Saturday 22 September 2018

MUDRA LOANS

1) ಮುದ್ರಾಸಾಲ  (MUDRA) ಯೋಜನೆ ಎಂದರೇನು?
(Micro-Units Development & Refinance Agency)
ಮುದ್ರಸಾಲ ಯೋಜನೆ ಎಂಬುದು ನಮ್ಮ ಪ್ರಧಾನಿಯವರ ಕನಸು.  ನಿರುದ್ಯೋಗ ನಿವಾರಣೆಯತ್ತ ನಮ್ಮ ದೇಶವಿಟ್ಟಿರುವ ಮಹತ್ತರವಾದ ಹೆಜ್ಜೆ.   2015ರ ಏಪ್ರಿಲ್ 8-ರಂದು ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಯ್ತು. 
ಸಣ್ಣ ಪ್ರಮಾಣದ ಕೈಗಾರಿಕೆಗಳು (Egs.-Garment Manufacturing), ವ್ಯಾಪಾರಗಳು (Egs.-Provision shop), ಸೇವಾ ಘಟಕಗಳು (Egs.-Beauty Parlour), ಕೃಷಿ-ಜೊತೆಗಿನ ಉದ್ಯೋಗಗಳು (Egs.-Cattle-rearing) ಇವುಗಳಿಗೆ 10 ಲಕ್ಷ ರೂ. ಗಳವರೆಗಿನ ಸುಲಭ ಆಧಾರ-ರಹಿತ ಸಾಲವನ್ನು (Loans without collateral security or third party guarantee) ಬ್ಯಾಂಕುಗಳ ಮುಖಾಂತರ ಒದಗಿಸಿಕೊಡುವುದೇ ಈ ಯೋಜನೆಯ ಉದ್ದೇಶ. ವಹಿವಾಟಿನ ಪ್ರಮಾಣಕ್ಕನುಸಾರವಾಗಿ ನೀಡುವ ಸಾಲಗಳನ್ನು 3 ವಿಭಾಗಗಳಾಗಿ ವಿಂಗಡಿಸಬಹದು. 

ಶಿಶು - ರೂ. 5೦,೦೦೦ ಗಳವರಗೆ 
ಕಿಶೋರ - ರೂ. 5 ಲಕ್ಷದವರಗೆ 
ತರುಣ - ರೂ.10 ಲಕ್ಷದವರಗೆ 

ಹೊಸದಾಗಿ ಆರಂಭಿಸುವ ಹಾಗೂ ಈಗಾಗಲೇ ನಡೆಸುತ್ತಿರುವ ಉದ್ದಿಮೆ/ವಹಿವಾಟುಗಳಿಗೂ ಅವಕಾಶವುಂಟು. (New Units and Existing Units)

ಆಟೋ/ಟ್ಯಾಕ್ಸಿ/ಟೆಂಪೋ ಖರೀದಿಸಲು ಈ ಯೋಜನೆಯಡಿ ಸಾಲ ದೊರೆಯುವುದೆ?
-ಖಂಡಿತ .  ಸಾಲದ ಮಿತಿ 10 ಲಕ್ಷಗಳ ಒಳಗೆ ವಾಹನ ದೊರೆಯುವಂತಿರಬೇಕು.

ಕೃಷಿಗೆ  ಈ ಯೋಜನೆಯಡಿ ಸಾಲ ದೊರೆಯುವುದೆ?

ಇಲ್ಲ .  ಅವುಗಳಿಗೆ ಬೇರೆ-ಬೇರೆ ಯೋಜನೆಗಳಿವೆ .

ಆದರೆ ಕೃಷಿ-ಜೊತೆಗಿನ ಚಟುವಟಿಗೆಗಳಾದ - ಪಶು-ಸಾಕಾಣಿಕೆ (animal husbandry) ,  ಬೀಜ-ರಸಗೊಬ್ಬರ ವ್ಯಾಪಾರ (seeds-fertilizers business), ಕೀಟನಾಶಕ ಔಷಧಿ ಸಿಂಪಡಿಸುವಿಕೆ (spraying pesticides)   ಮುಂತಾದವುಗಳಿಗೆ ಅವಕಾಶವುಂಟು . 


