Wednesday, 25 November 2020

ಕವನೋತ್ಸವ  

(ರಚನೆ: ಲಕ್ಷ್ಮೀನಾರಾಯಣ ಕೆ.)

ಯಾರಿವರು?

***

ಮೂರ್ತಿ ಚಿಕ್ಕದಾದರೂ 

ಕೀರ್ತಿ ದೊಡ್ಡದಂತೆ 

ಮೊದಲಾಟದಲ್ಲೇ ಸಿಡಿಯಿತಂತೆ 

ಭರ್ಜರಿ ಚೊಚ್ಚಲ ಶತಕ 

ಬ್ಯಾಟಿಂಗ್ ಕಲೆಯ ನಿಪುಣನೀತ 

ನೂರೇರಿಸಿದಾಗೆಲ್ಲ ನಾವ್  ಸೋತಿಲ್ಲವಂತೆ 

'ವಿಶ್ವ'ಮಾನ್ಯ ಕನ್ನಡಿಗನೀತ 

ಸಜ್ಜನ ಕ್ರಿಕೆಟಿಗನಂತೆ 


ಕನ್ನಡ ಪ್ರೇಮಿ ಮಿತ್ರರೇ 

ನವೆಂಬರ್ ಕನ್ನಡ ಮಾಸದಾದಿಯಲ್ಲಿ 'ಪ್ರಕಾಶ ಶೆಟ್ಟರ ವ್ಯಂಗ್ಯೋತ್ಸವ'ದಲ್ಲಿ ಪಾಲುಗೊಂಡಿದ್ದೀರಿ. ಇದರಿಂದ ಪ್ರೇರಿತನಾದ ನಾನು, ಮಾಸಾಂತ್ಯಕ್ಕೆ ಉಳಿದಿರುವ ಒಂಬತ್ತು ದಿನಗಳ ಸದುಪಯೋಗ ಮಾಡಿಕೊಳ್ಳಲೆಂದು 'ಕವನೋತ್ಸವ'ವನ್ನು ಇಂದಿನಿಂದ ಆರಂಭಿಸುತ್ತಿದ್ದೇನೆ. ಪ್ರತಿದಿನ ಮಧ್ಯಾಹ್ನದ  ೧೨ ಘಂಟೆಯ ಹೊತ್ತಿಗೆ, ವಿವಿಧ ಕ್ಷೇತ್ರಗಳಲ್ಲಿ ಪ್ರಖ್ಯಾತರಾದ ಕನ್ನಡಿಗರೊಬ್ಬರ ಬಗ್ಗೆ ಕವನವೊಂದನ್ನು ರಚಿಸಿ ಪ್ರಸ್ತುತಪಡಿಸುತ್ತೇನೆ. ಆ ವ್ಯಕ್ತಿ ಯಾರೆಂಬುದನ್ನು ಗುರುತಿಸ ತಮ್ಮ ಉತ್ತರವನ್ನು ಕೆಳಗೆ ನೀಡಿ. ನಾಳಿನ ಮಧ್ಯಾಹ್ನದ ೧೨ರವರೆಗಿನ ಸರಿಯುತ್ತರಗಳಲ್ಲಿ 'ಲಕ್ಕಿ ಡಿಪ್' ಮುಖಾಂತರ ಆಯ್ಕೆಯಾದ ಮಹನೀಯರೊಬ್ಬರ ಚಿತ್ರವನ್ನು, ಅವರು ಗುರುತಿಸಿದ ಪ್ರಖ್ಯಾತ ವ್ಯಕ್ತಿಯ ಭಾವಚಿತ್ರದೊಂದಿಗೆ ಮರುದಿನ ಈ ಮಾಧ್ಯಮದಲ್ಲಿ ಪ್ರಕಟಿಸಲಾಗುವುದು. 'ಕವನೋತ್ಸವದಲ್ಲಿ ಭಾಗವಹಿಸಿ, ಕನ್ನಡತನ ಮೆರೆಯಿರಿ' ಎಂಬುದು ನನ್ನ ಅರಿಕೆ. 


ಕವನೋತ್ಸವ - ೨

***

ಯಾರಿವರು?

***

ಚಾಮಯ್ಯ ಮೇಷ್ಟ್ರ ಪ್ರೀತಿಯೇ 

ಶಿಷ್ಯನಿಗೆ ಮುಳುವಾಯ್ತೆ?


ಸದಾಶಿವರಾಯರ ಅತಿಯಕ್ಕರೆಯೂ 

ಮಿನುಗುತಾರೆಯ ಮೆರೆಸದಾಯ್ತೆ?


ದುರಂತಗಳಿಗೆ ಮುನ್ನುಡಿ ಬರೆವುದೆ 

ಇವರ ಪಾತ್ರವಾಯ್ತೆ?


'ನಮ್ಮ ಮಕ್ಕಳೀ'ತಂದೆ 

'ಸತ್ಯಮಾರ್ಗದಿ ನಡೆವ ಶಕ್ತಿ' ಬೇಡಿದರೇಕೆ?

(ರಚನೆ: ಲಕ್ಷ್ಮೀನಾರಾಯಣ ಕೆ.)

ಕವನೋತ್ಸವ - ೩

***

ಯಾರಿವರು?

***

ಹೆಸರಲಿ ಶಾಂತನಾದರೂ 

ಹೋರಾಟದ ಹಠವಂತನೆ?

ಕಾಗೋಡ ಗೂಡಿಗೆ ಲೋಹಿಯಾರ 

ಕರೆತಂದ ಭಗೀರಥನಿವನೆ?

'ಅವಸ್ಥೆ'ಯ ಶೋಷಿತನಿವ 

ಅರಸರ ಭೂಸುಧಾರಣೆಗೆ ಪ್ರೇರಣೆಯಾದನೆ?

ಏನವಸರವಿತ್ತೋ, ಬೇಗ ತೆರಳಿ 

ಉತ್ಸಾಹಿಗಳೇಕೆ ಅಲ್ಪಾಯುಗಳೆಂದೆಮ್ಮ ಕಾಡಿದನೆ?

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೪

ಯಾರಿವರು?

***

ವಿಷವುಂಡವನ ಬೀಡ ನರ್ತಕಿಗೆ 

ಬೆಂಗಳೂರ ಬಿರುದೇಕೆ?

ಗೆಜ್ಜೆಪೂಜೆಗೆ ಕೊರಳೊಡ್ಡಿದರು, ನೃತ್ಯ, ಸಂಗೀತ 

ಸಾಹಿತ್ಯಗಳ  ಕರುಳಲೇ  ಪಡೆದಳೆ?

ತನು, ಮನ, ಧನಗಳ ಗಾನಗುರು ತ್ಯಾಗಯ್ಯಗರ್ಪಿಸಿ 

 ಅವರರಾಧನೆಗೆ ನಾಂದಿ ಹಾಡಿದಳೆ?

ಕೀಳೆಂಬ ಹಣೆಪಟ್ಟಿ ಹೊತ್ತು ಸೆಣಸಿ  

ಲೀನಳಾದಳಲ್ಲ ಗುರು ಚರಣದೊಳಗೆ!

(ರಚನೆ: ಲಕ್ಷ್ಮೀನಾರಾಯಣ ಕೆ.)


ಶಾಂತವೇರಿ ಗೋಪಾಲ ಗೌಡ 

ಕಿರು ಪರಿಚಯ 

*ಜನನ: ೧೯೨೩, ಅರಗ, ತೀರ್ಥಹಳ್ಳಿ, ಶಿವಮೊಗ್ಗ 

*ಸಮಾಜವಾದಿ ಲೋಹಿಯರವರ ಶಿಷ್ಯ 

*ಭೂರಹಿತ ರೈತರ ಹಕ್ಕುಗಳಿಗಾಗಿ 'ಕಾಗೋಡು ಚಳವಳಿ'ಯ ನೇತಾರ 

*ಯು.ಆರ್. ಅನಂತ ಮೂರ್ತಿಯವರು ಬರೆದ 'ಅವಸ್ಥೆ' ಕಾದಂಬರಿಯು ಇವರ ಹೋರಾಟದ ಕಥೆಯೆ.  ಈ ಕಾದಂಬರಿ ಮುಂದೆ ಸಿನಿಮಾವು ಆಯಿತು.  ಅನಂತ ನಾಗ್ ನಾಯಕರಾಗಿ ನಟಿಸಿದ್ದರು. 

*ಅವರ ಹೋರಾಟದಿಂದ ಮುಂದೆ ದೇವರಾಜ ಅರಸರು ಜಾರಿಗೆ ತಂದ  "ಉಳುವವನಿಗೆ ಭೂಮಿ" ಎಂಬ ಭೂಸುಧಾರಣೆಗೆ ಪ್ರೇರಣೆಯಾಯಿತು. 

*೧೯೫೨, ೬೨ ಮತ್ತು ೬೭ರಲ್ಲಿ ಮೂರು ಭಾರಿ ವಿಧಾನ ಸಭಾ ಸದಸ್ಯರಾಗಿ ಆಯ್ಕೆ. 

*೧೯೭೨ರಲ್ಲಿ, ೪೯ರ ಪ್ರಾಯದಲ್ಲೇ ಅಕಾಲಿಕ ಮರಣ 


ಕವನೋತ್ಸವ - ೫

ಯಾರಿವರು?

