ಕೃಷ್ಣಮ್ ವಂದೇ ಜಗದ್ಗುರುಮ್
***********
ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ |
ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || 1 ||
*******
ಗೌರವಾನ್ವಿತ ಸಭಿಕರಿಗೆಲ್ಲಾ ನಮ್ಮಿಬ್ಬರ ಸವಿನಯ ನಮಸ್ಕಾರಗಳು.
ಕೃಷ್ಣಂ ವಂದೇ ಜಗದ್ಗುರುಮ್------
ಇಂದಿನ ಹರಿಕಥೆಗೆ ತಮ್ಮೆಲ್ಲರಿಗೂ ಸುಸ್ವಾಗತ. ಬಾಲಕಿಯರಾದ ನಮ್ಮಿಬ್ಬರ ಇಂದಿನ ಪ್ರಯತ್ನಕ್ಕೆ ತಮ್ಮಗಳ ಆಶೀರ್ವಾದವನ್ನು ಬೇಡುತ್ತೇವೆ.
*********
ಅಜ್ಞಾನದಿಂದ ಜ್ಞಾನದತ್ತ ನಮ್ಮನ್ನು ಕರೆದೊಯ್ಯುವ ದೀಪಾವಳಿ ಹಬ್ಬ ಮುಂದಿನ ಭಾನುವಾರದಂದು. ಅಂತಹ ಶುಭ ನೀರಿಕ್ಷೆಯ ದಿನ ಇಂದು. ಹಾಗಾಗಿ ನಿಮ್ಮೆಲ್ಲರಿಗೂ ಮುಂಗಡವಾಗಿ ದೀಪಾವಳಿ ಹಬ್ಬದ ಶುಭಾಶಯಗಳು.
ದೀಪಾವಳಿ ಹಬ್ಬದ ವಿಶೇಷವೇನು? ಸ್ವಲ್ಪ ಯೋಚಿಸೋಣ.
ದೀಪ + ಆವಳಿ = ದೀಪಾವಳಿ. ಆವಳಿ ಎಂದರೆ ಗುಂಪು, ಸಾಲು ಎಂದರ್ಥ.
ದೀಪಾವಳಿ ಎಂದರೆ ದೀಪಗಳ ಸಾಲು
ನಾಮ + ಆವಳಿ = ನಾಮಾವಳಿ
ಕೇಶವ, ಮಾಧವ, ಗೋವಿಂದ--------- ಇದು ನಾಮಾವಳಿ
ಸ್ವರ + ಅವಳಿ = ಸ್ವರಾವಳಿ
ಸ್ವರಾವಳಿಯೇ ಮುಂದೆ ಸ್ವರಾಳಿಯಾಗಿ ಈಗ ನಮ್ಮಂಥ ಮಕ್ಕಳು ಮ ಕಲಿಯುವ ಮೊದಲ ಸಂಗೀತ ಪಾಠ ಸರಳೆಯಾಗಿದೆ.
ನಮ್ಮ ಕರ್ನಾಟಕದಲ್ಲಿ ದೀಪಾವಳಿ ಎಂದರೆ, ವಾಮಾನನಾಗಿ ಬಂದ ಪರಮಾತ್ಮ ತ್ರಿವಿಕ್ರಮನಾಗಿ ಬೆಳೆದು ಬಲಿ ಚಕ್ರವರ್ತಿಗೆ ಮೋಕ್ಷ ಕರುಣಿಸಿದ ದಿನ. ಹಾಗು ಶ್ರೀ ಕೃಷ್ಣ ಪರಮಾತ್ಮ ನರಕಾಸುರನನ್ನು ವಧಿಸಿ ವಿಜಯ ಸಾಧಿಸಿದ ದಿನ.
ಉತ್ತರ ಭಾರತದ ಮಥುರೆಯ ಕಡೆ ದೀಪಾವಳಿ ಎಂದರೆ, ಶ್ರೀ ಕೃಷ್ಣ ಗೋವುಗಳನ್ನು, ಗೋಪಾಲಕರನ್ನು ರಕ್ಷಿಸಲು ಗೋವರ್ಧನ ಗಿರಿಯನ್ನು ಎತ್ತಿ ಹಿಡಿದ ದಿನ.
ಅಯೋಧ್ಯೆಯಲ್ಲಿ ದೀಪಾವಳಿ ಎಂದರೆ, ರಾವಣನ ಮೇಲೆ ವಿಜಯ ಸಾಧಿಸಿದ ಶ್ರೀ ರಾಮ ಅಯೋಧ್ಯಗೆ ಹಿಂತಿರುಗಿದ ದಿನ.
ಹೀಗೆ ದೀಪಾವಳಿ ಹಬ್ಬ ಎಂದರೆ ಪರಮಾತ್ಮನ ದಶಾವತಾರವನ್ನು, ಮುಖ್ಯವಾಗಿ ಕೃಷ್ಣನನ್ನು ನೆನೆಯುವ ದಿನ.
ದೀಪಾವಳಿಗೂ ನಮ್ಮ ರೈತರ ಕೃಷಿಗೂ ಅವಿನಾಭಾವ ಸಂಬಂಧ ಉಂಟು. ಖಾರಿಫ್ ಅಂದರೆ ಶರತ್ಕಾಲದ ಸುಗ್ಗಿಯ ಸಂಭ್ರಮವನ್ನು ನಮ್ಮ ರೈತರು ದೀಪಾವಳಿ ಎಂದು ಆಚರಿಸುತ್ತಾರೆ. ಭತ್ತದ ಬೆಳೆ ನಮ್ಮ ದೇಶದ ಎಲ್ಲಾ ರೈತರ ಕೈಸೇರುವ ಶುಭಕಾಲವೇ ದೀಪಾವಳಿ.
ನೇಗಿಲು ಹಿಡಿದ ಬಲರಾಮ ಕೃಷಿಯ ಸಂಕೇತವಾದರೆ, ಗೋಪಾಲನಾದ ಕೃಷ್ಣ ಪಶುಪಾಲನೆಯ ಸಂಕೇತ. ಹಾಗಾಗಿ ಕೃಷಿ ಕ್ಷೇತ್ರದ ಮಹತ್ತ್ವವನ್ನು ಎತ್ತಿ ಹಿಡಿದ ಪರಮಾತ್ಮನ ಅವತಾರವೇ ಕೃಷ್ಣಾವತಾರ.
ಈಗ ಸುಪ್ರಸಿದ್ಧ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ಕೇಳೋಣ. ಈ ಕೀರ್ತನೆಯಲ್ಲಿ ಕೃಷ್ಣಾವತಾರದ ಉಲ್ಲೇಖ ಇರುವುದನ್ನು ತಾವು ಕಾಣಬಹುದು.
ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ
ಶ್ರೀವೆಂಕಟ ಪ್ರಭುವು
ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ
ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ
ಶ್ರೀವೆಂಕಟ ಪ್ರಭುವು
ಹದಿನೈದನೇ ಶತಮಾನದ ಮಹಾನ್ ಹರಿದಾಸರಾದ ಅಣ್ಣಮಾಚಾರ್ಯರ ಕೀರ್ತನೆಯನ್ನು ತಾವೀಗ ಕೇಳಿದಿರಿ. ಅಣ್ಣಮಾಚಾರ್ಯರು ನಮ್ಮ ಪುರಂದರದಾಸರ ಸಮಕಾಲೀನರು, ಅಂದರೆ ಈ ಎರಡು ಮಹಾನುಭಾವರು ಹದಿನೈದನೇ ಶತಮಾನದಲ್ಲಿ ಒಂದೇ ಕಾಲದಲ್ಲಿ ಜೀವಿಸಿದ್ದವರು.
ಶ್ರೀ ಕೃಷ್ಣನು ಅವನೇ. ತಿರುಪತಿ ವೆಂಕಟೇಶ್ವರನೂ ಅವನೇ ಅಂತ ಹೇಳ್ತಾರೆ ನಮ್ಮ ಅಣ್ಣಮ್ಮಚಾರ್ಯರು. ತಿರುಪತಿ ಅಧಿಪತಿಯಾದ ಶ್ರೀ ವೆಂಕಟೇಶ್ವರರ ಮೇಲೆ ಸಹಸ್ರಾರು ಕೀರ್ತನೆಗಳನ್ನು ಅಣ್ಣಮಾಚಾರ್ಯರು ರಚಿಸಿದ್ದಾರೆ. ತಿರುಪತಿ ದೇವಸ್ಥಾನದ ಆಡಳಿತ ಮಂಡಳಿಯವರು ಗಾಯಕಿ ಭಾರತ ರತ್ನ ಎಂ.ಎಸ್. ಸುಬ್ಬಲಕ್ಷ್ಮಿಯವರ ಕೋಗಿಲೆ ಕಂಠದಲ್ಲಿ ಅಣ್ಣಮಾಚಾರ್ಯರ ಹಲವು ಕೀರ್ತನೆಗಳನ್ನು ಧ್ವನಿಮುದ್ರಿಸಿ ಪ್ರಕಟಿಸಿದ ಮೇಲೆ ಆ ಮಹಾನ್ ಹರಿದಾಸರ ಕೀರ್ತನೆಗಳು ಹೆಚ್ಚು ಜನಪ್ರಿಯವಾದವೆಂದರೆ ತಪ್ಪಾಗಲಾರದು. ಅಣ್ಣಮಾಚಾರ್ಯರ ಈ ಕೀರ್ತನೆಯ ಪರಿಚಯ ತಮ್ಮೆಲರಿಗೂ ಇದ್ದೇ ಇದೆ ಅಂತ ಭಾವಿಸ್ತೇನೆ.
