Tuesday, 17 November 2020

 ಪ್ರಕಾಶ್ ಶೆಟ್ಟರ 

ವ್ಯಂಗ್ಯೋತ್ಸವ 

(ರಚನೆ: ಲಕ್ಷ್ಮೀನಾರಾಯಣ ಕೆ)

***

ಶೆಟ್ಟರ ಕುಂಚವು ಕುಣಿಯಿತು ಎಂದರೆ 

ಪುಟ್ಟಪ್ಪ, ಬೇಂದ್ರೆ, ಕಾರಂತರೆದ್ದೇಳುವರು 

ರಾಮಾಯಣ, ಗಂಗಾವತರಣ, ಮೂಕ್ಕಜ್ಜಿಯ ಕಥೆ ಹೇಳುವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ರಾಜ್, ರಾಜು, ಬಾಲು ಕಣ್ಣಲಿ ಕುಣಿಯುವರು 

ಬಾಡಿದ  ಬೆಳ್ಳಿಯ ತೆರೆಗೆ ಹೊಸ ಮೆರಗೊಂದನು ನೀಡವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ತ್ರಿವೇಣಿ, ಇಂದಿರೆ ಲೇಖನಿ ಹಿಡಿಯುವರು 

 ಕಾವೇರಿ, ಚಂದ್ರೆಯರ ತೆರೆಗಿಳಿಸಿ,  ಪುಟ್ಟಣ್ಣ ಹೆಣ್ತನ ಮೆರೆಯುವರು 


ಶೆಟ್ಟರ  ಕುಂಚವು ಕುಣಿಯಿತು ಎಂದರೆ 

ರಾಜರತ್ನಂ, ಬೀಚಿ ಗರಿಗೆದರುವರು 

ಮುದುಡಿದ ಮನಕೆ ಮುದ ನೀಡುತ ಹಾಸ್ಯದ ಹೊನಲ ಹರಿಸುವರು 


ಶೆಟ್ಟರ ಕುಂಚವು ಕುಣಿಯಿತು ಎಂದರೆ 

ಕೆಎಸ್ಸ್ ನರ ಶೃಂಗಾರ, ನಿಸಾರರ ಜೋಗ ಕಣ್ಸೆಳೆಯುವುದು 

ಡೀವೀಜಿಯ ಮಂಕುತಿಮ್ಮನ ತೇಜಸ್ವಿ ಬಂಡಾಯ ಬಡಿದೇಳಿಪುದು 



No comments:

Post a Comment