***

ಬಿದಿರ ಪಿಡಿದಿಹನೀತ, ಎಲ್ಲರನು ರಂಜಿಪನು  

ಬಿದಿರ ನಾದೋಪಾಸನೆಯ ಆರಾಧಕನಿವನು 

ದಣಿದ ಮನಗಳ ತಣಿಸಿ ಮುದವ ನೀಡಲು 

ಬಿದಿರ ಚಿಣ್ಣರ ಸೈನ್ಯವನೆ ಕಟ್ಟಿಹನು 

ಕಲಾರ್ಣವದ ರಸಪಾಕ ಉಣ ಬಡಿಪನೀತ 

ಅದರ ಸ್ವಾದವನೊಮ್ಮೆ ಸವಿಯ ಬನ್ನಿ 

ನಮ್ಮವರೊಳಗಿನೀ ವಾಮನ ಮೂರ್ತಿ 

ತ್ರಿವಿಕ್ರಮನಾದ ಕಥೆಯ ತಿಳಿಯ ಬನ್ನಿ 

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೫

ಸರಿಯುತ್ತರ: ವೇಣು ವಿದ್ವಾನ್ ಶ್ರೀ ಎಚ್. ಎಸ್. ವೇಣುಗೋಪಾಲ್ 

ವಿಜೇತರು: ಶ್ರೀ. 

ಅಭಿನಂದನೆಗಳು 

ವೇಣು ವಿದ್ವಾನ್ ಶ್ರೀ ಎಚ್. ಎಸ್. ವೇಣುಗೋಪಾಲ್

ಕಿರು ಪರಿಚಯ 

ಬೆಂಗಳೂರಿನ ಹಿರಿಯ ವೇಣುವಾದಕ ಶ್ರೀ. ಎಚ್. ಎಸ್. ವೇಣುಗೋಪಾಲರವರು, ಮೈಸೂರಿನ ಕೀರ್ತಿಶೇಷ ವೇಣು ವಿದ್ವಾನ್ ಎ. ವಿ. ಪ್ರಕಾಶ್ ರವರ ಶಿಷ್ಯರಲ್ಲಿ ಪ್ರಮುಖರು. ಕಳೆದ ೫ ದಶಕಗಳಿಂದ ಬೆಂಗಳೂರನ್ನು ತಮ್ಮ ಸಾಧನೆಯ ಕ್ಷೇತ್ರವನ್ನಾಗಿ ಮಾಡಿಕೊಂಡಿರುವ ಇವರು ಕರ್ನಾಟಕ ಸಂಗೀತ ಪದ್ಧತಿಯ ಎಲ್ಲ ಪ್ರಕಾರಗಳಲ್ಲೂ ನಿಷ್ಣಾತರು. ಹೆಸರಿಗೆ ತಕ್ಕ ವೇಣುಮಾಧುರ್ಯವನ್ನು ದೈವದತ್ತವಾಗಿ ಮೈಗೂಡಿಸಿಕೊಂಡಿರುವ ಇವರು, 'ಬಾರೋ ಕೃಷ್ಣಯ್ಯ, ಕೃಷ್ಣ ನೀ ಬೇಗನೆ ಬಾರೋ, ಆಡಿಸಿದಳೇಶೋಧ' ಮುಂತಾದ ಭಕ್ತಿಭಾವದ ಗೀತೆಗಳನ್ನು ನುಡಿಸಿದಾಗ ತಲೆದೂಗದ ರಸಿಕರೇ ಇಲ್ಲವೆನ್ನಬಹುದು. ಕೆಲವು ತಿಂಗಳ ಹಿಂದೆ ಅವರ ಆನ್ಲೈನ್ ಕಾರ್ಯಕ್ರಮವೊಂದರಲ್ಲಿ ಕಟ್ಟಿಕೊಟ್ಟ ಕಲ್ಯಾಣಿ ರಾಗದ 'ರಾಗ, ತಾನ, ಪಲ್ಲವಿ'ಯ ಸವಿಸ್ತಾರ ಪ್ರಸ್ತುತಿ, ನಮ್ಮೆಲ್ಲರಿಗೂ ಆ ರಾಗದ ಎಲ್ಲ ಸೂಕ್ಷಮತಿಸೂಕ್ಷ್ಮ ಆಯಾಮಗಳ  ದರ್ಶನ ಮಾಡಿಸಿತೆಂದರೆ, ಅತಿಶಯೋಕ್ತಿಯಲ್ಲ.  

ಕೆಲವು ವರ್ಷಗಳ ಹಿಂದೆ ಅವರು ಶತಾವಧಾನಿ ಗಣೇಶ್ ಹಾಗೂ ಗಮಕಿ ಶ್ರೀ ಚಂದ್ರಶೇಖರ ಕೆದಿಲಾಯ ರವರೊಂದಿಗೆ ನಡೆಸಿಕೊಟ್ಟ ಮಹಾಭಾರತದ 'ವಾದನ, ವಾಚನ, ವ್ಯಾಖ್ಯಾನ'ದ ಸುಮಾರು ೨೪೦ ಘಂಟೆಗಳ ವಿನೂತನ ಕಾರ್ಯಕ್ರಮ ಅವಿಸ್ಮರಣೀಯವಾದುದು. 

ಬಾಲ ಪ್ರತಿಭೆಗಳನ್ನು ಗುರುತಿಸಿ, ಅವರುಗಳನ್ನು ಕೈಹಿಡಿದು ಪೋಷಿಸಿ, ಬೆಳಸುವ ಹೃದಯವಂತ ಗುರುಗಳಾಗಿ ಶ್ರೀಯುತರು ಸೇವೆ ಸಲ್ಲಿಸುತ್ತಿರುವುದು, ಬೆಂಗಳೂರಿಗರ ಸುದೈವ ಎನ್ನಬಹುದು. ಈ ಮಹಾಗುರುಗಳ  'ಗೋಕುಲಂ ಸಂಗೀತ ಶಾಲೆ'ಯ ಹಲವು ಬಾಲ ಹಾಗು ತರುಣ ಶಿಷ್ಯಂದಿರುಗಳು ಈಗಾಗಲೇ ಹಲವು ಸಂಪೂರ್ಣ ಮಟ್ಟದ ಶಾಸ್ತ್ರೀಯ ಸಂಗೀತ ಕಚೇರಿಗಳನ್ನು ದೇಶ-ವಿದೇಶಗಳಲ್ಲಿ ನಡೆಸಿಕೊಟ್ಟಿರುವುದು ಸಂತೋಷದ ಸಂಗತಿ. 

ಕರ್ನಾಟಕದ ಬಾಲ  ಪ್ರತಿಭೆಯಾಗಿ ಗುರುತಿಸಲ್ಪಟ್ಟು, ಈಗ ಪ್ರೌಢ ವಿದುಷಿಯಾಗಿ  ಬೆಳೆದಿರುವ ಕುಮಾರಿ ವಾರಿಜ ಶ್ರೀ ವೇಣುಗೋಪಾಲ್, ಶ್ರೀಯುತರ ಸುಪುತ್ರಿ ಹಾಗು ಶಿಷ್ಯೆ. ಗಾಯಕಿಯಾಗಿ, ವೇಣುವಾದಕಿಯಾಗಿ ಹೆಸರುಗಳಿಸಿರುವ ಈಕೆ ಈಗಾಗಲೇ, ದೇಶ-ವಿದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಪ್ರಯೋಗಶೀಲೆಯಾದ ಇವರು ದೇಶ-ವಿದೇಶಗಳ ಸಂಗೀತಗಾರರುಗಳೊಂದಿಗೆ ಸಮ್ಮಿಶ್ರಣದ ಸಂಗೀತವನ್ನು (ಫ್ಯೂಶನ್ ಮ್ಯೂಸಿಕ್)  ಸಂಯೋಜಿಸಿದ್ದಾರೆ. 

ಶ್ರೀ ವೇಣುಗೋಪಾಲರವರ ಗೋಕುಲಂ ಸಂಗೀತ ಶಾಲೆ ಪ್ರತಿವರ್ಷ ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮವೇ 'ಕಲಾರ್ಣವ.' ದೇಶದ ಪ್ರಖ್ಯಾತ ಸಂಗೀತಗಾರರುಗಳಾದ ಶಂಕರ್ ಮಹಾದೇವನ್, ಹರಿಹರನ್, ಎಸ್.ಪಿ. ಬಾಲಸುಬ್ರಮಣ್ಯಂ ಮುಂತಾದವರುಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿರುವದು ಶ್ರೀಯುತರ ಸಂಘಟನಾ ಸಾಮರ್ಥ್ಯದ ಪ್ರತಿಫಲವೇ ಸರಿ. 

ಕವನೋತ್ಸವ - ೬

(ಗೋಪಾಲಕೃಷ್ಣ ಅಡಿಗರ ನೆನೆಯುತ್ತಾ......)

ಯಾರಿವರು?

***

ಕೃಷ್ಣರಾಜರ ಮುರಳಿ ಕರೆಯಿತೆ 

ದೂರ ತೀರಕೆ ನಿನ್ನನು?

ಸಪ್ತ ಸಾಗರದಾಚೆ ಹಾರಿ 

ಸೇರಿದೆಯಾ ಕರುನಾಡನು?


ಹೂವ ಹಾಸಿಗೆ ಹಸಿರು ಹೊದಿಕೆ 

ಮರರೆಂಬಗಳ ಚುಂಬನ 

'ಕೆಂಪು ತೋಟ'ದ ಬೇಲಿಯೊಳಗೆ 

ನಿರ್ಮಿಸಿದೆ ಸ್ವರ್ಗವೊಂದನ!


ಬಿಳಿಯ ಸೀರೆಯನುಟ್ಟು ಬಳುಕುವ  

ಜಲಕನ್ನಿಕೆಯರ ನರ್ತನ 

ಸೆಳೆವ ಬೃಂದಾವನವ ಕಟ್ಟಿ 

ಸಿಂಗರಿಸಿದೆ ಕಾವೇರಿ ಅಣೆಕಟ್ಟನ!


ಕರ್ಮಭೂಮಿಯಲೇ ಮಣ್ಣಾದ 

ಸಾರ್ಥಕವು ನಿನ್ನೀ ಜೀವನ 

ಹಸಿರು ಸಂದೇಶದ ನಿನ್ನ 

ನೆನೆಯುತಿದೆ ಕನ್ನಡ ವನ, ಮನ 

(ರಚನೆ: ಲಕ್ಷ್ಮೀನಾರಾಯಣ ಕೆ.)