2) ಸಾಲಪಡೆಯುವ ಅಭ್ಯರ್ಥಿಯ ಅರ್ಹತೆಗಳೇನು?(eligibility)
-ಸಾಲಪಡೆಯುವ ಕ್ಷೇತ್ರದಲ್ಲಿ ಅಭ್ಯರ್ಥಿ ಕಳೆದ 2 ವರ್ಷಗಳಿಂದ ವಾಸವಿರಬೇಕು. 
-ಯಾವುದೇ ಬ್ಯಾಂಕ್ ಒಂದರ ಸಾಲವನ್ನು ಅವಧಿ ಮೀರಿ ಬಾಕಿ (not a defaulter) ಉಳಿಸಿಕೊಂಡಿರಬಾರದು.   
-ತಾವು ಯೋಜಿಸಿರುವ ಉದ್ಯಮದ ಚಟುವಟಿಕೆಗಳಿಗೆ ಬೇಕಾಗುವ ತರಬೇತಿಯನ್ನು ಪಡೆದಿರುವರಿಗೆ ಆದ್ಯತೆ ಉಂಟು.  ಗ್ರಾಮೀಣಾ ಸ್ವಯಂ-ಉದ್ಯೋಗ ತರಬೇತಿ ಸಂಸ್ಥೆ (RSETI) ಬೇಕಾದ ತರಬೇತಿಯನ್ನು ನೀಡುತ್ತದೆ. ಪ್ರತಿಜಿಲ್ಲೆಯಲ್ಲೂ ಈ ಸಂಸ್ಥೆ ಇರುತ್ತದೆ. 

3) ಸಾಲದ ನಿಯಮ-ಷರತ್ತುಗಳ  (Terms and conditions) ವಿವರವೇನು?
-Margin - ಅಭ್ಯರ್ಥಿ ತೊಡಗಿಸಬೇಕಾದ ಮೊತ್ತ 
ಶಿಶು ಸಾಲಗಳಿಗೆ - NIL , ಬೇಡ 
ಕಿಶೋರ ಮತ್ತು ತರುಣ ಸಾಲಗಳಿಗೆ  - 10%

-ಸಾಲದ ಮರುಪಾವತಿ ಅವಧಿ (Repayment Period)
Term Loan (Avadhi Sala)
5 ವರ್ಷಗಳು-ಸುಲಭ ಕಂತುಗಳಲ್ಲಿ  (ಮರುಪಾವತಿ ಆರಂಭಿಸಲು                        6 ತಿಂಗಳವರೆಗಿನ ಕಾಲಾವಕಾಶವಿರುತ್ತೆ - Holiday period). 
Loan installments are subject to income generation pattern of the activity.

Overdraft is for 1 year period, and can be renewed every year

-ಭದ್ರತೆಗಳು (Securities)
ನೀಡಿದ ಸಾಲದಿಂದ ಖರೀದಿಸಿದ ಆಸ್ಥಿಗಳು ಮಾತ್ರ 
ಮನೆ  ಇತರ ಸ್ಥಿರಾಸ್ತಿಗಳ  (No Immovable properties) ಆಧಾರವನ್ನು ನೀಡಬೇಕಾದ್ದಿಲ್ಲ .  
ಮೂರನೇ ವ್ಯಕ್ತಿಯ ಜಾಮೀನು ನೀಡಬೇಕಾಗಿಲ್ಲ.  (No Third party guarantee)

-ಬಡ್ಡಿಯ ದರ (Rate of Interest)
ಸುಮಾರು 9-11% ( linked to MCLR of the bank)

4) ಈ ಸಾಲವನ್ನು ಪಡೆಯವುದು ಹೇಗೆ?
ಅಭ್ಯರ್ಥಿ ತನ್ನ ನಿವಾಸದ ಅಥವಾ ಉದ್ದಿಮೆಯ ಹತ್ತಿರವಿರುವ ಯಾವುದೇ ಬ್ಯಾಂಕನ್ನು ಸಂಪರ್ಕಿಸಬಹುದು. ಸರ್ಕಾರಿ ವಲಯದ ಬ್ಯಾಂಕುಗಳನ್ನು (Public Sector Bank like SBI, Canara Bank) ಸಂಪರ್ಕಿಸುವುದು ಒಳ್ಳೆಯದು. 
ಗ್ರಾಮೀಣ ಜನರು ತಮ್ಮ ಹಳ್ಳಿಗಳಿಗೆ ಹತ್ತಿರವಿರುವ ಬ್ಯಾಂಕುಗಳನ್ನು ಸಂಪರ್ಕಿಸಬಹದು. 
ಶಿಶು ಸಾಲಕ್ಕೆ - 1 ಪುಟದ ಅರ್ಜಿ 
ತರುಣ್ ಹಾಗು ಕಿಶೋರ ಸಾಲಗಳಿಗೆ - 3 ಪುಟದ ಅರ್ಜಿ 
ಆಧಾರ್ ಕಾರ್ಡ  ಅಥವ  ವೋಟರ್ ಐಡಿಗಳು
PAN ಕಾರ್ಡ್ (ಖಡ್ಡಾಯವಿಲ್ಲ)
2 ಭಾವಚಿತ್ರಗಳು 
ಉದ್ದಿಮ್ಮೆಗೆ ಸಂಬಂಧಪಟ್ಟ ದಾಖಲೆಗಳು (Project report, licence)
ಖರೀದಿಸಬೇಕಾದ ಯಂತ್ರಗಳು, ಉಪಕರಣಗಳು, ಸಾಮಾನುಗಳ ವಿವರ ಮತ್ತು 
 quotationಗಳು 
ತರಬೇತಿಪಡೆದ ಬಗ್ಗೆ ದಾಖಲೆಗಳು 
ಕುಟುಂಬದ ವಿವರ etc. etc......

