Sunday, 26 December 2021

RELIVING 83


 RELIVING 83!

For most seniors like me, reliving ‘83’ is a nostalgic experience. Thanks to Kabir Khan for taking us back to 83, through his film (3D and multilingual) with the same title. 


Yes, none of us believed that India could win the World Cup 1983. Our World Cup records till then in the earlier two tourneys were only full of nightmares like the ‘ infamous 36 not out in 60 overs’ from our greatest player Gavaskar!


The film rightly begins with such glimpses of self-disbelief. In a press conference attended by just three  journalists, when Kapil says ‘we are here to win,’ journos raise their eyebrows. Kapil meekly responds in loose English……’what else we are here for?’


During those days we had not read about Kapil’s first team meeting. As shown in the film, it happened in the team bus!  After receiving tips from team manager Man Singh, Kapil speaks with the background of 1981 film song ‘Ham bane, tum bane ek duje ke liye.’ When he appeals ‘ we are here to win,’ meeting ends with unmoved players dancing to the tune ‘I don’t know what you say, don’t know don’t know what you say.’  


When the newly married Srikanth, reveals that most players had booked the tickets to New York, with a few days of stopover in London for the World Cup, one will be shocked to note how casual our most players were. Of course, one man Kapil Dev believed otherwise. 


No exclusive bus, no permission to enter Lord’s stadium, just £15 per day per player, warnings to players before meeting the British queen were all little known to us, which reveal so much about the treatment meted out to our team during those days. Team manager Man Singh rightly remarks ‘we have won freedom, but are yet to win respect.’ 


Even after first two wins (against WI and Zim), experts and even our team were refusing to believe. Next two losses were enough to burst the bubble! 


When Indians were down at 9/4 against Zim,  Kapil was inside the bathroom and was not ready to come out inspite of his team members repeated door knocks. It took time for him to believe that we were 9/4! Of course he walked in to bat at 17/5 and created history by scoring 175 not out. Also we were through to the finals after beating the mighty Australians. 


The story of Indian batting collapse to 183 all out is too well known to us. When Kapil tries to convince his hopeless team mates during the pre-fielding meet, no player was ready to smile. At the end of that meet, they all smile at Kapil’s broken English. 


How the team bowled out the mighty WI for a humiliating 140 is now history. And of course, that Kapil’s running catch to dismiss Richards provided the turning point. 


Emotions inside the team and outside among people are well brought out in the film. Enough fabricated stories are also packed to make it more appealing. 


Ranveer Singh as Kapil has done his best. Other actors as remaining players are convincing too. But except Kapil, it becomes confusing to recognize other players. 


We had heard too little about the team Manager Man Singh. His role in contributing towards team success is well shown in the film. His role in handling Gavaskar when he was dropped against WI, 2nd match is well shown. 


Comparison between the 2016 movie DHONI, becomes obvious. Sushant Singh Rajput as Dhoni was certainly more convincing. His mannerisms and even the helicopter shot were all very convincing. In that film, actual match scenes were used and only Dhoni was substituted by the actor. Here all cricketing scenes are recreated with present day actors as players and therefore the feel of cricket is not convincing. 


Of course, film Dhoni was a biopic and 83 is about the World Cup. Let’s give full credit to Kabir Khan and his team for having recreated history for the latest generation.

klakshminarayana1956@rediffmail.com

Sunday, 19 December 2021

ಧನೋ ರಕ್ಷತಿ ರಕ್ಷಿತಃ


ಧನೋ ರಕ್ಷತಿ ರಕ್ಷಿತಃ 

'ಧರ್ಮೋ ರಕ್ಷತಿ ರಕ್ಷಿತಃ' ಎಂಬ ಮನುಸ್ಮೃತಿಯ ತತ್ವವನ್ನು ಕೊಂಚ ಬದಲಿಸಿ 'ಧನೋ ರಕ್ಷತಿ ರಕ್ಷಿತಃ' ಎಂದರೆ, ಇಂದಿನ ಕಾಲಕ್ಕೆ ಹೆಚ್ಚು ಅರ್ಥಪೂರ್ಣವಾದೀತು. ಯಾರು ತಮ್ಮ ಹಣವನ್ನು      ಕಾಪಾಡಿಕೊಳ್ಳುತ್ತಾರೋ, ಅವರನ್ನು ಹಣ ಕಾಪಾಡುತ್ತದೆ ಎಂಬುದು ಸರಳ ಸತ್ಯ. 

ಹಣದ ಸಂರಕ್ಷಣೆ ಎಂಬುದು ಹಿರಿಯ ನಾಗರೀಕರ ಪಾಲಿಗೆ ಅತಿ ಮುಖ್ಯವಾದುದು. ಏಕೆಂದರೆ ಅವರುಗಳ  ದುಡಿಯುವ ಅವಧಿ ಮುಗಿದಿದ್ದು, ದೇಹ ಹಾಗೂ ಮಾನಸಿಕ ಶಕ್ತಿಗಳು ಕುಗ್ಗಿರುತ್ತವೆ. ಆರೋಗ್ಯದ ಸಮಸ್ಯೆಗಳು ಕೂಡ ಅವರುಗಳನ್ನು ಕಾಡಬಹುದಾದ ಜೀವನದ ಹಂತದಲ್ಲಿ ಅವರುಗಳಿರುತ್ತಾರೆ.  ಆಧುನಿಕ ವೈದ್ಯಕೀಯ ಸೌಲಭ್ಯಗಳ ಫಲವಾಗಿ, ನಮ್ಮ ಹಿರಿಯ ನಾಗರೀಕರುಗಳ ಜೀವಿತಾವಧಿಯೂ ಹೆಚ್ಚುತ್ತಾ ಸಾಗಿದೆ. ಹೀಗಾಗಿ ನಿವೃತ್ತಿಯ ನಂತರದ ಕನಿಷ್ಠ ೨೦-೨೫ ವರ್ಷಗಳ ಜೀವನಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ಎಲ್ಲರೂ, ಮುಖ್ಯವಾಗಿ ಹಿರಿಯ ನಾಗರೀಕರು ಮಾಡಿಕೊಳ್ಳಲೇ ಬೇಕಾದ ಪರಿಸ್ಥಿತಿ ಉಂಟಾಗಿದೆಯೆಂದರೆ ತಪ್ಪಾಗಲಾರದು. 

ವೃದ್ಧಾಪ್ಯದಲ್ಲಿ ಹಣಕಾಸಿನ ಸ್ವಾತಂತ್ರ್ಯವೆಂಬುದು ಅತಿ ಮುಖ್ಯ. 'ವಿನಾ ದೈನೇನ ಜೀವನಮ್, ಅನಾಯಾಸೇನ ಮರಣಂ' ಎಂದಿದ್ದಾರೆ ಶಂಕರಾಚಾರ್ಯರು. ಮರಣವೆಂಬುದು ನಮ್ಮ ಕೈಗಳಲಿಲ್ಲ. ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚದಿರುವಂತಹ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಾದ್ದು ಜಾಣತನವೇ ಸರಿ. 

ಸ್ವಂತ ಮನೆಯಿದ್ದು, ಆರೋಗ್ಯದ ಸಮಸ್ಯೆ ಕಾಡದಿದ್ದು, ಮಕ್ಕಳು ಆರ್ಥಿಕವಾಗಿ ಸ್ವತಂತ್ರರಾಗಿದ್ದರೂ, ಮಧ್ಯಮ ವರ್ಗದ ಹಿರಿಯ ದಂಪತಿಯ ಜೀವನದ ಇಂದಿನ ದಿನಗಳ ತಿಂಗಳ ಖರ್ಚು ಸುಮಾರು ೩೦ ಸಾವಿರ ರೂಪಾಯಿಗಳಷ್ಟಿದೆ. ವೃದ್ಧಾಶ್ರಮವನ್ನು ಸೇರಬೇಕಾದ ಪರಿಸ್ಥಿತಿ ಬಂದರೆ, ಒಬ್ಬರಿಗೇ ಅಷ್ಟು ಖರ್ಚು ಬಂದರೂ ಆಶ್ಚರ್ಯವಿಲ್ಲ! ಕನಿಷ್ಠ ೪೦,೦೦೦ ರೂಪಾಯಿಗಳಷ್ಟರ ನಿವೃತ್ತಿ ವೇತನ ಪಡೆಯುತ್ತಿರುವರ ಪರಿಸ್ಥಿತಿ ಇಂದಿನ ಮಟ್ಟಿಗೆ ಪರವಾಗಿಲ್ಲವೆನ್ನಬಹುದು. ಆದರೆ ಪೆನ್ಷನ್ ಭಾಗ್ಯ ಎಲ್ಲಾ ಹಿರಿಯರಿಗೂ ಇರದು. ಕೃಷಿ, ವ್ಯಾಪಾರ, ಮನೆ ಬಾಡಿಗೆ ಮುಂತಾದ ಆದಾಯಗಳು ಸಾಕಷ್ಟಿದ್ದು, ಕಾಳಜಿ ವಹಿಸುವ ಮಕ್ಕಳಿದ್ದ  ಹಿರಿಯರು ಅದೃಷ್ಟವಂತರೇ. ಮಿಕ್ಕವರ ಗತಿಯೇನು? 