ಕವನೋತ್ಸವ - ೭

ಯಾರಿವರು?

***

ಮಧುರ ಕಂಠದ ಪುಟ್ಟ ಕೋಗಿಲೆಗೆ 

ಕುತ್ತಾಯ್ತೆ ಕೊರಳ ನೋವೊಂದು?

ಗಡುಸಾಯ್ತು ಗಾನಗಂಗೆಯ ಸಿರಿಕಂಠವಂದು!


ಸೋಲೊಪ್ಪುವುದುಂಟೆ 

ಗಂಡುಮೆಟ್ಟಿನ ನಾಡ ದಿಟ್ಟ ಮಹಿಳೆ?

ಒಲಿಸಿಕೊಂಡಳಲ್ಲಾ ಗಡುಸು ದನಿಗೆ ಭಾವದ ಸೆಲೆ!


ಸಣ್ಣ ಝರಿಯೊಂದು ಬೆಟ್ಟಗುಡ್ಡಗಳ ಬಳಸಿ 

ಮೈತುಂಬಿ ಭೋರ್ಗರೆದು ನದಿಯಾಗುವಂತೀ 

ಗಂಗೆಯ ಗಾನಶ್ರುತಿ 


ಭೀಮ, ಬಸವ, ಮಲ್ಲಿಕಾರ್ಜುನರ ಸೆಣಸಿ 

ಗೆದ್ದು ಬೀಗಿದಳಲ್ಲಾ ಹೆಣ್ತನವ ಮೆರೆಸಿ 

ಪದ್ಮವಿಭೂಷಣೆಯಾಗಿ ಕರುನಾಡ ಗೆಲಿಸಿ 

(ರಚನೆ: ಲಕ್ಷ್ಮೀನಾರಾಯಣ ಕೆ.) 


ಕವನೋತ್ಸವ - ೮

ಯಾರಿವರು?

***

ಗೋಕಾಕದ ಜಲಧಾರ 

ಕರುನಾಡ ನಯಾಗರ 

ಅಲ್ಲಿ ಜನಿಸಿತೊಂದು 

ಗಣಿತದ ಧ್ರುವತಾರ 


ಬೆಳಗಿತದು  

ಗಂಡುಮೆಟ್ಟಿನ ನಾಡ  

ವಿದ್ಯಾಲಯಗಳ 

ಪರಿಕರ 


ದೂರದೈದು ನದಿಗಳ ಬೀಡ  

ಆಳಿದ್ದು ಅದರ ಶಿಖರ 

ಅದರ  ಸ್ಮರಣೆಯೆ 

ನಮಗೆ ಶ್ರೀಕಾರ 

(ರಚನೆ: ಲಕ್ಷ್ಮೀನಾರಾಯಣ ಕೆ.)


ಕವನೋತ್ಸವ - ೯

ಯಾರಿವರು?

***

ನಾನೆಂಬುದು ಅಹಂಕಾರ, ನೀನೆಂಬುದು ಔದಾರ್ಯ 

ನಾನು, ನೀನುಗಳ ಮಿಲನವೇ  'ಆನು'

'ನಾನು, ನೀನು, ಆನು'ಗಳ ನಿಯಂತ್ರಣವೇ 

'ತಾನು' ಎಂದವರಿವರು 


ತೋಳುಗಳ ತೋಳ ಬಂಧಿ  

ತುಟಿಗಿತ್ತ ಹಾಲು ಜೇನು 

ಹೊಟ್ಟೆಗಿತ್ತ ಜೀವ ಫಲವೇ 

ಸಾಕೆಂದವರಿವರು 


ಕೂಲಿ ಕಂಬಳಿಯ ಪಾಲಿನ 

ಮೈದೊಗಲಿಗೆ 

ಧೂಳಿನ ಭಂಡಾರ ಹಣೆ ಹತ್ತಿದರೂ 

ಕುರುಡು ಕಾಂಚಾಣ ಬೇಡವೆಂದವರಿವರು 

(ರಚನೆ: ಲಕ್ಷ್ಮೀನಾರಾಯಣ ಕೆ.) 




Mini Poetry Festidval - 1

Who is this?

***

Used to count, when a child

not money, but the count of letters and words

composed many rhythmic poems 

Did he become famous? Nobody knows


Did plenty of counting during youth

not the count of letters and words

 but the county of money

the task of guarding money

 where did he do? You all know it!

   

Does he belong to 'Simha Rashi?', nobody knows

but he joined an 'union of Lions,' boasted 'I'm Lion too'

travelled all over the world

Who met his bill, Nobody knows


Even after retirement

he hasn't given up his instincts

does so many 'online meetings'!

with whom, you don't know it all


He carries the name of Tirupati Lord

cautions others not to fall for 'namas'

but he himself, often sports 'Lords namas'

Can you tell who he is?

(Written by

Lakshminarayana K)

Notes:

1) 'nama' often is a kannada phrase

 for getting cheated

2) 'nama' more often refers to the holy mark 

on Tirupati Lord's forehead


ಕಿರು ಕವನೋತ್ಸವ - ೧

ಯಾರಿವರು?

***

ಬಾಲ್ಯದಲ್ಲೆ ಮಾಡುತಿದ್ದ ಲೆಕ್ಕಾಚಾರ 

ಹಣಕಾಸಿನದಲ್ಲ, ಗುರು-ಲಘುಗಳದು 

ರಚಿಸಿದ್ದ ಛಂದಬದ್ಧ ಕವನಗಳ 

ಕವಿಪುಂಗವನಾದನೋ? ಗೊತ್ತಿಲ್ಲ 


ಯವ್ವನದಲ್ಲೂ ಮಾಡಿದ ಲೆಕ್ಕಾಚಾರ 

ಗುರು-ಲಘುಗಳದಲ್ಲ, ಹಣಕಾಸಿನದು 

ಧನ ಕಾಯುವ ಕಾಯಕ ಎಲ್ಲಿ ಮಾಡಿದನೀವ?

ನಿಮಗೆಲ್ಲಾ ಗೊತ್ತಲ್ಲಾ!


ಸಿಂಹರಾಶಿಯವನಿವನೋ, ತಿಳಿದಿಲ್ಲ 

'ಸಿಂಹಗಳ ಕೂಟ'  ಸೇರಿ, ತಾನೂ ಸಿಂಹನೆಂದ 

ತಿರುಗಿಬಂದ ದೇಶ-ವಿದೇಶ

ಖರ್ಚು ಯಾರದೊ? ಗೊತ್ತಿಲ್ಲ 


ನಿವೃತ್ತಿಯಾದರು ಬಿಟ್ಟಿಲ್ಲ 

ಪ್ರವೃತ್ತಿಯ ಗೀಳ 

'ಆನ್ಲೈನ್ ಮೀಟಿಂಗ್' ಮಾಡುತ್ತಾನಲ್ಲ 

ಯಾರ್ಯಾರ ಜೊತೆಯೊ, ಎಲ್ಲ ತಿಳಿದಿಲ್ಲ 


ತಿರುಪತಿ ಹೆಸರಿವನಿವ 

'ನಾಮ' ಯಾರಿಗೂ ಹಾಕಿದ್ದಿಲ್ಲ 

ಆಗಾಗ ಹಾಕಿಕೊಳ್ಳುತ್ತಾನೆ 

ಅವನಿಗವನೇ ನಾಮ 

ಯಾರಿವನು? ಹೇಳಿ ನೀವೆಲ್ಲಾ

(ರಚನೆ: ಲಕ್ಷ್ಮೀನಾರಾಯಣ ಕೆ.)


೧) ಜಿ.ಆರ್. ವಿಶ್ವನಾಥ್ ಕ್ರಿಕೆಟ್ ಪಟು ಸುಧೀರ್ ಕುಲ್ಕರ್ಣಿ  ಸುಧೀಂದ್ರ ಕುಮಾರ್ 

೨) ಕೆ.ಎಸ್.ಅಶ್ವಥ್ ಚಿತ್ರನಟರು ಪದ್ಮ ಪ್ರೇಮಚಂದ್ರ ಕೃಷ್ಣಯ್ಯ 

೩) ಶಾಂತವೇರಿ ಗೋಪಾಲ ಗೌಡ  ರೈತ ಹೋರಾಟಗಾರರು  ಸುಧೀರ್ ಕುಲ್ಕರ್ಣಿ ಸುರೇಶ ಕೇಣಿ 

೪) ಬೆಂಗಳೂರು ನಾಗರತ್ನಮ್ಮ ಗಾಯಕಿ-ನರ್ತಕಿ  ಆರ್.ಕೆ. ಕೃಷ್ಣ ಅಯ್ಯಂಗಾರ್ ಪಾರ್ವತಿ ಮೋಕ್ಷಗುಂಡಂ 

೫) ಎಚ್. ಎಸ್. ವೇಣುಗೋಪಾಲ್ ವೇಣುವಾದನ ರಕ್ಷಾ ಮಹೇಂದ್ರ ನಾಗರಾಜ್ 

೬) ಜಿ.ಎಚ್. ಕ್ರುಮ್ಬಿಗಲ್ ತೋಟಗಾರಿಕೆ ನರಸಿಂಹ ಮೂರ್ತಿ ಎಲ್. ನಾಗರಾಜ ಜೋಯಿಸ್ 

೭) ಗಂಗೂಬಾಯಿ ಹಾನಗಲ್ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ  ಜಿ.ಎಸ್.ಟಿ.ಪ್ರಭು ಶ್ರೀಕಾಂತ್ ಕೆ.ಆರ್. 

