Thursday, 13 April 2023

shlokas for Ragigudda

   ರಾಮಾಯಣದ ೧೦ ರಹಸ್ಯಗಳು 

೧) ರಾಮಾಯ ರಾಮಭದ್ರಾಯ  

      ರಾಮಚಂದ್ರಾಯ ವೇದಸೇ 

       ರಘುನಾಥಯ್ಯ ನಾಥಯ್ಯ 

        ಸೀತಾಯ ಪತೇಯೇನಮಃ 


      ಅಂಜನಾನಂದನಂ ವೀರಂ

      ಜಾನಕೀ ಶೋಕ ನಾಶನಂ 

       ಕಪೀಶಮ್ ಅಕ್ಷ ಹಂತಾರಂ 

       ವಂದೇ ಲಂಕಾ ಭಯಂಕರಂ 

 


      ಕೂಜನತಾಮ್ ರಾಮ ರಾಮೇತಿ 

      ಮಧುರಂ ಮಧುರಾಕ್ಷರಂ 

      ಆರುಹ್ಯ ಕವೀತಾಶಾಕಾಮ್ 

      ವಂದೇ ವಾಲ್ಮೀಕಿ ಕೋಕಿಲಮ್ 

       ಮೊದಲು ರಾಮ, ಅನಂತರ ಹನುಮಂತ, ಅನಂತರ ವಾಲ್ಮೀಕಿ 

೨) ರಹಸ್ಯ ಎಂದರೇನು 

ತಿಣುಕಿದನು ಫಣಿರಾಯ......... 

     

೩) ವಿಶ್ವಕ್ಕೆ ಭಾರತದ ಅತ್ಯಂತ ಉತ್ಕೃಷ್ಟ ಕೊಡುಗೆ ಏನು?

     

೩ಆ) ರಾಮಾಯಣವೇ ಆದಿ ಕಾವ್ಯ, ವಾಲ್ಮೀಕಿಯೇ ಆದಿ ಕವಿ 

ದಶಾವತಾರ ಮತ್ತು ಜೀವ ವಿಕಾಸ ವಾದ 

೪) ರಾಮಾಯಣ ನಡೆದುದ್ದು ಎಂದು?

        

     ೫) ಕ್ರೌನ್ಚ ಪಕ್ಷಿ ಪ್ರಕರಣ 

         

     ೬) ಗಾಯತ್ರಿ ರಾಮಾಯಣ 

     

ರಾಮಾಯಣದ ಮೊದಲನೇ ಶ್ಲೋಕ 

ವಾಲ್ಮೀಕಿಗಳಿಂದ ನಾರದರ ಸ್ತುತಿ------------------------

ತಪಃ ಸ್ವಾಧ್ಯಾಯ ನಿರತಮ್ 

ತಪಸ್ವೀ ವಾಗ್ವಿದಾಂ ವರಂ 

ನಾರದಂ ಪರಿಪಪ್ರಚ್ಛ 

ವಾಲ್ಮೀಕಿರ್ಮುನಿಪುಂಗವಮ್ 

*********

ಕೋನ್ವಸ್ಮಿನ್ ಸಾಂಪ್ರತಂ ಲೋಕೇ 

ಗುಣವಾನ್ ಕಶ್ಚ ವೀರ್ಯವಾನ್ 

ಧರ್ಮಜ್ಞಶ್ಚ ಕೃತಜ್ಞಶ್ಚ 

ಸತ್ಯವಾಕ್ಯೋ ಧೃಢವ್ರತಃ 

ನಾರದರು ಹೇಳಿದ್ದು 

ಇಕ್ಷ್ವಕುವಂಶಪ್ರಭವೋ 

ರಾಮೋ ನಮ ಜನೈ ಶ್ರುತಃ 

ನಿಯತಾತ್ಮಾ ಮಹಾ ವೀರ್ಯೋ 

ದ್ಯುತಿಮಾನ್ ಧೃತಿಮಾನ್ ವಶೀ 


ಸರ್ವಶಾಸ್ತ್ರಾರ್ಥ ತತ್ತ್ವಜ್ಞ:

ಸ್ಮೃತಿಮಾನ್ ಪ್ರತಿಭಾನವಾನ್ 

ಸರ್ವಲೋಕಪ್ರಿಯಃ 

ಸಾಧುರ್ದೀನಾತ್ಮಾ ವಿಚಕ್ಷಣಃ 


೭) ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು - ಪುರಂದರದಾಸರು 

      ರಾಮ ಮಂತ್ರವ ಜಪಿಸೋ ಹೇ  ಮನುಜ---------------------------------

೮) ರಾಮನ ಸಹೋದರಿ ಶಾಂತ, ಋಷ್ಯಶೃಂಗ, ರೋಮಪಾದ  

    

      ಸೂಲಗಿತ್ತಿ ರಾಮಾಯಣ 


೯) ರಾಮನ ಬಾಲ್ಯ 

ರಾಮನ ಬಾಲ್ಯ ವಾಲ್ಮೀಕಿಯಲ್ಲಿ ಅಷ್ಟು ಇಲ್ಲ, ತುಳಸಿ ದಾಸರಲ್ಲಿ ಉಂಟು. ಕೇಳಿದೀರಲ್ಲ-----------

ठुमक चलत रामचंद्र,
ठुमक चलत रामचंद्र,
बाजत पैंजनियां,
ठुमक चलत रामचंद्र,
बाजत पैंजनियां,
ठुमक चलत रामचंद्र

किलकि-किलकि उठत धाय
किलकि-किलकि उठत धाय,
गिरत भूमि लटपटाय
धाय मात गोद लेत,
दशरथ की रनियां

     ಜಜ್ಜರಿತ ಮೈತ್ರಿ 

ರಾಮನ ಬಾಲ್ಯ ಸ್ನೇಹಿತರು ಯಾರಾದರೂ ಇದ್ದರೆ?

ತತ್ರ ರಾಜ ಗುಹೋ ನಾಮ 

ರಾಮಸ್ಯಾತ್ಮಸಮ: ಸಖಾ 

ನಿಷಾದ ಜಾತ್ಯೋ ಬಲವಾನ್ 

ಸ್ಥಪತಿಶ್ಚೇತಿ ವಿಶ್ರುತಃ 


೧೦) ವಿಶ್ವಾಮಿತ್ರ ಆಗಮನ 

ವಿಶ್ವಾಮಿತ್ರರ ಸುಪ್ರಪ್ರಭಾತ 

ಕೌಸಲ್ಯಾ ಸುಪ್ರಜಾ ರಾಮ 

ಪೂರ್ವಸಂಧ್ಯ ಪ್ರವರ್ತತೇ 

ಉತ್ತಿಷ್ಠ ನರ ಶಾರ್ದೂಲ 

ಕರ್ತವ್ಯಮ್ ದೈವಮಾಹ್ನಿಕ: 

ದಶರಥ ಹೇಳಿದ್ದು ವಿಶ್ವಾಮಿತ್ರರಿಗೆ 

ಊನಷೋಡಷವರ್ಷೋಮೆ 

ರಾಮೋ ರಾಜೀವಲೋಚನಃ 

ನ ಯುದ್ಧ ಯೋಗ್ಯ ತಾಮಸ್ಯ 

ಪಶ್ಯಾಮಿ ಸಹ ರಾಕ್ಷಸೈ:  

ವಿಶ್ವಾಮಿತ್ರರು ದಶರಥನಿಗೆ ಹೇಳಿದ್ದು 

ಅಹಂ ವೇದ್ಮಿ ಮಹಾತ್ಮಾನಂ 

ರಾಮಮ್ ಸತ್ಯ ಪರಾಕ್ರಮಂ 

ವಸಿಸ್ಟೊಪಿ ಮಹಾತೇಜ 

ಏ ಚೇಮೇ ತಪಸಿ ಸ್ಥಿತಾಃ 

೧೧) ಅಹಲ್ಯ ಪ್ರಕರಣ 

        ಅಹಲ್ಯ, ದ್ರೌಪದಿ, ಸೀತಾ ...... 

