Tuesday, 11 April 2023

Ragigudda Hanuman Temple

  ರಾಮಾಯಣದ ೧೦ ರಹಸ್ಯಗಳು 

೧) ರಾಮಾಯ ರಾಮಭದ್ರಾಯ  

      ರಾಮಚಂದ್ರಾಯ ವೇದಸೇ 

       ರಘುನಾಥಯ್ಯ ನಾಥಯ್ಯ 

        ಸೀತಾಯ ಪತೇಯೇನಮಃ 


      ಅಂಜನಾನಂದನಂ ವೀರಂ

      ಜಾನಕೀ ಶೋಕ ನಾಶನಂ 

       ಕಪೀಶಮ್ ಅಕ್ಷ ಹಂತಾರಂ 

       ವಂದೇ ಲಂಕಾ ಭಯಂಕರಂ 

 


      ಕೂಜನತಾಮ್ ರಾಮ ರಾಮೇತಿ 

      ಮಧುರಂ ಮಧುರಾಕ್ಷರಂ 

      ಆರುಹ್ಯ ಕವೀತಾಶಾಕಾಮ್ 

      ವಂದೇ ವಾಲ್ಮೀಕಿ ಕೋಕಿಲಮ್ 

       ಮೊದಲು ರಾಮ, ಅನಂತರ ಹನುಮಂತ, ಅನಂತರ ವಾಲ್ಮೀಕಿ 

೨) ಎಲ್ಲರಿಗೂ ನಮಸ್ಕಾರಗಳು 

     ರಹಸ್ಯ ಎಂದರೇನು 

ಹಲವು ರಾಮಾಯಣಗಳಿವೆ 

ತಿಣುಕಿದನು ಫಣಿರಾಯ......... 

     ರಾಮಾಯಣವೊಂದು ಚಿನ್ನದ ಗಣಿ 

೩) ವಿಶ್ವಕ್ಕೆ ಭಾರತದ ಅತ್ಯಂತ ಉತ್ಕೃಷ್ಟ ಕೊಡುಗೆ ಏನು?

      ಇಡೀ ವಿಶ್ವವದ ಗಮನವನ್ನು ವಿಶೇಷವಾಗಿ ಸೆಳೆದಿಸಿರುವಂತಹ ಭಾರತದ ಕೊಡುಗೆ                 ಏನು? 

     ಇಡೀ ವಿಶ್ವವೇ ಗೌರವಿಸುವಂತಹ ಭಾರತದ ಕೊಡುಗೆ ಯಾವದು?


೩ಆ) ರಾಮಾಯಣವೇ ಆದಿ ಕಾವ್ಯ, ವಾಲ್ಮೀಕಿಯೇ ಆದಿ ಕವಿ 

ದಶಾವತಾರ ಮತ್ತು ಜೀವ ವಿಕಾಸ ವಾದ 

೪) ರಾಮಾಯಣ ನಡೆದುದ್ದು ಎಂದು?

        ರಾಮಾಯಣ ಒಂದು ಇತಿಹಾಸ 

         ವಾಲ್ಮೀಕಿ ರಾಮಾಯಣದ ಪ್ರಕಾರ ರಾಮ ಜನನವಾದದ್ದು ಚೈತ್ರ ಶುದ್ಧ 

          ನವಮಿಯಂದು, ಸಮಯ ಮಧ್ಯಾನ್ಹ . ಅಂದಿನ ಗ್ರಹಗತಿಗಳ ವಿವರವನ್ನು ಅವರು  

          ದಾಖಲಿಸಿದ್ದಾರೆ. 

          ಅದೇ ಗ್ರಹಗತಿಗಳು ೧೦ ಏಪ್ರಿಲ್ ೫೧೧೪ ಬಿ.ಸಿ. ಯಂದು ಇತ್ತು ಎಂದು 

          ಪ್ಲಾಟೇನೋರಿಯಂ  ಸಾಫ್ಟ್ವೇರ್ ಹೇಳುತ್ತದೆ. 

          ರಾಮ ಸೇತು ಈಗಲೂ ಇದೆ. ಸಮುದ್ರಾಳದಲ್ಲಿ ಮುಳಿಗಿ ಹೋಗಿದೆ.  ಅದನ್ನೀಗ 

         ಆಡಮ್ಸ್  ಬ್ರಿಜ್ ಎಂದು ಕರೆಯುತ್ತಾರೆ.  ಕಾರ್ಬನ್ ಡೇಟಿಂಗ್ 

      ಅಧ್ಯಯನದ ಪ್ರಕಾರ 

         ಆಡಮ್ಸ್  ಬ್ರಿಜ್ ೭೦೦೦ ವರ್ಷಗಳಷ್ಟು ಹಳೆಯದು ಎಂದು 

        ತಿಳಿದುಬಂದಿದೆ.  

             

     ೫) ಕ್ರೌನ್ಚ ಪಕ್ಷಿ ಪ್ರಕರಣ 

           ವಾಲ್ಮೀಕಿಗೆ ಮೂಡಿಬಂದ ಪ್ರೇರಣೆ  

           ಮಾ ನಿಷಾದ ಪ್ರತಿಷ್ಠಾ ತ್ವಮ್, ಆಗಮಃ ಶಾಶ್ವತೀ ಸಮಾಹ್ 

           ಯತ್ ಕ್ರೌನ್ಚಮಿಥುನಾತ್ ಏಕಂ, ಆವಧಿಹಿ ಕಾಮಮೋಹಿತಃ 

           ಮೊದಲು ಕೋಪ, ಅನಂತರ ಪಶ್ಚಾತಾಪ 

           ಬ್ರಹ್ಮನ ಆಗಮನ, ಶ್ಲೋಕದ ಛಂದಸ್ಸು ಮತ್ತು ಸರಿ ಅರ್ಥ 

  

     

೬) ಗಾಯತ್ರಿ ರಾಮಾಯಣ 

     ಓಂ ಭೂಹು ಭುವಃ  ಸ್ವಹ, ತತ್ಸ ವಿತುರ್ವರೇಣ್ಯಂ, ಭರ್ಗೋ ದೇವಸ್ಯ ಧೀಮಹಿ 

      ಧಿಯೋಯೋನಃ ಪ್ರಚೋದಯಾತ್ 

      ರಾಮಾಯಣ ದಲ್ಲಿ ೨೪೦೦೦ ಶ್ಲೋಕಗಳು, ಗಾಯತ್ರಿಯಲ್ಲಿ ೨೪ ಅಕ್ಷರಗಳು 

      ಪ್ರತಿ ಸಾವಿರ ಶ್ಲೋಕದಲ್ಲಿ ಮೊದಲೆನೆಯದರ ಒಂದಕ್ಷರ ಸೇರಿಸಿದರೆ 

      ಗಾಯತ್ರಿ ರಾಮಾಯಣ ಪಠಣದಿಂದ ಸಕಲ ಪುಣ್ಯ ಪ್ರಾಪ್ತಿ 

ರಾಮಾಯಣದ ಮೊದಲನೇ ಶ್ಲೋಕ 

ವಾಲ್ಮೀಕಿಗಳಿಂದ ನಾರದರ ಸ್ತುತಿ------------------------

ತಪಃ ಸ್ವಾಧ್ಯಾಯ ನಿರತಮ್ 

ತಪಸ್ವೀ ವಾಗ್ವಿದಾಂ ವರಂ 

ನಾರದಂ ಪರಿಪಪ್ರಚ್ಛ 

ವಾಲ್ಮೀಕಿರ್ಮುನಿಪುಂಗವಮ್ 

*********

ಕೋನ್ವಸ್ಮಿನ್ ಸಾಂಪ್ರತಂ ಲೋಕೇ 

ಗುಣವಾನ್ ಕಶ್ಚ ವೀರ್ಯವಾನ್ 

ಧರ್ಮಜ್ಞಶ್ಚ ಕೃತಜ್ಞಶ್ಚ 

ಸತ್ಯವಾಕ್ಯೋ ಧೃಢವ್ರತಃ 

ನಾರದರು ಹೇಳಿದ್ದು 

ಇಕ್ಷ್ವಕುವಂಶಪ್ರಭವೋ 

ರಾಮೋ ನಮ ಜನೈ ಶ್ರುತಃ 

ನಿಯತಾತ್ಮಾ ಮಹಾ ವೀರ್ಯೋ 

ದ್ಯುತಿಮಾನ್ ಧೃತಿಮಾನ್ ವಶೀ 


ಸರ್ವಶಾಸ್ತ್ರಾರ್ಥ ತತ್ತ್ವಜ್ಞ:

ಸ್ಮೃತಿಮಾನ್ ಪ್ರತಿಭಾನವಾನ್ 

ಸರ್ವಲೋಕಪ್ರಿಯಃ 

ಸಾಧುರ್ದೀನಾತ್ಮಾ ವಿಚಕ್ಷಣಃ 

ಮುಂದಿನ ೭೦ ಶ್ಲೋಕಗಳಲ್ಲಿ ನಾರದರು ರಾಮಾಯಣವನ್ನು ಸಂಪಕ್ಷಿತವಾಗಿ ವಾಲ್ಮೀಕಿಗಳಿಗೆ ಭೋದಿಸುತ್ತಾರೆ.  


೭) ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು - ಪುರಂದರದಾಸರು 

      ರಾ ಎಂದ ಮಾತ್ರದೊಳು ರಕ್ತ ಮಾಂಸದೊಳಿದ್ದ__________

        ಮತ್ತೆ ಮಾ ಎಂದೆನಲು ಹೊರಬಿದ್ದ ಪಾಪಗಳು ___________________

ರಾಮ ಮಂತ್ರವ ಜಪಿಸೋ ಹೇ  ಮನುಜ---------------------------------

೮) ರಾಮನ ಸಹೋದರಿ ಶಾಂತ, ಋಷ್ಯಶೃಂಗ, ರೋಮಪಾದ  

      ರಾಮ ಜನನ, ನಾರಾಯಣ, ಆದಿಶೇಷ, ಚಕ್ರ, ಶಂಖ 

      ಸೂಲಗಿತ್ತಿ ರಾಮಾಯಣ 


೯) ರಾಮನ ಬಾಲ್ಯ 

ರಾಮನ ಬಾಲ್ಯ ವಾಲ್ಮೀಕಿಯಲ್ಲಿ ಅಷ್ಟು ಇಲ್ಲ, ತುಳಸಿ ದಾಸರಲ್ಲಿ ಉಂಟು. ಕೇಳಿದೀರಲ್ಲ-----------

ठुमक चलत रामचंद्र,
ठुमक चलत रामचंद्र,
बाजत पैंजनियां,
ठुमक चलत रामचंद्र,
बाजत पैंजनियां,
ठुमक चलत रामचंद्र

किलकि-किलकि उठत धाय
किलकि-किलकि उठत धाय,
गिरत भूमि लटपटाय
धाय मात गोद लेत,
दशरथ की रनियां

     ರಾಮಯ, ರಾಮಭದ್ರಾಯ ಮೀನಿಂಗ್_______________ 

     ಮಂಥರೆ - ರಾಮಚಂದ್ರ , ಜಜ್ಜರಿತ ಮೈತ್ರಿ 

ರಾಮನ ಬಾಲ್ಯ ಸ್ನೇಹಿತರು ಯಾರಾದರೂ ಇದ್ದರೆ?

ತತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 

ರಾಮನು ಗುಹನಿಗೆ ಸಕಲವೂ ಭೋದಿಸುತ್ತಿದ್ದದು. ವಸಿಷ್ಠರ ಆಶ್ರಮದಲ್ಲಿ 

ನನ್ನ ದೋಣಿಯನ್ನು ನೀನು ಹತ್ತುವ ಮೊದಲು ನಾನು ನಿನ್ನ ಪಾದ ತೊಳೆಯಬೇಕು. 

ನಾನು ಜನರನ್ನು ಗಂಗಾ ನದಿಯನ್ನು ದಾಟಲು ಸಹಾಯಮಾಡುತ್ತೇನೆ.  ನೀನು ಭವಸಾಗರವನ್ನು ದಾಟಿಸುವೆ.  ಇಬ್ಬರದೂ ಒಂದೇ ಕೆಲಸ. 


೧೦) ವಿಶ್ವಾಮಿತ್ರ ಆಗಮನ 

ವಿಶ್ವಾಮಿತ್ರರ ಸುಪ್ರಪ್ರಭಾತ 

ಕೌಸಲ್ಯಾ ಸುಪ್ರಜಾ ರಾಮ 

ಪೂರ್ವಸಂಧ್ಯ ಪ್ರವರ್ತತೇ 

ಉತ್ತಿಷ್ಠ ನರ ಶಾರ್ದೂಲ 

ಕರ್ತವ್ಯಮ್ ದೈವಮಾಹ್ನಿಕ: 

ದಶರಥ ಹೇಳಿದ್ದು ವಿಶ್ವಾಮಿತ್ರರಿಗೆ 

ಊನಷೋಡಷವರ್ಷೋಮೆ 

ರಾಮೋ ರಾಜೀವಲೋಚನಃ 

ನ ಯುದ್ಧ ಯೋಗ್ಯ ತಾಮಸ್ಯ 

ಪಶ್ಯಾಮಿ ಸಹ ರಾಕ್ಷಸೈ:  

ವಿಶ್ವಾಮಿತ್ರರು ದಶರಥನಿಗೆ ಹೇಳಿದ್ದು 

ಅಹಂ ವೇದ್ಮಿ ಮಹಾತ್ಮಾನಂ 

ರಾಮಮ್ ಸತ್ಯ ಪರಾಕ್ರಮಂ 

ವಸಿಸ್ಟೊಪಿ ಮಹಾತೇಜ 

ಏ ಚೇಮೇ ತಪಸಿ ಸ್ಥಿತಾಃ 



೧೧) ಅಹಲ್ಯ ಪ್ರಕರಣ 

        ಅಹಲ್ಯ, ದ್ರೌಪದಿ, ಸೀತಾ ...... 

        ಅಹಲ್ಯಾಗೆ ತೋರಿದ ಔದಾರ್ಯ ನನಗೇಕೆ ತೋರಲಿಲ್ಲ ...... ಸೀತಾ 

        ವಾಲ್ಮೀಕಿ ಪ್ರಕಾರ ಅಹಲ್ಯೆಗೆ ಇಂದ್ರ ಅಂತ ಗೊತ್ತಿತ್ತು, ಕಲ್ಲಾಗಲಿಲ್ಲ, ರಾಮನಿಂದ 

        ಶಾಪ ವಿಮೋಚನೆ ಆಯಿತು . 

ಮತಿಮ್ ಚಕಾರ ದುರ್ಮೇಧಾ 

ದೇವರಾಜ ಕುತೂಹಲಾತ್  

೧೨) ಸೀತಾ ಕಲ್ಯಾಣ 

        ನವರಸ ರಾಮಾಯಣ 

ನವರಸ ರಾಮಾಯಣ 

        ಶೃಂಗಾರಮ್ ಕ್ಷಿತಿನಂದಿನಿ ವಿಹಾರೇಣ 

        ವೀರಂ ಧನುರ್ಭಂಜನೆ 

        ಕರುಣಾಯಂ ಬಲಿಬೋಜನೆ 

         ಅದ್ಭುತ ರಸಂ ಸಿಂಧೌ ಗಿರಿಸ್ಥಾಪನೆ 

         ಹಾಸ್ಯಾಂ ಶೂರ್ಪನಕಮುಖೇ 

         ಭಯಮಾಗೆ (ದೌರ್ಜನ್ಯದ ವಿರುದ್ಧ ಭಯ)

          ಭೀಭತ್ಸಮ್ ಅನ್ಯಾಮುಖೇ 

          ರೌದ್ರಂ ರಾವಣಮರ್ಧನೆ 

          ಮುನಿಜನೇ ಶಾಂತಂ ವಪುಹು ಪಾತು ನಃ 

        ಸೀತೆ ರಾಮನನ್ನು ಮೊದಲೇ ನೋಡಿದ್ದಳು, ಲವ್ ಅಟ್ ಫಸ್ಟ್ ಸೈಟ್ 

        ಶೃಂಗಾರಮ್ ಕ್ಷಿತಿನಂದಿನಿ ವಿಹಾರಣೇ 

        ವೀರಂ ಧನುರ್ಭಂಜನೆ 

         ಶಿವಧನಸ್ಸನ್ನು ಮುರಿದವರು ಯಾರು?

ಇಯಂ ಸೀತಾ ಮಮಸುತಾ 

ಸಹಧರ್ಮಚಾರೀ ತವ 

******

ಪತಿವ್ರತಾ ಮಹಾಭಾಗ 

ಛಾಯೇವಾನುಗತಾ ಸದಾ 

೧೩) ಪರಶುರಾಮ 

ರಾಮನಿಂದ ವೈಷ್ಣವ ಧನುಸ್ಸಿನ ಪ್ರಯೋಗ, ಹೆದೆಯೇರಿಸಿ ಬಾಣ ಪ್ರಯೋಗ ಮಾಡಿದ್ದು. 


೧೩) ಅಯೋಧ್ಯಾ ಕಾಂಡ 

ಮಂಥರೆ ಕೈಕಯೀಗೆ ಹೇಳಿದ್ದು 

ಪ್ರಾಪ್ತಮ್ ವಸುಮತೀಮ್ ಪ್ರೀತಿಂ 

ಪ್ರತೀತ ಹತವಿದ್ವಿಷಮ್ 

ಉಪಸ್ಥಾಸ್ಯಸಿ ಕೌಸಲ್ಯಾಮ್ 

ದಾಸೀವತ್ ತ್ವಮ್ ಕೃತಾಂಜಲಿ 


ಕೈಕಯೀ ಮಂಥರೆಗೆ ಹೇಳಿದ್ದು 

ರಾಮೇ ವಾ ಭರತೇ ವಾಹಂ 

ವಿಶೇಷಮ್ ನೋಪಲಕ್ಷಯೇ 

ತಸ್ಮಾತ್ತುಷ್ಟಾಸ್ಮಿ ಯದ್ ರಾಜ 

ರಾಮಮ್ ರಾಜ್ಯೇಭಿಷೇಕ್ಷ್ಯತಿ 

ಕೈಕಯೀ ದಶರಥನಿಗೆ ಹೇಳಿದ್ದು 

ನವ ಪಂಚ ಚ ವರ್ಷಾಣಿ 

ದಂಡಾಕಾರಣ್ಯಮಾಶ್ರಿತಃ 

ಚೀರಾಜಿನಧರೋ ಧೀರೋ 

ರಾಮೋ ಭವತು ತಾಪಸಃ 


ಭರತೋ ಭಜಾತಾಮದ್ಯ 

ಯವರಾಜ್ಯಮಕಂಟಕಂ 

ವನವಾಸವನ್ನು ಸ್ವೀಕರಿಸಿದ ರಾಮ, ಕೈಕಯೀ ಅರಮನೆಯಿಂದ ಹೋರಾಡುತ್ತಲೇ ಛತ್ರ, ಚಾಮರಾದಿಗಳನ್ನು ತ್ಯಜಿಸಿ ಕೌಸಲ್ಯೆಯ ಮನೆಗೆ ಹೊರಟದ್ದು. 

ಪ್ರತಿಶಿಧ್ಯ ಶುಭಮ್ ಛತ್ರಂ 

ವ್ಯಜನೇ ಚ ಸ್ವಲಂಕೃತೇ 

ವಿಸರ್ಜಯಿತ್ವಾ ಸ್ವಜನಂ

 ರಥಮ್ ಪೌರಂಸ್ತಥಾ ಜನಾನ್ 

ಟಿಕೆಟ್ ಸಿಗದೇ ಇದ್ರೆ ತೊಳಲಾಡುವ ರಾಜಕಾರಣಿಗಳು 

ಸೀತೆ ರಾಮನನ್ನು ಕಾಡಿಗೆ ಕರೆದುಕೊಂಡು ಹೋಗುವಂತೆ ಆಗ್ರಹಿಸಿದುದು 

ಕಿ ತ್ವಾಮನ್ಯತ ವೈದೇಹಂ 

ಪಿತಾ ಮೇ ಮಿಥಿಲಾಧಿಪಹ 

ರಾಮ ಜಾಮತರಂ ಪ್ರಾಪ್ಯ 

ಸ್ತ್ರೀಯಂ ಪುರುಷವಿಗ್ರಹಮ್ 

ರಾಮ ಸೀತೆಗೆ ನಾರುಮಡಿಯನ್ನು ಉಡಿಸಿದ್ದು 

        ಸುಮಿತ್ರಾ - ರಾಮಮ್ ದಶರಥಮ್ ವಿದ್ಧಿ 

        

ಭರತನ ಆಕ್ರೋಶ 

-ಅಮ್ಮಾ, ನೀನು ನನ್ನನ್ನು ಕೊಂದೆ.  ತಂದೆಯನ್ನು ಮತ್ತು ತಂದೆಯಂತಿದ್ದ ಅಣ್ಣನನ್ನು ಕಳೆದುಕೊಂಡಿದ್ದೇನೆ. 

-ಗಾಯದ ಮೇಲೆ ಉಪ್ಪನ್ನು ಸುರಿದಂತಾಗಿದೆ ನನಗೆ 

-ನಿನ್ನನ್ನು ನಮ್ಮ ತಂದೆಯವರು ಯಾಕೆ ರಾಣಿಯಾಗಿಸಿಕೊಂಡರೋ. ಸೆರಗಲ್ಲೇ ಬೆಂಕಿ ಕಟ್ಟಿಕೊಂಡರಲ್ಲ 

-ನಾನು ರಾಮಚಂದ್ರನನ್ನು ಕಾಡಿನ್ನಿಂದ ಹಿಂತುರಿಗಿಸಿ ಕರೆದುಕೊಂಡು ಬರುವೆ. 

ಭರತ ಕೌಸಲ್ಯೆಯ ಮುಂದೆ 

-ರಾಮನ ವನವಾಸಕ್ಕೆ ಯಾರು ಕರಣರೋ ಅವರಿಗೆ ಸಕಲ ಪಾಪಗಳು ಬರಲಿ.  ಪಾಪಗಳ ಪಟ್ಟಿ (ಗುರುವಿನಿಂದ ಕಲಿತ ಪಾಠಗಳು ಮರೆತು ಹೋಗಲಿ, ಅಕಾಲ ಮರಣಕ್ಕೆ ತುತ್ತಾಗಲಿ, 

ಆಗ ಕೌಸಲಿಗೆ ಭಾರತನಲ್ಲಿ ವಿಶ್ವಾಸ ಮೂಡುತ್ತದೆ 

ಶತೃಘ್ನನಿಂದ ಮಂಥರೆಯ ನಿಂದನೆ 

-ಲಕ್ಷ್ಮಣ ದಶರಥನನ್ನು ಏಕೆ ಬಂದಿಸಲಿಲ್ಲ?