೮) ಡಿ. ಸಿ. ಪಾವಟೆ ಶಿಕ್ಷಣ ತಜ್ಞ ನಾಗೇಂದ್ರ  ಎ. ವೆಂಕಟರಾಜು ಎಚ್. 

೯) ದ.ರಾ. ಬೇಂದ್ರೆ ವರಕವಿ ಅನ್ನಪೂರ್ಣ ವೆಂಕಟನಂಜಪ್ಪ ಪದ್ಮ ರೇಖಾ 



ಪ್ರಖ್ಯಾತರ ಹೆಸರು ಕ್ಷೇತ್ರ ವಿಜೇತರು ಕ್ರ. ಸಂ. 


(ಮೂಲ ಕವನ ಹಿಂದಿಯಲ್ಲಿ 

ಅಟಲ್ ಬಿಹಾರಿ ವಾಜಪೇಯೀ 

ಭಾವಾನುವಾದ 

ಲಕ್ಷ್ಮೀನಾರಾಯಣ ಕೆ.)

ಗಳ 










 








 

 

 






Tuesday, 17 November 2020

 ಪ್ರಕಾಶ್ ಶೆಟ್ಟರ 

ವ್ಯಂಗ್ಯೋತ್ಸವ 

(ರಚನೆ: ಲಕ್ಷ್ಮೀನಾರಾಯಣ ಕೆ)

***

ಶೆಟ್ಟರ ಕುಂಚವು ಕುಣಿಯಿತು ಎಂದರೆ 

ಪುಟ್ಟಪ್ಪ, ಬೇಂದ್ರೆ, ಕಾರಂತರೆದ್ದೇಳುವರು 

ರಾಮಾಯಣ, ಗಂಗಾವತರಣ, ಮೂಕ್ಕಜ್ಜಿಯ ಕಥೆ ಹೇಳುವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ರಾಜ್, ರಾಜು, ಬಾಲು ಕಣ್ಣಲಿ ಕುಣಿಯುವರು 

ಬಾಡಿದ  ಬೆಳ್ಳಿಯ ತೆರೆಗೆ ಹೊಸ ಮೆರಗೊಂದನು ನೀಡವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ತ್ರಿವೇಣಿ, ಇಂದಿರೆ ಲೇಖನಿ ಹಿಡಿಯುವರು 

 ಕಾವೇರಿ, ಚಂದ್ರೆಯರ ತೆರೆಗಿಳಿಸಿ,  ಪುಟ್ಟಣ್ಣ ಹೆಣ್ತನ ಮೆರೆಯುವರು 


ಶೆಟ್ಟರ  ಕುಂಚವು ಕುಣಿಯಿತು ಎಂದರೆ 

ರಾಜರತ್ನಂ, ಬೀಚಿ ಗರಿಗೆದರುವರು 

ಮುದುಡಿದ ಮನಕೆ ಮುದ ನೀಡುತ ಹಾಸ್ಯದ ಹೊನಲ ಹರಿಸುವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ಕೆಎಸ್ಸ್ ನರ ಶೃಂಗಾರ, ನಿಸಾರರ ಜೋಗ ಕಣ್ಸೆಳೆಯುವುದು 

ಡೀವೀಜಿಯ ಮಂಕುತಿಮ್ಮನ ತೇಜಸ್ವಿ ಬಂಡಾಯ ಬಡಿದೇಳಿಪುದು 



Sunday, 15 November 2020

2. ಅಂತಿಮ ವಿದಾಯ

        ಅಂತಿಮ ವಿದಾಯ 


 
 

ತರುಣ ವೈದ್ಯರಾದ ಡಾ. ಕಿರಣ್ ರವರಂದು ಉದ್ವಿಗ್ನರಾಗಿದ್ದರು. ಸಮಯ ಸುಮಾರು ರಾತ್ರಿ ೯ ಗಂಟೆಯಾಗಿತ್ತು. ಶವವೊಂದನ್ನು ಹೊತ್ತ ಆಂಬುಲೆನ್ಸ್ ವಾಹನವೊಂದು ನಗರದ ದಕ್ಷಿಣ ಭಾಗದಲ್ಲಿದ್ದ ಸ್ಮಶಾನದ ಕಡೆ ಸಾಗಿತ್ತು. ಶವದ ಜೊತೆಗೆ ಡಾ.ಕಿರಣ್ ರವರು ಕುಳಿತಿದ್ದರು.  ಸ್ಮಶಾನದ ಪರಿಸ್ಥಿತಿಯ ಪೂರ್ವಾಪರಗಳ ಸಮೀಕ್ಷೆಗೆಂದೇ ಮುಂಚೆಯೇ ತೆರಳಿದ್ದ ಆಸ್ಪತ್ರೆ ಸಿಬ್ಬಂದಿ ಸತೀಶರಿಂದ, ಡಾ.ಕಿರಣ್ ರವರಿಗೆ ಫೋನ್ ಕರೆಯೊಂದು ಬಂದಿತ್ತು. 'ಸ್ಮಶಾನದ ಬಳಿ ದೊಣ್ಣೆ, ಮಚ್ಚುಗಳನ್ನು ಹಿಡಿದ ನೂರಾರು  ಜನಗಳು ನೆರೆದಿದ್ದಾರೆ.  ಉದ್ರಿಕ್ತರಾದಂತೆ ಕಾಣುತ್ತಿರುವ ಅವರುಗಳು ಹೊಡಿ-ಬಡಿಯಲು ಸಿದ್ಧರಾದಂತಿದೆ. ನಾವು ತರುತ್ತಿರುವ ಶವದ ಅಂತ್ಯಕ್ರಿಯೆಯನ್ನು ಶತಾಯಗತಾಯ ತಡೆಯುವುದೇ ಅವರ ಉದ್ದೇಶದಂತಿದೆ' ಎಂಬುದಾಗಿ ತಿಳಿಸಿದ ಸತೀಶರ ದನಿಯಲ್ಲಿ ಆತಂಕವಿತ್ತು. ದೂರದಿಂದಲೇ ಸ್ಮಶಾನದ ಕಡೆ ಕಣ್ಣು ಹಾಯಿಸಿದ ಚಾಲಕ ದೇವೀಂದರ್ ರವರು ಕೂಡ ಡಾ.ಕಿರಣರವರನ್ನು ನೋಡುತ್ತಾ, ಏನೂ ಮಾಡಲು ಸಾಧ್ಯವಿಲ್ಲವೆನ್ನುವಂತೆ ತಲೆಯಾಡಿಸಿದರು. ಡಾ. ಕಿರಣ್ ರವರೀಗ ಗಾಬರಿಗೊಂಡಂತೆ ಕಂಡರು. 

ಸ್ಮಶಾನದ ಬಳಿ ನೆರೆದ ಜನರುಗಳೆಲ್ಲರೂ ಸ್ಥಳೀಯರೇ ಆಗಿದ್ದರು. ಕೋವಿಡ್ನಿಂದ ಮೃತಪಟ್ಟವರೊಬ್ಬರ ಶವವನ್ನು ಮಣ್ಣು ಮಾಡಲು ತಮ್ಮ ಸ್ಮಶಾನದ ಕಡೆ ಕರೆತರಲಾಗುತ್ತಿದೆ ಎಂಬ ಸುದ್ದಿ ಅವರುಗಳಿಗೆ ಹೇಗೋ ತಲುಪಿತ್ತು. ಕೋವಿಡ್ನಿಂದ ಸತ್ತ ವ್ಯಕ್ತಿಯ ಸಮಾಧಿಯಿಂದ ತಮ್ಮಗಳಿಗೂ ಕೋವಿಡ್ ಹರಡುವುದು ಖಚಿತವೆಂದು ನಂಬಿದ್ದ ಅವರುಗಳು, ಶವ ಸಂಸ್ಕಾರವನ್ನು ತಡೆಯಲು ಸನ್ನದ್ಧರಾಗಿದ್ದರು. ತಡ ರಾತ್ರಿಯಾದರೂ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತ್ತು. ನೂರಾರು ಜನ ಶಸ್ತ್ರಧಾರಿಗಳು  ನೋಡು ನೋಡುತ್ತಲೇ ಜಮಾಯಿಸಿದ್ದರು. ಮಣ್ಣು ಮಾಡಲು ತರುತ್ತಿರುವ ಶವ ನಗರದ ಖ್ಯಾತ  ವೈದ್ಯೆ ಡಾ. ಸುಲೋಚನಾ ಸಿಂಗ್ ರವರದ್ದು ಎಂಬುದನ್ನೂ ಲೆಕ್ಕಿಸದ ಅವರುಗಳು ಹಿಂಸಾಚಾರಕ್ಕೆ ಕಾಲು ಕೆರೆದು ನಿಂತಿದ್ದಂತ್ತಿತ್ತು.   