Pallavi
SreemannArAyaNa SreemannArAyaNa
SreemannArAyaNa nee Sree pAdamE SaraNu ||
Charanam 1
kamalAsatee mukha kamala kamala hita
kamala priya kamalEkshaNA
kamalAsana hita garuDa gamana Sree
kamala nAbha nee pada kamalamE SaraNu ||
ತೊಂಬತ್ತರ ದಶಕದಲ್ಲಿ ಅಣ್ಣಮಾಚಾರ್ಯರ ಜೀವನಚರಿತ್ರೆಯನ್ನು ಬೆಳ್ಳಿಯ ತೆರೆ ಮೇಲೆ ಸಿನಿಮಾವನ್ನಾಗಿಸಿದಾಗ ಅದು ಸೂಪರ್ ಹಿಟ್ ಆಗಿ ಜಯಭೇರಿ ಬಾರಿಸಿದ್ದು ತಮಗೆ ತಿಳಿದದ್ದೇ. ಆ ಚಿತ್ರದಲ್ಲಿ ಅಳವಡಿಸಿಕೊಂಡಿರುವಂತಹ ಮತ್ತೊಂದು ಅನ್ನಮಾಚಾರ್ಯರ ಕೀರ್ತನೆಯನ್ನೂ ತಾವುಗಳು ಕೇಳಿರಬೋದು.
ವಿನರೋ ಭಾಗ್ಯಮು ವಿಷ್ಣು ಕಥಾ
ವೇನುಬಲಮಿದಿವೊ ವಿಷ್ಣು ಕಥಾ
ವಿನರೋ ಭಾಗ್ಯಮು ವಿಷ್ಣು ಕಥಾ
ವೇನುಬಲಮಿದಿವೊ ವಿಷ್ಣು ಕಥಾ
ಚೇರಿ ಯಶೋಧಕು ಶಿಶುವಿತಡು
ಧಾರುಣಿ ಬ್ರಹ್ಮಕು ತಂದ್ರಿಯುನಿತಡು
ಚೇರಿ ಯಶೋಧಕು ಶಿಶುವಿತಡು
ಧಾರುಣಿ ಬ್ರಹ್ಮಕು ತಂದ್ರಿಯುನಿತಡು
ಚೇರಿ ಯಶೋಧಕು ಶಿಶುವಿತಡು
ನಾವು ಈ ದಿನಕ್ಕಾಗಿ ಆರಿಸಿಕೊಂಡ ಕೀರ್ತನೆಯಲ್ಲಿ, ಅನ್ನಮಾಚಾರ್ಯು ಹಾಡುತ್ತಿದ್ದಾರೆ.........
ಇವನಿಗಾರು ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ
ಶ್ರೀವೆಂಕಟ ಪ್ರಭುವು
ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ........
ನಾನು ಎಲ್ಲ ದೇವರುಗಳಲ್ಲೂ ಹುಡುಕಿದೆ. ನನಗೆ ಎಲ್ಲೆಲ್ಲೂ ನನ್ನ ಸ್ವಾಮಿ ಮಾತ್ರ ಕಾಣುತ್ತಿದ್ದಾರೆ. ಅವರ್ಯಾರಪ್ಪಾ ಅಂದ್ರೆ....
ಶ್ರೀ ವೆಂಕಟ ಪ್ರಭುವು.....
ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ........
ಕೆಲವು ಕುಹಕಿಗಳು ಪ್ರಶ್ನೆ ಮಾಡ್ತಾರೆ! ವೆಂಕಟೇಶ್ವರರ ಅತಿಶಯ ಮಹಿಮೆಗಳೆಲ್ಲಾ ಬರೀ ಸುಳ್ಳು ಕಣ್ರೀ ಅಂತಾರೆ........ ! ವೆಂಕಟೇಶ್ವರ ಅಂದ್ರೆ ಬರೀ ಕಲ್ಲು ಕಣ್ರೀ ಅಂತಾರೆ.....!! ಸಭಿಕರುಗಳೇ......ಸ್ವಲ್ಪ ವಿಚಾರ ಮಾಡೋಣ.
ಮೂರು ವರ್ಷಗಳ ಹಿಂದೆ ಇಡೀ ಪ್ರಪಂಚವನ್ನೇ ಕೋವಿಡ್ ಮಹಾಮಾರಿ ಕಾಡಿತ್ತು. ಅಮೇರಿಕಾ, ಚೀನಾದಂತ ಬಲಿಷ್ಠ ರಾಷ್ಟ್ರಗಳೇ ತತ್ತರಿಸಿ ಹೋಗಿದ್ವು. ಆದರೂ ನಮ್ಮ ಭಾರತ ದೇಶ ಮಾತ್ರ ಕೋವಿಡ್ ರೋಗವನ್ನು ಸುಲಭವಾಗೇ ಗೆದ್ದಿತು. ಏಕಪ್ಪಾ ಅಂದ್ರೆ, ಶ್ರೀ ಕೃಷ್ಣನ ಆಶೀರ್ವಾದ ನಮ್ಮ ದೇಶದ ಮೇಲಿತ್ತು.
ನಮ್ಮ ನೆರೆ ರಾಷ್ಟ್ರಗಳು ನಮ್ಮ ದೇಶದ ಮೇಲೆ ಸಂಚು ಮಾಡಿ ಕತ್ತಿ ಮಸೆಯುತ್ತಿರುವುದು ಹೊಸದೇನಲ್ಲ. ಆದರೂ ನಮ್ಮ ದೇಶ ಸುರಕ್ಷಿತವಾಗಿ ಇದೆ ಅಂದ್ರೆ, ಅದು ಶ್ರೀ ಕೃಷ್ಣನ ರಕ್ಷಾ ಕವಚ ನಮ್ಮ ದೇಶಕ್ಕಿರುವದರಿಂದ ಮಾತ್ರ ಎಂದೇ ನನ್ನ ಭಾವನೆ.
ನಮ್ಮ ನೆರೆ ರಾಷ್ಟ್ರಗಳಲ್ಲಿ ಹಸಿವು, ಅಶಾಂತಿ ತಾಂಡವವಾಡುತ್ತಿರುವಾಗ ನಮ್ಮ ದೇಶದಲ್ಲಿ ಸುಭಿಕ್ಷ, ಶಾಂತಿ, ನೆಮ್ಮದಿ ನೆಲಸಿದೆ ಅಂದ್ರೆ, ಅದು ನಮ್ಮ ಶ್ರೀ ಕೃಷ್ಣನ ಆಶೀರ್ವಾದದಿಂದಲೇ ಎಂಬುದು ನಮ್ಮೆಲ್ಲರ ಅಚಲವಾದ ನಂಬಿಕೆ.
ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ
ಶ್ರೀವೆಂಕಟ ಪ್ರಭುವು
ಅತಿಶಯ ಮಹಿಮೆಗಳಲ್ಲಿ ಮೆರೆಯುವ, ಎಲ್ಲರಿಗಾಧರನು ತಾನೇ
ಇವನಿಗಾರೂ ಸರಿ ದೈವವ ಕಾಣೆನು, ಎಲ್ಲೆಲ್ಲಿ ಅರಸಲು ಇವನೇ
ಶ್ರೀವೆಂಕಟ ಪ್ರಭುವು
ಮತಿಜಾಲದೊಳು ನಾ ದೈವವ ಹುಡುಕಿದ ಮತ್ಸ್ಯಾವತಾರವು ಇವನು
ವೆಂಕಟೇಶ್ವರರಿಗಾಗಿ ಅಣ್ಣಮಾಚಾರ್ಯರು ನೀರಿನಲ್ಲಿ, ಅಂದರೆ ಮಹಾಸಾಗರಗಳಲ್ಲಿ ಹುಡುಕಿದ್ದಾರೆ. ನಮ್ಮ ವೆಂಕಟೇಶ್ವರ ಅಲ್ಲಿ ಅವರಿಗೆ ಮತ್ಸ್ಯಾವತಾರಿಯಾಗಿ ಕಾಣಿಸಿಕೊಂಡಿದ್ದಾನೆ.