-ಅವನು ಆಭರಣಭೂಷಿತೆಯಾದ ಮಂಥರೆಯನ್ನು ಹಿಡಿದು ಎಳೆದಾಡಿದನು 

-ಬಿಡಿಸಲು ಬಂಡ ಕೈಕಯೀಯನ್ನು ಧಿಕ್ಕರಿಸಿದನು . ಅವಳು ಭರತನನ್ನು ಬೇಡಿದಳು 

-ಭರತ ಸ್ತ್ರೀಹತ್ಯ ಬೇಡವೆಂದು, ಅದನ್ನು ರಾಮನು ಸಹಿಸುವುದಿಲ್ಲವೆಂದು ಹೇಳುತ್ತಾನೆ. 

ಇಲ್ಲದಿದ್ದರೆ ನಾನೆ ಕೈಕಯೀಯನ್ನು ಕೊಂದುಬಿಡುತ್ತಿದೆ ಎನ್ನುತ್ತಾನೆ. 

ಭರತ ರಾಜ್ಯವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದು. ಮಂತ್ರಿಗಳನ್ನು ತಿರಸ್ಕರಿಸಿದ್ದು. 

ಭರತನು ಕಾಡಿಗೆ ಹೊರಟದ್ದು.  ಮೂರುಜನ ರಾಣಿಯರು ಅವನೊಂದಿಗೆ ಇರುತ್ತಾರೆ. 

-ಗುಹನ ಸಂದೇಹ. ಭರತನ ಸೈನ್ಯವನ್ನು ನೋಡಿ ಆತಂಕ 

-ಭರತನಿಂದ ಗುಹನ ಸಂದೇಹ ನಿವಾರಣೆ. 

-ಗುಹಾ ಹೇಳಿದ್ದು. ಅನಾಯಾಸವಾಗಿ ಕೈಗೆ ಬಂದ ರಾಜ್ಯವನ್ನು ತ್ಯಜಿಸಿರುವಿರಿ.  ನಿಮ್ಮಂತಹ ಪುಣ್ಯಾತ್ಮರನ್ನು ನಾನು ನೋಡೇ ಇಲ್ಲ. ನಿನ್ನ ಪ್ರಯತ್ನದಿಂದ ನಿನ್ನ ಕೀರ್ತಿ ಮೂರುಲೋಕದಲ್ಲೂ ಉಂಟಾಗುವುದು. 

ಮುನಿ ಭರದ್ವಾಜರು ಭರತನನ್ನು ಅನುಮಾನಿಸುತ್ತಾರೆ 

-ಭರತನು ಕಣ್ಣೀರಿಟ್ಟು ಸಮಜಾಯ್ಸಿಯನ್ನು ಹೇಳಿದ್ದು. ವಸಿಷ್ಠರಿಂದ ಸಮರ್ಥನೆ 

-ಭರತ ಚಿತ್ರಕೂಟದ ಕಡೆಗೆ ಪಯಣ 

ಭರತನ ಸೈನ್ಯ್ವನ್ನು ನೋಡಿ ಕಾಡುಪ್ರಾಣಿಗಳ ಓಟ. ಸೈನ್ಯವನ್ನು ನೋಡಿ ಲಕ್ಷ್ಮಣನ ಕೋಪ. 

-ರಾಮ ಲಕ್ಷ್ಮಣನನನ್ನು ಸಮಾಧಾನಗೊಳಿಸಿದ್ದು 

-ಭರತನ ಒಳ್ಳೆ ತನವನ್ನು ರಾಮ ತಿಳಿಸಿದ್ದು. 

-ಭ್ರಾತೃ ವತ್ಸಲಾ, ನನಗೆ ಪ್ರಾಣಕ್ಕಿಂತ ಪ್ರಿಯನು, ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ. 

-ನನ್ನ ತಂದೆಯವರೇ ನನ್ನನ್ನು ನೋಡಲು ಬಂದಿರುವರು ಎಂದೇ ತಿಳಿಯುತ್ತೇನೆ. 

        ರಾಮನ ಆಡಳತ ನೀತಿ ......ಭರತನಿಗೆ 

ಗುರುಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಾಣುತ್ತಿರುವೆ ತಾನೇ?

ತಾಯಂದಿರು ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ತಾನೇ? 

        ಯೋಗ್ಯರನ್ನ ಮಂತ್ರಿ ಮಾಡಿದೀಯ ತಾನೇ?

ಕಚ್ಚಿದಾತ್ಮಾಸಮಾಹ್ ಶೂರಃ 

ಶ್ರುತವಂತೋ ಜಿತೇಂದ್ರಿಯಾ 

ಕುಲೀನಃಸ್ಚೆಂಗೀತಜ್ಞಶ್ಚ 

ಕೃತಾಸ್ತೇ ತಾತ ಮಂತ್ರಿಣಃ 

ಮಂತ್ರಿಸ್ಥಾನವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಹಂಚಿದ್ದೀಯ ತಾನೇ? 

ನಿನ್ನ ಮಂತ್ರಿಗಳು ಲಂಚಕೋರರಾಗಿಲ್ಲ ತಾನೇ? 

        ಗಹನವಾದ ಸಮಸ್ಯೆಗಳಿಗೆ ಮಂತ್ರಿಗಳೊಂದಿಗೆ ಚರ್ಚಿಸುತಿಯ ತಾನೇ?

        ಮಹತ್ತರವಾದ ಯೋಜನೆಗಳಿಗೆ ತಡಮಾಡುತಿಲ್ಲ ತಾನೇ? 

ಸಾಧನವು ಚಿಕ್ಕದಿದ್ದು, ಫಲವು ದೊಡ್ಡದಾಗಿದ್ದರೆ ಅಂತಹ ಕಾರ್ಯವನ್ನು ವಿಳಂಬ ಮಾಡುತ್ತಿಲ್ಲ ತಾನೇ? 

        ಗೌಪ್ಯತೆಯನ್ನು ಕಾಪಾಡಿಕೊಳ್ಳುತಿದ್ದೀಯಾ ತಾನೇ?

         ದಕ್ಷರು ನಿನ್ನ ಸೇನಾಪತಿಗಳಾಗಿರುವರೇ?

ಸಂಚುಕೋರರನ್ನು, ವಿದ್ರೋಹಿಗಳನ್ನೂ ಹಿಡಿದು ಕೊಲ್ಲುತ್ತಿದೀಯಾ  ತಾನೇ? 

          ಸೈನಿಕರಿಗೆ ಉಚಿತ ವೇತನ ನೀಡುತ್ತಿದೀಯಾ ತಾನೇ?

ಕಚ್ಚಿದ್ಬಲಸ್ಯ ಭಕ್ತಮ್ ಚ 

ವೇತನಂ ಚ ಯಥೋಚಿತಂ 

ಸಂಪ್ರಾಪ್ತಕಾಲಂ ದಾತವ್ಯ 

ದದಾಸಿ ನ ವಿಳಂಬಸೇ 

          ಉತ್ತಮರನ್ನು ರಾಜದೂತರನ್ನಾಗಿಸಿದ್ದೀಯ ತಾನೇ? 

ಆದಾಯ ಹೆಚ್ಚಿದ್ದು, ಖರ್ಚು ಕಮ್ಮಿ ಇದೆ ತಾನೇ? 

ಆಯಸ್ತೇ ವಿಪುಲಃ ಕಚ್ಚಿತ್ 

ಕಚ್ಚಿದಲ್ಪತರೋ ವ್ಯಯಃ 

ಅಪಾತ್ರೇಷು ನ ತೇ ಕಚ್ಚಿತ್ 

ಕೋಶೋ ಗಚ್ಛತಿ ರಾಘವಃ 

ಕರದ ವಸೂಲಿ ಸಮಂಜಸವಾಗಿ ಆಗುತ್ತಿದೆ ತಾನೇ? ಕರ ವಸೂಲಿ ಸೂರ್ಯನಂತಿರಬೇಕು. (ವಿವರಣೆ). 

ಕೃಷಿಕರು, ಪಶುಪಾಲಕರು ಮತ್ತು ವ್ಯಾಪಾರಿಗಳ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದೆಯ ತಾನೇ? 

ಅರಣ್ಯಗಳು ಸುರಕ್ಷಿತವಾಗಿದೆ ತಾನೇ? 

ನ್ಯಾಯದ ವ್ಯವಸ್ಥೆ ಸರಿಯಾಗಿದೆ ತಾನೇ? ನಿರಪರಾದಿಗಳಿಗೆ ಶಿಕ್ಷೆಯಾಗುತಿಲ್ಲ ತಾನೇ? ವಿನಾ ಕಾರಣ  ಯಾರನ್ನು ಬಂದಿಸುತ್ತಿಲ್ಲ ತಾನೇ? ದುರ್ಬಲರಿಗೆ ನ್ಯಾಯ ಒದಗುತ್ತಿದೆ ತಾನೇ? 

 ಸಾವಿರ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗುವುದು ಬೇಡ. Bail is a ರೂಲ್, ಜೈಲ್ ಐಸ್ ಎನ್ ಎಕ್ಸೆಪ್ಶನ್, ಮರಣದಂಡನೆ ಅತಿವಿರಳವಾಗಿ ಮಾತ್ರ 


ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಪುಟದಲ್ಲಿ ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯಗೆ ಮರಳುತ್ತಿರುವ ಚಿತ್ರವಿದೆ.  ಇದನ್ನು ಅಂಬೇಡ್ಕರ್ರವರು ಕೂಡ ಅನುಮೋದಿಸಿದ್ದಾರೆ. ಆ ಚಿತ್ರ ರಾಮರಾಜ್ಯದ ಆದರ್ಶಗಳ ಪ್ರತೀಕ. 

ರಾಮ ಅಯೋಧ್ಯಗೆ ಹಿಂತಿರುಗಲು ನಿರಾಕಾಯಿಸಿದ್ದು 

-ತಂದೆಯ ಆಜ್ಞೆಯನ್ನು ಉಲ್ಲಂಘಿಸಲಾರೆ 

-ನೀನು ನಿನ್ನ ತಾಯೀಯನ್ನು ನಿಂದಿಸಬಾರದು 

ದಶರಥನ ಮರಣದ ವಾರ್ತೆಯನ್ನು ಕೇಳಿ ರಾಮ ನೊಂದು, ಪಿಂಡಪ್ರದಾನ ಮಾಡಿದ್ದೂ. 

-ತಂದೆಯಿಲ್ಲದ ಅಯೋಧ್ಯೆಗೆ ನಾನು ಹೇಗೆ ಬರಲಿ?

-ತಂದೆಗೆ ಅಂತಿಮ ಸಂಸ್ಕಾರವನ್ನು ಮಾಡಲಾಗಲಿಲ್ಲವಲ್ಲ. ಭಾರತ ನೀನೆ ಭಾಗ್ಯವಂತ. 

-ಲಕ್ಷ್ಮಣ ನೀನು ಪಿತೃವಿಹೀನನಾದೆ, ಸೀತೆ ನಿಮ್ಮ ಮಾವನವರು ಇನ್ನಿಲ್ಲ 

ಕೈಕಯೀ ಕೂಡ ರಾಮನನ್ನು ಹಿಂತಿರುಗುವಂತೆ ಆಗ್ರಹಿಸಿದ್ದು. 

-ಪಾರ್ವತೀ ಪರಮೇಶ್ವರರಂತೆ ಅಂದು ನೀವು ನನಗೆ ಆಜ್ಞೆ ಮಾಡಿದಿರಿ. ಈಗ ತಂದೆಯವರಿಲ್ಲ. 