ಅಪಾಯದ ಮುನ್ಸೂಚನೆಯನ್ನರಿತ ಚಾಲಕರು ತಮ್ಮ ಆಂಬುಲೆನ್ಸ್ ವಾಹನವನ್ನು ಸುಮಾರು ೪ ಕಿ.ಮೀ. ದೂರವಿರುವ ಮತ್ತೊಂದು ಸ್ಮಶಾನಕ್ಕೆ ಕರೆದೊಯ್ದಿದ್ದರು. ಬೇಗನೆ ಗುಂಡಿಯೊಂದನ್ನು ಅಲ್ಲಿ ತೋಡಲು, ಜೆಸಿಬಿ ಮೇಷಿನ್ನೊಂದನ್ನು  ಕೂಡ ತರಿಸಲಾಗಿತ್ತು.  ಅದು ೧೨ ಅಡಿ ಆಳದ ಗುಂಡಿಯೊಂದನ್ನು ರಾತ್ರಿ ೧೧. ೩೦ರ ವೇಳೆಗೆ ತೆಗೆದು ಮುಗಿಸಾಗಿತ್ತು.  ನಾಲ್ಕು ವೈದ್ಯರುಗಳು, ಒಬ್ಬ ಮಹಿಳಾ ನರ್ಸ್ ಮತ್ತು ಒಂದೆರಡು ಶುದ್ಧೀಕರಣದ ಸಿಬ್ಬಂದಿಗಳನೊಳಗೊಂಡ ತಂಡವೊಂದೂ ಅಲ್ಲಿಗೆ ಬಂದು ಸಿದ್ಧವಾಗಿ ನಿಂತಿತ್ತು. ಎಲ್ಲಾ ವಿಧಿವಿಧಾನಗಳನ್ನು ಮುಗಿಸಿ, ಶವವನ್ನು ಗುಂಡಿಯೊಳಗೆ ಇಳಿಸಿಯೂ ಆಗಿತ್ತು. ಇದ್ದಕಿದ್ದಂತೆ ದೊಣ್ಣೆ, ಮಚ್ಚುಗಳನ್ನು ಹಿಡಿದ ೬೦-೭೦ ಪುಂಡರ ಗುಂಪೊಂದು ಪ್ರತ್ಯಕ್ಷವಾಗಿ, ದಿಢೀರನೆ ಎಲ್ಲರನ್ನೂ ಹೊಡಿ-ಬಡಿಯಲಾರಂಭಿಸಿತು. ಆ ಕ್ರೂರಿಗಳು ಎಸೆದ ಕಲ್ಲು, ಇಟ್ಟಿಗೆಗಳಿಂದ ಡಾ. ಕಿರಣ್ ಮತ್ತು ಅವರ ಸಹಚರರು ತೀವ್ರವಾಗಿ ಗಾಯಗೊಂಡರು.  ಆಕ್ರಮಣಕಾರಿಗಳ ಗುಂಪಿನಲ್ಲಿದ್ದ ಒಂದಿಬ್ಬರು ಕಿಡಿಗೇಡಿಗಳನ್ನು ಡಾ. ಕಿರಣ್ ಗುರುತಿಸಿ, ಹೊಡಿ-ಬಡಿಯುವುದನ್ನು ನಿಲ್ಲಿಸುವಂತೆ ವಿನಂತಿಸಿಕೊಂಡರೂ, ನಿರ್ದಯಿಗಳಾದ ಅವರು ಕರುಣೆ ತೋರದಾದರು.  ನಿಷ್ಕರುಣಿಗಳಾದ ಅವರು ಮಹಿಳಾ ನರ್ಸ್ ರವರನ್ನು ಕೂಡ ಲೆಕ್ಕಿಸದೆ ಥಳಿಸಿದರು. ನೋಡು ನೋಡುತ್ತಿದ್ದಂತೆ, ಚಾಲಕ ದೇವಿಂದರ್ ಹಾಗು ಸಹಾಯಕ ಸತೀಶ್ ರವರಗಳು ತಲೆ- ಪೆಟ್ಟಿನಿಂದ ರಕ್ತಸ್ರಾವಗೊಂಡು ನೆಲಕ್ಕುರುಳಿದರು. ಶವದ ಪೆಟ್ಟಿಗೆಯನ್ನೂ ಬಿಡದ ಅವರುಗಳು ಕಲ್ಲುಗಳಿಂದ ಅದನ್ನೂ ಚಚ್ಚಿಟ್ಟರು. ಬೇರೆ ಮಾರ್ಗ ತೋಚದೆ, ಡಾ. ಕಿರಣ್ ಮತ್ತವರ ಉಳಿದ ಸಂಗಡಿಗರು ಹೇಗೋ ಶವವನ್ನು ಮೇಲೆತ್ತಿ ಪೆಟ್ಟಿಗೆಯೊಳಗೆ ಸೇರಿಸಿ, ತಮ್ಮ ವಾಹನದೊಳಗೆ ತಳ್ಳಿದರು. ಚಾಲಕ ದೇವೀಂದರ್ ರವರು ಪ್ರಜ್ಞಾಹೀನರಾಗಿದ್ದರಿಂದ, ಡಾ. ಕಿರಣ್ ರವರೆ ವಾಹನವನ್ನು ನಡೆಸಬೇಕಾಯ್ತು. ತೀವ್ರವಾಗಿ ಗಾಯಗೊಂಡ ಸತೀಶ ಮತ್ತು ದೇವೀಂದರ್ ರವರುಗಳನ್ನು ಮೊದಲು ಹತ್ತಿರದ ಆಸ್ಪತ್ರೆಯೊಂದಕ್ಕೆ ಸೇರಿಸಲಾಯ್ತು. ವಾಹನದೊಳಗೀಗ ಡಾ. ಕಿರಣ್ ಏಕಾಂಗಿಯಾಗಿ ಬಿಟ್ಟಿದ್ದರು. 

ಶವ ಹೊತ್ತ ವಾಹನದೊಂದಿಗೆ ಡಾ. ಕಿರಣ್ ಸಮೀಪದ ಪೊಲೀಸ್ ಠಾಣೆಯೊಂದನ್ನು ಸೇರಿದರು.  ವಿವರ ತಿಳಿದ ಪೊಲೀಸ್ ಅಧಿಕಾರಿ, ಅವಶ್ಯಕ ಸಿಬ್ಬಂದಿಗಳ ತಂಡವನ್ನು ಕೂಡಲೇ ಕರೆಸಿದರು.  'ನಗರದಿಂದ ದೂರವಿರುವ ಬೇರೊಂದು ಕಡೆಗೆ ಹೋಗೋಣ'ವೆಂಬ ಪೊಲೀಸರ ಸಲಹೆಯಂತೆ ಶವದ              ವಾಹನವನ್ನೀಗ  ಡಾ. ಕಿರಣ್, ಮೂರನೇ ಸ್ಮಶಾನದ ಕಡೆಗೆ ಚಲಾಯಿಸಿದರು. ಜೆಸಿಬಿ ಮೇಷಿನ್ ಕೂಡ ಶವದ ವಾಹನವನ್ನು ಹಿಂಬಾಲಿಸಿತು. ದೂರದ ಸ್ಮಶಾನ ತಲುಪಿ, ೧೨ ಅಡಿ ಆಳದ ಗುಂಡಿಯೊಂದನ್ನು ತೊಡುವ ಹೊತ್ತಿಗೆ ಸಮಯ ನಡುರಾತ್ರಿಯ ೨ ಗಂಟೆಯಾಗಿತ್ತು.  ಪೊಲೀಸರ ರಕ್ಷಣೆ ಇದ್ದರೂ, ಡಾ. ಕಿರಣ್ ಮತ್ತವರ ಸಂಗಡಿಗರು ಭಯಭೀತರಾಗಿದ್ದರು. ಪುಂಡರುಗಳ ತಂಡ ಯಾವಾಗ ಬಂದು  ಮೇಲೆರಗುತ್ತದೆಯೋ ಎಂಬ ಆತಂಕ ಎಲ್ಲರಲ್ಲೂ ಇತ್ತು. ಶವವನ್ನು ಬೇಗ ಬೇಗ ಗುಂಡಿಯಲ್ಲಿಳಿಸಿ ಮಣ್ಣು ಮುಚ್ಚುವ ಕೆಲಸವನ್ನು ಮುಗಿಸಲಾಯಿತು. ಶವ ಸಂಸ್ಕಾರ ಮುಗಿದಿದ್ದರೂ ಡಾ. ಕಿರಣ್ ಮಾತ್ರ ಮ್ಲಾನಚಿತ್ತರಾಗಿದ್ದು ಸುಳ್ಳಲ್ಲ.  