ಅನಾದಿ ಕಾಲದಲ್ಲಿ ಒಮ್ಮೆ ಸಾಗರಗಳಲ್ಲಿ ಮಹಾ ಸುನಾಮಿ ಉಂಟಾಗಿ ಇಡೀ ಭೂಮಂಡಲವೇ ನೀರಿನಲ್ಲಿ ಮುಳುಗಿ ಹೋಗಿತ್ತಂತೆ. ಆಗ ಮಹಾವಿಷ್ಣು, ಅಂದರೇ ನಮ್ಮ ವೆಂಕಟೇಶ್ವರ ಭಾರಿ ಮೀನಿನ ಅವತಾರವೆತ್ತಿ ಮುಳುಗಿದ ಭೂಮಿಯನ್ನು ಮತ್ತು ಜೀವಿಗಳನ್ನು ಎಳದು ತಂದು ರಕ್ಷಿಸಿದ್ದೇ ಮತ್ಸ್ಯಾವತಾರದ ಕಥೆ.
ಜೀವಿಗಳ ಸೃಷ್ಟಿ ಮೊದಲು ನೀರಿನಲ್ಲಿ ಆಯ್ತು ಎಂಬುದಕ್ಕೆ ಮತ್ಸ್ಯಾವತಾರದ ಕಥೆಯೇ ಸಾಕ್ಷಿ. ಅಂದ ಹಾಗೆ ತಾವೆಲ್ಲ ಚಾರ್ಲ್ಸ್ ಡಾರ್ವಿನ್ ನ ವಿಕಾಸ ವಾದದ ಬಗ್ಗೆ ಕೇಳಿದ್ದೀರಿ. ಅದು ಬಿಡಿ, ಕೇವಲ ೧೫೦ ವರ್ಷಗಳ ಹಿಂದಿನ ಮಾತು. ಜೀವಿಗಳ ಸೃಷ್ಟಿ ನೀರಿನಲ್ಲಿ ಮೊದಲು ಆಯ್ತು ಎಂಬುದನ್ನ ನಮ್ಮ ಪುರಾಣಗಳಲ್ಲಿ ಸಹಸ್ರ ಸಹಸ್ರ ವರ್ಷಗಳ ಹಿಂದೇ ಬರೆದ್ ಇಟ್ಟಿದ್ದಾರೆ ನೋಡಿ.
ಮತಿಜಲದೊಳು ನಾ ದೈವವ ಹುಡುಕಿದ ಮತ್ಸ್ಯಾವತಾರವು ಇವನು
ಕಂಡೆ ಪಾತಾಳದಲ್ಲಿ ಶೋಧಿಸಿ, ಆದಿ ಕೂರ್ಮನೀ ವಿಷ್ಣುವು (ಎರಡು ಬಾರಿ)
ಸ್ವಾಮಿ ವೆಂಕಟೇಶ್ವರರನ್ನು ಹುಡುಕುತ್ತಾ ಈಗ ಅಣ್ಣಮಾಚಾರ್ಯರು ನಮ್ಮನ್ನ ಈಗ ಪಾತಾಳಕ್ಕೆ ಕರೆದುಕೊಂಡು ಹೋಗ್ತಾ ಇದ್ದಾರೆ. ನಿಮಗೆಲ್ಲ ಗೊತ್ತು, ಒಮ್ಮೆ ದೇವಾದಿಗಳು ಮತ್ತು ಅಸುರರು ಅಮೃತವನ್ನು ಹುಡುಕುತ್ತಾ ಕ್ಷೀರ ಸಾಗರವನ್ನೇ ಶೋಧಿಸಿದ್ದರು. ಮಂಧಾರ ಪರ್ವತವನ್ನೇ ಕಡಗೋಲನ್ನಾಗಿಸಿ, ವಾಸುಕಿಯನ್ನೇ ಹಗ್ಗವನ್ನಾಗಿಸಿ ಸಾಗರವನ್ನು ಕಡೆಯಲಾಗಿತ್ತು. ಆಗ ಮಂದಾರ ಪರ್ವತ ಕುಸಿದು ನಿಂತಾಗ, ನಮ್ಮ ವೆಂಕಟೇಶ್ವರರು ದೊಡ್ಡದಾದ ಆಮೆಯ ಅವತಾರವನ್ನೆತ್ತಿ ಮಂದಾರ ಪರ್ವತನ್ನು ಮೇಲೆತ್ತಿದ್ದರು. ಅದೇ ಕೂರ್ಮಾವತಾರದ ಕತೆ.
ಆಮೆ ನೀರಿನಲ್ಲೂ ಈಜ ಬಹುದು, ಭೂಮಿಯ ಮೇಲು ಓಡಾಡಬಲ್ಲುದು. ಇದು ಜೀವ ವಿಕಾಸದ ಎರಡನೇ ಹಂತ ಎಂಬುದು ಎಷ್ಟು ಸತ್ಯ ನೋಡಿ.
ಪರಮಾತ್ಮನ ಏಳನೇ ಅವತಾರವೇ ರಾಮಾವತಾರ.
"ಜನನಿ ಜನ್ಮ ಭೂಮಿಶ್ಚ, ಸ್ವರ್ಗಾದಪೀ ಗರಿಯಾಸಿ"
ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದರು? ನಿಮಗೆ ಆಶ್ಚರ್ಯವಾಗಬಹುದು, ಈ ಮಾತನ್ನು ಸಾಕ್ಷಾತ್ ಶ್ರೀರಾಮನೇ ಹೇಳಿರುವುದು. ರಾವಣನ ಸಂಹಾರವಾದ ಮೇಲೆ ಲಂಕೆ ರಾಮ-ಲಕ್ಷ್ಮಣರ ಕೈವಶವಾಗುತ್ತದೆ. ವೈಭವಯುಕ್ತವಾದ ಲಂಕೆಯನ್ನು ನೋಡಿ ಬೆರಗಾದ ಲಕ್ಷ್ಮಣ, ರಾಮನನ್ನು ಕೇಳುತ್ತಾನೆ. "ಅಣ್ಣ..... ನೋಡು ವಜ್ರ ವೈಡೂರ್ಯಗಳಿಂದ ಕೂಡಿದ ಲಂಕೆ ಈಗ ನಮ್ಮ ಕೈವಶವಾಗಿದೆ. ನಮ್ಮ ರಾಜಧಾನಿಯನ್ನು ನಾವು ಅಯೋಧ್ಯೆಯಿಂದ ಲಂಕೆಗೆ ಸ್ಥಳಾಂತರಿಸಿ ನಾವುಗಳು ಎಲ್ಲೇ ಏಕೆ ನೆಲಸಬಾರದು?" ಲಕ್ಷ್ಮನನ್ನೂ ನೋಡಿ ನಸುನಕ್ಕ ರಾಮ ಹೀಗೆ ಹೇಳುತ್ತಾನೆ.
ಅಪೀ ಸ್ವರ್ಣಮಯೀ ಲಂಕಾ
ನಮೇ ಲಕ್ಷ್ಮಣ ರೋಚತೇ
ಜನನಿ ಜನ್ಮಭೂಮಿಶ್ಚ
ಸ್ವರ್ಗಾದಪಿ ಗರಿಯಾಸಿ
ಲಕ್ಷ್ಮಣ, ಲಂಕೆ ಎಷ್ಟೇ ವೈಭವೋಪೇತವಾಗಿದ್ದರೂ ಅದು ನಮಗೆ ಬೇಡ. ನಮ್ಮನ್ನು ಹೆತ್ತ ತಾಯಿ ಮತ್ತು ನಾವು ಜನಿಸಿದ ಜನ್ಮಭೂಮಿಯಾದ ಅಯೋಧ್ಯಾ ನಮಗೆ ಸ್ವರ್ಗಕ್ಕಿಂತ ಮಿಗಿಲಾದುದು." ನಡಿ, ಬೇಗ ಅಯೋಧ್ಯಗೆ ಹೋಗೋಣ' ಎನ್ನುತ್ತಾನೆ. ರಾಮನ ದೇಶಪ್ರೇಮ ಇಂದು ಎಷ್ಟು ಆದರ್ಶಮಯವಾದುದು ಎಂಬುದನ್ನು ಗಮನಿಸಿ. ನಮ್ಮ ಯುವಕರೆಲ್ಲರೂ ರಾಮನ ದೇಶಪ್ರೇಮವನ್ನು ಮೈಗೂಡಿಸಿಕೊಂಡರೆ ನಮ್ಮ ದೇಶ ಅತ್ಯಂತ ಬಲಿಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವೇ ಇಲ್ಲವೆಂಬುದು ನನ್ನ ಭಾವನೆ. ಅಂತಹ ಮಹಾಮಹಿಮ ಶ್ರೀ ರಾಮನ ಸ್ಮರಣೆಯನ್ನು ಈಗ ಮಾಡೋಣ.
ಶ್ರೀ ರಾಮಚಂದ್ರ ಕೃಪಾಳು ಭಜಮನಾ......
ಈಗ ನನ್ನ ತಂಗಿ ಪ್ರಜ್ಞಾಳಿಂದ ಒಂದು ಉಪಕಥೆ.
