಕಟಿಸಿದ ಮೇಲೆ ಆ ಮಹಾನ್ ಹರಿದಾಸರ  ಕೀರ್ತನೆಗಳು ಹೆಚ್ಚು ಜನಪ್ರಿಯವಾದವೆಂದರೆ ತಪ್ಪಾಗಲಾರದು. ಅಣ್ಣಮಾಚಾರ್ಯರ ಈ ಕೀರ್ತನೆಯ ಪರಿಚಯ ತಮ್ಮೆಲರಿಗೂ ಇದ್ದೇ ಇದೆ ಅಂತ ಭಾವಿಸ್ತೇನೆ.   


Pallavi   

SreemannArAyaNa SreemannArAyaNa

SreemannArAyaNa nee Sree pAdamE SaraNu ||            

 

Charanam 1         

kamalAsatee mukha kamala kamala hita

kamala priya kamalEkshaNA

kamalAsana hita garuDa gamana Sree

kamala nAbha nee pada kamalamE SaraNu ||  


ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ವೆಂಕಟೇಶ್ವರರ ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ ಅಂತಾರೆ........ ! ವೆಂಕಟೇಶ್ವರ ಅಂದ್ರೆ ಬರೀ ಕಲ್ಲು ಕಣ್ರೀ ಅಂತಾರೆ.....!! ಸಭಿಕರುಗಳೇ......ಸ್ವಲ್ಪ ವಿಚಾರ ಮಾಡೋಣ. 

ಎರಡು ವರ್ಷಗಳ ಹಿಂದೆ  ಇಡೀ ಪ್ರಪಂಚವನ್ನೇ ಕೋವಿಡ್ ಮಹಾಮಾರಿ ಕಾಡಿತ್ತು. ಅಮೇರಿಕಾ, ಚೀನಾದಂತ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದ್ವು.  ಆದರೂ ನಮ್ಮ ಭಾರತ ದೇಶ ಮಾತ್ರ ಕೋವಿಡ್ ರೋಗವನ್ನು ಸುಲಭವಾಗೇ  ಗೆದ್ದಿತು. ಏಕಪ್ಪಾ ಅಂದ್ರೆ, ವೆಂಕಟೇಶ್ವರರ ಆಶೀರ್ವಾದ ನಮ್ಮ ದೇಶದ ಮೇಲಿತ್ತು. 

ನಮ್ಮ ನೆರೆ ರಾಷ್ಟ್ರಗಳು ನಮ್ಮ ದೇಶದ ಮೇಲೆ ಸಂಚು ಮಾಡಿ ಕತ್ತಿ  ಮಸೆಯುತ್ತಿರುವುದು ಹೊಸದೇನಲ್ಲ.  ಆದರೂ ನಮ್ಮ ದೇಶ ಸುರಕ್ಷಿತವಾಗಿ ಇದೆ ಅಂದ್ರೆ, ಅದು ವೆಂಕಟೇಶ್ವರರ ರಕ್ಷಾ ಕವಚ ನಮ್ಮ ದೇಶಕ್ಕಿರುವದರಿಂದ ಮಾತ್ರ ಎಂದೇ ನನ್ನ ಭಾವನೆ. 

ನಮ್ಮ ನೆರೆ ರಾಷ್ಟ್ರಗಳಲ್ಲಿ ಹಸಿವು, ಅಶಾಂತಿ ತಾಂಡವವಾಡುತ್ತಿರುವಾಗ ನಮ್ಮ ದೇಶದಲ್ಲಿ ಸುಭಿಕ್ಷ, ಶಾಂತಿ, ನೆಮ್ಮದಿ ನೆಲಸಿದೆ ಅಂದ್ರೆ, ಅದು ನಮ್ಮ ತಿರುಪತಿ ಬಾಲಾಜಿಯ ಆಶೀರ್ವಾದದಿಂದಲೇ ಎಂಬುದು ನಮ್ಮೆಲ್ಲರ ಅಚಲವಾದ ನಂಬಿಕೆ.