        ಮತಿಮ್ ಚಕಾರ ದುರ್ಮೇಧಾ 

ದೇವರಾಜ ಕುತೂಹಲಾತ್  

೧೨) ಸೀತಾ ಕಲ್ಯಾಣ 

        ನವರಸ ರಾಮಾಯಣ 

        ಶೃಂಗಾರಮ್ ಕ್ಷಿತಿನಂದಿನಿ ವಿಹಾರೇಣ 

        ವೀರಂ ಧನುರ್ಭಂಜನೆ 

        ಕರುಣಾಯಂ ಬಲಿಬೋಜನೆ 

         ಅದ್ಭುತ ರಸಂ ಸಿಂಧೌ ಗಿರಿಸ್ಥಾಪನೆ 

         ಹಾಸ್ಯಾಂ ಶೂರ್ಪನಕಮುಖೇ 

         ಭಯಮಾಗೆ (ದೌರ್ಜನ್ಯದ ವಿರುದ್ಧ ಭಯ)

          ಭೀಭತ್ಸಮ್ ಅನ್ಯಾಮುಖೇ 

          ರೌದ್ರಂ ರಾವಣಮರ್ಧನೆ 

          ಮುನಿಜನೇ ಶಾಂತಂ ವಪುಹು ಪಾತು ನಃ 

        

ಇಯಂ ಸೀತಾ ಮಮಸುತಾ 

ಸಹಧರ್ಮಚಾರೀ ತವ 

******

ಪತಿವ್ರತಾ ಮಹಾಭಾಗ 

ಛಾಯೇವಾನುಗತಾ ಸದಾ 

೧೩) ಪರಶುರಾಮ 

೧೩) ಅಯೋಧ್ಯಾ ಕಾಂಡ 

ಮಂಥರೆ ಕೈಕಯೀಗೆ ಹೇಳಿದ್ದು 

ಪ್ರಾಪ್ತಮ್ ವಸುಮತೀಮ್ ಪ್ರೀತಿಂ 

ಪ್ರತೀತ ಹತವಿದ್ವಿಷಮ್ 

ಉಪಸ್ಥಾಸ್ಯಸಿ ಕೌಸಲ್ಯಾಮ್ 

ದಾಸೀವತ್ ತ್ವಮ್ ಕೃತಾಂಜಲಿ 


ಕೈಕಯೀ ಮಂಥರೆಗೆ ಹೇಳಿದ್ದು 

ರಾಮೇ ವಾ ಭರತೇ ವಾಹಂ 

ವಿಶೇಷಮ್ ನೋಪಲಕ್ಷಯೇ 

ತಸ್ಮಾತ್ತುಷ್ಟಾಸ್ಮಿ ಯದ್ ರಾಜ 

ರಾಮಮ್ ರಾಜ್ಯೇಭಿಷೇಕ್ಷ್ಯತಿ 

ಕೈಕಯೀ ದಶರಥನಿಗೆ ಹೇಳಿದ್ದು 

ನವ ಪಂಚ ಚ ವರ್ಷಾಣಿ 

ದಂಡಾಕಾರಣ್ಯಮಾಶ್ರಿತಃ 

ಚೀರಾಜಿನಧರೋ ಧೀರೋ 

ರಾಮೋ ಭವತು ತಾಪಸಃ 


ಭರತೋ ಭಜಾತಾಮದ್ಯ 

ಯವರಾಜ್ಯಮಕಂಟಕಂ 

*********

ಪ್ರತಿಶಿಧ್ಯ ಶುಭಮ್ ಛತ್ರಂ 

ವ್ಯಜನೇ ಚ ಸ್ವಲಂಕೃತೇ 

ವಿಸರ್ಜಯಿತ್ವಾ ಸ್ವಜನಂ

 ರಥಮ್ ಪೌರಂಸ್ತಥಾ ಜನಾನ್ 


ಕಿ ತ್ವಾಮನ್ಯತ ವೈದೇಹಂ 

ಪಿತಾ ಮೇ ಮಿಥಿಲಾಧಿಪಹ 

ರಾಮ ಜಾಮತರಂ ಪ್ರಾಪ್ಯ 

ಸ್ತ್ರೀಯಂ ಪುರುಷವಿಗ್ರಹಮ್ 

ರಾಮ ಸೀತೆಗೆ ನಾರುಮಡಿಯನ್ನು ಉಡಿಸಿದ್ದು 

        ಸುಮಿತ್ರಾ - ರಾಮಮ್ ದಶರಥಮ್ ವಿದ್ಧಿ 

      

ಭರತನ ಆಕ್ರೋಶ 

-ಅಮ್ಮಾ, ನೀನು ನನ್ನನ್ನು ಕೊಂದೆ.  ತಂದೆಯನ್ನು ಮತ್ತು ತಂದೆಯಂತಿದ್ದ ಅಣ್ಣನನ್ನು ಕಳೆದುಕೊಂಡಿದ್ದೇನೆ. 

-ಗಾಯದ ಮೇಲೆ ಉಪ್ಪನ್ನು ಸುರಿದಂತಾಗಿದೆ ನನಗೆ 

-ನಿನ್ನನ್ನು ನಮ್ಮ ತಂದೆಯವರು ಯಾಕೆ ರಾಣಿಯಾಗಿಸಿಕೊಂಡರೋ. ಸೆರಗಲ್ಲೇ ಬೆಂಕಿ ಕಟ್ಟಿಕೊಂಡರಲ್ಲ 

-ನಾನು ರಾಮಚಂದ್ರನನ್ನು ಕಾಡಿನ್ನಿಂದ ಹಿಂತುರಿಗಿಸಿ ಕರೆದುಕೊಂಡು ಬರುವೆ. 

ಭರತ ಕೌಸಲ್ಯೆಯ ಮುಂದೆ 

-ರಾಮನ ವನವಾಸಕ್ಕೆ ಯಾರು ಕರಣರೋ ಅವರಿಗೆ ಸಕಲ ಪಾಪಗಳು ಬರಲಿ.  ಪಾಪಗಳ ಪಟ್ಟಿ (ಗುರುವಿನಿಂದ ಕಲಿತ ಪಾಠಗಳು ಮರೆತು ಹೋಗಲಿ, ಅಕಾಲ ಮರಣಕ್ಕೆ ತುತ್ತಾಗಲಿ, 

ಆಗ ಕೌಸಲಿಗೆ ಭಾರತನಲ್ಲಿ ವಿಶ್ವಾಸ ಮೂಡುತ್ತದೆ 

ಶತೃಘ್ನನಿಂದ ಮಂಥರೆಯ ನಿಂದನೆ 

-ಲಕ್ಷ್ಮಣ ದಶರಥನನ್ನು ಏಕೆ ಬಂದಿಸಲಿಲ್ಲ?

-ಅವನು ಆಭರಣಭೂಷಿತೆಯಾದ ಮಂಥರೆಯನ್ನು ಹಿಡಿದು ಎಳೆದಾಡಿದನು 

-ಬಿಡಿಸಲು ಬಂಡ ಕೈಕಯೀಯನ್ನು ಧಿಕ್ಕರಿಸಿದನು . ಅವಳು ಭರತನನ್ನು ಬೇಡಿದಳು 

-ಭರತ ಸ್ತ್ರೀಹತ್ಯ ಬೇಡವೆಂದು, ಅದನ್ನು ರಾಮನು ಸಹಿಸುವುದಿಲ್ಲವೆಂದು ಹೇಳುತ್ತಾನೆ. 