ರಾಮಾಯಣದಲ್ಲಿ ರಾಮನನ್ನು ಬಿಟ್ಟರೆ ಮತ್ತೊಬ್ಬ ಮಹಾನ್ ದೈವ ಅವನ ಸ್ಮರಣೆಯನ್ನು ಈಗ ಮಾಡೋಣ.
ಘಟಿಕಾಚಲದಿ ನಿಂತ ಶ್ರೀ ಹನುಮಂತ
ಪರಮಾತ್ಮನ ಮುಂದಿನ ಅವತಾರ ಕೃಷ್ಣಾವತಾರ.
ಪುರಂದರದಾಸರು ಕೃಷ್ಣನ ಪರಮಭಕ್ತರು. ಅವರು ಒಮ್ಮೆ ನಮ್ಮ ಬೆಂಗಳೂರು ಸಮೀಪದ ಚನ್ನಪಟ್ಟಣದ ಮಳ್ಳೂರಿನ ಅಪ್ರಮೇಯ ದೇವಸ್ಥಾನಕ್ಕೆ ಬಂದಿದ್ದರಂತೆ. ಅಪ್ರಮೇಯ ಅನ್ನುವುದು ಶ್ರೀ ಕೃಷ್ಣನ ಮತ್ತೊಂದು ಹೆಸರು.. ನೀವೆಲ್ಲ ನೋಡಿರಬಹುದು. ಅಂಬೆಗಾಲ್ ಕೃಷ್ಣನ ಸುಂದರವಾದ ಮೂರ್ತಿ ಆ ದೇವಸ್ಥಾನದಲ್ಲಿದೆ. ಆ ಅಂಬೆಗಾಲ್ ಕೃಷ್ಣನ ಮೂರ್ತಿಯನ್ನು ನೋಡಿ ಭಕ್ತಿಪರವಶರಾದ ಪುರಂದರದಾಸರು ಆ ದೇವಸ್ತಾನದಲ್ಲೇ ಕುಳಿತು "ಜಗದೋದ್ಧಾರನ ಆಡಿಸದೆಳೆಶೋದೆ" ಎಂಬ ದೇವರನಾಮವನ್ನು ರಚಿಸಿ ಹಾಡಿದರಂತೆ. ಆ ದೇವರನಾಮದಲ್ಲಿ ದಾಸರು "ಅಪ್ರಮೇಯ" ಎಂಬ ಕೃಷ್ಣನ ಹೆಸರನ್ನು ಬಳಸಿರುವುದು ವಿಶೇಷ.
ಜಗದೋದ್ಧಾರನ ದೇವರನಾಮದ ಮತ್ತೊಂದು ವಿಶೇಷ ಏನಪ್ಪಾ ಎಂದ್ರೆ, ಭಾರತ ರತ್ನ ಎಂ.ಎಸ್.ಸುಬ್ಬಲಕ್ಷ್ಮಿಯವರು ತಮ್ಮ ೧೯೬೬ರ ವಿಶ್ವಸಂಸ್ಥೆಯ ಕಾರ್ಯಕ್ರಮದಲ್ಲಿ ಹಾಡಲು ಆರಿಸಿಕೊಂಡಿದ್ದು ಇದೇ ದೇವರನಾಮವನ್ನೇ.
ಜಗದೋದ್ಧಾರನ ದೇವರನಾಮ ಕಾಪಿ ರಾಗದ ಕೃತಿ. ಈ ದೇವರನಾಮಕ್ಕೆ ಕಾಪಿ ರಾಗದ ರಾಗಸಂಯೋಜನೆ ಮಾಡಿದವರು ಯಾರು ಗೊತ್ತೇ? ಯಾರಿಗಾದ್ರೂ ಗೊತ್ತಿದ್ರೆ ಹೇಳ್ತೀರಾ.......
--------------------------------
ಅವರೇ ಬಿ.ಎಸ್. ರಾಜ್ ಅಯಂಗಾರ್. ಕರ್ನಾಟಕದ ಸುಪ್ರಸಿದ್ದ ಹಾಡುಗಾರರು. ಅವರ ಹಳೆಯ ಗ್ರಾಮಫೋನ್ ರೆಕಾರ್ಡಿನ ಜಗದೋದ್ಧಾರನೆ ದೇವರನಾಮವನ್ನು ತಾವುಗಳು ಈಗಲೂ ಗೂಗ್ಲ್ನಲ್ಲಿ ಹುಡುಕಿ ಕೇಳಬಹುದು.
ಈಗ ಅಂತಹ ಭಕ್ತಿಭಾವದ ದೇವರನಾಮವನ್ನು ಕೇಳೋಣ.
ಜಗದ್ದೋಧಾರನ ಆಡಿಸಿದಳೇಶೋದೆ........
ಈಗ ಕೃಷ್ಣನ ಬಾಲ ಲೀಲೆಯ ಕಥೆಯೊಂದನ್ನು ನನ್ನ ತಂಗಿ ಪ್ರಜ್ಞಾ ಹೇಳ್ತಾಳೆ.
ಒಮ್ಮೆ ಕೃಷ್ಣನ ನಂದಗೋಕುಲದಲ್ಲಿ ಭಾರಿ ಸಂಭ್ರಮ ಏರ್ಪಾಡಾಗಿರುತ್ತದೆ. ಏಳು ವರ್ಷದ ಕೃಷ್ಣ ತನ್ನ ಪುಟ್ಟ ಕೈಗಳನ್ನು ಹಿಂದಕ್ಕೆ ಕಟ್ಟಿಕೊಂಡು ಬಂದು ತಂದೆ ನಂದಗೋಪನನ್ನು ಕೇಳುತ್ತಾನೆ------"ಅಪ್ಪ ಇಷ್ಟೊಂದು ಸಂಭ್ರಮ ಏಕೆ? ಇವತ್ತು ಯಾವ ಹಬ್ಬ?" ನಂದಗೋಪ ಮಗ ಕೃಷ್ಣನಿಗೆ ಹೇಳುತ್ತಾನೆ. "ಮಗು ಇವತ್ತು ನಾವು ಇಂದ್ರನ ಆರಾಧನೆಯನ್ನು ಮಾಡುತ್ತಿದ್ದೇವೆ. ಇಂದ್ರ ತಾನೇ ನಮಗೆ ಮಳೆ ಬೆಳೆಗಳನ್ನು ಕೊಡುವ ದೈವ." ಪುಟ್ಟ ಕೃಷ್ಣ ತನ್ನ ಅಪ್ಪನಿಗೆ ಹೇಳುತ್ತಾನೆ. "ಅಪ್ಪ ಕಾಲಕ್ಕೆ ತಕ್ಕಂತೆ ಮಳೆ ಕೊಡುವುದು ಇಂದ್ರನ ಕರ್ತವ್ಯ ಮಾತ್ರ. ಅಷ್ಟಕ್ಕೇ ಅವನಿಗ್ಯಾಕೆ ಪೂಜೆ? ಪೂಜೆಯನ್ನು ಕೂಡಲೇ ನಿಲ್ಲಿಸಿ, ಇಂದ್ರನ ಬದಲು ಬೆಟ್ಟಗಳನ್ನು, ಮರಗಳನ್ನು, ನದಿಗಳನ್ನೂ ಪೂಜಿಸೋಣ" ಎನ್ನುತ್ತಾನೆ. ಸುತ್ತಲೂ ಇದ್ದ ಗೋಪಾಲರೆಲ್ಲರೂ "ಹೌದು ಹೌದು" ಎಂದು ದನಿ ಏರಿಸುತ್ತಾರೆ. ಸರಿ ಎನಿಸಿದ ನಂದಗೋಪ ಇಂದ್ರನ ಪೂಜೆಯ ಕಾರ್ಯಕ್ರಮವನ್ನು ನಿಲ್ಲಿಸುತ್ತಾನೆ. ಬೆಟ್ಟಗಳ, ಮರಗಳ ಮತ್ತು ನದಿಗಳ ಪೂಜೆ ನಡೆಯುತ್ತದೆ. ಕುಪಿತನಾದ ಇಂದ್ರ ಕೃಷ್ಣನಿಗೆ ತಕ್ಕ ಪಾಠವನ್ನು ಕಲಿಸುವ ನಿರ್ಧಾರವನ್ನು ಮಾಡುತ್ತಾನೆ.