ಸಾಲಪಡೆಯುವಲ್ಲಿ ಎಷ್ಟು ಸಮಯ ಬೇಕಾಗಬಹುದು?
ಎಲ್ಲಾ ವಿವರಗಳನ್ನು ನೀಡಿದ ಮೇಲೆ, ಶಿಶು ಸಾಲವಾದರೆ ಸುಮಾರು ಒಂದು ವಾರದೊಳಗೆ ಸಾಲ ದೊರೆಯಬಹುದು.  ಹೆಚ್ಚಿನ ಮೊತ್ತದ ಸಾಲಗಳಿಗೆ ಸ್ವಲ್ಪ ಜಾಸ್ತಿ ಸಮಯ ಬೇಕಾಗಬಹುದು. 
ಮುದ್ರಾ ಕಾರ್ಡ್ ಎಂದರೇನು?
ಎಲ್ಲಾ ಮುದ್ರಾ ಸಾಲಗಾರರಿಗೆ ರೂಪೇ-ಮುದ್ರಾ ಕಾರ್ಡ್ ನ್ನು ವಿತರಿಸಲಾಗವುದು.  ಸಾಲದ ಹಣವನ್ನು ಈ ಕಾರ್ಡ್ ನ ಮುಖಾಂತರ ಬೇರೆ ಬೇರೆ ಕಡೆಗಳಲ್ಲಿ ಉದ್ದಿಮೆಗೆ ಬೇಕಾದ ಸಾಮಾನುಗಳನ್ನು ಖರೀದಿಸಬಹುದು. 



5) ದೇಶಾದ್ಯಂತ ಕಳೆದ ಮೂರುವರೆ ವರ್ಷಗಳಿಂದ ಜಾರಿಯಲ್ಲಿರುವ ಈ ಯೋಜನೆ ಯಶಸ್ಸು ಕಂಡಿದೆಯೆ?
                                                                      (Rs. in Crores)

-ಕೇಂದ್ರ ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಕಳೆದ ಮೂರುವರೆ ವರ್ಷಗಳಲ್ಲಿ ಸುಮಾರು 12 ಕೋಟಿ ಫಲಾನುಭವಿಗಳಿಗೆ, 6 ಲಕ್ಷ  ಕೋಟಿ ರೂಗಳಷ್ಟು ಸಾಲವನ್ನು ವಿತರಿಸಲಾಗಿದೆ. 

75%ರಷ್ಟು ಫಲಾನುಭವಿಗಳು ಯುವಕರು ಹಾಗು ಮಹಿಳೆಯರು 

28%ರಷ್ಟು ಫಲಾನುಭವಿಗಳು, ಅಂದರೆ 3.25 ಕೋಟಿಯಷ್ಟು ನಿರುದ್ಯೋಗಿಗಳು.  ಹೀಗಾಗಿ ಉದ್ಯೋಗ ಸೃಷ್ಟಿಯಲ್ಲಿ ಇದೊಂದು ಮಹಾಕ್ರಾಂತಿಯೇ ಸರಿ! 

55%ರಷ್ಟು ಫಲಾನುಭವಿಗಳು SC/ST/OBC categories                                        
ಸುಮಾರು 11 ಕೋಟಿಯಷ್ಟು ಫಲಾನುಭವಿಗಳಿಗೆ ಶಿಶು ಸಾಲ ದೊರೆತಿದೆ .  ಅಂದರೆ ಈ ಯೋಜನೆಯ ಸಿಂಹಪಾಲು ಬಡವರಿಗೆ ದೊರೆತಿದೆ. 

ನೀಡಿದ ಸಾಲಗಳ ಮರುಪಾವತಿ ಸ್ಥಿತಿ  (Repayment position) ಹೇಗಿದೆ?

ಸಂತೋಷದ ಸುದ್ದಿ ಏನೆಂದರೆ, ನಮ್ಮ ದೇಶದ ಸಾಮಾನ್ಯ ಪ್ರಜೆಗಳು ಪ್ರಾಮಾಣಿಕರು ಹಾಗೂ ಕಷ್ಟಪಟ್ಟು ದುಡಿಯುವಂತವರು.  ಹಾಗಾಗಿ ಈ ಯೋಜನೆಯಡಿ ನೀಡಿದ ಸಾಲಗಳ ಮರುಪಾವತಿ ಉತ್ತಮವಾಗಿದೆ.  
ಮರುಪಾವತಿಯಾಗದ ಸಾಲಗಳ (NPAs) ಪ್ರಮಾಣ ೪% ಮಾತ್ರ. 

