ಪ್ರವಾಸ ಕಥನದ
ಕಥೆಗಾರ-ಕವಿ ಡುಂಡಿರಾಜರಿಗೆ
ಕವನ ನಮನ
(ಕನಕದಾಸರ ಕ್ಷಮೆಕೇಳಿ.........
'ಈತನೀಗ ವಾಸುದೇವನೋ' ಧಾಟಿಯಲ್ಲಿ )
-೦-೦-೦-೦-೦-೦-೦-೦-
ಈತನೀಗ ಡುಂಡಿರಾಜನೋ
ಪದಗಳೊಡೆಯ
ಈತನೀಗ ಡುಂಡಿರಾಜ, 'ಅಕ್ಕ' ಕರೆದ ಅಕ್ಷರದ ದೊರೆಯು
ಅಭಿಮಾನಕೊಲಿದು ಗಗನಕೇರಿ ಅಮೆರಿಕಾ ಬಳಸಿದಾತ
ಈತನೀಗ .........
ಕಪ್ಪಣ್ಣರ ಪಣಕೆ ಮಣಿದು
ತಿಣುಕಿ ತಿರುಗಿ ವೀಸ ಪಡೆದು
ಕಂಬಾರರೊಡನೆ ಕೂಡಿ ಪಯಣ ಬೆಳೆಸುತಾ
ಸಡಗರದಿ ಅಟ್ಲಾಂಟಾ ಸೇರಿ
ಕನ್ನಡಿಗರ ಕೂಟವೇರಿ
ಮಿಲನದಲ್ಲಿ ಮಿಂಚಿನಿಂತ
ಕವಿಯ ನೋಡಿರೋ ........
ಈತನೀಗ.........
ಅನಿವಾಸಿಗಳೆ ವಾಸಿಯೆನುತ
ವಿಸ್ಮಯಗಳ ಮೆಲುಕುಹಾಕುತಾ
'ಟಬ್ಬಿಬ್ಬು'ಗಳ ಪಾಠ ನೆನೆದು
ಹನಿಗವಿಸುತಾ
ರಸಿಕರ ರಸದೌತಣಕೆ ಸೋತು
ನೆನಪುಗಳ ಕಥೆಯ ಹೆಣೆದು
'ಕಪ್ಪಾರ್ಪಣ' ಎಂದು ಬರೆದ
ಹನಿಗವಿಯ ನೋಡಿರೋ............
ಈತನೀಗ .........
-೦-೦-೦-೦-೦-೦-೦-೦-೦-೦-೦೦-
ರಚನೆ
ಲಕ್ಷ್ಮೀನಾರಾಯಣ ಕೆ.
(ಮೂಲ ಕೃತಿಯ ರಾಗದಲ್ಲೇ ಈ ಕವನವನ್ನೂ ಹಾಡಬಹುದು).
(ಮೂಲ ಕೃತಿಯ ರಾಗದಲ್ಲೇ ಈ ಕವನವನ್ನೂ ಹಾಡಬಹುದು).
೯೮೪೫೫ ೬೨೬೦೩
ಬೆಂಗಳೂರು
ಗಮನಿಸಿರಿ
ಅಕ್ಕ = (AKKA) - Association of Kannada Kootas of America
ಕಪ್ಪಣ್ಣ - ಅಕ್ಕ ಸಮ್ಮೇಳನ (೨೦೧೨)ದಲ್ಲಿ ಪಾಲ್ಗೊಂಡ ವಿಶೇಷ ಆಹ್ವಾನಿತರ ತಂಡದ ನಾಯಕರು
ಕಂಬಾರ - ಜ್ಞಾನಪೀಠ ವಿಜೇತ ಕನ್ನಡ ಸಾಹಿತಿಗಳು -ಚಂದ್ರಶೇಖರ ಕಂಬಾರರು
ಟಬ್ಬಿಬ್ಬು = ಅಮೆರಿಕಾದ ಸ್ನಾನದ ಮನೆಯ ಟಬ್ನಲ್ಲಿ ಡುಂಡಿರಾಜರಿಗಾದ ತಬ್ಬಿಬ್ಬು
ಕಪ್ಪಾರ್ಪಣಾ = ಕಪ್ಪಣ್ಣರಿಗೆ ಅರ್ಪಣ
ಅನಿವಾಸಿ = ವಿದೇಶದಲ್ಲಿ ನೆಲಸಿರುವ ಭಾರತೀಯರು
ಹನಿಗವನ = ಚುಟುಕು ಕವನಕ್ಕೆ ಡುಂಡಿರಾಜರು ಮಾಡಿರುವ ಹೊಸ ನಾಮಕರಣ

No comments:
Post a Comment