ಕೋವಿಡ್ನಿಂದ ಮೃತಪಟ್ಟ ಹಿರಿಯ ವೈದ್ಯೆ ಡಾ. ಸುಲೋಚನಾ ಸಿಂಗ್ ರವರ ಬಲಗೈ ಬಂಟನಾಗಿ ದುಡಿಯುತ್ತಿದ್ದವರು, ತರುಣ ವೈದ್ಯ ಡಾ. ಕಿರಣ್. ಅವಿವಾಹಿತೆಯಾದ ಡಾ. ಸುಲೋಚನಾರವರಿಗೆ ಡಾ. ಕಿರಣ್ ಸಾಕುಮಗನಂತಾಗಿ ಹೋಗಿದ್ದರು. ೫೭ರ ಹರೆಯದಲ್ಲೇ ಅಕಾಲಿಕ ಮರಣ ಹೊಂದಿದ  ಹಿರಿಯ ಜೀವಕ್ಕೆ ಗೌರವೋಚಿತ ಅಂತಿಮ ವಿದಾಯವನ್ನು ನೀಡಲಾಗದ ದುರ್ದೈವ ಇಂದು ಡಾ. ಕಿರಣ್ ರವರದ್ದಾಗಿತ್ತು.  ಜನಪ್ರಿಯ ವೈದ್ಯೆ ಡಾ. ಸುಲೋಚನಾರವರ ಕೋವಿಡ್ ಸಾವು ಅವರ ಸಮೀಪವರ್ತಿಗಳನ್ನೆಲ್ಲಾ ಶೋಕಸಾಗರದಲ್ಲಿ ಮುಳುಗಿಸಿತ್ತು. ಬಡ ಗ್ರಾಮೀಣ ಕುಟುಂಬವೊಂದರಲ್ಲಿ ಜನಿಸಿದ ಡಾ. ಸುಲೋಚನಾರವರನ್ನು, ಸುಮಾರು ಮೂರು ದಶಕಗಳ ಹಿಂದೆ 'ಲೂನಾ ಡಾಕ್ಟರ್' ಎಂದೇ ಹಳ್ಳಿಗರು ಕರೆಯುತ್ತಿದ್ದರು. ಆ ದಿನಗಳಲ್ಲಿ ಬಡವರ ದ್ವಿಚಕ್ರ ವಾಹನವಾಗಿದ್ದ 'ಲೂನಾ'ವೇರಿ ದುರ್ಗಮ ಹಳ್ಳಿ-ಹಳ್ಳಿಗಳನ್ನು ತಲುಪಿ, ಬಡ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ಡಾ. ಸುಲೋಚನಾರವರಿಗೆ, ತಮ್ಮದೇ ಆದ 'ಕ್ಲಿನಿಕ್'ವೊಂದು ಇರಲೇ ಇಲ್ಲ.  ಸರ್ಕಾರೀ ಆಸ್ಪತ್ರೆಗಳಿಂದ ದೂರವಿರುವ ಹಳ್ಳಿಗಳನ್ನು ಗುರುತಿಸಿ, ಆ ಹಳ್ಳಿಗಳನ್ನು ದಿನ ಬಿಟ್ಟು ದಿನ ತನ್ನ ವಾಹನವೇರಿ ತಲುಪುತ್ತಿದ್ದ ಆಕೆಗೆ, ಹಳ್ಳಿಯ ಮರಗಳ ನೆರಳ ತಾಣವೇ 'ಕ್ಲಿನಿಕ್' ಆಗಿ ಹೋಗಿತ್ತು.  ಮಳೆ ದಿನಗಳಲ್ಲಿ,  ಹಳ್ಳಿಯ ದೇವಸ್ಥಾನದ ಆವರಣವೋ ಅಥವಾ ದಯಾವಂತ ಹಳ್ಳಿಗರ ಮನೆಯ ಜಗುಲಿಯೋ ಸುಲೋಚನಾರ ಚಿಕಿತ್ಸಾಸ್ಥಾನವಾಗಿ ಹೋಗುತ್ತಿತ್ತು. ರೋಗಿಗಳ ಪರೀಕ್ಷೆ ಮಾಡಲು ಬೇಕಾದ ಮಂಚ-ಕುರ್ಚಿಗಳನ್ನು ಗ್ರಾಮೀಣರೇ ಒದಗಿಸುವ ಪರಿಪಾಠವೂ ಇತ್ತು. ದಿನ ಬೆಳಗಾಗುವುದರೊಳಗೆ  ಸುತ್ತಲಿನ ನಾಲ್ಕಾರು ಹಳ್ಳಿಗಳ ರೋಗಿಗಳು ತಮ್ಮ ಎತ್ತಿನಗಾಡಿಗಳನ್ನೇರಿ ಬಂದು  ಡಾ. ಸುಲೋಚನಾರವರ ಪೂರ್ವನಿಯೋಜಿತ ಹಳ್ಳಿಯನ್ನು ತಲುಪುತ್ತಿದ್ದರು. ಆಕೆ ಬಂದ ಕೂಡಲೇ ನೆರೆದ ಹಳ್ಳಿಗರೆಲ್ಲರೂ ಎದ್ದುನಿಂತು 'ನಮಸ್ತೆ ಡಾಕ್ಟರಮ್ಮಾ' ಎಂದು ಒಕ್ಕೊರಳಿನಲ್ಲಿ ಹೇಳಿ ಗೌರವ-ಪ್ರೀತಿಗಳನ್ನು ತೋರ್ಪಡಿಸುತ್ತಿದ್ದರು. ಅಷ್ಟೇ ವಿನಮ್ರತೆಯಿಂದ ಡಾ. ಸುಲೋಚನಾರವರು ಕೂಡ ಎಲ್ಲಾ ರೋಗಿಗಳನ್ನು ತನ್ಮಯರಾಗಿ ಪರೀಕ್ಷಿಸಿ, ಬೇಕಾದ ಚಿಕಿತ್ಸೆಗಳನ್ನು ನೀಡುತ್ತಿದ್ದರು. ಹಳ್ಳಿಗರ ಕಷ್ಟಗಳನ್ನರಿತ ಸುಲೋಚನಾರವರು ರೋಗಿಗಳಿಗೆ ಬೇಕಾಗುವ ಔಷಧಗಳ 'ಕಿಟ್' ಒಂದನ್ನು ತಾವೇ ಹೊತ್ತು ತರುತ್ತಿದ್ದರು. ಎಲ್ಲರ ನೆಚ್ಚಿನ ವೈದ್ಯೆಯಾದ ಅವರು, ಯಾವ ರೋಗಿಯಿಂದಲೂ, 'ಇಷ್ಟು-ಅಷ್ಟು' ಎಂದು ಹಣವನ್ನು ಕೇಳುತ್ತಿರಲಿಲ್ಲ. ಹೆಚ್ಚಿನ ರೋಗಿಗಳು ಸ್ವಪ್ರೇರಿತರಾಗಿ ರೂ. ೨ ನೀಡುವುದು ವಾಡಿಕೆಯಾಗಿ ಹೋಗಿತ್ತು. ಇಂಜೆಕ್ಷನ್ ಚಿಕಿತ್ಸೆಯನ್ನು ಪಡೆದ ರೋಗಿಗಳು ರೂ. ೪ ನೀಡಿದ್ದೇ ಹೆಚ್ಚೆನಿಸಿತ್ತು. ಇದೆಲ್ಲಕ್ಕಿಂತ ಮಿಗಿಲಾಗಿ, 'ಮೇಡಂ "ಕೈಗುಣ"ಕ್ಕೆ ಯಾವುದೇ ರೋಗವನ್ನು ಹುಷಾರು ಮಾಡಬಲ್ಲ ಶಕ್ತಿಯಿದೆ'ಯೆಂಬುದು ಗ್ರಾಮೀಣರ ವಿಶ್ವಾಸವಾಗಿತ್ತು. 

೧೦ನೇ ತರಗತಿಯ ಪರೀಕ್ಷೆ ಎಂಬುದು  ಗ್ರಾಮೀಣ ವಿದ್ಯಾರ್ಥಿಗಳ ನಿರ್ಣಾಯಕ ಹಂತ. ಆ ಮಕ್ಕಳ  ಕಷ್ಟವನ್ನರಿತ  ಡಾ. ಸುಲೋಚನಾರವರು, ಪರೀಕ್ಷೆಗೆ  ಎರಡು ತಿಂಗುಳುಗಳ ಮುಂಚೆಯೇ  ತಾವಾಗೇ 'ಪಾಠದ ಮೇಡಂ' ಆಗುತ್ತಿದ್ದರು. ಗಣಿತ, ವಿಜ್ಞಾನ ಮತ್ತು ಇಂಗ್ಲೀಷ್ ವಿಷಯಗಳನ್ನು ಸ್ಥಳೀಯ ಭಾಷೆಯಲ್ಲಿ ಭೋಧಿಸುವುದರಲ್ಲಿ ಸಿದ್ಧಹಸ್ತೆಯಾದ ಮೇಡಂ ತರಗತಿಗಳು ತುಂಬಿಹೋಗಿರುತ್ತಿದ್ದವು. ಸುಲೋಚನಾರವರ ಮಾರ್ಗದರ್ಶನದಿಂದಲೇ ಪ್ರತಿವರ್ಷ ೧೦ನೇ ತರಗತಿಯ ಫಲಿತಾಂಶ ಚೆನ್ನಾಗಿ ಬರುತ್ತಿದೆ ಎಂಬುದು ಆ ಹಳ್ಳಿಗರ ಧೃಡ ನಂಬಿಕೆಯಾಗಿ ಹೋಗಿತ್ತು.  ಆ ಎಲ್ಲಾ ಹಳ್ಳಿಗರ ಪಾಲಿಗೆ ಸ್ನೇಹಿತೆಯೂ, ಮಾರ್ಗದರ್ಶಕಿಯೂ ಆಗಿಹೋಗಿದ್ದ ಡಾ. ಸುಲೋಚನಾರವರು, ರೈತರಿಗೆ ಕೃಷಿ ಸಲಹೆಗಳನ್ನೂ ನೀಡುತ್ತಿದ್ದರು. ರೈತರ ಮಗಳಾದ ಆಕೆಗೆ ಮಳೆ-ಬೆಳೆ-ಬಿತ್ತನೆ-ಗೊಬ್ಬರ ಮುಂತಾದ ವಿಷಯಗಳು ಚೆನ್ನಾಗಿಯೇ ತಿಳಿದಿತ್ತು.  