ಅದೇ ದಿನ, ಗೋಪಾಲರು, ಗೋಪಿಕಾಸ್ತ್ರೀಯರು, ತಮ್ಮ ಗೋವುಗಳನ್ನು ಮೇಯಿಸಲು ಕಾಡಿನ ಕಡೆ ಹೊರಡುತ್ತಾರೆ. ಪುಟ್ಟ ಕೃಷ್ಣನೂ ಅವರ ಹಿಂದೆ ಕರುವೊಂದನ್ನು ಹಿಡಿದು ಹೊರಡುತ್ತಾನೆ. ಇದೇ ಸರಿಯಾದ ಸಮಯವೆಂದು ಯೋಚಿಸಿದ ಇಂದ್ರ ಗುಡುಗು ಮಿಂಚುಗಳ ಭಾರಿ ಮಳೆಯನ್ನು ಗೋಪಾಲರ ಮತ್ತು ಗೋವುಗಳ ಮೇಲೆ ಸುರಿಸುತ್ತಾನೆ. ದಿಕ್ಕೆಟ್ಟ ಗೋವುಗಳು, ಗೋಪಾಲರು, ಗೋಪಿಕಾಸ್ತ್ರೀಯರು ಕಂಗಾಲಾಗಿ ಹೋಗುತ್ತಾರೆ. ಕೂಡಲೇ ಪುಟ್ಟ ಬಾಲಕ ಕೃಷ್ಣ ಪಕ್ಕದಲ್ಲೇ ಇದ್ದ ಬೃಹದಾದ ಗೋವರ್ಧನ ಗಿರಿಯನ್ನು ತನ್ನ ಎಡಗೈನ ಕಿರುಬೆರಳ ಮೇಲೆ ಎತ್ತಿ ಹಿಡಿಯುತ್ತಾನೆ. ಸಂತುಷ್ಟರಾದ ಗೋವುಗಳು, ಗೋಪಾಲರೆಲ್ಲರೂ ಕೃಷ್ಣನ ಸುತ್ತ ಬಂದು ನಿಂತು ಅವನ ಸ್ತುತಿಯನ್ನು ಮಾಡುತ್ತಾರಂತೆ.
ಗೋವರ್ಧನ ಗಿರಿಧಾರ------------
ಶ್ರೀ ರಾಮ ಮರ್ಯಾದಾ ಪುರುಷೋತ್ತಮನಾದರೆ, ಕೃಷ್ಣನನ್ನು ಮೋಹನಾಂಗ ಚತುರೋತ್ತಮ ಎನ್ನಬಹುದು.
ಕೃಷ್ಣ ತನ್ನ ಮಾವನಾದ ಕಂಸನನ್ನ ಸಂಹಾರ ಮಾಡಿದ್ದೂ ಚತುರ ಬುದ್ಧಿಯಿಂದಲೇ.
ಕೃಷ್ಣ ಭೀಮನ ಕೈಯಲ್ಲಿ ಜರಾಸಂಧನ ಸಂಹಾರ ಮಾಡಿಸಿದ್ದು ಚತುರತೆಯಿಂದಲೇ.
ಮಹಾಭಾರತ ಯುದ್ಧದಲ್ಲಿ ಪಾಂಡವರಿಗೆ ಜಯವನ್ನು ಗಳಿಸಿಕೊಟ್ಟಿದ್ದೂ ಚತುರತೆಯಿಂದಲೇ.
ಕೃಷ್ಣನ ಚತುರತೆಯ ವರ್ಣನೆಯನ್ನ ಕನಕದಾಸರು ಸೊಗಸಾಗಿ ಹಾಡಿದ್ದಾರೆ.
ಈತಾನೀಗ ವಾಸುದೇವನೋ
----------------------------------- ಲೋಕದೊಡೆಯ
ಈತನೀಗ ವಾಸುದೇವ-------------
ಈ ಸಮಸ್ತ ಲೋಕದೊಡೆಯ
ದಾಸಗೊಲಿದು ತೇರನೇರಿ ತೇಜಿಪಿಡಿದು ನಡೆಸಿದಾತ
ಈತಾನೀಗ ವಾಸುದೇವನೋ......
"ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡಿಸಿದಾತ" ಅಂತ ಕನಕದಾಸರು ಕೃಷ್ಣನ್ನು ಹಾಡಿ ಹೊಗಳಿದ್ದಾರೆ. ಭಕ್ತನಾದ ಅರ್ಜುನನ ರಕ್ಷಣೆಗೆ ನಿಂತು ಅರ್ಜುನನ ಸಾರಥಿಯಾದವನು ಕೃಷ್ಣ. ಭಕ್ತರಿಗಾಗಿ ಕೃಷ್ಣ ಏನು ಬೇಕಾದರೂ ಮಾಡಬಲ್ಲನು ಎಂಬುದಕ್ಕೆ ಇದು ಸರಿಯಾದ ಉದಾಹರಣೆ.
ಮಹಾಭಾರತದ ಯುದ್ಧಕ್ಕೆ ರಣರಂಗ ಸಿದ್ದವಾಗಿರುತ್ತದೆ. ಪಾಂಡವರ ಮತ್ತು ಕೌರವರ ಸೈನ್ಯಗಳು ರಣರಂಗದಲ್ಲಿ ಮುಖಾಮುಖಿಯಾಗಿ ನಿಂತಿರುತ್ತವೆ. ಪಾರ್ಥಸಾರಥಿ ಕೃಷ್ಣ ಅರ್ಜುನನ ರಥವನ್ನು ರಣರಂಗಕ್ಕೆ ತಂದು ನಿಲ್ಲಿಸಿರುತ್ತಾನೆ. ಅದೇಕೋ ಅರ್ಜುನನ ಮನಸ್ಸು ಚಂಚಲಗೊಳ್ಳುತ್ತದೆ. ಅರ್ಜುನ ಹೇಳುತ್ತಾನೆ. "ಕೃಷ್ಣ ಅಲ್ಲಿ ನೋಡು. ನಮ್ಮ ವೈರಿಗಳ ಕಡೆ ಇರುವವರೆಲ್ಲಾ ನಮ್ಮ ಅಣ್ಣತಮ್ಮಂದಿರೇ . ನಮ್ಮ ವೈರಿಗಳ ಕಡೆ ಇರುವವರೆಲ್ಲಾ ನಮ್ಮ ಅಜ್ಜ-ತಾತಂದಿರುಗಳೇ. ನಮ್ಮವರ ವಿರುದ್ಧವೇ ನಾನು ಹೇಗೆ ಹೋರಾಡಲಿ. ನನ್ನ ಕೈಗಳೆಲ್ಲಾ ಸೋಲುತ್ತಿವೆ. ನಾನು ಯುದ್ಧ ಮಾಡಲಾರೆ" ಎನ್ನುತ್ತಾ ತನ್ನ ಬಿಲ್ಲು-ಬಾಣಗಳನ್ನು ತಳಗಿಟ್ಟುಬಿಡುತ್ತಾನೆ.
ಆಗ ಕೃಷ್ಣ ಶ್ರೀಮದ್ ಭಗವದ್ಗೀತೆಯನ್ನು ಅರ್ಜುನನಿಗೆ ಭೋದಿಸುತ್ತಾನೆ.
"ಕರ್ಮಣ್ಯೇವಾಧಿಕಾರಸ್ತೆ
ಮಾ ಫಲೇಷು ಕದಾಚನ
ಮಾ ಕರ್ಮಫಲಹೇತುರ್ ಭುರ್
ಮಾ ತೇ ಸಂಗೋಸ್ತ್ವಕರ್ಮಣಿ"
ಎಂಬುದು ಭಗವದ್ಗೀತೆಯ ಸರ್ವೋಚ್ಛ ವಾಣಿ.
ಕೃಷ್ಣ ಹೇಳುತ್ತಾನೆ "ಅರ್ಜುನ, ಕರ್ಮ, ಅಂದರೆ ಯುದ್ಧ ಮಾಡುವುದು ಮಾತ್ರ ನಿನ್ನ ಕರ್ತವ್ಯ. ಅದರ ಫಲಗಳ ಚಿಂತೆ ನಿನಗೆ ಬೇಡ." ವಿಜಯ ಸಿಕ್ಕಲೆಂದು ಯುದ್ಧ ಮಾಡಬೇಡ. ಯುದ್ಧ ಮಾಡದೇ ನಿಷ್ಕ್ರಿಯನಾಗಬೇಡ. ಕೃಷ್ಣನ ಈ ವಾಣಿ ನಮಗೂ, ನಿಮಗೂ ಇಂದಿನ ಕಾಲಕ್ಕೂ ಸತ್ಯ. ಸಭಿಕರುಗಳೇ, ಏನಂತೀರಿ? ವಿದ್ಯಾರ್ಥಿಗಳಾದ ನಾವು ನಮ್ಮ ಪಾಠ ಪ್ರವಚನಗಳನ್ನು ಸರಿಯಾಗಿ ಓದಬೇಕು. ಹಿರಿಯರಾದ ತಾವುಗಳು ನಿಮ್ಮ ಪಾಲಿನ ಕರ್ತವ್ಯವನ್ನು ಶ್ರದ್ಧೆಯಿಂದ ಮಾಡಬೇಕು.
ಭಗವದ್ಗೀತೆಯ ಮತ್ತೊಂದು ಕಡೆ ಕೃಷ್ಣ ಹೇಳಿದ್ದಾನೆ........