ಅಂದ ಹಾಗೆ ಸಭಿಕರುಗಳೇ----------------ಮೊನ್ನೆ ನಮ್ಮ ದೇಶ ಚಂದ್ರಯಾನ-೩ ರಾಕೆಟ್ ಅನ್ನು ಚಂದ್ರನತ್ತ ಹಾರಿಬಿಟ್ಟಿದ್ದು ತಮ್ಮಗಳಿಗೆ ನೆನಪಿನಲ್ಲಿರಬಹುದು.  ರಾಕೆಟ್ ಉಡಾವಣೆಗೆ ಮುನ್ನ ನಮ್ಮ ವಿಜ್ಞಾನಿಗಳು ತಿರುಪತಿಗೆ ಹೋಗಿ  ರಾಕೆಟ್ನ ಸಣ್ಣ ಆಕೃತಿಯನ್ನು ತಿರುಪತಿ ತಿಮ್ಮಪ್ಪನಿಗೆ ಅರ್ಪಿಸಿ ಚಂದ್ರಾಭಿಯಾನದ ಯಶಸ್ಸಿಗಾಗಿ ಪ್ರಾರ್ಥಿಸಿದ್ರು. ಅದ್ರಲ್ಲಿ ತಪ್ಪೇನಿದೆ ಅಂತೀನಿ? ಕುಹಕಿಗಳು ಅದ್ರಲ್ಲೂ ತಪ್ಪು ಹುಡುಕಿದ್ದು ಎಷ್ಟು ಕ್ಷುಲ್ಲಕ ಅಲ್ಲ್ವಾ? ನಮ್ಮ ವಿಜ್ಞಾನಿಗಳು ಮೂಢ ನಂಬಿಕೆಯನ್ನು ಹರಡ್ತಾ ಇದ್ದಾರೆ ಅಂದದ್ದು ಎಂಥ ನಾಚಿಕೆಗೇಡಿನ ವಿಷಯ ಅಲ್ವ?--------- ಈ ಕುಹಕಿಗಳು ಎಷ್ಟು          ದಡ್ಡ್ರಪ್ಪ ಅಂದ್ರೆ, ಅವರ್ಗೆ ಮಂಗಳಯಾನ ಹಾಗೂ ಚಂದ್ರಯಾನದ ವ್ಯತ್ಯಾಸವೇ ತಿಳಿಯದು. ಮಂಗಳಯಾನದ ಯಶಸ್ಸಿಗೆ ತಿರುಪತಿ ಬಾಲಾಜಿಯನ್ನು ಪ್ರಾರ್ಥಿಸಲು ಹೋಗಿದ್ದು ತಪ್ಪು ಅಂತ ಹೇಳಿಕೆ ಕೊಟ್ಟಿದ್ದಾರೆ! ಏನ್ ಹೇಳೋಣ ಹೇಳಿ ಅವರ ದಡ್ಡತನಕ್ಕೆ?


  ನಮ್ಮ ವಿಜ್ಞಾನಿಗಳಿಗೆ ಅವರದೇ ಆದ ಭಕ್ತಿ ಹಾಗೂ ನಂಬಿಕೆಗಳಿದ್ರೆ  ಏನು ತಪ್ಪು ಅಂತೀನಿ? ವೆಂಕಟೇಶ್ವರರ ಕೃಪೆ, ಆಶೀರ್ವಾದ ನಮ್ಮ ಚಂದ್ರಯಾನದ ಮೇಲೆ ಇರೋದ್ರಿಂದ ಈ ಬಾರಿಯ ಚಂದ್ರಾಭಿಯಾನ ಯಶಸ್ಸು ಕಂಡೆ ಕಾಣುತ್ತೆ ಅನ್ನೋದೋ ನಮ್ಮೆಲ್ಲರ ವಿಶ್ವಾಸ ಅಲ್ಲ್ವೆ? ಏನಂತೀರಿ? 

ತಿರುಪತಿ ತಿಮ್ಮಪ್ಪನ್  ಪಾದಕ್ಕ್ ಗೋವಿಂದ ------------------ಗೋವಿಂದ 


ಶ್ರೀ ರಾಮನ್ ಪಾದಕ್ ಗೋವಿಂದ-------------------------ಗೋವಿಂದ 


ಆಂಜನೇಯನ್ ಪಾದಾಕ್ ಗೋವಿಂದ--------------------ಗೋವಿಂದ 


ಈಗ ನಮ್ಮ ಅಣ್ಣಮ್ಮಚಾರ್ಯರು ರಾಮಾವತಾರವನ್ನ ಹೇಗೆ ವರ್ಣಿಸಿದರೆ ಕೇಳೋಣ. 


ಇವನಿಗಾರೂ ಸರಿ ದೈವವ ಕಾಣೆನು 

ಎರಡನೇ ನುಡಿ------------------


ತಿಳಿದು ನಭೋಮಂಡಲದೀ ಹುಡುಕಿದೆ,  ತ್ರಿವಿಕ್ರಮಾಕೃತಿ ನಿಂತಿತು..