ಕಡಿಮೆ ವೆಚ್ಚದಲ್ಲಿ, ಎಲ್ಲ ರೋಗಗಳಿಗೂ ಸಮರ್ಪಕ ಚಿಕಿತ್ಸೆ ನೀಡಬಲ್ಲ ಆಸ್ಪತ್ರೆಯೊಂದನ್ನು ತಮ್ಮ ನಗರದಲ್ಲಿ ಸ್ಥಾಪಿಸಬೇಕೆಂಬುದೇ ಡಾ. ಸುಲೋಚನಾ ಸಿಂಗ್ ರವರ ಅಭಿಲಾಷೆಯಾಗಿತ್ತು. ಸುಮಾರು ಎರಡು ದಶಕಗಳ ಹಿಂದೆ 'ಸೇವಾ ಆಸ್ಪತ್ರೆ'ಯ ಆರಂಭದೊಂದಿಗೆ ಅವರ ಆಶಯ ಈಡೇರಿತ್ತು. ಚಿಕಿತ್ಸೆಯನ್ನರಸಿ ಬರುವ ಬಡ ರೋಗಿಗಳಿಗೆ ಕನಿಷ್ಠ ವೆಚ್ಚದ  ವಿಶೇಷ ವ್ಯವಸ್ಥೆ 'ಮೇಡಂ ಆಸ್ಪತ್ರೆ'ಯಲ್ಲಿ  ಸದಾ ಲಭ್ಯವಿರುತ್ತಿತ್ತು. ಹೆಚ್ಚಿನ ಹಣ ನೀಡಬಲ್ಲ ಧನಿಕ ರೋಗಿಗಳಿಂದ ಹೆಚ್ಚು ಶುಲ್ಕವನ್ನು ವಸೂಲಿ ಮಾಡಿ ಆಸ್ಪತ್ರೆ  ಖರ್ಚು-ವೆಚ್ಚವನ್ನು ನಿಭಾಯಿಸುವಲ್ಲಿ ಡಾ. ಸುಲೋಚನಾರಿಗೆ ಸಾಕು-ಸಾಕಾಗಿ ಹೋಗುತ್ತಿತ್ತು. ಹಾಗಾಗಿ ಇತ್ತೀಚೆಗೆ ಹಣಕಾಸಿನ ಪೂರ್ಣ ಭಾರವನ್ನು ಅವರು ಡಾ. ಕಿರಣ್ ರವರಿಗೆ ವಹಿಸಿಬಿಟ್ಟಿದ್ದರು. ಏನೇ ಆಗಲಿ, ನೀಡಲು ಹಣವಿಲ್ಲವೆಂಬ ಕಾರಣಕ್ಕೆ, ಬಡ ರೋಗಿಗಳಿಗೆ ಮೇಡಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸುವುದಿಲ್ಲ ಎಂಬುದು ಜನಸಾಮಾನ್ಯರ ವಿಶ್ವಾಸವಾಗಿಬಿಟ್ಟಿತ್ತು. ಸಾವಿನ ಮನೆಯ ಕದ ತಟ್ಟಿಬಂದ ಎಷ್ಟೋ ರೋಗಿಗಳಿಗೆ                                 ಡಾ. ಸುಲೋಚನಾರವರ ಆಸ್ಪತೆಯಲ್ಲಿ ಮರುಜೀವ ದೊರಕಿಸಿದ ಘಟನೆಗಳು ನಗರದಲ್ಲಿ ಮನೆಮಾತಾಗಿದ್ದವು. ಹಾಗಾಗಿ ಡಾ. ಸುಲೋಚನಾ ಬಡವರ ಪಾಲಿನ 'ದೇವಿ'ಯಾಗಿ ಹೋಗಿದ್ದರು. 

ಆದರೆ ಕಳೆದ ೨೦೨೦ರ ಮಾರ್ಚ್ ತಿಂಗಳಿಂದ ಡಾ. ಸುಲೋಚನಾರವರು ಹೊಸ ಸವಾಲೊಂದನ್ನು ಎದುರಿಸುತ್ತಿದ್ದರು. ಜೀವ ಹಿಂಡುವ ಕೋವಿಡ್-೧೯ರ ಹಾವಳಿ ಅವರ ನಗರದಲ್ಲಿ ತುಸು ಹೆಚ್ಚಾಗಿಯೇ ಇತ್ತು.  ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ರೋಗಿಗಳನ್ನು ನಿಭಾಯಿಸಲಾಗದ ಸರಕಾರ, ನಗರದ    ಡಾ. ಸುಲೋಚನಾರವರ  'ಸೇವಾ ಆಸ್ಪತ್ರೆ'ಯನ್ನೂ ಕೋವಿಡ್ ಚಿಕಿತ್ಸೆಗೆಂದು ಆಯ್ಕೆ ಮಾಡಿಕೊಂಡಿತ್ತು.  ಕೋವಿಡ್ ರೋಗಕ್ಕೆ ಸಂಬಂಧಪಟ್ಟಂತಹ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು, ಸರಕಾರ ನಿಗದಿಪಡಿಸಿರುವ ವೆಚ್ಚದ ಮಿತಿಯೊಳಗೆ ನೀಡುವ ವ್ಯವಸ್ಥೆ ಮೇಡಂ ಆಸ್ಪತ್ರೆಯಲ್ಲಿ ಮಾಡಲಾಗಿತ್ತು.  ಕೋವಿಡೇತರ ರೋಗಿಗಳ ಸಂಖ್ಯೆ ತಗ್ಗಿದ್ದರಿಂದ ಆಗುತ್ತಿರುವ ಆದಾಯದ ಖೋತವನ್ನು ಲೆಕ್ಕಿಸದೆ ಮೇಡಂ ಬಡ ಕೋವಿಡ್ ರೋಗಿಗಳ ಉಚಿತ ಚಿಕಿತ್ಸೆಯನ್ನು ಮುಂದುವರೆಸಿದ್ದರು. ಆಸ್ಪತ್ರೆಯ ಮುಖ್ಯಸ್ಥೆಯಾದರೂ, ತಮ್ಮ ಆಸ್ಪತ್ರೆಯ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಡಾ. ಸುಲೋಚನಾ ಹಿಂದುಳಿದಿರಲಿಲ್ಲ. ಅವರ ಕಾರ್ಯವೈಖರಿ ಮಿಕ್ಕೆಲ್ಲಾ ಕೊರೋನಾ ಕಾರ್ಯಕರ್ತರುಗಳಿಗೆ ಮಾದರಿಯಾಗಿತ್ತು. ದುರ್ದೈವವೋ, ಏನೋ ಎಂಬಂತೆ ಕೆಲವು ವಾರಗಳನಂತರ ಡಾ. ಸುಲೋಚನಾರವರಿಗೇ, ಹೆಮ್ಮಾರಿ ಕೊರೋನಾ ವಕ್ಕರಿಸಿತ್ತು. ಕೂಡಲೇ ಚಿಕೆತ್ಸೆಗೆ ಒಳಪಟ್ಟ ಅವರನ್ನು ದಿಗ್ಬಂಧನದಲ್ಲಿರಿಸಲಾಗಿತ್ತು. ದಿನೇ ದಿನೇ ಹದಕೆಟ್ಟ ಆಕೆಗೆ ಉಸಿರಾಟದ ಸಮಸ್ಯೆ ಉಂಟಾದಾಗ, ಬೇರೆ ಮಾರ್ಗವಿಲ್ಲದೆ ಡಾ.ಕಿರಣ್, ಅವರಿಗೆ  'ವೆಂಟಿಲೇಟರ್' ಅಳವಡಿಸಬೇಕಾಯಿತು. 'ಎಂತಹ ವಿಷಮ ಪರಿಸ್ಥಿತಿಯಲ್ಲೂ ಧೈರ್ಯದಿಂದಿರಿ' ಎಂದು ತಮ್ಮ ರೋಗಿಗಳಿಗೆ ತಿಳಿಹೇಳುತ್ತಿದ್ದ ಡಾ. ಸುಲೋಚನಾ, ಸ್ವತಃ ಧೈರ್ಯದಿಂದಿರುವಂತೆ ಕಂಡರೂ, ಮಾರಕ ಕೋವಿಡ್ ಒಳಗಿನಿಂದಲೇ ಅವರನ್ನು ಸ್ವಲ್ಪ-ಸ್ವಲ್ಪವಾಗಿ ಕೊಲ್ಲುತ್ತಿತ್ತು. ಅಧೀರರಾದಂತೆ ಕಂಡ ಡಾ. ಕಿರಣ್ ರವರು ದೇವರಿಗೂ ಹರಕೆ ಹೊತ್ತಿದ್ದೂ ಆಯಿತು.  ಜೀವಾನಿಲದ ಕೊರತೆ ತೀವ್ರವಾದ ಒಂದು ದಿನ, ಮಾರಿ ಕೋವಿಡ್ ಡಾ. ಸುಲೋಚನಾರ ಜೀವವನ್ನು ಹಿಂಡಿ ಹಿಂಡೇ ಕೊಂಡೊಯ್ದಿತ್ತು.  'ಕೆಲವೊಮ್ಮೆ ದೇವರಿಗೂ ಡಾ. ಸುಲೋಚನಾರವರಂಥ ಸೇವಾತತ್ಪರರ ಅವಶ್ಯಕತೆ ಉಂಟಾಗುತ್ತೋ ಏನೋ? ಅಂಥವರುಗಳ ಜೀವವನ್ನು ಕೊಂಡೊಯ್ಯುವಲ್ಲಿ ದೈವ ಹಿಂದೆ ಮುಂದೆ ನೋಡದೇಕೆ?' ಎಂಬ ಪ್ರಶ್ನೆ ಡಾ. ಕಿರಣ್ ರವರನ್ನು ಮತ್ತೆ ಮತ್ತೆ ಕಾಡಿತ್ತು. 