ಇಲ್ಲದಿದ್ದರೆ ನಾನೆ ಕೈಕಯೀಯನ್ನು ಕೊಂದುಬಿಡುತ್ತಿದೆ ಎನ್ನುತ್ತಾನೆ. 

ಭರತ ರಾಜ್ಯವನ್ನು ವಹಿಸಿಕೊಳ್ಳಲು ನಿರಾಕರಿಸಿದ್ದು. ಮಂತ್ರಿಗಳನ್ನು ತಿರಸ್ಕರಿಸಿದ್ದು. 

ಭರತನು ಕಾಡಿಗೆ ಹೊರಟದ್ದು.  ಮೂರುಜನ ರಾಣಿಯರು ಅವನೊಂದಿಗೆ ಇರುತ್ತಾರೆ. 

-ಗುಹನ ಸಂದೇಹ. ಭರತನ ಸೈನ್ಯವನ್ನು ನೋಡಿ ಆತಂಕ 

-ಭರತನಿಂದ ಗುಹನ ಸಂದೇಹ ನಿವಾರಣೆ. 

-ಗುಹಾ ಹೇಳಿದ್ದು. ಅನಾಯಾಸವಾಗಿ ಕೈಗೆ ಬಂದ ರಾಜ್ಯವನ್ನು ತ್ಯಜಿಸಿರುವಿರಿ.  ನಿಮ್ಮಂತಹ ಪುಣ್ಯಾತ್ಮರನ್ನು ನಾನು ನೋಡೇ ಇಲ್ಲ. ನಿನ್ನ ಪ್ರಯತ್ನದಿಂದ ನಿನ್ನ ಕೀರ್ತಿ ಮೂರುಲೋಕದಲ್ಲೂ ಉಂಟಾಗುವುದು. 

ಮುನಿ ಭರದ್ವಾಜರು ಭರತನನ್ನು ಅನುಮಾನಿಸುತ್ತಾರೆ 

-ಭರತನು ಕಣ್ಣೀರಿಟ್ಟು ಸಮಜಾಯ್ಸಿಯನ್ನು ಹೇಳಿದ್ದು. ವಸಿಷ್ಠರಿಂದ ಸಮರ್ಥನೆ 

-ಭರತ ಚಿತ್ರಕೂಟದ ಕಡೆಗೆ ಪಯಣ 

ಭರತನ ಸೈನ್ಯ್ವನ್ನು ನೋಡಿ ಕಾಡುಪ್ರಾಣಿಗಳ ಓಟ. ಸೈನ್ಯವನ್ನು ನೋಡಿ ಲಕ್ಷ್ಮಣನ ಕೋಪ. 

-ರಾಮ ಲಕ್ಷ್ಮಣನನನ್ನು ಸಮಾಧಾನಗೊಳಿಸಿದ್ದು 

-ಭರತನ ಒಳ್ಳೆ ತನವನ್ನು ರಾಮ ತಿಳಿಸಿದ್ದು. 

-ಭ್ರಾತೃ ವತ್ಸಲಾ, ನನಗೆ ಪ್ರಾಣಕ್ಕಿಂತ ಪ್ರಿಯನು, ನನ್ನನ್ನು ಕರೆದುಕೊಂಡು ಹೋಗುವುದಕ್ಕೆ ಬಂದಿದ್ದಾನೆ. 

-ನನ್ನ ತಂದೆಯವರೇ ನನ್ನನ್ನು ನೋಡಲು ಬಂದಿರುವರು ಎಂದೇ ತಿಳಿಯುತ್ತೇನೆ. 

        ರಾಮನ ಆಡಳತ ನೀತಿ ......ಭರತನಿಗೆ 

ಗುರುಹಿರಿಯರನ್ನು, ಮಹಿಳೆಯರನ್ನು ಗೌರವದಿಂದ ಕಾಣುತ್ತಿರುವೆ ತಾನೇ?

ತಾಯಂದಿರು ಮಕ್ಕಳ ಯೋಗಕ್ಷೇಮವನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವೆ ತಾನೇ? 

        ಯೋಗ್ಯರನ್ನ ಮಂತ್ರಿ ಮಾಡಿದೀಯ ತಾನೇ?

ಕಚ್ಚಿದಾತ್ಮಾಸಮಾಹ್ ಶೂರಃ 

ಶ್ರುತವಂತೋ ಜಿತೇಂದ್ರಿಯಾ 

ಕುಲೀನಃಸ್ಚೆಂಗೀತಜ್ಞಶ್ಚ 

ಕೃತಾಸ್ತೇ ತಾತ ಮಂತ್ರಿಣಃ 

ಮಂತ್ರಿಸ್ಥಾನವನ್ನು ಅವರವರ ಯೋಗ್ಯತೆಗೆ ತಕ್ಕಂತೆ ಹಂಚಿದ್ದೀಯ ತಾನೇ? 

ನಿನ್ನ ಮಂತ್ರಿಗಳು ಲಂಚಕೋರರಾಗಿಲ್ಲ ತಾನೇ? 

        ಗಹನವಾದ ಸಮಸ್ಯೆಗಳಿಗೆ ಮಂತ್ರಿಗಳೊಂದಿಗೆ ಚರ್ಚಿಸುತಿಯ ತಾನೇ?

        ಮಹತ್ತರವಾದ ಯೋಜನೆಗಳಿಗೆ ತಡಮಾಡುತಿಲ್ಲ ತಾನೇ? 

ಸಾಧನವು ಚಿಕ್ಕದಿದ್ದು, ಫಲವು ದೊಡ್ಡದಾಗಿದ್ದರೆ ಅಂತಹ ಕಾರ್ಯವನ್ನು ವಿಳಂಬ ಮಾಡುತ್ತಿಲ್ಲ ತಾನೇ? 

        ಗೌಪ್ಯತೆಯನ್ನು ಕಾಪಾಡಿಕೊಳ್ಳುತಿದ್ದೀಯಾ ತಾನೇ?

         ದಕ್ಷರು ನಿನ್ನ ಸೇನಾಪತಿಗಳಾಗಿರುವರೇ?

ಸಂಚುಕೋರರನ್ನು, ವಿದ್ರೋಹಿಗಳನ್ನೂ ಹಿಡಿದು ಕೊಲ್ಲುತ್ತಿದೀಯಾ  ತಾನೇ? 

          ಸೈನಿಕರಿಗೆ ಉಚಿತ ವೇತನ ನೀಡುತ್ತಿದೀಯಾ ತಾನೇ?

ಕಚ್ಚಿದ್ಬಲಸ್ಯ ಭಕ್ತಮ್ ಚ 

ವೇತನಂ ಚ ಯಥೋಚಿತಂ 

ಸಂಪ್ರಾಪ್ತಕಾಲಂ ದಾತವ್ಯ 

ದದಾಸಿ ನ ವಿಳಂಬಸೇ 

          ಉತ್ತಮರನ್ನು ರಾಜದೂತರನ್ನಾಗಿಸಿದ್ದೀಯ ತಾನೇ? 

ಆದಾಯ ಹೆಚ್ಚಿದ್ದು, ಖರ್ಚು ಕಮ್ಮಿ ಇದೆ ತಾನೇ? 

