Saturday 5 June 2021

  

ಮೇ ೬, ೨೦೨೧

ಬೆಂಗಳೂರು 

ಮಾನ್ಯ ಶ್ರೀ ವಿಶ್ವೇಶ್ವರ ಭಟ್ಟರವರೇ,

ಫೇಸ್ಬುಕ್ನಲ್ಲಿ ತಾವು ನೆನ್ನೆ "ಭಾಷಾಂತರ" ಮುಂತಾದ ಕಾರ್ಯಗಳನ್ನು ನಿರ್ವಹಿಸಬಲ್ಲವರಿಗೆ ನೀಡಿದ ಕರೆಗೋಗೊಟ್ಟು,  'ನನ್ನ ಕಿರು ಪರಿಚಯ'ವನ್ನು ತಮಗೆ ಕಳುಹಿಸುತ್ತಿದ್ದೇನೆ. ತಮ್ಮ ಓದುಗ ಅಭಿಮಾನಿಗಳಲ್ಲಿ ನಾನೂ ಒಬ್ಬ. 

ಗದ್ಯ ಮತ್ತು ಪದ್ಯಗಳ ಭಾಷಾಂತರ ನನ್ನ ಹವ್ಯಾಸಗಳಲ್ಲೊಂದು. 

"Translation is like a woman. If it is beautiful, it is not faithful. If it is faithful, most certainly it is not beautiful." ಭಾಷಾಂತರಕಾರನ ಬವಣೆಯನ್ನು ಕುರಿತಾದ ಸುಂದರ ವ್ಯಂಗ್ಯೋಕ್ತಿ, ಇದಕ್ಕಿಂತ ಬೇರೊಂದಿರದು ಎಂಬುದು ನನ್ನ ಅಭಿಪ್ರಾಯ.  "ಸುಂದರವಾಗಿ ಕಾಣುವ ಭಾಷಾಂತರ, ಮೂಲದ ಅರ್ಥವನ್ನೇ ಪ್ರತಿಬಿಂಬಿಸದಿರಬಹುದು; ಮೂಲಕ್ಕೆ ಚ್ಯುತಿ ಬಾರದಂತೆ ಮಾಡಿದ ಭಾಷಾಂತರ, ಸುಂದರ ಬರಹವಾಗಿರದಿರಬಹುದು," ಎಂಬುದು ಇದರ ಭಾವಾರ್ಥ. 

"When I and my wife had been to Oooty...................," ಎಂದು ಮಂತ್ರಿವರ್ಯರೊಬ್ಬರು ತಮ್ಮ ಭಾಷಣವನ್ನು ಇಂಗ್ಲಿಷ್ನಲ್ಲಿ ಆರಂಭಿಸಿದಾಗ, ಪಕ್ಕ ನಿಂತಿದ್ದ ಭಾಷಾಂತರಕಾರರು, "ನಾನು ಮತ್ತು ಸಾಹೇಬರ ಹೆಂಡತಿಯು ಊಟಿಗೆ ಹೋದಾಗ..........................," ಎಂದು ಕನ್ನಡಕ್ಕೆ ಭಾಷಾಂತರಿಸಿ ನುಡಿದಾಗ, ಮೈಮರೆತು ಅವರು ಮಾಡಿದ ಭಾಷಾಂತರದ ಆಭಾಸ, ಎಲ್ಲರನ್ನೂ ಅಂದು ನಗೆಗಡಲಿನಲ್ಲಿ ಮುಳುಗಿಸಿದ್ದು ಸುಳ್ಳಾಗಿರಲಿಲ್ಲ. 

ಭಾಷಾಂತರಕಾರನಿಗೆ ಎರಡು ಭಾಷೆಗಳಲ್ಲೂ  ಪರಿಣತಿ ಇದ್ದರು ಸಾಲದು. ಜೊತೆಗೆ ಎರಡೂ ಭಾಷೆಗಳ ಸಂಸ್ಕೃತಿಗಳ ಪರಿಚಯವೂ ಚೆನ್ನಾಗಿರಬೇಕು. ಭಾಷಾಂತರಿಸುತ್ತಿರುವ ವಿಷಯದ ಮೇಲೂ ಆಳವಾದ ಜ್ಞಾನವಿರಬೇಕು. ನಿಖರವಾದ ಭಾಷಾಂತರ ಎಲ್ಲಾ ಸಂದರ್ಭಗಳಲ್ಲೂ ಸಾಧ್ಯವಾಗದಿರಬಹುದು.  ಆದುದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಭಾವಾನುವಾದದ ಕಡೆಗೆ ಗಮನ ಹರಿಸುವುದು ಸೂಕ್ತ.  ಭಾಷಾಂತರದ ಬರಹ,  ಓದುಗರಿಗೆ ಸುಲಭವಾಗಿ ಅರ್ಥವಾಗುವಂತಹ ಸರಳ ಭಾಷೆಯಲ್ಲಿರಬೇಕು.  