ಕ್ರೋಧಾದ್ಭವತಿ ಸಮ್ಮೋಹಃ
ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿವಿಭ್ರಮಸಾದ್ ಬುದ್ಧಿನಾಶೋ
ಬುದ್ಧಿನಾಶಾತ್ ಪ್ರಣಶ್ಯತಿ
ಕೃಷ್ಣ ಹೇಳ್ತಾನೆ-----------ಕೋಪದಿಂದ ಭ್ರಮೆ ಉಂಟಾಗುತ್ತದೆ. ಭ್ರಮೆಯಿಂದ ನೆನಪಿನ ಶಕ್ತಿ ಕುಂದುತ್ತದೆ . ನೆನಪಿನ ಶಕ್ತಿ ಕುಂದಿದ್ದರಿಂದ ಮನುಷ್ಯನ ಬುದ್ಧಿ ಹಾಳಾಗುತ್ತದೆ. ಬುದ್ಧಿ ಹಾಳಾಗಿದ್ದರಿಂದ ಮನುಷ್ಯನೇ ಹಾಳಾಗಿ ಹೋಗುತ್ತಾನೆ. ಪ್ರಾಯಶಃ ಇಡೀ ಪ್ರಪಂಚದ ಸಾಹಿತ್ಯವನ್ನೇ ನಾವು ಹುಡುಕಿ ನೋಡಿದರು, ಕೋಪದಿಂದ ಆಗುವಂಥ ದುಷ್ಪರಿಣಾಮದ ವಿವರಣೆ ಇಷ್ಟು ಕರಾರುವಾಕಾಗಿ ಎಲ್ಲೂ ದೊರೆಯುವುದಿಲ್ಲ.
ಕೋಪದ ದುಷ್ಪರಿಣಾಮಗಳನ್ನು ಮನದಟ್ಟುಮಾಡಿಸುವ ಒಂದು ಉಪಕಥೆ ಈಗ ನನ್ನ ತಂಗಿ ಪ್ರಾಜ್ಞಳಿಂದ. -------------------------------------
ಕಥೆ ಕೇಳಿದ್ರಲ್ಲಾ, ಆದುದರಿಂದಲೇ ಶ್ರೀಕೃಷ್ಣ ಹೇಳಿರುವುದು......
ಕ್ರೋಧಾದ್ಭವತಿ ಸಮ್ಮೋಹಃ
ಸಮ್ಮೋಹಾತ್ ಸ್ಮೃತಿವಿಭ್ರಮಃ
ಸ್ಮೃತಿವಿಭ್ರಮಸಾದ್ ಬುದ್ಧಿನಾಶೋ
ಬುದ್ಧಿನಾಶಾತ್ ಪ್ರಣಶ್ಯತಿ
ಇಂತಹ ಮಹಾನ್ ಸಂದೇಶಗಳನ್ನು ಜಗತ್ತಿಗೆ ನೀಡಿರುವುದರಿಂದಲೇ ನಾವು "ಕೃಷ್ಣಮ್ ವಂದೇ ಜಗದ್ಗುರುಮ್" ಎಂದು ಪ್ರತಿನಿತ್ಯ ಕೃಷ್ಣನನ್ನು ಭಜಿಸುವುದು
ಕೃಷ್ಣನ ವಿಶ್ವರೂಪ ದರ್ಶನವಾದ ಮೇಲೆ ಅರ್ಜುನ ಯುದ್ಧಕ್ಕೆ ಸಿದ್ಧನಾಗುತ್ತಾನೆ.
ಮಹಾಭಾರತದ ಯುದ್ಧದ ಸನ್ನಿವೇಶದಲ್ಲಿ ಕೃಷ್ಣ ನಡೆಸಿದ ಚಮತ್ಕಾರಗಳ ವರ್ಣನೆಯನ್ನು ಮಾಡುತ್ತಾ ಕನಕದಾಸರು ಹೇಳ್ತಾರೆ.......
ಧನುಜೆಯಲ್ದನಣ್ಣನಯ್ಯನ-------------(ಈ ನುಡಿಯನ್ನು ಮತ್ತೆ ಹಾಡಬೇಕು---)
ಈ ನುಡಿಯ ಅರ್ಥ ಏನು?
ಮಹಾಭಾರತದ ಯುದ್ಧದಲ್ಲಿ ಕ್ರೂರನಾದಂತಹ ಜಯದ್ರಥ ಅರ್ಜುನನ ಮಗನಾದ ವೀರ ಅಭಿಮನ್ಯುವನ್ನು ಕೊಂದಿರುತ್ತಾನೆ. ಕೋಪಗೊಂಡ ಅರ್ಜುನ ಜಯದ್ರಥನನ್ನು ನಾಳೆ ಸೂರ್ಯಾಸ್ತವಾಗುವುದಕ್ಕೆ ಮುಂಚೆ ಕೊಲ್ಲುವುದಾಗಿಯೂ, ಹಾಗೆ ಮಾಡಲಾಗದಿದ್ದರೆ ತಾನೇ ಅಗ್ನಿಪ್ರವೇಶ ಮಾಡಿ ಸಾಯುವುದಾಗಿ ಶಪಥ ಮಾಡಿರುತ್ತಾನೆ. ಅರ್ಜುನನ ಶಪಥದ ಬಗ್ಗೆ ಕೇಳಿದ ದುರ್ಯೋಧನ ಮಾರನೆಯದಿನ ತನ್ನ ಬಾವನಾದ ಜಯದ್ರಥನನ್ನು ಬಚ್ಚಿಡುತ್ತಾನೆ. ಸಂಜೆಯಾಗಿ ಬಿಟ್ಟರೆ ಅರ್ಜುನನ ಶಪಥಕ್ಕೆ ಭಂಗವುಂಟಾಗಿ ಅವನು ಅಗ್ನಿಪ್ರವೇಶ ಮಾಡಬೇಕಾದ ಅಪಾಯ ಒದಗುತ್ತದೆ ಎಂದು ಯೋಚಿಸಿದ ಕೃಷ್ಣ, ಸಂಜೆಗೆ ಮುನ್ನವೇ ತನ್ನ ಸುದರ್ಶನ ಚಕ್ರದಿಂದ ಸೂರ್ಯನನ್ನು ಮುಚ್ಚುತ್ತಾನೆ. ಸಂಜೆಯಾಯಿತೆಂದು ಭ್ರಮೆಗೊಂಡ ದುರ್ಯೋಧನ ತನ್ನ ಭಾವ ಜಯದ್ರಥನೊಂದಿಗೆ ಕೃಷ್ಣಾರ್ಜುನರೆದುರು ಬಂದು ನಿಲ್ಲುತ್ತಾನೆ. "ಅರ್ಜುನ, ಸಂಜೆಯಾಗಿದೆ. ಸಂಜೆಗೆ ಮುಂಚೆ ಜಯದ್ರಥನನ್ನು ನೀನು ಕೊಲ್ಲಲಾಗಲಿಲ್ಲ. ಕೂಡಲೇ ಅಗ್ನಿಪ್ರವೇಶ ಮಾಡುವಂತವನಾಗು" ಎಂದು ಗಹಗಹಿಸಿ ನಗುತ್ತಾನೆ. ಚತುರ ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಸೂರ್ಯನಿಂದ ಸರಿಸಿ, "ಆಗೋ ನೋಡು ಅರ್ಜುನ, ಇನ್ನೂ ಸೂರ್ಯ ಮುಳುಗಿಲ್ಲ. ಬಿಸಿಲು ಗಿಡಮರಗಳ ಮೇಲೆ ಇನ್ನು ಇದೆ. ಕೂಡಲೇ ಜಯದ್ರಥನ ಮೇಲೆ ಬಾಣವನ್ನು ಪ್ರಯೋಗಿಸು" ಎಂದು ಆಜ್ಞಾಪಿಸುತ್ತಾನೆ. ಎಚ್ಚರಗೊಂಡ ಅರ್ಜುನ ಎದುರಿಗೆ ಇದ್ದ ಜಯದ್ರಥನ ಮೇಲೆ ಬಾಣವನ್ನು ಪ್ರಯೋಗಿಸಿ ಅವನನ್ನು ಕೊಂದು ತನ್ನ ಶಪಥವನ್ನು ಉಳಿಸಿಕೊಳ್ಳುತ್ತಾನೆ. ಈ ಚಮತ್ಕಾರ ಚತುರ ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯವಾಯಿತು ಎಂಬ ವಿಷಯವನ್ನು ಕನಕದಾಸರು ತಮ್ಮ ಹಾಡಿನಲ್ಲಿ ಸೊಗಸಾಗಿ ವರ್ಣಿಸಿದ್ದಾರೆ.
ಕನಕದಾಸರು ಮುಂದೆ ಹೀಗೆ ಹಾಡ್ತಾರೆ.