ದುಡಿಮೆಯ ಅವಧಿಯ ಉಳಿತಾಯದ ಹಣ ಮತ್ತು ನಿವೃತ್ತಿಯ ಸಮಯದಲ್ಲಿ ಬರುವ ಹಣ, ಇವುಗಳನ್ನು ಜೋಪಾನವಾಗಿಡುವುದು ಎಲ್ಲರ ಜವಾಬ್ದಾರಿ. ಅಂತೆಯೇ ಗಳಿಸಿದ ಸ್ಥಿರಾಸ್ತಿಗಳನ್ನು ತಮ್ಮ ಹೆಸರುಗಳಲ್ಲೇ ಇರಿಸಿಕೊಳ್ಳುವ ಜಾಣತನವೂ ಹಿರಿಯರಿಗಿರಬೇಕು. ಭಾವನೆಗಳಿಗೊಳಗಾಗಿ ಸ್ಥಿರಾಸ್ತಿ ಮತ್ತು ಚರಾಸ್ತಿಗಳನ್ನು ಮಕ್ಕಳಿಗೆ ನೀಡಿ, ಬೀದಿಗೆ ಬಂದ ಹಿರಿಯರ ಕರುಣಾಜನಕ ಕಥೆಗಳನ್ನು ಮತ್ತೆ ಮತ್ತೆ ಸ್ಮರಿಸಿಕೊಳ್ಳುವುದು ಒಳ್ಳೆಯದು. 

ಹೆಚ್ಚಿನ ಬಡ್ಡಿ ಆಮಿಷಕ್ಕೊಳಗಾಗಿ ಖಾಸಗಿ ಸಾಲಗಳನ್ನು ನೀಡಿ, ಎಲ್ಲಾ ಹಣವನ್ನು ಕಳೆದುಕೊಂಡು ಪಾಡು ಪಡುತ್ತಿರುವವರ ಉದಾಹರಣೆಗಳನ್ನು ಕೇಳದವರಿಲ್ಲ. ಕೊಂಚ ಹೆಚ್ಚಿನ ಬಡ್ಡಿಯ ದರಕ್ಕೆ ಬಲಿಬಿದ್ದು, ಕೆಲವು ಬ್ಯಾಂಕುಗಳಲ್ಲಿ ಠೇವಣಿಯಿಟ್ಟು, ಠೇವಣಿಯನ್ನೇ ಕಳೆದುಕೊಂಡವರನ್ನು ನಮ್ಮ ಹಲವರು ನೋಡಿರಬಹುದು. ಅಂತಹ ಹಲವು ಠೇವಣಿದಾರರಿಗೆ 'ಭಾರತದ ಸರಕಾರದ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್'ವತಿಯಿಂದ ೫ ಲಕ್ಷ ರೂಪಾಯಿಗಳವರೆಗಿನ ಮಾತ್ರದ ಪರಿಹಾರ ಈಚೆಗೆ  ದೊರೆತಿರುವ ಸುದ್ದಿಯನ್ನು ನಮ್ಮ ಓದುಗರಲ್ಲಿ ಹಲವರು ಗಮನಿಸಿರಬಹುದು. ಹಾಗಾಗಿ ಠೇವಣಿ ಇಡುವ ಸಮಯದಲ್ಲಿ ಬ್ಯಾಂಕುಗಳ ಮತ್ತು ಇತರ ಹಣಕಾಸು ಸಂಸ್ಥೆಗಳ ಆಯ್ಕೆಯೂ ಅತಿ ಮುಖ್ಯವಾದುದು. 

'ಬ್ಯಾಂಕುಗಳಲ್ಲಿ ಠೇವಣಿಗಳ ಮೇಲಿನ ಬಡ್ಡಿದರ ತುಂಬಾ ಕಮ್ಮಿ ಕಣ್ರಿ. ಬಡ್ಡಿ ಮೇಲೇ ಜೀವಿಸುವವರು ಎಲ್ಲಿ ಹೋಗಬೇಕು?' ಎಂಬುದು ಹಲವು ಹಿರಿಯರನ್ನು ಕಾಡುತ್ತಿರುವ ಪ್ರಶ್ನೆ.  ಇಂಥವರ ಸಮಸ್ಯೆಗಳನ್ನರಿತಿರುವ ಭಾರತ ಸರಕಾರ, ಹಿರಿಯ ನಾಗರೀಕರುಗಳಿಗಾಗಿ ೭.೪% ವಾರ್ಷಿಕ ಬಡ್ಡಿ ದರದ ಎರಡು ಯೋಜನೆಗಳನ್ನು ಜಾರಿಯಲ್ಲಿಟ್ಟಿದೆ. 

ಮೊದಲೆನೆಯದು ಭಾರತ ಸರಕಾರದ ಎಲ್.ಐ.ಸಿ. ಸಂಸ್ಥೆಯ 'ವಯವಂದನಾ' ಯೋಜನೆ. ಹಿರಿಯ ನಾಗರೀಕರು ಈ ಯೋಜನೆಯಡಿ ತಲಾ  ೧೫ ಲಕ್ಷ ರೂಪಾಯಿವರೆಗಿನ ಠೇವಣಿಯನ್ನು ತೊಡಗಿಸಬಹುದು. ಠೇವಣಿಯ ಅವಧಿ ೧೦ ವರ್ಷಗಳಾಗಿದ್ದು, ೭. ೪% ವಾರ್ಷಿಕ ಬಡ್ಡಿ ದರದಂತೆ, ಪ್ರತಿ ತಿಂಗಳೂ ಬಡ್ಡಿಯನ್ನು ನೀಡಲಾಗುವುದು. ವೈದ್ಯಕೀಯ ಖರ್ಚಿನ ಕಾರಣಕ್ಕೆ ಮಾತ್ರ,  ದಾಖಲೆಯನ್ನು ನೀಡಿ ಅವಧಿಗೂ ಮುನ್ನ ಹಣವನ್ನು ಹಿಂಪಡೆಯಬಹುದು. ಹೂಡಿದ ಮೂರು ವರ್ಷಗಳನಂತರ ಠೇವಣಿಯ ಮೇಲೆ ಸಾಲದ ಸೌಲಭ್ಯ ಉಂಟು. 

ಅಂಚೆ ಕಚೇರಿಯ 

ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ

ಇಂದಿನ ಬಡ್ಡಿ ದರಗಳು

ಕ್ರಮ ಸಂಖ್ಯೆ

ಯೋಜನೆ

ವಾರ್ಷಿಕ  ಬಡ್ಡಿ ದರ %

ಅವಧಿ

ಬಡ್ಡಿ ನೀಡುವ/ಜಮಾ ಮಾಡುವ ಅವಧಿ

01

ಅಂಚೆ ಕಚೇರಿ ಉಳಿತಾಯ ಖಾತೆ 

4

--

ವಾರ್ಷಿಕ

02

1 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ 

03

2 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ 

04

3 ವರ್ಷದ ಅವಧಿ ಠೇವಣಿ 

5.5

--

ತ್ರೈಮಾಸಿಕ

05

5 ವರ್ಷದ ಅವಧಿ ಠೇವಣಿ 

6.7

--

ತ್ರೈಮಾಸಿಕ

06

 ವರ್ಷದ ಆರ್.ಡಿಠೇವಣಿ 

5.8

--

ತ್ರೈಮಾಸಿಕ

07

ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್.ಸಿ.ಎಸ್.ಎಸ್.)

7.4

5 ವರ್ಷಗಳು 

ತ್ರೈಮಾಸಿಕ

08

ಮಾಸಿಕ ಆದಾಯ ಯೋಜನೆ (ಎಂ..ಎಸ್.)

6.6

5 ವರ್ಷಗಳು 

ಮಾಸಿಕ

09

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (೮ನೇ ಇಷ್ಯು)

6.8

5 ವರ್ಷಗಳು 

ವಾರ್ಷಿಕ

10

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆ 

7.1

15 ವರ್ಷ ಗಳು 

ವಾರ್ಷಿಕ

11

ಕಿಸಾನ್ ವಿಕಾಸ್ ಪತ್ರ 

6.9

124 ತಿಂಗಳುಗಳಲ್ಲಿ ಹಣ ದ್ವಿಗುಣ

ಗೊಳ್ಳುವುದು 

ವಾರ್ಷಿಕ

12

ಸುಕನ್ಯಾ ಸಮೃದ್ಧಿ ಯೋಜನೆ 

7.6

ಗರಿಷ್ಠ ೨೧ ವರ್ಷಗಳು*

ವಾರ್ಷಿಕ


ಎರಡನೆಯದು ಭಾರತ ಸರಕಾರದ ಸಣ್ಣ ಉಳಿತಾಯದ ಯೋಜನೆಗಳಡಿ ಬರುವ 'ಹಿರಿಯ ನಾಗರೀಕರ ಉಳಿತಾಯ ಯೋಜನೆ (ಎಸ್.ಸಿ.ಎಸ್.ಎಸ್.).' (ಈ ಬರಹದೊಂದಿಗೆ ಅಡಕಗೊಳಿಸಿರುವ ಪಟ್ಟಿಯನ್ನು ನೋಡಿ). ಈ ಯೋಜನೆಯಡಿಯೂ ತಲಾ ೧೫ ಲಕ್ಷ ರೂಪಾಯಿಗಳವರೆಗಿನ ಠೇವಣಿಯನ್ನು ತೊಡಗಿಸಬಹುದು. ಠೇವಣಿಯ ಅವಧಿ ೫ ವರ್ಷಗಳಾಗಿದ್ದು, ೭. ೪% ವಾರ್ಷಿಕ ಬಡ್ಡಿ ದರದಂತೆ, ಪ್ರತಿ ಮೂರು ತಿಂಗಳುಗಳಿಗೊಮ್ಮೆ ಬಡ್ಡಿಯನ್ನು ನೀಡಲಾಗುವುದು. ಠೇವಣಿಗೆ ಒಂದು ವರ್ಷ ಕಳೆದನಂತರ, ಹಣವನ್ನು ಅವಧಿಗೆ ಮುಂಚೆಯೇ ಹಿಂಪಡೆಯುವ ಸೌಲಭ್ಯ ಉಂಟು. ಈ ಯೋಜನೆಯ ಸೌಲಭ್ಯವನ್ನು ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳ ಮೂಲಕ ಪಡೆಯಬಹುದು. 