ಆಯಸ್ತೇ ವಿಪುಲಃ ಕಚ್ಚಿತ್ 

ಕಚ್ಚಿದಲ್ಪತರೋ ವ್ಯಯಃ 

ಅಪಾತ್ರೇಷು ನ ತೇ ಕಚ್ಚಿತ್ 

ಕೋಶೋ ಗಚ್ಛತಿ ರಾಘವಃ 

ಕರದ ವಸೂಲಿ ಸಮಂಜಸವಾಗಿ ಆಗುತ್ತಿದೆ ತಾನೇ? ಕರ ವಸೂಲಿ ಸೂರ್ಯನಂತಿರಬೇಕು. (ವಿವರಣೆ). 

ಕೃಷಿಕರು, ಪಶುಪಾಲಕರು ಮತ್ತು ವ್ಯಾಪಾರಿಗಳ ಯೋಗಕ್ಷೇಮವನ್ನು ಸರಿಯಾಗಿ ನೋಡಿಕೊಳ್ಳುತ್ತಿದ್ದೆಯ ತಾನೇ? 

ಅರಣ್ಯಗಳು ಸುರಕ್ಷಿತವಾಗಿದೆ ತಾನೇ? 

ನ್ಯಾಯದ ವ್ಯವಸ್ಥೆ ಸರಿಯಾಗಿದೆ ತಾನೇ? ನಿರಪರಾದಿಗಳಿಗೆ ಶಿಕ್ಷೆಯಾಗುತಿಲ್ಲ ತಾನೇ? ವಿನಾ ಕಾರಣ  ಯಾರನ್ನು ಬಂದಿಸುತ್ತಿಲ್ಲ ತಾನೇ? ದುರ್ಬಲರಿಗೆ ನ್ಯಾಯ ಒದಗುತ್ತಿದೆ ತಾನೇ? 

 ಸಾವಿರ ತಪ್ಪಿತಸ್ಥರಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗುವುದು ಬೇಡ. Bail is a ರೂಲ್, ಜೈಲ್ ಐಸ್ ಎನ್ ಎಕ್ಸೆಪ್ಶನ್, ಮರಣದಂಡನೆ ಅತಿವಿರಳವಾಗಿ ಮಾತ್ರ 


ಭಾರತದ ಸಂವಿಧಾನದ ಮೂಲಭೂತ ಹಕ್ಕುಗಳ ಪುಟದಲ್ಲಿ ರಾಮ, ಲಕ್ಷ್ಮಣ, ಸೀತೆಯರು ಅಯೋಧ್ಯಗೆ ಮರಳುತ್ತಿರುವ ಚಿತ್ರವಿದೆ.  ಇದನ್ನು ಅಂಬೇಡ್ಕರ್ರವರು ಕೂಡ ಅನುಮೋದಿಸಿದ್ದಾರೆ. ಆ ಚಿತ್ರ ರಾಮರಾಜ್ಯದ ಆದರ್ಶಗಳ ಪ್ರತೀಕ. 

ರಾಮ ಅಯೋಧ್ಯಗೆ ಹಿಂತಿರುಗಲು ನಿರಾಕಾಯಿಸಿದ್ದು 

-ತಂದೆಯ ಆಜ್ಞೆಯನ್ನು ಉಲ್ಲಂಘಿಸಲಾರೆ 

-ನೀನು ನಿನ್ನ ತಾಯೀಯನ್ನು ನಿಂದಿಸಬಾರದು 

ದಶರಥನ ಮರಣದ ವಾರ್ತೆಯನ್ನು ಕೇಳಿ ರಾಮ ನೊಂದು, ಪಿಂಡಪ್ರದಾನ ಮಾಡಿದ್ದೂ. 

-ತಂದೆಯಿಲ್ಲದ ಅಯೋಧ್ಯೆಗೆ ನಾನು ಹೇಗೆ ಬರಲಿ?

-ತಂದೆಗೆ ಅಂತಿಮ ಸಂಸ್ಕಾರವನ್ನು ಮಾಡಲಾಗಲಿಲ್ಲವಲ್ಲ. ಭಾರತ ನೀನೆ ಭಾಗ್ಯವಂತ. 

-ಲಕ್ಷ್ಮಣ ನೀನು ಪಿತೃವಿಹೀನನಾದೆ, ಸೀತೆ ನಿಮ್ಮ ಮಾವನವರು ಇನ್ನಿಲ್ಲ 

ಕೈಕಯೀ ಕೂಡ ರಾಮನನ್ನು ಹಿಂತಿರುಗುವಂತೆ ಆಗ್ರಹಿಸಿದ್ದು. 

-ಪಾರ್ವತೀ ಪರಮೇಶ್ವರರಂತೆ ಅಂದು ನೀವು ನನಗೆ ಆಜ್ಞೆ ಮಾಡಿದಿರಿ. ಈಗ ತಂದೆಯವರಿಲ್ಲ. 

ಭರತನ ಪ್ರತಿಜ್ಞೆ 

-ಹದಿನಾಲ್ಕು ವರುಷಗಳು ಮುಗಿದ ಮಾರನೇ ದಿನವೇ ನಿನ್ನ ದರ್ಶನವಾಗದಿದ್ದರೆ ನಾನು ಅಗ್ನಿಪ್ರವೇಶ ಮಾಡುವೆ. 

-ಭಾರತ ಸ್ವರ್ಣ ಪಾದುಕೆಗಳನ್ನು ಮೊದಲೇ ತಂದಿದ್ದನು. ಅವುಗಳ ಮೇಲೆ ಚರಣಗಳನ್ನು ಇಡುವಂತೆ ರಾಮನಿಗೆ ಕೇಳಿಕೊಂಡನು. (ಕುಹಕಿಗಳು...... )

-ಪಾದುಕೆಗಳನ್ನು ತಲೆಯ ಮೇಲಿರಿಸಿಕೊಂಡನು 

ಪಾದುಕಾ ಪಟ್ಟಾಭಿಷೇಕ 

-ನಂದಿ ಗ್ರಾಮದಲ್ಲಿ 

-ಅನುದಿನವೂ ಪಾದುಕೆಗಳಿಗೆ ವರದಿಯನ್ನು ಒಪ್ಪಿಸುತ್ತಾ ರಾಜ್ಯಭಾರ 

-ಭರತ ರಾಮನಂತೆ ನಾರುಮಡಿಯ ವಸ್ತ್ರ, ಧರ್ಭ ಶಯನ 

-ನಾಚಿಕೆಯಿಂದ ಬೆಳಗಿನ ಜಾವ ಮೂರು ಘಂಟೆಗೆ ಸ್ನಾನ 

ಶ್ರೀರಾಮನು ಅತ್ರಿ ಅನಸೂಯರನ್ನು ಭೇಟಿ ಮಾಡಿದ್ದು.  ಅನಸೂಯಾ ಸೀತೆಗೆ ದಿವ್ಯಾಭರಣಗಳನ್ನು ನೀಡಿದ್ದು. 


೧೪) ಅರಣ್ಯ ಕಾಂಡ  

ಅಗಸ್ತ್ಯಾಶ್ರಮಕ್ಕೆ ರಾಮನ ಭೇಟಿ. 

 ಶೂರ್ಪನಖಿಯ ಆಗಮನ. 

ಲಕ್ಷ್ಮಣನ ತಿರಸ್ಕಾರ 

ಸೀತೆಯನ್ನೇ ಕಬಳಿಸಲು ಹೋದದ್ದು 

ಅವಳ ಕಿವಿ ಮೂಗುಗಳನ್ನು ಲಕ್ಷ್ಮಣ ಕತ್ತರಿಸಿದ್ದು. 