ಹಲವು ವೀರರನ್ವೇಷಿಸಿ ನೋಡಿದೆ, ಪರಶುರಾಮನೊಬ್ಬನಿರುವನು..

ಶಿವನ ಲಹರಿಯಲಿ ಪಾರ್ವತಿ ಅರಸಿದ ತಾರಕ ಬ್ರಹ್ಮನೇ ರಾಘವನು 

ಅಂದ ಹಾಗೆ, ರಾಮಾಯಣ ನಡೆದಿದ್ದು ಯಾವಾಗ?  ರಾಮನ ಜನನ ಚೈತ್ರ ಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾನ್ಹ ೧ ಘಂಟೆಗಾಯ್ತು ಅಂತ ವಾಲ್ಮೀಕಿಗಳು ರಾಮಾಯಣದಲ್ಲಿ ಬರೆದಿದ್ದರೆ. ರಾಮನ ಜನ್ಮ ಕುಂಡಲಿಯನ್ನೇ ಬರೆದಿರುವ ವಾಲ್ಮೀಕಿಗಳು ರಾಮ ಜನನದ ಸಮಯದಲ್ಲಿದ್ದ ಗ್ರಹಕೂಟಗಳ ಸ್ಥಾನವನ್ನು ಬರೆದಿಟ್ಟಿದ್ದಾರೆ. ಇಂದಿನ ವಿಜ್ಞಾನಿಗಳು ತಮ್ಮ ಪ್ಲಾನೆಟ್ ಸಾಫ್ಟ್ವೇರ್ ನಲ್ಲಿ  ಶೋಧಿಸಿದಾಗ, ವಾಲ್ಮೀಕಿಗಳು ದಾಖಲಿಸಿರುವ ಗ್ರಹಸ್ಥಾನಗಳು ಕ್ರಿಸ್ತ ಪೂರ್ವ ೫೧೧೪ರ ಏಪ್ರಿಲ್ ೧೦ರಂದು ಇತ್ತು ಎಂದು ಒಪ್ಪಿಕೊಳ್ಳುತ್ತಾರೆ. ಕ್ರಿಸ್ತ ಪೂರ್ವದ ೫೦೦೦ ವರ್ಷ ಪ್ಲಸ್ ಕ್ರಿಸ್ತ ಶಕದ ಇಂದಿನ ೨೦೦೦ ವರ್ಷ……….ಅಂದರೆ ರಾಮಾಯಣ ನಡೆದದ್ದು ಇಂದಿಗೆ ಸುಮಾರು ಏಳು ಸಾವಿರ ವರ್ಷಗಳ ಹಿಂದೆ. ಆದರೂ ವಿತಂಡ ವಾದಿಗಳು ಇಷ್ಟೇ ಆಧಾರ ಸಾಲದು ಅಂತ ತಕರಾರು ಮಾಡ್ತಾರೆ. ಅಂತಹವರಿಗೆ ನಾನ್ ಹೇಳೋದೆನಂದ್ರೆ, ರಾಮ ಸೇತು ಎನ್ನೋದು ಈಗಲೂ ಇದೆ. ಅದು ಶಿಥಿಲವಾಗಿ ಸಾಕಷ್ಟು ಹಾಳಾಗಿರಬಹುದು. ಆದರೂ  ನಮ್ಮ ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ತುದಿಯವರೆಗೆ ಇರುವ ರಾಮಸೇತುವನ್ನು ಬ್ರಿಟಿಷರು ಆಡಮ್'ಸ್ ಬ್ರಿಡ್ಜ್ ಎಂದು ಕರೆದರು. ಕಾರ್ಬನ್ ಡೇಟಿಂಗ್ ಅನ್ನೋ ತಂತ್ರದ ಪ್ರಕಾರ ರಾಮಸೇತುಗೆ ೭೦೦೦ ವರ್ಷಗಳಾಗಿರಬಹುದು ಎಂಬುದನ್ನು ಇಂದಿನ ವಿಜ್ಞಾನಿಗಳು ಒಪ್ಪುತ್ತಾರೆ. ರಾಮಾಯಣ ನಡೆದ್ದದ್ದು ನಿಜ, ರಾಮಾವತಾರವಾಗಿದ್ದು ೭೦೦೦ ವರ್ಷಗಳ ಹಿಂದೆ ಎಂಬುದಕ್ಕೆ ರಾಮ ಸೇತು ಮತ್ತೊಂದು ಆಧಾರ. 