ಗಂಡ ಮತ್ತು ಹೆಂಡತಿ ಇಬ್ಬರೂ ಹಿರಿಯ ನಾಗರೀಕರಾಗಿದ್ದರೆ, ಎಲ್.ಐ.ಸಿ.ಯ ವಯವಂದನ ಮತ್ತು ಎಸ್.ಸಿ.ಎಸ್.ಎಸ್., ಈ ಎರಡೂ ಯೋಜನೆಗಳಡಿ ೬೦ ಲಕ್ಷ ರೂಪಾಯಿಗಳವರೆಗೆ ಹಣವನ್ನು ತೊಡಗಿಸಬಹುದು. ಇನ್ನೂ ಹೆಚ್ಚಿನ ಹಣವನ್ನು ತೊಡಗಿಸಬೇಕಾದರೆ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಯಡಿಯ 'ವಾರ್ಷಿಕ ಠೇವಣಿ ಯೋಜನೆಗಳು, ಮಾಸಿಕ ಆದಾಯದ ಯೋಜನೆ (ಎಂ.ಐ.ಎಸ್) ಮತ್ತು ಕಿಸಾನ್ ವಿಕಾಸ್ ಪತ್ರ'ದ ಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. 

'ಎಲ್.ಐ.ಸಿ. ಸಂಸ್ಥೆಯ ಜೀವನ್ ಶಾಂತಿ' ಎಂಬ ಯೋಜನೆಯೂ ಮಾಸಿಕ ಪೆನ್ಷನ್ ನೀಡುವ ಮತ್ತೊಂದು ಯೋಜನೆ.  ಆಜೀವ ಪೆನ್ಷನ್ ಗಳಿಸಲು ಈ ಯೋಜನೆಯಲ್ಲಿ ಹಣವನ್ನು ತೊಡಗಿಸಬಹುದು. ಹಣದ ಹೂಡಿಕೆಗೆ ಯಾವುದೇ ಮಿತಿಯಿಲ್ಲ.  ೩೦ ವರ್ಷದಿಂದ ೭೯ ವರ್ಷಗಳವರೆಗಿನ ವ್ಯಕ್ತಿಗಳು ಈ ಯೋಜನೆಗೆ ಅರ್ಹರು. ಪೆನ್ಷನ್ ದೊರೆಯುವುದು ಹಣವನ್ನು ತೊಡಗಿಸಿದ ಕನಿಷ್ಠ ೧ ವರ್ಷದನಂತರವೇ. ೬೦ ವರ್ಷದ ಒಬ್ಬ ವ್ಯಕ್ತಿ ೧೦ ಲಕ್ಷ ರೂಪಾಯಿಗಳನ್ನು ಈ ಯೋಜನೆಯಲ್ಲಿ ತೊಡಗಿಸಿದರೆ, ಅವರಿಗೆ ೫ ವರ್ಷಗಳನಂತರ, ರು. ೭೩,೬೦೨ರಷ್ಟು ವಾರ್ಷಿಕ ಪೆನ್ಷನ್ ಜೀವಿತಾವಧಿವರೆಗೂ ದೊರೆಯುವುದು.   ಈ ಉದಾಹರಣೆಯ ಬಡ್ಡಿಯ ದರ ೭. ೩%ರಷ್ಟರಂತೆ ಕಂಡರೂ, ಮೊದಲ ಐದು ವರ್ಷಗಳು ಯಾವ ಪೆನ್ಷನ್ ಕೂಡ ಬರದು ಎಂಬುದನ್ನು ಗಮನಿಸಬೇಕು.  ಪೆನ್ಷನ್ ಅನ್ನು ಪ್ರತಿ ತಿಂಗಳು ಕೂಡ ಪಡೆಯಬಹುದು.  ಜೀವನ ಸಂಗಾತಿಯನ್ನು ಜಂಟಿ ಪೆನ್ಷನ್ ಫಲಾನುಭವಿ ಎಂದು ಸೇರಿಸಿದರೆ,  ಮೊದಲ ಫಲಾನುಭವಿಯ ಮರಣದವಂತರ, ಆ ವ್ಯಕ್ತಿಗೂ ಅವರ  ಜೀವಿತಾವಧಿವರೆಗೂ ಸಮನಾದ ಪೆನ್ಷನ್ ದೊರೆಯುವುದು. ಫಲಾನುಭವಿಗಳ ಮರಣದಂತರ ಮೂಲ ಹೂಡಿಕೆಯ ಹಣ ನಾಮ ನಿರ್ದೇಶನ ಹೊಂದಿರುವವರಿಗೆ ದೊರೆಯುವುದು.

ಈವರೆಗೆ ಚರ್ಚಿಸಿರುವ ಎಲ್ಲಾ ಯೋಜನೆಗಳ ಬಡ್ಡಿ ಮತ್ತು ಪೆನ್ಷನ್ ಗಳು ಆದಾಯ ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಕೆಲವು ಯೋಜನೆಗಳಲ್ಲಿ ಬಡ್ಡಿ/ಪೆನ್ಷನ್ ಗಳೊಂದಿಗೆ ಆದಾಯ ತೆರಿಗೆಯನ್ನು ಹಿಡಿದು ನೀಡುವ (ಟಿ.ಡಿ.ಎಸ್.) ಪದ್ಧತಿ ಉಂಟು.  ಆದುದರಿಂದ ಹೂಡಿಕೆದಾರರು ಆದಾಯ ತೆರಿಗೆಯನ್ನು ಹಿಡಿಯದಂತೆ ೧೫G/೧೫H ಫಾರ್ಮ್ಗಳನ್ನು ನೀಡಬೇಕು. ವಾರ್ಷಿಕ ಆದಾಯ ತೆರಿಗೆಯ ಸಲ್ಲಿಕೆಯನ್ನು ಇಲಾಖೆಗೆ ಸಲ್ಲಿಸಿ, ಹಿಡಿದ ಆದಾಯ ತೆರಿಗೆಯಲ್ಲಿನ ಅರ್ಹ ಮೊತ್ತವನ್ನು ಹಿಂಪಡೆಯಬಹುದು. ಈ ವಿಷಯದಲ್ಲಿ ಒಬ್ಬ ಯೋಗ್ಯ ಆದಾಯ ತೆರಿಗೆಯ ಸಲಹೆಗಾರರನ್ನು ಸಂಪರ್ಕಿಸುವುದು ಒಳಿತು. 

ಕೋವಿಡ್ ದಾಳಿಯ ನಡುವೆಯೂ, ಕಳೆದ ೨೧ ತಿಂಗಳುಗಳಲ್ಲಿ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ, ಅಪಾರ ಹಣವನ್ನು ಗಳಿಸಿರುವ ಹಿರಿಯ ನಾಗರೀಕರು ಇಲ್ಲದಿಲ್ಲ. ಆದರೆ ಷೇರು ಮಾರುಕಟ್ಟೆಯಲ್ಲಿನ ಹೂಡಿಕೆ ಅಪಾಯದಿಂದ ಕೂಡಿದ್ದು ಎಂಬುದನ್ನು ಹಿರಿಯರು ಮರೆಯುವಂತಿಲ್ಲ. ಷೇರು ಮಾರುಕಟ್ಟೆಗಿಂತ ಮ್ಯೂಚುಯಲ್ ಫಂಡ್ ಹೂಡಿಕೆ ಕಮ್ಮಿ ಅಪಾಯದ್ದು ಎಂಬುದು ತಜ್ಞರ ಅಭಿಪ್ರಾಯ. ಹಿರಿಯರ ಪಾಲಿಗೆ, ಹಣದ ವೃದ್ಧಿಗಿಂತ ಕೂಡಿಟ್ಟ ಹಣದ ಸುರಕ್ಷೆ ಮುಖ್ಯ ಎಂಬುದನ್ನು ಮರೆಯುವಂತಿಲ್ಲ. 