ಡಾ. ಸುಲೋಚನಾರವರೊಂದಿಗಿನ ತಮ್ಮ ಅವಿನಾಭಾವ ಸಂಬಂಧದ ಅಲೆಗಳನ್ನು ಡಾ. ಕಿರಣ್ ಮೆಲಕು ಹಾಕುತ್ತಿದ್ದರು. 'ಸಾವು ಜೀವವನ್ನು ಅಂತ್ಯಗೊಳಿಸಬಹುದು, ಸಂಬಂಧಗಳನ್ನಲ್ಲ,' ಎಂಬ ಮೇಡಂ ಮಾತುಗಳು ಕಿರಣ್ ರವರ ಕಿವಿಯಲ್ಲಿ ರಿಂಗಣಿಸುತ್ತಿತ್ತು. 'ಸುಲೋಚನಾರವರಂಥ ಸಾತ್ವಿಕ ಜೀವಿಯನ್ನೂ ನಿಷ್ಕರುಣಿ ಸಾವು  ಲೆಕ್ಕಿಸದಾಯಿತೇಕೆ?' ಎಂಬ ಪ್ರಲಾಪ ಕಿರಣ್ ರದ್ದಾಗಿತ್ತು.  ಅವರದೇ ಎಂಬ ಕುಟುಂಬವಿರದ ಡಾ. ಸುಲೋಚನಾರವರ ಅಂತಿಮ ಸಂಸ್ಕಾರದ ದುಃಖಮಯ ಕಾರ್ಯ ಅಂದು ಡಾ. ಕಿರಣ್ ರವರ ಹೆಗಲಿಗೆ ಬಿದ್ದಿತ್ತು. 'ಅವರಿಂದ ಧೀರ್ಘಕಾಲಾವಧಿಯ ಉಚಿತ ಸೇವೆಯನ್ನು ಪಡೆದ ಊರಿನ ಜನಗಳು ಇಂದು ಇಷ್ಟು ಕಠೋರವಾಗೇಕೆ ವರ್ತಿಸಿದರು? ಎಲ್ಲ ಸಮುದಾಯಗಳಲ್ಲೂ ಕಾಣಬರುವ  "ಮುಗ್ಧಜೀವಿಗಳ ನಿಜರೂಪ"ವನ್ನು ಕೋವಿಡ್ ಸಂಕಟವಿಂದು ಅನಾವರಣಗೊಳಿಸಿತೆ?  ಅಥವಾ ಅಂತಹ ಮುಗ್ಧಜೀವಿಗಳನ್ನು ಪ್ರಚೋದಿಸುವ ದುಷ್ಟಕೂಟವೊಂದಿದೆಯೆ?  ಕೋವಿಡ್ ಹರಡುವ ಭಯವಿದ್ದ ಮಾತ್ರಕ್ಕೆ, ಜನಗಳ ಗೂಂಡಾವರ್ತನೆ ಸರಿಯೆ? ಕೋವಿಡ್ನಿಂದ ಮೃತಪಟ್ಟವರ ಶವವನ್ನು ಮಣ್ಣು ಮಾಡುವಾಗ ಅನುಸರಿಸುವ ಮುನ್ನೆಚ್ಚಿರಿಕೆಗಳನ್ನು ವಿವರಿಸಿದ್ದೂ, ಅವರುಗಳಿಗೆ ತಿಳಿಯದಾಯಿತೆ? ದಿನನಿತ್ಯ ಅವರುಗಳ ಸೇವೆಯಲ್ಲಿ ನಿರತರಾಗಿರುವ ವೈದ್ಯರುಗಳ ಮಾತಿಗೆ ಅವರಲ್ಲಿ ಬೆಲೆಯಿಲ್ಲದಾಯಿತೆ? ಡಾ. ಸುಲೋಚನಾರವರೇ ಏಕೆ? ಯಾವುದೇ ಸಾಧಾರಣ ವ್ಯಕ್ತಿ , ಯಾವುದೇ ಕಾರಣಕ್ಕೆ  ಮೃತಪಟ್ಟರೆ, ಅವನಿಗೊಂದು ಗೌರವಯುತ "ಅಂತಿಮ ವಿದಾಯ" ನೀಡಬೇಕೆಂಬುದನ್ನು ಜನಗಳು ಮರೆತರೆ?'  ಡಾ. ಕಿರಣರ ಪ್ರಲಾಪ ಲಹರಿ ಮುಂದುವರೆದಿತ್ತು. ತರುಣ ವೈದ್ಯರಾದ ಅವರಿಗೆ ಸಾವೆಂಬುದು ಹೊಸದೇನಾಗಿರಲಿಲ್ಲ.  ಆದರೂ ತಮ್ಮ ಅತ್ಯಂತ ಪ್ರೀತಿಪಾತ್ರವಾದ ಜೀವವೊಂದಕ್ಕೆ ಅಂತಿಮ ವಿದಾಯ ನೀಡುವ ಸಂದರ್ಭದಲ್ಲಿ, ಊರಿನ ಜನರುಗಳು ಪ್ರದರ್ಶಿಸಿದ ರಾಕ್ಷಸೀ ವರ್ತನೆ ಮಾತ್ರ ಕಿರಣರಿಗೆ ಬೇಸರ ಮೂಡಿಸಿದ್ದು ಸುಳ್ಳಲ್ಲ. 

ಕೊರೋನಾ ಸೇನಾನಿಗಳಿಗೆ ಸ್ವಾರ್ಥವೆಂಬುದಿಲ್ಲ. ಕರ್ತವ್ಯದ ಅನಿವಾರ್ಯತೆಗಳಿಗಾಗಿ ತಮ್ಮ ಜೀವವನ್ನೇ ಒತ್ತೆ ಇಟ್ಟಿರುವ ಅವರುಗಳಿಗೆ, ಸತ್ತಾಗ ನೀಡುವ '೨೧ ತುಪಾಕಿಗಳ ಸದ್ದಿ'ನ ಗೌರವದ ನಿರೀಕ್ಷೆ ಕಿಂಚಿತ್ತೂ ಇರುವುದಿಲ್ಲ. ಅವರುಗಳು ಬಯಸುವುದು 'ಸೇವಾ ನಿರತರುಗಳಾಗಿರುವಾಗ ಬೇಕಾದ ರಕ್ಷಣೆ  ಮಾತ್ರ.' ಒಂದೊಮ್ಮೆ ಸತ್ತರಂತೂ ಇನ್ನೇನು ಉಳಿದಿರದು. ಆದರೂ 'ಸಾವಿಗೊಂದು ಘನೆತೆ ಇದೆ. ಆ ಘನೆತೆಯನ್ನು ಕಾಪಾಡಲು ಮೃತ ಆತ್ಮಕ್ಕೊಂದು ಗೌರವಯುತ ಅಂತಿಮ ವಿದಾಯವನ್ನು ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೆ?' ಎಂಬಾ ಯೋಚನೆಯಲ್ಲಿ ಮುಳುಗಿದ ಕಿರಣ್ ಕೂತ  ಕುರ್ಚಿಯಲ್ಲೇ  ನಿದ್ದೆಗೆ ಜಾರುವಷ್ಟರಲ್ಲೇ, ಹೊಸದೊಂದು ದಿನದ ಸೂರ್ಯೋದಯವಾಗಿತ್ತು.                                                                                          ***


          

Wednesday, 4 November 2020

India behind Bangladesh?

                               

Will Bangladesh beat India in 2020? Yes, says an IMF prediction in the Per Capita Income (PCP) contest.  Bangladesh at US$1888 is set to beat India struggling at US$1877, by the end of 2020! Sri Lanka ($3700), Vietnam ($3500), Indonesia ($4000) and Thailand ($7300) are all much ahead of India. We are no match to the Asian giant China ($10,839).

What is painful to observe is that the PCP during 1990 (the period around which India embraced economic reforms), of India ($385) was ahead of Bangladesh ($329) and even China ($349)!

China growth story is unprecedented.  Strong leadership, non-democratic and authoritarian, liberal economic reforms since 1980 resulting in huge capital inflow from foreign countries, migrating labour from agriculture to services and industries, huge investment in infra and education and focus on export-oriented growth have all pushed China to the status of world's economic superpower.

But the success story of Bangladesh is baffling us! Bangladesh economic reforms have even attracted industrialists from India to shift their bases.  Aided by the power of cheap labour, Bangladesh has beaten India in the garment sector, cornering the export market spread over US and Europe. But many consider comparing Bangladesh with India is not appropriate, as the GDP of that country at about $ 347 billions is no where near India's GDP of  $2,650 billions.  But it's time India recalls the contest between hare and the tortoise! Certainly there is no room for complacence.  


No doubt, in GDP terms India has now become the 6th largest economy in the world leaving behind France. But during last 3 decades of reforms, India has witnessed a skewed economic growth, wherein 75% of wealth is in the hands of just 10% of the population.  Also in recent years 75% of wealth generated are being pocketed by just 1% of the population! This factor must be accounted while assessing the actual level of 'per capita income' of our average citizens, which may be far below the exalted claim of US $1,888. Still about 75 million Indians are struggling with extreme poverty.  

The news from Global Hunger Index 2020 also is a matter of concern, ranking India at 94 among 107 countries, far below our poor neighbors including Pak (88), Nepal (73), Bangladesh (75), Sri Lanka (64) and Myanmar (78). India's child care as revealed by the our ranks of wasting (low weight) and stunting (low height) among children below 5 years, also is abysmal. But I have my own doubts about the authenticity of these assessments.  With almost all state governments extending free food grains to poor families, situation can't be this bad. 
I may eat overnight left over rice, but not our house maid. I feel happy when she disdainfully refuses.
 

Many economists say that India's first four decades of freedom was wasted by placing it in ICU of public sector for too long. Reforms launched from 1991 has helped in loosening the shackles.  But India still suffers from lack of reforms and clarity about its ways and means. 

The rise of Modiji during 2014 had generated great hopes.  Good efforts are also visible by way of banking and tax reforms, land reforms, labour reforms, education sector reforms, farm sector reforms and so on. Investment in developing infra and education are also noteworthy.  But the growth figures as revealed since 2014 don't reveal any great strides, in spite of tall claims! If 'diversity' is India's strength, it's its weakness also! Vote bank politics is another folly which is defeating India.  Immature behaviour of political parties in opposing everything that the ruling party does is also not helping the cause. Our hostile neighbours are always a cause of worry, demanding a big share of our time, energy and money. There are natural challenges like inconsistent monsoon, floods, drought and cyclone too.

Some gains made in the recent past are substantially washed away by the corona pandemic. It has taken away the livelihoods of millions of poor people including street vendors, small businessmen, auto and taxi-drivers, MSME workers etc. Thanks to some sincere efforts, there are signs of recovery in the last couple of months, by way of good performance of our agri sector, continued FDI inflows, enhanced auto and tractor sales and better performance of the manufacturing sector. But God forbid, the fear of a looming second wave of the pandemic is threatening to spell doom for our economy. 

Let us remain optimistic. Covid vaccine may arrive assuring us safe dawn of a good new year 2021. Still we are the third largest economy in the world in terms of 'purchase power parity (PPP).' We have strong and stable Governments, both at the Centre and the States. We are an young country with a huge population of skilled and unskilled labour forces. Let us keep our hopes of becoming the five trillion economy by 2024.

-0-0-0-0-