ಭರತನ ಪ್ರತಿಜ್ಞೆ 

-ಹದಿನಾಲ್ಕು ವರುಷಗಳು ಮುಗಿದ ಮಾರನೇ ದಿನವೇ ನಿನ್ನ ದರ್ಶನವಾಗದಿದ್ದರೆ ನಾನು ಅಗ್ನಿಪ್ರವೇಶ ಮಾಡುವೆ. 

-ಭಾರತ ಸ್ವರ್ಣ ಪಾದುಕೆಗಳನ್ನು ಮೊದಲೇ ತಂದಿದ್ದನು. ಅವುಗಳ ಮೇಲೆ ಚರಣಗಳನ್ನು ಇಡುವಂತೆ ರಾಮನಿಗೆ ಕೇಳಿಕೊಂಡನು. (ಕುಹಕಿಗಳು...... )

-ಪಾದುಕೆಗಳನ್ನು ತಲೆಯ ಮೇಲಿರಿಸಿಕೊಂಡನು 

ಪಾದುಕಾ ಪಟ್ಟಾಭಿಷೇಕ 

-ನಂದಿ ಗ್ರಾಮದಲ್ಲಿ 

-ಅನುದಿನವೂ ಪಾದುಕೆಗಳಿಗೆ ವರದಿಯನ್ನು ಒಪ್ಪಿಸುತ್ತಾ ರಾಜ್ಯಭಾರ 

-ಭರತ ರಾಮನಂತೆ ನಾರುಮಡಿಯ ವಸ್ತ್ರ, ಧರ್ಭ ಶಯನ 

-ನಾಚಿಕೆಯಿಂದ ಬೆಳಗಿನ ಜಾವ ಮೂರು ಘಂಟೆಗೆ ಸ್ನಾನ 

ಶ್ರೀರಾಮನು ಅತ್ರಿ ಅನಸೂಯರನ್ನು ಭೇಟಿ ಮಾಡಿದ್ದು.  ಅನಸೂಯಾ ಸೀತೆಗೆ ದಿವ್ಯಾಭರಣಗಳನ್ನು ನೀಡಿದ್ದು. 




     


೧೪) ಅರಣ್ಯ ಕಾಂಡ  

ಅಗಸ್ತ್ಯಾಶ್ರಮಕ್ಕೆ ರಾಮನ ಭೇಟಿ.  ಅಸ್ತ್ರ ಶಸ್ತ್ರಗಳ ಪ್ರದಾನ.  ಪಂಚವಟಿಗೆ ಹೋಗಿ ನೆಲಸುವಂತೆ ಸಲಹೆ. 

ಶೂರ್ಪನಖಿಯ ಆಗಮನ. ರಾಮನಿಗೆ ಮದುವೆ  ಪ್ರಸ್ತಾಪ. ರಾಮನ ತಿರಸ್ಕಾರ. ಲಕ್ಷ್ಮಣನನ್ನು ವಿವಾಹವಾಗುವಂತೆ ಸಲಹೆ. 

ಲಕ್ಷ್ಮಣನ ತಿರಸ್ಕಾರ 

ಸೀತೆಯನ್ನೇ ಕಬಳಿಸಲು ಹೋದದ್ದು 

ಅವಳ ಕಿವಿ ಮೂಗುಗಳನ್ನು ಲಕ್ಷ್ಮಣ ಕತ್ತರಿಸಿದ್ದು. 

ಅವಳು ಖರನಲ್ಲಿ ದೂರು ಹೇಳಿದ್ದು 

ಖರ ರಾಮರ ಯುದ್ಧ. ರಾಮನಿಂದ ೧೪೦೦೦ ರಾಕ್ಷಸರ ವಧೆ. ಖರಹರಪ್ರಿಯ ರಾಗ 

ರಾಮ ನೀ ಸಮಾನವೆವರು? (ತ್ಯಾಗರಾಜ)  ನಿನಗೆ ಪ್ರಿಯ ಪತ್ನಿ ಮತ್ತು ಮೃದುಭಾಷಿ ಹಾಗು ವೀರರಾದ ಸಹೋದರರು ಇದ್ದಾರೆ. 

ಚಕ್ಕನಿ ರಾಜ ಮಾರ್ಗಮುಲುಂಡಾಗ 

ಮುಕ್ಕಂಟಿ ನೋಟ ಚೇಲಗೆ ನಾಮಮೆ (ಮೂರು ಕಣ್ಣುಳ್ಳ ಶಿವನೇ ರಾಮಜಪ ಮಾಡುತ್ತಾನೆ) 

ಶೂರ್ಪನಖೆ ರಾವಣಗೆ ದೂರು ಹೇಳುತ್ತಲೇ. ಸೀತೆಯನ್ನು ಭಾರ್ಯೆಯನ್ನಾಗಿಸಿಕೊ ಎಂದು ಚುಚ್ಚಿದ್ದು. 

ರಾವಣ ಮಾರೀಚನ ಸಹಾಯವನ್ನು ಕೋರಿದ್ದು. 

ಮಾರೀಚನ ಉಪದೇಶ 

ರಾಮೋ ವಿಗ್ರಹವಾನ್ ಧರ್ಮಹ್ 

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 

(ಪಿತೃವಾಕ್ಯ ಪರಿಪಾಲಕ, ಮಾತೃ ಭಕ್ತ, ಗುರು ಭಕ್ತ  ಬ್ರಾತೃ ಪ್ರೇಮಿ, ನಿಮ್ನವರ್ಗದವರ ಪ್ರೇಮಿ, ಶೂರ್ಪಣಿಕೆಯ ಹತ್ಯಾ ಮಾಡಲಿಲ್ಲ, ಏಕಪತ್ನಿ ವ್ರತಸ್ಥ (ದಶರಥನಿಗೆ ಸಹಸ್ರ ಸಹಸ್ರ ಪತ್ನಿಯರು), ವನವಾಸದ ನೇಮ, ವಾಲೀ ವಧೆ, ಮರ್ಯಾದಾ ಪುರುಷೋತ್ತಮ) 


ಸುಲಭಾ: ಪುರುಷಾ ರಾಜನ್ 

ಸತಾತ್ಮಪ್ರಿಯವಾದಿನಃ 

ಅಪ್ರಿಯಸ್ಯ ಚ ಪಥ್ಯಸ್ಯ 

ವಕ್ತಾ ಶ್ರೋತ ಚ ದುರ್ಲಭ: 


ಜೀವಿತಃ ಚ ಸುಖಂ ಚೈವ 

ರಾಜ್ಯಾಮ್ ಚೈವ ಸುದುರ್ಲಭಂ 

ಯದೀಚ್ಚ ಸಿ ಚಿರಂ ಭೋಕ್ತುಮ್ 

ಮಾ ಕೃಥಾ ರಾಮವಿಪ್ರಿಯಮ್ 

(ರಾವಣ ನೀನು ಸುಖದಿಂದ ಇರ ಬೇಕಾದರೆ ರಾಮನನ್ನು ಕೆಣಕ ಬೇಡ) 


ತೇನ ಮುಕ್ತಸ್ತೋ ಬಾಣ: 

ಶಿತಃ ಶತ್ರುನಿಬರ್ಹಣ:

ತೇನಾಹಂ ತಾಡಿತಃ ಕ್ಷಿಪ್ತ:

ಸಮುದ್ರೆ ಶತ ಯೋಜನೆ 

ಈಗ ನಾನು ಸನ್ಯಾಸಾಗಿ ತಪಸ್ಸು ಮಾಡುತ್ತಿರುವೆನು. 

ನಿನ್ನ ಕೈಯಲ್ಲಿ ಸಾಯುವುದಕ್ಕಿಂತ ರಾಮನ ಕೈಯಲ್ಲಿ ಸಾಯುವುದು ಮೇಲು 


ಮಾಯಾ ಜಿಂಕೆ (ಮಾಯಾ ಮೃಗ) 

ಪರಸ್ತ್ರೀ, ಪರಧನ, ಅಧಿಕಾರ ಮೋಹ, ಅರಿಷಡ್ವರ್ಗಗಳು - ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ)

ಮಾಯಾ ಜಿಂಕೆಯ ವಿಶದಲ್ಲಿ ಲಕ್ಷ್ಮಣನ ಸಂದೇಹ 

ಆದರೂ ಸೀತೆಯ ಹಠ 

ರಾಮನಿಂದ ಮಾರೀಚನ ಹತ್ಯೆ, ಹಾ ಸೀತೆ ಹಾ ಲಕ್ಷ್ಮಣ ಎಂದು ಕೂಗಿದ್ದು 

ಸೀತೆಯ ಆಗ್ರಹ, ರಾಮನ ಮರಣದ ನಂತರ ನೀನು ನನ್ನನ್ನು ಬಯಸಿದೀಯ 

ಲಕ್ಶ್ಮಣ- ರಾಮನನ್ನು ಯಾರೂ ಸೋಲಿಸಲಾರರು 

ನಿನ್ನನ್ನು ಒಬ್ಬಂಟಿಯಾಗಿ ಬಿಡಲಾರೆನು, ಇದು ರಾಮನ ಆಜ್ಞೆ. 

ನೀನು ಕೇಳಿದ ಶಬ್ದವು ರಾಮನದಲ್ಲ 

ಸೀತೆ ಹೇಳಿದ್ದು 

ಸುದುಶ್ಶಸ್ವಂ ವನೇ 

ರಾಮಮೆ'ಕಾಮೆ'ಕೋನುಗಚ್ಛಸಿ 

ಮಮ ಹೇತೋಹ್ ಪ್ರತಿಚನ್ನಹ್ 

ಪ್ರಯುಕ್ತೋ ಭರತೇ ನ ವಾ 

ನನ್ನ ಮೇಲೆ ಹೀಗೆ ಅನುಮಾನ ಪಡುತ್ತಿರುವ ನಿಮಗೆ ಧಿಕ್ಕಾರವಿರಲಿ 


        ( ಲಕ್ಷ್ಮಣ ಮಲಗಲಿಲ್ಲ - ಊರ್ಮಿಳೆ ಮಲಗಿದಳು, ಗುಡಕೇಶ )

        ಲಕ್ಷ್ಮಣ ರೇಖೆ - ಪ್ರಸ್ತಾಪ ವಾಲ್ಮೀಕಿ ಮಾಡಿಲ್ಲ. ಲಕ್ಷ್ಮಣ ರೇಖೆಯ ಔಚಿತ್ಯ 

ಲಕ್ಷ್ಮಣ್ ರೇಖಾ ಅಂಡ್  ಭಾರತದ ಸಂವಿಧಾನ 

ಕಾರ್ಯಂಗ, ಶಾಸಕಾಂಗ ಮತ್ತು ನ್ಯಾಯಾಂಗ ನಡುವಿನ ರೇಖೆಗಳು 

ಗಂಡ ಹೆಂಡಿರ ನಡುವೆ 

ಅಣ್ಣ ತಮ್ಮಂದಿರ ನಡುವೆ 

ಅಧಿಕಾರಿ ಕರ್ಮಚಾರಿಗಳ ನಡುವೆ 

ನಮ್ಮ ಕರ್ತವ್ಯ ಗಳನ್ನು  ನಿಭಾಯಿಸುವಲ್ಲಿ 

ಕ್ರಿಕೆಟ್ನಲ್ಲೂ ಕೂಡ (ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡಕ್ಕೂ ) 

ಸೀತಾಪಹರಣ, ಸೀತೆಯ ವಿಲಾಪ, ಜಟಾಯುವಿನ ಯುದ್ಧ 

ಸೀತೆ ತನ್ನ ಆಭರಣಗಳನ್ನು ಕಪಿಗಳ ಮಧ್ಯೆ ಎಸೆದದ್ದು. 