ಪ್ರತಿಯೊಂದು ಭಾಷೆಗೂ ತನ್ನದೇ ಆದ ಪದರಚನಾ (syntax) ಕ್ರಮಗಳಿರುತ್ತವೆ. ಅದರ ಖಚಿತವಾದ ಜ್ಞಾನ ಭಾಷಾಂತರಕಾರನಿಗೆ ಇರಬೇಕಾದದ್ದು ಅನಿವಾರ್ಯ.  ಇಂಗ್ಲಿಷ್ ಭಾಷೆಯಲ್ಲಿ ನಾವು, "He eats apple," ಎನ್ನುತ್ತೇವೆ. "Subject, verb, object" ಎಂಬುದು ಇಂಗ್ಲೀಷ್ನ ವಿನ್ಯಾಸ. ಅದನ್ನೇ ನಾವು ಕನ್ನಡದಲ್ಲಿ ಅನುವಾದಿಸಿ, "ಅವನು ಸೇಬನ್ನು ತಿನ್ನುತ್ತಾನೆ" ಎಂದು, "ವಿಷಯ (Subject), ವಸ್ತು (Object) ಮತ್ತು ಕ್ರಿಯಾಪದದ (Verb)" ವಿನ್ಯಾಸವನ್ನು ಅನುಸರಿಸುತ್ತೇವೆ.  

ನನ್ನ ಸೇವಾವಧಿಯಲ್ಲಿ, ಬ್ಯಾಂಕ್ ಅಧಿಕಾರಿಯಾಗಿ ಮತ್ತು ದೀರ್ಘ ಕಾಲದ ಹಿರಿಯ ತರೆಬೇತುದಾರನಾಗಿ ಸೇವೆ ಸಲ್ಲಿಸಿದ್ದೇನೆ. ಬ್ಯಾಂಕ್ ಮತ್ತು ಅರ್ಥ ವ್ಯವಸ್ಥೆಯ ವಿವಿಧ ವಿಷಯಗಳ ಮೇಲೆ ವಿಶೇಷ ಆಸಕ್ತಿ ಹೊಂದಿದವನಾಗಿರುತ್ತೇನೆ. 

ಪುಸ್ತಕಗಳ ರಚನೆ, ಬ್ಲಾಗ್ ಬರವಣಿಗೆ (https://blogbuster-lakshminarayana-k.blogspot.com/), ಕವನಗಳ ಅನುವಾದ ಮತ್ತು ರಚನೆ, ದೈನಂದಿನ ಪ್ರಚಲಿತ ಘಟನೆ (Current affairs)ಗಳ ಅಧ್ಯಯನ, ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವುದು ಮತ್ತು ವಿಚಾರ ವಿನಿಮಯ, ಕ್ರೀಡಾಲೋಕದ  ವಿಷಯಗಳು, ಚದುರಂಗದಾಟ, ಚಿಕ್ಕ ಮಕ್ಕಳನ್ನು ವಿವಿಧ ಹವ್ಯಾಸಗಳಲ್ಲಿ ತೊಡಗಿಸುವುದು ಮುಂತಾದ ಹವ್ಯಾಸಗಳು ನನಗಿಷ್ಟ.