ಅವಳು ಖರನಲ್ಲಿ ದೂರು ಹೇಳಿದ್ದು 

ಖರ ರಾಮರ ಯುದ್ಧ. ರಾಮನಿಂದ ೧೪೦೦೦ ರಾಕ್ಷಸರ ವಧೆ. ಖರಹರಪ್ರಿಯ ರಾಗ 

ರಾಮ ನೀ ಸಮಾನವೆವರು? (ತ್ಯಾಗರಾಜ)

ಚಕ್ಕನಿ ರಾಜ ಮಾರ್ಗಮುಲುಂಡಾಗ 

ರಾವಣ ಮಾರೀಚನ ಸಹಾಯವನ್ನು ಕೋರಿದ್ದು. 

ಮಾರೀಚನ ಉಪದೇಶ 

ರಾಮೋ ವಿಗ್ರಹವಾನ್ ಧರ್ಮಹ್ 

ಸಾಧುಹು ಸತ್ಯ ಪರಾಕ್ರಮಃ 

ರಾಜ ಸರ್ವಸ್ಯ ಲೋಕಸ್ಯ 

ದೇವಾನಿವ ವಾಸವಃ 


ಸುಲಭಾ: ಪುರುಷಾ ರಾಜನ್ 

ಸತಾತ್ಮಪ್ರಿಯವಾದಿನಃ 

ಅಪ್ರಿಯಸ್ಯ ಚ ಪಥ್ಯಸ್ಯ 

ವಕ್ತಾ ಶ್ರೋತ ಚ ದುರ್ಲಭ: 


ಜೀವಿತಃ ಚ ಸುಖಂ ಚೈವ 

ರಾಜ್ಯಾಮ್ ಚೈವ ಸುದುರ್ಲಭಂ 

ಯದೀಚ್ಚ ಸಿ ಚಿರಂ ಭೋಕ್ತುಮ್ 

ಮಾ ಕೃಥಾ ರಾಮವಿಪ್ರಿಯಮ್ 

(ರಾವಣ ನೀನು ಸುಖದಿಂದ ಇರ ಬೇಕಾದರೆ ರಾಮನನ್ನು ಕೆಣಕ ಬೇಡ) 

ತೇನ ಮುಕ್ತಸ್ತೋ ಬಾಣ: 

ಶಿತಃ ಶತ್ರುನಿಬರ್ಹಣ:

ತೇನಾಹಂ ತಾಡಿತಃ ಕ್ಷಿಪ್ತ:

ಸಮುದ್ರೆ ಶತ ಯೋಜನೆ 

ಈಗ ನಾನು ಸನ್ಯಾಸಾಗಿ ತಪಸ್ಸು ಮಾಡುತ್ತಿರುವೆನು. 

ನಿನ್ನ ಕೈಯಲ್ಲಿ ಸಾಯುವುದಕ್ಕಿಂತ ರಾಮನ ಕೈಯಲ್ಲಿ ಸಾಯುವುದು ಮೇಲು 


ಮಾಯಾ ಜಿಂಕೆ (ಮಾಯಾ ಮೃಗ) 

ಸೀತೆ ಹೇಳಿದ್ದು 

ಸುದುಶ್ಶಸ್ವಂ ವನೇ 

ರಾಮಮೆ'ಕಾಮೆ'ಕೋನುಗಚ್ಛಸಿ 

ಮಮ ಹೇತೋಹ್ ಪ್ರತಿಚನ್ನಹ್ 

ಪ್ರಯುಕ್ತೋ ಭರತೇ ನ ವಾ 

ನನ್ನ ಮೇಲೆ ಹೀಗೆ ಅನುಮಾನ ಪಡುತ್ತಿರುವ ನಿಮಗೆ ಧಿಕ್ಕಾರವಿರಲಿ 


        ( ಲಕ್ಷ್ಮಣ ಮಲಗಲಿಲ್ಲ - ಊರ್ಮಿಳೆ ಮಲಗಿದಳು, ಗುಡಕೇಶ )

        ಲಕ್ಷ್ಮಣ ರೇಖೆ - ಪ್ರಸ್ತಾಪ ವಾಲ್ಮೀಕಿ ಮಾಡಿಲ್ಲ. ಲಕ್ಷ್ಮಣ ರೇಖೆಯ ಔಚಿತ್ಯ 

ಲಕ್ಷ್ಮಣ್ ರೇಖಾ ಅಂಡ್  ಭಾರತದ ಸಂವಿಧಾನ 

ಸೀತಾಪಹರಣ 

ಜಟಾಯುವಿನಿಂದ ಸೀತಾಪಹರಣದ ಬಗ್ಗೆ ತಿಳಿದದ್ದು 

ಕಬಂಧ ಬಾಹುಗಳು - 

ಶಬರಿಯಿಂದ ಸತ್ಕಾರ 

ಬ್ರಾಹ್ಮಣನ ವೇಷ ಧರಿಸಿದ ಹನುಮಂತನಿಂದ ರಾಮ ಲಕ್ಷ್ಮಣರ ಭೇಟಿ 

ಹನುಮಂತ ಚತುರ ಮಾತುಗಳಿಂದ ರಾಮ ಲಕ್ಷ್ಮಣರನ್ನು ಪ್ರಶಮಿಸಿದ್ದು, ಮತ್ತು ತನ್ನ ಪರಿಚಯವನ್ನು ಮಾಡಿಕೊಂಡದ್ದು. 

ರಾಮನಿಂದ ಹನುಮಂತನ ಸಂವಹನ ಶಕ್ತಿಯ ಪ್ರಶಂಸೆ.  ಸಂವಹನ ಕ್ರಿಯೆಯ ವಿವರಣೆ. 

ನಾನೃಗ್ವೇದವಿನೀತಸ್ಯ 

ನಾಯಜುರ್ವೇದಧಾರಿಣಃ 

ನಾಸಾಮವೇದವಿದುಷಃ 

ಶಕ್ಯಮೇವಂ ಪ್ರಭಾಷಿತು೦ 

ಮೂರು ವೇದಗಳನ್ನು ಬಲ್ಲವನು ಮಾತ್ರ ಹೀಗೆ ಮಾತಾಡಬಲ್ಲನು. 

ವ್ಯಾಕರಣವನ್ನು ಬಲ್ಲವನು ಮಾತ್ರ ಹೀಗೆ ಅಪಶಬ್ದವಿಲ್ಲದೆ ಮಾತನಾದ ಬಲ್ಲನು. 

ಮಾತನಾಡುವಾಗ ಮುಖ, ನೇತ್ರ, ಲಲಾಟಗಳು - ಯಾವುದೇ ದೋಷವಿಲ್ಲ. 

ಸ್ವಲ್ಪದರಲ್ಲೇ ಎಲ್ಲ ವಿಷಯವನ್ನು ಹೇಳಿರುವನು, ಮಾಧ್ಯಮ ಸ್ವರದಲ್ಲಿ ಮಾತನಾಡಿರುವನು. 

ಸಂಸ್ಕಾರಕ್ರಮಸಂಪನ್ನಾಮ್ 

ಅದ್ಭುತಾಮವಿಲಂಬಿತಾಮ್ 

ಉಚ್ಚರಾಯತಿ ಕಲ್ಯಾಣೀಮ್ 

ವಾಚಂ ಹೃದಯಹರ್ಷಿಣೀಮ್ 

ಇವನು ಸಂಸ್ಕಾರವಂತ, ಅವಿಳಂಬಿತ (ತಡವರಿಸದೆ) ಭಾಷೆ ಇವನದು, ಆನಂದವನ್ನುಂಟು ಮಾಡುವ ವಾಣಿಯನ್ನು ನುಡಿದಿರುವನು. 

ಖಡ್ಗವನ್ನೆತ್ತಿದ ಶತ್ರುವಿನ ಹುದಯವನ್ನು ಇವನ ಮಾತುಗಳು ಬದಲಿಸಬಲ್ಲುದು. 