ರಾಮ ಸೀತೆಗೆ ಪ್ರಲಾಪಿಸಿದ್ದು 

ಲಕ್ಷ್ಮಣ ಸೀತೆಯನ್ನು ಬಿಟ್ಟುಬಂದದಕ್ಕೆ ನಿಜವಾದ ಕಾರಣವನ್ನು ರಾಮನಿಗೆ ಹೇಳಿದ್ದು. 

ಜಟಾಯುವಿನಿಂದ ಸೀತಾಪಹರಣದ ಬಗ್ಗೆ ತಿಳಿದದ್ದು 

ಕಬಂಧ ಬಾಹುಗಳು - ಕಾನೂನು, ಸಮಸ್ಯೆಗಳು, ನಾವು ಮಾಡಿರುವ ಹಿಂದಿನ ತಪ್ಪುಗಳು, ಅರಣ್ಯಗಳ ನಾಶ, 

ಶಬರಿಯಿಂದ ಸತ್ಕಾರ 

ಲಕ್ಷ್ಮಣನಿಂದ ಎಂಜಲು ಹಣ್ಣುಗಳ ತಿರಸ್ಕಾರ ಮತ್ತು ಎಸೆದದ್ದು.  ಅದೇ ಮೂಲಿಕೆಯಾಗಿ ಅವನಿಗೆ ಯುದ್ಧ ಕಾಲದಲ್ಲಿ ಬೇಕಾದದ್ದು. 

ಬ್ರಾಹ್ಮಣನ ವೇಷ ಧರಿಸಿದ ಹನುಮಂತನಿಂದ ರಾಮ ಲಕ್ಷ್ಮಣರ ಭೇಟಿ 

ಹನುಮಂತ ಚತುರ ಮಾತುಗಳಿಂದ ರಾಮ ಲಕ್ಷ್ಮಣರನ್ನು ಪ್ರಶಮಿಸಿದ್ದು, ಮತ್ತು ತನ್ನ ಪರಿಚಯವನ್ನು ಮಾಡಿಕೊಂಡದ್ದು. 

ರಾಮನಿಂದ ಹನುಮಂತನ ಸಂವಹನ ಶಕ್ತಿಯ ಪ್ರಶಂಸೆ.  ಸಂವಹನ ಕ್ರಿಯೆಯ ವಿವರಣೆ. 

ನಾನೃಗ್ವೇದವಿನೀತಸ್ಯ 

ನಾಯಜುರ್ವೇದಧಾರಿಣಃ 

ನಾಸಾಮವೇದವಿದುಷಃ 

ಶಕ್ಯಮೇವಂ ಪ್ರಭಾಷಿತು೦ 

ಮೂರು ವೇದಗಳನ್ನು ಬಲ್ಲವನು ಮಾತ್ರ ಹೀಗೆ ಮಾತಾಡಬಲ್ಲನು. 

ವ್ಯಾಕರಣವನ್ನು ಬಲ್ಲವನು ಮಾತ್ರ ಹೀಗೆ ಅಪಶಬ್ದವಿಲ್ಲದೆ ಮಾತನಾದ ಬಲ್ಲನು. 

ಮಾತನಾಡುವಾಗ ಮುಖ, ನೇತ್ರ, ಲಲಾಟಗಳು - ಯಾವುದೇ ದೋಷವಿಲ್ಲ. 

ಸ್ವಲ್ಪದರಲ್ಲೇ ಎಲ್ಲ ವಿಷಯವನ್ನು ಹೇಳಿರುವನು, ಮಾಧ್ಯಮ ಸ್ವರದಲ್ಲಿ ಮಾತನಾಡಿರುವನು. 

ಸಂಸ್ಕಾರಕ್ರಮಸಂಪನ್ನಾಮ್ 

ಅದ್ಭುತಾಮವಿಲಂಬಿತಾಮ್ 

ಉಚ್ಚರಾಯತಿ ಕಲ್ಯಾಣೀಮ್ 

ವಾಚಂ ಹೃದಯಹರ್ಷಿಣೀಮ್ 

ಇವನು ಸಂಸ್ಕಾರವಂತ, ಅವಿಳಂಬಿತ (ತಡವರಿಸದೆ) ಭಾಷೆ ಇವನದು, ಆನಂದವನ್ನುಂಟು ಮಾಡುವ ವಾಣಿಯನ್ನು ನುಡಿದಿರುವನು. 

ಖಡ್ಗವನ್ನೆತ್ತಿದ ಶತ್ರುವಿನ ಹುದಯವನ್ನು ಇವನ ಮಾತುಗಳು ಬದಲಿಸಬಲ್ಲುದು. 

ಇಂತಹ ದೂತನಿರುವ ರಾಜನ ಎಲ್ಲ ಮನೋರಥಗಳು ದೂತನ ಮಾತಿನಿಂದಲೇ ಕಾರ್ಯಸಿದ್ಧವಾಗುತ್ತದೆ. 

ಹನುಮನ ಮಾತನ್ನು ಒಪ್ಪಿ ರಾಮ ಸುಗ್ರೀವನನ್ನು ಭೇಟಿಮಾಡಲು ಒಪ್ಪಿದ್ದು. 

ಭಿಕ್ಷುರೂಪಂ ಪರಿತ್ಯಜ್ಯ 

ವಾನರಾಂ ರೂಪಮಾಸ್ಥಿತಃ 

ಪೃಷ್ಠಮಾರೋಪ್ಯ tau ವೀರೌ 

ಜಗಾಮ ಕಪಿಕುಂಜರಃ 

(ಮೇಲಿನದು - ಹನುಮನ ಹೆಗಲ ಮೇಲೆ ಕುಳಿತು ರಾಮ ಲಕ್ಷ್ಮಣರು ಹೊರಟರು) 

ರಾಮ ಸುಗ್ರೀವರ ಮೈತ್ರಿ, ವಾಲೀ ಸಂಹಾರ ಶಪಥ 

ಸುಗ್ರೀವ ರಾಮನಿಗೆ ಸೀತೆಯ ಒಡವೆಗಳನ್ನು ತೋರಿಸಿದ್ದು. ಲಕ್ಷ್ಮಣ ಹೇಳಿದ್ದು . 

ನಾಹಂ ಜಾನಾಮಿ ಕೇಯುರೇ 

ನಾಹಂ ಜಾನಾಮಿ ಕುಂಡಲೇ 

ನೋಪರೇತ್ಪಭಿಜಾನಾಮಿ 

ನಿತ್ಯಂ ಪಾದಾಭಿನಂದನಾತ್ 

(ಕೇಯೂರ - ತೋಳುಬಂದಿ, ನೂಪುರ - ಕಾಲುಗೆಜ್ಜೆ , ಕುಂದಲೇ - ಬೆಂಡೋಲೆಗಳು) 


         ವಾಲೀ ಸಂಹಾರ -ವಾಲಿಯ ಆರೋಪ, ಸೀತೆಯನ್ನು ನಾನೇ,  ಸಮರ್ಥನೆ 

ವಾಲಿಯ ಆರೋಪ 

-ನಾನು ನಿನ್ನೊಡನೆ ಯುದ್ಧ ಮಾಡಲು ಬಂದಿತ್ತಿಲ್ಲ 

-ಹುಲ್ಲು ಮುಚ್ಚಿದ ಬಾವಿಯಂತೆ ನೀನು ನನಗೆ ಮೋಸ ಮಾಡಿದೆ 

-ನಾನು ನಿನ್ನ ರಾಜ್ಯಕ್ಕೆ ಯಾವುದೇ ತೊಂದರೆ ಮಾಡಿತ್ತಿಲ್ಲ 

-ಮಲಗಿರುವ ಮನುಷ್ಯನಿಗೆ ಹಾವು ಕಚ್ಚುವಂತೆ ನೀನು ನನ್ನನ್ನು ಕೊಂಡಿದೀಯ 

-ನಾನು ಜಾನಕಿಯನ್ನು ಒಂದೇ ದಿನದಲ್ಲಿ ಹುಡುಕಿ ತರುತ್ತಿದ್ದೆ 

-ರಾವಣನನ್ನು ಹಿಡಿದು ತಂದು ನಿನಗೆ ಒಪ್ಪಿಸುತ್ತಿದೆ 

ರಾಮನ ಸಮಜಾಯಿಷಿ 

ಇಕ್ಷ್ವಕೂನಾಮಿಯಂ ಭೂಮಿಹೀ 

ಸಶೈಲವನಕಾನನಾ 

ಮೃಗಪಕ್ಷಿಮನುಷ್ಯಾಣಾಮ್ 

ನಿಗ್ರಹಾನುಗ್ರಹೇಷ್ವಪಿ 

ಈ ಅರಣ್ಯವು ನಮ್ಮಗೆ ಸೇರಿದ್ದು. ಮೃಗ ಪಕ್ಷಿಗಳನ್ನು ಶಿಕ್ಷಿಸುವ ಅಧಿಕಾರ ನಮಗಿದೆ. 

ತಾಮ್  ಪಲಾಯತಿ ಧರ್ಮಾತ್ಮಾ

 ಭರತಃ ಸತ್ಯವಾನ್ರುಜ:

ಧರ್ಮಕಾಮಾರ್ಥ ತತ್ವಗ್ನೋ 

ನಿಗ್ರಹಾನುಗ್ರಹೇರತ:  

ಭರತನ ರಾಜ್ಯ ಇದು.  ಅವನಿಂದ ಆಜ್ಞೆ ನಾವು ಪಡೆದಿದ್ದೇವೆ. 

ತದೇತತ್ಕಾರಣಂ ಪಶ್ಯ 

ಯದರ್ಥಂ ತ್ವಮ್ ಮಯಾ ಹತಃ 

ಬ್ರಾತರ್ ವರ್ತಸಿ ಭಾರ್ಯಾಯಾಮ್ 

ತ್ಯಕ್ತ್ವಾ ಧರ್ಮ ಸನಾತನಮ್ 

ನಿನ್ನ ತಮ್ಮನ ಹೆಂಡತಿಯಾದ ರುಮೆಯನ್ನು ಭೋಗಿಸಿದೀಯ. 

ಮೃಗಗಳನ್ನು ಮೋಸದಿಂದ ಕೊಳ್ಳುವ ಅಧಿಕಾರ ಕ್ಷತ್ರಿಯರಿಗೆ ಇದೆ. 

ವಾಲಿಯು ಸಮಾಧಾನ ಹೊಂದಿದ್ದು 

ನನ್ನ ತಪ್ಪಿನ ಅರಿವು ನನಗಾಗಿದೆ. 

ನನ್ನನ್ನು ಹತ್ಯೆ ಮಾಡಿ ನೀನು ಯಾವ ತಪ್ಪನ್ನು ಮಾಡಿಲ್ಲ 

ಸುಗ್ರೀವನನ್ನು ಅಂಗಧನನ್ನು ನಿನಗೆ ಒಪ್ಪಿಸುತ್ತಿದೇನೆ. 

ಸೀತಾನ್ವೇಷಣಗೆ ಸುಗ್ರೀವ ನಾಲ್ಕು ದಿಕ್ಕುಗಳಿಗೆ ನಾಲ್ಕು ತಂಡಗಳನ್ನು ಮಾಡಿದ್ದೂ. 