ಹಿರಿಯ ನಾಗರೀಕರಾದ ದಂಪತಿಗೆ ಸುಮಾರು ೧೦ ಲಕ್ಷ ರೂಪಾಯಿಗಳಷ್ಟರ 'ಆರೋಗ್ಯದ ಸುರಕ್ಷಾ ವಿಮೆ' ಇರಬೇಕಾದ್ದು ಅತ್ಯವಶ್ಯಕ. ೬೫ ವರ್ಷಗಳ ವರೆಗೂ ಆರೋಗ್ಯದ ವಿಮೆ ಹಿರಿಯರ ಪಾಲಿಗೆ ಹೊಸದಾಗಿ ಪಡೆಯಲು ಲಭ್ಯವಿದೆ. ಹೆಚ್ಚಿನ ವಯಸ್ಸಿನವರೂ ವಿಮೆಗಾಗಿ ಬ್ಯಾಂಕ್ ಮತ್ತು ಆರೋಗ್ಯ ವಿಮಾ ಸಂಸ್ಥೆಗಳಲ್ಲಿ ವಿಚಾರಿಸಬಹುದು. ಉದ್ಯೋಗಸ್ಥ ಮಕ್ಕಳು ತಮ್ಮ ತಂದೆ-ತಾಯಿಗಳನ್ನು ತಮ್ಮ ಕಂಪನಿಯ ಆರೋಗ್ಯ ವಿಮಾ ಯೋಜನೆಯಡಿ ಸೇರಿಸುವುದು ಕೂಡ ಅತ್ಯವಶ್ಯಕ. ಆರೋಗ್ಯ ವಿಮೆಯನ್ನು ಸಕಾಲದಲ್ಲಿ ನವೀಕರಿಸುವುದನ್ನು ಮರೆಯುವಂತಿಲ್ಲ. ನವೀಕರಿಸದೇ ಅವನತಿ (ಲ್ಯಾಪ್ಸ್) ಹೊಂದಿದ ಆರೋಗ್ಯ ವಿಮೆಯನ್ನು ಮತ್ತೆ ಪಡೆಯಲು ಸಾಧ್ಯವಾಗದೆ ಇರಬಹುದು.  ಈ ನಿಟ್ಟಿನಲ್ಲಿ ಹಿರಿಯರ ಮಕ್ಕಳು ನಿಗಾ ವಹಿಸುವುದು ಒಳಿತು. 

ಹಿರಿಯ ನಾಗರೀಕರುಗಳು ಮಾಡಿರುವ ವಿವಿಧ ಹೂಡಿಕೆಗಳ ಸರ್ಟಿಫಿಕೇಟ್ಗಳು ಮತ್ತು ಫಾಸ್ಸ್ಬುಕ್ ಗಳನ್ನು ಸುರಕ್ಷಿತವಾಗಿ ಇಡುವುದು ಅತ್ಯವಶ್ಯಕ. ತಮ್ಮ ಎಲ್ಲಾ ಆಸ್ತಿಗಳ ಮತ್ತು ಹೂಡಿಕೆಗಳ ವಿವರಗಳನ್ನು ದಾಖಲಿಸಿ,  ಹಿರಿಯರು ಒಂದು 'ವಿಲ್ (ಮೃತ್ಯುಪತ್ರ)'ಅನ್ನು ಮಾಡಿಡುವುದು ಒಳ್ಳೆಯದು. ಸ್ವಯಾರ್ಜಿತ ಎಲ್ಲಾ ಆಸ್ತಿಗಳಿಗೆ ತಮ್ಮ ಜೀವನ ಸಂಗಾತಿಯನ್ನೇ ವಾರಸುದಾರರನ್ನಾಗಿಸುವುದು ಸೂಕ್ತ. ಈ ವಿಷಯದಲ್ಲಿ ಹಿರಿಯರು, ತಜ್ಞ ವಕೀಲರನ್ನು ಸಂಪರ್ಕಿಸುವುದು ಅವಶ್ಯಕ. 

ನಮ್ಮ ಹಣವನ್ನು ಕಾಪಾಡಿಕೊಂಡರೆ, ನಮ್ಮ ಹಣವೇ ನಮ್ಮನ್ನು ಕಾಪಾಡುವುದು ಎಂಬುದನ್ನು ಮತ್ತೊಮ್ಮೆ ತಮ್ಮ ಗಮನಕ್ಕೆ ತಂದು ನನ್ನ ಲೇಖನವನ್ನು ಸಮಾಪ್ತಿಗೊಳಿಸುತ್ತಿದ್ದೇನೆ. (ಇಲ್ಲಿ ಚರ್ಚಿಸಿರುವ ಎಲ್ಲಾ ಹೂಡಿಕೆಗಳ ಬಗ್ಗೆ ನಿಖರವಾದ ಮಾಹಿತಿಗಳನ್ನು ಆಯಾ ಸಂಸ್ಥೆಗಳ ಮೂಲಕ  ಪಡೆಯುವದು ಒಳಿತು. ಇಲ್ಲಿ ನೀಡಿರುವ ವಿಚಾರಗಳೆಲ್ಲವೂ ಲೇಖಕರ ವೈಯುಕ್ತಿಕ ಅಭಿಪ್ರಾಯ ಮಾತ್ರ. ಹೂಡಿಕೆಯ ನಿರ್ಣಯ ಅಂತಿಮವಾಗಿ ನಿಮ್ಮದೇ).  

-೦-೦-೦-೦-

ವೃದ್ಧಾಪ್ಯದಲ್ಲಿ ಹಣಕಾಸಿನ ಸ್ವಾತಂತ್ರ್ಯವೆಂಬುದು ಅತಿ ಮುಖ್ಯ. 'ವಿನಾ ದೈನೇನ ಜೀವನಮ್, ಅನಾಯಾಸೇನ ಮರಣಂ' ಎಂದಿದ್ದಾರೆ ಶಂಕರಾಚಾರ್ಯರು. ಮರಣವೆಂಬುದು ನಮ್ಮ ಕೈಗಳಲಿಲ್ಲ. ಹಣಕ್ಕಾಗಿ ಬೇರೆಯವರ ಮುಂದೆ ಕೈ ಚಾಚದಿರುವಂತಹ ವ್ಯವಸ್ಥೆಯನ್ನು ನಿರ್ಮಿಸಿಕೊಳ್ಳುವ ಪ್ರಯತ್ನವನ್ನು ಎಲ್ಲರೂ ಮಾಡಬೇಕಾದ್ದು ಜಾಣತನವೇ ಸರಿ. 

(Highlight the above text)






Thursday, 16 December 2021

FA3 English Practice Paper for 9th standard

 FA3 English Practice Paper for 9th Standard

1) Why do you think Nakula did not obey the voice?

Answer: Nakula was very thirsty.  Therefore he ignored the voice and drank water.

2) Happiness is the result of good conduct.  Do you agree with this?  Support your answer with an example.

Answer: Abdul Kalam lived a simple life.  He loved poor people and children. He was a happy man.

3) Why did Yama take the form of a Yaksha?

Answer: Yama had taken the form of the deer and the Yaksha, so that he might see his son Yudhistira and test him.

4) Why do you think the Yaksha gave Yudhistira a boon?

Yudhistira answered all questions.  Yaksha was also pleased with the impartiality of Yudhistira when he asked that Madri's son Nakula be revived. Therefore Yaksha gave a boon to Yudhistira.

5) Why do you think the ascetic did not accept the invitation of the dancing girl?

Upagupta said that the time is not yet ripe. Therefore he did not accept the invitation of the dancing girl.

6) Write the summary of the poem Upagupta.

Answer: Upagupta a disciple of Buddha, goes from one place to another. Once he was sleeping in a small town called Mathura.  A dancing girl wakes him up and invites him to her home. Upagupta refuses but tells her, 'I will visit you when the time is ripe.'

A few months later, Upagupta finds the dancing girl lying on the ground outside a town.  She was having sores all over her body.  She is driven away from the town.  He gives her water and applies balm on her body.  The woman asks who he is.  Upagupta replies, 'now the time has come to visit you and I am here.'

7) Write the three questions for which the King wanted to have answers.


i) What is the right time to begin something?

ii) Who should a King listen to?

iii) What is the most important thing for a King to do?

8) The hermit said that the King had been answered.  If you agree, what was the answer to the first question?

The hermit said that 'remember then, there is only one time that is important and that time is "now." It is the most important time because it is the only time we have any power to act.'

9) Why is the poet grateful for eyes and ears?

Answer:

I am grateful for the eyes that I can see the activities that can be done by me.  I am grateful for the ears that I may hear the sobbing of those who need me near.

10) Quote from memory:

I am grateful...................................

........................................................

........................................................

.................guidance every day.


I am grateful.......................................

..................................that I may love.

11) Anusha could not go to school because she want not well. (give one word for the underlined two words).

Answer: unwell

12) Man is mortal, but God is not mortal. (Give one word for the underlined two words.)

Answer: immortal

13) Give one word for the following:

1.Group of birds: flock

2.Very big: huge

3.a title of respect used when speaking to a King/Queen: majesty

14) Write the correct form of verbs given in the bracket.

The Pandavas .............................(chase) the animal.  But the magic deer ..................(speed). The Sun was hot overhead and the brothers ..............(grow) thirsty.

Answers: chased, sped, grew

15) Change the sentence into negative form.

Mind is faster than the wind.

Answer: Mind is not slower than the wind.

Answer my questions first

Answer: Don't answer my questions last.

16) Develop the story using the clues given below and write the moral.