ಪ್ರತಿದಿನ ನಾವೆಲ್ಲ ಈ ರಾಮಸ್ತೋತ್ರವನ್ನ ಜಪ ಮಾಡೇ ಮಾಡ್ತೇವೆ. 

ರಾಮಾಯ ರಾಮಭದ್ರಾಯ 

ರಾಮಚಂದ್ರಾಯ ವೇದಸೇ 

ರಘುನಾಥಾಯ ನಾಥಾಯ 

ಸೀತಾಯ ಪತೆಯೇನಮಃ 

ಇದು ದಶರಥನ ಅರಮನೆಯಲ್ಲಿ ಚಾಲ್ತಿಯಲ್ಲಿದ್ದಂತಹ ಶ್ಲೋಕ. "ರಾಮಾಯ ",  ರಾಮನನ್ನು ಪ್ರೀತಿಯಿಂದ "ರಾಮ" ಅಂತ ಕರೆಯುತ್ತಿದ್ದವರು  ಮಹಾರಾಜಾ ದಶರಥ. ರಾಮಭದ್ರಾ ಅಂತ ರಾಮನನ್ನು ಕರೆಯುತ್ತಿದ್ದವರು ತಾಯಿ ಕೌಸಲ್ಯೆ. ರಾಮಭದ್ರ ಎಂದರೆ ರಾಮ ಎಲ್ಲರಿಗೂ ಮಂಗಳವನ್ನು ಉಂಟು ಮಾಡುವವನು ಎಂದು ಅರ್ಥ.  ರಾಮಚಂದ್ರಾಯ____________,  ರಾಮನನ್ನು ರಾಮಚಂದ್ರ ಎಂದು ಮೊದಲು ಕರೆದವರು ಯಾರು? ನಿಮಗೆಲ್ಲಾ ಆಶ್ಚರ್ಯವಾಗಬಹುದು, ಅದು ಮಂಥರೆ. ಮಂಥರೆ ಮಗುವಾಗಿದ್ದ ರಾಮನ್ನನ್ನು  ಬಹುವಾಗಿ ಪ್ರೀತಿಸುತ್ತಿದ್ದದ್ದು ಹಲವರಿಗೆ ಗೊತ್ತಿಲ್ಲದ ವಿಷಯವಿರಬಹುದು. 

ಒಮ್ಮೆ ರಾಮ ಇನ್ನು ಮೂರು ವರ್ಷದ ಮಗುವಾಗಿದ್ದಾಗ, ಹುಣ್ಣಿಮ್ಮೆಯ ಒಂದು ದಿನ ನನಗೆ ಚಂದ್ರ ಬೇಕು, ನನಗೆ ಚಂದ್ರ ಬೇಕು ಅಂತ ರಚ್ಚೆ ಹಿಡಿದು ಅಳುವುದಕ್ಕೆ ಶುರುಮಾಡಿದ್ದನಂತೆ. ಮೂರು ಜನ ಮಹಾರಾಣಿಯರು ಮತ್ತು ಅರಮನೆಯ ಸಖಿಯರೆಲ್ಲ ರಾಮನನ್ನು ಸಮಾಧಾನಪಡಿಸಲಾಗದೆ ಕಂಗಾಲಾಗಿಹೋಗಿದ್ದರಂತೆ. ಆಗ ಜಾಣೆಯಾದ ಮಂಥರೆ ಬೋಗುಣಿಯೊಂದರಲ್ಲಿ ನೀರನ್ನು ತುಂಬಿ, ಆ ನೀರಿನಲ್ಲಿ ಚಂದ್ರನ ಪ್ರತಿಬಿಂಬವನ್ನು ರಾಮನಿಗೆ ತೋರಿಸಿದಾಗ ರಾಮ ಸಮಾಧಾನಗೊಂಡನಂತೆ. ಸಂತೋಷ ಹಾಗು ಹೆಮ್ಮೆಯಿಂದ ಮಂಥರೆ ಮಗು ರಾಮನನ್ನು ಎತ್ತಿಕೊಳ್ಳಲು ಹೋದಾಗ, ಮಹಾರಾಣಿ ಕೌಶಲ್ಯ ಅವಳನ್ನು ತಡೆದಳಂತೆ. "ವಕ್ರ ಹೆಂಗಸೇ, ವಿಕಾರವಾದವಳೇ" ಎಂದು ಕೌಸಲ್ಯೆ ಮಂಥರೆಯನ್ನು ಹಿಯ್ಯಾಳಿಸಿದಳಂತೆ. ಆ ಅವಮಾನದ ಸೇಡನ್ನು ಮನಸ್ಸಿನಲ್ಲೇ ಇಟ್ಟುಕೊಂಡ ಮಂಥರೆ ಸಮಯಕ್ಕಾಗಿ ಕಾದು, ರಾಮನನ್ನು ಕಾಡಿಗೆ ಕಳುಹಿಸಿವಂತೆ ಮಾಡಿದ್ದು ನಿಮಗೆಲ್ಲ ತಿಳಿದ ವಿಷಯವೇ. 