ಇಂತಹ ದೂತನಿರುವ ರಾಜನ ಎಲ್ಲ ಮನೋರಥಗಳು ದೂತನ ಮಾತಿನಿಂದಲೇ ಕಾರ್ಯಸಿದ್ಧವಾಗುತ್ತದೆ. 

ಹನುಮನ ಮಾತನ್ನು ಒಪ್ಪಿ ರಾಮ ಸುಗ್ರೀವನನ್ನು ಭೇಟಿಮಾಡಲು ಒಪ್ಪಿದ್ದು. 

ಭಿಕ್ಷುರೂಪಂ ಪರಿತ್ಯಜ್ಯ 

ವಾನರಾಂ ರೂಪಮಾಸ್ಥಿತಃ 

ಪೃಷ್ಠಮಾರೋಪ್ಯ tau ವೀರೌ 

ಜಗಾಮ ಕಪಿಕುಂಜರಃ 

(ಮೇಲಿನದು - ಹನುಮನ ಹೆಗಲ ಮೇಲೆ ಕುಳಿತು ರಾಮ ಲಕ್ಷ್ಮಣರು ಹೊರಟರು) 

ರಾಮ ಸುಗ್ರೀವರ ಮೈತ್ರಿ, ವಾಲೀ ಸಂಹಾರ ಶಪಥ 

ಸುಗ್ರೀವ ರಾಮನಿಗೆ ಸೀತೆಯ ಒಡವೆಗಳನ್ನು ತೋರಿಸಿದ್ದು. ಲಕ್ಷ್ಮಣ ಹೇಳಿದ್ದು . 

ನಾಹಂ ಜಾನಾಮಿ ಕೇಯುರೇ 

ನಾಹಂ ಜಾನಾಮಿ ಕುಂಡಲೇ 

ನೋಪರೇತ್ಪಭಿಜಾನಾಮಿ 

ನಿತ್ಯಂ ಪಾದಾಭಿನಂದನಾತ್ 

(ಕೇಯೂರ - ತೋಳುಬಂದಿ, ನೂಪುರ - ಕಾಲುಗೆಜ್ಜೆ , ಕುಂದಲೇ - ಬೆಂಡೋಲೆಗಳು) 


         ವಾಲೀ ಸಂಹಾರ -ವಾಲಿಯ ಆರೋಪ, ಸೀತೆಯನ್ನು ನಾನೇ,  ಸಮರ್ಥನೆ 

ವಾಲಿಯ ಆರೋಪ 

-

ರಾಮನ ಸಮಜಾಯಿಷಿ 

ಇಕ್ಷ್ವಕೂನಾಮಿಯಂ ಭೂಮಿಹೀ 

ಸಶೈಲವನಕಾನನಾ 

ಮೃಗಪಕ್ಷಿಮನುಷ್ಯಾಣಾಮ್ 

ನಿಗ್ರಹಾನುಗ್ರಹೇಷ್ವಪಿ 

ಈ ಅರಣ್ಯವು ನಮ್ಮಗೆ ಸೇರಿದ್ದು. ಮೃಗ ಪಕ್ಷಿಗಳನ್ನು ಶಿಕ್ಷಿಸುವ ಅಧಿಕಾರ ನಮಗಿದೆ. 

ತಾಮ್  ಪಲಾಯತಿ ಧರ್ಮಾತ್ಮಾ

 ಭರತಃ ಸತ್ಯವಾನ್ರುಜ:

ಧರ್ಮಕಾಮಾರ್ಥ ತತ್ವಗ್ನೋ 

ನಿಗ್ರಹಾನುಗ್ರಹೇರತ:  

ಭರತನ ರಾಜ್ಯ ಇದು.  ಅವನಿಂದ ಆಜ್ಞೆ ನಾವು ಪಡೆದಿದ್ದೇವೆ. 

ತದೇತತ್ಕಾರಣಂ ಪಶ್ಯ 

ಯದರ್ಥಂ ತ್ವಮ್ ಮಯಾ ಹತಃ 

ಬ್ರಾತರ್ ವರ್ತಸಿ ಭಾರ್ಯಾಯಾಮ್ 

ತ್ಯಕ್ತ್ವಾ ಧರ್ಮ ಸನಾತನಮ್ 

ನಿನ್ನ ತಮ್ಮನ ಹೆಂಡತಿಯಾದ ರುಮೆಯನ್ನು ಭೋಗಿಸಿದೀಯ. 

ಮೃಗಗಳನ್ನು ಮೋಸದಿಂದ ಕೊಳ್ಳುವ ಅಧಿಕಾರ ಕ್ಷತ್ರಿಯರಿಗೆ ಇದೆ. 

ವಾಲಿಯು ಸಮಾಧಾನ ಹೊಂದಿದ್ದು 

ಸೀತಾನ್ವೇಷಣಗೆ ಸುಗ್ರೀವ ನಾಲ್ಕು ದಿಕ್ಕುಗಳಿಗೆ ನಾಲ್ಕು ತಂಡಗಳನ್ನು ಮಾಡಿದ್ದೂ. 

ದದೌ ತಸ್ಯ ತತಃ ಪ್ರೀತಃ 

ಸ್ವಾನುಮಾಂಕೋಪಶೋಭಿತಂ 

ಅಂಗುಲೀಯಾಂಭಿಜ್ಞನಮ್ 

ರಾಜಪುತ್ರ ಪರಂತಪಃ 

ಸ್ವಯಂಪ್ರಭೆ ಎಂಬ ತಪಸ್ವಿ ಹನುಮಂತಾದಿಗಳನ್ನು ಸತ್ಕರಿಸಿ ಮುಂದಿನ ಯಾನದ ಸೂಚನೆಯನ್ನು ನೀಡಿದ್ದು. 

ಸುಗ್ರೀವನ ದಂಡನೆಗೆ ಹೆದರಿದ ವಾನರ ಸೇನೆ. ಸುಗ್ರೀವಾಜ್ಞೆ 

ಸಂಪಾತಿಯಿಂದ ವಾನರರಿಗೆ ಮಾರ್ಗದರ್ಶನ 

ಜಾಂಬವಂತನಿಂದ ಹನುಮಂತನಿಗೆ ಉತ್ತೇಜನೆ 

ಪಾವನ ಪುತ್ರ ನೀನು 

ಅಂಜನಿ ಪುತ್ರ ನೀನು 

ಬಾಲ್ಯದಲ್ಲೇ ಸೂರ್ಯನನ್ನು ಹಣ್ಣು ಎಂದು ಭಾವಿಸಿ ಆಕಾಶಕ್ಕೆ ಹಾರಿದ್ದೆ. 

ಇಂದ್ರನು ನಿನ್ನ ಮೇಲೆ ವಜ್ರಾಯುಧವನ್ನು ಪ್ರಯೋಗಿಸಿದನು 

ವಾಯುವಿಗೆ ಕೋಪಬಂದು ನಿಂತುಬಿಟ್ಟನು 

ಆಗ ಬ್ರಹ್ಮದೇವರು ನಿನಗೆ ವರವನಿತ್ತರು. ಯಾವುದೇ ಅಸ್ತ್ರ ನಿನನ್ನು ಕೊಲ್ಲದು 

ಪ್ರಸಾದಿತೇ ಚ ಪವನೇ 

ಬ್ರಹ್ಮಾ ತುಭ್ಯಮ್ ವರಂ ದದೌ 

ಅಶಸ್ತ್ರ ವಧ್ಯತಾಂ ತಾತ 

ಸಮರೇ ಸತ್ಯ ವಿಕ್ರಮಃ 

ಇಂದ್ರನು ನಿನಗೆ ಚಿರಂಜೀವಿಯಾಗಿರು ಎಂದು ವರವನಿತ್ತನು 

ಉತ್ತಿಷ್ಠ ಹರಿಶಾರ್ದೂಲ 

ಲಂಘಯಸ್ವ ಮಹಾರ್ಣವಮ್ 

ಹನುಮಂತ ಮಹೇಂದ್ರ ಪರ್ವತವನ್ನು ಹತ್ತಿ ಹಾರಲು ಸನ್ನಡನಾಗಿದ್ದು 

ಸುಂದರ ಕಾಂಡ 

ತತಾಪ ನ ಹಿ ತಮ್ ಸೂರ್ಯ:

ಪ್ಲವಂತಂ ವಾನರೇಶ್ವರಮ್ 

ಸಿಷೇವೇ ಚ ತದಾ ವಾಯೂ 

ರಾಮಕಾರ್ಯರ್ತಸಿದ್ಧಯೇ 


ಸಮುದ್ರ ರಾಜನು ತನ್ನೊಳಗಿದ್ದ ಮೈನಾಕ ಪರ್ವತವನ್ನು 

ನಾಗದೇವತೆಯಾದ ಸುರಸೆ ರಾಕ್ಷಸಿಯ ರೂಪವನ್ನು ತಾಳಿ ಹೇಳುತ್ತಾಳೆ. 

ಅಹಂ ತ್ವಮ್ ಭಕ್ಷಯಿಷ್ಯಾಮಿ 

ಪ್ರವಿಶೇದಂ ಮಮಾನನಂ 

 (ಸತ್ವ ಗುಣ) 

ಅರ್ಥಸಿದ್ದೈ ಹರಿಶ್ರೇಷ್ಠ 

ಗಚ್ಛ ಸೌಮ್ಯ ಯಥಾಸುಖಂ 

ಸಾಮಾನ್ಯಸ್ವ ವೈದೇಹಿಮ್ 

ರಾಘವೇನ ಮಹಾತ್ಮನಾ 

(ಸುರಸೆ ದೇವತೆಗಳಿಂದ ಪರೀಕ್ಷಿಸಲು ಕಲಿಸಲ್ಪಟ್ಟವಳು) 

ಸಿಂಹಿಕೆಯ ಸಂಹಾರ. . (ತಮೋ ಗುಣ)  

ಲಂಕಿಣಿಯೊಡನೆ ಯುದ್ಧ 


ತತ್ ಪ್ರವಿಶ್ಯ ಹರಿಶ್ರೇಷ್ಠ 

ಪುರೀಂ ರಾವಣಪಾಲಿತಾಂ 

ವಿಧತ್ಸ್ವ ಸರ್ವಕಾರ್ಯಾಣಿ 

ಯಾನಿ ಯಾನೀಹ ವಾಂಛಸಿ 

ಬ್ರಹ್ಮನ ವರದಂತೆ ವಾನರೊಬ್ಬನು ಬಂದು ನನನ್ನು ಜಯಿಸಿದಾಗ ಲಂಕೆಗೆ ವಿನಾಶ ಸಮೀಪಿಸಿದೆ ಎನ್ನುತ್ತಾಳೆ (ರಜೋ ಗುಣ) 

ತುಳಸಿದಾಸರು ಹನುಮಂತನ ದರ್ಶನವಾದದ್ದು, ಆ ಜಾಗವೇ ಸಂಕಟಮೋಚನ್ ಮಂದಿರ. 

ಹನುಮಂತನ ಲಂಕಾ ಪ್ರವೇಶ 

ಮಂಡೋದರಿಯನ್ನು ಸೀತೆ ಎಂದು ಭಾವಿಸಿ ದುಃಖಿತನಾದದ್ದು. 

ಸೀತಾದೇವಿಯು ಕಾಣದೆ ಅವಳು ಮರಣ ಹೊಂದಿರ ಬಹುದೆಂದು ದುಃಖಿಸಿದ್ದು 

ಅಶೋಕವನಕ್ಕೆ ಹೋದದ್ದು 

ಸೀತೆಯನ್ನು ಕಂಡದ್ದು 

ನಮಸ್ಕೃತ್ವಾಚ ರಾಮಾಯ 

ಲಕ್ಷ್ಮಣಾಯ ಚ ವೀರ್ಯವಾನ್ 

ಸೀತಾದರ್ಶನಸಂಹೃಷ್ಟೋ 

ಹನುಮಾನ್ ಸಂವೃತೋಭವತ್ 

(ರಾಮನಿಗೂ ಲಕ್ಷ್ಮಣನಿಗೂ ಮನಸಿನಲ್ಲೇ ನಮಸ್ಕರಿಸಿ, ಸೀತಾ ದರ್ಶನದಿಂದ ಸಂತುಷ್ಟನಾದನು) 

ರಾವಣ ಅಶೋಕವನಕ್ಕೆ ಬಂದದ್ದು 

ಭವ ಮೈಥಿಲಿ ಭಾರ್ಯಾ ಮೇ 

ಮೋಹಮೇನಂ ವಿಸರ್ಜಯ 

ಬಹ್ವೀನಾಮ್ಮುತ್ತಮ ಸ್ತ್ರೀಣಾಮ್ 

ಮಮಾಗ್ರಮಹಿಷಿ ಭವ 

  ನಾನು ರಾಮನ ವೇಷವನ್ನು ಮಾಡಿಕೊಂಡೆ, 

ಹುಲ್ಲುಕಡ್ಡಿ ಸಹೋದರನಂತೆ-ತುಳಸಿದಾಸರು )

ಪರಪುರಷರೊಂದಿಗೆ ನೇರವಾಗಿ ಮಾತನಾಡಬಾರದು 

ತೃಣಮಂತರತಃ ಕೃತ್ವಾ 

ಪ್ರತ್ಯುವಾಚ ಶುಚಿಸ್ಮಿತಾ 

ನಿವರ್ತಯ ಮನೋ ಮತ್ತ: 

ಸ್ವಜನೇ ಕ್ರಿಯತಾಂ ಮನ: 

ರಾವಣನು ಸೀತೆಗೆ ಎರಡು ತಿಂಗಳ ಗಡುವು ನೀಡಿ ಹೊರಟದ್ದು. 

ತ್ರಿಜಟೆಯ ಸ್ವಪ್ನ (ವಿಭೀಷಣನ ಮಗಳು) 

ಸೀತಾದೇವಿ ಪ್ರಾಣ ತೊರೆಯಲು ಮತ್ತೆ ಸಿದ್ಧಳಾದುದು 

ಸೀತಾ ದೇವಿಗೆ ಶುಭಶಕುನಗಳು 

ಎಡ ಭುಜ ಅದುರಿತು ಎಡ ಕಾಲು ಅದುರಿತು 

ಸೀತೆಯೊಡನೆ ಹೇಗೆ ಮಾತನಾಡಬೇಕೆಂದು ಹನುಮನ ವಿವೇಚನೆ 

ರಾಜ ದಶರತೋ ನಾಮಾ 

ರಥಾಕುಂಜರ ವಾಜಿಮಾನ್ 

ಪುಣ್ಯಶೀಲೋ ಮಹಾಕೀರ್ತಿರ್ 

ಋಜುರಾಸೀನ್ಮಹಾಯಶಾ:


ತಸ್ಯ ಪುತ್ರಾಹ್ ಪ್ರಿಯೋ ಜೇಷ್ಠಾ 

ಅಸ್ತರಾಧಿಪನಿಭಾನನಃ 

ರಾಮೋ ನಮ ವಿಶೇಷಜ್ಞ;

ಶ್ರೇಷ್ಠ; ಸರ್ವಧನುಷ್ಮತಾಂ 


ಜನಸ್ಥಾನವಧಮ್ ಶ್ರುತ್ವಾ 

ಹtow ಚ ಖರದೂಷನೌ 

ತತಸ್ತ್ವಮರ್ಷಪಹೃತಾ

 ಜಾನಕೀ ರಾವಣೇನ ತು 

ಇದೇನು ರಾವಣನ ಮಾಯೆಯೋ, ಆಗಿರಲಾರದು 

ಹನುಮಂತ ಕೆಳಗಿಳಿದು ಸೀತೆ ಎದುರು ನಿಲ್ಲುತ್ತಾನೆ. 