ಹನುಮಂತನಿಗೆ ರಾಮ ಮುದ್ರೆಯುಂಗರವನ್ನು ನೀಡಿದ್ದು. 

ದದೌ ತಸ್ಯ ತತಃ ಪ್ರೀತಃ 

ಸ್ವಾನುಮಾಂಕೋಪಶೋಭಿತಂ 

ಅಂಗುಲೀಯಾಂಭಿಜ್ಞನಮ್ 

ರಾಜಪುತ್ರ ಪರಂತಪಃ 

ಸ್ವಯಂಪ್ರಭೆ ಎಂಬ ತಪಸ್ವಿ ಹನುಮಂತಾದಿಗಳನ್ನು ಸತ್ಕರಿಸಿ ಮುಂದಿನ ಯಾನದ ಸೂಚನೆಯನ್ನು ನೀಡಿದ್ದು. 

ಸುಗ್ರೀವನ ದಂಡನೆಗೆ ಹೆದರಿದ ವಾನರ ಸೇನೆ. ಸುಗ್ರೀವಾಜ್ಞೆ 

ಸಂಪಾತಿಯಿಂದ ವಾನರರಿಗೆ ಮಾರ್ಗದರ್ಶನ 

ಜಾಂಬವಂತನಿಂದ ಹನುಮಂತನಿಗೆ ಉತ್ತೇಜನೆ 

ಪಾವನ ಪುತ್ರ ನೀನು 

ಅಂಜನಿ ಪುತ್ರ ನೀನು 

ಬಾಲ್ಯದಲ್ಲೇ ಸೂರ್ಯನನ್ನು ಹಣ್ಣು ಎಂದು ಭಾವಿಸಿ ಆಕಾಶಕ್ಕೆ ಹಾರಿದ್ದೆ. 

ಇಂದ್ರನು ನಿನ್ನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು 

ವಾಯುವಿಗೆ ಕೋಪಬಂದು ನಿಂತುಬಿಟ್ಟನು 

ಆಗ ಬ್ರಹ್ಮದೇವರು ನಿನಗೆ ವರವನಿತ್ತರು. ಯಾವುದೇ ಅಸ್ತ್ರ ನಿನನ್ನು ಕೊಲ್ಲದು 

ಪ್ರಸಾದಿತೇ ಚ ಪವನೇ 

ಬ್ರಹ್ಮಾ ತುಭ್ಯಮ್ ವರಂ ದದೌ 

ಅಶಸ್ತ್ರ ವಧ್ಯತಾಂ ತಾತ 

ಸಮರೇ ಸತ್ಯ ವಿಕ್ರಮಃ 

ಇಂದ್ರನು ನಿನಗೆ ಚಿರಂಜೀವಿಯಾಗಿರು ಎಂದು ವರವನಿತ್ತನು 

ಉತ್ತಿಷ್ಠ ಹರಿಶಾರ್ದೂಲ 

ಲಂಘಯಸ್ವ ಮಹಾರ್ಣವಮ್ 

ಹನುಮಂತ ಮಹೇಂದ್ರ ಪರ್ವತವನ್ನು ಹತ್ತಿ ಹಾರಲು ಸನ್ನಡನಾಗಿದ್ದು 

ಸುಂದರ ಕಾಂಡ 

ತತಾಪ ನ ಹಿ ತಮ್ ಸೂರ್ಯ:

ಪ್ಲವಂತಂ ವಾನರೇಶ್ವರಮ್ 

ಸಿಷೇವೇ ಚ ತದಾ ವಾಯೂ 

ರಾಮಕಾರ್ಯರ್ತಸಿದ್ಧಯೇ 

ಹಾರುತ್ತಿದ್ದ ಹನುಮಂತನಿಗೆ ಸೂರ್ಯ ತಾಪವನ್ನು ನೀಡಲಿಲ್ಲ, ವಾಯು ಹಿತವಾಗಿ ಬೀಸುತಿತ್ತು.  

ಸಮುದ್ರ ರಾಜನು ತನ್ನೊಳಗಿದ್ದ ಮೈನಾಕ ಪರ್ವತವನ್ನು ಮೇಲೆದ್ದು ಹನುಮಂತನಿಗೆ ವಿಶ್ರಾಂತಿ ನೀಡುವಂತೆ ಆಜ್ಞಾಪಿಸಿತು ಹನುಮನು ಮೈನಾಕನ ಆಥಿತ್ಯವನ್ನು ನಿರಾಕರಿಸಿದನು. 

ನಾಗದೇವತೆಯಾದ ಸುರಸೆ ರಾಕ್ಷಸಿಯ ರೂಪವನ್ನು ತಾಳಿ ಹೇಳುತ್ತಾಳೆ. 

ಅಹಂ ತ್ವಮ್ ಭಕ್ಷಯಿಷ್ಯಾಮಿ 

ಪ್ರವಿಶೇದಂ ಮಮಾನನಂ 

ಹನುಮಂತನು ತನ್ನ ದೇಹವನ್ನು ಹೆಬ್ಬೆರಳ ಗಾತ್ರಕ್ಕೆ ತಗ್ಗಿಸಿ ಸುರಸೆಯ ಬಾಯನ್ನು ಪ್ರವೇಶಿಸಿ ಹೊರಬಂದನು. ಸಂತುಷ್ಟಳಾದ ಸುರಸೆ ತನ್ನ ನಿಜರೂಪವನ್ನು ತಾಳಿ ಹನುಮನನ್ನು ಹರೆಸುತ್ತಾಳೆ. (ಸತ್ವ ಗುಣ) 

ಅರ್ಥಸಿದ್ದೈ ಹರಿಶ್ರೇಷ್ಠ 

ಗಚ್ಛ ಸೌಮ್ಯ ಯಥಾಸುಖಂ 

ಸಾಮಾನ್ಯಸ್ವ ವೈದೇಹಿಮ್ 

ರಾಘವೇನ ಮಹಾತ್ಮನಾ 

(ಸುರಸೆ ದೇವತೆಗಳಿಂದ ಪರೀಕ್ಷಿಸಲು ಕಲಿಸಲ್ಪಟ್ಟವಳು) 

ಸಿಂಹಿಕೆಯ ಸಂಹಾರ. ಅವಳ ಬಾಯನ್ನು ಪ್ರವೇಶಿಸಿ ಅವಳ ಮರ್ಮಸ್ಥಾನಗಳನ್ನು ಬಗೆದು ಹೊರಬಂದು ಆಕೆಯ ಸಂಹಾರ ಮಾಡಿದ್ದೂ. (ತಮೋ ಗುಣ)  

ಲಂಕಿಣಿಯೊಡನೆ ಯುದ್ಧ 

ನೀನು ಯಾರು? ಏಕೆ ಬಂದೆ?

ಲಂಕೆ ನೋಡಲು 

ನನ್ನನ್ನು ಜಯಿಸದೆ ನೀನು ಒಳಗೆ ಹೋಗಲಾರೆ 

ಎಡಗೈನ ಮುಷ್ಟಿಯಿಂದ ಹೊಡೆದು ಜಯಿಸಿದ ಹನುಮಂತ 

ಹರಸಿ ಕಳಿಸಿದ ಲಂಕಿಣಿ 

ತತ್ ಪ್ರವಿಶ್ಯ ಹರಿಶ್ರೇಷ್ಠ 

ಪುರೀಂ ರಾವಣಪಾಲಿತಾಂ 

ವಿಧತ್ಸ್ವ ಸರ್ವಕಾರ್ಯಾಣಿ 

ಯಾನಿ ಯಾನೀಹ ವಾಂಛಸಿ 

ಬ್ರಹ್ಮನ ವರದಂತೆ ವಾನರೊಬ್ಬನು ಬಂದು ನನನ್ನು ಜಯಿಸಿದಾಗ ಲಂಕೆಗೆ ವಿನಾಶ ಸಮೀಪಿಸಿದೆ ಎನ್ನುತ್ತಾಳೆ (ರಜೋ ಗುಣ) 

ತುಳಸಿದಾಸರು ಹನುಮಂತನ ದರ್ಶನವಾದದ್ದು, ಆ ಜಾಗವೇ ಸಂಕಟಮೋಚನ್ ಮಂದಿರ. 

ಹನುಮಂತನ ಲಂಕಾ ಪ್ರವೇಶ 

ಲಂಕೆಯ ವೈಭವವನ್ನು ನೋಡಿ ದಂಗಾದುದು 

ವಿವಿಧ ರೀತಿಯ ರಾಕ್ಷಸ ರಾಕ್ಷಸಿಯರನ್ನು ನೋಡಿ, ಅವರ ಶಯನ ಭಂಗಿಯನ್ನು ನೋಡಿ ಅಸಹ್ಯಗೊಂಡದ್ದು. 

ಸೀತೆಯನ್ನು ಕಾಣದೆ ದುಃಖಗೊಂಡದ್ದು 

ರಾವಣನ ಅರಮನೆ ಮತ್ತು ಪುಷ್ಪಕ ವಿಮಾನವನ್ನು ನೋಡಿದ್ದು. 

ರಾವಣನ ಅಂತಃಪುರದಲ್ಲಿ ಮಲಗಿದ್ದ ಹೆಂಗಸರನ್ನು ನೋಡಿದ್ದು 

ಮಂಡೋದರಿಯನ್ನು ಸೀತೆ ಎಂದು ಭಾವಿಸಿ ದುಃಖಿತನಾದದ್ದು. 

ರಾಮನಿಂದ ಬೇರ್ಪಟ್ಟ ಸೀತೆಯು ನಿಶ್ಚಿಂತೆಯಿಂದ ಮಲಗಿರಲಾರಳು. 

ಸೀತಾದೇವಿಯು ಕಾಣದೆ ಅವಳು ಮರಣ ಹೊಂದಿರ ಬಹುದೆಂದು ದುಃಖಿಸಿದ್ದು 

ಅಶೋಕವನಕ್ಕೆ ಹೋದದ್ದು 

ಸೀತೆಯನ್ನು ಕಂಡದ್ದು 

ರಾಮನು ಹೇಳಿದ್ದ ಆಭರಣಗಳೆಲ್ಲವೂ ಮರಕ್ಕೆ ನೇತು ಹಾಕಲ್ಪಟ್ಟಿದ್ದವು. ಆದರೆ ಅವು ರಾಮ ಹೇಳಿದ ಆಭರಣೆಗಳೇ .  

ಸೀತಾಯನ್ನು ನೋಡಿದ ಹನುಮನು ಸಂತುಷ್ಟನಾದನು 

ನಮಸ್ಕೃತ್ವಾಚ ರಾಮಾಯ 

ಲಕ್ಷ್ಮಣಾಯ ಚ ವೀರ್ಯವಾನ್ 

ಸೀತಾದರ್ಶನಸಂಹೃಷ್ಟೋ 

ಹನುಮಾನ್ ಸಂವೃತೋಭವತ್ 

(ರಾಮನಿಗೂ ಲಕ್ಷ್ಮಣನಿಗೂ ಮನಸಿನಲ್ಲೇ ನಮಸ್ಕರಿಸಿ, ಸೀತಾ ದರ್ಶನದಿಂದ ಸಂತುಷ್ಟನಾದನು) 

ರಾವಣ ಅಶೋಕವನಕ್ಕೆ ಬಂದದ್ದು 

ರಾವಣನ್ನು ನೋಡಿ ಸೀತೆ ಬಾಳೆ ಮರದಂತೆ ನಡುಗತೊಡಗಿದಳು. 