ಹಾಗಂತ ನಾವು ಮಂಥರೆ-ಕೈಕಯೀಯರನ್ನು ಕೆಟ್ಟವರು ಅಂತ ಹೀಯಾಳಿಸಿದರೆ, ಅದು ತಪ್ಪು. ಮಂಥರೆ-ಕೈಕಯೀಯರು ಸಂಚು ಮಾಡದೇ ರಾಮನನ್ನು ಅಯೋಧ್ಯೆಯಲ್ಲೇ ಇರಿಸಿಕೊಂಡಿದ್ದಾರೆ, ರಾಮ ರಾಮ ಆಗ್ತಾನೇ ಇರಲಿಲ್ಲ. ರಾಮಾಯಣ ನಡೆಯುತ್ತಲೇ ಇರಲಿಲ್ಲ, ರಾವಣನ ಸಂಹಾರ ಆಗುತ್ತಲೇ ಇರಲಿಲ್ಲ. ಆದುದರಿಂದ ಮಂಥರೆ-ಕೈಕಯೀಯರು ಪ್ರಾತಃಸ್ಮರಣೀಯರು ಎಂದರೆ ತಪ್ಪಲ್ಲ.   

ಹರಿಕಥೆ ಅಂದ್ಮೇಲೆ ಒಂದು ಉಪಕಥೆ ಇರಲೇಬೇಕು. ಈಗೊಂದು ಉಪಕಥೆ ನನ್ನ ಕಥೆ ಪ್ರಜ್ಞಾಳಿಂದ. 

ಈಗ ರಾಮನ ಭಜನೆಯನ್ನು ಮಾಡೋಣ. 

ಶ್ರೀ ರಾಮಚಂದ್ರ ಕೃಪಾಳು ಭಜಮನಾ...... 


ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ಮತ್ತೊಬ್ಬ ಮಹಾನ್ ದೈವ  ಅಂದರೆ ನಮ್ಮ ಆಂಜನೇಯ. ಆಂಜನೇಯನ ಸ್ಮರಣೆ ಮಾಡದೇ ಇದ್ದರೆ ರಾಮಾಯಣವೇ ಅಪೂರ್ಣ ಎಂಬುದು ನಮ್ಮೆಲ್ಲರ ಭಾವನೆ. ರಾಮನ ಬಂಟ ಹನುಮಂತನಿಲ್ಲದೆ ಹೊಗ್ಗಿದ್ರೆ ಶ್ರೀ ರಾಮ ರಾವಣವನ ಸಂಹಾರವನ್ನ ಮಾಡೋಕೆ ಆಗ್ತಾ ಇರಲಿಲ್ಲ ಎಂಬುದೂ ನಮಗೆಲ್ಲ ಗೊತ್ತು. ಸ್ವಲ್ಪ ನೆನಸಿಕೊಳ್ಳೋಣ.... 