ಸೀತೆ ನೀನಾಗಿದ್ದರೆ ನಿನಗೆ ಮಂಗಳವಾಗಲಿ 

ನಾನು ಸೀತೆ, ದಶರಥನ ಸೊಸೆ, ರಾಮನ ಪತ್ನಿ 

ರಾಮಃ ಕಮಲಪತ್ರಾಕ್ಷಹ್ 

ಸರ್ವಸತ್ವ ಮನೋಹರ: 

ರೂಪದಾಕ್ಷಿಣ್ಯಸಂಪನ್ನಹ್ 

ಪ್ರಸುತೋ ಜನಕಾತ್ಮಜೆ 


ರಾಜವಿದ್ಯಾವಿನೀತಶ್ಚ 

ಬ್ರಾಹ್ಮಣಾನಾಮ೦ ಉಪಾಸಿತಾ  

ಶತ್ರುವಾನ್ ಶೀಲಸಂಪನ್ನೋ 

ವಿನೀತಶ್ಚ ಪರಂತಪಃ 


ರಾಮನ ೧೪ ಜೊತೆಗಳು ಸಮಪ್ರಮಾಣದಲ್ಲಿವೆ. - 

ಹನುಮನು ಮುದ್ರೆಯುಂಗುರ ಕೊಟ್ಟದ್ದು 

ಹನುಮನು ಸೀತೆಯನ್ನು ತನ್ನ ಜೊತೆ ಬರಲು ಹೇಳಿದ್ದು 

ಕಾಕಾಸುರನ ಕಥೆ ಹೇಳಿದ್ದು - ಗುರುತಿಗಾಗಿ. ಮತ್ತು ಚೂಡಾಮಣಿಯನ್ನು ನೀಡಿದ್ದು. 

ಲಕ್ಶ್ಮಣ ರಾಮನಿಗೆ ನನಗಿಂತಲೂ ಪ್ರಿಯವಾದವನು. ಅವನಿಗೆ ನನ್ನ ನೆನಪುಗಳು. 

ಸೀತೆ ಒಂದು ತಿಂಗಳ ಗಡುವು ನೀಡಿದ್ದು. 

ಹನುಮನು ಅಧೋಕಾ ವನವನ್ನು ಧ್ವಮ್ಸ ಮಾಡಿದ್ದೂ 

ಹನುಮನ ಘೋಷಣೆ 

ರಾಮನಿಗೆ ಜಯವಾಗಲಿ 

ರಾವಣನ ೫ ಮಂದಿ ಸೇನಾಪತಿಗಳ ಸಂಹಾರ 

ರಾವಣನ ಮಗನಾದ ಅಕ್ಷಕುಮಾರನ ಸಂಹಾರ 

ಇಂದ್ರಜಿತ್ ಹನುಮರ ಯುದ್ಧ 

ಬ್ರಹ್ಮಾಸ್ತ್ರದಿಂದ ಬಂಧಿಸಿ ರಾವಣನ ಬಳಿಗೆ ಒಯ್ದದ್ದದು 

ನಾನು ರಾಮಧೂತ. ನಿನ್ನನ್ನು ನೋಡಲೆಂದೇ ಬಂದಿತನಾದೆ 

ರಾಮನು ವಾಲಿಯನ್ನು ಒಂದೇ ಬಾಣದಿಂದ ಸಂಹರಿಸಿದ್ದಾನೆ 

ನಿನ್ನ ಲಂಕೆಯನ್ನು ನಾಶಮಾಡಲು ನಾನೊಬ್ಬನೇ ಸಾಕು 

ಸೀತೆಯನ್ನು ಅಪಹರಿಸಿದ ನಿನ್ನನ್ನು ಕೊಳ್ಳುವ ಪ್ರತಿಜ್ಞೆ ಮಾಡಿರುವನು ರಾಮ 

ದೂತನ ವಧೆ ಮಾಡಬಾರದೆಂದ ವಿಭೀಷಣ 

ಹನುಮನ ಬಾಲಕ್ಕೆ ಬೆಂಕಿ, ಲಂಕೆಯಲ್ಲಿ ಮೆರವಣಿಗೆ 

ಅಗ್ನಿಯು ಸುಡದಂತೆ ಸೀತೆಯ ಪ್ರಾರ್ಥನೆ 

ವಿಭೀಷಣ ಮನೆಯನ್ನು ಸುಡಲಿಲ್ಲ 

ಹನುಮನಿಗೆ ಸೀತೆಯ ಚಿಂತೆ. ಬೆಂಕಿ ಏನು ಮಾಡಿತೋ? 

ನನ್ನ ಬಾಲವನ್ನೇ ಸುಡದ ಬೆಂಕಿ, ಸೀತೆಯನ್ನು ಸುಟ್ಟೀತೆ? 

ಸೀತೆಯನ್ನು ಮತ್ತೆ ಭೇಟಿ ಮಾಡಿ ಹಿಂತಿರುಗಿ ಪ್ರಯಾಣ ಮಾಡಿದನು  

















೧೬) ಸುಂದರ ಕಾಂಡ 

        ಹನುಮಂತನ ಹಿಂಜರಿಕೆ 

        ರಾಮನ ಕೋಪ 

೧೭) ಯುದ್ಧ ಕಾಂಡ 

         ನಳ ನೀಲರಿಗೆ ಸೇತುವೆ ವಹಿಸಿದ್ದು , ಅಳಿಲು ಸೇವೆ 

         ರಾಮ ಲಕ್ಷ್ಮಣರ ಮೂರ್ಛೆ ಗರುಡನ ಆಗಮನ 

         ಹನುಮಂತ ತಂದ ಪರ್ವತ ಏನಾಯಿತು?

         ರಾವಣನ ಅಂತ್ಯ - ವಿಲಾಪ - ನನಗೆ ಲಕ್ಷ್ಮನಂತಹ ತಮ್ಮನಿತ್ತಿಲ್ಲ  

         ಜನನಿ ಜನ್ಮ ಭೂಮಿಶ್ಚ 


೧೮) ಉತ್ತರ ಕಾಂಡ 

         ನಾಯೀ ನ್ಯಾಯ 

         ಶಂಬೂಕ 

         ರಾಮ ಲಕ್ಷ್ಮಣರ ಅಂತ್ಯ 


೧೯) ರಾಮಾಯಣ ಮತ್ತು ಮ್ಯಾನೇಜ್ಮೆಂಟ್ (ನಿರ್ವಹಣೆ)

        - ರಾಮನಲ್ಲಿ ಯಾವುದೇ ಸೈನ್ಯ ಬಳಗಳಿರಲಿಲ್ಲ , ರಾವಣನಲ್ಲಿ ಇತ್ತು 

        - ಸುಗ್ರೀವ ಸಖ್ಯೆ - ಸ್ಟ್ರಾಟೆಜಿಕ್ ಅಲಯನ್ಸ್ 

        - ಮಂಗಗಳಿಗೆ ಪ್ರೇರಣೆ , ಅಳಿಲು ಭಕ್ತಿ 

        - ನಳ ನೀಲರಿಗೆ ಸೇತು ಕೆಲಸ ವಹಿಸಿದ್ದು 


   

 

     

     

No comments:

Post a Comment