ಯಿಂದ
ಲಕ್ಷ್ಮೀನಾರಾಯಣ ಕೆ. 104, 2ನೇ ಮುಖ್ಯ ರಸ್ತೆ ಶ್ರೇಯಸ್ ಕಾಲೋನಿ ಜೆ.ಪಿ.ನಗರ್ 7ನೇ ಹಂತ ಬೆಂಗಳೂರು - 560078
Mob 98455 62603
ಗೆ
ಮಾನ್ಯರೆ,
ನನ್ನ ಮೊಮಕ್ಕಳಾದ ಕು.ಗೌರಿ (16) ಮತ್ತು ಕು.ಪ್ರಜ್ಞಾ (12) ಅವರುಗಳು ನಡೆಸಿಕೊಡುವ ಹರಿಕಥೆಗೆ ಅವಕಾಶ ಕೋರುತ್ತಾ.......
ನನ್ನ ಮೊಮ್ಮಕ್ಕಳು ಚೆನ್ನೈನ ಪ್ರಖ್ಯಾತ ಅಕ್ಕರೈ ಸಹೋದರಿಯರ ಮಾರ್ಗದರ್ಶನದಲ್ಲಿ ಕರ್ನಾಟಕ ಸಂಗೀತದ ಅಭ್ಯಾಸ ಮಾಡುತ್ತಿದ್ದಾರೆ.
ಮಣಿಪಾಲ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕನಾದ ನಾನು ಈ ಹೆಣ್ಣುಮಕ್ಕಳಿಗೆ ಹರಿಕಥೆಯ ತರಬೇತಿ ನೀಡುತ್ತಿದ್ದೇನೆ. ಕಳೆದ ಏಪ್ರಿಲ್ 2023ರಿಂದ ಸಾರ್ವಜನಿಕ ವೇದಿಕೆಗಳಲ್ಲಿ ಹರಿಕಥೆಯ ಕಾರ್ಯಕ್ರಮ ನೀಡುವುದನ್ನು ಆರಂಭಿಸಿದ್ದಾರೆ. ಈವರಗೆ ಬೆಂಗಳೂರಿನ ವಿವಿಧಡೆ 17 ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಳೆದ 09-11-2024ರಂದು ಈ ಹೆಣ್ಣುಮಕ್ಕಳು ನಡೆಸಿಕೊಟ್ಟ "ಭಾರತ ರತ್ನ ಎಂ.ಎಸ್.ಸುಬ್ಬುಲಕ್ಷ್ಮಿ" ಎಂಬ ಹರಿಕಥೆಯ Q.R. ಕೋಡ್ ಕೆಳಕಂಡಂತಿದೆ.
Q.R. ಕೋಡ್ ಅನ್ನು ಮೊಬೈಲ್ನಿಂದ ಸ್ಕ್ಯಾನ್ ಮಾಡಿ ಹರಿಕಥೆಯನ್ನು ಕೇಳಬಹುದು.
ನನ್ನ ಯು-ಟ್ಯೂಬ್ (Lakshminarayana krishnappa) ನಲ್ಲೂ ಈ ಹೆಣ್ಣುಮಕ್ಕಳ ಹರಿಕಥೆಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ತಮ್ಮ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಈ ಹೆಣ್ಣುಮಕ್ಕಳಿಗೆ ಹರಿಕಥೆಯ ಅವಕಾಶ ದಯಪಾಲಿಸಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ.
ವಂದನೆಗಳೊಂದಿಗೆ
ತಮ್ಮ ವಿಧೇಯ
ಲಕ್ಷ್ಮೀನಾರಾಯಣ ಕೆ.
ಮೊಬೈಲ್ 98455 62603
No comments:
Post a Comment