ವಾನರ ಸೇನೆ ಸೀತೆಯನ್ನು ಹುಡುಕುತ್ತಾ ರಾಮೇಶ್ವರಂ ನ ಸಮುದ್ರ ತೀರದಲ್ಲಿ ಬಂದು ನಿಂತಿರುತ್ತದೆ. ನೂರು ಯೋಜನದಷ್ಟು ದೂರವಿದ್ದ ಲಂಕೆಯನ್ನು ಯಾರು ಹಾರಿ ತಲುಪಬಲ್ಲರು ಎಂಬ ಚರ್ಚೆ ಆಗ್ತಾ ಇರುತ್ತೆ. ಆಗ ನಮ್ಮ ಹನುಮಂತ ಯಾವ ಜಂಬವನ್ನು ಕೊಚ್ಚಿಕೊಳ್ಳದೆ, ಒಂದು ಮೂಲೇಲಿ ಕೂತಿರ್ತಾನೆ. ಆಗ ಹಿರಿಯರಾದ ಜಾಂಬವಂತರು ಹನುಮನ ಹತ್ತಿರ ಬಂದು ಹೇಳ್ತಾರೆ. "ಹನುಮಾ, ನೀನು ಪವನ ಪುತ್ರ…….., ಚಿರಂಜೀವಿ.  ಬಾಲಕನಾಗಿದ್ದಾಗಲೇ ಸೂರ್ಯನನ್ನು ಒಂದು ಹಣ್ಣು ಎಂದು ತಿಳಿದ, ಅದನ್ನು ಪಡೆಯಲು ಆಕಾಶಕ್ಕೆ ಹಾರಿದ್ದ ಧೀರ ನೀನು. ಸೀತಾನ್ವೇಷಣೆಯ ಕಾರ್ಯ ನಿನ್ನಿಂದ ಮಾತ್ರ ಸಾಧ್ಯ" ಎಂದು ಹನುಮಂತನನ್ನು ಹುರಿದುಂಬಿಸುತ್ತಾರೆ. ಉತ್ತೇಜಿತನಾದ ಹನುಮಂತ ಒಂದು ದೊಡ್ಡ ಬೆಟ್ಟದ ಮೇಲೆ ನಿಂತು ತನ್ನ ದೇಹವನ್ನು ಬೃಹದಾಗಿ ಬೆಳಸಿ ಒಮ್ಮೆ ಘರ್ಜಿಸುತ್ತಾನೆ. ಅಲ್ಲಿದ್ದವರಿಗೆಲ್ಲ ಹನುಮಂತನ ವಿಶ್ವರೂಪದ ದರ್ಶನವೇ ಆಯ್ತು ಅಂತಲೇ ಹೇಳ್ಬಹುದು. 

ಘಟಿಕಾಚಲದಿ ನಿಂತ ಶ್ರೀ ಹನುಮಂತ 


ಸೀತಾಮಾತೆಯನ್ನು ಹುಡುಕುವ ಸಲುವಾಗಿ ಗಗನಕ್ಕೆ ನೆಗೆದು ಸಮುದ್ರವನ್ನು ದಾಟುವ ಭರದಲ್ಲಿದ್ದ ಹನುಮಂತನಿಗೆ ಎದುರಾದವಳು ಸುರಸೆ ಎಂಬ ನಾಗಮಾತೆ. ದೇವತೆಗಳು ಅವನನ್ನು ತನಗೆ ಆಹಾರವಾಗಿ ಇತ್ತಿದ್ದಾರೆಂದು ತಿಳಿಸಿ, ತನ್ನ ಬಾಯೊಳಗೆ ಪ್ರವೇಶಮಾಡಲು ಹೇಳುತ್ತಾಳೆ. ಹನುಮಂತನು ಆಕೆಯ ಸವಾಲನ್ನು ಸ್ವೀಕರಿಸಿ ಚಮತ್ಕಾರದಿಂದ ಅವಳ ಬಾಯನ್ನು ಹೊಕ್ಕು ಹೊರಬಂದು ಜಯಶೀಲನಾಗುತ್ತಾನೆ. ತನ್ನ ಆಕಾಶಯಾನವನ್ನು ಮುಂದುವರೆಸುತ್ತಾನೆ.


ಆನಂತರ, ಮತ್ತೊಬ್ಬ ರಕ್ಕಸಿ ಸಿಂಹಿಕೆ ಹನುಮಂತನಿಗೆ ವಿಘ್ನವೊಡ್ಡುತ್ತಾಳೆ. ತನ್ನ ಇರವಿನ ಸುಳಿವೇ ಕೊಡದೆ, ಕುಟಿಲತೆಯಿಂದ ಹನುಮಂತನ ನೆರಳನ್ನು ಕಬಳಿಸಿ ನುಂಗಲು ಹವಣಿಸುತ್ತಾಳೆ.  ಹನುಮಂತ ಆಕೆಯನ್ನು ಸಂಹರಿಸಿ ವಿಜಯಶಾಲಿಯಾಗಿ ಲಂಕೆಯತ್ತ ಮುನ್ನುಗ್ಗುತ್ತಾನೆ.