ನೀನೆ ಪಟ್ಟಮಹಿಷಿಯಾಗು ಎಂದು ರಾವಣ ಹೇಳಿದ್ದು. 

ಭವ ಮೈಥಿಲಿ ಭಾರ್ಯಾ ಮೇ 

ಮೋಹಮೇನಂ ವಿಸರ್ಜಯ 

ಬಹ್ವೀನಾಮ್ಮುತ್ತಮ ಸ್ತ್ರೀಣಾಮ್ 

ಮಮಾಗ್ರಮಹಿಷಿ ಭವ 

ನಾವುಮಾಡಿಯನುಟ್ಟು ಕಾಡಿನಲ್ಲಿ ಅಲೆಯುತ್ತಿರುವ ರಾಮನನ್ನು ಕಟ್ಟಿಕೊಂಡು ಏನು ಮಾಡುವೆ? 

ಉಪವಾಸದಿಂದ ಕೃಶವಾಗಿದ್ದರು, ಮೇಲಿನ ವಸ್ತ್ರಗಳನ್ನು ಧರಿಸಿದ್ದರು ನನ್ನ ಸತಿಯರ ಮೇಲೆ ನನ್ನ ಮನಸ್ಸು ಹೋಗುವುದೇ ಇಲ್ಲ. 

ಮಂಡೋದರಿ-ರಾವಣರ ಸಂಭಾಷಣೆ.  ನಾನು ರಾಮನ ವೇಷವನ್ನು ಮಾಡಿಕೊಂಡೆ, ಆಗ ನಿನ್ನ ಬಿಟ್ಟು ಬೇರೆಯವರನ್ನು ನೋಡಲೇ ಆಗಲಿಲ್ಲ. 

ಸೀತೆ ಹುಲ್ಲುಕಡ್ಡಿಯೊಂದನ್ನು ಮಧ್ಯದಲ್ಲಿ ಇಟ್ಟದ್ದು (ಹುಲ್ಲುಕಡ್ಡಿ ಸಹೋದರನಂತೆ-ತುಳಸಿದಾಸರು )

ಪರಪುರಷರೊಂದಿಗೆ ನೇರವಾಗಿ ಮಾತನಾಡಬಾರದು 

ತೃಣಮಂತರತಃ ಕೃತ್ವಾ 

ಪ್ರತ್ಯುವಾಚ ಶುಚಿಸ್ಮಿತಾ 

ನಿವರ್ತಯ ಮನೋ ಮತ್ತ: 

ಸ್ವಜನೇ ಕ್ರಿಯತಾಂ ಮನ: 

ನಿನ್ನ ಮನಸ್ಸು ನಿನ್ನ ಪತ್ನಿಯರಲ್ಲಿ ಅನುರಕ್ತವಾಗಿರಲಿ 

ಸಿಂಹಾಸದೃಶವಾದ ರಾಮ ಲಕ್ಷ್ಮಣರು ಇಲ್ಲದಿದ್ದ ಸಮಯದಲ್ಲಿ ಅಪಹರಣ ಮಾಡಿರುವೆ 

ನೀನು ಸೂಚಿಸುವ ಕಾರ್ಯವನ್ನು ಮಾಡಲಾರೆ. 

ರಾಮನು ಏಕಪತ್ನಿ ವ್ರತಸ್ಥ.  ನಾನು ಕೂಡ 

ರಾಕ್ಷಸರ ವಿನಾಶ ಬೇಕಿಲ್ಲದಿದ್ದರೆ, ರಾಮನಲ್ಲಿ ಶರಣಾಗತಿ ಹೊಂದು. ಅವನು ಕರುಣಾಮಯೀ 

ರಾವಣನು ಸೀತೆಗೆ ಎರಡು ತಿಂಗಳ ಗಡುವು ನೀಡಿ ಹೊರಟದ್ದು. 

ಸೀತೆಯು ನಿರಾಕರಿಸಿದ್ದು 

ರಾಕ್ಷಸಿಯರು ಸೀತೆಯನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ್ದು.  ರಾವಣನ್ನು ಮದುವೆಯಾಗು ಎಂದು ಸಲಹೆ ನೀಡಿದ್ದು. 

ಸೀತೆಯ ನಿರಾಕರಣ. ರಾಕ್ಷಸಿಯರು ಕೊಲ್ಲುವುದಾಗಿ ಬೆದರಿಸಿದ್ದು 

ಸೀತೆಯ ವಿಲಾಪ, ಪ್ರಾಣತ್ಯಾಗಮಾಡಲು ನಿರ್ಧಾರ 

ತ್ರಿಜಟೆಯ ಸ್ವಪ್ನ (ವಿಭೀಷಣನ ಮಗಳು) 

ರಾಮ, ಲಕ್ಷ್ಮಣ ಸೀತೆಯರು ದಿವ್ಯ ರಥದಲ್ಲಿ ಕುಳಿತಿದ್ದು ಅದು ಲಂಕೆಯ ಮೇಲ್ಭಾಗದಲ್ಲಿ ನಿಂತಿತ್ತು. 

ಅದೇ ಸ್ವಪ್ನದಲ್ಲಿ ರಾವಣ ಮೈಗೆಲ್ಲ ಎಣ್ಣೆ ಹಚ್ಚಿಕೊಂಡು ಕೆಂಪು ಬಟ್ಟೆ ಉಟ್ಟು, ಪಾನಮತ್ತನಾಗಿ, ಕಣಗಿಲೆ ಹಾರವನ್ನು ಹಾಕಿಕೊಂಡು, ಪುಷ್ಪಕ ವಿಮಾನದಿಂದ ಬೀಳುವುದ ಕಂಡೆ. ಅವನ ಬಿದ್ದ ಶರೀರದ ಮುಂದೆ ಸ್ತ್ರೀಯೊಬ್ಬವು ಅಳುತ್ತಿರುವುದು ಕಂಡೆ. 

ಸೀತೆ ನೀನು ಭಯ ಪಡಬೇಡ - ತ್ರಿಜಟೆ 

ಸೀತೆಗೆ ಸಂತೋಷ 

ಸೀತಾದೇವಿ ಪ್ರಾಣ ತೊರೆಯಲು ಮತ್ತೆ ಸಿದ್ಧಳಾದುದು 

ಸೀತಾ ದೇವಿಗೆ ಶುಭಶಕುನಗಳು 

ಎಡ ಭುಜ ಅದುರಿತು ಎಡ ಕಾಲು ಅದುರಿತು 

ಸೀತೆಯೊಡನೆ ಹೇಗೆ ಮಾತನಾಡಬೇಕೆಂದು ಹನುಮನ ವಿವೇಚನೆ 

ರಾಕ್ಷಸಿಯರ ಎದುರು ಮಾತನಾಡುವುದು ಉಚಿತವಲ್ಲ 

ಸರಳ ಸಂಸ್ಕೃತ ಭಾಷೆಯಲ್ಲಿ ಮಾತನಾಡುವೆ. ಕ್ಲಿಷ್ಟ ಭಾಷೆಯಿಂದ ಅನುಮಾನ ಬರಬಹುದು. 

ರಾಮನ ಕೀರ್ತನೆಯನ್ನು ಅವಳಿಗೆ ಕೇಳಿಸುವಂತೆ ಮಾಡುವೆ. 

ರಾಜ ದಶರತೋ ನಾಮಾ 

ರಥಾಕುಂಜರ ವಾಜಿಮಾನ್ 

ಪುಣ್ಯಶೀಲೋ ಮಹಾಕೀರ್ತಿರ್ 

ಋಜುರಾಸೀನ್ಮಹಾಯಶಾ:


ತಸ್ಯ ಪುತ್ರಾಹ್ ಪ್ರಿಯೋ ಜೇಷ್ಠಾ 

ಅಸ್ತರಾಧಿಪನಿಭಾನನಃ 

ರಾಮೋ ನಮ ವಿಶೇಷಜ್ಞ;

ಶ್ರೇಷ್ಠ; ಸರ್ವಧನುಷ್ಮತಾಂ 


ಜನಸ್ಥಾನವಧಮ್ ಶ್ರುತ್ವಾ 

ಹtow ಚ ಖರದೂಷನೌ 

ತತಸ್ತ್ವಮರ್ಷಪಹೃತಾ

 ಜಾನಕೀ ರಾವಣೇನ ತು 

ರಾಮನಿಗೆ ಸುಗ್ರೀವನೆಂಬ ವಾನರಜನ ಸಖ್ಯವಾಗಿದೆ. ವಾನರ ಸೇನೆಯ ನಾನು ನೂರು ಯೋಜನಾ ಹಾರಿ ಲಂಕೆಗೆ ಬಂದಿದ್ದೇನೆ. ಸೀತಾದೇವಿಯನ್ನು ನಾನಿಲ್ಲಿ ನೋಡಿದ್ದೇನೆ. 

ಕತ್ತೆತ್ತಿ ಸೀತೆ ಹನುಮನನ್ನು ನೋಡಿದಳು 

ಇದೇನು ರಾವಣನ ಮಾಯೆಯೋ, ಆಗಿರಲಾರದು 

ಹನುಮಂತ ಕೆಳಗಿಳಿದು ಸೀತೆ ಎದುರು ನಿಲ್ಲುತ್ತಾನೆ. 

ಸೀತೆ ನೀನಾಗಿದ್ದರೆ ನಿನಗೆ ಮಂಗಳವಾಗಲಿ 

ನಾನು ಸೀತೆ, ದಶರಥನ ಸೊಸೆ, ರಾಮನ ಪತ್ನಿ 

ರಾಮನ ಶರೀರದಲ್ಲಿ ಯಾವ ಯಾವ ಚಿಹ್ನೆಗಳಿವೆ, ವಿವರಿಸು, ನಂಬಿಕೆ ನನಗೆ ಬರಲಿ 

ರಾಮಃ ಕಮಲಪತ್ರಾಕ್ಷಹ್ 

ಸರ್ವಸತ್ವ ಮನೋಹರ: 

ರೂಪದಾಕ್ಷಿಣ್ಯಸಂಪನ್ನಹ್ 

ಪ್ರಸುತೋ ಜನಕಾತ್ಮಜೆ 


ರಾಜವಿದ್ಯಾವಿನೀತಶ್ಚ 

ಬ್ರಾಹ್ಮಣಾನಾಮ೦ ಉಪಾಸಿತಾ  

ಶತ್ರುವಾನ್ ಶೀಲಸಂಪನ್ನೋ 

ವಿನೀತಶ್ಚ ಪರಂತಪಃ 

ವಿಸ್ತಾರವಾದ ಹೆಗಲುಳ್ಳವನು, ಮಹಾಬಾಹು, ಶಂಖದಂತೆ ಕುತ್ತಿಗೆ 

ರಾಮನ ೧೪ ಜೊತೆಗಳು ಸಮಪ್ರಮಾಣದಲ್ಲಿವೆ. - ಹುಬ್ಬುಗಳು, ಮೂಗುಹೊಳ್ಳೆಗಳು, ಕಣ್ಣುಗಳು, ಕಿವಿಗಳು, ತುರಿಗಳು, ಸ್ತನಾಗ್ರಗಳು, ಮೊಣಕೈಗಳು, ಪಾದಗಳು .......  