ಕಳೆದ ವರ್ಷ ನಾನು ಇಂಗ್ಲಿಷ್ನಲ್ಲಿ ರಚಿಸಿ ಪ್ರಕಟಿಸಿದ ಇ-ಪುಸ್ತಕ, "India, Defeat Corona"ಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಅದನ್ನೀಗ ನಾನು ಕನ್ನಡಕ್ಕೂ ಅನುವಾದಿಸಿದ್ದೇನೆ. ಎರಡೂ ಪುಸ್ತಕಗಳ ಮುದ್ರಿತ ಪ್ರತಿಗಳು (physical books) ಸಧ್ಯದಲ್ಲೇ ಪ್ರಕಟವಾಗುವ ಸಾಧ್ಯತೆಗಳಿವೆ. ಆ ಪುಸ್ತಕದಲ್ಲಿ ಬರುವ "Was Corona Man-made?" ಎಂಬ ಅಧ್ಯಾಯದ ಇಂಗ್ಲಿಷ್ ಹಾಗೂ ಅದರ ಕನ್ನಡ ಅನುವಾದದ ಆಯ್ದ ಭಾಗಗಳನ್ನು ಈ ಪತ್ರದೊಂದಿಗೆ ಲಗತ್ತಿಸಿರುತ್ತೇನೆ. ೨೦೦೮ರಲ್ಲಿ ನಾನು ರಚಿಸಿ ಪ್ರಕಟಿಸಿದ "ರಾಜಣ್ಣ, ಮತ್ತೊಮ್ಮೆ ಹುಟ್ಟಿ ಬಾ" ಎಂಬ ಕನ್ನಡ ಪುಸ್ತಕಕ್ಕೂ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. 

ಪತ್ರಕರ್ತನಾಗಲಿಲ್ಲವಲ್ಲಾ ಎಂಬುದು ನನ್ನ ವಿಷಾದಗಳಲ್ಲೊಂದು. ತಮ್ಮಂತಹ ವೃತ್ತಿಪರ ಪತ್ರಕರ್ತರ ಬರಹಗಳೆಂದರೆ ನನಗಿಷ್ಟ. ಮಾನ್ಯರುಗಳಾದ ಖುಷ್ವಂತ್ ಸಿಂಘರು, ಕೆ.ಸಿ.ರೆಡ್ಡಿರವರು, ಎಂ.ವಿ. ಕಾಮತ್ ರವರು, "ಛೂ ಬಾಣ" ಖ್ಯಾತಿಯ ರಾಮಚಂದ್ರ ರಾಯರು, ಸ್ವಾಮಿನಾಥನ್ ಅಯ್ಯರ್ ರವರು, ರವಿ ಬೆಳಗೆರೆರವರು, ಚೇತನ್ ಭಗತ್ ರವರು, ವಿಶ್ವೇಶ್ವರ ಭಟ್ಟರು, ಶ್ರೀವತ್ಸ ಜೋಶಿರವರು, ಇವರುಗಳೆಲ್ಲಾ ನನ್ನ ನೆಚ್ಚಿನ ಪತ್ರಕರ್ತರುಗಳು. 

ಅನಿವಾಸಿ ಕನ್ನಡ ಬರಹಗಾರರಾದ ಶ್ರೀ ಶ್ರೀವತ್ಸ ಜೋಶಿರವರು ನನ್ನ ಸಾಮಾಜಿಕ ಜಾಲತಾಣದ ಸನ್ಮಿತ್ರರು. ದಿನನಿತ್ಯ ಅವರೊಂದಿಗೆ ನಾನು ವಿಚಾರ ವಿನಿಮಯ ಮಾಡುತ್ತಿರುತ್ತೇನೆ. 

ತಮ್ಮ ಮಾರ್ಗದರ್ಶನದಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಡಲು ನನಗೆ ಅವಕಾಶ ಸಿಗಲಿ ಎಂದು ಆಶಿಸುತ್ತಾ ನನ್ನೀ ಕಿರು ಪರಿಚಯವನ್ನು ತಮ್ಮ ಮುಂದಿಡುತ್ತಿದ್ದೇನೆ. 

ನನ್ನ ಸ್ವವಿವರಗಳ ಪತ್ರವನ್ನು ಇದರೊಂದಿಗೆ ಲಗತ್ತಿಸಿರುತ್ತೇನೆ.  

ಧನ್ಯವಾದಗಳೊಂದಿಗೆ 

ತಮ್ಮ ವಿಧೇಯ 

ಲಕ್ಷ್ಮೀನಾರಾಯಣ ಕೆ 

ಮೊಬೈಲ್ ಸಂಖ್ಯೆ: 98455 62603

ಅಡಕಗಳು:

1. "Was Corona Man-made?" ಅಧ್ಯಾಯದ ಇಂಗ್ಲೀಷ್ ಮತ್ತು ಅದರ ಕನ್ನಡ ಅನುವಾದದ ಆಯ್ದ ಭಾಗಗಳು.   

2.ನನ್ನ ಸ್ವವಿವರ (Bio-data)


ಫೇಸ್ಬುಕ್ನಲ್ಲಿನ ತಮ್ಮ ನೆನ್ನೆಯ ಕರೆ; "ನನ್ನ ಕಿರು ಪರಿಚಯ"


   


No comments:

Post a Comment