In a forest-a lion-killing many animals-everyday-for food-animals assembled-met the lion-requested-lion agreed-sent an animal each day-it was the turn of a rabbit-it feared-thought of a plan-went to the lion-told there was another lion-the lion was angry-came to the well-saw its reflection-roared-jumped into the well-died

In a forest thee was a lion.  It was killing many animals everyday for food.  The animals assembled and met the lion and requested.  An animal was sent each day to the lion as food.  It was the turn of rabbit.  It feared and thought of a plan.  It went to the lion and told that there was another lion.  The lion was angry and came to the well and saw its reflection.  It roared, jumped into the well and died.

MORAL: Wisdom is stronger than physical strength. OR Think of a plan to face a danger.

Wednesday, 15 December 2021

FA3-English Practice Paper

 I.Multiple Choice Questions:

1.Choose the appropriate question tag and fill in the blank.

Rockets carry satellites and people into space, ......................?

A) doesn't they (B) don't they  (C) didn't they  (D) did they

Answer: (B) don't they

2.Read the given conversation and choose the language function for the underlined sentence:

Archana: Good Morning Deepa.

Deepa: Very Good morning. What can I do for you?

Archana: If you don't mind, could I use your pen?

Deepa: It's a pleasure. You can.

A) Giving direction  B) Offering help  C) Seeking permission  D) Expressing agreement

Answer: C) Seeking permission

3.Fill in the blank choosing the appropriate 'if clause':

Ananda: Akash, I'm going to picnic tomorrow,  Will you come?

Akash: Thank you for inviting me.  If you had told earlier, I ................ joined you.

A) would not have   (B) would have  (C) shall have  (D) will have

Answer: B) would have

4. Read the given conversation and choose the passive form of the underlined sentence:

Tanushree: Hello, Panchami, where did you to yesterday?

Panchami: I went shopping.

Tanushree: Did you buy anything?

Panchami: Yes. I have bought some books.

A) Some books had been bought by me.  (B) Some books will have been bought by me.  (C) Some books were brought by me.  (D) Some books have been bought by me.

Answer: D) Some books have been bought by me. 

II. Do as directed:

5. Combine the word in Column - A with its collocative word in Column-B:

A - fast

B - table, food, water breakfast

Answer: fast food

6. Which one of the following words has two syllables?

committee, capacity, combine, call

Answer: Combine

III. Answer the following questions in 2-3 sentences each: 

1. How was Swami honoured by his classmates, teachers and the headmaster?

Answer: Swami was congratulated by everyone.  His classmates looked at him with respect and his teachers patted his back. The headmaster said that he was truly a brave boy.

2. Why did Baleshwar revisit the spot where Roma had fallen?

Answer: Baleshwar had even revisited the spot where Roma had fallen to bring her belongings because Dinesh had told him that her cell phone and handbag were missing.  With the help of a railway employee he was able to recover some of her belongings.

3. What makes you feel that Don Anselmo was a man of principles?

Answer: Don Anselmo was generous, because he refused to take the extra money offered by Americans for his lands.

4. Why do you consider Anant a talented boy?

Answer: Anant was a talented boy.  At the age of fifteen, he was the best table tennis player and the fastest runner in the School.  He was learning to play sitar and was already able to compose his own tunes to the astonishment of his guru.

5. Why do you think that jazz player keeps his head down?

Answer: The jazz player keeps his head down because his mind is filled with the worries of life.

6. The student leaders managed the protest to go peacefully.  Why?

Answer: The police expected to shout slogans like British Quit India and cause violence.  This would make the police arrest them, beat them up and imprison them.  The students gave a notice to the DSP about the protest.

7. Haneef was a young man with varied talents and interests. Explain.

Answer: Haneef was good in art, sketched very well and made beautiful cards out of waste materials. He read a great deal and loved playing music.  These show that Haneef was a young man with varied talents and interests.

IV) Answer the following questions in 5-6 sentences each:     

1. Dr. B.R.Ambedkar worked for the upliftment of the depressed classes.  Explain.

Answer: While Ambedkar was in U.S.A., the 14th Amendment of the constitution of USA gave freedom to the black Americans.  The situation for the depressed classes in India had also faced the same problem.  Mahatma Phule worked for classless society and women's uplifting.  Ambedkar was impressed by both the events. 

Newspapers started by him such as the Mooknayak, Bahishkrit Bharat and Samata were at once recognised as the authentic voices of the depressed classes. Likewise, institutions set up by him such as the Hitakarini Sabha and the Independent Labour Party of India became vehicles of change. Ambedkar reminded the depressed classes about their rights for equality. 

2. Identify the two speakers in the poem 'The song of India.' What does the speaker want to sing about?

Answer: The speakers are the poet, V.K.Gokak and Mother of India.  The speaker wants to sing about the beauty of India, its history, its saints, its progress and achievements.

V) Read the following extracts and answer the questions that follow:     

1. 'You are in the second form and I don't like the way you are being brought up.'

A) Who does 'I' refer to?

B) Who was studying the second form?

C) When did the speaker say this?

Answer:

A) 'I' refers to Swami's father.

B) Swami was studying in the second form.

C) When Swami sleeps besides his granny, then the speaker said this.

2. 'If you want to get on in life, you have to read a lot.  You can learn a great deal of things just by reading.'

A) Who is the speaker here?

B) Who does 'you' refer to?

C) How did the speaker encourage reading?

Answer:

A) Avatar Narain

B) Satish

C) By giving an armful of books.

VI) 

1. Given below is a profile of Vijendra Singh. Write a paragraph using the same:

Birth : October 29, 1995

Place: Haryana

Interest: Boxing

Practising Club: Bhiwani Boxing Club

Participation: 2004 Athens Summer Olympics, 2006 Commonwealth Games, 2006 Asian Games.

Achievements: Won the first Bronze medal in 2008 Beijing Olympics

Awards: 2009 rajiv Gandhi Khel Ratna Award

Answer:

Vijendra Singh was born on October 29, 1985 in Haryana.  He practiced his interest, boxing at Bhiwani boxing club.  He has participated in the 2004 Athens Summer Olympics, 2006 Commonwealth Games and 2006 Asian Games.  He has won the first Bronze medal in 2008 Beijing Olympics.  He was awarded the Rajiv Gandhi Khel Ratna Award in 2009.

2. Write a paragraph, using the clues given below.

In a distant village - farmer - a magical hen - one golden egg - everyday - the richest man - He thought - lazy hen - greedy and impatient - thought of an idea - take out all the eggs - big knife - cut her stomach - no eggs - hen died - moral.

In a distant village, there lived a farmer with a magical hen.  It laid one golden egg each day.  He thought that the hen was lazy.  The greedy man became impatient and thought of an idea of taking out all the golden eggs.  He took a big knife and cut her stomach.  He found no eggs, but the hen died.

Moral: Greed is the mother of all sorrows.

VII) Study the picture given below:

Write a description or an account of what the picture suggests to you in a paragraph.



Answer:

     There is a big market.  Many people are there in the market. Some one is carrying a trunk and a bag.  Some one is cleaning the road.  The children are going to the school and the women are carrying the bags of vegetables.  A man is polishing the shoes. A man is carrying a cement bag on his bag.

VIII)

Quote from memory

The throned........................................

.............................................................

..............................................................

...............................................................

..................................sceptred sway;


It is enthroned....................................

...........................................................

............................................................

..................................seasons justice.


IX) Read the following passage and answer the questions that follow:

In every country, people imagine that they are the best and the cleverest and others are not so good as they are.  The Englishman thinks that he and his country are the best; the Frenchman is very proud of France and everything French.  The Germans and Italians think no less of their countries and many Indians imagine that India is in many ways the greatest country in the world.  This is wrong.  Everybody wants to think well of himself and his country.  But really there is no person who has not got some good and bad qualities.  In the same way there is no country which is not partly good and partly bad.  We must take the good wherever we find it and try to remove the bad wherever it may be.  We of course, most concerned with our country, India.  Unhappily, it is in bad way today.  Most of our people are poor and unhappy.  They have no joy in their lives.  We have to find out how we can make them happier.  We have to see what is good in our ways and customs and try to keep it, and whatever is bad we have to throw away.  If we find anything good in other countries, we should certainly take it.

a) What should we do to make our people happier?

Answer: We are of course, most concerned with our country, India.  Unhappily, it is in a bad way today.  We have to find out how we can make them happier.  We have to see what is good in our ways and customs and try to keep it and whatever is bad, we have to throw away.  If we find anything good in other countries, we should certainly take it.

b) What do people think about themselves and other in every country?

Answer: Everybody wants to think well of himself and his country.  But really there is no person who has not got some good and bad qualities.  In the same there is no country which is not partly good and partly bad.  We must take the good wherever we find it and try to remove the bad wherever it may be.

X) Sum up the conversation between the poet and the Mother India in your own words

Answer: The poem was written by V.K.Gokak in the form of a dialogue between Mother India and the poet.  In this poem, the poet wants to sing about our Himalayas, three seas, rock-cut temples, freedom struggle, dams and lakes, steel mills and ship-building yards and the atomic age.

As Indians, we can rightly be proud of our country's natural beauty, its rich cultural heritage, its ancient wisdom, its glorious freedom struggle and its Industrial progress. 