ಕ್ರೂರನಾದ ಫಣಿಪಬಾಣ......... (ಈ ನುಡಿಯನ್ನ ಮತ್ತೊಮ್ಮೆ ಹಾಡುವುದು)
ಮಹಾಭಾರತದ ಯುದ್ಧದಲ್ಲಿ ಒಮ್ಮೆ ಕರ್ಣ ಅರ್ಜುನನ ಮೇಲೆ ಸರ್ಪಾಸ್ತ್ರವನ್ನು ಪ್ರಯೋಗಿಸುತ್ತಾನೆ. ಸರ್ಪಾಸ್ತ್ರವನ್ನು ಎದುರಿಸುವ ತಂತ್ರ ಅರ್ಜುನನಿಗೆ ಗೊತ್ತೇ ಇರೋಲ್ಲ.
ತೊಟ್ಟ ಬಾಣವನ್ನ ಮಹಾರಥಿ ಕರ್ಣ ಮತ್ತೊಮ್ಮೆ ತೊಡುವುದಿಲ್ಲಾ ಎಂಬುದು ಕೃಷ್ಣನಿಗೆ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಕೃಷ್ಣ ಚತುರತೆಯಿಂದ ಭೂಮಿಯನ್ನು ತನ್ನಕಾಲಿನ ಹೆಬ್ಬೆಟ್ಟಿನಿಂದ ಒತ್ತುತಾನೆ. ಭೂಮಿ ಕುಸಿದು ಅರ್ಜುನನ ರಥ ಸ್ವಲ್ಪ ತಳಗೆ ಹೋಗ್ಬಿಡುತ್ತೆ. ಅರ್ಜುನನ ಕತ್ತನ್ನು ಕತ್ತರಿಸಬಹುದಾದ ಸರ್ಪಾಸ್ತ್ರ ಅವನ ಕೀರಿಟವನ್ನು ಮಾತ್ರ ಹಾರಿಸಿಕೊಂಡು ಹೋಗ್ಬಿಡುತ್ತೆ. ಭಕ್ತನಾದ ಅರ್ಜುನ ಬದುಕುಳಿಯುತ್ತಾನೆ.
ಮುಂದೆ ನರಕಾಸುರನ ವೃತ್ತಾಂತ. ಪ್ರಾಗ್ಜ್ಯೋತಿಷಪುರ ಎಂಬುದು ಇಂದಿನ ಅಸ್ಸಾಮಿನ ಗೌಹಾತಿ ಹತ್ತಿರದ ಪಟ್ಟಣ. ಅಲ್ಲಿ ಆಡಳಿತ ಮಾಡುತ್ತಾ ಅಸುರ ಶಕ್ತಿಯಾಗಿ ಬೆಳೆದು ನಿಂತಿದ್ದವನೇ ನರಕಾಸುರ. ಈ ನರಕಾಸುರ ವರಾಹರೂಪಿ ಪರಮಾತ್ಮನಿಗೂ ಹಾಗು ಭೂದೇವಿಗೂ ಜನಿಸಿದ ಮಗ. ಮಗನಾದರೇನು, ದುಷ್ಟರ ವಧೆ ಆಗಲೇ ಬೇಕು ಎಂಬುದು ಕೃಷ್ಣನ ವಿಚಾರ. ನರಕಾಸುರನಿಗೆ ಒಂದು ವರವಿರುತ್ತದೆ . ಅದು ಏನಪ್ಪಾ ಅಂದರೆ, ಅವನನ್ನು ಹೆತ್ತವರಿಂದಲೇ ಅವನ ವಧೆ ಆಗಬೇಕೆಂಬುದು. ಹಾಗಾಗಿ ಭೂದೇವಿಯ ಅವತಾರವಾದ ಸತ್ಯಭಾಮೆ ಕೂಡ ಕೃಷ್ಣನ ಜೊತೆ ನರಕಾಸುರನ ವಧೆ ಮಾಡಲು ಹೊರಡುತ್ತಾಳೆ. ನರಕಾಸುರನನ್ನು ಶ್ರೀ ಕೃಷ್ಣ ವಧಿಸಿದ ದಿನವೇ ನರಕ ಚತುರ್ದಶಿ ಮತ್ತು ದೀಪಾವಳಿ.
ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ.......
yadā yadā hi dharmasya glānir bhavati bhārata
abhyutthānam adharmasya tadātmānaṁ sṛijāmyaham
- paritrāṇāya sādhūnāṁ vināśhāya cha duṣhkṛitām
dharma-sansthāpanārthāya sambhavāmi yuge yuge
ಯಾವಾಗ ಯಾವಾಗ ಪ್ರಪಂಚದಲ್ಲಿ ಧರ್ಮಕ್ಕೆ ಸಂಕಟ ಬರುತ್ತದೋ, ಅಧರ್ಮ ತಂಡವಾಡುತ್ತದೋ, ಅಂತಹ ಸಮಯದಲೆಲ್ಲ ನಾನು ಭೂಮಿಯ ಮೇಲೆ ಅವತರಿಸುತ್ತೇನೆ. ಧರ್ಮವನ್ನು ಎತ್ತಿ ಹಿಡಿಯುತ್ತೇನೆ ಎಂಬುದು ಶ್ರೀ ಕೃಷ್ಣನ ಸಂದೇಶ.
ಈಗ ಕೃಷ್ಣನ ಸ್ಮರಣೆಯನ್ನು ಮಾಡೋಣ.
ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ.
ಬೌಧಾವತರ ಮತ್ತು ಕಲ್ಕ್ಯಾವತಾರಗಳು ದಶಾವತಾರದ ಮುಂದಿನೆರಡು ಅವತಾರಗಳು.
ಸಭಿಕರೆ, ಇಲ್ಲಿಗೆ ನಮ್ಮ ದಶಾವತಾರದ ಹರಿಕಥೆ ಮುಗಿದಿದೆ. ಒಂದು ಮಾತು. ನಾವು ಇಂದು ಹಾಡಿದ ಅಣ್ಣಮಾಚಾರ್ಯರ ಮತ್ತು ತುಳಸೀದಾಸರ ಕೀರ್ತನೆಗಳನ್ನು ಕನ್ನಡಕ್ಕೆ ಭಾಷಾಂತರಿಸಿರುವವರು ವಿದುಷಿ ರಕ್ಷಾ ಮಹೇಂದ್ರರವರು, ಅವರು ನಮ್ಮ ಚಿಕ್ಕಮ್ಮ.
ದಶಾವತಾರದ ಕಥೆಯೇನೋ ಮುಗಿಯಿತು. ಹಾಗಂತ ಪರಮಾತ್ಮ ಮುಂದೆ ಅವತರಿಸೇ ಇಲ್ಲ ಅಂತ ಹೇಳಿದರೆ, ಅದು ತಪ್ಪು. ಈಗಲೂ ಪರಮಾತ್ಮ ಯಾವುದೊ ರೂಪದಲ್ಲಿ ಅವತರಿಸಿ ನಮ್ಮನೆಲ್ಲ ಕಾಪಾಡುತ್ತಾ ಇದ್ದಾನೆ ಎಂಬುದು ನಮ್ಮೆಲ್ಲರ ನಂಬಿಕೆ. ಏಕಪ್ಪಾ ಅಂದ್ರೆ, ಪರಮಾತ್ಮನೇ ಹೇಳಿದ್ದಾನಲ್ಲ "ಧರ್ಮ ಸಂಸ್ಥಾಪನಾರ್ತಾಯ ಸಂಭವಾಮಿ ಯುಗೇ ಯುಗೇ" ಅಂತ. ಅಂತಹ ಮಹಾನ್ ಪರಮಾತ್ಮನಿಗೆ ಈಗ ಮಂಗಳವನ್ನು ಹಾಡೋಣ.
Pavamaana Suthudu Pattu, Pathara Vinthiya Mulagu
Sri Ram Rupa Mulugu, Nitya Jaya Mangalam
Prahlad NaraDadhi, Bhaktulu Pogadu Sandhu
Sri Ram Rupa Mulugu, Nitya Jaya Mangalam
Rajeeva Nayana Thyaga, Rajathi Vinudhamaina
Sri Rama-rupa Mulugu, Nitya Jaya Mangalam
-೦-೦-೦-೦-೦-೦-೦-೦-
start from.......
My humble namaskarams to all of you (folded hands).
I welcome you all to the second part of my harikatha on Dashavatara.
We were looking through Dashavatara of Mahavishnu, as narrated by Saint Annamacharya in one of his ever green kritis.
Start from....(with tala and action in the other hand)
itanikantimari..................and sing all pallavi lines with action.
And then pick up from below part.....
Chedaraka kondala guhala vedakite srinarasimhudu unnadu
Telisi bhuna bhontharamuna vedakina trivikramakruti nilichinadi (sing throughout with tala and action in the other hand).