6) ಈ ಯೋಜನೆಯಡಿ ಸಾಲಪಡೆಯುವಲ್ಲಿ ತೊಂದರೆಗಳು ಎದುರಾದರೆ ಏನು ಮಾಡಬೇಕು? (Grievances Redressal)

 ಅರ್ಹ ಅಭ್ಯರ್ಥಿಗಳಿಗೆ ಸಾಲ ದೊರಕುವುದರಲ್ಲಿ ಯಾವುದೇ ತೊಂದರೆಯಾಗದು.  ಅರ್ಜಿ ತಿರಸ್ಕೃತವಾಗಬೇಕಾದರೆ ಬ್ಯಾಂಕ್ ನ್ಯಾಯಸಮ್ಮತವಾದ ಕಾರಣಗಳನ್ನು (Valid reasons) ನೀಡಲೇ ಬೇಕಾಗುತ್ತದೆ. ಆದರೂ ತೊಂದರೆಗೊಳಗಾದ ಅಭ್ಯರ್ಥಿಗಳು ಸಂಬಂಧಪಟ್ಟ ಬ್ಯಾಂಕಿನ ರೀಜನಲ್ ಮೆನೇಜೆರ್ ರವರನ್ನು  (Regional Manager) ಸಂಪರ್ಕಿಸಬಹುದು.

ಹತ್ತಿರವಿರುವ ಮತ್ತೊಂದು ಬ್ಯಾಂಕನ್ನೂ ಸಂಪರ್ಕಿಸಬಹುದು. 

7) ಹೊಸ ಅಭ್ಯರ್ಥಿಗಳಿಗೆ ನೀವು ನೀಡುವ ಸಂದೇಶವೇನು?
-ಉತ್ಸಾಹ ಮತ್ತು ನಿರ್ವಹಿಸುವ ಶಕ್ತಿ ಅತ್ಯವಶ್ಯಕ.  (enthusiasm and energy)
ನೀವು ಆರಂಭಿಸ ಬೇಕಿರುವ ಉದ್ದಿಮೆಯ ಬಗ್ಗೆ ಚೆನ್ನಾಗಿ  ತಿಳಿದುಕೊಳ್ಳಿ. 
ನಿಮ್ಮ ಉದ್ದಿಮೆಗೆ ಸರಿಯಾದ ಸ್ಥಳವನ್ನು ಆಯ್ಕೆಮಾಡಿ. 
-ಅನುಭವ/ತರಬೇತಿಗಳನ್ನು ಪಡೆದಿದ್ದರೆ ಉತ್ತಮ (Experience/training)
-ಹಿರಿಯ ಫಲಾನುಭವಿಗಳ/ಉದ್ದಿಮಿಗಳ  ಮಾರ್ಗದರ್ಶನವನ್ನು ಪಡೆಯಬಹುದು 
(senior MUDRA borrowers)
-ನಿರ್ಭಯವಾಗಿ ನಿಮ್ಮ ಹತ್ತಿರದ ಬ್ಯಾಂಕನ್ನು ಸಂಪರ್ಕಿಸಿ 
-ಎಲ್ಲ ವಿವರಗಳನ್ನು ನೀಡಿ 
-ಸಾಲ ಪಡೆದ ಮೇಲೆ ನಿಮ್ಮ ಮೇಲೆ ಜವಾಬ್ದಾರಿ ಹೆಚ್ಚಿರುತ್ತದೆ.
Make best use of the loan sanctioned! 
ಮರುಪಾವತಿಯ ಕರ್ತವ್ಯ ನಿಮ್ಮದು. (Repayment obligation)
-ಉತ್ಸಾಹ, ದುಡಿಮೆ, ಪ್ರಾಮಾಣಿಕತೆ  ನಿರಂತರವಾಗಿರಬೇಕು. (Be honest)
-ಇತರರಿಗೂ ಮುಂದೆ ಮಾರ್ಗದರ್ಶನ ನೀಡಿ
                                                 -೦-೦-೦-೦-೦-೦-೦-೦-೦-

ಕಾರ್ಯಕ್ರಮದ ನಡುವೆ ಈ ಕೆಳಕಂಡ ಚಿತ್ರಗಳನ್ನು ಪಕ್ಕದಲ್ಲಿ ತೋರಿಸುತ್ತಿರಬಹುದು. 










ಮೇಲೆ ಉಪಯೋಗಿಸಿರುವ ಚಿತ್ರಗಳ ಹಕ್ಕು-ಸ್ವಾಮ್ಯ ನನಗಿಲ್ಲ .  ಅವುಗಳ ಮೂಲಕ್ಕೆ ನನ್ನ ಧನ್ಯವಾದಗಳು. 

No comments:

Post a Comment