But Mother India reminds the poet about India's problems like beggary, diseases, filth and dirt, wrinkled faces, children born in bleak, dark home, and the strikes.

As the poet said our Mother India has to write the book of our destiny, cancelling all our sorrow.  Tomorrow should be clear dawn.  Our nightmares should fly away and we have to welcome the bright future.



Saturday, 11 December 2021

ಸರಕಾರಿ ಶಾಲೆಗಳ ಸುತ್ತಾ-ಮುತ್ತಾ.......


 ಸರಕಾರಿ ಶಾಲೆಗಳ ಸುತ್ತಾ-ಮುತ್ತಾ....... 

ನಮ್ಮ ದೇಶದ ಬಡ ಮಕ್ಕಳ ಪಾಲಿಗೆ ಜ್ಞಾನದೇಗುಲವಾಗಿರುವ ನಮ್ಮ ಸರಕಾರಿ ಶಾಲೆಗಳಿಗೊಂದು ನಮಸ್ಕಾರವಿರಲಿ. ಸಮಾಜದ ಜಾವಬ್ದಾರಿಯುತ ಸ್ಥಾನಗಳನ್ನಲಂಕರಿಸಿರುವ ಇಂದಿನ ಮಧ್ಯವಯಸ್ಕರು ಮತ್ತು ಹಿರಿಯ ನಾಗರೀಕರುಗಳ ಪೈಕಿ ಹೆಚ್ಚಿನವರು ಸರಕಾರಿ ಶಾಲೆಗಳಲ್ಲಿ ಕಲಿತವರೇ. ಅಂತಹದೇ ವರ್ಗಕ್ಕೆ ಸೇರಿದ ನಮ್ಮ-ನಿಮ್ಮಗಳಲ್ಲಿ, ಸರಕಾರಿ ಶಾಲೆಗಳಲ್ಲಿ ಕಲಿತ ಸುಂದರ ನೆನಪುಗಳು ಇನ್ನೂ ಹಸಿರಾಗೇ ಉಳಿದಿರುವುದು ಸಹಜವೇ. ಆ ದಿನಗಳ ನಮ್ಮ ಸರಕಾರಿ ಶಾಲೆಗಳ ಶಿಕ್ಷಕರುಗಳು ಕಲಿಸುತ್ತಿದ್ದ ವೈಖರಿ, ಅವರೊಡನೆ ನಮ್ಮಗಳಿಗಿದ್ದ ಅವಿನಾಭಾವ ಸಂಬಂಧಗಳು, ಅಂದಿನ ದಿನಗಳ ಬಾಲ ಸಭೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಹವರ್ತಿಗಳಿಗೊಂದಿಗೆ ಯಾವುದೇ ನಿರ್ಬಂಧಗಳಿಲ್ಲದೆ  ನಡೆಯುತ್ತಿದ್ದ ಆಟೋಟ ಮುಂತಾದವುಗಳೇ ನಮ್ಮ ವ್ಯಕ್ತಿತ್ವದ ಸರ್ವತೋಮುಖ ವಿಕಾಸಕ್ಕೆ ಭದ್ರ ಬುನಾದಿಯನ್ನೊದಗಿಸಿದವೆಂಬುದನ್ನು ಎಲ್ಲರೂ ಅನುಮೋದಿಸುವುದರಲ್ಲಿ ಅನುಮಾನವಿಲ್ಲ.  

ಆದರೆ ಕಳೆದ ಒಂದೆರಡು ದಶಕಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯ ಚಿತ್ರಣವೇ ಬದಲಾಗಿದೆ. ಖಾಸಗಿ ಶಾಲೆಗಳೊಂದಿಗಿನ ಸ್ಪರ್ಧೆಯಲ್ಲಿ, ಸರಕಾರಿ ಶಾಲೆಗಳು ಹಿನ್ನಡೆ ಅನುಭವಿಸುತ್ತಿರುವಂತೆ ಕಂಡು ಬರುತ್ತಿದೆ. ಆರ್ಥಿಕವಾಗಿ ಹಿಂದುಳಿದ ಪೋಷಕರುಗಳಲ್ಲೂ, ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸುವ ಖಾಸಗಿ ಶಾಲೆಗಳಿಗೆ ಸೇರಿಸುವ ತುಡಿತ ಕಂಡುಬರುತ್ತಿದೆ. ಗ್ರಾಮೀಣ ಕ್ಷೇತ್ರಗಳೂ, ಈ ರೀತಿಯ ಬೆಳವಣಿಗೆಗೆ ಹೊರತಾಗಿಲ್ಲ. ಹಾಗೆಂದ ಮಾತ್ರಕ್ಕೆ, ಖಾಸಗಿ ಶಾಲೆಗಳಲ್ಲಿ ಎಲ್ಲವೂ ಸರಿಯಿದೆ ಎಂದು ಹೇಳಲಾಗುವುದಿಲ್ಲ. ಆದರೂ ವಸ್ತುಸ್ಥಿತಿ ಹೀಗೇಕೆ ಎಂದು ಪರಾಮರ್ಶಿಸುವುದೇ ಈ ಲೇಖನದ ಉದ್ದೇಶ.  

ಈಚಿನ ವರದಿಯೊಂದರ ಪ್ರಕಾರ ನಮ್ಮ ರಾಜ್ಯ ಕರ್ನಾಟಕದಲ್ಲಿ, ೪೪,೬೧೫ ಪ್ರಾಥಮಿಕ ಶಾಲೆಗಳು, ೫೨೪೦ ಪ್ರೌಢ ಶಾಲೆಗಳು, ೧೨೨೯ ಪಿ.ಯು. ಕಾಲೇಜುಗಳು ಇದ್ದು, ಅವುಗಳಲ್ಲಿ ೫೦ ಲಕ್ಷದಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.  ಜೊತೆಗೆ ೬೮೮೨ ಅನುದಾನಿತ ಶಾಲೆಗಳು,  ೭೯೬ ಪಿ. ಯು.ಕಾಲೇಜುಗಳು ಮತ್ತು ೧೯೫೯೩ ಖಾಸಗಿ ಶಾಲೆಗಳೂ ನಮ್ಮ ರಾಜ್ಯದಲ್ಲಿವೆ. ಒಟ್ಟು ಒಂದು ಕೋಟಿಯಷ್ಟು ವಿದ್ಯಾರ್ಥಿಗಳು ನಮ್ಮ ರಾಜ್ಯದಲ್ಲಿ ೧ರಿಂದ ೧೨ನೇ ತರಗತಿಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. 

ಗ್ರಾಮೀಣ ಪ್ರದೇಶಗಳಲ್ಲೇ ಹೆಚ್ಚಾಗಿರುವ ಸರಕಾರಿ ಶಾಲೆಗಳಲ್ಲಿ, ಶಿಕ್ಷಣ ಪಡೆಯುತ್ತಿರುವವರಲ್ಲಿ ಬಡ ವಿದ್ಯಾರ್ಥಿಗಳೇ ಹೆಚ್ಚಿನವರು. ಹೆಸರಿಗಷ್ಟೇ ಎನ್ನಬಹುದಾದ ಅತ್ಯಲ್ಪ ಶುಲ್ಕವನ್ನು ಪಡೆದು, ನಿಜವಾದ ವಿದ್ಯಾದಾನ ಮಾಡುತ್ತಿವೆ ನಮ್ಮ ಸರಕಾರಿ ಶಾಲೆಗಳು. ನಮ್ಮ ಸರಕಾರಿ ಶಾಲೆಗಳ ಶಿಕ್ಷಕ-ಶಿಕ್ಷಕಿಯರುಗಳು ಯಾರಿಗೂ ಕಮ್ಮಿಯೇನಿಲ್ಲ. ನಿಜ ಹೇಳಬೇಕೆಂದರೆ, ಅತ್ಯಂತ ಸುಶಿಕ್ಷಿತ ಮತ್ತು ಸೂಕ್ತ ತರಬೇತಿಯನ್ನು ಪಡೆದ ಶಿಕ್ಷಕರುಗಳು ಇರುವುದು ಸರಕಾರಿ ಶಾಲೆಗಳಲ್ಲೇ. ನಮ್ಮ ರಾಜ್ಯದ ಶಿಕ್ಷಕರುಗಳ ನೇಮಕಾತಿ ಪ್ರಕ್ರಿಯೆ ಅತ್ಯಂತ ಪಾರದರ್ಶಕವಾಗಿದ್ದು, ಇಡೀ ದೇಶಕ್ಕೆ ಮಾದರಿಯೆಂದರೆ ಅತಿಶಯೋಕ್ತಿಯೇನಲ್ಲ. ಹಾಗಾಗಿ ಸುಶಿಕ್ಷಿತ ಮತ್ತು ಪ್ರತಿಭಾವಂತ ಶಿಕ್ಷಕರೇ ನಮ್ಮ ಸರಕಾರಿ ಶಾಲೆಗಳಲಿದ್ದಾರೆಂದರೆ ತಪ್ಪಲ್ಲ.

