ಶುಭಾಷಯಗಳು
***
ಹಚ್ಚ ಹಸಿರಿನ್ನೂ ಮನಸು
ಅದು ಎಪ್ಪತ್ತೇಳರ ವಯಸು
*
ಮಾತು ಮಾತಿಗೂ ಕವನ
'ಶಂಖದೊಳಗಿನ ಮೌನ'
ಲೇಖನಿ ಹಿಡಿದಷ್ಟು ಹೊತ್ತು
ನೋಡು, ಅದು 'ಅಕ್ಷರ ಜಗತ್ತು'
*
ಪ್ರೀತಿ ಹೆಚ್ಚಾಯಿತೇ?
ರಾಧೆ ತುಟಿ ಕೆಂಪಾಯಿತೇ?
ಶ್ಯಾಮನ ಮತ್ತೆ ಛೇಡಿಸಿತೇ?
ಅವಳ ಗಲ್ಲದ ಮಚ್ಚೆ!
*
ಇನ್ನೂ ಹಸಿರು, ಇನ್ನೂ ನವಿರು
ಎದೆಯಲ್ಲೆಷ್ಟು ಭಾವವೋ?
ಯಾವ ಹೊಸ ಕವನವೋ?
ಪ್ರಸವಿಸಲಿ
ನಮ್ಮ ರಂಜಿಸುತಿರಲಿ
*
ರಚನೆ: ಲಕ್ಷ್ಮೀನಾರಾಯಣ ಕೆ. (ಎಚ್ಚೆಸ್ವಿರವರ ಕ್ಷಮೆ ಕೋರುತ್ತಾ......ಅವರ
'ಹುಚ್ಚು ಕೋಡಿ ಮನಸು' ಕವನಾಧಾರಿತ), ಧನ್ಯವಾದಗಳು: ಚಿತ್ರ : ಶ್ರೀ ರಘುಪತಿ ಶೃಂಗೇರಿ
No comments:
Post a Comment