Annamacharya says, after searching through caves of valleys, I searched in the NABHOMANDALA, the vast sky (hand action in the form of gradual stretching of hands and looking up) and I again found Lord Venkateswara in the form of the gigantic Trivikrama! (hand action, waving both hands from top to bottom, and looking from top to bottom). When the most popular and generous King Maha Bali (hand action with right fist up) became all powerful, Lord Vishnu had to incarnate as VAMANA (one hand action, showing small sign). Little Vamana grew in size to the size of gigantic Trivikrama to contain King Maha Bali, and grant him immortality, by trampling him down to Patala.(show action of trampling down using your right hand).
now sing following two lines....... (no tala and hand action only)
Telisi bhuna bhontharamuna vedakina trivikramakruti nilichinadi
ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು
Paluveerulalo vedakichoochite parasuramudokadainadu
ಹಲವು ವೀರರನ್ನೆಶ್ವಿಸಿ ನೋಡಿದೆ, ಪರಶುರಾಮನೊಬ್ಬನಿರುವನು
Annamacharya then says that he searched among all great warriors. Again there, he found Lord Venkateswara in the form of greatest warrior Parashurama (show the action of axe placed on your right shoulder. eyes should indicate the warrior look), who transferred all his powers to Lord Rama. (show hand action of transferring).
now start singing all following three lines with tala and action in one hand. appropriate expression in eye.............
elisi bhuna bhontharamuna vedakina trivikramakruti nilichinadi
ತಿಳಿದು ನಭೋಮಂಡಲದಿ ಹುಡುಕಿದೆ ತ್ರಿವಿಕ್ರಮಕೃತಿ ನಿಂತ್ತಿತ್ತು
Paluveerulalo vedakichoochite parasuramudokadainadu
ಹಲವು ವೀರರನ್ನೆಶ್ವಿಸಿ ನೋಡಿದೆ, ಪರಶುರಾಮನೊಬ್ಬನಿರುವನು
Talapuna shivudunu parvati vedakina taraka brahmamu raghavudu
What I can say about Ramayana? (hand action)........which is the greatest epic on this earth. Ramayana was originally written in sanskrit by Saint Valmiki and subsequently thousands of poets (hand action) have written Ramayana in almost all languages of the world. Kannada poet Lakshminarayana K, who is my grandfather (show action by touching your heart), describes Lord Rama.
ವಾಲ್ಮೀಕಿ ರಾಮಾಯಣದ ಹರಿಕಾರನಾದ
ಕಬೀರರ ಕಾವ್ಯಾಮೃತಕೆ ತಾ ಧಾರೆಯಾದ
ತ್ಯಾಗರಾಜರಿಗೆ ಜಗದಾನಂದ ಕಾರಕನಾದ
ರಾಮಾಯಣ ದರ್ಶನದಿ ಕನ್ನಡದ ಕಂಪಾದ
ನಮ್ಮ ಭಾವೈಕ್ಯತೆಯ ಗುಪ್ತಗಾಮಿನಿ ಅವನು
(while reciting above poem, follow hand action as I have done in my video)
Thus Lord Rama is the spirit which binds "we Indians" (hand action touching the heart with both hands) together with the spirit of 'Unity in diversity'. (unity - show by hand action. Right first up). (you can recite the with hand actions like I have done in the video sent. You need not byheart this. You can read from book, like I have read. Just copy me it is enough.)
And Lord Rama was a great warrior, Maha veera! (show hand action) He was not only capable of fighting for himself, but could lead a mighty army. (hand action all through). Vedanta deshikar, the Tamil scholar describes the varlor of lord Rama in his Raghuveeragadhyam!
(Sing raghuveeragadhyam with action upto 'vimochana')
Thus Lord Rama (folded hands) is our role model and we respect him as MARYADAPURUSHOTHAMA, the ultimate gentleman.
Ramayan is also remembered for another great God HANUMAAN (your right hand will go near your right arm, as if you are holding a mace (GADE). glowing eyes and hanuman type of mouth). Even Lord Rama could not have conquered Ravana, but for the heroic acts of Hanumaan.
We children are carried away by heroic acts of batsman, iron man, spiderman, superman and so on (action for each .......man). But our real superman is our HANUMAAN (folded hands)! Let's pray Hanuman to bless us with strength and wisdom.
Shankara suvana, Kesari nandan
...........................
....Rama laxmana jaanaki jai bolo.....
(Soorygayathri style)
end of part 3
-0-0-0-0-0-0-0-
Start with 'Talapuna shivudunu parvati vedakina taraka brahmamu raghavudu
ಶಿವನ ಲೇಹರಿಯಲ್ಲಿ ಪಾವತಿ ಅರಸಿದ ತಾರಕ ಬ್ರಹ್ಮನೇ ರಾಘವನು
Kelakula naavula mandala vedakina krishnudu ramudu nainaru
ಗೋವುಗಳ ಹಿಂಡಾಲಿ ಅರಸಿದರೆ ಬಲರಾಮ ಕೃಷ್ಣರೇ ಇರುವರು
Itanikante mari daivamu kanamu yekkada vedakina nitade
and go on till 'annitikadaramu taane.......' (sing with tala and action in the other hand)
Annamacharya (Chitike action) now takes us towards Mahavishnu's 8th avatara, the Krishnavatara (flute action). If scholars have described Lord Rama as Maryadapurushothama (folded hands action), I would like to describe Lord Krishna, as CHATURA PURUSHOTHAMA (pointed right hand finger touching your head). I only pray to Lord Kirshna to come again today (show hands as if Krishna comes from heaven), to set right our country and its numerous problems (open your hands with action).
How can we visualise (touch your both eyes and open up arms) Lord Krishna? A God-child? A prankster?, Navaneeta Chora (show holding butter in left hand, and show eating in the right hand)?, a model lover, a divine hero or the universal supreme being (show your eye and hand action as if you have seen his vishwaroopa)!
Oothukaadu Venkata Subba Iyer, a great devotee of Lord Krishna welcomes Him this way.
taaLam: aadi
Composer: OotukkaaDu VenkaTasubbaiyyar
pallavi
swaagatam krishNaa caraNaagatam krishNaa
madhuraapuri sadanaa mridu vadanaa madhusoodana iha
(swaagatam)
anupallavi
bOga dapta sulabaa supushpa gandha kalaba
kastoori tilaka mahiba mama kaanta nanda gOpa kandha
(swaagatam)
sadhwini koppa style
https://www.youtube.com/watch?v=KQiYXXwPDYw&ab_channel=SadwiniKoppa
Krishna was not only the loving child of Yashoda (look at your lap, as if child krishna is resting on your lap, hold the child's head and tap (ತಟ್ಟುವುದು) him with the right hand), but he was the loving child of all mothers of nanda gokula. He was not only the lover who charmed Radha (show flute holding action), but he was the lover for 16,000 gopikas.
Now sing the CHARANA OF THE SONG AND COMPLETE IT with tala and hand action.
Lord Krishna also saved the world by killing (hand action) demons like Kamsa. He also helped pandavas to defeat the wicked Duryodhana and establish the rule of 'dharma.' (thumbs up action).
When confused Arjuna, declined to fight, Lord Krishna preached him the BHAGAVADGEETHA and showed him his vishwaroopa (hand to go up and eye action looking up).
Yada yada hi dharmasya glaanirbhavati bhaarat
Abhyutthaanam adharmasya tadaatmaanam srijaamyaham
Paritranaay saadhunaam vinaashaay cha dushkritaam
Dharm sansthaapanaarthaay sambhavaami yuge yuge
https://www.youtube.com/watch?v=LEyy4C50b4Q&ab_channel=VedicBox
Mahabharat style
This message is relevant for all youngster of today like all of us (show hands all round). "Keep doing your duties (point fingers towards the audience), don't be bothered about the results (waving of hands) . I will take care of all of you (protection action with both hands (like you have shown in first part)" Lord Krishna has taught us the way of life.
Now sing
Kelakula naavula mandala vedakina krishnudu ramudu nainaru
Ponchi asurakanthalalo vedakina buddhavataram bainadu
ಅಸುರ ಸತಿಯರಲಿ ಹುಡುಕಿದರೆ, ಬೌಧಾವತರವು ಇವನೇ
Minchina kaalamu kadapata vedakina midati kalkyavataramu
ಮಿಂಚಿದ ಕಾಲದಲಿ ಉದಿಸಿದ ಕಲ್ಕ್ಯವತಾರವು ಇವನೇ
Anchela jeevula lopala vedakina antharyamai merisenu
ಸರ್ವಜೀವಿ ಅಂತರ್ಯವ ಶೋಧಿಸಿ, ದೊರಕಿದ ಜ್ಯೋತಿಯು ಈತನೇ
Yenchuka ihamuna paramuna vedakina eethade Sri Venkatavibhudu
ಇಹದಲಿ ಪರದಲಿ ಅರಸಿದರೆ ಇವನೇ ಶ್ರೀ ವೆಂಕಟ ಪ್ರಭುವು
Itanikante mari daivamu kanamu yekkada vedakina nitade
Whether it is buddhavatara or Kalkyavatara, It is Lord venkateswara everywhere. Let Lord Venkateswara who has appeared on this earth in the form of DASHAVATHARAS, bless us all
Now sing the mangalam. Ajji has sung and sent the mangalam. Sing the same way. (with action on one hand folding hands towards the end three lines).
-0-0-0-0-0-0-THE END-0-0-0-0-0-0-0-
No comments:
Post a Comment