ಹಲವಾರು ಕಷ್ಟ-ನಷ್ಟಗಳ ನಡುವೆಯೂ, ನಮ್ಮ ಸರಕಾರಿ ಶಿಕ್ಷಕರುಗಳು, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನೇ ನೀಡುತ್ತಿದ್ದಾರೆ ಎನ್ನಬಹುದು. ಆದರೂ ಸರಕಾರಿ ಶಾಲೆಗಳ ಗುಣಮಟ್ಟ ಸಾಲದೆಂಬ ಉದ್ಗಾರಗಳಿಗೇನು ಕಮ್ಮಿಯಿಲ್ಲ! ಸರಕಾರಿ ಶಾಲೆಗಳ ಶಿಕ್ಷಕರುಗಳ ಮುಂದಿರುವ ಸವಾಲುಗಳತ್ತ ಗಮನ ಹರಿಸೋಣ. ಅವರುಗಳು ಶಿಕ್ಷಣ ನೀಡುತ್ತಿರುವುದು ಬಡ ಹಾಗು ಮುಗ್ಧ ಕುಟುಂಬಗಳಿಂದ ಬರುತ್ತಿರುವ ಮೊದಲ ತಲೆಮಾರಿನ ವಿದ್ಯಾರ್ಥಿಗಳಿಗೆ. ಅಂತಹ ವಿದ್ಯಾರ್ಥಿಗಳಿಗೆ, ಪ್ರೌಢ ಶಾಲಾ ಹಂತದಲ್ಲೇ ದುಡಿಯುವ ಅವಶ್ಯಕತೆ ಇರುತ್ತದೆಂಬುದನ್ನು ನಾವು ಮರೆಯುವಂತಿಲ್ಲ. ಹೊಲ-ಗದ್ದೆಗಳಲ್ಲಿ, ದನಗಳ ಕೊಟ್ಟಿಗೆಗಳಲ್ಲಿ, ಅಪ್ಪ-ಅಮ್ಮಂದಿರ ವ್ಯಾಪಾರದ ಗಾಡಿಗಳಲ್ಲಿ ಕೆಲಸ ಮಾಡಿ, ನಂತರ ಶಾಲೆಗೆ ಬರುವ ವಿದ್ಯಾರ್ಥಿಗಳ ಅಸಹಾಯಕತೆ, ನಿರ್ದಯಿ ವಿಮರ್ಶಕರುಗಳಿಗೆ ಕಾಣಿಸುವುದೇ ಇಲ್ಲ. ಮನೆ ಮನೆಗಳಿಗೆ ಪೇಪರ್ ಹಾಕುವಂತಹ, ಕಾರುಗಳನ್ನು ತೊಳೆಯುವಂತಹ, ಹೂವು ಕಟ್ಟುವಂತಹ ಸಣ್ಣ-ಪುಟ್ಟ ಕೆಲಸಗಳನ್ನು ಮಾಡಿ ತಮ್ಮ ಕುಟುಂಬಗಳಿಗೆ ನೆರವಾಗುವಂತಹ ಅನಿವಾರ್ಯತೆ ಹಲವು ಬಡ ವಿದ್ಯಾರ್ಥಿಗಳಿಗೆ ಇರುತ್ತವೆಂಬುದು ಎಲ್ಲರ ಕಣ್ಣಿಗೆ ಕಾಣದ ಸತ್ಯ. ಕಳೆದ ೨೧ ತಿಂಗಳುಗಳಿಂದ ದೇಶವನ್ನು ಕಾಡುತ್ತಿರುವ ಕೋವಿಡ್ನಿಂದ ೫೦೦ಕ್ಕೂ ಹೆಚ್ಚು ದಿನ ಶಾಲೆಗಳು ನಡೆಯದೆ, ಆನ್ಲೈನ್ ಶಿಕ್ಷಣವನ್ನೂ ಪಡೆಯಲಾಗದೆ, ಈ ವಿದ್ಯಾರ್ಥಿಗಳು  ಕಲಿತದ್ದನ್ನೆಲ್ಲ ಮರೆತುಕೊಂಡಿರುವುದು ಮತ್ತೊಂದು ಕಟು ಸತ್ಯ.  ಈ ರೀತಿಯ ಹಿನ್ನಲೆಯಿಂದ ಬರುವ ವಿದ್ಯಾರ್ಥಿಗಳಿಗೆ ಕಲಿಸುವ ಮಹತ್ತರವಾದ ಜವಾಬ್ದಾರಿ ನಮ್ಮ ಸರಕಾರೀ ಶಿಕ್ಷಕರುಗಳದ್ದು. ಕಷ್ಟದ ಜೀವನದಿಂದ ಮುಂದೆ ಬಂದು, ಕಲಿತರೂ, ಕಲಿಯದಿದ್ದರೂ ನಮ್ಮ ದೇಶದಲ್ಲೇ ಉಳಿದು, ಮುಂದೆ ನಮ್ಮ ದೇಶವನ್ನು ಕಟ್ಟುವ ಪುಣ್ಯದ ಕಾರ್ಯವನ್ನು ಮಾಡುವ ಯುವಕ-ಯುವತಿಯರು ನಮ್ಮ ಸರಕಾರಿ ಶಾಲೆಗಳಿಂದಲೇ, ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆಂಬುದು ಎಲ್ಲರೂ  ಗಮನಿಸಬೇಕಾದ ಅಂಶ.  

ಸರಕಾರಿ ಶಾಲೆಗಳಲ್ಲಿ ನಡೆಯುವ ನಿತ್ಯ ಅನ್ನದಾನದ ಸೇವೆ ವಂದನೀಯವಾದುದು. ಜೊತೆಗೆ  ವಿದ್ಯಾರ್ಥಿಗಳು ಶಾಲೆಯನ್ನು ಪ್ರವೇಶಿಸುವ ಮುನ್ನ ಬಿಸಿ ಹಾಲಿನ ಸೇವೆ ಕೂಡ. ೧ರಿಂದ ೧೦ರವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕಗಳು, ಸಮವಸ್ತ್ರಗಳನ್ನು ಒದಗಿಸುವ ಸರಕಾರದ ಕ್ರಮವನ್ನು ಒಂದು 'ವಿದ್ಯಾಯಜ್ಞ'ವೆಂದೇ ಬಣ್ಣಿಸಬಹುದು. ಕೋವಿಡ್ನಿಂದ ಕಳೆದ ೨೧ ತಿಂಗಳುಗಳಲ್ಲಿ ಶಾಲೆಗಳು ನಡೆಯದಿದ್ದು, ಖಾಸಗಿ ಶಾಲೆಗಳ ದುಬಾರಿ ಶುಲ್ಕವನ್ನು ಕಟ್ಟಲಾಗದ ಹಲವು ಪೋಷಕರು, ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ದಾಖಲಿಸಿರುವಂತಹ ಪ್ರಸಂಗಗಳು ಇಲ್ಲದಿಲ್ಲ. 

ಇಷ್ಟಾದರೂ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಮ್ಮಿಯಾಗುತ್ತಿರುವುದು ಆತಂಕದ ಸಂಗತಿ. ಈಚಿನ ಸಮೀಕ್ಷೆಯೊಂದರ ಪ್ರಕಾರ, ಮೂರನೇ ಒಂದು ಭಾಗದಷ್ಟು ಸರಕಾರಿ ಶಾಲೆಗಳಲ್ಲಿ, ಹೊಸ ದಾಖಲಾತಿಗಳ ಸಂಖ್ಯೆ ೫೦ಕ್ಕಿಂತಲೂ ಕಮ್ಮಿ ಇದೆ. ೧ರಿಂದ ೧೦ರವರೆಗಿನ ತರಗತಿಗಳಲ್ಲಿ ೨೫% ವಿದ್ಯಾರ್ಥಿಗಳು, ಶಿಕ್ಷಣವನ್ನು ಮಧ್ಯದಲ್ಲೇ ಬಿಡುತ್ತಾರೆಂಬುದು ಸುಳ್ಳಲ್ಲ.  ಇಂಗ್ಲಿಷ್ ಮಾಧ್ಯಮಗಳತ್ತದ ಆಕರ್ಷಣೆ ಗ್ರಾಮೀಣ ಪೋಷಕರನ್ನೂ ಖಾಸಗಿ ಶಾಲೆಗಳತ್ತ ಮುಖ ಮಾಡುವಂತೆ ಮಾಡಿದೆ. ಎಲ್.ಕೆ.ಜಿ/ಯು.ಕೆ.ಜಿ. ಹಂತದ ಶಿಕ್ಷಣ, ಸರಕಾರಿ ಶಾಲೆಗಳಲಿಲ್ಲದಿರುವುದು  ಒಂದು ಕೊರತೆಯೇ ಸರಿ. ಕುಡಿಯುವ ನೀರು, ಶೌಚಾಲಯಗಳು, ವಿದ್ಯುತ್ ಸಂಪರ್ಕ, ಆಟದ ಮೈದಾನಗಳು ಮುಂತಾದ ಸೌಲಭ್ಯಗಳು ಹಲವು ಸರಕಾರಿ ಶಾಲೆಗಳಲಿಲ್ಲದಿರುವುದು ಮತ್ತೊಂದು ಕೊರತೆ. ಈ ಕೊರತೆಗಳನ್ನು ನೀಗಿಸಲು ಉಚಿತ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕಾದುದು ಅತ್ಯವಶ್ಯಕ. ೧ನೇ ತರಗತಿಯಿಂದಲೇ ಎಲ್ಲಾ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಜಾರಿಗೊಳಿಸುವುದು ಕಷ್ಟವಾದರೂ, ಒಂದು ವಿಷಯವಾಗಿ ಇಂಗ್ಲಿಷ್ ಭಾಷೆಯ ಕಲಿಕೆ ಜಾರಿಗೊಳಿಸುವುದು ಒಳಿತು. ಎಲ್.ಕೆ.ಜಿ/ಯು.ಕೆ.ಜಿ. ಹಂತದ ಶಿಕ್ಷಣಗಳನ್ನೂ ಎಲ್ಲಾ ಸರಕಾರೀ ಶಾಲೆಗಳಲ್ಲಿ ಪ್ರಾರಂಭಿಸುವುದು ಸೂಕ್ತ. 

