Saturday 1 September 2018

ಟ್ರ೦ಪನ ರ೦ಪ


ವಿಶ್ವದ ದೊಡ್ಡಣ್ಣ, ಅವನೇ ಟ್ರ೦ಪಣ್ಣ 
'ನಮದೇ ಕೊಳ್ಳಿ, ನಮ್ಮವರನೇ  ನೇಮಿಸಿಕೊಳ್ಳಿ'
ಎಂಬುದೆ ಅವನ ಅಂಬೋಣ 
ಅದ ಕಂಡು ನಡುನಡುಗಿ ಜಗತ್ತೇ ತಲ್ಲಣ 

ಕಾರಬಾರು ನಡೆಸಿದೆಯಂತೆ ಅಮೆರಿಕಾ ತುಂಬಾ ಚೀನಾ 
ಗಳಿಸಿದೆಯಂತೆ ಡಾಲರುಗಳ ಝಣಝಣ, ಜೊತೆಗೆ ಉನ್ನತ ತಂತ್ರಜ್ಞಾನ 
ಅದ ಕಂಡು ಕೆಂಪಾಗಿದ್ದಾನಂತೆ ಮುನಿದು ಟ್ರ೦ಪಣ್ಣ 
ಯೋಜಿಸಿದ್ದಾನಂತೆ ಹಾಕಲದಕೊಂದು  ಕಡಿವಾಣ 

ಚೀನೀ ಸರಕು ತಲುಪಲೀಗ ಅಮೆರಿಕಾ 
ತೆರಬೇಕಂತೆ ಭಾರೀ ಸುಂಕ 
ವಿಧಿಸಿದೆಯೆಂತೆ ಚೀನವು ದುಬಾರಿ ಮರುಸುಂಕ 
ಹೇಗಿದೆ ನೋಡಿ, ಟ್ರ೦ಪನ ರಂಪ, ಚೀನಾದ ಬಿಂಕ 

ಅಪ್ಪ-ಅಮ್ಮನ ಜಗಳದಲಿ ಬಡವಾಯ್ತ೦ತೆ ಕೂಸು 
ಬೇರೆಲ್ಲ ದೇಶಗಳ ನಡುವೀಗ ಸಂಕಟದ ಗುಸುಗುಸು 
ನಮ್ಮನ್ನೂ ಬಿಟ್ಟಿಲ್ಲ ಇದರ ಇರಿಸು-ಮುರಿಸು 
ಸಾಗಬೇಕಿದೆ ನಡುವೆ ನಮ್ಮ ವಿಕಾಸದ ಕನಸು 

ವಿಶ್ವವೊಂದೀಗ ಪುಟ್ಟಗ್ರಾಮ 
ಬಾರದು ಬಾರದೀಗ ವ್ಯಾಪಾರ ಸಂಗ್ರಾಮ 
ಬೇಡೀಗ ದೊಡ್ಡಣ್ಣ ವಲಸಿಗರ ಹೊರಗಟ್ಟುವ ಕರ್ಮ 
ಬೇಗ ಸದ್ಬುದ್ಧಿಯ ದಯಪಾಲಿಸೋ ಎಲ್ಲರಿಗು ರಾಮರಾಮ
-0-0-0-0-0-0-

(ಮೇಲೆ ಉಪಯೋಗಿಸಿರುವ ಚಿತ್ರದ ಹಕ್ಕುಸ್ವಾಮ್ಯ ನನಗಿಲ್ಲ. ಅದರ ಮೂಲಕ್ಕೆ ನನ್ನ ಧನ್ಯವಾದಗಳು.
I don't have copyrights on the picture used above.  Thanks to the source.)

No comments:

Post a Comment