ಹನುಮನು ಮುದ್ರೆಯುಂಗುರ ಕೊಟ್ಟದ್ದು 

ಹನುಮನು ಸೀತೆಯನ್ನು ತನ್ನ ಜೊತೆ ಬರಲು ಹೇಳಿದ್ದು 

ಸೀತೆಗೆ ವಿರಾಟ್ ರೂಪ ದರ್ಶನ 

ನೀನೇನೋ ಸಮರ್ಥನಿರಬಹುದು, ಆದರೆ ರಾಮನ ಪರಾಕ್ರಮ, ಮಹಿಮೆಗೆ ಕಳಂಕ ಬರುವುದು. ರಾಮನು ಇಲ್ಲಿಗೆ ಬರುವುದೇ ಸಮಂಜಸ. ಅವನ ಪರಾಕ್ರಮ ಮೆರೆಯಬೇಕು. 

ಸೀತಾದೇವಿ ಹನುಮಂತನಿಗೆ ಕಾಕಾಸುರನ ಕಥೆ ಹೇಳಿದ್ದು - ಗುರುತಿಗಾಗಿ. ಮತ್ತು ಚೂಡಾಮಣಿಯನ್ನು ನೀಡಿದ್ದು. 

ಲಕ್ಶ್ಮಣ ರಾಮನಿಗೆ ನನಗಿಂತಲೂ ಪ್ರಿಯವಾದವನು. ಅವನಿಗೆ ನನ್ನ ನೆನಪುಗಳು. 

ಸೀತೆ ಒಂದು ತಿಂಗಳ ಗಡುವು ನೀಡಿದ್ದು. 

ಹನುಮನು ಅಧೋಕಾ ವನವನ್ನು ಧ್ವಮ್ಸ ಮಾಡಿದ್ದೂ 

ರಾವಣನ ಬಲಾಬಲಗಳನ್ನು ಪರೀಕ್ಷಿಸಬೇಕು 

ಒಪ್ಪಿಸಿದ ಕಾರ್ಯದ ಜೊತೆಗೆ, ಪೂರಕವಾದ ಮತ್ತೊಂದನ್ನು ಮಾಡಬೇಕು 

ವಿವಿಧೋಪಾಯಗಳನ್ನು ತಿಳಿದಿರುವನೇ ಕಾಯಕ ಸಾಧನೆಗೆ ಸಮರ್ಥನು 

ರಾಕ್ಷಸಿಯರ ಚೀತ್ಕಾರ 

ರಾವಣನು ಕಿಂಕರನೆಂಬ ರಾಕ್ಷಸನನ್ನು ಕಳಿಸಿದ್ದು, ಅವನ ಸಂಹಾರ 

ರಾಕ್ಷಸರ ಕುಲ ದೇವತೆಯ ಗುಡಿಯನ್ನು ನಾಶ ಮಾಡಿದ್ದು 

ಹನುಮನ ಘೋಷಣೆ 

ರಾಮನಿಗೆ ಜಯವಾಗಲಿ 

ಲಕ್ಷ್ಮಣನಿಗೆ ಜಯವಾಗಲಿ 

ಸುಗ್ರೀವನಿಗೆ ಜಯ 

ನಾನು ರಾಮನ ದಾಸನು 

ಸೀತಾದೇವಿಯನ್ನು ಭೇಟಿ ಮಾಡಿದ್ದೇನೆ 

ನನ್ನಂತೆ ಪರಾಕ್ರಮಶಾಲಿಗಳಾದ ಸಹಸ್ರ ಸಹಸ್ರ ವಾನರರ ಸೈನ್ಯವಿದೆ 

ರಾವಣನು ಉಳಿಯಲಾರನು 

ರಾವಣನ ೫ ಮಂದಿ ಸೇನಾಪತಿಗಳ ಸಂಹಾರ 

ರಾವಣನ ಮಗನಾದ ಅಕ್ಷಕುಮಾರನ ಸಂಹಾರ 

ಇಂದ್ರಜಿತ್ ಹನುಮರ ಯುದ್ಧ 

ಬ್ರಹ್ಮಾಸ್ತ್ರದಿಂದ ಬಂಧಿಸಿ ರಾವಣನ ಬಳಿಗೆ ಒಯ್ದದ್ದದು 

ಬ್ರಹ್ಮಸ್ತವು ನನಗೆ ಏನನ್ನು ಮಾಡದು, ಆದರೂ ಆ ಆಸ್ತ್ರಕ್ಕೆ ಗೌರವ ಕೊಟ್ಟು ಬಂದಿತನಾಗುವುದೇ ಸರಿ. ರಾವಣನನ್ನು ನೋಡುವ ಅವಕಾಶ ಇದು 

ನಾನು ರಾಮಧೂತ. ನಿನ್ನನ್ನು ನೋಡಲೆಂದೇ ಬಂದಿತನಾದೆ 

ರಾಮನು ವಾಲಿಯನ್ನು ಒಂದೇ ಬಾಣದಿಂದ ಸಂಹರಿಸಿದ್ದಾನೆ 

ನಿನ್ನ ಲಂಕೆಯನ್ನು ನಾಶಮಾಡಲು ನಾನೊಬ್ಬನೇ ಸಾಕು 

ಸೀತೆಯನ್ನು ಅಪಹರಿಸಿದ ನಿನ್ನನ್ನು ಕೊಳ್ಳುವ ಪ್ರತಿಜ್ಞೆ ಮಾಡಿರುವನು ರಾಮ 

ದೂತನ ವಧೆ ಮಾಡಬಾರದೆಂದ ವಿಭೀಷಣ 

ಹನುಮನ ಬಾಲಕ್ಕೆ ಬೆಂಕಿ, ಲಂಕೆಯಲ್ಲಿ ಮೆರವಣಿಗೆ 

ಅಗ್ನಿಯು ಸುಡದಂತೆ ಸೀತೆಯ ಪ್ರಾರ್ಥನೆ 

ವಿಭೀಷಣ ಮನೆಯನ್ನು ಸುಡಲಿಲ್ಲ 

ಹನುಮನಿಗೆ ಸೀತೆಯ ಚಿಂತೆ. ಬೆಂಕಿ ಏನು ಮಾಡಿತೋ? 

ನನ್ನ ಬಾಲವನ್ನೇ ಸುಡದ ಬೆಂಕಿ, ಸೀತೆಯನ್ನು ಸುಟ್ಟೀತೆ? 

ಸೀತೆಯನ್ನು ಮತ್ತೆ ಭೇಟಿ ಮಾಡಿ ಹಿಂತಿರುಗಿ ಪ್ರಯಾಣ ಮಾಡಿದನು  

ಸಮುದ್ರವನ್ನು ದಾಟಿಬಂಡ ಹನುಮನು ಜಾಂಬವಾದಿಗಳನ್ನು ಸೇರಿದ್ದು 

ವಾನರರೆಲ್ಲರೂ ಮಧುವನಕ್ಕೆ ಹೋಗಿ ಮಧುಪಾನ ಮಾಡಿದ್ದು 

ಗಾಯಂತಿ ಕೇಚಿತ್ 

ಪ್ರಣಾಮಂತಿ ಕೇಚಿತ್ 

ನೃತ್ಯಂತಿ ಕೇಚಿತ್ 

ಪ್ರಹಸನ್ತಿ ಕೇಚಿತ್ 

ಪತಂತಿ  ಕೇಚಿತ್ 

ದ್ವಿಚರನ್ತಿ ಕೇಚಿತ್ 

ಪ್ಲವಂತಿ ಕೇಚಿತ್ 

ಪ್ರಲಾಪನ್ತಿ ಕೇಚಿತ್ 

ವಾನರರು ಮಧುವನದ ದದೀಮುಖನನ್ನು ಪರದ್ಭವಗೊಳಿಸಿದ್ದು. ಅವನು ಸುಗ್ರೀವನಿಗೆ ದೂರು ಹೇಳಿದ್ದು. 

ಹನುಮಂತನು ರಾಮನಿಗೆ ಸೀತಾನೇಸ್ವಾನೆಯ ವಿವರಣೆ ಹೇಳಿದ್ದು. 

ಹನುಮ ಹೇಳಿದ್ದು 

ಇಕ್ಷವಾಕು ವಂಶ ವಿಖ್ಯಾತಿಮ್ 

ಶನೈ : ಕೀರ್ತಯತಾನಘ:

ಸಾ ಮಯಾ ನರಶಾರ್ದೂಲ 

ವಿಶ್ವಸಮುಪಪಾದಿತಾ 

ರಾಮ ಹೇಳಿದ್ದು 

ಕಿಮಾಹ ಸೀತಾ ವೈದೇಹಿ 

ಬ್ರೂಹಿ ಸೌಮ್ಯ ಪುನಃ ಪುನಃ 

ಪಿಪಾಸುಮಿವ ತೋಯೇನ 

ಸಿಂಚತೀ ವಾಕ್ಯವಾರಿಣಾ 

ಸೀತೆಯ ಮಾತುಗಳನ್ನು ಮತ್ತೆ ಮತ್ತೆ ಹೇಳು ಹನುಮ 

ಹನುಮ: ನಾನು ನಿನ್ನೊಡನೆ ಬರಲಾರೆ, ರಾಮನೇ ಬಂದು ಲಂಕಾವಿಜಯವನ್ನು ಮಾಡಿ ನನ್ನನ್ನು ಕರೆದುಕೊಂಡು ಹೋಗಿ ರಘುವಂಶದ ಕೀರ್ತಿ ಮೆರೆಯಲಿ. 

















೧೬) ಸುಂದರ ಕಾಂಡ 

        ಹನುಮಂತನ ಹಿಂಜರಿಕೆ 

        ರಾಮನ ಕೋಪ 

೧೭) ಯುದ್ಧ ಕಾಂಡ 

         ನಳ ನೀಲರಿಗೆ ಸೇತುವೆ ವಹಿಸಿದ್ದು , ಅಳಿಲು ಸೇವೆ 

         ರಾಮ ಲಕ್ಷ್ಮಣರ ಮೂರ್ಛೆ ಗರುಡನ ಆಗಮನ 

         ಹನುಮಂತ ತಂದ ಪರ್ವತ ಏನಾಯಿತು?

         ರಾವಣನ ಅಂತ್ಯ - ವಿಲಾಪ - ನನಗೆ ಲಕ್ಷ್ಮನಂತಹ ತಮ್ಮನಿತ್ತಿಲ್ಲ  

         ಜನನಿ ಜನ್ಮ ಭೂಮಿಶ್ಚ 


೧೮) ಉತ್ತರ ಕಾಂಡ 

         ನಾಯೀ ನ್ಯಾಯ 

         ಶಂಬೂಕ 

         ರಾಮ ಲಕ್ಷ್ಮಣರ ಅಂತ್ಯ 


೧೯) ರಾಮಾಯಣ ಮತ್ತು ಮ್ಯಾನೇಜ್ಮೆಂಟ್ (ನಿರ್ವಹಣೆ)

        - ರಾಮನಲ್ಲಿ ಯಾವುದೇ ಸೈನ್ಯ ಬಳಗಳಿರಲಿಲ್ಲ , ರಾವಣನಲ್ಲಿ ಇತ್ತು 

        - ಸುಗ್ರೀವ ಸಖ್ಯೆ - ಸ್ಟ್ರಾಟೆಜಿಕ್ ಅಲಯನ್ಸ್ 

        - ಮಂಗಗಳಿಗೆ ಪ್ರೇರಣೆ , ಅಳಿಲು ಭಕ್ತಿ 

        - ನಳ ನೀಲರಿಗೆ ಸೇತು ಕೆಲಸ ವಹಿಸಿದ್ದು 


   

 

     

     

No comments:

Post a Comment