'ಹೆಣ್ಣೊಂದು ಕಲಿತರೆ, ಶಾಲೆಯೊಂದನ್ನು ತೆರೆದಂತೆ' ಎಂಬ ಮಾತೊಂದಿದೆ. ಆದರೆ ಹೆಣ್ಣು ಮಕ್ಕಳ ಶಿಕ್ಷಣದ ವಿಷಯದಲ್ಲಿ ಲಿಂಗ ತಾರತಮ್ಯ ಕಂಡು ಬರುತ್ತಿದೆ. ಬಡ ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಮತ್ತು ಗಂಡು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿರುವ ಪ್ರಸಂಗಗಳು ಇಲ್ಲದಿಲ್ಲ. ಪ್ರಾಥಮಿಕ ತರಗತಿಗಳನಂತರವೂ ಹೆಣ್ಣು ಮಕ್ಕಳು ಶಿಕ್ಷಣವನ್ನು ಮುಂದುವರೆಸುವಂತಹ ವಾತಾವರಣವನ್ನು ನಿರ್ಮಾಣ ಮಾಡಬೇಕಾದ್ದು ಸರಕಾರದ ಹೊಣೆ. 

ಶಿಕ್ಷಕರುಗಳ ಕೊರತೆ ನಮ್ಮ ಸರಕಾರಿ ಶಾಲೆಗಳನ್ನು ವಿಶೇಷವಾಗಿ ಕಾಡುತ್ತಿದೆ. ಇಂಗ್ಲಿಷ್ ಭಾಷಾ ಶಿಕ್ಷಕರು ಕೊರತೆ ಹೆಚ್ಚಾಗಿ ಇದೆಯೆಂಬ ಸುದ್ದಿಯನ್ನು ನಮ್ಮ ಓದುಗರು ಗಮನಿಸಿರಬಹುದು. ನೇಮಕಾತಿಯ ಪ್ರಕ್ರಿಯೆಗೆ ಸಾಕಷ್ಟು ಸಮಯ ಬೇಕಾಗಬಹುದು. ೧೦ನೇ ತರಗತಿಯ ಪರೀಕ್ಷೆ ಇನ್ನು ಮೂರೇ ತಿಂಗಳುಗಳಲ್ಲಿ ನಡೆಯಬೇಕಾದುದರಿಂದ, ಸರಕಾರ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಒಳ್ಳೆಯದು. ಹಂಗಾಮಿ ಶಿಕ್ಷಕರುಗಳ ಶೀಘ್ರ ನೇಮಕಾತಿಯ ಅಧಿಕಾರವನ್ನು ಆಯಾ ಮುಖ್ಯೋಪಾಧ್ಯಯರುಗಳಿಗೆ ನೀಡಬಹುದು. ನಿವೃತ್ತ ಶಿಕ್ಷಕರ, ಬೇರೆ ಕ್ಷೇತ್ರದ ನಿವೃತ್ತರ ಮತ್ತು ಸ್ವಯಂ ಸೇವಾ ಸಂಸ್ಥೆಗಳ  ಸೇವೆಯನ್ನು ಬಳಸಿಕೊಳ್ಳುವ ಯೋಜನೆಯನ್ನು ನಮ್ಮ ಸರಕಾರ ರೂಪಿಸಬಹುದು. ಸ್ಥಳೀಯ ಜನತಾ ಪ್ರತಿನಿಧಿಗಳೂ ಈ ವಿಷಯದ ಕಡೆ ಗಮನ ಹರಿಸುವುದು ಒಳಿತು. 

ಕೋವಿಡ್ನ ಹೊಸ ರೂಪಾಂತರಿ ಒಮಿಕ್ರೋನಿನ ದಾಳಿಯನಂತರ, ಶಾಲೆಗಳನ್ನು ಮುಚ್ಚುವ ಮಾತುಗಳು ಹರಿದಾಡುತ್ತಿರುವುದು ಆತಂಕಕಾರಿ. ಇಂತಹ ಸಮಯದಲ್ಲಿ ಮೊದಲು ಮುಚ್ಚಲ್ಪಡುವ ಮತ್ತು ಕಟ್ಟ ಕಡೆಗೆ ಆರಂಭವಾಗುವ ದೌರ್ಭಾಗ್ಯ ನಮ್ಮ ಶಾಲೆಗಳದ್ದು. ಶಾಲೆಗಳನ್ನು ಆತುರದಲ್ಲಿ ಮುಚ್ಚಿಬಿಡಬಹುದು, ಆದರೆ ಶಾಲೆಗಳನ್ನು ಪುನರಾರಂಭಿಸಿ ಮಕ್ಕಳನ್ನು ಮತ್ತೆ ಶಾಲೆಗಳತ್ತ ಕರೆತರುವುದು ಕಷ್ಟದ ಕೆಲಸ. ಕಳೆದ ಲಾಕ್ಡೌನ್ ಸಮಯದಲ್ಲಿ, ಶಾಲೆಗಳಿಲ್ಲದೆ ಬಾಲ ಕಾರ್ಮಿಕರಾದ, ಬಾಲ್ಯ ವಿವಾಹಾಕ್ಕೊಳಪಟ್ಟ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಸಂಖ್ಯೆ ಕಮ್ಮಿಯೇನಲ್ಲ. ಅಂತಹ ದುಃಸ್ಥಿತಿಯ ಸನ್ನಿವೇಶ ಮತ್ತೆ ನುಸುಳುವುದು ಬೇಡ. ಈ ನಿಟ್ಟಿನಲ್ಲಿ ಸರಕಾರ ಎಚ್ಚರಿಕೆಯ ಹೆಜ್ಜೆಗಳನ್ನಿಡುವುದು ಸೂಕ್ತ. 

ಸರಕಾರಿ ಶಾಲೆಗಳ ಗುಣಮಟ್ಟದ ಸುಧಾರಣೆ ಅಸಾಧ್ಯವೇನಲ್ಲ. ಈ ನಿಟ್ಟಿನಲ್ಲಿ ದಿಲ್ಲಿ ರಾಜ್ಯ ಸರಕಾರದ ಪ್ರಯತ್ನ ಪ್ರಶಂಸನೀಯ. ದಿಲ್ಲಿಯ ಸರಕಾರಿ ಶಾಲೆಗಳ ಗುಣಮಟ್ಟ ಸಾಕಷ್ಟು ಸುಧಾರಿಸಿದ್ದು, ಎಲ್ಲ ವರ್ಗದ ಪೋಷಕರು ಅವುಗಳತ್ತ ಮುಖ ಮಾಡಿರುವುದು ಒಂದು ಒಳ್ಳೆಯ ಬೆಳವಣಿಗೆ. ನಮ್ಮ ರಾಜ್ಯದ ಸರಕಾರಿ ಶಾಲೆಗಳ ಎಲ್ಲಾ ಸಮಸ್ಯೆಗಳು ಬಗೆ ಹರಿದು, ಎಲ್ಲಾ ವರ್ಗದ ಪೋಷಕರು ಮತ್ತೆ ನಮ್ಮ ಸರಕಾರಿ ಶಾಲೆಗಳತ್ತ ತಮ್ಮ ಮಕ್ಕಳನ್ನು ಕರೆತರುವಂತಾಗಲಿ ಎಂದು ಆಶಿಸೋಣ. 

-೦-೦-೦-೦-೦-

ಕಷ್ಟದ ಜೀವನದಿಂದ ಮುಂದೆ ಬಂದು, ಕಲಿತರೂ, ಕಲಿಯದಿದ್ದರೂ ನಮ್ಮ ದೇಶದಲ್ಲೇ ಉಳಿದು, ಮುಂದೆ ನಮ್ಮ ದೇಶವನ್ನು ಕಟ್ಟುವ ಪುಣ್ಯದ ಕಾರ್ಯವನ್ನು ಮಾಡುವ ಯುವಕ-ಯುವತಿಯರು ನಮ್ಮ ಸರಕಾರಿ ಶಾಲೆಗಳಿಂದಲೇ, ಹೆಚ್ಚಿನ ಸಂಖ್ಯೆಯಲ್ಲಿ ಹೊರಹೊಮ್ಮುತ್ತಾರೆಂಬುದು ಎಲ್ಲರೂ  ಗಮನಿಸಬೇಕಾದ ಅಂಶ.  

(ಮೇಲಿನ ಸಾಲುಗಳನ್ನು ಹೈಲೈಟ್ ಮಾಡಿ)