ಕೊನೆಯಲ್ಲಿ ಅವನು ರಾವಣನಗರಿಯನ್ನು ಪ್ರವೇಶ ಮಾಡುವಾಗ ದ್ವಾರಪಾಲಕಿ ಲಂಕಿಣಿಯನ್ನು ಎದುರಿಸುತ್ತಾನೆ. ತನ್ನನ್ನು ಸೋಲಿಸದೆ ಒಳಗೆ ಪ್ರವೇಶವಿಲ್ಲವೆಂದು ಹೇಳಿ ಆಕೆ ಹನುಮಂತನ ಮೇಲೆ ಆಕ್ರಮಣ ಮಾಡಿದಾಗ, ಅವನು ಆಕೆಗೆ ಸೂಕ್ತವಾಗಿ  ಪ್ರಹಾರಮಾಡಿ ಸೋಲಿಸುತ್ತಾನೆ; ಮತ್ತು ಲಂಕಾಪ್ರವೇಶ ಮಾಡುತ್ತಾನೆ.

ಅಶೋಕವನದಲ್ಲಿದ ಸೀತಾದೇವಿಯನ್ನ ಹನುಮಂತ ಭೇಟಿ ಮಾಡಿ ಅವಳಿಗೆ ಶ್ರೀ ರಾಮ ನೀಡಿದ್ದ ಮುದ್ರೆಯುಂಗುರವನ್ನು ನೀಡಿದಾಗ ಸೀತೆಗೆ ನಂಬಿಕೆ ಬರುತ್ತದೆ. ಸೀತೆಯ ದುಃಖ ನಿವಾರಣೆಯಾಗುತ್ತೆ. ಸೀತೆ ತನ್ನ ಗುರುತಿಗಾಗಿ ರಾಮನಿಗೆ ಕೊಡಲು ತನ್ನ ಚೂಡಾಮಣಿಯನ್ನು ಹನುಮಂತನಿಗೆ ಕೊಡುತ್ತಾಳೆ. 

ಇಷ್ಟಕ್ಕೆ ಸಮಾಧಾನಗೊಳ್ಳದ ಹನುಮಂತ ರಾವಣನ ಸೇನೆಯೊಡನೆ ಏಕಾಂಗಿಯಾಗಿ ಹೋರಾಡಿ ರಾವಣನ ಆಸ್ಥಾನವನ್ನ ತಲಪುತ್ತಾನೆ.  ರಾವಣನ ಆಜ್ಞೆಯ ಮೇರೆಗೆ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಲಾಗುತ್ತದೆ. ಧೀರನಾದ ಹನುಮಂತನನ್ನು ಬೆಂಕಿ ಏನೂ ಮಾಡುವುದಿಲ್ಲ. ತನ್ನ ಬಾಲಕ್ಕೆ ಹಚ್ಚಿದ್ದ ಬೆಂಕಿಯಿಂದ ಆಂಜನೇಯ ಇಡೀ ಲಂಕಾ ಪಟ್ಟಣವನ್ನೇ ಸುಟ್ಟು  ಬೂದಿ ಮಾಡುತ್ತಾನೆ. ನೋಡಿದ್ರ ಹೇಗಿದೆ ನಮ್ಮ ಹನುಮಂತನ ಪರಾಕ್ರಮ?

ಪವನ ಪುತ್ರ ಹನುಮಾನಾಕಿ........ ಜೈ 

ಅಂಜನಿ ಪುತ್ರ  ಹನುಮಾನಾಕಿ ---------------ಜೈ 

ಶ್ರೀ ರಾಮಧೂತ ಹನುಮಾನಾಕಿ........ ಜೈ 


"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪೀ ಗರಿಯಾಸಿ"

ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು? ನಿಮಗೆ ಆಶ್ಚರ್ಯವಾಗಬಹುದು, ಈ ಮಾತನ್ನು ಸಾಕ್ಷಾತ್ ಶ್ರೀರಾಮನೇ ಹೇಳಿರುವುದು. ರಾವಣನ ಸಂಹಾರವಾದ ಮೇಲೆ ಲಂಕೆ ರಾಮ-ಲಕ್ಷ್ಮಣರ ಕೈವಶವಾಗುತ್ತದೆ. ವೈಭವಯುಕ್ತವಾದ ಲಂಕೆಯನ್ನು ನೋಡಿ ಬೆರಗಾದ ಲಕ್ಷ್ಮಣ, ರಾಮನನ್ನು ಕೇಳುತ್ತಾನೆ.  "ಅಣ್ಣ..... ನೋಡು ವಜ್ರ ವೈಡೂರ್ಯಗಳಿಂದ ಕೂಡಿದ ಲಂಕೆ ಈಗ ನಮ್ಮ ಕೈವಶವಾಗಿದೆ. ನಮ್ಮ ರಾಜಧಾನಿಯನ್ನು ನಾವು ಅಯೋಧ್ಯೆಯಿಂದ ಲಂಕೆಗೆ ಸ್ಥಳಾಂತರಿಸಿ ನಾವುಗಳು ಎಲ್ಲೇ ಏಕೆ ನೆಲಸಬಾರದು?" ಲಕ್ಷ್ಮನನ್ನೂ ನೋಡಿ ನಸುನಕ್ಕ ರಾಮ ಹೀಗೆ ಹೇಳುತ್ತಾನೆ. 

ಅಪೀ ಸ್ವರ್ಣಮಯೀ ಲಂಕಾ 

ನಮೇ ಲಕ್ಷ್ಮಣ ರೋಚತೇ 

ಜನನಿ ಜನ್ಮಭೂಮಿಶ್ಚ 

ಸ್ವರ್ಗಾದಪಿ ಗರಿಯಾಸಿ 

ಲಕ್ಷ್ಮಣ, ಲಂಕೆ ಎಷ್ಟೇ ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ. ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಜನಿಸಿದ ಜನ್ಮಭೂಮಿಯಾದ ಅಯೋಧ್ಯಾ ನಮಗೆ ಸ್ವರ್ಗಕ್ಕಿಂತ ಮಿಗಿಲಾದುದು." ರಾಮನ ದೇಶಪ್ರೇಮ ಇಂದು ಎಷ್ಟು ಆದರ್ಶಮಯವಾದುದು ಎಂಬುದನ್ನು ಗಮನಿಸಿ. ನಮ್ಮ ಯುವಕರೆಲ್ಲರೂ ರಾಮನ ದೇಶಪ್ರೇಮವನ್ನು ಮೈಗೂಡಿಸಿಕೊಂಡರೆ ನಮ್ಮ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲವೆಂಬುದು ನನ್ನ ಭಾವನೆ. 

ಇಲ್ಲಿಗೆ ನಮ್ಮ ರಾಮಾಯಣದ ಹರಿಕಥೆ ಮುಗಿದಿದೆ.  ಹಾಗಂತ ಪರಮಾತ್ಮ ಮುಂದೆ ಅವತರಿಸೇ ಇಲ್ಲ ಅಂತ ಹೇಳಿದರೆ, ಅದು ತಪ್ಪು.ಬುದ್ಧ ಮತ್ತು ಕಲ್ಕ್ಯಾವತಾರಗಳು ಶ್ರೀಮನ್ನಾರಾಯಣನ ಅವತಾರಗಳೇ.  ಈಗಲೂ ಪರಮಾತ್ಮ ಯಾವುದೊ ರೂಪದಲ್ಲಿ ಅವತರಿಸಿ ನಮ್ಮನೆಲ್ಲ ಕಾಪಾಡುತ್ತಾ ಇದ್ದಾನೆ ಎಂಬುದು ನಮ್ಮೆಲ್ಲರ ನಂಬಿಕೆ.  ಏಕಪ್ಪಾ ಅಂದ್ರೆ, ಪರಮಾತ್ಮನೇ ಹೇಳಿದ್ದಾನಲ್ಲ "ಧರ್ಮ ಸಂಸ್ಥಾಪನಾರ್ತಾಯ ಸಂಭವಾಮಿ ಯುಗೇ ಯುಗೇ" ಅಂತ. ಅಂತಹ ಮಹಾನ್ ಪರಮಾತ್ಮನಿಗೆ ಈಗ ಮಂಗಳವನ್ನು ಹಾಡೋಣ. 


Pavamaana Suthudu Pattu, Pathara Vinthiya Mulagu 
Sri Ram Rupa Mulugu, Nitya Jaya Mangalam

Prahlad NaraDadhi, Bhaktulu Pogadu Sandhu
Sri Ram Rupa Mulugu, Nitya Jaya Mangalam

Rajeeva Nayana Thyaga, Rajathi Vinudhamaina
Sri Rama-rupa Mulugu, Nitya Jaya Mangalam

                                                                 -೦-೦-೦-೦-೦-೦-೦-೦-










No comments:

Post a Comment